ಬೈಂದೂರು: ಇಲ್ಲಿನ ಸುರಭಿ (ರಿ.) ಬೈಂದೂರು ‘ರಂಗಧ್ವನಿ – 2015’ ಮೂರು ದಿನಗಳ ನಾಟಕೋತ್ಸವದಲ್ಲಿ ರಂಗಭೂಮಿಯ ಮೂಲ ಆಶಯ ಕೇವಲ ಮನರಂಜನೆಯಲ್ಲ ಬದಲಿಗೆ ಸಾಮಾಜಿಕ ಅಸಮಾನತೆ, ಸ್ತ್ರೀ ಶೋಷಣೆ, ಧರ್ಮಾಧಾರಿತ ಸಂಘರ್ಷ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಹಾಗೂ ವ್ಯವಸ್ಥೆಯಲ್ಲಿನ ಅನ್ಯಾಯದ ವಿರುದ್ಧ ದನಿಯಾಗುವುದಾಗಿದೆ ಎಂಬ ಮಾತನ್ನು ಪುಷ್ಠಿಕರಿಸುವ ರಂಗ ಪ್ರದರ್ಶನ ನಡೆಯಲಿದೆ. ರಂಗಭೂಮಿಯ ಮೂಲಕ ಮಹಿಳಾ ಶೋಷಣೆಯ ವಿರುದ್ಧ ರಂಗಧ್ವನಿ ಮೊಳಗಿಸುವ ಕಾರ್ಯಕ್ರಮಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಲೇಖಕಿ ವೈದೇಹಿ ಚಾಲನೆ ನೀಡಲಿದ್ದಾರೆ. ಮಹಿಳೆ ಮೇಲೆ ಈ ಸಮಾಜದಲ್ಲಿ ನಡೆಯುತ್ತಿರುವ ನಿರಂತರ ದೌರ್ಜನ್ಯ, ಅಸ್ತಿತ್ವಕ್ಕಾಗಿ ಅವಳು ನಡೆಸುವ ಹೋರಾಟ, ಪ್ರತಿರೋಧದ ವಿಭಿನ್ನ ನೆಲೆಗಳನ್ನು ತೋರಿಸುವ, ವರ್ಗ ಸಂಘರ್ಷದ ವಿವಿಧ ಮಜಲುಗಳನ್ನು ಹಾಗೂ ವ್ಯವಸ್ಥೆಯಲ್ಲಿನ ನ್ಯೂನತೆಗಳನ್ನು ವಿಡಂಬನಾತ್ಮಕವಾಗಿ ಚಿತ್ರಿಸಿರುವ ನಾಟಕಗಳಾದ ರಂಗಮಂಟಪ ಬೆಂಗಳೂರು ಅಭಿನಯಿಸುವ, ವೈದೇಹಿಯವರ ಕಥೆಗಳ ಆಧಾರಿತ ’ಅಕ್ಕು’, ಡಾ. ಶ್ರೀಪಾದ್ ಭಟ್ಟರ ನಿರ್ದೇಶನದ ಸುರಭಿ ಬೈಂದೂರು ಅಭಿನಯಿಸುವ, ಕನ್ನಡ ಕಾವ್ಯಗಳ ರಂಗಪ್ರಸ್ತುತಿ ’ಕಾವ್ಯರಂಗ’, ರಥಬೀದಿ ಗೆಳೆಯರು…
Author: ನ್ಯೂಸ್ ಬ್ಯೂರೋ
ಕುಂದಾಪುರ: ಜ್ಞಾನ, ಕೌಶಲ್ಯ ಮತ್ತು ಮನೋಬಲ ವೃದ್ಧಿಗೆ ಶಿಕ್ಷಣ ಸಂಸ್ಥೆಗಳು ಪೂರಕ ಪರಿಸರವನ್ನು ನಿರ್ಮಾಣ ಮಾಡಿ ಯುವಕರಲ್ಲಿ ಆತ್ಮವಿಶ್ವಾಸ ಮತ್ತು ಉದ್ಯೋಗ ಪಡೆಯವ ಸಾಮರ್ಥ್ಯವನ್ನು ಹೆಚ್ಚಿಸಲು ಪಠ್ಯದ ಜೊತೆಯಲ್ಲಿ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಾಳಾವರ ವರದರಾಜ ಎಂ. ಶೆಟ್ಟಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ರ್ತ ವಿಭಾಗದ ಮುಖ್ಯಸ್ಥ ಸುಬ್ರಹ್ಮಣ್ಯ ಹೇಳಿದರು. ಅವರು ಹೆಮ್ಮಾಡಿ ಜನತಾ ಪ.ಪೂ.ಕಾಲೇಜು ಹಾಗೂ ಇಲ್ಲಿನ ವಿದ್ಯಾರ್ಥಿ ವೇದಿಕೆ ಆಶ್ರಯದಲ್ಲಿ ನಡೆದ ‘ಆರ್ಥಿಕಾಭಿವೃದ್ಧಿಯಲ್ಲಿ ಉನ್ನತ ಶಿಕ್ಷಣ’ ವಿಷಯದ ಕುರಿತು ವೃತ್ತಿಮಾರ್ಗದರ್ಶನ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಭ್ರಷ್ಟಾಚಾರ ವಿದ್ಯಾರ್ಥಿಗಳ ಮನೋಬಲವನ್ನು ಕುಂಟಿತಗೊಳಿಸುತ್ತದೆಯೇ ಎಂಬ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಅವರು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಐಎಎಸ್,ಕೆಎಎಸ್ ಮತ್ತಿತರ ಉನ್ನತ ಹುದ್ದೆಗಳಿಗೆ ಆಯ್ಕೆಯಾಗುವ ಮೂಲಕ ದೇಶದ ಅಭಿವೃದ್ಧಿಗೆ ತೊಡಕಾಗುವ ಭ್ರಷ್ಟಾಚಾರ ಸಮಸ್ಯೆಯನ್ನು ತೊಡೆದು ಹಾಕಲು ಸಾದ್ಯ ಎಂದರು. ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ಕಂಟ್ರಾಕ್ಟರ್ ಸಟ್ವಾಡಿ…
ಕುಂದಾಪುರ: ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಕುಂದಾಪುರ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗುವ ಶ್ರೀದೇವರ ವಿಶ್ವರೂಪ ದರ್ಶನ ಬೆಳಗಿನ ಜಾವ ನಡೆಯಿತು. ಭಕ್ತರು ದೇವಳದ ಒಳಾಂಗಣ ಹಾಗೂ ಹೊರಾಂಗಣದಲ್ಲಿ ಆಕರ್ಷಕವಾಗಿ ಜೋಡಿಸಿದ ಸಾವಿರಾರು ಹಣತೆಗಳನ್ನು ಬೆಳಗಿರುವುದು ನೋಡುಗರ ಕಣ್ಣಿಗೆ ಮುದ ನೀಡಿದವು. ನೂರಾರು ಭಕ್ತರು ಶ್ರೀದೇವರ ವಿಶ್ವರೂಪ ದರ್ಶನ ಪಡೆದು ಕೃತಾರ್ಥರಾದರು. ದೇವಳದ ಸುತ್ತ ರಚಿಸಲಾದ ರಂಗೋಲಿಗಳ ಮಧ್ಯೆ ಬೆಳಗುತ್ತಿದ್ದ ಹಣತೆಗಳ ನೋಡುಗರ ಕಣ್ಣಿಗೆ ಮುದ ನೀಡಿದವು. ಸಾವಿರಾರು ಹಣತೆಗಳನ್ನು ದೇವಳದ ಒಳಾಂಗಣ, ಹೊರಾಂಗಣದಲ್ಲಿ ಆಕರ್ಷಕವಾಗಿ ಜೋಡಿಸಲಾಗಿತ್ತು. ಮುಂಜಾನೆಯಿಂದಲೇ ಮಕ್ಕಳು, ವೃದ್ಧರು, ಹೆಂಗಳೆಯರು ಸೇರಿದಂತೆ ಊರ ಪರಊರಿನಿಂದ ಭಗವದ್ಭಕ್ತರು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಶ್ರೀದೇವರ ವಿಶ್ವರೂಪ ದರ್ಶನ ಪಡೆದರು. ಶ್ರೀದೇವರನ್ನು ವಿಶೇಷ ಹೂವಿನ ಅಲಂಕಾರದಿಂದ ಶೃಂಗರಿಸಲಾಗಿತ್ತು. ಬೆಳಿಗ್ಗೆ 3:30ರಿಂದ ಭಜನೆ, ಸುಪ್ರಭಾತ ಸೇವೆ, ಕಾಕಾಡಾರತಿ, ಜಾಗರ ಪೂಜೆ ನಡೆಯಿತು. ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಜರಗುವ ಶ್ರೀದೇವರ ವಿಶ್ವರೂಪ ದರ್ಶನ…
