Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಮೀನುಗಾರಿಕೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಬಂದರುಗಳ ಅಭಿವೃದ್ಧಿಗೆ ಸರಕಾರ ವಿಶೇಷ ಒತ್ತು ನೀಡಲಿದೆ. ಆ ನಿಟ್ಟಿನಲ್ಲಿ ಕರಾವಳಿಯ ಬಂದರುಗಳ ಸ್ಥಿತಿ-ಗತಿಯ ಕುರಿತು ಅವಲೋಕನ ನಡೆಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಮತ್ತು ಬಂದರು, ಒಳನಾಡು ಸಚಿವ ಡಾ| ಎಚ್‌.ಸಿ. ಮಹದೇವಪ್ಪ ತಿಳಿಸಿದರು. ಅವರು ಮಂಗಳವಾರ ಬಂದರುಗಳ ವೀಕ್ಷಣೆಯ ಸಲುವಾಗಿ ಹಂಗಾರಕಟ್ಟೆ ಮೀನುಗಾರಿಕೆ ಜೆಟ್ಟಿಗೆ ಆಗಮಿಸಿದ ಸಂದರ್ಭ ಪತ್ರಕರ್ತರೊಂದಿಗೆ ಮಾತನಾಡಿದರು. ಬಂದರುಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಹಾಗೂ ಜೆಟ್ಟಿ ವಿಸ್ತರಣೆ ಮುಂತಾದ ಪ್ರಮುಖ ಕಾಮಗಾರಿಗಳಿಗೆ ಒತ್ತು ನೀಡಲಿದ್ದು, ಹಂಗಾರಕಟ್ಟೆಯಲ್ಲಿ ತಡೆಗೋಡೆ ನಿರ್ಮಾಣ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ಅಧಿಕಾರಿಗಳ ಜತೆ ಚರ್ಚೆ ನಡೆಸಿ ತಡೆಗೋಡೆ ನಿರ್ಮಾಣಕ್ಕೆ ಸರ್ವೇ ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಆದಷ್ಟು ಶೀಘ್ರ ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ ಮತ್ತು ಇಲ್ಲಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ನೀಡಲಾಗುವುದು ಎಂದರು. ಈ ಸಂದರ್ಭ ಕೋಡಿಬೆಂಗ್ರೆಯ ಮೀನುಗಾರಿಕೆ ಜೆಟ್ಟಿ ವಿಸ್ತರಣೆ ಹಾಗೂ ಅಭಿವೃದ್ಧಿಯ ಕುರಿತು ಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಜೇಸಿಐ ಶಿರೂರು, ಜೇಸಿರೆಟ್‌ ವಿಭಾಗ, ದುರ್ಗಾಂಬಿಕಾ ನವೋದಯ ಸಂಘ ಇದರ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಸಾಧಕ ಮಹಿಳೆಯರಿಗೆ ಪಂಚರತ್ನ ಪುರಸ್ಕಾರ ಕಾರ್ಯ ಕ್ರಮ ದುರ್ಗಾಂಬಿಕಾ ಸಭಾಭವನ ಕರಿಕಟ್ಟೆ ಯಲ್ಲಿ ನಡೆಯಿತು. ಶಿರೂರು ಜೇಸಿ ಜೇಸಿರೆಟ್‌ ಅಧ್ಯಕ್ಷ ಗಂಗಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರಾಷ್ಟ್ರೀಯ ಸಂಯೋ ಜಕಿ ಜೇಸಿರೆಟ್‌ ವಿಭಾಗದ ರೂಪಶ್ರೀ ರತ್ನಾಕರ ಇಂದ್ರಾಳಿ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಸರಿಸಮನಾಗಿ ಕುಟುಂಬ ನಿರ್ವಹಣೆ ಮಾಡುತ್ತಿರುವುದು ಶ್ಲಾಘನೀಯ.