ಕುಂದಾಪುರ: ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಶ್ರಯದಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯಿತು. ಕಾವ್ರಾಡಿ ಗ್ರಾಪಂ ಅಧ್ಯಕ್ಷೆ ಗೌರಿ ಆರ್. ಅಮೀನ್ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡಿದರು. ಸ್ಥಳೀಯ ರೋಟರಿ ಅಧ್ಯಕ್ಷ ಸಂತೋಷ್‌ಕುಮಾರ್ ಶೆಟ್ಟಿ, ಕಾರ್ಯದರ್ಶಿ ಕಾಳಿಂಗ ಶೆಟ್ಟಿ ಹಾಗೂ ಸದಸ್ಯರು, ಇಲಾಖೆಯ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ವೈದ್ಯಾಧಿಕಾರಿ ಡಾ. ಲತಾ ನಾಯಕ್ ಪ್ರಾಸ್ತಾವಿಸಿ ವಂದಿಸಿದರು.
Author: ನ್ಯೂಸ್ ಬ್ಯೂರೋ
ಬೈಂದೂರು: ಇಲ್ಲಿನ ಹೋಲಿಕ್ರಾಸ್ ಚರ್ಚಿಗೆ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಭೇಟಿ ನೀಡಿ ಚರ್ಚ್ ಸಿಮಿಟ್ರಿ ದ್ವಾರ ಹಾಗೂ ಹಾಗೂ ಏಸುವಿನ ಗುಡಿಯನ್ನು ಲೋಕಾರ್ಪಣೆಗೊಳಿಸಿದರು. ಸಾಮೂಹಿಕ ಪ್ರಾರ್ಥನೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಪ್ರತಿ ಧರ್ಮದ ಜನರಲ್ಲೂ ಬಡವರ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡುವ ಗುಣ ಬೆಳೆದಾಗ ಮಾನವೀಯ ಮೌಲ್ಯಗಳಿಗೆ ಅರ್ಥ ಬರುತ್ತದೆ ಎಂದರು. ಚರ್ಚಿನ ರರ್ಸೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಓದಗಿಸುತ್ತಿರುವ ಬೈಂದೂರು ಶಾಸಕ ಗೋಪಾಲ ಪೂಜಾರಿ ಹಾಗೂ ತಾಲೂಕು ಪಂಚಾಯತ್ ಸದದ್ಯ ರಾಜು ಪೂಜಾರಿ ಅವರನ್ನು ಚರ್ಚಿನ ವತಿಯಿಂದ ಸನ್ಮಾನಿಸಲಾಯಿತು. ಬೈಂದೂರು ಧರ್ಮಪ್ರಾಂತದ ಧರ್ಮಗುರು ರೋನಾಲ್ಡ್ ಮಿರಾಂದ, ಕ್ಯಾಥೋಲಿಕ್ ಸಭಾದ ಅಧ್ಯಕ್ಷ ಡೆನಿಯಲ್ ನಜ್ರತ್, ಯಡ್ತರೆ ಗ್ರಾ.ಪಂ ಸದಸ್ಯ ಮಾರ್ಟಿನ್ ಎವರೆಸ್ಟ್ ಡಯಾಸ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ: ಭಾರತೀಯ ಜೀವ ವಿಮಾ ನಿಗಮ ಕುಂದಾಪುರ ಶಾಖೆಯ ವಿಮಾ ಸಲಹೆಗಾರರಾದ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು 2015ರಲ್ಲಿ ಉತ್ತಮ ಜೀವ ವಿಮೆ ವ್ಯವಹಾರವನ್ನು ನಡೆಸಿ ಎಂಡಿಅರ್‌ಟಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಕೋಣಿಯ ಮಾತಾ ಮಾಂಟೆಸ್ಸೋರಿ ಮಕ್ಕಳ ಶಾಲೆಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರು ಕೆನಡಾದಲ್ಲಿ ನಡೆಯಲಿರುವ ಮಿಲಿಯನ್ ಡಾಲರ್ ರೌಂಡ್ ಟೇಬಲ್ ಜಾಗತಿಕ ಸಮಾವೇಶದಲ್ಲಿ ಭಾಗವಹಿಸಲಿದ್ದು, ಪ್ರೀಮಿಯಂ ಆಧಾರದಲ್ಲಿ ಇವರು ಅರ್ಹತೆಯನ್ನು ಪಡೆದಿದ್ದಾರೆ. ಕುಂದಾಪುರದ ಹಿರಿಯ ಜೀವವಿಮಾ ಅಭಿವೃದ್ಧಿ ಅಧಿಕಾರಿ ಕೆ. ಕರುಣಾಕರ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಸಾಧನೆ ಮಾಡಿದ್ದಾರೆ. ಅಸಿಸ್ಟೆಂಟ್ ಮೆನೇಜರ್ ಗುರುರಾಜ್ ಎಂ. ಎ, ಶಾಖೆಯ ಸರ್ವ ಸಿಬ್ಬಂದಿ ವರ್ಗದವರು ಸಹಕರಿಸಿದ್ದಾರೆ ಎಂದು ಕುಂದಾಪುರ ಶಾಖೆ ಹಿರಿಯ ಶಾಖಾಧಿಕಾರಿ ಪ್ರೇಮನಾಥ ರಾವ್ ತಿಳಿಸಿದ್ದಾರೆ.
ಗಂಗೊಳ್ಳಿ: ನಮ್ಮ ಜೀವನಾವಧಿಯಲ್ಲಿ ದೇವರಿಗೆ ಹತ್ತಿರವಾದ ಮಾಡಿದ ಕೆಲಸ ಕಾರ್ಯಗಳು ಶಾಶ್ವತವಾಗುತ್ತದೆ. ಬಡತನ, ಮೂಡನಂಬಿಕೆ, ಅಜ್ಞಾನ ದೂರವಾಗಬೇಕಾದರೆ ವಿದ್ಯಾಭ್ಯಾಸ ಅತಿ ಮುಖ್ಯ. ಸಮಾಜದಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸಲು ಭಕ್ತಿಯಿಂದ ಪ್ರೀತಿಯಿಂದ ಪ್ರಾರ್ಥನೆ ಮಾಡುವ ಪ್ರಾರ್ಥನಾ ಮಂದಿರಗಳ ಬಗ್ಗೆ ಹೆಚ್ಚಿನ ಕಾಳಜಿ ಆಸಕ್ತಿ ವಹಿಸಬೇಕು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. ಅವರು ಜರಗಿದ ಗಂಗೊಳ್ಳಿಯ ಇಮಾಕ್ಯುಲೇಟ್ ಕನ್‌ಸೆಪ್ಸನ್ ಚರ್ಚಿನ ನವೀಕರಣ ಹಾಗೂ ಪುನರ್ ನಿರ್ಮಾಣದ ಶಿಲಾನ್ಯಾಸ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸುಮಾರು 385 ವರ್ಷಗಳ ಇತಿಹಾಸ ಹೊಂದಿರುವ ಪೋರ್ಚುಗೀಸರ ಕಾಲದಲ್ಲಿ ನಿರ್ಮಾಣಗೊಂಡಿರುವ ಇತಿಹಾಸ ಪವಿತ್ರವಾದ ಗಂಗೊಳ್ಳಿಯ ಇಮಾಕ್ಯುಲೇಟ್ ಕನ್‌ಸೆಪ್ಸನ್ ಚರ್ಚಿನ ನವೀಕರಣ ಹಾಗೂ ಪುನರ್ ನಿರ್ಮಾಣ ಕಾರ್ಯದಲ್ಲಿ ರಾಜ್ಯ ಸರಕಾರ ಸಹಭಾಗಿತ್ವ ನೀಡಲಿದ್ದು, ಸರಕಾರದಿಂದ ದೊರೆಯುವ ಅನುದಾನವನ್ನು ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ಇಂತಹ ಪುರಾತನ ಪವಿತ್ರವಾದ ಪ್ರಾರ್ಥನಾ ಮಂದಿರಗಳ ನವೀಕರಣ ಅಭಿವೃದ್ಧಿಯಲ್ಲಿ ರಾಜ್ಯ ಸರಕಾರದ ಕೈಜೋಡಿಸಲಿದೆ ಎಂದು ಅವರು ಹೇಳಿದರು. ಗಂಗೊಳ್ಳಿಯ ಇಮಾಕ್ಯುಲೇಟ್…
ಕುಂದಾಪುರ: ರೋಟರಿ 3180 ಇದರ ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಅವರು ರೋಟರಿ ಕ್ಲಬ್ ಕುಂದಾಪುರಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭ ಹಟ್ಟಿಯಂಗಡಿಯ ಅತಿಶಯ ಜೈನಕ್ಷೇತ್ರ ಶ್ರೀ ಚಂದ್ರನಾಥ ಸ್ವಾಮಿ ಜೈನ ಮಂದಿರ ಹಾಗೂ ಶ್ರೀ ಜಟ್ಟಿಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಕ್ಷೇತ್ರಕ್ಕೆ ಆಗಮಿಸಿದ ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್, ರೋಟರಿ ಜಿಲ್ಲಾ ಪ್ರಥಮ ಮಹಿಳೆ ಜಯಶ್ರೀ ಭರತೇಶ್ ಅಧಿರಾಜ್, ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರನ್ನು ದೇವಳದ ಆಡಳಿತ ಮೋಕ್ತೆಸರರಾದ ಚಂದ್ರ ರಾಜೇಂದ್ರ ಅರಸರು ಕ್ಷೇತ್ರದ ವತಿಯಿಂದ ಸನ್ಮಾನಿಸಿದರು. ಈ ಸಂದರ್ಭದಲ್ಲಿ ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ರೋಟರಿ ಸದಸ್ಯರಾದ ಆವರ್ಸೆ ಮುತ್ತಯ್ಯ ಶೆಟ್ಟಿ, ಡಾ. ಛಾಯಾ ವಿ. ಹೆಬ್ಬಾರ್, ಎಚ್. ಎಸ್. ಹತ್ವಾರ್, ಕಾರ್ಯದರ್ಶಿ ಸಂತೋಷ ಕೋಣಿ ಇನ್ನಿತರರು ಉಪಸ್ಥಿತರಿದ್ದರು.
ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾರ್ವಿಕೇರಿ ಪರಿಸರದಲ್ಲಿ ಹಿಂದೂ ರುದ್ರಭೂಮಿ ನಿರ್ಮಾಣ ಮಾಡಲು 20 ಸೆಂಟ್ಸ್ ಸರಕಾರಿ ಜಾಗವನ್ನು ಮೀಸಲಿರಿಸಲಾಗಿದ್ದು, ಸುಸಜ್ಜಿತ ಹಿಂದು ರುದ್ರಭೂಮಿ ನಿರ್ಮಾಣಕ್ಕೆ ಸರಕಾರ ಹಾಗೂ ಇತರ ಅನುದಾನಗಳಿಂದ ಸುಮಾರು 16 ಲಕ್ಷ ರೂ.ಗಳನ್ನು ನೀಡಲು ಕ್ರಮಕೈಗೊಳ್ಳಲಾಗಿದೆ ಎಂದು ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಇತ್ತೀಚಿಗೆ ಗಂಗೊಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಖಾರ್ವಿಕೇರಿ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಹಿಂದು ರುದ್ರ ಭೂಮಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಜಿಪಂ ಮಾಜಿ ಉಪಾಧ್ಯಕ್ಷ ರಾಜು ದೇವಾಡಿಗ, ಗ್ರಾಪಂ ಸದಸ್ಯರಾದ ಸುರೇಖಾ ಕಾನೋಜಿ, ಸುರೇಂದ್ರ ಖಾರ್ವಿ, ಮಾಜಿ ಗ್ರಾಪಂ ಸದಸ್ಯ ದುರ್ಗರಾಜ್ ಪೂಜಾರಿ, ಹಿಂದು ರುದ್ರ ಭೂಮಿ ನಿರ್ಮಾಣ ಸಮಿತಿ ಅಧ್ಯಕ್ಷ ರವಿಶಂಕರ ಖಾರ್ವಿ, ವೈ.