Author: ನ್ಯೂಸ್ ಬ್ಯೂರೋ

ಕುಂದಾಪುರ: ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡ ಗೊಂಬೆಮನೆಯಲ್ಲಿ ಜನವರಿ ತಿಂಗಳ ಕಾರ್ಯಕ್ರಮ ಜರುಗಿತು. ತಿಂಗಳ ಗೊಂಬೆ ಮನೆ ಅತಿಥಿಯಾಗಿ ಪತ್ರಕರ್ತ ಯು.ಎಸ್.ಶೆಣೈ ಭಾಗವಹಿಸಿದ್ದು, ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ್ ಕೊಗ್ಗ ಕಾಮತ್ ಕಾರ್ಯಕ್ರಮದ ಪ್ರಾಯೋಜಕ ಜನ್ನಿ ವಾಸುದೇವ ಮೇಲಾಡಿ ಪುತ್ರರಾದ ನಾರಾಯಣ ಮೇಲಾಡಿ ಅವರನ್ನು ಸನ್ಮಾಸಿದರು. ಯು. ವಾಮನ್ ಪೈ, ಅಶೋಕ್ ಮೇಲಾಡಿ ಹಾಗೂ ವಲ್ಲಭ ಸೂರಿ ಇದರು. ಕಾರ್ಯಕ್ರಮದ ಕೊನೆಯಲ್ಲಿ ಭವಾನಿ ವಲ್ಲಭ ಮತ್ತು ವಿದ್ಯಾ ಅವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಶ್ರೀ ಗೋಪಾಲಕೃಷ್ಣ ಬೊಂಬೆಯಾಟ ಸಂಘ ಕಾಸರಗೋಡು ಇವರಿಂದ ತೆಂಕುತಿಟ್ಟು ಯಕ್ಷಗಾನ ಗೊಂಬೆಯಾಟ ನರಕಾಸುರ ವಧೆ-ಗರುಡ ಗರ್ವಭಂಗ ಜರುಗಿತು.. ಉದಯ ಭಂಡಾರ್‌ಕಾರ್ ರು ಕಾರ್ಯಕ್ರಮ ನಿರೂಪಿಸಿದ್ದರು.

Read More

ಕುಂದಾಪುರ: ಮೂಡ್ಲಕಟ್ಟೆ ತಾಂತ್ರಿಕ ವಿದ್ಯಾಲಯದ ಎಂ.ಬಿ.ಎ. ಸ್ನಾತಕೋತ್ತರ ಪದವಿ ವಿಭಾಗದ ನೇತೃತ್ವದಲ್ಲಿ ಮೂಡಲಕಟ್ಟೆ ತಾಂತ್ರಿಕ ಕಾಲೇಜ್ ಮೈದಾನದಲ್ಲಿ ನಡೆದ ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ಪದವಿ ಕಾಲೇಜ್ ಮಟ್ಟದ ಪುರುಷ ಹಾಗೂ ಮಹಿಳಾ ವಿಭಾಗದ ವಾಲಿಬಾಲ್ ಪಂದ್ಯಾಟದ ನಡೆದಲ್ಲಿ ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಆಳ್ವಾಸ್ ಮೂಡುಬಿದ್ರಿ ಮತ್ತು ಮಹಿಳಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜ್ ಪಡೆದುಕೊಂಡಿತು. ಪುರುಷರ ವಿಭಾಗದಲ್ಲಿ ದ್ವಿತೀಯ ಸ್ಥಾನ ಬಸ್ರೂರು ಶ್ರೀ ಶಾರದಾ ಕಾಲೇಜ್ ಮತ್ತು ಮಹಿಳಾ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಶಿರ್ವ ಎಂ.ಎಸ್.ಆರ್.ಎಸ್. ಶಿರ್ವ ಕಾಲೇಜ್ ತನ್ನದಾಗಿಸಿಕೊಂಡಿತು. ಸಮಾರೋಪದಲ್ಲಿ ಪ್ರೊ| ರಾಧಾಕೃಷ್ಣ ಶೆಟ್ಟಿ, ಕಾಲೇಜ್ ಅಧ್ಯಕ್ಷ ಸಿದ್ಧಾರ್ಥ ಶೆಟ್ಟಿ ಹಾಗೂ ಪ್ರಾಂಶುಪಾಲೆ ಡಾ|.ಶುಭಾ ಪಿ. ಭಟ್ ಮತ್ತು ಎಲ್ಲಾ ವಿಭಾಗದ ಮುಖ್ಯಸ್ಥರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ಶ್ರೀ ರಮೇಶ್ ಎಂ. ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಉಡುಪಿ ಹಾಗೂ ಮಂಗಳೂರು ಜಿಲ್ಲೆಯ ೨೬ ಪದವಿ ಕಾಲೇಜ್ ಪಂದ್ಯಾಟದಲ್ಲಿ ಭಾಗವಹಿಸಿದ್ದವು. ಎಂ.ಬಿ.ಎ. ಮುಖ್ಯಸ್ಥೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿಯೋರ್ವ ತನ್ನ ಮನೆಯಲ್ಲಿಯೇ ನಿಗೂಢವಾಗಿ ಸಾವನ್ನಪ್ಪಿದ ಘಟನೆ ರಾತ್ರಿ ವೇಳೆ ನಡೆದಿದೆ. ಗಂಗೊಳ್ಳಿಗೆ ಸಮೀಪದ ಕಂಚುಗೋಡು ನಿವಾಸಿ ರಿಕ್ಸನ್ ಡಯಾಸ್(17) ಮೃತ ಯುವಕ. ಘಟನೆಯ ವಿವರ: ಕಂಚಿಗೋಡು ನಿವಾಸಿ ವಾಲ್ಟರ್ ಡಯಾಸ್ ಹಾಗೂ ಜನಿಟಾ ಡಯಾಸ್ ದಂಪತಿಗಳ ಮಗನಾದ ರಿಕ್ಸನ್ ಡಯಾಸ್ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ದ್ವಿತೀಯ ಪಿಯುಸಿ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಯಾಗಿದ್ದ. ಪರೀಕ್ಷೆ ತಯಾರಿಗಾಗಿ ರಜೆಯಿದ್ದುದರಿಂದ ಮನೆಯಲ್ಲಿಯೇ ಅಭ್ಯಸಿಸುತ್ತಿದ್ದ. ಆರೋಗ್ಯವಂತನಾಗಿದ್ದ ಯುವಕ ರಾತ್ರಿ ವೇಳೆಗೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಏಕಾಏಕಿ ನರಳಿ ಮೃತಪಡಲು ಕಾರಣ ಮಾತ್ರ ತಿಳಿದುಬಂದಿಲ್ಲ. ತಂದೆ ತಾಯಿ ಅಂಗಡಿಯ ಕೆಲಸಕ್ಕೆ ತೆರಳಿದ್ದರಿಂದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಅಣ್ಣ ಕೆಲಸ ಮುಗಿಸಿ ಮನೆಗೆ ಬಂದಾಗ ರಿಕ್ಸನ್ ಸೋಫಾದ ಮೇಲೆ ನರಳಾಡುತ್ತಿರುವುದನ್ನು ಗಮನಿಸಿ ಕೂಡಲೇ ಹೆಲ್ಪ್ ಲೈನ್ ಮೂಲಕ ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗಮಧ್ಯದಲ್ಲೇ ರಿಕ್ಸನ್ ಪ್ರಾಣಕಳೆದುಕೊಂಡಿದ್ದಾರೆ. ಆತ ನರಳಾಡುತ್ತಿರುವಾಗ ಬಾಯಿಂದ ನೊರೆ ಬರುತ್ತಿತ್ತು ಎನ್ನಲಾಗಿದೆ. (ಕುಂದಾಪ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ಜನರಿಗೆ ಹೇಳುವ ಮೊದಲು ನಾವು ಹೆಲ್ಮೆಟ್ ಧರಿಸಿ ತಿರುಗಾಡಬೇಕು ಎಂಬುದನ್ನು ಅರಿತ ಕುಂದಾಪುರ ಪೊಲೀಸರು ಇಂದು ನಗರದಲ್ಲಿ ಜನಜಾಗೃತಿ ಜಾಥಾ ಆಯೋಜಿಸಿದ್ದರು. ದ್ವಿಚಕ್ರ ವಾಹನ ಹೊಂದಿರುವ ಪೊಲೀಸ್ ಸಿಬ್ಬಂಧಿಗಳು ಹೆಲ್ಮೆಟ್ ಧರಿಸಿ ಅದರ ಅಗತ್ಯದ ಕುರಿತು ಅರಿವು ಮೂಡಿಸಿದರು. ಪೊಲೀಸ್ ಇಲಾಖೆಯಿಂದ ಕುಂದಾಪುರ ಶಾಸ್ತ್ರೀವೃತ್ತದ ಬಳಿ ಹೆಲ್ಮೆಟ್ ಜಾಗೃತಿ ಮೂಡಿಸುವ ಸಲುವಾಗಿ ಹಮ್ಮಿಕೊಂಡ ಬೈಕ್ ಜಾಥಾಕ್ಕೆ ಚಾಲನೆ ನೀಡಿದ ಕುಂದಾಪುರ ಡಿಎಸ್ಪಿ ಮಂಜುನಾಥ ಶೆಟ್ಟಿ ಮಾತನಾಡಿ ರಾಜ್ಯ ಸರಕಾರ ಸುಪ್ರಿಂಕೋರ್ಟ್ ತೀರ್ಪಿನಂತೆ ಹೆಲ್ಮೆಟ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವುದರಿಂದ ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕಿದೆ. ಬೈಕ್ ಸವಾರ ಹಾಗೂ ಹಿಂಬದಿಯ ಸವಾರರು ಹೆಲ್ಮೆಟ್ ಇಲ್ಲದೇ ಸಂಚರಿಸುವಂತಿಲ್ಲ. ಕಡ್ಡಾಯವಿರುವ ಕಾರಣಕ್ಕೆ ಕಳಪೆ ಗುಣಮಟ್ಟದ ಹೆಲ್ಮಟ್ ಧರಿಸಿ ಪ್ರಾಣಕ್ಕೆ ಕುತ್ತು ತಂದುಕೊಳ್ಳಬೇಡಿ. ಐಎಸ್‌ಐ ಮಾರ್ಕ್ ಇರುವ ಹೆಲ್ಮೆಟ್ ಧರಿಸಿ ಜಾಗೃತರಾಗಿ ಸಂಚರಿಸಿ ಎಂದರು. ಕುಂದಾಪುರ ವೃತ್ತ ದಿವಾಕರ್, ಎಸೈ ನಾಸಿರ್…