ಮಹಿಳೆಯರಿಗೆ ಸೂಕ್ತ ಅವಕಾಶ ದೊರೆ ತಾಗ ಪ್ರತಿಭೆ ಹೊರಹೊಮ್ಮುತ್ತದೆ. ಕುಟುಂಬ ಹಾಗೂ ಸಮಾಜ ನಿರ್ವ ಹಣೆಯಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿದೆ ಎಂದರು. ವೇದಿಕೆಯಲ್ಲಿ ದುರ್ಗಾಂಬಿಕಾ ದೇವಸ್ಥಾನ ಸೇವಾ ಸಂಘ ಕೋಟೆಮನೆ ಅಧ್ಯಕ್ಷ ಕೆ.ಎನ್‌. ಆಚಾರ್‌, ಶಿರೂರು ಜೇಸಿಐ ಅಧ್ಯಕ್ಷರು, ಪುಷ್ಪಾ ಆರ್‌. ಮೇಸ್ತ ಅರಮನೆಹಕ್ಲು ಶಿರೂರು, ಭಟ್ಕಳ ಸಿಟಿ ಜೇಸಿ ಅಧ್ಯಕ್ಷ ನಾಗರಾಜ್‌ ಶೇಟ್‌, ಕಾರ್ಯದರ್ಶಿ ಪಾಂಡುರಂಗ ಅಳ್ವೆಗದ್ದೆ, ಜೂನಿಯರ್‌ ಜೇಸಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಫುರ : ವಿದ್ಯಾರ್ಥಿಗಳ ಆಸಕ್ತಿ ಮತ್ತು ವಿದ್ಯೆಗೆ ಪೂರಕವಾಗಿ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳಲು ಎಲ್ಲಾ ಅವಕಾಶಗಳನ್ನು ಭಂಡಾರ್ಕಾರ್ಸ್ ಕಾಲೇಜು ಒದಗಿಸಿಕೊಡುತ್ತಾ ಬರುತ್ತಿದೆ ಎಂದು ಮಣಿಪಾಲ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಹೆಚ್ ವಿನೋದ ಭಟ್ ಹೇಳಿದರು. ಅವರು ಇಲ್ಲಿನ ಭಂಡಾರ್ಕಾರ್ಸ್‌ಕಾಲೇಜಿನ ವಾರ್ಷಿಕೋತ್ಸವ ಸಂಭ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಭಂಡಾರ್ಕಾರ್ಸ್ ಕಾಲೇಜುಅತ್ತ್ಯುತ್ತಮ ಸಂಸ್ಥೆಯಾಗಿದೆ. ಇಲ್ಲಿನಸಕಲ ಸೌಲಭ್ಯಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಅನುಕೂಲಕರವಾಗಿದೆ. ಈ ಪರಿಸರ ಸ್ನೇಹಿ ಸಂಸ್ಥೆಯು ವಿವಿಧ ಪಠ್ಯೇತರತರಬೇತಿ, ಮೌಲ್ಯಯುತಶಿಕ್ಷಣವನ್ನು ನೀಡಿ ವಿದ್ಯಾರ್ಥಿಗಳನ್ನು ಸಮಾಜದಒಬ್ಬಜವಾಬ್ದಾರಿಯುತ ವ್ಯಕ್ತಿಯನ್ನಾಗಿ ನಿರ್ಮಿಸುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೇ ಈ ಕಾಲೇಜಿನ ಬೆಳವಣಿಗೆಯ ಹಿನ್ನೆಲೆಯನ್ನು ಗಮನಿಸಿದಾಗ ಕಾಲೇಜಿನ ಆಡಳಿತ ಮಂಡಳಿ, ಪಾಲಕರು, ವಿದ್ಯಾರ್ಥಿಗಳು ಮತ್ತು ಸಮಾಜದ ಎಷ್ಟೋ ಜನರ ಪರಿಶ್ರಮ, ಬೆಂಬಲದೊಂದಿಗೆದೊಡ್ಡ ಸಂಸ್ಥೆಯಾಗಿ ಹೆಸರುವಾಸಿಯಾಗಿದೆ ಎಂದುಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ವಿಶ್ವಸ್ಥ ಮಂಡಳಿಯ ಅಧ್ಯಕ್ಷರಾದ ಶಾಂತಾರಾಮ ಎ. ಭಂಡಾರ್ಕಾರ್ ಮಾತನಾಡಿಸಂಸ್ಥೆಯು ವಿವಿಧ ಸೌಲಭ್ಯUಳನ್ನು ಹೊಂದಿದೆ. ಜೊತೆಗೆ ವಿದ್ಯಾರ್ಥಿಗಳು ಸಾಧನೆಯನ್ನು ಗಮನಿಸಿದಾಗ ಸಂಸ್ಥೆಯು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಜಿಲ್ಲಾ ಸ್ವಾತಂತ್ರ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಾಚೀನ ವಸ್ತು ಸಂಗ್ರಹಕಾರ, ಚುಟುಕು ಸಾಹಿತಿ ಗಂಗೊಳ್ಳಿಯ ಜಿ.ಬಿ. ಕಲೈಕಾರ್ ಅವರು ಮುಂದಿನ ಪೀಳಿಗೆಗಾಗಿ ಗಂಗೊಳ್ಳಿಯ ಶ್ರೀ ಕಲೈಕಾರ್ ಮಠದ ಬಳಿಯಲ್ಲಿ ಸುಮಾರು ೧೬ ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ’ಕಲೈಕಾರ್ ವಸ್ತು ಪ್ರದರ್ಶನ ಭವನ’ದ ಕಾಮಗಾರಿ ಭರದಿಂದ ಸಾಗುತ್ತಿದೆ. ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್‌ನ ಕುಂದಾಪುರ ಘಟಕದ ಅಧ್ಯಕ್ಷರಾಗಿರುವ ಜಿ.ಬಿ.ಕಲೈಕಾರ್ ಅವರು ರಚಿಸಿದ ವ್ಯಂಗ್ಯ ಚಿತ್ರಗಳು, ಚುಟುಕು ಸಾಹಿತ್ಯಗಳು ಹಾಗೂ ಇವರು ಸೆರೆ ಹಿಡಿದ ಛಾಯಾಚಿತ್ರಗಳು ವಿವಿಧ ಪ್ರಮುಖ ದಿನಪತ್ರಿಕೆಗಳಲ್ಲಿ, ವಾರ ಪತ್ರಿಕೆ ಹಾಗೂ ಮಾಸಿಕ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ದೇಶ ವಿದೇಶಗಳ ಅಂಚೆ ಚೀಟಿಗಳು, ಪುರಾತನವಾದ ಛಾಯಾಚಿತ್ರಗಳು, ಕಂಚಿನ ಕಲಾತ್ಮಕ ಪಾತ್ರೆಗಳು, ಹಳೆಯ ದಿನಪತ್ರಿಕೆಗಳು, ದೇಶ ವಿದೇಶಗಳ ಪ್ರಾಚೀನವಾದ ಹಳೆ ನಾಣ್ಯಗಳು, ನೋಟುಗಳು, ಹಳೆಯ ಗಡಿಯಾರಗಳು, ಗ್ರಾಮ್‌ಫೋನ್ (ಎಚ್.ಎಂ.ವಿ.), ಕಲಾತ್ಮಕವಾದ ಮದ್ಯ ತುಂಬಿದ ಬಾಟಲಿಗಳು, ಪಂಚಲೋಹದ ವಿಗ್ರಹಗಳು, ಹಳೆಯ ವಿದೇಶಿ ಕ್ಯಾಮರಾಗಳು, ಹಳೆ ಕಾಲದ ವಿವಿಧ ಬಗೆಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕೆರಾಡಿ ಗ್ರಾಮದ ಹಯ್ಯಂಗಾರು ಅಸ್ಕಿಮಕ್ಕಿ ಎಂಬಲ್ಲಿನ ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.  