Author: ನ್ಯೂಸ್ ಬ್ಯೂರೋ

ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರೇ ಸ್ವ ಇಚ್ಚೆಯಿಂದ ಒತ್ತುವರಿ ಮಾಡಿಕೊಂಡ ಜಾಗವನ್ನು ಬಿಟ್ಟುಕೊಡುತ್ತಿರುವಾಗ, ನಿಯಮಗಳನ್ನು ಗಾಳಿಗೆ ತೂರಿ ಸರಕಾರಿ ಕಛೇರಿಯನ್ನು ಮಾತ್ರ ರಸ್ತೆಯ ಪಕ್ಕದಲ್ಲೇ ಕಟ್ಟುತ್ತಿರುವುದು ಸಮಂಜಸವಾದುದಲ್ಲ ಎಂದು ಕುಂದಾಪುರ ಪುರಸಭಾ ಸದಸ್ಯ ರಾಜೇಶ್ ಕಾವೇರಿ ಹೇಳಿದರು. ಅವರು ಸರಕಾರಿ ಆಸ್ಪತ್ರೆಯ ಎದರು ರಸ್ತೆ ಪಕ್ಕದಲ್ಲಿ ಕಟ್ಟುತ್ತಿರುವ ಗ್ರಾಮ ಲೆಕ್ಕಿಗರ ಕಛೇರಿಯನ್ನು ಕಾನೂನು ಬಾಹಿರ ಹಾಗೂ ಅವೈಜ್ಞಾನಿಕವೆಂದು ಆರೋಪಿಸಿ, ನಿರ್ಮಾಣ ಹಂತದಲ್ಲಿರುವ ಕಛೇರಿಯ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಸಾರ್ವಜನಿಕರ ಎಲ್ಲಾ ಕೆಲಸವು ಒಂದೇ ಸೂರಿನಡಿಯಲ್ಲಿ ಆಗಬೇಕೆಂಬ ಕಾರಣದಿಂದ ಮಿನಿ ವಿಧಾನಸೌಧವನ್ನು ಕಟ್ಟಲಾಗಿದೆ. ಆದರೆ ಕುಂದಾಪುರ ಹೂವಿನ ಮಾರುಕಟ್ಟೆಯ ಬಳಿ ಇರುವ ಗ್ರಾಮಲೆಕ್ಕಿಗರ ಕಛೇರಿ ಮಾತ್ರ ಇದರಿಂದ ಹೊರತಾಗಿರುವುದು ವಿಪರ್ಯಾಸವೇ ಸರಿ. ಬೆಳೆಯುತ್ತಿರುವ ಕುಂದಾಪುರ ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು ಕಛೇರಿಯಿಂದ ಮತ್ತಷ್ಟು ಸಮಸ್ಯೆ ಉದ್ಬವಿಸಬಹುದು. ತಾಲೂಕು ಆಡಳಿತ ಶೀಘ್ರವೇ ವಾಸ್ತವವನ್ನು ಮನಗಂಡು ನಾಗರೀಕರ ಬೇಡಿಕೆಗೆ ಸ್ಪಂದಿಸಬೇಕಿದೆ ಎಂದರು. ರಾಜ್ಯ ಬಿಜೆಪಿ ಮೀನುಗಾರಿಕಾ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿಶೋರ್ ಕುಮಾರ್…