Read More

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಪ್ರಾಯೋಜಕತ್ವದಲ್ಲಿ ಮಹಮ್ಮದ್ ಇಕ್ಬಾಲ್ ವಂಡ್ಸೆ ಇವರು ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿಗೆ ಕೊಡುಗೆಯಾಗಿ ನೀಡಿದ ಇ-ಲರ್ನಿಂಗ್  ಕಿಟ್ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ರೋಟರಿ 3180 ಇದರ ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಉದ್ಘಾಟಿಸಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ಜೋನಲ್ ಲೆಫ್ಟಿನೆಂಟ್ ಕೊಡ್ಲಾಡಿ  ಸುಭಾಶ್ಚಂದ್ರ ಶೆಟ್ಟಿ, ರೋಟರಿ ಜಿಲ್ಲಾ ಪ್ರಥಮ ಮಹಿಳೆ ಜಯಶ್ರೀ ಭರತೇಶ್ ಅಧಿರಾಜ್, ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಸಂತೋಷ ಕೋಣಿ, ಗ್ರಾಮ ಪಂಚಾಯತ್ ಅಧ್ಯಕ್ಷ  ಉದಯಕುಮಾರ್ ಶೆಟ್ಟಿ, ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಹರ್ಜಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರ ರಾಯಪ್ಪನಡಿ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಸಿಕ  ಮೊಕ್ತೇಸರ ಸೀತಾರಾಮ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಉದಯ ಕೆ.ನಾಯ್ಕ, ಸಿಂಗಾರಿ ಪೂಜಾರಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಮೋಹಿನಿ ಬಾ, ದಾನಿ ರಫೀಕ್ ಸಾಹೇಬ್ ವಂಡ್ಸೆ ಉಪಸ್ಥಿತರಿದ್ದರು. ಶಾಲೆಯ ದೈಹಿಕ…

