Author: ನ್ಯೂಸ್ ಬ್ಯೂರೋ

ಗಂಗೊಳ್ಳಿ: ವಿವೇಕಾನಂದರನ್ನು ಒಂದು ಧರ್ಮದ ರಾಯಭಾರಿಯಂತೆ ಮಾತ್ರ ನೋಡುವುದು ಮೂರ್ಖತನ. ಕುವೆಂಪುರವರು ಹೇಳಿದಂತೆ ಅವರು ವಿಶ್ವಸನ್ಯಾಸಿ. ಅವರು ಮಾನವೀಯತೆಯ ನೆಲೆಯಲ್ಲಿ ಧರ್ಮವನ್ನು ಪ್ರತಿಪಾದಿಸಿದ ಶ್ರೇಷ್ಠ ವಿಶ್ವಮಾನವ. ಎಂದು ವಾಣಿಜ್ಯ ಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್ ಗಂಗೊಳ್ಳಿ ಅವರು ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ವಿವೇಕಸಪ್ತಾಹದ ಅಂಗವಾಗಿ ಹಮ್ಮಿಕೊಂಡಿದ್ದ ವಿವೇಕಧಾರೆ ಕಾರ‍್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ವಿವೇಕಾನಂದರು ಹೇಳಿದಂತೆ ಅಂಧಾನುಕರಣೆ ಸರಿಯಲ್ಲ. ಅನುಕರಣೆ ಎನ್ನುವುದು ಅವನತಿಯ ಚಿಹ್ನೆ, ಹಾಗಾಗಿ ಎಲ್ಲಾ ಮಹಾತ್ಮರ ವಿಚಾರಗಳನ್ನು ಅಧ್ಯಯನ ಮಾಡಿ ನಮ್ಮದೇ ಆದ ಉತ್ತಮ ಚಾರಿತ್ರ್ಯವುಳ್ಳ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಅಂತರಾಷ್ಟ್ರೀಯ ಖ್ಯಾತಿಯ ವೇಯ್ಟ್ ಲಿಫ್ಟರ್ ಕೆನರಾ ಬ್ಯಾಂಕ್ ಗಂಗೊಳ್ಳಿಯ ಉಪ ಪ್ರಬಂಧಕರಾದ ಅಶೋಕ್ ಅವರು ದೀಪ ಬೆಳಗಿಸಿ ವಿವೇಕ ಸಪ್ತಾಹವನ್ನು ಉದ್ಘಾಟಿಸಿದರು.ಆಂಗ್ಲಭಾಷಾ ಉಪನ್ಯಾಸಕ ಥಾಮಸ್ ಪಿ.ಎ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿನಿ ಆಶಾ ಪ್ರಾರ್ಥಿಸಿದರು. ತಿರುಮಲೇಶ್ ಭಟ್ ಅತಿಥಿಗಳನ್ನು ಸ್ವಾಗತಿಸಿದರು. ಮನಿಷಾ ಪೂಜಾರಿ ಕಾರ‍್ಯಕ್ರಮ ನಿರೂಪಿಸಿದರು.ಯಶಸ್ವಿ ಧನ್ಯವಾದ ಅರ್ಪಿಸಿದರು.

Read More

ಕುಂದಾಪ್ರ ಡಾಟ್ ಕಾಂ. ಫೈರಿಂಗ್ ಸ್ಟಾರ್ ಹುಚ್ಚಾ ವೆಂಕಟ್ ಹವಾ ಸಾಮಾನ್ಯವಾದುದಲ್ಲ! ಎಲ್ಲೆಡೆಯೂ ಅವರದ್ದೊಂದು ಸಣ್ಣ ಪ್ರಭಾವ ಕಾಣಿಸಿಕೊಳ್ಳುತ್ತೆ ಅನ್ನೊದು ಮತ್ತೊಮ್ಮೆ ಸಾಬೀತಾಗಿದೆ. ಇತ್ತಿಚಿಗೆ ತೆರೆಕಂಡ ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರದಲ್ಲೂ ಹುಚ್ಚಾ ವೆಂಕಟ್ ಶೈಲಿ ಜೋರಾಗಿಯೇ ಸದ್ದು ಮಾಡಿದೆ. ಚಿತ್ರದ ಒಂದು ಸನ್ನಿವೇಶದಲ್ಲಿ ನಟಿ ಅಮೂಲ್ಯಾಗೆ ಚಿಕ್ಕ ಹುಡುಗಿಯೊಬ್ಬಳು ಅವಾಜ್ ಹಾಕುವ ದೃಶ್ಯ ಪ್ರೇಕ್ಷಕರಿಗೆ ಭರ್ಜರಿ ಮನೋರಂಜನೆ ನೀಡಿದೆ. ಮುದ್ದು ಹುಡುಗಿ ಹುಚ್ಚಾ ವೆಂಕಟ್ ಶೈಲಿಯಲ್ಲಿ ಮಾತನಾಡಿರುವ ರೀತಿ ಪ್ರೇಕ್ಷಕರು ಬಿದ್ದು ಬಿದ್ದು ನಗುವಂತೆ ಮಾಡಿದೆ. ಅಂದ ಹಾಗೆ ಕವಿರಾಜ್ ನಿರ್ದೇಶನದ ‘ಮದುವೆಯ ಮಮತೆಯ ಕರೆಯೋಲೆ’ ಚಿತ್ರ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಚಿತ್ರಮಂದಿರಕ್ಕೆ ಹೋಗಿ ಸಿನೆಮಾ ನೋಡಿ. ಈಗ ಒಮ್ಮೆ ಕೆಳಗಿನ ವೀಡಿಯೋ ಪ್ಲೇ ಮಾಡಿ ನೋಡಿ… Download our Mobile App for Android phone- https://play.google.com/store/apps/details?id=com.kundapra.news

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರ ಐದನೇ ಪರ್ಯಾಯೋತ್ಸವದ ಅಂಗವಾಗಿ ಕುಂದಾಪುರ ತಾಲೂಕಿನ ಭಕ್ತರು ಅಪಾರ ಪ್ರಮಾಣದ ಹೊರೆಕಾಣಿಕೆ ಸಲ್ಲಿಸಿದ್ದಾರೆ. ಇದರ ನಡುವೆ ತಾಲೂಕಿನ ಮೂಡುಗೋಪಾಡಿಯ ಮುಸ್ಲಿಂ ಬಂಧುಗಳೂ ಸಹ ಹೊರೆ ಕಾಣಿಕೆಯನ್ನು ಸಲ್ಲಿಸುವ ಮೂಲಕ ಧರ್ಮ ಸೌಹಾರ್ದತೆಯನ್ನು ಮೆರೆದಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಉಡುಪಿ ಜಿಲ್ಲೆಯ ಮುಸ್ಲಿಂ ಸಂಘಟನೆಗಳು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗುವ ಕುರಿತಂತೆ ಇತ್ತಿಚಿಗೆ ತಿಳಿಸಿತ್ತು. ಅದರಂತೆ ಮೂಡುಗೋಪಾಡಿ ಮಸೀದಿಯ ಪರವಾಗಿ ಪರ್ಯಾಯಕ್ಕೆ ಹೊರೆಕಾಣಿಕೆ ಸಲ್ಲಿಸಲಾಯಿತು. ಧರ್ಮವೈಷಮ್ಯಗಳೇ ವಿಜೃಂಭಿಸುವ ಕಾಲಘಟ್ಟದಲ್ಲಿ ಮುಸ್ಲಿಂ ಬಂಧುಗಳ ಈ ಸೌಹಾರ್ದ ನಡೆ ಧರ್ಮ ಸಹಿಷ್ಟುಗಳ ಮೆಚ್ಚುಗೆಗೆ ಪಾತ್ರವಾಯಿತು. ಗೋಪಾಡಿಯ ಮುಸ್ಲಿಂ ಸಮುದಾಯದ ಮುಖಂಡರಾದ ಬಿ. ಎ. ಮೊಹಮ್ಮದ್, ಅದಮ್ ಸಾಹೆಬ್, ಬಿ.ಎಂ. ಹಂಝಾ, ರಫಿಕ್, ಅಬ್ದುಲ್ ಖಾದರ್, ಸಿದ್ದಿಕ್ ಹೊರೆಕಾಣಿಕೆ ಸಲ್ಲಿಕೆಯ ನೇತೃತ್ವ ವಹಿಸಿದ್ದರು. ಕುಂದಾಪುರ ಡಿಎಸ್ಪಿ ಮಂಜುನಾಥ ಶೆಟ್ಟಿ ಎಸ್ಐ ನಾಸಿರ್ ಹುಸೆನ್, ಗೋಪಾಡಿ ಗ್ರಾ.ಪಂ ಉಪಾಧ್ಯಕ್ಷ ವೈಲೆಟ್ ಬರೆಟ್ಟೊ,…