Read More

ಕುಂದಾಪುರ: ಇಂದು ಬೆಳಗ್ಗೆ ಮರವಂತೆಯಲ್ಲಿ ಮೀನುಗಾರಿಕೆಗೆ ಹೊರಟ ಎರಡು ದೋಣಿಗಳಿಗೆ ದೊಡ್ಡ ಗಾತ್ರದ ತೆರೆಗಳು ಅಪ್ಪಳಿಸಿದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ದೋಣಿಗಳು ಗಂಗೆಮನೆ ಪ್ರಭಾಕರ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಅವರಿಗೆ ಸೇರಿವೆ. ತೆರೆ ಅಪ್ಪಳಿಸಿದಾಗ ಎರಡೂ ದೋಣಿಗಳು ಮಗುಚಿಕೊಂಡುವು. ಪ್ರಭಾಕರ ಖಾರ್ವಿ ಅವರ ’ವಿಶ್ವದೇವತೆ’ ಹೆಸರಿನ ದೋಣಿಯ ಬಲೆ ಎಳೆಯುವ ಯಂತ್ರ, ದೋಣಿಯ ಔಟ್‌ಬೋರ್ಡ್ ಯಂತ್ರ, ಫಿಶ್ ಫೈಂಡರ್, ವಯರ್‌ಲೆಸ್ ಹಾಳಾಗಿವೆ. ದೋಣಿಯಲ್ಲಿದ್ದ ಬಲೆ ತೇಲಿಹೋಗಿ ದಡ ಸೇರಿದಾಗ ನಿರಂತರ ಅಪ್ಪಳಿಸಿದ ತೆರೆಗಳಿಂದಾಗಿ ಮರಳಿನಲ್ಲಿ ಹೂತು ಹೋಗಿದೆ. ದೋಣಿಗೂ ಹಾನ ಸಂಭವಿಸಿದೆ. ಮರಳಿನಲ್ಲಿ ಹೂತುಹೋದ ಬಲೆಯನ್ನು ಹಿಟಾಚಿ ಯಂತ್ರ ಬಳಸಿ ಮೇಲೆತ್ತಲಾಯಿತು. ಆದರೆ ಅದರ ಬಹುಭಾಗಕ್ಕೆ ಹಾನಿಯಾಗಿದೆ. ಒಟ್ಟು ನಷ್ಟ ರೂ.10 ಲಕ್ಷ ಎಂದು ಅಂದಾಜಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ) ಮಂಜುನಾಥ ಖಾರ್ವಿ ಅವರ ವಿಶ್ವೇಶ್ವರಿ ಹೆಸರಿನ ದೋಣಿ ತೆರೆ ಅಪ್ಪಳಿಸಿದಾಗ ದಡದಲ್ಲಿದ್ದ ಕಲ್ಲಿಗೆ ಬಡಿದು ಇಬ್ಭಾಗವಾಗಿದೆ. ಬೋಟ್ ಯಂತ್ರ, ವಯರ್‌ಲೆಸ್ ಮತ್ತು ಜಿಪಿಎಸ್ ಯಂತ್ರಕ್ಕೆ ಹಾನಿಯುಂಟಾಗಿದೆ.…

Read More

ಕುಂದಾಪುರ: ಸ್ನೇಹಿತನ ಮನೆಯಿಂದ ಬೈಕಿನಲ್ಲಿ ವಾಪಾಸಾಗುತ್ತಿದ್ದ ವೇಳೆ ಕಂಡ್ಲೂರು ಜನತಾಕಾಲೋನಿಯ ಬಳಿ ಇಬ್ಬರು ಹಿಂದೂ ಯುವಕರನ್ನು ತಡೆದ ಅನ್ಯಕೋಮಿನ ಗುಂಪೊಂದು ಯುವಕರ ಮೇಲೆ ಮಾರಣಾಂತಿಕ ಹಲ್ಲೆಗೈದು ಪರಾರಿಯಾದ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ. ಹಲ್ಲೆಗೊಳಗಾದ ವಿಜಯಕುಮಾರ್(32) ಹಾಗೂ ಮಂಜುನಾಥ (29) ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೂರಿನನ್ವಯ ಶಾಹೀದ್ ಅಲಿ, ಸದಾಕತ್, ನದೀಮ್ ಹಾಗೂ ಸುಭಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯ ವಿವರ: ಬಳ್ಕೂರು ನಿವಾಸಿ ವಿಜಯಕುಮಾರ್ ಎಂಬುವವರು ತನ್ನ ಸ್ನೇಹಿತ ಮಂಜುನಾಥನೊಂದಿಗೆ ಕಂಡ್ಲೂರು ಜನತಾಕಾಲೋನಿಯ ಸ್ನೇಹಿತನ ಮನೆಯಲ್ಲಿ ಹೊಸ್ತು ಊಟ ಮಾಡಿಕೊಂಡು ರಾತ್ರಿ 10:30ರ ಸುಮಾರಿಗೆ ಬೈಕಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಅವರ ಬೈಕನ್ನು ಅಡ್ಡಗಟ್ಟಿದ ಅನ್ಯಕೋಮಿನ ಯುವಕರ ಗುಂಪು ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದಂತೆ ಹಲ್ಲೆ ನಡೆಸಿ, ಕೊಲೆ ಮಾಡುವ ಬೆದರಿಕೆಯೊಡ್ಡಿದ್ದಾರೆ. ಹಲ್ಲೆಗೊಳಗಾದ ವಿಜಯ ಹಾಗೂ ಮಂಜುನಾಥ ಅವರ ಅರಚಾಟ ಹೇಳಿ ಅವರ ಸ್ನೇಹಿತರು ಓಡಿ ಬಂದಾಗ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ತೀವ್ರ ಗಾಯಗೊಂಡಿದ್ದ ಇವರನ್ನು ಕೂಡಲೇ…