Read More

ಕುಂದಾಪುರ: ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುವುದು, ಮಡದಿಗೆ ವಿಶೇಷವಾದ ಉಡುಗೊರೆ ನೀಡುವುದು ಇವೆಲ್ಲಾ ಸಾಮಾನ್ಯವಾಗಿ ನಡೆದೇ ನಡೆಯುತ್ತೆ. ಆದರೆ ಇಲ್ಲೊಬ್ಬ ಪತ್ರಿಕಾ ವಿತರಕರು ತಮ್ಮ 25ನೇ ವಿವಾಹ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಸಾರ್ವಜನಿಕರಿಗೆ ಉಚಿತ ಪತ್ರಿಕೆ ನೀಡಿ ಓದುವ ಹವ್ಯಾಸ ಬೆಳೆಸಲು ಮುಂದಾದದ್ದು ಮಾತ್ರ ವಿಶೇಷ ಸ್ಪಲ್ಪ ವಿಶೇಷ ಅಂದೆನಿಸುತ್ತೆ. [quote font_size=”16″ bgcolor=”#ffffff” bcolor=”#dd890b” arrow=”yes” align=”right”]* ಆಧುನಿಕ ಯುಗದಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಉಚಿತ ಪತ್ರಿಕೆ ಓದಲು ಅವಕಾಶ ಮಾಡಿಕೊಟ್ಟಿರುವುದು ಓದುವ ಹವ್ಯಾಸವನ್ನು ಉತ್ತೇಜಿಸಿದಂತಾಗುತ್ತದೆ. ಮಿನಿವಿಧಾನಸೌಧಕ್ಕೆ ಬೇರೆ ಕೆಲಸ ನಿಮಿತ್ತ ಬರುವ ಸಾರ್ವಜನಿಕರು, ಕೆಲಸ ಆಗುವ ತನಕ ಸಮ್ಮನೆ ಸಮಯ ಹಾಳು ಮಾಡುವುದಕ್ಕಿಂತ ಪತ್ರಿಕೆಗಳನ್ನ ಓದುವ ಮೂಲಕ ಪ್ರಪಂಚದ ವಿದ್ಯಮಾನ ತಿಳಿಯಲು ಸಹಕಾರಿಗುತ್ತದೆ. ಗ್ರಾಹಕರಿಗೆ ಉಚಿತ ಪತ್ರಿಕೆ ಒದಗಿಸುತ್ತಿರುವ ಶಂಕರಾಚಾರ‍್ಯ ಪ್ರಯತ್ನ ಶ್ಲಾಘನೀಯ. ಅಶ್ವಥಿ ಎಸ್., ಎಸಿ ಕುಂದಾಪುರ.[/quote] ಹೌದು. ಕುಂದಾಪುರದ ಪತ್ರಿಕಾ ವಿತರಕ ಶಂಕರಾಚಾರ‍್ಯ ಅವರು ತಮ್ಮ 25ನೇ ವಿವಾಹ ವಾರ್ಷಿಕೋತ್ಸವದ…