ಭಾರತೀಯ ಸಂಸ್ಕೃತಿಯ ಉಳಿವು ಬೆಳವಣಿಗೆಗೆ ಭರತನಾಟ್ಯದ ಕೊಡುಗೆ ಅಪಾರ : ಡಾ|| ಎಚ್. ರಾಮಮೋಹನ್ ಕುಂದಾಪುರ: ಭಾವ ರಾಗ ತಾಳ ಮೂರು ಮೇಳ್ಯೆಸಿರುವ ಅದ್ಭುತ ನೃತ್ಯ ಕಲೆಗೆ ಜಗತ್ತಿನಾದ್ಯಂತ ಮನ್ನಣೆ ದೊರೆತಿದೆ. ಮೈಮನಗಳಿಗೆ ರೋಮಾಂಚನ ಮೂಡಿಸಿ ಕಲೆಯ ರಸ ಸ್ವಾದವನ್ನು ಆಸ್ವಾದಿಸುವಂತ ಭರತನಾಟ್ಯವು ಭಾರತೀಯ ಸಂಸ್ಕೃತಿಯ ಉಳಿವಿಗೆ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡಿದೆ ಎಂದು ಕರ್ನಾಟಕ ಬ್ಯಾಂಕ್ನ ನಿರ್ದೇಶಕರಾದ ಡಾ|| ಎಚ್. ರಾಮಮೋಹನ್ ಹೇಳಿದರು. ಅವರು ನೃತ್ಯವಸಂತ ನಾಟ್ಯಾಲಯ (ರಿ.) ಕುಂದಾಪುರದ ದಶಮಾನೋತ್ಸವದ ಅಂಗವಾಗಿ ಹಂಗಳೂರಿನ ಅನಂತ ಪದ್ಮನಾಭ ಸಭಾಗೃಹದಲ್ಲಿ ಆಯೋಜಿಸಿದ ರಾಜ್ಯ ಮಟ್ಟದ ಭರತನಾಟ್ಯ ಸ್ಪರ್ಧೆ ದಶಾರ್ಪಣಂ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು. ಉದ್ಯಮಿ ಬಿಜೂರು ರಾಮಕೃಷ್ಣ ಶೇರಿಗಾರ್ ಬಹುಮಾನ ವಿತರಿಸಿ ರಾಜ್ಯಮಟ್ಟದ ಭರತನಾಟ್ಯ ಸ್ಪರ್ಧೆಯನ್ನು ಆಯೊಜಿಸಿ ಯಶಸ್ವಿಯಾಗಿ ನಡೆಸಿದ ಸಂಘಟಕರನ್ನು ಪ್ರಶಂಸಿಸಿದರು. ಸೀನಿಯರ್ ವಿಭಾಗದಲ್ಲಿ ದಿವ್ಯ ಬಿ.ಕೆ. ಮಂಗಳೂರು ಪ್ರಥಮ, ಶರಣ್ಯ ಬಿ. ಮಂಗಳೂರು ದ್ವಿತೀಯ, ಧೀಮಹಿ ಉಡುಪಿ ತೃತೀಯ ಸ್ಥಾನ ಪಡೆದರೇ ಜ್ಯೂನಿಯರ್ ವಿಭಾಗದಲ್ಲಿ ತ್ವಿಷಾ ಆರ್. ಶೆಟ್ಟಿ…
ಕುಂದಾಪುರ: ಉಡುಪಿ ಕಲ್ಯಾಣಪುರ ಶ್ರೀ ಆದಿಶಕ್ತಿ ವೀರಭದ್ರ ಬ್ರಹ್ಮಲಿಂಗ ದೇವಸ್ಥಾನದಲ್ಲಿ ಜಿಲ್ಲಾ ಕರಾಟೆ ಟೀಚರ್ಸ್ ಅಸೋಶಿಯೇಷನ್ ಆಶ್ರಯದಲ್ಲಿ ಇತ್ತೀಚಿಗೆ ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್ ಆಯ್ಕೆ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಉಪ್ಪುಂದ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಲಕ್ಷ್ಮೀಕಾಂತ್ ಎನ್.