Read More

ಬೈಂದೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಉಳಿಸಿಕೊಂಡಿರುವ ಉಡುಪಿ ಜಿಲ್ಲೆ ಕ್ರೀಡಾ ಕ್ಷೇತ್ರಕ್ಕೂ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಳುಗಳನ್ನು ಕೊಟ್ಟ ಹೆಗ್ಗಳಿಕೆ ಹೊಂದಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ ಹೇಳಿದರು. ಅವರು ಬೈಂದೂರು ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೈಂದೂರು ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 2 ದಿನಗಳ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಕಬ್ಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಯಡ್ತರೆ ಗ್ರಾ.ಪಂ. ಅಧ್ಯಕ್ಷ ನಾಗರಾಜ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಗ್ರಾ.ಪಂ ಸದಸ್ಯ ವೆಂಕ್ಟ ಪೂಜಾರಿ, ಬೈಂದೂರು ಮಾದರಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರವೀಂದ್ರ ಶಾನುಭೋಗ್, ಕೊಲ್ಲೂರು ಮೂಕಾಂಬಿಕಾ ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉದ್ಯಮಿ ಬಾರ್ಕೂರು ಅಣ್ಣಯ್ಯ ಶೇರುಗಾರ್ ಮೊದಲಾದವರು ವೇದಿಯಲ್ಲಿದ್ದರು. ಕಾರ್ಯಕ್ರಮಕ್ಕೂ ಮೊದಲು ನಡೆದ ಅದ್ದೂರಿ…

