ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಐವತ್ತಕ್ಕೂ ಹೆಚ್ಚು ಯಕ್ಷಗಾನದ ವೃತ್ತಿ ಮೇಳಗಳು, ಹತ್ತು ಹಲವು ಸಂಘ-ಸಂಸ್ಥೆಗಳು ದಿನಂಪ್ರತಿ ನೂರಾರು ಯಕ್ಷಗಾನ ಪ್ರದರ್ಶನಗಳು, ಸಾವಿರಾರು ಪ್ರೇಕ್ಷಕರು ನಿತ್ಯ ಸಾಂಸ್ಕೃತಿಕ ಸಮಾರಾಧನೆ ನಡೆಯುವ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ನಿಜಾರ್ಥದಲ್ಲಿ ಸಾಂಸ್ಕೃತಿಕ ರಾಜಧಾನಿಯಾಗಿದೆ. ಯಕ್ಷಗಾನದ ಮೂಲ ಸ್ವರೂಪ ಬದಲಾಗುತ್ತಿರುವ ಈ ಹೊತ್ತಿನಲ್ಲಿ ಯಕ್ಷಾಂತರಂಗವನ್ನು ಪರಿಚಯಿಸಿ ಕೊಡುವ ಈ ಪ್ರಾತ್ಯಕ್ಷಿಕೆ ಹೊಸ ಪ್ರೇಕ್ಷಕರನ್ನು ಸೆಳೆಯುವಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಬೆಂಗಳೂರಿನ ಯಕ್ಷದೇಗುಲ ಸಂಸ್ಥೆಯ ಪ್ರಯತ್ನ ಶ್ಲಾಘನೀಯ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು. ಅವರು ಎಡಬೆಟ್ಟಿನ ವಿದ್ಯೋದಯ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದಿಂದ ೫ ದಿನ ಯಕ್ಷಗಾನ ಪ್ರಾತ್ಯಕ್ಷಿಕೆಯನ್ನು ಯಕ್ಷಗಾನ ದಿವಟಿಕೆಗೆ ದೀಪ ಹಚ್ಚುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಗಾಯನ, ವಾದನ, ನರ್ತನ, ಮಾತು ಮತ್ತು ಆಕರ್ಷಕ ವೇಷ ಭೂಷಣಗಳೆಂಬ ಪಂಚಾಗದ ಮೇಲೆ ನಿಂತಿರುವ ಭವ್ಯ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರಾಜ್ಯ ತಾಲೂಕು ಹೋರಾಟ ಸಮಿತಿಯು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತು. ಫೆಬ್ರವರಿ ೮ ೨೦೧೩ ರಂದು ಬಜೆಟ್‌ನಲ್ಲಿ ಘೋಷಣೆಯಾದ ಎಲ್ಲಾ ೪೩ ತಾಲೂಕುಗಳನ್ನ ಒಂದೇ ಹಂತದಲ್ಲಿ ಅನುಮೋದಿಸಬೇಕೆಂದು ಈ ಸಂಧರ್ಭದಲ್ಲಿ ಒತ್ತಾಯಿಸಲಾಯಿತು. ಕಂದಾಯ ಸಚಿವರ ಹೇಳಿಕೆ ಆದ್ಯತೆ ಮೇಲೆ ಕೇವಲ ೩೩ ತಾಲೂಕುಗಳನ್ನ ರಚಿಸುವ ವಿಚಾರವನ್ನ ಕೈಬಿಟ್ಟು ಯಾವುದೇ ಕಾರಣಕ್ಕೂ ಘೋಷಣೆಯಾದ ೪೩ ತಾಲೂಕುಗಳನ್ನು ತುಂಡರಿಸುವ ವಿಚಾರಕ್ಕೆ ರಾಜ್ಯ ಸಮಿತಿ ವಿರೋಧ ವ್ಯಕ್ತಪಡಿಸಿತು. ಈ ಸಂಧರ್ಭದಲ್ಲಿ ಕಂದಾಯ ಸಚಿವರು ಅನುದಾನದ ಸಮಸ್ಯೆ ಮತ್ತು ಬೇರೆಲ್ಲಾ ವಿಚಾರಗಳನ್ನ ವಿಮರ್ಶೆ ಮಾಡಿ ಸರಕಾರ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ಅಭಿಪ್ರಾಯವನ್ನು ರಾಜ್ಯ ಸಮಿತಿಗೆ ನೀಡಿದರು. ಮನವಿಯಲ್ಲಿ ರಾಜ್ಯ ಸಮಿತಿಯೂ ಸರಕಾರದ ಹೊಸ ತಾಲೂಕುಗಳಿಗೆ ಕನಿಷ್ಟ ಅನುದಾನವನ್ನ ನೀಡಿದರೂ ಕೂಡಾ ಯಾವುದೇ ತಾಲೂಕು ಕೂಡಾ ವಿರೋಧ ವ್ಯಕ್ತ ಪಡಿಸುವುದಿಲ್ಲ ಎನ್ನುವ ಭರವಸೆಯನ್ನು ನೀಡಿತು. ಈ ಸಂಧರ್ಭದಲ್ಲಿ ಸಚಿವರು ಎಲ್ಲಾ ವಿಚಾರಗಳನ್ನ ಪರಿಶೀಲಿಸುತ್ತೇವೆ ಎನ್ನುವ ಭರವಸೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಾರತವಿಲ್ಲದೇ ಬದುಕಲು ಸಾಧ್ಯವಿಲ್ಲ ಎಂದು ಜಗತ್ತಿಗೆ ಅರಿವಾಗಿದೆ. ಅಂತಹ ವಿಶೇಷ ಪ್ರಭೆಯೊಂದನ್ನು ಸ್ವಾಮಿ ವಿವೇಕಾನಂದರು ಹರಿಸಿದ್ದಾರೆ. ಅವರ ೧೫೪ನೇ ಜನ್ಮದಿನಾಚರಣೆಯ ಸಂದಭದಲ್ಲಿ ಭಾರತ ಹೊಸ ದಿಕ್ಕಿನತ್ತ ಸಾಗುತ್ತಿದ್ದು, ಅಂದು ಕಂಡ ಕನಸು ನನಸಾಗುತ್ತಿದೆ ಎಂದು ಖ್ಯಾತ ವಾಗ್ಮಿ, ಅಂಕಣಗಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು. ಅವರು ಸಮರ್ಥ ಭಾರತ ಬೈಂದೂರು ಆಶ್ರಯದಲ್ಲಿ ಶನಿವಾರ ನಡೆದ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ೧೫೪ನೇ ಜನ್ಮದಿನಾಚರಣೆ ’ವಿವೇಕ ಪರ್ವ’ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು. ನೂರಾರು ವರ್ಷಗಳಿಂದ ಈ ದೇಶ ಪರಕೀಯರಿಂದ ಆಕ್ರಮಣಕ್ಕೀಡಾದರೂ ಇಂದಿಗೂ ತನ್ನ ‘ವ್ಯ ಇತಿಹಾವನ್ನು ಕಾಪಾಡಿಕೊಂಡು ಬಂದಿದೆ. ಪರಕೀಯ ಆಕ್ರಮಣದಿಂದ ನಮ್ಮ ಸಂಪತ್ತು ಲೂಟಿಯಾದ ಬಗ್ಗೆ ಯೋಚನೆ ಮಾಡುವುದಿಲ್ಲ, ಆದರೆ ೭೦ ವರ್ಷಗಳಿಂದ ದೇಶದ ಸಂಪತ್ತನ್ನು ಈ ದೇಶದ ನಾಯಕರೇ ಲೂಟಿ ಮಾಡಿದ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎಂದ ಅವರು ದೇಶದ ಮೇಲಾದ ಸಾಂಸ್ಕೃತಿಕ ಆಕ್ರಮಣಗಳು ಸಾಮಾನ್ಯವಾದುದಲ್ಲ. ನಮ್ಮ ವೇಶಭೂಷಣ, ಊಟ ತಿಂಡಿ, ಮಾತು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉತ್ತಮ ಶಿಕ್ಷಣವನ್ನು ಪಡೆಯುವಲ್ಲಿ ಇಂದು ಯಾವ ಪ್ರದೇಶವೂ ಹಿಂದೆ ಬಿದ್ದಿಲ್ಲ. ಆದರೆ ಶಿಕ್ಷಣದೊಂದಿಗೆ ಉತ್ತಮ ಮನಸ್ಸನ್ನು ಕಟ್ಟುವ ಕಟ್ಟುವ ಕೆಲಸವಾಗಬೇಕು. ನಾಟದಿಂದ ಜಾಗೃತಿ, ಸಂಸ್ಕಾರ, ಸೌಂದರ್ಯಪ್ರಜ್ಞೆ ಹಾಗೂ ಮನಸ್ಸನ್ನು ಕಟ್ಟುವ ಕೆಲಸವಾಗುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಹೇಳಿದರು. ಅವರು ಲಾವಣ್ಯ ರಿ. ಬೈಂದೂರು ೪೦ನೇ ವರ್ಷದ ಸಂಭ್ರಮದಲ್ಲಿ ಆಯೋಜಿಸಿದ ರಂಗ ಲಾವಣ್ಯ – ಕಲಾಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಸೌಂದರ್ಯಪ್ರಜ್ಞೆ ಇರುವವರು ದೇಶ, ಪರಿಸರ, ಕಲೆ ಹಾಗೂ ಕಲಾವಿದರನ್ನು ಪ್ರೀತಿಸುತ್ತಾರೆ. ಸಂಸ್ಕಾರ ಹಾಗೂ ಸಮಾಜದ ಪರಿಕಲ್ಪನೆ ಇರುವ ವ್ಯಕ್ತಿಯಿಂದ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಅಂತಹ ಪ್ರೀತಿ ಹಾಗೂ ವ್ಯಕ್ತಿತ್ವನ್ನು ಒಳಗೊಂಡರೇ ಮಾತ್ರ ಸಮಾಜದಲ್ಲಿಯೂ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿದೆ ಎಂದರು. ಡಾ. ಎ.ವಿ ಬಾಳಿಗ ಸ್ಮಾರಕ ಆಸ್ವತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ.ವಿ ಭಂಡಾರಿ ಶುಭಶಂಸನೆಗೈದು, ನಾಟಕಗಳು ಮಕ್ಕಳ ಮನಪರಿವರ್ತನೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನಮ್ಮೊಳಗಿನ ಒತ್ತಡವನ್ನೂ ನಿವಾರಿಸುತ್ತದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸಿಡುಬು, ದಡಾರ ರೋಗಕ್ಕಿಂತ ಹೆಚ್ಚು ಅಪಾಯಕಾರಿಯಾಗಿರುವ ರುಬೆಲ್ಲಾ ರೋಗವನ್ನು ನಿಯಂತ್ರಿಸಲು ಸರಕಾರ ಫೆಬ್ರವರಿ ೭ರಿಂದ ಮಾರ್ಚ್ ೧ರವರೆಗೆ ಮಕ್ಕಳಿಗೆ ಚುಚ್ಚುಮದ್ದು ನೀಡುವ ಕಾರ್ಯಕ್ರಮ ನಡೆಸುತ್ತಿದೆ. ೯ ತಿಂಗಳಿನಿಂದ ೧೫ ವರ್ಷದ ಎಲ್ಲಾ ಮಕ್ಕಳಿಗೆ ಸಿಡುಬು ರೋಗ, ದಡಾರ ಹಾಗೂ ಮಾರಣಾಂತಿಕ ರುಬೆಲ್ಲಾ ರೋಗವನ್ನು ನಿಯಂತ್ರಿಸುವ ಚುಚ್ಚುಮದ್ದನ್ನು ಕಡ್ಡಾಯವಾಗಿ ಹಾಕಿಸಬೇಕು. ಈ ಹಿಂದೆ ಮಕ್ಕಳಿಗೆ ಈ ಚುಚ್ಚುಮದ್ದನ್ನು ಹಾಕಿಸಿದ್ದರೂ ಪುನ: ಇದನ್ನು ನೀಡಬೇಕು ಎಂದು ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶ್ವೇತಾ ಹೇಳಿದರು. ಅವರು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಪೋಷಕರಿಗಾಗಿ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಿಸೆಲ್ಸ್ ಮತ್ತು ರುಬೆಲ್ಲಾ ರೋಗದ ಚುಚ್ಚುಮದ್ದಿನಿಂದ ಮಕ್ಕಳ ಮೇಲೆ ಯಾವುದೇ ಅಡ್ಡಪರಿಣಾಮ ಆಗುವುದಿಲ್ಲ ಮತ್ತು ಪ್ರತಿ ಪರಿಣಾಮ ಆಗುವ ಯಾವುದೇ ಭಯ ಬೇಡ. ಈ ಚುಚ್ಚುಮದ್ದು ಮಕ್ಕಳ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಸಂತಮೇರಿ ಶಾಲೆಯ ಪ್ರಾಥಮಿಕ ತರಗತಿಗಳಿಂದ ಆರಂಭಿಸಿ ೧೯೮೦ರ ತನಕ ಪ್ರೌಢ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಹಾಗೂ ಕಲಿಸಿದ ಶಿಕ್ಷಕರ ಅಪೂರ್ವ ಸಮ್ಮಿಲನವು ಕೋಟೆಶ್ವರದ ಸಹನಾ ಮಿನಿ ಸಭಾಂಗಣದಲ್ಲಿ ಜರಗಿತು. ತಮ್ಮ ಸಂಸಾರದೊಂದಿಗೆ ಬಹತೇಕ ಗುರುಶಿಷ್ಯರು ಈ ಪುನರ್ಮಿಲನ ೧೯೮೦ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ಸಭಾ ಕಾರ್ಯಕ್ರಮಕ್ಕೂ ಮುನ್ನ ತಮ್ಮ ಅಂದಿನ ವಿದ್ಯಾರ್ಥಿ ಜೀವನದಲ್ಲಿ ಜತೆಗಿದ್ದು ಅಕಾಲದಲ್ಲಿ ತಮ್ಮನ್ನು ಅಗಲಿರುವ ಸಹಪಾಠಿ ಹಾಗೂ ಶಿಕ್ಷಕರಿಗೆ ಮೌನ ಸ್ಮರಣೆಯ ಮೂಲಕ ಸಂತಾಪ ಸಲ್ಲಿಸಿದ ಗುರುಶಿಷ್ಯರು ತದ ನಂತರ ಅರಂಭಗೊಂಡ ಸಭಾ ಕಾರ್ಯಕ್ರಮದಲ್ಲಿ ಅಂದಿನ ಪ್ರಾಥಮಿಕ ಶಾಲೆಯ ಬೋಧಕರಾದ ನೆಲ್ಲಿ ಟೀಚರ್, ಜೋನ್, ಕೊಗ್ಗ ಮಾಸ್ತರ್ ಶೀನ ಸರ್ ಸಹಿತ ಪ್ರೌಡ ಶಾಲೆಯ ಅಧ್ಯಾಪಕರುಗಳಾದ ಸೂರ್ಯನಾರಾಯಣ ಶರ್ಮ, ಗಂಗಾಧರ ಐತಾಳ್, ಲೂವಿಸ್ ಫೆರ್ನಾಂಡಿಸ್, ವಾಲ್ಟರ್ ಡಿಸೋಜಾ, ಶಂಕರ್ ಶೆಟ್ಟಿ, ಶ್ಯಾಮ್ ಸುಂದರ್ ಅರೆ ಹೊಳೆ, ಝೀಟಾ ಟೀಚರ್ ಭಾಗವಹಿಸಿದ್ದರು. ಹಳೆ ವಿದ್ಯಾರ್ಥಿ ಹಾಗೂ ಇದೀಗ ಉಡುಪಿ ಮಹಿಳಾ ಕಾಲೇಜಿನಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇತಿಹಾಸ ಪ್ರಸಿದ್ದ ಕುಂದಾಪುರ ಸಮೀಪದ ಕಟ್ಕೆರೆ ಶ್ರೀ ಮಹಾದೇವಿ ಕಾಳಿಕಾಂಬಾ ಮತ್ತು ಸಪರಿವಾರ ದೈವಸ್ಥಾನದ ವಾರ್ಷಿಕ ಜಾತ್ರೆ ಸಕಲ ಧಾರ್ಮಿಕ ವಿಧಿವಿದಾನಗಳೊಂದಿಗೆ ಸಂಭ್ರಮ ಸಡಗರದೊಂದಿಗೆ ಜರುಗಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾಲುಹಬ್ಬದಲ್ಲಿ ಪಾಲ್ಗೊಂಡು ಹಣ್ಣುಕಾಯಿ ಸೇವೆ, ಹೂವು, ಕಾಲಚಕ್ರ ಕಾಣಿಕೆ ಒಪ್ಪಿಸಿದರು. ಆ.೨೬ರಂದು ರಾತ್ರಿ ಗೆಂಡ ಸೇವೆ ಸಾಂಗವಾಗಿ ನಡೆಯಿತು. ಜ.೨೭ರಂದು ಡಕ್ಕೆಬಲಿ, ತುಲಾಭಾರ ಸೇವೆ, ದೈವ ದರ್ಶನ ಜರುಗಿತು. ಕಟ್ಕೆರೆ ಪರಿಸರದ ಗ್ರಾಮಸ್ಥರು ಹಾಗೂ ದೂರದ ಊರುಗಳಲ್ಲಿ ನೆಲೆಸಿರುವ ಭಕ್ತರು ಶ್ರೀದೇವಿಗೆ ವಿಶೇಷ ಪೂಜೆ, ವಾರ್ಷಿಕ ಸೇವೆ, ಹರಕೆ ಸಲ್ಲಿಸಿದರು. ಜಾತ್ರೆಯ ಅಂಗವಾಗಿ ಜ. ೨೬ರಂದು ರಾತ್ರಿ ಸ್ಥಳೀಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕರುನಾಡ ಗೆಳೆಯರು – ಕೋಟೇಶ್ವರ ಇವರಿಂದ ಸಾಮಾಜಿಕ ನಗೆ ನಾಟಕ : ಎಂತ ಇತ್ತ್ ಕಾಣ್ಕ ಮತ್ತು ಜ. ೨೭ರಂದು ರಾತ್ರಿ ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳದವರಿಂದ ಯಕ್ಷಗಾನ ಬಯಲಾಟ ಸೇವೆ ನಡೆಯಿತು. ಜಾತ್ರೆಯಲ್ಲಿ ನೂಕುನುಗ್ಗಲು ಆಗದಂತೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪರಿವರ್ತನೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವಾಗ ಇಂದಿನ ದಿನಕ್ಕೆ ಹೊಂದಿಕೊಂಡು ಮುನ್ನಡೆಯುವ ಅಗತ್ಯವಿದೆ. ಕ್ಯಾಶ್‌ಲೆಸ್ ವ್ಯವಹಾರ ಸುರಕ್ಷತೆಯ ದೃಷ್ಠಿಯಿಂದ ಉಪಯುಕ್ತವಾಗಿದ್ದು ವೇಗವಾಗಿ ಜನಮನ್ನಣೆಗಳಿಸುತ್ತಿದೆ. ಆದುದರಿಂದ ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಡಿಜಿಟಲ್ ಬ್ಯಾಂಕಿಂಗ್ ವ್ಯವಹಾರ ಅನಿವಾರ್ಯವಾಗಲಿದೆ ಎಂದು ಕೆನರಾ ಬ್ಯಾಂಕ್ ಕುಂದಾಪುರ ಶಾಖೆಯ ಚೀಫ್ ಮೆನೇಜರ್ ಮ್ಯಾಕ್ಸಿಮ್ ಕ್ಯಾಸ್ತಲಿನಾ ಹೇಳಿದರು. ಅವರು ಕುಂದಾಪುರ ಭಂಡಾರ್‌ಕಾರ‍್ಸ್ ಕಾಲೇಜು ಹಾಗೂ ಹಳೆ ವಿದ್ಯಾರ್ಥಿ ಸಂಘ ಮತ್ತು ಕೆನರಾ ಬ್ಯಾಂಕ್ ಕುಂದಾಪುರ ಶಾಖೆ ಆಶ್ರಯದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆದ ಡಿಜಿಟಲ್ ಬ್ಯಾಂಕಿಂಗ್ ಮಾಹಿತಿ ಕಾರ್ಯಗಾರ ಉದ್ಘಾಟಿಸಿ, ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಶನ್‌ನ ಆಡಳಿತಾಧಿಕಾರಿ ಡಾ. ಹೆಚ್. ಶಾಂತಾರಾಮ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಭಂಡಾರ್‌ಕಾರ‍್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಪಿ. ನಾರಾಯಣ ಶೆಟ್ಟಿ, ಭಂಡಾರ್‌ಕಾರ‍್ಸ್ ಪ. ಪೂ. ಕಾಲೇಜಿನ ಪ್ರಾಂಶುಪಾಲ ಪ್ರೋ. ಜಿ.ಎಂ. ಗೊಂಡ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಕೆನರಾ ಬ್ಯಾಂಕ್‌ನ ಅತುಲ್ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾಗೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಗಣರಾಜ್ಯೋತ್ಸವ ಆಚರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಕುಸುಮಾ ಫೌಂಡೇಶನ್ ಮೂಲಕ ಮುಂಬೈ ಉದ್ಯಮಿ ಲಕ್ಷ್ಮಣ ಪೂಜಾರಿ ಸುಮಾರು ೧.೫ಲಕ್ಷ ರೂ. ವೆಚ್ಚದಲ್ಲಿ ಈ ಶಾಲೆಗೆ ನಿರ್ಮಿಸಿಕೊಟ್ಟ ಎರಡು ತರಗತಿ ಕೋಣೆಗಳನ್ನು ಸುಂದರ ದೇವಾಡಿಗ, ಹಳಗೇರಿ ಕೆಳಾಮನೆ ಅಬ್ಬಕ್ಕ ಶೆಟ್ಟಿ ಸ್ಮರಣಾರ್ಥ ಮಕ್ಕಳು ಸುಮಾರು ೧.೫ಲಕ್ಷ ರೂ. ವೆಚ್ಚದಲ್ಲಿ ಕೊಡುಗೆಯಾಗಿ ನೀಡಿದ ಸುಸಜ್ಜಿತ ಗ್ರಂಥಾಲಯವನ್ನು ಪ್ರಭಾಕರ ಶೆಟ್ಟಿ ಮತ್ತು ವಿಲಾಸಿನಿ ಶೆಟ್ಟಿ ದಂಪತಿಗಳು ಹಾಗೂ ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ಒದಗಿಸಲು ಮಾಡಿದ ಕಂಪ್ಯೂಟರ್ ಲ್ಯಾಬ್‌ನ್ನು ಕಿರಿಮಂಜೇಶ್ವರ ಗ್ರಾಪಂ ಸದಸ್ಯ ಈಶ್ವರ ದೇವಾಡಿಗ ಶಾಲೆಗೆ ಹಸ್ತಾಂತರಿಸಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ನಾಗೂರು ಕುಸುಮಾ ಫೌಂಡೇಶನ್ ಆಡಳಿತ ನಿರ್ದೇಶಕ ನಳಿನ್ ಕುಮಾರ್ ಶೆಟ್ಟಿ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಸರ್ಕಾರದ ಮಾನದಂಡ ಹಾಗೂ ಪಾಲಕರ ಆಂಗ್ಲ ವ್ಯಾಮೋಹದಿಂದ ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಸ್ಥಿತಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ನೂತನ ಅಧ್ಯಕ್ಷರಾಗಿ ಶ್ರೀ ಗುರುಕೃಪಾ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಮಾಲಕ ಶ್ರೀಧರ ಸುವರ್ಣ ಆಯ್ಕೆಯಾಗಿದ್ದಾರೆ. ಜೇಸಿಐ ಕುಂದಾಪುರ ಸಿಟಿಯ ಜ್ಯೂ. ಜೇಸಿ ಅಧ್ಯಕ್ಷರಾಗಿ, ವಿವಿಧ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಕಲಾಕ್ಷೇತ್ರ ಕುಂದಾಪುರ, ರೋಟರಿ ಕ್ಲಬ್ ಕುಂದಾಪುರ, ರೋಟರ‍್ಯಾಕ್ಟ್ ವೆಲ್‌ಫೇರ್ ಟ್ರಸ್ಟ್ ಕುಂದಾಪುರ ಮೊದಲಾದ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಂಜುನಾಥ ಕಾಮತ್(ನಿಕಟಪೂರ್ವಾಧ್ಯಕ್ಷ), ನಾಗೇಶ್ ನಾವಡ, ಯು. ರಾಘವೇಂದ್ರ ಭಟ್, ಬಿಂದು ತಂಗಪ್ಪನ್, ದಿನೇಶ್ ಕುಂದರ್, ರಾಘವೇಂದ್ರ(ಉಪಾಧ್ಯಕ್ಷರು), ಪ್ರಶಾಂತ ಹವಾಲ್ದಾರ್(ಕಾರ್ಯದರ್ಶಿ), ರಾಘವೇಂದ್ರ ಕೆ.ಸಿ.(ಜತೆ ಕಾರ್ಯದರ್ಶಿ), ವಿಜಯ ಭಂಡಾರಿ(ಕೋಶಾಧಿಕಾರಿ), ರಿತೇಶ್ ಕಾಮತ್(ಬುಲೆಟಿನ್ ಎಡಿಟರ್), ಶೇಷಾದ್ರಿ ಉಪಾಧ್ಯಾ(ಕೋ ಎಡಿಟರ್), ಅಭಿಲಾಶ್, ರವಿ ಆಚಾರ್(ಕ್ರೀಡಾ ಸಮಿತಿ), ಪ್ರೀತಿ ತಂಗಪ್ಪನ್, ಸುನೀತಾ ಶ್ರೀಧರ(ಸಾಂಸ್ಕೃತಿಕ ಸಮಿತಿ), ದಿನೇಶ್ ಬಸ್ರೂರು, ಡುಂಡಿರಾಜ್(ರಕ್ತದಾನ ವಿಭಾಗ), ಸಂತೋಷ್ ಕೋಣಿ, ಗೌತಮ್ ನಾವಡ(ಮಾಧ್ಯಮ), ಗೀತಾ ಜೆ. ಸುವರ್ಣ(ಜೇಸಿರೆಟ್ ಅಧ್ಯಕ್ಷೆ), ಜಯಶೀಲ ಪೈ(ಜೀಸಿರೆಟ್ ಕೋ-ಆರ್ಡಿನೆಟರ್), ಪ್ರಜ್ವಲ್ ದೇವಾಡಿಗ(ಜ್ಯೂ.ಜೇಸಿ ಅಧ್ಯಕ್ಷ), ಮಿಥುನ್ ಸುವರ್ಣ(ಜ್ಯೂ.ಜೇಸಿ ಕೋ-ಆರ್ಡಿನೆಟರ್) ಆಯ್ಕೆಯಾದರು.