ಆರ್. (45-50) ಬ್ರೌನ್ಬೆಲ್ಟ್ನಲ್ಲಿ ವೈಯಕ್ತಿಕವಾಗಿ ಪ್ರಥಮ ಸ್ಥಾನ ಹಾಗೂ ಕುಮಿಟೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದರು. ಅಲ್ಲದೇ ನಾಗೂರು ಸಂದೀಪನ್ ಅಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಹನೀಶ್ ಎನ್.ಆರ್.(26-30ಕೆ.ಜಿ) ಪ್ರಥಮ ಹಾಗೂ ಶ್ರೇಯಸ್ ಎನ್.ಆರ್. (30-35ಕೆಜಿ) ಬ್ರೌನ್ಬೆಲ್ಟ್ನಲ್ಲಿ ದ್ವಿತೀಯ ಮತ್ತು ಕುಮಿಟೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕುಂದಾಪುರದ ಕಿರಣ್ಕುಮಾರ್ ಅವರಲ್ಲಿ ಕರಾಟೆ ಅಭ್ಯಾಸ ಮಾಡುತ್ತಿದ್ದಾರೆ.
ಗಂಗೊಳ್ಳಿ: ಉತ್ತಮ ಸಾಹಿತ್ಯಗಳು ನಮಗೆ ನಿಜವಾದ ಜ್ಞಾನ ವಿವೇಕವನ್ನು ನೀಡುತ್ತದೆ. ಮಾನವೀಯ ಸಂಬಂಧಗಳು ಬೆಳೆಯುತ್ತದೆ. ನಮ್ಮಲ್ಲಿ ನೈತಿಕ ಸ್ಥೈರ್ಯವನ್ನು ನೀಡುತ್ತದೆ. ಆದರೆ ಪರಿಸರವನ್ನು ಮತ್ತು ಸಂಕುಚಿತ ಆವರಣವನ್ನು ಮೀರಿ ಬೆಳೆಯಲು ಸಾಹಿತ್ಯ, ಕಲೆ ಮೊದಲಾದವುಗಳು ಸಹಕಾರಿಯಾಗಲಿದೆ. ಸಾಹಿತ್ಯ ಎನ್ನುವುದು ವಿಕಾಸದ ರಿಲೇ ಓಟ ಇದ್ದಂತೆ. ಸಾಹಿತ್ಯ ಕ್ಷೇತ್ರದಲ್ಲಿ ದುಡಿದು ಸಾಧನೆ ಮಾಡಿದ ಅನೇಕ ಸಾಧಕರಿದ್ದು, ಅವರ ಈ ಸಾಹಿತ್ಯದ ಓಟವನ್ನು ಇಂದಿನ ಯುವ ಜನಾಂಗ ಮುಂದುವರಿಸಬೇಕು. ಓದುವುದು ನಮ್ಮ ಬದುಕಿಗೆ ಬೇಕಾಗಿದ್ದು, ಬದುಕಿನಲ್ಲಿ ಎದುರಾಗುವ ಪರೀಕ್ಷೆಗಳಿಗೆ ಸಾಹಿತ್ಯವೇ ಪಠ್ಯಪುಸ್ತಕ ಎಂದು ಸಾಹಿತಿ ಜಯಂತ ಕಾಯ್ಕಿಣಿ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ವಠಾರದಲ್ಲಿ ಕುಂದಪ್ರಭ ಕುಂದಾಪುರ, ಸಾಹಿತ್ಯ ವೇದಿಕೆ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಆಶ್ರಯದಲ್ಲಿ ಗಂಗೊಳ್ಳಿ ಯು.ಶೇಷಗರಿ ಶೆಣೈ ಸ್ಮರಣಾರ್ಥ ಆಯೋಜಿಸಿದ್ದ ಸವಿ-ನುಡಿ ಹಬ್ಬ 2015 ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಸಾಹಿತ್ಯ ಓದುವುದು ಬಹಳಷ್ಟು ಕಡಿಮೆಯಾಗುತ್ತಿದೆ. ಚೆಕ್ ಪುಸ್ತಕ, ಪಾಸ್ ಪುಸ್ತಕ ಹಾಗೂ…