Read More

ಬೈಂದೂರು: ಎಲ್ಲೊ ಇರುವವರನ್ನು ನಮ್ಮವರು ಎಂದು ಒಪ್ಪಿಕೊಳ್ಳುವ, ನಾವೆಲ್ಲರೂ ಭಾರತೀಯರು ಎಂಬ ಭಾವನೆಯನ್ನು ಹುಟ್ಟಿಸಬಲ್ಲ ಶಕ್ತಿ ಇರುವುದು ಸಂಸ್ಕೃತಿಗೆ ಮಾತ್ರ. ಭೌಗೋಳಿಕ ಸೀಮಾರೇಖೆ, ರಾಜಕೀಯ ಯಾವುದೂ ಕೂಡ ನಾವೆಲ್ಲರೂ ಒಂದು ಎಂಬ ಭಾವನೆಯನ್ನು ಕಟ್ಟಿಕೊಡಲಾರವು. ಸಂಸ್ಕೃತಿಯಲ್ಲಿ ಮಾತ್ರ ಈ ಭಾಂದವ್ಯ ಕಾಣಲು ಸಾಧ್ಯ. ಈ ಭಾಂದವ್ಯ ಅಳಿದರೇ ಒಂದು ಎಂಬ ಭಾವನೆಗೆ ಧಕ್ಕೆ ಬರಲಿದೆ ಎಂದು ಹಿರಿಯ ವಿಮರ್ಶಕ ಎ. ಈಶ್ವರಯ್ಯ ಹೇಳಿದರು. ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಇದರ 16ನೇ ವರ್ಷದ ಸಂಭ್ರಮ ’ಸುರಭಿ ಜೈಸಿರಿ’ಯಲ್ಲಿ ಬಿಂದುಶ್ರೀ ಪ್ರಶಸ್ತಿ ಸ್ವೀಕರಿಸಿದ ಅವರು ಮಾತನಾಡಿ ಅನಾದಿ ಕಾದಿಂದಲೂ ಬಂದ ಈ ಸಾಂಸ್ಕೃತಿಕ ಪರಂಪರೆಯನ್ನು, ಸಂಸ್ಕೃತಿಯ ಮೂರ್ತರೂಪವಾದ ಕಲೆ ಸಾಹಿತ್ಯ ಸಂಗೀತ ಮುಂತಾದವುಗಳ ಮೂಲಕ ಉಳಿಸಿಕೊಳ್ಳುವುದು ನಮ್ಮ ಮುಂದಿನ ಸವಾಲು. ಆ ಕೆಲಸವನ್ನು ಮಾಧ್ಯಮಗಳೋ, ಸಾಂಸ್ಕೃತಿಕ ಚಿಂತಕರೋ ಮಾಡುತ್ತಾರೆಂಬ ಭ್ರಮೆ ಬೇಡ.  ಕಲಾ ಸಂಸ್ಥೆಗಳಲ್ಲಿ ಇಂತಹ ಚಿಂತನೆ ಮೊಳೆತು ಸಂಸ್ಕೃತಿಯ ಉಳಿವಿನ ಕೆಲಸ ಸುಗಮವಾಗಲಿ ಎಂದು ಆಶಿಸಿದರು. ಕಲೆಯ ವಿಕಾಸವಾಗುವುದರೊಂದಿಗೆ ತನ್ನ ಮೂಲರೂಪವನ್ನು ಉಳಿಸಿಕೊಳ್ಳಬೇಕು. ಬದಲಾವಣೆಗಾಗಿ…

Read More

ಆರ್ಥಿಕ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕಿದೆ: ಯು.ವರಮಹಾಲಕ್ಷ್ಮೀ ಹೊಳ್ಳ ಗಂಗೊಳ್ಳಿ: ಆರ್ಥಿಕ ಸಂಸ್ಥೆಗಳು ಕೇವಲ ಆರ್ಥಿಕ ಚಟುವಟಕೆಗಳಿಗೆ ಸೀಮಿತವಾಗಿರದೆ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿರಬೇಕು. ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಕಳೆದ ಹಲವು ವರ್ಷಗಳಿಂದ ಆರ್ಥಿಕ ವ್ಯವಹಾರಗಳ ಜೊತೆಗೆ ವೈದ್ಯಕೀಯ ಶಿಬಿರ, ಸ್ಥಳೀಯಾಡಳಿತಕ್ಕೆ ಕೊಡುಗೆ, ಶಾಲಾ ಕಟ್ಟಡ ನಿರ್ಮಾಣಕ್ಕೆ ಸಹಾಯ ನೀಡುವಂತಹ ಅನೇಕ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬಂದಿರುವುದು ಶ್ಲಾಘನೀಯ. ಈ ಭಾಗದ ಜನರ ಅವಶ್ಯಕತೆಗೆ ಸ್ಪಂದಿಸುವ ಸಹಕಾರಿಯ ಉದ್ದೇಶ ಧೋರಣೆಯ ಪ್ರತೀಕವಾಗಿ ಸಹಕಾರಿ ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದು ಉಪ್ಪುಂದ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷೆ ಯು.ವರಮಹಾಲಕ್ಷ್ಮೀ ಹೊಳ್ಳ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಸಭಾಂಗಣದಲ್ಲಿ ಜರಗಿದ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಸಂಸ್ಥಾಪಕರ ಸ್ಮರಣೀಯ ದಿನೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಆರ್ಥಿಕ ಸಂಸ್ಥೆಗಳು ಹುಟ್ಟು ಹಾಕಿ ಅದರ ಬೆಳವಣಿಗೆಗೆ ಕಾರಣೀಭೂತರಾದವರಿಗೆ ಕೃತಜ್ಞತೆ ಸಲ್ಲಿಸುವುದು ದೊಡ್ಡ ಮೌಲ್ಯವಾಗಿದೆ. ನಮ್ಮ ಹಿಂದಿನವರ…

Read More

ಬೈಂದೂರು: ಕಾಂಗ್ರೆಸ್ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಸಂಘಟಿತ ಹೋರಾಟದಿಂದಾಗಿ ಇತ್ತೀಚೆಗೆ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಸ್ಥಾನಗಳನ್ನು ಪಡೆಯುವ ಮೂಲಕ ಹೊಸ ಗಾಳಿ ಸೃಷ್ಟಿಸಿದೆ. ಮುಂಬರುವ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿಯೂ ಇನ್ನೂ ಹೆಚ್ಚಿನ ಸ್ಥಾನ ಪಡೆಯುವ ಮೂಲಕ ಕಾಂಗ್ರೆಸ್ ಪಕ್ಷದ ಗತಕಾಲದ ವೈಭವವನ್ನು ಮರುಕಳಿಸುವಂತೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ಇಲ್ಲಿನ ರೋಟರಿ ಸಭಾ ಭವನದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯ ಗಳಿಸಿದ ಪಕ್ಷದ ಅಭ್ಯರ್ಥಿ ಪ್ರತಾಪಶ್ಚಂದ್ರ ಶೆಟ್ಟಿ ಅವರ ಅಭಿನಂದನಾ ಸಭೆಯಲ್ಲಿ, ಅವರನ್ನು ಸನ್ಮಾನಿಸಿ ಮಾತನಾಡಿ ಬಡವರ ನಿರ್ಗತಿಕರ, ಕೃಷಿಕರ ಏಳಿಗೆಗಾಗಿ ನಿರಂತರವಾಗಿ ಹೋರಾಟ ಮಾಡುವ ತುಡಿತ ಹೊಂದಿರುವ ಪ್ರತಾಪಶ್ಚಂದ್ರ ಶೆಟ್ಟಿ ಅವರು ನಿರೀಕ್ಷಿತ ಮಟ್ಟಕ್ಕಿಂತ ಅಧಿಕ ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯಗಳಿಸಿದ್ದಾರೆ ಎಂದ ಅವರು ಸ್ವಾತಂತ್ರ್ಯ ಬಳಿಕ ದೇಶದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಪಕ್ಷ ೫೦ ವರ್ಷದಲ್ಲಿ ಏನು ಅಭಿವೃದ್ಧಿ ಮಾಡಿಲ್ಲ ಎಂದು ಟೀಕಿಸುತ್ತಿರುವ…