Read More

ಕುಂದಾಪುರ: ಇಲ್ಲಿನ ಬೀಜಾಡಿ ಸಮೀಪ ಬೈಕ್ ಹಾಗೂ ಮಹೇಂದ್ರ ಜೈಲೋ ವಾಹನದ ನಡುವೆ ನಡೆದ ಅಫಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ. ಗಣಪಯ್ಯ ಗಾಣಿಗ(54) ದುರ್ದೈವಿ ಘಟನೆಯ ವಿವರ: ಗಣಪಯ್ಯ ಗಾಣಿಗ ಕೋಟೇಶ್ವರದಿಂದ ಕುಂಭಾಶಿ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ಟಿವಿಎಸ್ ಲೂನಾದಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಮಹೇಂದ್ರ ಝೈಲೋ ವಾಹನ ಬಿಜಾಡಿ ಸಮೀಪ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಗಣಪಯ್ಯ ಗಾಣಿಗರ ತಲೆಗೆ ಗಂಬೀರ ಗಾಯಗಳಾಗಿದ್ದವು. ಕೂಡಲೇ ಗಾಯಾಳುವನ್ನು ಕುಂದಾಪುರದ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಮೃತಪಟ್ಟಿದ್ದರು. ಅಲ್ಲಿಂದ ಪರಾರಿಯಾಗಿದ್ದ ಮಹೇಂದ್ರ ಝೈಲೋ ವಾಹನವನ್ನು ಪಡುಬಿದ್ರೆಯ ಸಮೀಪ ಅಡ್ಡಗಟ್ಟಿ ವಾಹನ ಚಾಲಕನನ್ನು ಬಂಧಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಕುಂದಾಪುರ: ಇಲ್ಲಿನ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಯೋರ್ವ ತನ್ನ ಹಾಸ್ಟೆಲ್ ನಲ್ಲಿ ಇಂದು ಮಧ್ಯಾಹ್ನದ ವೇಳೆಗೆ ನೇಣಿಗೆ ಶರಣಾದ ಘಟನೆ ನಡೆದಿದೆ. ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಶಶಾಂಕ್(19) ಮೃತ ಯುವಕ. ಘಟನೆಯ ವಿವರ: ತುಮಕೂರು ಜಿಲ್ಲೆಯ ತುರುವೆಕೆರೆ ನಿವಾಸಿಯಾದ ಗೋಪಾಲ ಗೌಡ ಎಂಬುವವರ ಮಗನಾದ ಶಶಾಂಕ್ ತುರುವೆಕೆರೆಯಲ್ಲಿ ಮೆಕ್ಯಾನಿಕ್ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿ ಈ ವರ್ಷ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೇರವಾಗಿ ದ್ವಿತೀಯ ವರ್ಷಕ್ಕೆ ಸೇರ್ಪಡೆಗೊಂಡಿದ್ದರು. ಈಗ ಪರೀಕ್ಷೆಗಳ ನಡೆಯುತ್ತಿದ್ದರಿಂದ ಬೆಳೆಗ್ಗೆಯ ಪರೀಕ್ಷೆಗೆ ಹಾಜರಾಗಿದ್ದ ಶಶಾಂಕ್ ಮಧ್ಯಾಹ್ನದ ಪರೀಕ್ಷೆಗೆ ಹಾಜರಾಗದೇ ತನ್ನ ಹಾಸ್ಟೆಲ್ ಕೊಠಡಿಯಲ್ಲಿಯೇ ಮಧ್ಯಾಹ್ನ 2ಗಂಟೆಯ ತನಕ ಓದುತ್ತಿದ್ದರು ಎನ್ನಲಾಗಿದೆ. ಬಳಿಕ ಕೊಠಡಿಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಈ ಕೃತ್ಯಕ್ಕೆ ಮುಂದಾಗಿದ್ದಾರೆ. ಇಂದು ಮಧ್ಯಾಹ್ನದ 3:30ರ ವೇಳೆಗೆ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. (ಕುಂದಾಪ್ರ ಡಾಟ್ ಕಾಂ) ಆರು ತಿಂಗಳ ಹಿಂದಷ್ಟೇ ತನ್ನ ತಾಯಿ ಮೃತಪಟ್ಟಿದ್ದರಿಂದ ತೀರಾ ನೊಂದುಕೊಂದ್ದ ಶಶಾಂಕ್ ಬರೆದಿಟ್ಟ…