ಅಸ್ಕಿಮಕ್ಕಿಯ ಕರುಣಾಕರ ಶೆಟ್ಟಿ (30) ಮೃತ ದುರ್ದೈವಿ. ಬಾಗಲಕೋಟೆಯ ಮಹಾಲಿಂಗಪುರದಲ್ಲಿ ಹೋಟೆಲ್ ಉದ್ಯಮ ಮಾಡಿಕೊಂಡಿದ್ದ ಕರುಣಾಕರ ಅವರು ವ್ಯವಹಾರದಲ್ಲಿ ನಷ್ಟ ಅನುಭವಿಸಿ ಊರಿಗೆ ಮರಳಿದ್ದರು. ಮಂಗಳವಾರ ಸಂಜೆ ವೇಳೆ ಮನೆಯ ತೋಟದ ಪಕ್ಕದ ಇರುವ ಹೊಳೆ ಬದಿಯಲ್ಲಿರುವ ಚಾರು ಮರದ ಕೊಂಬೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶಂಕಿಸಲಾಗಿದ್ದು ತಡವಾಗಿ ಮನೆಯವರ ಗಮನಕ್ಕೆ ಬಂದಿದೆ. ಮೃತರು ಹೆಂಡತಿ ಹಾಗೂ ಮಗು ಸೇರಿದಂತೆ ಕುಟುಂಬಿಕರನ್ನು ಅಗಲಿದ್ದಾರೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಅವರು ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರಿಂದ ಪಕ್ಷದ ಧ್ವಜವನ್ನು ಸ್ವೀಕರಿಸುವ ಮೂಲಕ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಇದೇ ವೇಳೆ ಮೂಡಬಿದರೆಯ ಕಾಂಗ್ರೆಸ್ ನಾಯಕ ಮೇಘನಾಥ್ ಶೆಟ್ಟಿ, ಹೊಸಪೇಟೆಯ ಮಾಜಿ ಶಾಸಕ ರತನ್ ಸಿಂಗ್ ಕೂಡ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್, ಆರ್. ಅಶೋಕ್, ವಿ ಸೋಮಣ್ಣ, ಕಾರ್ಕಳ ಸುನಿಲ್ ಕುಮಾರ್, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಹಾಗೂ ಇತರರು ಉಪಸ್ಥಿತರಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ ತಾಲೂಕಿನ ಕೋರ್ಗಿಯವರಾದ ಜಯಪ್ರಕಾಶ್ ಹೆಗ್ಡೆ ಅವರು ವೃತ್ತಿಯಲ್ಲಿ ವಕೀಲರು. ಮೊದಲ ಭಾರಿಗೆ ಬ್ರಹ್ಮಾವರ ಕ್ಷೇತ್ರದಿಂದ ಜನತಾ ಪರಿವಾರದ ಮೂಲಕ ಸ್ವರ್ಧಿಸಿ ಶಾಸಕರಾಗಿ ಆಯ್ಕೆಗೊಂಡು ಬಳಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಜನತಾ ಪರಿವಾರದ ಒಡಕಿನ ಹಿನ್ನೆಲೆಯಲ್ಲಿ…

Read More

ಕುಂದಾಪ್ರ ಡಾಟ್ ಕಾಂ | ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನ ವಿದ್ಯಾರ್ಥಿಗಳಾದ ಶಿವರಾಜ್ ಮತ್ತು ಕೀರ್ತನ್ ತಯಾರಿಸಿದ ಸಾಕ್ಷ್ಯಚಿತ್ರ. ನೀವು ನೋಡಿದರ ಕಾಲೇಜಿನ ಈ ನೋಟ! ಒಮ್ಮೆ ನೋಡಿ, ಶೇರ್ ಮಾಡಿ Direct Link: https://youtu.be/Q3KaGAxqpW4?list=PLRT_i080rqa9bVdhFqIcEa4-X_btXuZls

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವರದಿಗಾರಿಕೆ ಎಂಬುದು ಸುಲಭದ ಕಾರ್ಯವಲ್ಲ. ಅದರ ನಡುವೆ ಪುರಷರೇ ಬಹುಸಂಖ್ಯಾತರಿರುವ ಮಾಧ್ಯಮ ಕ್ಷೇತ್ರದಲ್ಲಿ ವಿರಳ ಸಂಖ್ಯೆಯಲ್ಲಿ ಮಹಿಳೆಯರು ದುಡಿಯುತ್ತಿದ್ದಾರೆ. ಅಪರೂಪಕ್ಕೆಂಬಂತೆ ಕುಂದಾಪುರದಲ್ಲಿ ಏಕೈಕ ಮಹಿಳಾ ವರದಿಗಾರರಾಗಿ ಅಶ್ವಿನಿ ಹಕ್ಲಾಡಿ ಅವರಂತವರು ದುಡಿಯುತ್ತಿರುವುದು ಪ್ರಶಂಸನೀಯ ಎಂದು ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಶಂಕರ ನಾಯ್ಕ ಮಾತನಾಡಿದರು. ಬುಧವಾರ ಕೋಟೇಶ್ವರ ರೋಟರ‍್ಯಾಕ್ಟ್ ಕ್ಲಬ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿಜಯ ಕರ್ನಾಟಕ ಕುಂದಾಪುರ ಪತ್ರಕರ್ತೆ ಅಶ್ವಿನಿ ಹಕ್ಲಾಡಿ ಅವರನ್ನು ಕೋಟೇಶ್ವರ ರೋಟರಿ ಕ್ಲಬ್ ಅಧ್ಯಕ್ಷ ಶಂಕರ ನಾಯ್ಕ ಸನ್ಮಾನಿಸಿ ಮಾತನಾಡಿದರು. ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಅರುಣ್ ದೇವಾಡಿಗ ವಕ್ವಾಡಿ, ಮಾಜಿ ಅಧ್ಯಕ್ಷ ರಾಘವೇಂದ್ರ ಎಸ್ ಬೀಜಾಡಿ, ರೋಟರ‍್ಯಾಕ್ಟ್ ಸದಸ್ಯ ಸಂತೋಷ ಬಳ್ಕೂರು, ಕೃಷ್ಣ, ಮಿತ್ರಸಂಗಮ ಬೀಜಾಡಿ ಗೋಪಾಡಿ ಉಪಾಧ್ಯಕ್ಷ ಗಿರೀಶ್ ಬೀಜಾಡಿ, ಕುಂದಾಪುರ ಮೊಗವೀರ ಸಂಘಟನೆ ಅಧ್ಯಕ್ಷ ರಮೇಶ್ ಟಿ, ಮೊಗವೀರ ಸಂಘಟನೆ ಕಚೇರಿ ಸಿಬ್ಬಂಧಿ ಶಕೀಲಾ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೊಲ್ಲೂರು: ಕೊಲ್ಲೂರಿನಲ್ಲಿ ಮಾರ್ಚ್‌ 10ರಂದು ನಡೆಯಲಿರುವ ಅಷ್ಟಪವಿತ್ರ ನಾಗಮಂಡಲೋತ್ಸವದ ಹೊರೆ ಕಾಣಿಕೆ ಸಮರ್ಪಣೆ ಮಾ. 