Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಯುವಜನತೆ ದೇಶದ ಬೆನ್ನೆಲುಬು. ದೇಶ ಕಟ್ಟುವ ಕಾಯಕದಲ್ಲಿ ಯುವ ಜನತೆಯ ಪಾತ್ರ ಬಹುಮುಖ್ಯ. ಕಬ್ಬಡಿಯು ನಮ್ಮ ದೇಶದ ಕ್ರೀಡೆಯಾಗಿರುವುದರಿಂದ ನಾವು ಈ ಕ್ರೀಡೆಯನ್ನು ಗೌರವಿಸಬೇಕಿದೆ. ಕಠಿಣ ಪರಿಶ್ರಮದಿಂದ ಕ್ರೀಡಾ ತರಬೇತಿಯನ್ನು ಪಡೆದುಕೊಂಡು ಉತ್ತಮ ಕ್ರೀಡಾಪಟುವಾಗಿ ರೂಪುಗೊಳ್ಳಬೇಕು ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಕಂಚುಗೋಡು ನವಸಂಘದ ೨೫ನೇ ವಾರ್ಷಿಕೋತ್ಸವದ ಪ್ರಯುಕ್ತ ಕೊಂಕಣಿ ಖಾರ್ವಿ ಸಮಾಜಬಾಂಧವರಿಗಾಗಿ ಹಮ್ಮಿಕೊಂಡ ರಾಜ್ಯ ಮಟ್ಟದ ಹೊನಲು ಬೆಳಕಿನ ಕಬ್ಬಡಿ ಪಂದ್ಯಾಟ ’ನವ ಚೈತನ್ಯ ಟ್ರೋಫಿ’ ನ್ನು ಉದ್ಘಾಟಿಸಿ ಮಾತನಾಡಿದರು. ತಾಲೂಕು ಪಂಚಾಯತ್ ಸದಸ್ಯ ರಾಜು ದೇವಾಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹೊಸಾಡು ಗ್ರಾಪಂ ಉಪಾಧ್ಯಕ್ಷೆ ವಂದನಾ ಜೆ.ಖಾರ್ವಿ, ಗಂಗೊಳ್ಳಿ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ನಿರ್ದೇಶಕ ಚೌಕಿ ಶಂಕರ ಖಾರ್ವಿ, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಿ.ಟಿ.ಮಂಜುನಾಥ, ಗಂಗೊಳ್ಳಿ ಗ್ರಾಪಂ ಸದಸ್ಯ ವೈ.ಶ್ರೀನಿವಾಸ ಖಾರ್ವಿ, ಶೇಖರ ಖಾರ್ವಿ ಕುಂದಾಪುರ, ಸದಾನಂದ ಖಾರ್ವಿ ಮದ್ದುಗುಡ್ಡೆ, ಸುಧಾಕರ ಖಾರ್ವಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಳತೆ, ತಾಳ್ಮೆ ಹಾಗೂ ಜೀವನ ಪ್ರೀತಿಯ ನಡೆನುಡಿಯಿಂದಾಗಿ ಎಲ್ಲರೊಂದಿಗೂ ಉತ್ತಮ ಒಡನಾಟವಿಟ್ಟುಕೊಂಡಿದ್ದ ಕಲಾವಿದ ಭೋಜು ಹಾಂಡರು ಭೌದ್ಧಿಕವಾಗಿ ನಮ್ಮನ್ನಗಲಿದ್ದರೂ ಅವರು ತೋರಿದ ದಾರಿಯಲ್ಲಿಯೇ ನಡೆಯುವ ಮೂಲಕ ಅವರ ಕನಸುಗಳನ್ನು ಜೀವಂತವಾಗಿರಿಸಬೇಕಿದೆ ಎಂದು ರೋಟರಿ ಕುಂದಾಪುರ ದಕ್ಷಿಣದ ಮಾಜಿ ಅಧ್ಯಕ್ಷ ಕೆ. ಕೆ. ಕಾಂಚನ್ ಹೇಳಿದರು. ಅವರು