Read More

ಕುಂದಾಪುರ: ಆನ್‌ಲೈನ್ ಔಷಧಿ ಮಾರಾಟಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿರುವುದನ್ನು ವಿರೋಧಿಸಿ ಅ.14ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್ ಗೆ ಕರೆ ನೀಡಿರುವ ಹಿನ್ನಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ಔಷಧಾಲಯಗಳನ್ನು ಹೊರತುಪಡಿಸಿ ಉಳಿ ಎಲ್ಲಾ ಮೆಡಿಕಲ್ ಶಾಪುಗಳು ಮುಚ್ಚಿರುತ್ತದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ತಮಗೆ ಬೇಕಾದ ತುರ್ತು ಔಷಧಿಗಳನ್ನು ಕುಂದಾಪುರ ತಾಲೂಕಿನ ಚಿನ್ಮಯಿ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ ಕುಂದಾಪುರ, ಸರ್ಜನ್ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ ಕೋಟೇಶ್ವರ, ಆದರ್ಶ್ ಮೆಡಿಕಲ್ಸ್ ಕುಂದಾಪುರ, ಶ್ರೀಮಾತಾ ಹಾಸ್ಪಿಟಲ್ ಮೆಡಿಕಲ್ ಸ್ಟೋರ್ಸ್ ಕುಂದಾಪುರ, ವಿನಯ ಹಾಸ್ಪಿಟಲ್ ಫಾರ್ಮಾ ಕುಂದಾಪುರ, ಮಂಜುನಾಥ ಮೆಡಿಕಲ್ಸ್ ಕುಂದಾಪುರ, ಎನ್. ಆರ್. ಆಚಾರ್ಯ ಮೆಮೊರಿಯಲ್ ಹಾಸ್ಪಿಟಲ್ ಫಾರ್ಮಸಿ ಕೋಟೇಶ್ವರ ಇಲ್ಲಿಂದ ಪಡೆಯಬಹುದಾಗಿದೆ. ಉಡುಪಿ ತಾಲೂಕಿನ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಮಿತ್ರ ಆಸ್ಪತ್ರೆ ಓಲ್ಡ್ ಪೋಸ್ಟ್ ಆಫೀಸ್ ಹತ್ತಿರ ಉಡುಪಿ, ಲ್ಯಾಂಬರ್ಡ್ ಮೆಮೋರಿಯಲ್ ಹಾಸ್ಪಿಟಲ್ ಡ್ರಗ್ಸ್ ಸ್ಟೋರ್ಸ್ ಉಡುಪಿ, ಹೈಟೆಕ್ ಮೆಡಿಕೇರ್ ಮೆಡಿಕಲ್ಸ್ ಅಂಬಲಪಾಡಿ ಉಡುಪಿ, ಸಿಟಿ ಹಾಸ್ಪಿಟಲ್ ಆ್ಯಂಡ್ ಡಯಗ್ನೋಸ್ಟಿಕ್ ಸೆಂಟರ್ ಪ್ರೈ.ಲಿಮಿಟೆಡ್…

Read More

ಕುಂದಾಪುರ: ಕಳೆದ ಶುಕ್ರವಾರ ಬೆಳ್ಳಂಬೆಳ್ಳಗೆ ಉತ್ತರ ಕನ್ನಡ ಜಿಲ್ಲೆಯ ಗುಣವಂತೆ ಗ್ರ್ರಾಮದಿಂದ ತನ್ನ ಹೀರೊ ಶೈನ್ ಬೈಕ್ ಸಹಿತ ನಾಪತ್ತೆಯಾದ ವಿಶ್ವನಾಥ ಗೌಡ (36) ಎಂಬವರ ಬೈಕ್ ಹೆಮ್ಮಾಡಿ ಸಮಿಪದ ತೊಪ್ಲುವಿಗೆ ಹೋಗುವ ತಿರುವಿನಲ್ಲಿ ಅದೇ ದಿನ ಸಂಜೆ ಪತ್ತೆ ಯಾಗಿದ್ದು ಅದರೆ ವಿಶ್ವನಾಥ ಅವರ ಸುಳಿವೇ ಇಲ್ಲವಾಗಿದೆ. ಕ್ರಷಿಕರಾಗಿದ್ದ ವಿಶ್ದವನಾಥರಿಗೆ ಹೆಂಡತಿ ಎರಡು ಮಕ್ಕಳ ಪುಟ್ಟ ಸಂಸಾರವಿದ್ದು, ಅವರ ನಾಪತ್ತೆಯಿಂದಾಗಿ ಇಡೀ ಕುಟುಂಬ ಕಳವಳಕ್ಕೀಡಾಗಿದೆ. ಶುಕ್ರವಾರ ಮದ್ಯಾಹ್ನದ ಸುಮಾರಿಗೆ ತ್ರಾಸಿ ಬಳಿಯ ವೈನ್ ಶಾಪ್ ಸಮೀಪ ಅವರನ್ನು ಅವರದ್ದೇ ಊರಿನವರು ಕಂಡು ಮಾತನಾಡಿಸಿದ್ದೇ ಕೊನೆ ತದನಂತರ ಅಲ್ಲಿಂದಲೂ ಅವರು ನಾಪತ್ತೆಯಾಗಿದ್ದರೆನ್ನಲಾಗಿದೆ. ಸಂಜೆ ವೇಳೆಗೆ ಅವರ ಬೈಕ್ ಮಾತ್ರ ಅನಾಥ ಸ್ಥಿತಿಯಲ್ಲಿ ಹೆಮ್ಮಾಡಿ ಹೆದ್ದಾರಿ ಸಮೀಪ ತೊಪ್ಲುವಿನ ಬಳಿ ಪತ್ತೆಯಾಗಿದ್ದು ಗಂಗೊಳ್ಳಿ ಪೋಲಿಸರು ಅದನ್ನು ತಮ್ಮ ಸುಪರ್ದಿಗೆ ಪಡೆದು ಕೊಂಡಿದ್ದಾರೆ. ಈಗಾಗಲೇ ಅವರ ನಾಪತ್ತೆ ಪ್ರಕರಣ ಮಂಕಿ ಪೋಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದರೂ ಪರಿಣಾಮ ಮಾತ್ರ ಶೂನ್ಯ ವಾಗಿದ್ದರಿಂದ ಅವರ ಸ್ನೇಹಿತ ಬಳಗದವರು…

Read More

ಕುಂದಾಪುರ: ಇಂದು ಪಂಚಾಯಿತಿ ರಾಜ್ ವ್ಯವಸ್ಥೆಯ ತಳಗಟ್ಟಿನ ಒಂದೋಂದೆ ಕಲ್ಲುಗಳು ಜಾರುತ್ತಿದೆ. ಸಮಾಜ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಅಧಿಕಾರ ಸಿಗಬೇಕು ಎನ್ನುವ ಉದ್ದೇಶದ ಈ ವ್ಯವಸ್ಥೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಕಾಣಬಹುದಾಗಿದೆ. ಈ ಎಲ್ಲಾ ವಿಚಾರಗಳ ಕುರಿತು ವಾಸ್ತವಿಕ ನೆಲೆಗಟ್ಟಿನಲ್ಲಿ ಪಂಚಾಯಿತಿ ಹಿತೈಷಿಗಳು ಒಂದೆಡೆ ಸೇರಿ ಸಮಸ್ಯೆಗಳ ಚರ್ಚೆ ನಡೆಸಿ ನಿರ್ಣಯ ಕೈಗೊಂಡು ಸರಕಾರದ ಗಮನ ಸೆಳೆಯಬೇಕಾದ ಅಗತ್ಯತೆ ಇದೆ ಎಂದು ಮಾಜಿ ಸಚಿವ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಅವರು ಶುಕ್ರವಾರದಂದು ಕೋಟ ಕಾರಂತ ಥೀಂ ಪಾರ್ಕನಲ್ಲಿ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಸಮಾರಂಭದ 9ನೇ ದಿನದ ಅಂಗವಾಗಿ ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ಜನಾಧಿಕಾರ ಪ್ರತಿಷ್ಠಾನ (ರಿ.) ಕೋಟ ಮತ್ತು ಸಿ.ಎ.ಬ್ಯಾಂಕ್ ಕೋಟ ಸಂಯುಕ್ತ ಆಶ್ರಯದಲ್ಲಿ ಕೋಟತಟ್ಟು ಪಂಚಾಯಿತಿ ಸಾದರ ಪಡಿಸಿದ ಪಂಚಾಯಿತಿ ಹಬ್ಬ ಸುರಾಜ್ಯ ಸ್ವಾತಂತ್ರ್ಯದ ಪ್ರತಿಬಿಂಬ ಕಾರ್ಯಕ್ರಮದಲ್ಲಿ ಪ್ರಸ್ತಾವಿಕ ಮಾತನಾಡಿದರು. ರಮೇಶ್ ಕುಮಾರ್ ಅವರು ನೀಡಿದ ಪಂಚಾಯಿತಿ ರಾಜ್ಯ ತಿದ್ದು ಪಡಿ…

