Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನೃತ್ಯ ಸ್ಪರ್ಧೆಯು ಶಿಕ್ಷಣದ ಮುಖ್ಯ ಅಂಗವಾಗಿದ್ದು, ಅದು ಹಲವಾರು ಕೌಶಲಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಕೊಡುತ್ತದೆ ಎಂದು ಅದಾನಿ ಪವರ್ ಕಾರ್ಪೋರೇಶನ್‌ನ ನಿರ್ದೇಶಕರು ಹಾಗೂ ಜಂಟಿ ಅಧ್ಯಕ್ಷರಾದ ಶ್ರೀ ಕಿಶೋರ್ ಆಳ್ವ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಜಂಟಿ ಆಶ್ರಯದಲ್ಲಿ ಅಂತರ್ ಕಾಲೇಜು ಮಟ್ಟದ ನೃತ್ಯ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷರಾದ ಬಿ.ಎಮ್. ಸುಕುಮಾರ್ ಶೆಟ್ಟಿ ಮಾತನಾಡಿ ವಿದ್ಯೆಯು ಸಮಾಜದಲ್ಲಿ ನಮ್ಮನ್ನು ಗುರುತಿಸುವಂತೆ ಮಾಡುತ್ತದೆ. ವಿದ್ಯಾವಂತರಾಗಿ ಜೊತೆಗೆ ಸಾಂಸ್ಕೃತಿಕವಾಗಿ ಬೆಳೆದು ಬಂದ ಕಲೆಗಳಲ್ಲಿ ತೊಡಗಿಸಿಕೊಳ್ಳಿ ಎಂದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಣದ ಜೊತೆಗೆ ದೇಶದ ವಿವಿಧ ಸಂಸ್ಕೃತಿಯನ್ನು ಉಳಿಸುವುದು ಅಗತ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಕಾರ್ಯದರ್ಶಿಗಳಾದ ಸೀತರಾಮ ನಕ್ಕತ್ತಾಯ, ಆಡಳಿತ ಮಂಡಳಿಯ ಸದಸ್ಯರಾದ ಅನಿಲ್ ಛಾತ್ರ, ಹಾಗೂ ವಿದ್ಯಾಥಿ ಕ್ಷೇಮಪಾಲನಾಧಿಕಾರಿ ಮಹೇಶ್ ಬಾಬು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಆದಾಯಕ್ಕಿಂತ ಅಧಿಕ ಮೌಲ್ಯದ ಆಸ್ತಿ ಹೊಂದಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕೊಲ್ಲೂರು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯ ಅವರ ನಿವಾಸ, ಕಛೇರಿ ಹಾಗೂ ಅವರಿಗೆ ಸಂಬಂಧಿಸಿದ 5 ಕಡೆಯಲ್ಲಿ  ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಕೋಟ್ಯಾಂತರ ರೂ. ಮೌಲ್ಯದ ಚರ ಹಾಗೂ ಸ್ಥಿರಾಸ್ತಿಯನ್ನು ಪತ್ತೆ ಹಚ್ಚಿ ತನಿಕೆ ನಡೆಸುತ್ತಿದ್ದಾರೆ. ಎಸಿಬಿ ಎಸ್‌ಪಿ ಚೆನ್ನಬಸವಣ್ಣ ಎಸ್. ಎಲ್ ನೇತೃತ್ವದಲ್ಲಿ ಎಕಕಾಲದಲ್ಲಿ ಎಸಿಬಿ ಅಧಿಕಾರಿಗಳು ಕೊಲ್ಲೂರು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವರಾಮ ಆಚಾರ್ಯನ ಕೊಲ್ಲೂರಿನಲ್ಲಿರುವ ಕಚೇರಿ ಹಾಗೂ ವಸತಿಗೃಹ, ಕಂಬದಕೋಣೆಯಲ್ಲಿರುವ ಬಂಗ್ಲೆ, ಆಜ್ರಿಯ ಹುಟ್ಟಿದ ಮನೆ, ಕಿರಿಮಂಜೇಶ್ವರದ ಪತ್ನಿ ಮನೆ ದಾಳಿ ನಡೆಸಿ 10ಲಕ್ಷ 8 ಸಾವಿರ ಮೌಲ್ಯದ ಚಿನ್ನಾಭರಣ, 8ಲಕ್ಷ 63 ಸಾವಿರ ರೂ. ನಗದು, ಒಂದು ಮಾರುತಿ ಸ್ವಿಪ್ಟ್ ಕಾರು, ಒಂದು ಮಾರುತಿ 800 ಕಾರು, ಕಂಬದಕೋಣೆಯಲ್ಲಿ ಸುಮಾರು 70ಲಕ್ಷ ರೂ, ಮೌಲ್ಯದ ಬಂಗ್ಲೆ, ನಾಗೂರಿನಲ್ಲಿ 10ಸೆಂಟ್ಸ್ ನಿವೇಶನ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತುಳುನಾಡಿನ ವೀರಪುರುಷರೆನಿಸಿಕೊಂಡಿರುವ ಶ್ರೀ ಕೋಟಿ ಚೆನ್ನಯ್ಯರ ಕೊನೆಯ ಗರಡಿ ಬೈಂದೂರು ನಾಕಟ್ಟೆಯಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವುದು ಸಂತಸದ ವಿಷಯವಾಗಿದ್ದು, ಗರಡಿಯ ಜೀಣೋದ್ಧಾರ ಕಾರ್ಯ ನಿರ್ವಿಘ್ನವಾಗಿ ನಡೆದು, ಕೋಟಿ ಚೆನ್ನಯ್ಯರ ಕೃಪೆ ಭಕ್ತವರ್ಗಕ್ಕೆ ದೊರೆಯುವಂತಾಗಲಿ. ಗರಡಿ ನಿರ್ಮಾಣಕ್ಕೆ ಅಗತ್ಯವಾದ ನೆರವು ನೀಡಲು ಸಿದ್ಧನಿರುವುದಾಗಿ ಬೈಂದೂರು ಕ್ಷೇತ್ರದ ಶಾಸಕರಾದ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ನಾಕಟ್ಟೆಯ ಶ್ರೀ ಕೋಟಿ ಚೆನ್ನಯ್ಯ ಪಂಜುರ್ಲಿ ಗರಡಿ ಇದರ ನವೀಕೃತ ಗರ್ಭಗುಡಿಗೆ ಶಿಲನ್ಯಾಸ ವಿಧಿ ಪೂರೈಸಿ ಬಳಿಕ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ, ವೇ.ಮೂ ಕೇಂಜ ಶ್ರೀಧರ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಿ ಜಗತ್ತಿನಲ್ಲಿ ೮೪ಲಕ್ಷ ಜೀವರಾಶಿಗಳಿದ್ದು ಅವನ್ನು ಸಸ್ಯ, ಪ್ರಾಣಿ, ಮನುಷ್ಯರೆಂದು ವಿಂಗಡನೆ ಮಾಡಲಾಗಿದೆ. ಈ ಮೂರು ವಿಭಾಗದ ಜೀವರಾಶಿಯಲ್ಲಿಯೂ ದೇವರ ಅಂಶ ಇದೆ ಎಂದು ಹಿಂದೂ ಧರ್ಮ ಪ್ರತಿಪಾದನೆ ಮಾಡುತ್ತದೆ. ಎಲ್ಲಾ ಜೀವರಾಶಿಗಳಿಗಿಂತ ಮಾನವ ಜನ್ಮ ದೊಡ್ಡದು ಎನ್ನಲಾಗುತ್ತದೆ. ಜೀವನದಲ್ಲಿ ಮಾಡುವ ಸಂಪಾದನೆಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕುಂದಾಪುರದ ದಿ ಕನ್ಸರ್‌° ಫಾರ್‌ ವರ್ಕಿಂಗ್‌ ಚಿಲ್ಡ್ರನ್‌ ಸಂಸ್ಥೆಯ ಆಶ್ರಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಮಹಿಳೆಯರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಮಾದರಿ ಯೋಜನೆಯನ್ನು ತರಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಕುಂದಾಪುರ ಉಪವಿಭಾಗಾಧಿಕಾರಿ ಶಿಲ್ಪಾ ನಾಗ್‌ ಹೇಳಿದರು. ಅವರು ಮಹಿಳಾ ದಿನಾಚರಣೆಯ ಅಂಗವಾಗಿ ಕೊರ್ಗಿ ಗ್ರಾ.ಪಂ. ಮತ್ತು ಸಿಡಬ್ಲಿಸಿ ಸಹಯೋಗದಲ್ಲಿ ಹೆಸ್ಕೂತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ಹಾಗೂ ಮಹಿಳೆಯರ ಹಕ್ಕು ಮತ್ತು ರಕ್ಷಣೆ ಕುರಿತ ಸಂವಾದದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಅಪಾಯಕಾರಿ ಕಲ್ಲುಕೋರೆ ಹೊಂಡಗಳು, ಅಕ್ರಮ ಮದ್ಯ ಮಾರಾಟದಿಂದ ಉಂಟಾಗುವ ಸಮಸ್ಯೆಗಳು, ಬಾಲಕಾರ್ಮಿಕರು ಮೊದಲಾದ ವಿಷಯಗಳ ಕುರಿತು ಸಂವಾದ ನಡೆಸಿದರು. ದುಡಿಯುವ ಮಕ್ಕಳ ವಿರುದ್ಧ ನಡೆಯುವ ದಾಳಿ ಮತ್ತು ರಕ್ಷಣೆಯ ಕಾರ್ಯಕ್ರಮದಿಂದ ಅತ್ಯಂತ ಹಿಂಸೆ ಅನುಭವಿಸಿದ ಮಕ್ಕಳ ಪ್ರತಿನಿಧಿಗಳು ಅವರ ಅನುಭವವನ್ನು ಹಂಚಿಕೊಂಡರು, ಆಲೂರು ಗ್ರಾ.ಪಂ.ನ ಮಕ್ಕಳ ಸಂಘದ ಪ್ರತಿನಿಧಿಗಳಾದ ಪವನ್‌, ಧನುಶ್‌,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಮೀನುಗಾರಿಕೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಬಂದರುಗಳ ಅಭಿವೃದ್ಧಿಗೆ ಸರಕಾರ ವಿಶೇಷ ಒತ್ತು ನೀಡಲಿದೆ. ಆ ನಿಟ್ಟಿನಲ್ಲಿ ಕರಾವಳಿಯ ಬಂದರುಗಳ ಸ್ಥಿತಿ-ಗತಿಯ ಕುರಿತು ಅವಲೋಕನ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಮತ್ತು ಬಂದರು, ಒಳನಾಡು ಸಚಿವ ಡಾ| ಎಚ್‌.ಸಿ. ಮಹದೇವಪ್ಪ ತಿಳಿಸಿದರು. ಅವರು ಮಂಗಳವಾರ ಬಂದರುಗಳ ವೀಕ್ಷಣೆಯ ಸಲುವಾಗಿ ಹಂಗಾರಕಟ್ಟೆ ಮೀನುಗಾರಿಕೆ ಜೆಟ್ಟಿಗೆ ಆಗಮಿಸಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು. ಬಂದರುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಹಾಗೂ ಜೆಟ್ಟಿ ವಿಸ್ತರಣೆ ಮುಂತಾದ ಪ್ರಮುಖ ಕಾಮಗಾರಿಗಳಿಗೆ ಒತ್ತು ನೀಡಲಿದ್ದು, ಹಂಗಾರಕಟ್ಟೆಯಲ್ಲಿ ತಡೆಗೋಡೆ ನಿರ್ಮಾಣ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿ ತಡೆಗೋಡೆ ನಿರ್ಮಾಣಕ್ಕೆ ಸರ್ವೇ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ ಮತ್ತು ಇಲ್ಲಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ನೀಡಲಾಗುವುದು ಎಂದರು. ಈ ಸಂದರ್ಭ ಕೋಡಿಬೆಂಗ್ರೆಯ ಮೀನುಗಾರಿಕೆ ಜೆಟ್ಟಿ ವಿಸ್ತರಣೆ ಹಾಗೂ ಅಭಿವೃದ್ಧಿಯ ಕುರಿತು ಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಜೇಸಿಐ ಶಿರೂರು, ಜೇಸಿರೆಟ್‌ ವಿಭಾಗ, ದುರ್ಗಾಂಬಿಕಾ ನವೋದಯ ಸಂಘ ಇದರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ಪಂಚರತ್ನ ಪುರಸ್ಕಾರ ಕಾರ್ಯ ಕ್ರಮ ದುರ್ಗಾಂಬಿಕಾ ಸಭಾಭವನ ಕರಿಕಟ್ಟೆ ಯಲ್ಲಿ ನಡೆಯಿತು. ಶಿರೂರು ಜೇಸಿ ಜೇಸಿರೆಟ್‌ ಅಧ್ಯಕ್ಷ ಗಂಗಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರಾಷ್ಟ್ರೀಯ ಸಂಯೋ ಜಕಿ ಜೇಸಿರೆಟ್‌ ವಿಭಾಗದ ರೂಪಶ್ರೀ ರತ್ನಾಕರ ಇಂದ್ರಾಳಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸರಿಸಮನಾಗಿ ಕುಟುಂಬ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ.ಮಹಿಳೆಯರಿಗೆ ಸೂಕ್ತ ಅವಕಾಶ ದೊರೆ ತಾಗ ಪ್ರತಿಭೆ ಹೊರಹೊಮ್ಮುತ್ತದೆ. ಕುಟುಂಬ ಹಾಗೂ ಸಮಾಜ ನಿರ್ವ ಹಣೆಯಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿದೆ ಎಂದರು. ವೇದಿಕೆಯಲ್ಲಿ ದುರ್ಗಾಂಬಿಕಾ ದೇವಸ್ಥಾನ ಸೇವಾ ಸಂಘ ಕೋಟೆಮನೆ ಅಧ್ಯಕ್ಷ ಕೆ.ಎನ್‌. ಆಚಾರ್‌, ಶಿರೂರು ಜೇಸಿಐ ಅಧ್ಯಕ್ಷರು, ಪುಷ್ಪಾ ಆರ್‌. ಮೇಸ್ತ ಅರಮನೆಹಕ್ಲು ಶಿರೂರು, ಭಟ್ಕಳ ಸಿಟಿ ಜೇಸಿ ಅಧ್ಯಕ್ಷ ನಾಗರಾಜ್‌ ಶೇಟ್‌, ಕಾರ್ಯದರ್ಶಿ ಪಾಂಡುರಂಗ ಅಳ್ವೆಗದ್ದೆ, ಜೂನಿಯರ್‌ ಜೇಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಫುರ : ವಿದ್ಯಾರ್ಥಿಗಳ ಆಸಕ್ತಿ ಮತ್ತು ವಿದ್ಯೆಗೆ ಪೂರಕವಾಗಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಎಲ್ಲಾ ಅವಕಾಶಗಳನ್ನು ಭಂಡಾರ್ಕಾರ್ಸ್ ಕಾಲೇಜು ಒದಗಿಸಿಕೊಡುತ್ತಾ ಬರುತ್ತಿದೆ ಎಂದು ಮಣಿಪಾಲ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಹೆಚ್ ವಿನೋದ ಭಟ್ ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್‌ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಭಂಡಾರ್ಕಾರ್ಸ್ ಕಾಲೇಜುಅತ್ತ್ಯುತ್ತಮ ಸಂಸ್ಥೆಯಾಗಿದೆ. ಇಲ್ಲಿನಸಕಲ ಸೌಲಭ್ಯಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲಕರವಾಗಿದೆ. ಈ ಪರಿಸರ ಸ್ನೇಹಿ ಸಂಸ್ಥೆಯು ವಿವಿಧ ಪಠ್ಯೇತರತರಬೇತಿ, ಮೌಲ್ಯಯುತಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳನ್ನು ಸಮಾಜದಒಬ್ಬಜವಾಬ್ದಾರಿಯುತ ವ್ಯಕ್ತಿಯನ್ನಾಗಿ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೇ ಈ ಕಾಲೇಜಿನ ಬೆಳವಣಿಗೆಯ ಹಿನ್ನೆಲೆಯನ್ನು ಗಮನಿಸಿದಾಗ ಕಾಲೇಜಿನ ಆಡಳಿತ ಮಂಡಳಿ, ಪಾಲಕರು, ವಿದ್ಯಾರ್ಥಿಗಳು ಮತ್ತು ಸಮಾಜದ ಎಷ್ಟೋ ಜನರ ಪರಿಶ್ರಮ, ಬೆಂಬಲದೊಂದಿಗೆದೊಡ್ಡ ಸಂಸ್ಥೆಯಾಗಿ ಹೆಸರುವಾಸಿಯಾಗಿದೆ ಎಂದುಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಶಾಂತಾರಾಮ ಎ. ಭಂಡಾರ್ಕಾರ್ ಮಾತನಾಡಿಸಂಸ್ಥೆಯು