Read More

ಕುಂದಾಪುರ: ಕಳೆದ ಸಾಲಿನಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕ್ ಪಂಚಾಯಿತಿ ಚುವಾಣೆಯಲ್ಲಿ ಸ್ಪರ್ಧಿಸಿ ಚುನಾವಣೆ ಖರ್ಚುವೆಚ್ಚದ ಲೆಕ್ಕ ನೀಡದ ಮೂವರನ್ನು ರಾಜ್ಯ ಚುನಾವಣೆ ಆಯೋಗ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಆದೇಶ ಹೊರಡಿಸಿದೆ. ಕಳೆದ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿ ಬೆಳಂಜೆ ಗ್ರಾಮ ನಿವಾಸಿ ಶಿವಾನಂದ ಶೆಟ್ಟಿ, ಕುಂದಾಪುರ ತಾಲೂಕ್ ಪಂಚಾಯಿತಿ ೦೮ ಕಾಲ್ತೋಡು ತಾಪಂ. ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿ ಮೈನ್ಮಕ್ಕಿ ಕಾಲ್ತೋಡು ಗ್ರಾಮ ನಿವಾಸಿ ಅಂಬಿಕಾ ನಾಯಕ್ ಮತ್ತು ಬೆಳ್ವೆ ತಾಲೂಕ್ ಪಂಚಾಯಿತಿ ಚುನಾವಣೆ ಕ್ಷೇತ್ರದಿಂದ ಸ್ಪರ್ಧಿಸಿದ ಯಳತೂರು ಗುಡ್ಡಿಮನೆ ಅರಣು ಹೆಗ್ಗೆ ಅನರ್ಹಗೊಂಡಿದ್ದಾರೆ ಎಂದು ಕುಂದಾಪುರ ತಹಸೀಲ್ದಾರ್ ಗಾಯತ್ರಿ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪುರ: ಸಂತ್ ಪಿಯುಸ್ ದೇವಾಲಯ ಪಿಯುಸ್ ನಗರ್ ಇದರ ತೆರಾಲಿ ಹಬ್ಬ ಹಾಗೂ ಭಾರತಿಯ ಕೆಥೋಲಿಕ ಯುವ ಸಂಚಾಲನ ಪಿಯುಸ್ ನಗರ ಇದರ 46ನೇ ವಾರ್ಷಿಕೋತ್ಸವ ಸಮಾರಂಭ ಪಿಯುಸ್ ನಗರ ಇಗರ್ಜಿ ವಠಾರದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪಿಯುಸ್ ನಗರ ಇಗರ್ಜಿಯ ಧರ್ಮ ಗುರುಗಳಾದ ಜೋನ್ ಆಲ್ಪ್ರೆಡ್ ಒರ್ಬೊಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ವಲಯದ ವಿಗಾರ್‌ವಾರ್ ಅನಿಲ್ ಡಿಸೋಜ,ಸಾಸ್ತಾನ ಇಗರ್ಜಿಯ ಧರ್ಮಗುರುಗಳಾದ ಜೋನ್ ವಾಲ್ಟರ್ ಮೆಂಡೊನ್ಸಾ,ತಾಲೂಕು ಪಂಚಾಯತ್ ಸದಸ್ಸರಾದ ಮಂಜು ಬಿಲ್ಲವ, ಬಿಲಾಲ್ ಜುಮ್ಮಾ ಮಸ್ಜಿದ್ ಎಮ್.ಕೋಡಿ ಇದರ ಅಧ್ಯಕ್ಷರಾದ ಮಹಮದ್ ಅಲಿ ಸಾಹೇಬ್ ,ಸೆಂಟ್ ಆನ್ಸ್ ಕಾನ್ವೆಂಟ್ ಇದರ ಸುಫಿರಿಯರ್ ಸಿಸ್ಟರ್ ಲೋರೆನ್ಸಾ ,ಹಂಗಳೂರು ಗ್ರಾಮ ಪಂಚಾಯತ್ ಉಪಾಧ್ಯಾಕ್ಷರಾದ ಸ್ಟಿವನ್ ಡಿ’ಕೋಸ್ತಾ,ಪಾಲನಾ ಮಂಡಳಿ ಉಪಾಧ್ಯಾಕ್ಷರಾದ ವಿಲ್ಪ್ರೆಡ್ ಡಿ’ಸೋಜಾ ,ಪಾಲನಾ ಮಂಡಳಿ ಕಾರ್ಯದರ್ಶಿ ಲೀನಾ ತಾವ್ರೊ ಸಂಸ್ಧೆಯ ಸಲಹೆಗಾರರಾದ ಜೇಮ್ಸ್ ಡಿ’ಮೆಲ್ಲೊ ವೇದಿಕೆಯಲ್ಲಿ ಉಪಸ್ದಿತರಿದ್ದರು . ಇದೇ ಸಂದರ್ಭದಲ್ಲಿ ಸಮಾಜಸೇವಕ ಮಂಗಳೂರು ಫಾದರ್ ಮುಲ್ಲರ‍್ಸ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡೇವಿಡ್.ವಿ…