ಹಿಂದೂಗಳ ಭಾವನೆಗೆ ವಿನಾಕಾರಣ ಧಕ್ಕೆಯನ್ನುಂಟು ಮಾಡಿದರೇ ಉಗ್ರ ಹೋರಾಟ: ಹಿಂದೂ ಸಂಘಟನೆಗಳ ಎಚ್ಚರಿಕೆ ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಲ್ಲೂರು ರಾಷ್ಟ್ರೀಯ ಹೆದ್ದಾರಿ ಬಳಿಯ ವೃತ್ತದಲ್ಲಿ ಹಾಕಲಾಗಿದ್ದ ಭವಗದ್ವಜವನ್ನು ಕೋಮು ಸಂಘ ಸಂಘರ್ಷದ ಕಾರಣವೊಡ್ಡಿ ತೆರವುಗೊಳಿಸಿ ತಲ್ಲೂರು ಗ್ರಾಮ ಪಂಚಾಯತ್ ನಿರ್ಧಾರವನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಇಂದು ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ತಲ್ಲೂರು ವೃತ್ತದಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಭಗವದ್ವಜ ಹಾರಾಡುತ್ತಿದೆ. ಇಂದು ಎಂದಿಗೂ ಕೋಮು ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿಲ್ಲ. ಊರಿನ ಶಾಂತಿ ಸೌಹಾರ್ದತೆ ಸಂಕೇತವಾಗಿ ಮುಂದುವರಿದಿದೆ. ದ್ವಜ ಹಾರಿಸುವುದರಿಂದಲೇ ತಲ್ಲೂರಿನಲ್ಲಿ ಕೋಮ ಸಂಘರ್ಷ ನಡೆಯುತ್ತದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಯಾರದ್ದೋ ಹಿತಾಸಕ್ತಿಗಾಗಿ ಧ್ವಜ ತೆರವುಗೊಳಿಸಿ ಹಿಂದೂಗಳ ಭಾವನೆ ಘಾಸಿಯನ್ನುಂಟು ಮಾಡಲಾಗಿದೆ ಎಂದು ಸಂಘ ಪರಿವಾರ ಆರೋಪಿಸಿವೆ. ಕರ್ನಾಟಕ ರಾಜ್ಯದ ಹೆಚ್ಚಿನ ಸರ್ಕಲ್ಗಳಲ್ಲಿ ಕೇಸರಿ ಧ್ವಜ ಹಾರಾಡುತ್ತಿದೆ. ಅಲ್ಲೆಲ್ಲಿಯೂ ಮೂಡದ ಕೋಮು ಸಂಘರ್ಷ ತಲ್ಲೂರಿನಲ್ಲಿ ಹೇಗೆ ಉದ್ಬವಿಸುತ್ತದೆ ಎಂದು ಪ್ರಶ್ನಿಸಿದ ಪ್ರತಿಭಟನಾ ನಿರತರು, ತಲ್ಲೂರಿನ ಧ್ವಜ…