Read More

ಕುಂದಾಪುರ: ತಾಲೂಕಿನ ಗೋಳಿಯಂಗಡಿಯ ಕಾರಿಕೋಡ್ಲು ಎಂಬಲ್ಲಿ ಯುವತಿಯೋರ್ವಳನ್ನು ಅತ್ಯಾಚಾರಗೈದು ಕೊಲೆ ಮಾಡಿದ ಅಮಾನುಷ ಘಟನೆ ವರದಿಯಾಗಿದೆ. ಮೃತ ಯುವತಿಯನ್ನು ಕಾರಿಕೋಡ್ಲು ನಿವಾಸಿ ಸುಚಿತ್ರಾ ನಾಯ್ಕ್(19) ಎಂದು ಗುರುತಿಸಲಾಗಿದ್ದು, ಅತ್ಯಾಚಾರ ಹಾಗೂ ಕೊಲೆ ಶಂಕೆಯ ಮೇಲೆ ಮಣಿಕಂಠ ಎನ್ನುವವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆಯ ವಿವರ: ಗೋಳಿಯಂಗಡಿಯ ಹಾರ್ಡ್‌ವೇರ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಸುಚಿತ್ರಾ ಎಂದಿನಂತೆ ಸಂಜೆಯ ವೇಳೆಗೆ ಮನೆಗೆ ಬಾರದಿದ್ದುದರಿಂದ ಆಕೆಯ ಮನೆಯವರು ಅಂಗಡಿ ಮಾಲಿಕರಲ್ಲಿ ವಿಚಾರಿಸಿದಾಗ, ಸಂಜೆ 5:30 ಸುಮಾರಿಗೆ ಆಕೆ ಮನೆಗೆ ಹೊರಟಿರುವುದನ್ನು ಅವರು ಖಾತರಿಪಡಿದ್ದರು. ಆದರೆ ರಾತ್ರಿಯಾಗುತ್ತಾ ಬಂದರೂ ಸುಚಿತ್ರಾ ನಾಯ್ಕ್ ಮನೆಗೆ ಬಾರದಿದ್ದುದರಿಂದ ಗಾಬರಿಗೊಂಡ ಹುಡುಕಾಟ ನಡೆಸಿದಾಗ ಮನೆಯ ಸಮೀಪದಲ್ಲೇ  ಸುಚಿತ್ರಾ ಶವ ನಗ್ನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮನೆಯಿಂದ ಬಹಳ ಹಿಂದೆಯೇ ಅತ್ಯಾಚಾರಗೈದು, ಕೊಲೆ ಮಾಡಿ ಬಳಿಕ ನಿರ್ಜನ ಕಾಡು ಪ್ರದೇಶದಲ್ಲಿ ಮೃತ ದೇಹವನ್ನು ತಂದು ಹಾಕಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ. ಮೃತ ದೇಹದ ಮೇಲೆ ಗಾಯದ ಗುರುತುಗಳು ಕಂಡುಬಂದಿದೆ. ಕ್ರಿಮಿನಲ್ ಹಿನ್ನೆಲೆಯ ಮಣಿಕಂಠ ಕೆಲವು ದಿನಗಳಿಂದ ಸುಚಿತ್ರಾಳನ್ನು ಹಿಂಬಾಲಿಸುತ್ತಿದ್ದ ಬಗ್ಗೆ ಮಾಹಿತಿ ಇದ್ದುದರಿಂದ, ಅಲ್ಲದೇ…

Read More