Read More

ಬೈಂದೂರು: ಶಿರೂರು ಅಸೋಶಿಯೇಶನ್ ಇವರ ಸಹಭಾಗಿತ್ವದಲ್ಲಿ ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆ ವೈದ್ಯಕೀಯ ತಂಡದವರಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಠಾರದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಕೆ.ಎಂ.ಸಿ.ಯ ಕಾರ್ಯನಿರ್ವಾಹಣಾ ಅಧಿಕಾರಿ ಹರ್ಬರ್ಟ ಮೆರಿಯೋ ಪಿರಿಯರ್ ರೋಗಿಗಳ ಹೆಸರು ನೊಂದಣಿ ಮಾಡುವುದರ ಮೂಲಕ ಶಿಬಿರ ಉದ್ಘಾಟಿಸಿದರು. ಶಿಬಿರದಲ್ಲಿ ಕಿವಿ, ಮೂಗು, ಗಂಟಲು, ಕಣ್ಣಿನ ತಪಾಸಣೆ, ಮಕ್ಕಳ ವಿಭಾಗ, ಎಲುಬು, ಸ್ತ್ರೀರೋಗ ಹಾಗೂ ದ್ವನಿ, ಶ್ರವಣ ವಿಭಾಗಗಳಲ್ಲಿ ತಜ್ಞ ವೈದ್ಯರಿಂದ ತಪಾಸಣೆ ನಡೆಸಲಾಯಿತು. ಸಾಮಾನ್ಯ ರೋಗ ತಪಾಸಣಾ ವಿಭಾಗ ಸೇರಿ ಒಟ್ಟಿಗೆ ೫೬೮ ರೋಗಿಗಳನ್ನು ಪರೀಕ್ಷಿಸಿ ಸೂಕ್ತ ಸಲಹೆ ನೀಡಲಾಯಿತು. ಅಗತ್ಯವಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹಸಿರು ಕಾರ್ಡ ನೀಡಲಾಯಿತು. ಶಿರೂರು ಅಸೋಸಿಯೇಶನ್ ಸದಸ್ಯ ಸೈಯ್ಯದ್ ಮಹ್ಮದ್ ಷಾ ಶಿರೂರು ಗ್ರಾಪಂ ಅಧ್ಯಕ್ಷೆ ದಿಲ್‌ಶಾದ್ ಬೇಗಂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿರೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ, ಉಪಪ್ರಾಂಶುಪಾಲ, ಸಿಬ್ಬಂದಿವರ್ಗ ಹಾಗೂ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಿದ ವಿಧ್ಯಾರ್ಥಿಗಳ ಸಹಕಾರವನ್ನು ಶ್ಲಾಘಿಸಲಾಯಿತು. ಶಿರೂರು…

Read More

ಕುಂದಾಪುರ: ರಬ್ಬರ್‌ಗೆ ಆಮದು ಸುಂಕ ಏರಿಕೆ ಮಾಡಿ ಬೆಂಬಲ ಬೆಳೆ ನಿಗದಿಪಡಿಸುವಂತೆ ಒತ್ತಾಯಿಸಿ ತಾಲೂಕು ರಬ್ಬರ್ ಬೆಳೆಗಾರರ ಸಂಘ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು. ಕೋಟೇಶ್ವರದ ಯುವ ಮೆರಿಡಿಯನ್ ವಠಾರದಲ್ಲಿ ಬಿ ಎಸ್ ವೈ ಅವರನ್ನು ಭೇಟಿ ಮಾಡಿದ ತಾಲೂಕು ರಬ್ಬರ್ ಬೆಳೆಗಾರರ ನಿಯೋಗ ಮನವಿ ಸಲ್ಲಿಸಿತ್ತು. ಈ ಸಂದರ್ಭ ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಕಳೆದ ೨ ವರ್ಷದ ಹಿಂದಿದ್ದ ಕಿಲೋಗೆ ರೂ.240ರಷ್ಟಿದ್ದ ಧಾರಣೆ ಕುಸಿದಿದ್ದು ರೂ. ೧೦೦ ಕ್ಕಿಂತಲೂ ಕಡಿಮೆ ಆಗಿದೆ. ಇದರಿಂದ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ತಾಲೂಕಿನಲ್ಲಿ 6 ಸಾವಿರ ಬೆಳೆಗಾರರಿದ್ದು ಕಳೆದ 7-8 ವರ್ಷದಿಂದ ರಬ್ಬರ್ ಬೆಳೆ ಧಾರಣೆ ಕುಸಿತದಿಂದಾಗಿ ಬದುಕು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ರಬ್ಬರ್ ಮರಗಳಿಗೆ ರೋಗಭಾದೆ ಒಕ್ಕರಿಸುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರು ಪ್ರತಿ ಎಕರೆಗೆ ರೂ 2.50ಲಕ್ಷ ಸಾಲ ಮಾಡಿ ರಬ್ಬರ್ ಬೆಳೆಸಿದ್ದು ಸಾಲ ತೀರಿಸಲಾಗದೆ ಸಂಕಷ್ಟಕ್ಕೆ…

Read More