ವಡೇರಹೋಬಳಿ ಹೈಸ್ಕೂಲು ಸಭಾಂಗಣದಲ್ಲಿ ಸಮುದಾಯ ಕುಂದಾಪುರ ಸಂಘಟನೆಯ ಆಶ್ರಯದಲ್ಲಿ ದಿ. ಭೋಜು ಹಾಂಡರ ನೆನಪಿಗಾಗಿ ಜರುಗಿದ ವರ್ಣಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ ಚಿತ್ರಕಲೆಯ ಅರಿವೂ ಇಲ್ಲದವರಿಗೂ ಕಲೆಯ ಬಗೆಗೆ ಸೆಳವು ಮೂಡಿಸಿ ಉತ್ಸುಕತೆಯಿಂದ ಕಲಿಸುವ ಪ್ರವೃತ್ತಿ ಭೋಜು ಹಾಂಡರಲ್ಲಿತ್ತು. ಹುಟ್ಟು ಸಾವಿನ ನಡುವಿನ ಸಾರ್ಥಕ್ಯ ಜೀವನವನ್ನು ಜೀವಿಸಿದ್ದ ಅವರ ನೆನಪನ್ನು ತಮ್ಮ ವ್ಯಕ್ತಿತ್ವದ ಮೂಲಕ ಚಿರಸ್ಥಾಯಿಯಾಗಿಸಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಮುದಾಯ ಕುಂದಾಪುರದ ಅಧ್ಯಕ್ಷ ಉದಯ ಗಾಂವ್ಕರ್ ಮಾಡನಾಡಿ ಭೋಜು ಹಾಂಡರು ಉಸಿರಾಡುವ ಮೂಲಕ ಮಾತ್ರ ಜೀವಂತಿಕೆಯನ್ನಿಟ್ಟುಕೊಂಡವರಲ್ಲ. ದೊಡ್ಡ ದೊಡ್ಡ ಕನಸುಗಳನ್ನಿಟ್ಟುಕೊಂಡು ಬದಲಾವಣೆಯನ್ನು ಬಯಸಿದ್ದವರಾಗಿದ್ದರು. ಎಷ್ಟೋ ಮಕ್ಕಳಿಗೆ ಕಲೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕವಿ ಅಡಿಗರ ಜನ್ಮಶತಾಬ್ಧಿಯು ಇಂದಿನಿಂದ ಕರ್ನಾಟಕದಾದ್ಯಂತ ಆಚರಿಸಲಾಗುತ್ತಿದ್ದು, ಇಡೀ ವರ್ಷ ಅಡಿಗರ ಸಾಹಿತ್ಯ ಹಾಗೂ ವಿಚಾರಧಾರೆಗಳ ಕುರಿತು ಪುನರವಲೋಕನಕ್ಕೆ ಅವಕಾಶ ಸಿಕ್ಕಿದೆ. ಅಡಗರನ್ನು ‘ಯುಗದ ಕವಿ’ ಎನ್ನುವುದಿದೆ. ಅಡಿಗರು ಹುಟ್ಟಿ-ಬೆಳೆದ ಈ ಭಾಗದ ಜನ ಈ ವಿಚಾರ ಮಂಥನದಲ್ಲಿ ಕ್ರಿಯಾಶೀಲರಾಗಿ ಭಾಗವಹಿಸಿ ತಮ್ಮ ಅಭಿಮಾನವನ್ನು ತೋರ್ಪಡಿಸಿಕೊಳ್ಳಬೇಕು ಎಂದು ಉಡುಪಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಪೂರ್ವಧ್ಯಕ್ಷ ಉಪ್ಪುಂದ ಚಂದ್ರ ಶೇಖರ ಹೊಳ್ಳ ಹೇಳಿದರು. ಅವರು ಸುವಿಚಾರ ಬಳಗ ಹಮ್ಮಿಕೊಂಡ ಜನ್ಮಶತಮಾನೋತ್ಸವ ಆಚರಣೆಯನ್ನು ಅಡಿಗರ ಸಮಗ್ರ ಕೃತಿಗಳನ್ನು ಅಲಂಕಾರವಾಗಿ ಜೋಡಿಸಿದ ಫಲಕದೆದುರು ದೀಪ ಬೆಳಗಿಸಿ ಕಾರ್ಯಕ್ರಮದಕ್ಕೆ ಚಾಲನೆ ನೀಡಿ ಮಾತನಾಡಿ ಅಡಿಗರನ್ನು ‘ನವ್ಯಕವಿ’, ‘ಬಂಡಾಯಕವಿ’, ‘ಪ್ರಗತಿಶೀಲಕವಿ’, ಎಂದೆಲ್ಲ ಗುರುತಿಸಿದರೂ ಅವರ ಪರೆಂಪರೆಯ ಶೀಲ- ಶುದ್ದಿ, ಸತ್ಯ ನಿಷ್ಠೆ, ಸ್ವಾಭಿಮಾನದಿಂದ ವಿಚಲಿತರಾಗಿರದೆ ಆರ್ಷ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡವರೇ ಆಗಿದ್ದರು. ಅವರು ಆಂತರ್ಯದಲ್ಲಿ ಆಧ್ಯಾತ್ಮಿಕ ಹುಡುಕಾಟದಲ್ಲಿ ಚಕಮಕಿ ಕಲ್ಲು ತಿಕ್ಕಿ ಬೆಳಕು ಹೊತ್ತಿಸುವಲ್ಲಿ ಅಪರಂಜಿ ವಿದ್ಯೆಯನ್ನು ಕರಗತಮಾಡಿಕೊಳ್ಳುವಲ್ಲಿ ಸದಾ ನಿಷ್ಣಾರಾಗಿದ್ದರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದು ಸಣ್ಣ ಸಣ್ಣ ಹಳ್ಳಿಗಳಲ್ಲಿಯೂ ದೇವಾಲಯಗಳು ನವೀಕರಣಗೊಳ್ಳುತ್ತಿವೆ. ಶ್ರೀಸಾಮಾನ್ಯರು ತಾವು ಉತ್ತಮ ಬದುಕು ರೂಪಿಸಿಕೊಂಡ ಮೇಲೆ ಸಮಾಜದ ಸೇವೆ ಮಾಡಬೇಕು ಎಂದು ಮುಂದೆ ಬರುವಂತಾಗಿದೆ. ಸ್ವಾತಂತ್ರ್ಯ ಬಳಿಕ ಸಮಾಜದಲ್ಲಾದ ಸಾಮಾಜಿಕ ಪರಿವರ್ತನೆಯಿಂದಾಗಿ ಎಲ್ಲರಲ್ಲಿಯೂ ಆತ್ಮಗೌರವ, ಆತ್ಮವಿಶ್ವಾಸ ಹಾಗೂ ಆತ್ಮಸ್ಥೈರ್ಯ ಬರುವಂತಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಹೇಳಿದರು. ಅವರು ಇತ್ತಿಚಿಗೆ ನವೀಕರಣಗೊಂಡ ಉಳ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಶಿಲಾಮಯ ದೇವಸ್ಥಾನಕ್ಕೆ ಭೇಟಿನೀಡಿ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು. ದೇಹವನ್ನು ರಕ್ಷಣೆ ಮಾಡಿಕೊಳ್ಳಬೇಕಾದರೆ ಅಲ್ಲಿ ದೇವರಿದ್ದಾನೆ ಎಂದು ತಿಳಿಯಬೇಕು. ಧಾರ್ಮಿಕ ನಂಬಿಕೆ ಇಲ್ಲದಿದ್ದರೆ ಮನುಷ್ಯನಲ್ಲಿ ಶಿಸ್ತು ರೂಡಿಸಿಕೊಳ್ಳಲು ಸಾಧ್ಯವಿಲ್ಲ. ನಮ್ಮ ದೇಹವನ್ನೂ ದೇವಾಲಯ ಎಂದು ಗುರುತಿಸಿಕೊಳ್ಳಬೇಕಾದ ಅಗತ್ಯವಿದೆ. ದೇವಸ್ಥಾನದಂತೆ ಆರೋಗ್ಯಕ್ಕಾಗಿ ದೇಹವನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಇಲ್ಲದಿದ್ದರೇ ರೋಗ ಬ್ಲಂದು ಆಯಸ್ಸು ಮುಗಿಯಬಹುದು. ಇದನ್ನು ವೈಜ್ಞಾನಿಕವಾಗಿ ಹೇಳಿದಿದ್ದರೇ ಜನರು ಹೆದರದಿರಬಹುದು. ಆದರೆ ಅದನ್ನೇ ಧಾರ್ಮಿಕವಾಗಿ ಹೇಳಿದರೇ ಎಲ್ಲರೂ ಒಪ್ಪುತ್ತಾರೆ ಎಂದರು. ನಮ್ಮಿಂದ ಆದಷ್ಟು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಕ್ಲಾಡಿ ಗ್ರಾಮಸ್ಥರ ಸಹಕಾರದಲ್ಲಿ ಬಾಳೆಮನೆ ಮೂಲ ನಾಗಬನದಲ್ಲಿ ಬಾಳೆಮನೆ ಕುಟುಂಬದವರು ನಡೆಸುವ ಚತುಷ್ಪವಿತ್ರ ನಾಗಮಂಡಲೋತ್ಸವಕ್ಕೆ ಭಕ್ತರು ಶುಕ್ರವಾರ ಹೊರೆಕಾಣಿಕೆ ಸಮರ್ಪಿಸಿದರು. ಹೊಳ್ಮಗೆ, ಬಗ್ವಾಡಿ, ಬಾರಂದಾಡಿ, ಮಾಣಿಕೊಳಲು, ನೂಜಾಡಿ ಪರಿಸರದ ನಾಗ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಮೆರವಣಿಗೆಯಲ್ಲಿ ಸಾಗಿ ಬಂದು ಬಾಳೆಮನೆ ಗದ್ದೆಯಲ್ಲಿರುವ ಉಗ್ರಣಕ್ಕೆ ತರಕಾರಿ, ಕಾಯಿ, ಬಾಳೆಗೊನೆ, ಸಿಂಗಾರ, ನಾಗಮಂಡಲಕ್ಕೆ ಬೇಕಾಗುವ ವಿವಿಧ ವಸ್ತುಗಳ ಒಪ್ಪಿಸಿದರು. ನೂರಾರು ಮಹಿಳೆಯರು ಕಲಶ ಹಿಡಿದು ಸಾಗಿಬಂದರೆ, ತೊಟ್ಟಿರಾಯ, ಯಕ್ಷಗಾನ ವೇಷ, ಬ್ಯಾಂಡ್ ಸೆಟ್ ಮೂಲಕ ಹತ್ತಾರು ವಾಹನದಲ್ಲಿ ಹೊರೆ ಕಾಣಿಕೆ ವಾಹನ ಸಾಲಾಗಿ ಸಾಗಿ ಬಂತು. ಆಲೂರು, ನಾಡಾ ಹಕ್ಲಾಡಿ ಗುಡ್ಡೆ, ಯಳೂರು, ತೊಪು, ಬಟ್ಟೆಕುದ್ರು ಪರಿಸರ ಹಾಗೂ ಹೊರ ಗ್ರಾಮದ ಸಾವಿರಕ್ಕೂ ಮಿಕ್ಕ ಭಕ್ತರು ಹೊರೆ ಕಾಣಿಕೆ ಸಮರ್ಪಿಸದರು. ನಾಗಮಂಡಲ ಮುಂದಾಳು ಬಾಳೆಮನೆ ಸಂತೋಷ ಕುಮಾರ್ ಶೆಟ್ಟಿ ಹಕ್ಲಾಡಿ ಹಾಗೂ ಬಾಳೆಮನೆ ಹಿರಿಯರು ಹೊರೆ ಕಾಣಿಕೆ ತಂದ ಎಲ್ಲರಿಗೂ ಶಾಲು ಹೊದಿಸಿ ಗೌರವಿಸಿದರು. ಚತುಷ್ಪವಿತ್ರ ನಾಗಮಂಡಲ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಅವರು ತಮ್ಮ ಹೊಸ ಗೂಟದ ಕಾರಿನಲ್ಲಿ ಪತ್ನಿ ಮಮತಾ ಜಿ. ಪೂಜಾರಿ ಹಾಗೂ ಸಹೋದರಿಯೊಂದಿಗೆ ಕೊಲ್ಲೂರು ದೇವಳಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಶ್ರೀ ಮೂಕಾಂಬಿಕೆಯ ಸನ್ನಿಧಿಯಲ್ಲಿ ತಮ್ಮ ಕಾರಿಗೆ ಪೂಜೆ ನೆರವೇರಿಸಿ ನಂತರ ಕ್ಷೇತ್ರದ ಗಜರಾಜನಿಂದ ದಂಪತಿಗಳು