Read More

ಕುಂದಾಪುರ: ಹತ್ತು ಹಲವು ಜನಹಿತ ಕಾರ್ಯಕ್ರಮಗಳನ್ನು ಆಯೋಜಿಸಿ, ಸೇವೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ರೋಟರಿ ಕ್ಲಬ್ ಕುಂದಾಪುರದ ಕಾರ್ಯ ವೈಖರಿ ಪ್ರಶಂಸನೀಯ. ಸೇವಾಗುಣ ಮನುಷ್ಯನ ವ್ಯಕ್ತಿತ್ವವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುವ ಜೊತೆಗೆ ಜಗತ್ತಿನ ಒಳಿತಿಗೆ ಕೊಡುಗೆಗಳನ್ನು ನೀಡಿದಂತಾಗುತ್ತದೆ. ಆದುದರಿಂದ ರೋಟರಿ ಫೌಂಡೇಶನ್‌ನಿಂದ ಸಿಗುವಂತಹ ಸೌಲಭ್ಯಗಳನ್ನು ಬಳಸಿಕೊಂಡು ಇನ್ನಷ್ಟು ಉತ್ತಮ ಕಾರ್ಯಗಳನ್ನು ಮಾಡುವಂತಾಗಲಿ ಎಂದು ರೋಟರಿ 3180 ಇದರ ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭ ಕೋಟೇಶ್ವರದ ಸಹನಾ ಕನ್ವೆನ್‌ಶನ್ ಸೆಂಟರ್‌ನಲ್ಲಿ ಆಯೋಜಿಸಿದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್ ಕ್ಲಬ್‌ನ ಮುಖವಾಣಿ ಅಕಾರ್ಡ್‌ನ್ನು ಬಿಡುಗಡೆಗೊಳಿಸಿ ಮಾತನಾಡಿ ಮಾಡುವ ಕೆಲಸದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯನ್ನಿಟ್ಟುಕೊಂಡು ಸಮಾಜಕ್ಕೆ ಅನನ್ಯ ಸೇವೆ ನೀಡುವ ನಿಟ್ಟಿನಲ್ಲಿ ರೋಟರಿ ಕುಂದಾಪುರ ಮಹತ್ತರ ಪಾತ್ರ ನಿರ್ವಹಿಸಿದೆ ಎಂದು ಅಧ್ಯಕ್ಷರನ್ನು ಅಭಿನಂದಿಸಿದರು. 2018-19ನೇ ಸಾಲಿನ 3182 ಇದರ ರೋಟರಿ ಜಿಲ್ಲಾ ಗವರ್ನರ್ ಆಗಿ ಆಯ್ಕೆಯಾದ ಅಭಿನಂದನ…