ಕುಂದಾಪುರ: ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಉದ್ದೇಶದಿಂದ ಕೇಂದ್ರ ಸರಕಾರವು ಜಾರಿಗೊಳಿಸ ಹೊರಟಿರುವ ಕಸ್ತೂರಿರಂಗನ್ ವರದಿಯ ಕರಿಛಾಯೆ ಮತ್ತೆ ಕುಂದಾಪುರ ತಾಲೂಕಿನ ಗ್ರಾಮಗಳ ಮೇಲೆ ಬಿದ್ದಿದೆ. ವರದಿಯ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಮರು ನೋಟಿಸು ಜಾರಿಯಾಗಿರುವುದಲ್ಲದೇ ನಾಲ್ಕು ಹೊಸ ಗ್ರಾಮಗಳನ್ನು ಹೊಸದಾಗಿ ಸೇರಿಸಿಕೊಂಡು ವಿವರಣೆ ಕೇಳಿರುವುದು ಜನರನ್ನು ಮತ್ತೆ ಗೊಂದಲಕ್ಕೀಡು ಮಾಡಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯವು ಕುಂದಾಪುರ ತಾಲೂಕಿನ ಶಂಕರನಾರಾಯಣ ವಲಯ ಅರಣ್ಯ ವ್ಯಾಪ್ತಿಯ ಅಮಾಸೆಬೈಲು, ಮಚ್ಚಟ್ಟು, ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ ಗ್ರಾಮ ಪಂಚಾಯತಿಗಳಿಗೆ ಅ.28ರದು ಮರು ನೋಟಿಸು ಜಾರಿಗೊಳಿಸಿದ್ದು, ಈ ಬಗ್ಗೆ ವಿವರಣೆ ನೀಡುವಂತೆ ಕೋರಲಾಗಿದೆ. ಕಳೆದ ವರ್ಷ ಈ ಭಾಗದಲ್ಲಿ ಜನವಾಸ್ತವ್ಯ ಹಾಗೂ ಕೃಷಿ ಭೂಮಿ ಪ್ರದೇಶಗಳನ್ನು ಕಸ್ತೂರಿರಂಗನ್ ವರದಿಗೆ ಸೇರ್ಪಡೆಗೊಳಿಸುವುದನ್ನು ವಿರೋಧಿಸಿ ಭಾರಿ ಜನಾಂದೋಲನವೇ ನಡೆದಿತ್ತು. ಇದಕ್ಕೆ ಸ್ಪಂದಿಸಿದ್ದ ರಾಜ್ಯ ಸರಕಾರವು ಮಂತ್ರಿಮಂಡಲದ ಉಪಸಮಿತಿಯನ್ನು ರಚಿಸಿ ಅರಣ್ಯ ಸಚಿವ ರಮಾನಾಥ ರೈ ನೇತೃತ್ವದಲ್ಲಿ ಉಸ್ತುವಾರಿ ಮಂತ್ರಿಗಳ ಸಹಯೋಗದೊಂದಿಗೆ ವರದಿ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿ ನೀಡಿ…
ಕುಂದಾಪುರ: ಅಧಿಕಾರಿಗಳ ತಮ್ಮ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾನೂನಿನಂತೆ ಕೆಲಸ ಮಾಡಿದರೆ ಜನ ನಮ್ಮ ಕೆಲಸವನ್ನು ಮೆಚ್ಚಿ ವಿಶ್ವಾಸ ಇಡುತ್ತಾರೆ. ಕಳೆದ ಎರಡು ವರ್ಷ ಉಡುಪಿ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ಮಾಡಿದ ಕೆಲಸ ತೃಪ್ತಿ ತಂದಿದೆ ಎಂದು ಜಿಪಂ ಸಿಇಓ ಕನಗವಲ್ಲಿ ಹೇಳಿದರು. ಕುಂದಾಪುರ ತಾಲೂಕ್ ಪಂಚಾಯಿತಿ ಮತ್ತು ವಿವಿಧ ಇಲಾಖೆ ಆಶ್ರಯದಲ್ಲಿ ತಾಲೂಕ್ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿ, ನನ್ನ ಅಧಿಕಾರಾವಧಿಯಲ್ಲಿ ಗ್ರಾಪಂ.