ಆಶೀರ್ವಾದ ಪಡೆದರು. ಈ ಸಂದರ್ಭ ದೇವಳದ ಎಇಒ ಎಚ್. ಕೃಷ್ಣಮೂರ್ತಿ, ಸಾಮಾಜಿಕ ಕಾರ್ಯಕರ್ತ ಕೆ. ರಮೇಶ ಗಾಣಿಗ, ಗ್ರಾಪಂ ಅಧ್ಯಕ್ಷ ಜಯಪ್ರಕಾಶ್ ಶೆಟ್ಟಿ ಮಾವಿನಕಾರು, ಮಾಜಿ ಅಧ್ಯಕ್ಷ ಕೆ. ಎನ್. ವಿಶ್ವನಾಥ ಅಡಿಗ, ಸದಸ್ಯರಾದ ಎಸ್. ಕುಮಾರ್, ಪ್ರಕಾಶ ಪೂಜಾರಿ, ಮುಖಂಡರಾದ ವಾಸು ಹೆಗ್ಡೆಹಕ್ಲು, ಸನತ್ ಬಳೆಗಾರ್, ರಾಜೇಶ್ ದಳಿ ಮತ್ತಿತರರು ಇದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ೧೫ನೆಯ ಕನ್ನಡ ಸಾಹಿತ್ಯ ಸಮ್ಮೇಳನವು ಕಿರಿಮಂಜೇಶ್ವರ ಶ್ರೀ ಅಗಸ್ತ್ಯೇಶ್ವರ ದೇವಸ್ಥಾನದ ಆವರಣದಲ್ಲಿ ಫೆಬ್ರವರಿ ೨೩ ಗುರುವಾರದಂದು ಜರುಗಲಿದ್ದು, ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಪತ್ರಕರ್ತರು, ಅಂಕಣಕಾರರು, ಸಾಹಿತಿಗಳೂ ಆದ ಸತೀಶ ಚಪ್ಪರಿಕೆಯವರನ್ನು ಆಯ್ಕೆ ಮಾಡಲಾಗಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ. ಕುಂದಾಪುರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿ ಒಂದು ದಿನದ ಈ ನುಡಿಹಬ್ಬವು ಬೆಳಿಗ್ಗೆ ೮ ಗಂಟೆಗೆ ಸರಿಯಾಗಿ ಧ್ವಜಾರೋಹಣದೊಂದಿಗೆ ಪ್ರಾರಂಭಗೊಳ್ಳಲಿದ್ದು, ಅನಂತರ ಕನ್ನಡ ತಾಯಿ ಭುವನೇಶ್ವರಿಯ ದಿಬ್ಬಣವು ಸಮ್ಮೇಳನಾಧ್ಯಕ್ಷರನ್ನು ಎದುರುಗೊಂಡು ಸಮ್ಮೇಳನ ನಡೆಯುವ ವೇದಿಕೆಗೆ ಕರೆ ತರಲಿದೆ ಎಂದು ತಿಳಿಸಿದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಮಾತನಾಡಿ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ಪೂರೈಸಿರುವ ಸತೀಶ ಚಪ್ಪರಿಕೆ ಅವರು ಪತ್ರಿಕೋದ್ಯಮ ಹಾಗೂ ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಆಶುಕವಯತ್ರಿ ಉಳ್ಳೂರು ಮೂಕಜ್ಜಿ ಅವರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಮಾರ್ಕ್ಸ್ ಒಂದೇ ಮುಖ್ಯವಲ್ಲ ಅದರ ಜೊತೆಯಲ್ಲಿ ರಿಮಾರ್ಕ್ಸ್ ಅಗತ್ಯವಾಗಿದೆ. ಇತ್ತೀಚಿನ ಮಕ್ಕಳು ತಮ್ಮ ತಂದೆ-ತಾಯಿಯಂದಿರ ಮಾತು ಕೇಳುವಷ್ಟು ತಾಳ್ಮೆಯನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿಗೂ ಹಾಗೂ ಪೋಷಕರಿಗೂ ತಾಳ್ಮೆ ಮುಖ್ಯ. ನಮ್ಮ ಮಕ್ಕಳಿಗೆ ಆಸ್ತಿ ಮಾಡುವುದರಕ್ಕಿಂತ ಮಕ್ಕಳೇ ಆಸ್ತಿ ಎಂದು ಭಾವಿಸಬೇಕು ಎಂದು ವಿಠಲ ನಾಯ್ಕ್ ವಿಟ್ಲ ಹೇಳಿದರು. ರಾಜರಾಜೇಶ್ವರಿ ಸಭಾಭವನ ಜರುಗಿದ ಸರಕಾರಿ ಪದವಿ ಪೂರ್ವ ಕಾಲೇಜು ಬೈಂದೂರಿನ ಪ್ರೌಡಶಾಲೆ ವಿಭಾದ ಪೋಷಕರ ಸಭೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಮಕ್ಕಳು ಯಾವುದನ್ನು ಕಲಿಯಬೇಕು, ಯಾವುದನ್ನು ಕೇಳಿಸಿಕೊಳ್ಳಬೇಕು, ಯಾವುದನ್ನು ನೋಡಬೇಕು, ಎನ್ನುವುದು ಮಕ್ಕಳ ಮನಸ್ಸಿನಲ್ಲಿ ಬರಬೇಕು. ಆದರೆ ಮಕ್ಕಳ ಮನಸ್ಸುಗಳು ಇತ್ತೀಚ್ಛಿಗೆ ತತ್ರಜ್ಞಾನಗಳು ಬಂದ ನಂತರ ಸಂಬಂಧಗಳು ಕಡಿಮೆಯಾಗುತ್ತಿದೆ. ಪೋಷಕರು ತಮ್ಮ ಮಕ್ಕಳನ್ನು ಕೇವಲ ಓದು ಓದು ಎಂದು ಹೇಳಿದರೆ, ಮಕ್ಕಳ ಮನಸ್ಸುಗಳು ಕೇವಲ ಓದುದರಲ್ಲಿ ಮಾತ್ರ ಸೀಮಿತವಾಗಿರುತ್ತಾರೆ. ವಿದ್ಯಾರ್ಥಿಗಳಿಗೆ ಓದುದರ ಜೊತೆಯಲ್ಲಿ ಸಾಂಸ್ಕೃತಿಕಗಳಲ್ಲಿ ಭಾಗವಹಿಸುವ ಕಾರ್ಯವನ್ನು ಪೋಷಕರು ಮಾಡಬೇಕು.ಬಹಳ ಮುಖ್ಯವಾಗಿ ಮಕ್ಕಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಪರೂಪದ ಸಾಂಪ್ರದಾಯಿಕ ಗ್ರಾಮೀಣ ಕಲೆಯನ್ನು ಉಳಿಸಿ ಬೆಳೆಸುವ ಜೊತೆಗೆ ಜನರಲ್ಲಿ ಭಕ್ತಿ ಭಾವವನ್ನು ವೃದ್ಧಿಸುವ ನಿಟ್ಟಿನಲ್ಲಿ ಗಿಂಡಿ ನರ್ತನ ಮಹತ್ವದ ಪಾತ್ರ ನಿರ್ವಹಿಸುತ್ತಿದೆ. ಇಂತಹ ವಿಶೇಷ ಜಾನಪದ ನೃತ್ಯ ಗಿಂಡಿ ನರ್ತನ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿಯಲ್ಲಿ ಫೆ.೧೨ರಂದು ತಿಂಗಳ ಕಾರ್ಯಕ್ರಮದ ಅಂಗವಾಗಿ ಜರುಗಿತು. ಗುಡ್ಡೆಯಂಗಡಿಯ ಉದ್ಯಮಿ ಹಾಗೂ ಗಿಂಡಿ ನರ್ತನ ಕಲಾವಿದ ಸತೀಶ್ ಎಂ. ನಾಯಕ್ ಅವರು ಸುಮಾರು ೧.