ಅಣ್ಣಪ್ಪ ಖಾರ್ವಿ, ಸಂತೋಷ ಖಾರ್ವಿ, ರಾಮದಾಸ ಖಾರ್ವಿ, ಪರಮೇಶ್ವರ ಕೋಟಾನ್, ಶ್ರೀನಿವಾಸ ಕೋಟಾನ್, ಖಾರ್ವಿಕೇರಿ ಯುತ್ ಕ್ಲಬ್‌ನ ಮತ್ತು ಕೆ.ಕೆ.ಬಾಯ್ಸ್ ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಬೈಂದೂರು: ಇಲ್ಲಿನ ಬಹುಪ್ರಸಿದ್ಧ ಪುರಾತನ ಕಾರಣಿಕ ಕ್ಷೇತ್ರ ತಗ್ಗರ್ಸೆ ದೊಡ್ಡ ಮೊಗವೀರ ಗರಡಿ ಶ್ರೀ ಜೈನ ಜಟ್ಟಿಗೇಶ್ವರ ದೈವಸ್ಥಾನದಲ್ಲಿ ಜನವರಿ 16ರಿಂದ 20ರ ವರೆಗೆ ಶ್ರೀ ಜೈನ ಜಟ್ಟಿಗೇಶ್ವರ ಮತ್ತು ಸಪರಿವಾರ ದೈವ ಹಾಗೂ ನಾಗದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವ, ವಾರ್ಷಿಕ ಗೆಂಡಸೇವೆ, ಹಾಲುಹಬ್ಬ ವಿಜೃಂಭಣೆಯಿಂದ ಜರುಗಲಿದೆ. ದೊಡ್ಡಮೊಗವೀರ ಗರಡಿಯಲ್ಲಿ ಶ್ರೀ ಜೈನಜಟ್ಟಿಗೇಶ್ವರ ಹಾಗೂ ನಲವತ್ತೆಂಟು ಸಪರಿವಾರ ದೈವಗಳಿವೆ. ಅನಾದಿ ಕಾಲದಿಂದಲೂ ಪೂಜಿಸುತ್ತಾ ಬಂದಿರುವ ಈ ದೈವಸ್ಥಾನದ ಬಗ್ಗೆ ಭಕ್ತರಲ್ಲಿಯೂ ಅಪಾರವಾದ ನಂಬಿಕೆ ಬೇರೂರಿದೆ. ಎಂತಹ ಸಂಕಷ್ಟದ ಪರಿಸ್ಥಿತಿಯಲ್ಲಿಯೂ ತಾನು ನಂಬಿದ ದೈವವನ್ನು ಸ್ಮರಿಸಿದರೇ ಕಷ್ಟ ದೂರವಾಗುವುದು ಎಂಬುದು ಹಲವಾರು ನಿದರ್ಶನಗಳ ಮೂಲಕವೂ ಸಾಬೀತಾಗಿದೆ. ಹಾಗಾಗಿಯೇ ವರ್ಷಕ್ಕೊಮ್ಮೆಯಾದರೂ ಎಲ್ಲಿಯೇ ಇರಲಿ ಮೊಗವೀರ ಗರಡಿಗೆ ಬಂದು ದೇವರಿಗೆ ಹರಕೆ, ಪೂಜೆ ಸಲ್ಲಿಸಿ ತೆರಳುತ್ತಾರೆ. ತಗ್ಗರ್ಸೆ, ಬೈಂದೂರು ಭಾಗದ ಭಕ್ತರಷ್ಟೇ ಅಲ್ಲದೇ ಉಡುಪಿ, ಶಿವಮೊಗ್ಗ, ಉತ್ತರಕನ್ನಡ ಜಿಲ್ಲೆಯ ಜನರು, ಬೆಂಗಳೂರು, ಮುಂಬೈಗಳಲ್ಲಿ ನೆಲೆಸಿರುವವರು ತಾವು ನಂಬಿದ ದೇವರನ್ನು ಕಾಣಲು ಹಬ್ಬದ ದಿನ ಬಂದು, ಹರಕೆ, ಪೂಜೆ…
ಕುಂದಾಪುರ: ಕೊಡಿಯ ಕಡಲ ಕಿನಾರೆಯಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಪ್ರಥಮ ಪರಿಸರ ಸ್ನೇಹಿ, ಶೂನ್ಯ ವಿದ್ಯುತ್ ಹಸಿರು ಮಸೀದಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬದ್ರಿಯಾ ಜುಮಾ ಮಸೀದಿಯನ್ನು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್‌ನ ಅಧ್ಯಕ್ಷರಾದ ಹಝರತ್ ಮೌಲಾನಾ ಸೈಯ್ಯದ್ ಮುಹಮ್ಮದ್ ರಬೇ ಹಸನಿ ನದ್ವಿ ಶುಕ್ರವಾರ ಉದ್ಘಾಟಿಸಿ, ದುವಾ ನೆರವೇರಿಸಿದರು. ಬೆಂಗಳೂರು ಸಬೀಲುರ್ ರಶಾದ್‌ನ ಪ್ರಾಂಶುಪಾಲರಾದ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಬೊಕಾವಿ ಮಾತನಾಡಿ ಮಸೀದಿ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸುವ ಕೇಂದ್ರ ಆಗಬೇಕು. ಮಸೀದಿ ನಿರ್ಜನವಾಗಿರದೆ ಸದಾ ಸಕ್ರೀಯವಾಗಿರುವಂತೆ ಮಾಡಬೇಕು ಎಂದರು. ರಾಜ್ಯ ಆರೋಗ್ಯ ಸಚಿವ ಯು.ಟಿ.ಖಾದರ್, ಮಸೀದಿ ಖತೀಬ್ ಇಸ್ಮಾಯಿಲ್ ಝುಹರಿ ಶುಭಾ ಹಾರೈಸಿದರು. ಈ ಸಂದರ್ಭದಲ್ಲಿ ಮಸೀದಿ ಕಟ್ಟಡದ ಆರ್ಕಿಟೆಕ್ಚರ್ ಸಂದೀಪ್ ಸಹಿತ ಮಸೀದಿ ನಿರ್ಮಾಣ ಕಾರ್ಯದಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲೆಯ ಕಾಝಿ ಬೇಕಲ್ ಇಬ್ರಾಹಿಂ ಮುಸ್ಲಿಯಾರ್, ಮಾಜಿ ಖತೀಬ್ ಇಸ್ಮಾಯಿಲ್ ಮುಸ್ಲಿಯಾರ್ ಬ್ಯಾರೀಸ್ ಗ್ರೂಪ್‌ನ ಅಧ್ಯಕ್ಷ ಹಾಜಿ ಮಾಸ್ಟರ್ ಮೊಹಮ್ಮದ್, ಬ್ಯಾರೀಸ್ ಗ್ರೂಫ್ ಚೇರ್‌ಮನ್…
ಗಂಗೊಳ್ಳಿ: ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ 2015-16ನೇ ಸಾಲಿನ ದ್ವಿತೀಯ ಹಂತದ ಸಾಮಾಜಿಕ ಪರಿಶೋಧನೆಯ ವಿಶೇಷ ಗ್ರಾಮ ಸಭೆ ಮಂಗಳವಾರ ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಉಡುಪಿ ಜಿಲ್ಲಾ ಪಂಚಾಯತ್‌ನ ಬೈಂದೂರು ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಲಕ್ಷ್ಮೀನಾರಾಯಣ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ವರ್ಷದಲ್ಲಿ ಕನಿಷ್ಠ 100 ದಿನ ಉದ್ಯೋಗ ನೀಡುವ ದೃಷ್ಟಿಯಿಂದ ಆರಂಭಿಸಲಾಗಿರುವ ಈ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದೆ. ಆನರು ಈ ಯೋಜನೆಯಡಿ ಹೆಸರನ್ನು ನೊಂದಾಯಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಪೂರಕವಾದ ಯೋಜನೆಯ ಮಾರ್ಗಸೂಚಿಯಂತೆ ಕಾಮಗಾರಿಯನ್ನು ನಿರ್ವಹಿಸಬಹುದು. ಈ ಯೋಜನೆಗೆ ಯಾವುದೇ ಹಣಕಾಸಿನ ಕೊರತೆ ಇಲ್ಲ ಎಂದರು. ಕಳೆದ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಗ್ರಾಮಸಭೆಯ ನಡಾವಳಿಯಲ್ಲಿ ಕೆಲವೊಂದು ನಿರ್ಣಯಗಳನ್ನು ಬರೆದಿಲ್ಲ ಮತ್ತು ಕಳೆದ ಸಭೆಯಲ್ಲಿ ಗ್ರಾಮ ಪಂಚಾಯತ್ ಹಾಗೂ ಗ್ರಾಪಂ ಸದಸ್ಯರನ್ನು ಅವಹೇಳನ…
ಬೈಂದೂರು: ಕಲಿಯುಗದ ಪ್ರತ್ಯಕ್ಷ ದೇವರಾಗಿರುವ ನಾಗನ ಆರಾಧನೆ ಶ್ರೇಷ್ಠವಾಗಿದ್ದು, ವಿಶಿಷ್ಠ ಪೂಜಾ ಕೈಂಕರ್ಯಗಳನ್ನು ಮೂಲಕ ಆರಾಧನೆ ಮಾಡಲಾಗುವುದು. ಲೋಕ ಕಲ್ಯಾಣಾರ್ಥವಾಗಿ ಮಾಡುವ ನಾಗಮಂಡಲೋತ್ಸವವನ್ನು ಗ್ರಾಮದ ಎಲ್ಲಾ ಜನರು ಸಂಘಟಿತರಾಗಿ, ಸಧ್ಭಕ್ತಿಯಿಂದ ಆಚರಿಸಿದಾಗ ಸಾರ್ಥಕತೆ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಅಭಿಲಾಷ ಸೋಮಯಾಜಿ ಹೇಳಿದರು. ಇಲ್ಲಿನ ವತ್ತಿನಕಟ್ಟೆ ಶ್ರೀ ಮಹಾಸತಿ ಅಮ್ಮನವರ ಸನ್ನಿಧಾನದಲ್ಲಿ ಫೆ. 9ರಿಂದ 13 ರ ತನಕ ನಡೆಯುವ ಸಾರ್ವಜನಿಕ ಲಕ್ಷಮೋದಕ ಗಣಪತಿಯಾಗ ಹಾಗೂ ಚತುಃ ಪವಿತ್ರ ನಾಗಮಂಡಲೋತ್ಸವದ ಅಂಗವಾಗಿ ಗುರುವಾರ ಚಪ್ಪರ ಮುಹೂರ್ತ ನೆರವೇರಿಸಿ ಅವರು ಮಾತನಾಡಿದರು.ನಾಗನನ್ನು ಭೂಮಿಯ ಅಧಿಪತಿ ಎಂದು ನಾವು ವೈಜ್ಞಾನಿಕವಾಗಿ ಹಾಗೂ ಪೌರಾಣಿಕವಾಗಿಯೂ ಹೇಳಲಾಗುತ್ತಿದೆ, ಆದಿಶೇಷ ಎಂದರೆ ನಾಗನು ಈ ಭೂಮಿಯನ್ನು ಹೊತ್ತುಕೊಂಡಿದ್ದಾನೆ ಎಂದು ಹೇಳಲಾಗಿದ್ದರೇ, ವಿಜ್ಞಾನಿ ಡಾರ್ವಿನ್ ಎನ್ನುವವರು ಸರಿಸ್ರಪಗಳು ಈ ಭೂಮಿಯಲ್ಲಿ ಮೊದಲ ಹುಟ್ಟಿದ ಜೀವಿ ಎಂದು ತನ್ನ ಸಿದ್ದಾಂತದಲ್ಲಿ ತಿಳಿಸಿದ್ದಾನೆ, ಹೀಗೆ ನಾಗನನ್ನು ಭೂಮಿಯ ಅಧಿಪತಿ ಎಂದು ಹೇಳಲಾಗುತ್ತಿದೆ. ನಾಗನ ಆರಾಧನೆಯನ್ನು ಸಂಘಟಿತರಾಗಿ, ಭಕ್ತಿಯಿಂದ ಆರಾಧನೆ ಮಾಡುವುದರಿಂದ ಇಡೀ ಊರಿಗೆ ವಿಶೇಷ…