6ರಿಂದ 8ರ ತನಕ ನಡೆಯಿತು. ಕುಂದಾಪುರ ತಾಲೂಕಿನ ವಿವಿಧ ಗ್ರಾಮಗಳಿಂದ, ಸಂಘ ಸಂಸ್ಥೆಗಳಿಂದ ಹಸಿರು ಹೊರೆ ಕಾಣಿಕೆ ಸಮರ್ಪಣೆ ಮಾಡಲಾಯಿತು. ಮೂರು ದಿನಗಳ ಕಾಲ ನಿತ್ಯವೂ ವಿವಿಧ ಭಾಗಗಳಿಂದ ಹೊರೆ ಕಾಣಿಕೆ ಹರಿದು ಬಂದವು. ಸಿಂಗಾರ ಹೂವಿನ ಗೊನೆ, ಅಕ್ಕಿ, ತೆಂಗಿನಕಾಯಿ, ಬೆಲ್ಲ, ವಿವಿಧ ಧಾನ್ಯಗಳು, ತರಕಾರಿ, ಹಣ್ಣು, ಅಡಿಕೆ ಹೀಗೆ ಸಾಕಷ್ಟು ಪ್ರಮಾಣದಲ್ಲಿ ಹೊರೆಕಾಣಿಕೆ ನಾಗದೇವರ ಪುಣ್ಯ ಕಾರ್ಯಕ್ಕೆ ಸಮರ್ಪಣೆಗೊಂಡಿತು. ಭಕ್ತಾದಿಗಳು ಸ್ವಯಂಪ್ರೇರಿತವಾಗಿ ಭಕ್ತಿ ಪೂರ್ವಕವಾಗಿ ಹೊರೆ ಕಾಣಿಕೆ ಸಲ್ಲಿಸಿ ಈ ಮಹತ್ಕಾರ್ಯದಲ್ಲಿ ಭಾಗಿಯಾಗುತ್ತಿರುವುದು ಕಂಡು ಬಂತು. ಹೊರೆಕಾಣಿಕೆ ಸಲ್ಲಿಸಿದ ಪ್ರತಿ ಯೋರ್ವರನ್ನು ಬ್ಯಾಂಡ್‌ ವಾದ್ಯ, ತಾಂಬೂಲ, ಶಾಲು ನೀಡುವ ಮೂಲಕ ವಿನಯ ಪೂರ್ವಕವಾಗಿ ಸೇವಾರ್ಥಿಗಳಾದ ನಯನ ರಮೇಶ ಗಾಣಿಗ, ಮಕ್ಕಳಾದ ಪವನ್‌ ಗಾಣಿಗ, ಪ್ರಸನ್ನ ಗಾಣಿಗ, ಪೃಥ್ವಿನ್‌ ಗಾಣಿಗ ಹಾಗೂ ಸ್ವಾಗತ ಸಮಿತಿಯ ಪದಾಧಿಕಾರಿಗಳು, ಗ್ರಾಮಸ್ಥರು ಸ್ವಾಗತಿಸಿಕೊಂಡರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಜರುಗಿದ ಅಂತರ್ ತರಗತಿ ಪ್ರತಿಭಾ ಪ್ರದರ್ಶನ ಸ್ವರ್ಧೆಯ ವಿಜೇತರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ. ಹೆಚ್. ಶಾಂತಾರಾಮ್ ಬಹುಮಾನ ವಿತರಿಸಿದರು. ಬಹುಮಾನ ವಿಜೇತರ ಪಟ್ಟಿ: ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್.ಪಿ.ನಾರಾಯಣ ಶೆಟ್ಟಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ.ಎಂ.ಗೊಂಡ ನಿರ್ಣಾಯಕರಾದ ನಿವೃತ್ತ ಪ್ರಾಧ್ಯಾಪಕ ಪ್ರೊ.ಅರವಿಂದ ಹೆಬ್ಬಾರ್, ಪದ್ಮಿನಿ ಪ್ರಭು, ನರೇಂದ್ರ್ ಎಸ್. ಗಂಗೊಳ್ಳಿ, ಕಾರ್ಯಕ್ರಮ ಸಂಯೋಜಕರಾದ ಡಾ. ಪಾರ್ವತಿ ಜಿ. ಐತಾಳ್ ಉಪಸ್ಥಿತರಿದ್ದರು. ಬಹುಮಾನ ವಿಜೇತರು: ಲಘು ಶಾಸ್ತ್ರೀಯ ನೃತ್ಯ ಪ್ರಥಮ – ಸಿಂಧೂ ತಂಡ(ತೃತೀಯ ಬಿ.ಕಾಂ), ದ್ವಿತೀಯ – ಶರಾವತಿ (ದ್ವಿತೀಯ ಬಿ.ಎಸ್.ಸಿ), ತೃತೀಯ- ಯಮುನಾ (ದ್ವಿತೀಯಬಿ.ಕಾಂ) ಮತ್ತು ಸರಯೂ (ಪ್ರಥಮಬಿ.ಕಾಂ) ಜಾನಪದ ಶೈಲಿ ನೃತ್ಯ ಪ್ರಥಮ -ಕಾವೇರಿ ತಂಡ(ತೃತೀಯ ಬಿ.ಬಿ.ಎಸ್.ಸಿ), ದ್ವಿತೀಯ – ಗಂಗಾ (ಬಿ.ಬಿ.ಎಮ್) ತೃತೀಯ- – ಸಿಂಧೂ ತಂಡ(ತೃತೀಯ) ಬಿ.ಕಾಂ). ಚಲನಚಿತ್ರ ನೃತ್ಯ – ಗೋದಾವರಿ ತಂಡ(ಬಿ.ಎ) ದ್ವಿತೀಯ…

Read More