೩೦ಗಂಟೆ ಕಾಲ ಭಜನೆ, ಭಕ್ತಿ ಭಾವವನ್ನು ಮೇಳೈಸ ಬಲ್ಲ ಭಕ್ತಿ ಗೀತೆಗಳಿಗೆ ತಲೆಯ ಮೇಲೆ ಗಿಂಡಿಯನ್ನು ಹೊತ್ತು ವಿವಿಧ ಭಂಗಿಗಳಲ್ಲಿ ನರ್ತಸಿ ನೆರೆದ ಪ್ರೇಕ್ಷಕರನ್ನು ಮಂತ್ರ ಮುಗ್ಧರನ್ನಾಗಿಸಿದರು. ಭಗವಂತನ ಲೀಲೆ, ಅವತಾರ, ಧರ್ಮಚಿಂತನೆಯನ್ನು ಸಾಮಾನ್ಯ ಜನರೂ ಸರಳವಾಗಿ ಅರ್ಥ ಮಾಡಿಕೊಳ್ಳಬಲ್ಲ ರೀತಿಯಲ್ಲಿ ನರ್ತನಾಭಿನಯನದ ಮೂಲಕ ಮನೋಜ್ಞವಾಗಿ ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಅಧ್ಯಕ್ಷ ಭಾಸ್ಕರ ಕೊಗ್ಗ ಕಾಮತ್ ಅವರು ಅಕಾಡೆಮಿಯ ವತಿಯಿಂದ ಗಿಂಡಿ ನರ್ತನ ಕಲಾವಿದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಆರನೇ ತಾಲೂಕು ಪಂಚಾಯತ್ ಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರು ಅಧಿಕಾರಿಗಳು ಹಾಗೂ ತಾಪಂ ಕಾರ್ಯನಿರ್ವಣಾಧಿಕಾರಿ ವಿರುದ್ಧ ಗರಂ ಆದ ಪ್ರಸಂಗ ನಡೆಯಿತು. ಪ್ರತಿ ಸಭೆಗೂ ಅಧಿಕಾರಿಗಳು ಗೈರು ಹಾಜರಿ ಹಾಗೂ ತಾಲೂಕಿನಲ್ಲಿ ನಡೆಯುತ್ತಿರುವ ಕಾಮಗಾರಿಗಳ ಅವ್ಯವಸ್ಥೆಗಳ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ದೋರಣೆಯನ್ನು ಖಂಡಿಸಿದರು. ಉತ್ತಮ ಗುಣಮಟ್ಟದ ಸೋಲಾರ್ ದೀಪಗಳ ಅಳವಡಿಸದೆ, ಕಳಪೆ ಮಟ್ಟದ ಸೋಲಾರ್ ದೀಪ ಅಳವಡಿಸುವುದರಿಂದ ಎನೂ ಪ್ರಯೋಜವಿಲ್ಲ. 13 ಸಾವಿರ ರೂ.ವೆಚ್ದದ ಸೋಲಾರ್ ದೀಪ ಕಳಪೆಯಾಗಿದ್ದು, ಆರು ತಿಂಗಳು ಕೂಡಾ ಉರಿಯೋದಿಲ್ಲ. ಸೋಲಾರ್ ದೀಪ ಅಳವಡಿಕೆ ಗ್ರಾಪಂಗೆ ನೀಡಿ, ವಿಸ್ವಾರ್ಹ ಕಂಪನಿಯಿಂದ ಉತ್ತಮ ಗುಣಮಟ್ಟದ ಸೋಲಾರ್ ಅಳವಡಿಕೆ ಮಾಡುವಂತೆ ಹಾಲಾಡಿ ಗ್ರಾಪಂ ಅಧ್ಯಕ್ಷ ಸರ್ವೋತ್ತಮ ಹೆಗ್ಡೆ, ತಾಪಂ ಸದಸ್ಯರಾದ ರಾಜು ದೇವಾಡಿಗ, ಉದಯ ಪೂಜಾರಿ, ಮಾಲತಿ, ಜಗದೀಶ್ ಪೂಜಾರಿ ಸಲಹೆ ಮಾಡಿದರು. ಗುಣಮಟ್ಟದ ಸೋಲಾರ್ ಅಳವಡಿಸಿ, ಐದು ವರ್ಷ ಅದರ ಮೈಂಟೇನ್ ಮಾಡುವ ಜೊತೆ, ಶೇ.20ರಷ್ಟು ಹಣ…

Read More