ವಿವಿಧ ಸೌಲಭ್ಯUಳನ್ನು ಹೊಂದಿದೆ. ಜೊತೆಗೆ ವಿದ್ಯಾರ್ಥಿಗಳು ಸಾಧನೆಯನ್ನು ಗಮನಿಸಿದಾಗ ಸಂಸ್ಥೆಯು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಜಿಲ್ಲಾ ಸ್ವಾತಂತ್ರ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಾಚೀನ ವಸ್ತು ಸಂಗ್ರಹಕಾರ, ಚುಟುಕು ಸಾಹಿತಿ ಗಂಗೊಳ್ಳಿಯ ಜಿ.ಬಿ. ಕಲೈಕಾರ್ ಅವರು ಮುಂದಿನ ಪೀಳಿಗೆಗಾಗಿ ಗಂಗೊಳ್ಳಿಯ ಶ್ರೀ ಕಲೈಕಾರ್ ಮಠದ ಬಳಿಯಲ್ಲಿ ಸುಮಾರು ೧೬ ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ’ಕಲೈಕಾರ್ ವಸ್ತು ಪ್ರದರ್ಶನ ಭವನ’ದ ಕಾಮಗಾರಿ ಭರದಿಂದ ಸಾಗುತ್ತಿದೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ನ ಕುಂದಾಪುರ ಘಟಕದ ಅಧ್ಯಕ್ಷರಾಗಿರುವ ಜಿ.ಬಿ.ಕಲೈಕಾರ್ ಅವರು ರಚಿಸಿದ ವ್ಯಂಗ್ಯ ಚಿತ್ರಗಳು, ಚುಟುಕು ಸಾಹಿತ್ಯಗಳು ಹಾಗೂ ಇವರು ಸೆರೆ ಹಿಡಿದ ಛಾಯಾಚಿತ್ರಗಳು ವಿವಿಧ ಪ್ರಮುಖ ದಿನಪತ್ರಿಕೆಗಳಲ್ಲಿ, ವಾರ ಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ದೇಶ ವಿದೇಶಗಳ ಅಂಚೆ ಚೀಟಿಗಳು, ಪುರಾತನವಾದ ಛಾಯಾಚಿತ್ರಗಳು, ಕಂಚಿನ ಕಲಾತ್ಮಕ ಪಾತ್ರೆಗಳು, ಹಳೆಯ ದಿನಪತ್ರಿಕೆಗಳು, ದೇಶ ವಿದೇಶಗಳ ಪ್ರಾಚೀನವಾದ ಹಳೆ ನಾಣ್ಯಗಳು, ನೋಟುಗಳು, ಹಳೆಯ ಗಡಿಯಾರಗಳು, ಗ್ರಾಮ್‌ಫೋನ್ (ಎಚ್.ಎಂ.ವಿ.), ಕಲಾತ್ಮಕವಾದ ಮದ್ಯ ತುಂಬಿದ ಬಾಟಲಿಗಳು, ಪಂಚಲೋಹದ ವಿಗ್ರಹಗಳು, ಹಳೆಯ ವಿದೇಶಿ ಕ್ಯಾಮರಾಗಳು, ಹಳೆ ಕಾಲದ ವಿವಿಧ ಬಗೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೆರಾಡಿ ಗ್ರಾಮದ ಹಯ್ಯಂಗಾರು ಅಸ್ಕಿಮಕ್ಕಿ ಎಂಬಲ್ಲಿನ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.  ಅಸ್ಕಿಮಕ್ಕಿಯ ಕರುಣಾಕರ ಶೆಟ್ಟಿ (30) ಮೃತ ದುರ್ದೈವಿ. ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡಿದ್ದ ಕರುಣಾಕರ ಅವರು ವ್ಯವಹಾರದಲ್ಲಿ ನಷ್ಟ ಅನುಭವಿಸಿ ಊರಿಗೆ ಮರಳಿದ್ದರು. ಮಂಗಳವಾರ ಸಂಜೆ ವೇಳೆ ಮನೆಯ ತೋಟದ ಪಕ್ಕದ ಇರುವ ಹೊಳೆ ಬದಿಯಲ್ಲಿರುವ ಚಾರು ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದ್ದು ತಡವಾಗಿ ಮನೆಯವರ ಗಮನಕ್ಕೆ ಬಂದಿದೆ. ಮೃತರು ಹೆಂಡತಿ ಹಾಗೂ ಮಗು ಸೇರಿದಂತೆ ಕುಟುಂಬಿಕರನ್ನು ಅಗಲಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More