ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಪುರಾಣ ಪ್ರಸಿದ್ಧ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ಜ. 14ರಂದು ಮಕರ ಸಂಕ್ರಮಣ ಉತ್ಸವ ಸಂಭ್ರಮದಿಂದ ಜರುಗಿತು. ಮಾರಣಕಟ್ಟೆ ದೇಗುಲದ ಆನುವಂಶೀಯ ಆಡಳಿತ ಮೊಕ್ತೇಸರ ಸಿ. ಸದಾಶಿವ ಶೆಟ್ಟಿ, ಕ್ಷೇತ್ರದ ಅರ್ಚಕರು, ದರ್ಶನ ಪಾತ್ರಿಗಳು, ಚಿತ್ತೂರು ಗುಡಿಕೇರಿ ಮನೆಯವರು ಉತ್ಸವದಲ್ಲಿ ಪಾಲ್ಗೊಂಡರು. ಜ. 14ರಿಂದ ಜ. 16ರ ವರೆಗೆ ಮಾರಣಕಟ್ಟೆ ಕ್ಷೇತ್ರದಲ್ಲಿ ಮಹಾ ಮಂಗಳಾರತಿ ಅನಂತರ ಮಂಡಲ ಸೇವೆ ಜರಗಲಿದೆ. ಉಡುಪಿ ಹಾಗೂ ಕುಂದಾಪುರ ತಾಲೂಕಿನಿಂದ ಆಗಮಿಸಿದ ಭಕ್ತರಿಗೆ ಸಕಲ ಸೌಕರ್ಯ ಒದಗಿಸುವಲ್ಲಿ ಆಡಳಿತ ಮಂಡಳಿ ಹಾಗೂ ಗ್ರಾಮಸ್ತರು ಹೆಚ್ಚಿನ ಕಾಳಜಿ ವಹಿಸಿ ಪೊಲೀಸರೊಡನೆ ಸಹಕರಿಸಿದರು. ಸಿಂಗಾರ ಮತ್ತು ಸೇವಂತಿಗೆ ಬ್ರಹ್ಮಲಿಂಗೇಶ್ವರನಿಗೆ ಪ್ರಿಯ ವಾದುದರಿಂದ ಬುಟ್ಟಿಯಲ್ಲಿ ಅವುಗಳನ್ನು ಹೊತ್ತು ಭಕ್ತರು ಸರದಿಯಲ್ಲಿ ಕಾಣಿಕೆ ಸಲ್ಲಿಸಿದರು. ಮೂರು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ಪಾಲ್ಗೊಳ್ಳಲು ಕುಂದಾಪುರ ಹಾಗೂ ಉಡುಪಿ ತಾಲೂಕಿನಿಂದ 50 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿದ್ದರು. ವಿಶೇಷ ಬಸ್ ಸೌಕರ್ಯವಿತ್ತು. ಬೈಂದೂರು ಶಾಸಕ ಕೆ.…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕುಂದಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯಲ್ಲಿ ಈ ಭಾರಿ ಬಿಜೆಪಿ ಅಧಿಕಾರ ಕೈತಪ್ಪಿದ್ದು ಕಾಂಗ್ರೆಸ್ ಸುಲಭವಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಇಂದು ಮಿನಿ ವಿಧಾನಸೌಧದಲ್ಲಿ 6 ಕ್ಷೇತ್ರಗಳಿಗೆ ನಡೆದ ಚುನಾವಣೆಗೆ ಮತ ಎಣಿಕೆ ನಡೆದಿದ್ದು, 3ಕಾಂಗ್ರೆಸ್ 3 ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಸಮಬಲ ಸಾಧಿಸಿದ್ದಾರೆ. ಉಳಿದ ಏಳು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಕಾಂಗ್ರೆಸ್ ಬೆಂಬಲಿತ 3 ಹಾಗೂ ಬಿಜೆಪಿ ಬೆಂಬಲಿತ 4 ಅಭ್ಯರ್ಥಿಗಳು ಆಯ್ಕೆಗೊಂಡಿದ್ದರು. ಒಟ್ಟು ಹದಿಮೂರು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ 6 ಸ್ಥಾನ ಪಡೆದುಕೊಂಡರೆ, ಬಿಜೆಪಿ ಪಕ್ಷ 7 ಸ್ಥಾನ ಪಡೆದು ಬಹುಮತ ಸಾಧಿಸಿದ್ದರೂ ಮೂವರು ನಾಮ ನಿರ್ದೇಶಿತ ಸದಸ್ಯರಿಂದಾಗಿ ಅಧಿಕಾರ ಕೈತಪ್ಪಲಿದೆ. ಎಪಿಎಂಸಿ ಆರು ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ವರ್ತಕ ಕ್ಷೇತ್ರ, ಶಿರೂರು ಹಾಗೂ ಕಿರಿಮಂಜೇಶ್ವರದಲ್ಲಿ ಬಿಜೆಪಿ ಬೆಂಲಿತರು ಜಯ ಸಾಧಿಸಿದರೆ, ಕಂಬದಕೋಣೆ, ತ್ರಾಸಿ, ವಂಡ್ಸೆ ಕೃಷಿ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿಗರು ವಿಜಯ ಗಳಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ. ರೈತ…
ಗಂಗೊಳ್ಳಿಯಲ್ಲಿ ಕರಾವಳಿ ಕಾವಲು ಪೊಲೀಸ್ ಠಾಣೆ ನೂತನ ಕಟ್ಟಡ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮುಂಬೈ ಮೇಲೆ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ದೇಶದ ಕರಾವಳಿಯ ರಕ್ಷಣೆಯ ಮಹತ್ವದ ಅರಿವಾಗಿದೆ. ಸೈನಿಕ ಪಡೆ ಬಾಹ್ಯ ದಾಳಿಯ ವಿರುದ್ಧ ನೀಡುವ ರಕ್ಷಣೆಯ ಜತೆಗೆ ಆಂತರಿಕ ರಕ್ಷಣೆಗೆ ಪ್ರತ್ಯೇಕ ವ್ಯವಸ್ಥೆ ಬೇಕು ಎನ್ನುವುದರ ಅರಿವಾಗಿದೆ. ಅದಕ್ಕಾಗಿ ಕರಾವಳಿ ಕಾವಲು ಪೊಲೀಸ್ ಪಡೆಯನ್ನು ಹುಟ್ಟುಹಾಕಾಗಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದರು. ಗಂಗೊಳ್ಳಿ ಮೀನುಗಾರಿಗಾ ಬಂದರು ಪ್ರದೇಶಲ್ಲಿ ರೂ ೪೮ ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಕಾವಲು ಪೊಲೀಸ್ ಠಾಣೆಯನ್ನು ಉದ್ಘಾಟಿಸಿದ ಬಳಿಕ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಕರಾವಳಿ ಪೊಲೀಸ್ ಪಡೆಗೆ ಹಲವು ಜವಾಬ್ದಾರಿಗಳಿವೆ. ಕಡಲಿನಲ್ಲಿ ಅಪಾಯಕ್ಕೆ ಈಡಾಗುವ ಮೀನುಗಾರರ ಮತ್ತು ಬೋಟ್ಗಳ ರಕ್ಷಣೆ, ನುಸುಳಿ ಬರುವ ಭಯೋತ್ಪಾದಕರ, ಕಳ್ಳ ಸಾಗಣೆದಾರರ ಪತ್ತೆ ಮತ್ತು ಸಮುದ್ರ ಹಾಗೂ ಕರಾವಳಿ ಅಂಚಿನಲ್ಲಿ ನಡೆಯುವ ಕಾನೂನು ಬಾಹಿರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಮೈಸೂರು ಪ್ರಗತಿಪರ ಪ್ರಕಾಶನ ಹಾಗೂ ಗ್ರಾಮಾಂತರ ಬುದ್ದಿಜೀವಿಗಳ ಬಳಗ ನೀಡುವ ವಿಶ್ವಮಾನ್ಯ ಕನ್ನಡಿಗ ಪ್ರಶಸ್ತಿಗೆ ಉಪನ್ಯಾಸಕ ಅಂಪಾರು ನಿತ್ಯಾನಂದ ಶೆಟ್ಟ ಆಯ್ಕೆ ಆಗಿದ್ದಾರೆ. ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜ್ ಕನ್ನಡ ಉಪನ್ಯಾಸಕ ನಿತ್ಯಾನಂದ ಶೆಟ್ಟಿ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನ ಸಂಸ್ಥೆ, ನವದೆಹಲಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿದ್ದು, ಕುಂದಾಪುರ ತಾಲೂಕ್ ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದರು. ಕರ್ನಾಟಕ ಜಾನಪದ ಪರಿಷತ್ ಉಡುಪಿ ಜಿಲ್ಲಾ ಘಟಕ ಅಧ್ಯಕ್ಷ, ವೈದೇಹಿ ಕತೆಗಳಲ್ಲಿ ಪ್ರಾದೇಶಿಕ ಸಂಸ್ಕೃತಿ ಇವರ ಪ್ರಕಟಿತ ಕೃತಿ. ಜನವರಿ ಅಂತ್ಯದ ವೇಳೆಗೆ ಮೈಸೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ನೀಡಲಾಗುತ್ತದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಲೇಜಿನ ಸರ್ವತೋಮುಖ ಅಭಿವೃದ್ಧಿಗೆ ಹಳೆ ವಿದ್ಯಾರ್ಥಿಗಳ ಸಂಘಟನೆ ಪೂರಕವಾಗಿದೆ. ಈ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕಾಲೇಜಿನ ಎಲ್ಲಾ ಹಳೆ ವಿದ್ಯಾರ್ಥಿಗಳು ಒಗ್ಗೂಡಿ ಕಾಲೇಜಿನ ಆಡಳಿತ ಮಂಡಳಿಯೊಂದಿಗೆ ಕೈಜೋಡಿಸಬೇಕೆಂದು ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಎಮ್. ಸುಕುಮಾರ ಶೆಟ್ಟಿ ಹೇಳಿದರು. ಅವರು ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ತಮ್ಮ ಕಾಲೇಜು ದಿನಗಳ ಮಧುರ ಕ್ಷಣಗಳನ್ನು ಹಂಚಿಕೊಂಡರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಹಳೆ ವಿದ್ಯಾರ್ಥಿ ಸಂಘದ ಸಂಯೋಜಕರಾದ ರಾಜೇಶ್ ಶೆಟ್ಟಿ, ವಾಣಿಜ್ಯ ವಿಭಾಗದ ಮುಖ್ಯಸ್ಥರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಹಳೆ ವಿದ್ಯಾರ್ಥಿಗಳು, ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ತಿಲಕಲಕ್ಷ್ಮೀ ಸ್ವಾಗತಿಸಿದರು, ವೀಣಾ ಭಟ್ ವಂದಿಸಿದರು, ವಿಘ್ನೇಶ್ವರ್ ರಾವ್ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಲಾವಣ್ಯ ರಿ. ಬೈಂದೂರು 40ನೇ ವರ್ಷದ ಸಂಭ್ರಮದ ಅಂಗವಾಗಿ ಜನವರಿ 27ರಿಂದ ಫೆಬ್ರವರಿ 05ವರೆಗೆ ಹಮ್ಮಿಕೊಂಡಿರುವ ಕಲಾಮಹೋತ್ಸವ ಹತ್ತು ದಿನಗಳ ಕಲಾ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬೈಂದೂರು ಸೇನೇಶ್ವರ ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು. ಲಾವಣ್ಯ ಬೈಂದೂರು ಕಾರ್ಯಕಾರಿ ಸಮಿತಿ ಅಧ್ಯಕ್ಷ ಗಿರೀಶ್ ಬೈಂದೂರು, ಗೌರವಾಧ್ಯಕ್ಷ ಶ್ರೀನಿವಾಸ ಪ್ರಭು, ವ್ಯವಸ್ಥಾಪಕರಾದ ಬಿ. ಗಣೇಶ್ ಕಾರಂತ್, ಬಿ. ರಾಮ ಟೈಲರ್, ಗಣಪತಿ ಎಸ್., ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಹಾಗೂ ಸಮರ್ಥ ಭಾರತ್ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವದ ಪ್ರಯುಕ್ತ ಕೊಲ್ಲೂರು ದೇವಳದ ಹೊರಪ್ರಾಂಗಣದಲ್ಲಿರುವ ಪರಿವಾರ ದೇವರ ಗುಡಿಯ ಪರಿಸರವನ್ನು ಸ್ವಚ್ಛಗೊಳಿಸಲಾಯಿತು. ದೇವಳದ ಎಇಒ ಎಚ್. ಕೃಷ್ಣಮೂರ್ತಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದರು. ಸಮರ್ಥ ಭಾರತ್ ಘಟಕದ ಸಂಚಾಲಕ ಶ್ರೀಧರ ಬಿಜೂರ್, ಸದಸ್ಯರಾದ ವಿನೋದ್ ಭಟ್, ಸಂದೀಪ್ ಆರ್., ಜಗದೀಶ್, ಅಶೋಕ ಶೆಟ್ಟಿ, ಕಿರಣ್ ಮೊಗವೀರ, ಕೃಷ್ಣಯ್ಯ ಬಳೆಗಾರ್ ಹಾಗೂ ಆರ್ಎಸ್ಎಸ್ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಈ ಸಂದರ್ಭ ಮುಂದಿನ ದಿನಗಳಲ್ಲಿ ಕೂಡಾ ಕ್ಷೇತ್ರದಲ್ಲಿ ಸ್ಚಚ್ಛತಾ ಅಭಿಯಾನ ಮುಂದುವರಿಯಲಿದೆ ಎಂಬ ಬಗ್ಗೆ ನಿರ್ಣಯ ಮಾಡಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಪೋಷಕರು ತಮ್ಮ ಮಕ್ಕಳನ್ನು ಹೆಚ್ಚಿನ ಹಣ ನೀಡಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಿ ಅವರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮುತುವರ್ಜಿ ವಹಿಸುವಂತೆ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿರುವ ಮಕ್ಕಳ ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನಹರಿಸಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಕೂಡ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲಾಗುತ್ತಿದ್ದು, ಖಾಸಗಿ ಶಾಲೆಗಳಿಗೆ ಕಡಿಮೆ ಇಲ್ಲದಂತೆ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಗಂಗೊಳ್ಳಿಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಪ್ರಾಯೋಜಕತ್ವದಲ್ಲಿ ಜರಗಿದ ಶಾಲೆಯ ೧೨೧ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಕಡಿಮೆಯಾಗುತ್ತಿದ್ದು ಶಾಲೆಯ ಎಸ್ಡಿಎಂಸಿ, ಪೋಷಕರು ಸೇರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ಯೋಜನೆ ರೂಪಿಸಬೇಕು. ಮಕ್ಕಳ ಶಿಕ್ಷಣಕ್ಕೆ ಸರ್ಕಾರ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದು, ಸರ್ಕಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸೇವೆ ಮತ್ತು ತ್ಯಾಗ ನಮ್ಮ ರಾಷ್ಟ್ರೀಯ ಆದರ್ಶಗಳು. ಕರ್ತವ್ಯವೆಂಬ ಯಜ್ಞದ ಮೂಲಕ ನಾವು ದೇವರನ್ನು ಕಾಣಬೇಕು. ಇದಕ್ಕಿಂತ ದೊಡ್ಡ ಪೂಜೆ ಇನ್ನೊಂದಿಲ್ಲ. ವಿವೇಕನಿಧಿಯನ್ನು ಒಳಗೊಂಡಿರುವ ಮತ್ತು ಋಷಿ-ಮುನಿಗಳು ಪ್ರವರ್ತನಗೊಳಿಸಿದ ಭಾರತದ ಆಧ್ಯಾತ್ಮಿಕ ಪರಂಪರೆ, ಇಂದು ಭೌತಿಕ ಸವಾಲುಗಳನ್ನು ಎದುರಿಸಬೇಕಾಗಿದೆ ಎಂದು ಯಳಜಿತ್ ಶ್ರೀ ಸಿದ್ದಿವಿನಾಯಕ ಸಾಂಸ್ಕೃತಿಕ ಪ್ರತಿಷ್ಟಾನದ ಸಂಚಾಲಕ, ಸಂತ ವೈ. ಮಂಗೇಶ ಶೆಣೈ ಹೇಳಿದರು. ಕರ್ನಾಟಕ ಸರಕಾರ ಕಾಲೇಜು ಶಿಕ್ಷಣ ಇಲಾಖೆ ಆಶ್ರಯದಲ್ಲಿ ಬೈಂದೂರು ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ ೧೫೪ನೇ ಜನ್ಮದಿನಾಚರಣೆ ಪ್ರಯುಕ್ತ ನಡೆಯುವ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟಿಸಿ ಉಪನ್ಯಾಸ ನೀಡಿದರು. ಇಂದಿನ ಯುವಜನರು ಕವಲುದಾರಿಯಲ್ಲಿದ್ದಾರೆ. ಒಂದೆಡೆ ಹಣವಂತರು ಸುಖ, ವೈಭೋಗ, ಬೆಡಗು ಬಿನ್ನಾಣದಿಂದ ಕೂಡಿದ ಜೀವನ ನಡೆಸುತ್ತಿದ್ದರೆ, ಇನ್ನೊಂದೆಡೆ ಲಕ್ಷಾಂತರ ಜನರು ತಮ್ಮ ಜೀವನಕ್ಕಾಗಿ ಹೋರಾಡುತ್ತಿರುವ ಶೋಚನೀಯ ಪರಿಸ್ಥಿತಿಯಲ್ಲಿರುವುದು ಸರ್ವಕಾಲಿಕ ಸತ್ಯವಾಗಿದೆ. ಈ ಸಂಕ್ರಮಣ ಕಾಲಘಟ್ಟದಲ್ಲಿ ಸ್ವಾಮಿ ವಿವೇಕಾನಂದರ ಜೀವನತತ್ವ ಹಾಗೂ ಸಂದೇಶಗಳು ಬಹಳ ಉಪಯುಕ್ತವಾಗಬಲ್ಲದು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರ ೧೫೪ ನೇ ಜನ್ಮ ದಿನಾಚರಣೆ ಅಂಗವಾಗಿ ಸಮರ್ಥ ಭಾರತ ಬೈಂದೂರು ಕಾರ್ಯಾಲಯದಲ್ಲಿ “ಉತ್ತಮನಾಗು ಉಪಕಾರಿಯಾಗು” ಎಂಬ ಸಂದೇಶವಿರುವ ಬ್ಯಾಂಡನ್ನು ಧರಿಸಿ ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು ಹಂಚಿಕೊಳ್ಳಲಾಯಿತು. ಸಮರ್ಥ ಭಾರತ ಸಂಚಾಲಕ ಶ್ರೀಧರ್ ಬಿಜೂರು ರವರು ಬೌದ್ಧಿಕ್ ನಡೆಸಿಕೊಟ್ಟರು. ಕಾರ್ಯಾಧ್ಯಕ್ಷ ಜಯಾನಂದ ಹೋಬಳಿದಾರ್, ಭಿಮೇಶ್ ಕುಮಾರ್ ಎಸ್.ಜಿ, ಗೋಪಾಲ ಕೃಷ್ಣ, ಶರತ್ ಶೆಟ್ಟಿ ಉಪ್ಪುಂದ, ರಾಜೇಶ್ ಬಿಜೂರು, ಗಣೇಶ್ ಗಾಣಿಗ, ಸುಕುಮಾರ ಶೆಟ್ಟಿ, ಸುರೇಶ್ ಬಿಜೂರು, ರಾಜೇಶ್ ಹೋಬಳಿದಾರ್, ಕೃಷ್ಣ ಕೊಡೇರಿ. ಲಿಂಗಯ್ಯ ಉಪ್ಪುಂದ ಮೊದಲಾದವರು ಉಪಸ್ಥಿತರಿದ್ದರು.