Read More

ಕುಂದಾಪುರ: ಎಲ್ಲಾ ರೋಗಗಳಿಗೆ ಮೂಲ ಕಾರಣವಾಗಿರುವ ವಾತ, ಪಿತ್ತ,ಕಫ ನಿಯಂತ್ರಿಸಿಕೊಳ್ಳಬೇಕು. ಶರೀರ ಮತ್ತು ಆರೋಗ್ಯ ಸಮತೋಲನೆಗೆ ಪ್ರಕೃತಿದತ್ತ ಆಹಾರ ಸೇವಿಸುತ್ತಾ ಒಳ್ಳೆಯ ವಿಚಾರ ಮತ್ತು ಭಾವನೆಗಳನ್ನು ಮೈಗೂಡಿಸಿಕೊಂಡಾಗ ಆರೋಗ್ಯವೇ ಭಾಗ್ಯ ಎನಿಸಿಕೊಳ್ಳಲು ಸಾದ್ಯ. ಪ್ರಕೃತಿಯ ಆಸೆ ಆಮಿಷಗಳಿಗೆ ಬಲಿಯಾಗದೆ ಆಂತರಿಕ ಸೌಂದರ್ಯ ವೃದ್ಧಿಸುವ ಬುಧ್ಧಿ ಮತ್ತು ಮನಸ್ಸನ್ನು ಚೇತನಗೊಳಿಸಿದಾಗ ಉತ್ತಮ ಆರೋಗ್ಯದ ಜತೆಗೆ ನೆಮ್ಮದಿಯುಕ್ತ ಜೀವನ ನಮ್ಮದಾಗುತ್ತದೆ ಎಂದು ಆರೋಗ್ಯ ಸಲಹೆಗಾರ ಮೆಲ್ವೀನ್ ಕ್ರಾಸ್ತಾ ಹೇಳಿದರು. ಅವರು ಹೆಮ್ಮಾಡಿ ಜನತಾ ಪ.ಪೂ ಕಾಲೇಜಿನ ವಿದ್ಯಾರ್ಥಿ ವೇದಿಕೆ ಆಶ್ರಯದಲ್ಲಿ ನಡೆದ ಯೋಗ ಕ್ಷೇಮ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಸುಧಾಕರ ವಕ್ವಾಡಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಬ್ರಾಹ್ಮೀ ಮಹೂರ್ತದಲ್ಲಿ ಎದ್ದು ಯೋಗ ,ಪ್ರಾಣಾಯಾಮ, ದ್ಯಾನ ಮತ್ತು ದೈನಂದಿನ ಕಾರ್ಯದಲ್ಲಿ ಸಕ್ರೀಯರಾದಾಗ ದಿನವಿಡೀ ಉಲ್ಲಾಸ ನಮ್ಮದಾಗಿ ಸಕರಾತ್ಮಕ ಚಿಂತನೆಯೊಂದಿಗೆ ದೇಹ ಮತ್ತು ಮನಸ್ಸಿನ ಕೊಳೆಯನ್ನು ಹೋಗಲಾಡಿಸಿ ಜ್ಞಾನ ಬುದ್ಧಿ ಪ್ರಚೋದನೆಯಾಗುತ್ತದೆ ಎಂದರು. ಉಪನ್ಯಾಸಕ ಮಂಜುನಾಥ.ಕೆ.ಎಸ್ ಸ್ವಾಗತಿಸಿದರು. ಮಂಜುನಾಥ…

Read More

ಗಂಗೊಳ್ಳಿ: ಮನುಷ್ಯನ ಆರೋಗ್ಯ ಉತ್ತಮವಾಗಿದ್ದರೆ ಜೀವನದಲ್ಲಿ ಸಾಧನೆ ಮಾಡಲು, ಜೀವನದಲ್ಲಿ ಯಶಸ್ಸು ಪಡೆಯಲು ಸಾಧ್ಯವಿದೆ. ನಿರಂತರವಾಗಿ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದರ ಮೂಲಕ ಆರೋಗ್ಯ ಸಂರಕ್ಷಣೆಗೆ ಜನರು ಮುಂದಾಗಬೇಕು. ಇಂದಿನ ಯಾಂತ್ರಿಕ ಯುಗದಲ್ಲಿ ಜನರು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಚ್.ಗಣೇಶ ಕಾಮತ್ ಹೇಳಿದರು. ಕೆಎಂಸಿ ಆಸ್ಪತ್ರೆ ಮಣಿಪಾಲ ಇವರ ಸಹಯೋಗದೊಂದಿಗೆ ತಜ್ಞ ವೈದ್ಯರುಗಳ ನೇತೃತ್ವದಲ್ಲಿ ಗಂಗೊಳ್ಳಿಯ ಬಸ್ ನಿಲ್ದಾಣದ ಬಳಿಯಿರುವ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ನಡೆದ ಬೃಹತ್ ಉಚಿತ ಹೃದೋಗ ತಪಾಸಣಾ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗಂಗೊಳ್ಳಿ ರೋಟರಿ ಕ್ಲಬ್ ಅಧ್ಯಕ್ಷ ಪ್ರದೀಪ ಡಿ.ಕೆ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸರಕಾರದ ಸುವರ್ಣ ಆರೋಗ್ಯ ಟ್ರಸ್ಟ್‌ನ ಜಿಲ್ಲಾ ವ್ಯವಸ್ಥಾಪಕ ಸಚ್ಚಿದಾನಂದ ಅವರು ಸರಕಾರದಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಪ್ರಸಿದ್ಧ ಹೃದಯರೋಗ ತಜ್ಞ ಡಾ.ನವೀನಚಂದ್ರ ಆರೋಗ್ಯದ ಬಗ್ಗೆ…