ನಲ್ಲಿರುವ ಪಿಡಿಓ ಕೊರೆತೆ ನೀಗಿಸಿ, ಜನರ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಜನೋಪಯೋಗಿ ಕೆಲಸ ಮಾಡಿದರೆ ಜನ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ ಎನ್ನೋದಕ್ಕೆ ನೀವು ನೀಡುತ್ತಿರುವ ಅಭಿನಂದನೆ ಸಾಕ್ಷಿ ಎಂದ ಅವರು, ಬೀದರ್ ಜಿಲ್ಲೆಯಲ್ಲಿದ್ದಾಗಲೂ ಗುಣಮಟ್ಟದ ಸೇವೆ ಮೂಲಕ ಇಂದಿಗೂ ನನ್ನನ್ನು ಅವರು ನೆನಪಿಟ್ಟುಕೊಂಡಿದ್ದಾರೆ ಎಂದು ತಿಳಿಸಿದರು. ಕುಂದಾಪುರ ತಾಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಮಾಜಿ ಉಪಾಧ್ಯಕ್ಷೆ ಮಮತಾ ಆರ್.ಶೆಟ್ಟಿ, ಶಿಕ್ಷಣ ಸ್ಥಾಯಿನ…
ಬೈಂದೂರು: ಪ್ರತಿಯೊಂದು ಮಗುವಿನಲ್ಲೂ ತನ್ನದೇ ಆದ ಪ್ರತಿಭೆ ಇದೆ. ಅದನ್ನು ಪ್ರಾಥಮಿಕ ಹಂತದಲ್ಲಿಯೇ ಗುರುತಿಸಿ ಉತ್ತಮ ವೇದಿಕೆ ಕಲ್ಪಿಸಿ ಪ್ರೋತ್ಸಾಹಿಸುವ ಕೆಲಸ ಪಾಲಕರು ಹಾಗೂ ಶಿಕ್ಷಕರಿಂದ ನಿರಂತರವಾಗಿ ಆಗಬೇಕಿದೆ. ಇದು ಮಕ್ಕಳ ಉಜ್ವಲ ಭವಿಷ್ಯಕ್ಕೆ ನಾಂದಿನಾಗಲಿದೆ ಎಂದು ಉಡುಪಿ ಜಿ.ಪಂ ಅಧ್ಯಕ್ಷೆ ಸವಿತಾ ಶಿವಾನಂದ ಕೋಟ್ಯಾನ್ ಹೇಳಿದರು. ಅವರು ನಾಗೂರು ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿ ರಾಜ್ಯದಲ್ಲಿ ಗುರುತಿಸಿಕೊಂಡ ಉಡುಪಿ ಜಿಲ್ಲೆಯ ಮಕ್ಕಳು ಶಿಕ್ಷಣ ಶಿಕ್ಷಣದೊಂದಿಗೆ ಶಿಕ್ಷಣೇತರ ಚಟುವಟಿಕೆಗಳಲ್ಲಿಯೂ ಸಾಧನೆಗೈದಿದ್ದಾರೆ. ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವ ಪ್ರತಿಭಾ ಕಾರಂಜಿಯಂತಹ ಕಾರ್ಯಕ್ರಮಗಳ ಆಯೋಜನೆಗೆ ಪ್ರತಿಯೊಬ್ಬರ ಶ್ರಮ, ಪಾಲುದಾರಿಕೆ ಇದ್ದರೇ ಮಾತ್ರ ಅದು ಯಶಸ್ಸು ಕಾಣಲು ಸಾಧ್ಯ ಎಂದರು. ಕಿರಿಮಂಜೇಶ್ವರ ಗ್ರಾ.ಪಂ ಅಧ್ಯಕ್ಷೆ ಲಲಿತಾ ಖಾರ್ವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ನಾಗೂರು ಆಂಜನೇಯ ದೇವಸ್ಥಾನದಿಂದ ಆರಂಭಗೊಂಡ ಪುರಮೆರವಣಿಗೆಗೆ ಜಿ.ಪಂ ಸದಸ್ಯ ಬಾಬು ಶೆಟ್ಟಿ ಚಾಲನೆ ನೀಡಿದರು. ಜಿ.ಪಂ ಆರೋಗ್ಯ ಮತ್ತು…