Read More

ಮನುಷ್ಯ ಜ್ಯೋತಿಯ ಕುಡಿಯಾಗಬೇಕು. ಕಿಡಿಯಾಗಬಾರದು: ಕೋ. ಶಿವಾನಂದ ಕಾರಂತ ಬೈಂದೂರು: ಕಲೆ, ನೃತ್ಯ, ಸಾಹಿತ್ಯ ಮನುಷ್ಯ ಮನುಷ್ಯನನ್ನು ಪರಸ್ಪರ ಪ್ರೀತಿಸುವುದಕ್ಕಾಗಿ ಇರುವ ಮಾಧ್ಯಮ. ಅದು ಮನೋರಂಜನೆಯನ್ನು ನೀಡುವುದಷ್ಟೇ ಅಲ್ಲದೇ ಮಾನವರ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ, ಸಾಮರಸ್ಯವನ್ನು ಬಿತ್ತುವ ಕೆಲಸ ಮಾಡುತ್ತದೆ ಎಂದು ನಿವೃತ್ತ ಉಪನ್ಯಾಸಕ ಕೋ. ಶಿವಾನಂದ ಕಾರಂತ ಹೇಳಿದರು. ಇಲ್ಲಿನ ಶಾರದಾ ವೇದಿಕೆಯಲ್ಲಿ ಸುರಭಿ ರಿ. ಬೈಂದೂರು ಇದರ 16ನೇ ವರ್ಷದ ಸಂಭ್ರಮ ’ಸುರಭಿ ಜೈಸಿರಿ’ ಉದ್ಘಾಟಿಸಿ ಮಾತನಾಡಿ ದೇಶದಲ್ಲಿ ಇಂದು ಎಲ್ಲೆಂದರಲ್ಲಿ ಮುಗ್ದರ ಮಾರಣಹೋಮ, ಕೌರ್ಯಗಳು ಎಗ್ಗಿಲ್ಲದೇ ನಡೆಯುತ್ತಿದೆ. ಇದು ವೈವಿಧ್ಯಮಯ ಸಂಸ್ಕೃತಿಯ ಭಾರತದ ಏಕತೆಗೆ ಅಡ್ಡಿಯಾಗುತ್ತಿದೆ. ಮನುಷ್ಯರು ಪರಸ್ಪರ ಪ್ರಜ್ವಲಿಸುವ ಜ್ಯೋತಿಯ ಕುಡಿಗಳಾಗಬೇಕೇ ಹೊರತು ಕಿಡಿಯಾಗಬಾರದು ಎಂದರು. ಸಿನಿಯರ್ ಸಿಟಿಜನ್ ಅಸೋಸಿಯೇಶನ್ ಅಧ್ಯಕ್ಷ ವಸಂತ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಸೇನೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ಚನ್ನಕೇಶವ ಉಪಾಧ್ಯಾಯ, ಸುರಭಿಯ ನಿರ್ದೇಶಕ ಕೃಷ್ಣಮೂರ್ತಿ ಉಡುಪ ಉಪಸ್ಥಿತರಿದ್ದರು. ಯುವ ಚಿತ್ರಕಲಾವಿದ ಗಿರೀಶ್ ಗಾಣಿಗ ತಗ್ಗರ್ಸೆ ಅವರನ್ನು ಸನ್ಮಾನಿಸಲಾಯಿತು. sಸಂಗೀತ…

Read More