Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ 2016ನೇ ಸಾಲಿನ ವಲಯ ಮಟ್ಟದ ಸಮಾಜ ಸೇವಾ ಸಾಧನೆಗಾಗಿ ಸಮಾಜ ಸೇವಕ, ಪ್ರಸ್ತುತ ಎಸ್.ಡಿ.ಎಂ.ಸಿ ಜಿಲ್ಲಾ ಸಮನ್ವಯ ಸಮಿತಿ ಅಧ್ಯಕ್ಷರಾಗಿರುವ ಎಂ.ಅಬ್ದುಲ್ ಸಲಾಂ ಚಿತ್ತೂರು ಅವರಿಗೆ ಪುತ್ತೂರಿನಲ್ಲಿ ನಡೆದ ಜೇಸಿಐ ಸಂಭ್ರಮದಲ್ಲಿ ಸಾಧನಶ್ರೀ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇವರು ಶಿಕ್ಷಣ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ಜೇಸಿಐನಂತಹ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಸಕ್ರೀಯವಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಕಟ್ಕರೆ ಬಾಲಾ ಯೇಸುವಿನ ಆಶ್ರಮದ ವಾರ್ಷಿಕ ಮಹಾ ಹಬ್ಬ ಶಿವಮೊಗ್ಗ ಧರ್ಮ ಪ್ರಾಂತ್ಯ ಬಿಶಪ್ ಅ.ವಂ.ಡಾ.ಫ್ರಾನ್ಸಿಸ್ ಸೆರಾವೊ ನೇತೃತ್ವದಲ್ಲಿ ಪವಿತ್ರ ಬಲಿದಾನದ ಮೂಲಕ ಆಚರಿಸಲಾಯಿತು. ಯೇಸುವಿನ ಪ್ರೀತಿ ಮಾಡುವುದೆಂದರೆ, ದೀನ ದಲಿತರ ಸೇವೆ ಮಾಡುವುದು.ಇತರನ್ನು ಪ್ರೀತಿಸಿ ಯೇಸುವಿನ ಶಿಸ್ಯರೆಂದು ಜಗತ್ತಿಗೆ ಸಾಬಿತು ಪಡಿಸುವ ಈ ಧ್ಯೇಯ ವಾಕ್ಯದಂತೆ ಪ್ರಪಂಚದಲ್ಲಿ ಹಲವರಿಗೆ ಉಣ್ಣಲು ಅನ್ನವಿಲ್ಲಾ, ಕೆವರಿಗಂತೂ ಉಣ್ಣಲು ಬಟ್ಟಲೂ ಕೂಡ ಇಲ್ಲ, ಅವರಿಗಾಗಿ ಸ್ಪಂದಿಸಿ, ಅವರಿಗೆ ನೆರವಾಗೋಣ ಎಂದು ಬಿಶಪ್ ಅ.ವಂ.ಡಾ.ಫ್ರಾನ್ಸಿಸ್ ಸೆರಾವೊ ಸಂದೇಶ ನೀಡಿದರು. ಇದೆ ಸಂದರ್ಭದಲ್ಲಿ ಅವರು ಕಾರ್ಮೆಲ್ ಯಾಜಕರು ಆರಂಭಿಸಿದ ‘ಕಾರ್ಮೆಲ್ ಎಪ್’ ನ್ನು ಬಿಡುಗಡೆ ಮಾಡಿದರು. ಕುಂದಾಪುರ ವಲಯದ ಪ್ರಧಾನ ಧರ್ಮಗುರು ವಂ. ಅನಿಲ್ ಡಿಸೋಜಾ ಕುಂದಾಪುರ ವಲಯದ ಪರವಾಗಿ ಬಿಶಪರ ಸನ್ಮಾನಿಸಿ. ಕಾರ್ಮೆಲ್ ಯಾಜಕರು ಪ್ರಕಟಿಸಿದ 2017 ರ ‘ಬೈಬಲ್ ಡೈರಿ’ಯನ್ನು ಉದ್ಘಾಟಿಸಿದರು. ಹಬ್ಬದಲ್ಲಿ ವಲಯದ ಹಲವಾರು ಧರ್ಮಗುರುಗಳು, ಅತಿಥಿ ಧರ್ಮಗುರುಗಳು, ಧರ್ಮ ಭಗಿನಿಯರು ಭಕ್ತಾಧಿಗಳು ಪಾಲ್ಗೊಂಡಿದ್ದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಡುಪಿ ಜಿಲ್ಲೆ ಹಾಗೂ ಕುಂದಾಪುರ ತಾಲೂಕಿನ ೨೫ ಗ್ರಾಮಗಳಲ್ಲಿ ವ್ಯಾಪಕವಾಗಿ ಹರಡಿರುವ ಅಂತರಗಂಗೆ ಕಳೆಯು ಸುಮಾರು ೪೦೦ರಿಂದ ೫೦೦ ಎಕರೆಯಷ್ಟು ಕೃಷಿ ಪ್ರದೇಶಕ್ಕೆ ಹಾನಿಯನ್ನುಂಟುಮಾಡುತ್ತಿದ್ದು, ರೈತರು ಕಾಯಕದಿಂದ ವಿಮುಖರಾಗುವಂತೆ ಮಾಡಿದೆ. ರೈತರಿಗೆ ತೊಡಕಾಗಿರುವ ಅಂತರಗಂಗೆಯನ್ನು ನಿರ್ಮೂಲನೆಗೊಳಿಸವಲ್ಲಿ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಆಗ್ರಹಿಸಿದ್ದಾರೆ. ಅವರು ಕುಂದಾಪುರ ಬಿಜೆಪಿ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ನಿಧಾನವಾಗಿ ಹರಿಯುವ ಮತ್ತು ನಿಂತ ನೀರಿನಲ್ಲಿ ವ್ಯಾಪಕವಾಗಿ ಬೆಳೆಯುವ ಅಂತರಗಂಗೆ ನೀರಿನ ಹರಿವಿಕೆಯನ್ನೂ ಸ್ಥಗಿತಗೊಳಿಸುತ್ತದೆ. ಬಳಿಕ ನೀರಿನ ಮೇಲ್ಮೈಯನ್ನೂ ಆವರಿಸಿಕೊಂಡು ಒತ್ತಾದ ಪದರವನ್ನು ನಿರ್ಮಿಸಿ ಜಲಚರಗಳು ಹಾಗೂ ಬೆಳೆಗೆ ಆಮ್ಲಜನಕ ಪೂರೈಕೆಯಾಗದಂತೆ ಮಾಡಿ ಬೆಳೆಯನ್ನು ಕುಂಠಿತಗೊಳಿಸುತ್ತದೆ ಎಂದರು. ಈ ಹಿಂದೆ ಅಂತರಗಂಗೆ ಬೆಳೆಯುವ ಪ್ರದೇಶಕ್ಕೆ ಭೇಟಿ ನೀಡಿದ್ದ ನಿವೃತ್ತ ಹಿರಿಯ ಭೂವಿಜ್ಞಾನಿ ಎನ್. ರಂಗನಾಥ್, ಅಂತರಗಂಗೆಯ ಹರಡುವಿಕೆಯಿಂದ ಸುತ್ತಲಿನ ಕೃಷಿ ಭೂಮಿಗೆ ಹಾನಿಯಾಗುವ ಬಗ್ಗೆ ಸಮಗ್ರ ವರದಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜಪಾನ್ ಶೋಟೊಕಾನ್ ಕರಾಟೆ – ಡೂ ಕನ್ನಿನ್‌ಜುಕು ಅವರು ನಡೆಸಿದ ಕರ್ನಾಟಕ ರಾಜ್ಯ ಮಟ್ಟದ ಮುಕ್ತ ಕರಾಟೆ ಸ್ಪರ್ಧೆಯಲ್ಲಿ ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಕೋಡಿಯ ವಿದಾರ್ಥಿಗಳು 1 ಚಿನ್ನ , 9 ಬೆಳ್ಳಿ ಮತ್ತು 11 ಕಂಚಿನ ಪದಕ ಪಡೆದಿರುತ್ತಾರೆ. ಇವರಿಗೆ ಶಾಲೆಯ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮಹಮ್ಮೂದ್ , ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿಸೋಜ , ಕರಾಟೆ ಶಿಕ್ಷಕರಾದ ಶಮ್‌ಶುದ್ದೀನ್ ಎಚ್ ಶೇಖ್ ಹಾಗೂ ಎಲ್ಲಾ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಪಂಚವರ್ಣ ಯುವಕ ಮಂಡಲ ರಿ. ಕೋಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ, ಕಲಾಪೀಠ ಕೋಟ ರಿ. ಇವರಿಂದ ಗುಂಡ್ಮಿ ಪಿ.ಜಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಪಾವನ ರತ್ನ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಸಾಸ್ತಾನ ಐರೋಡಿಯ ತಾಲೂಕು ಪಂಚಾಯತ್ ಸದಸ್ಯೆ ಜ್ಯೋತಿ ಉದಯ್ ಕುಮಾರ್ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿ ಹಿಂದೆ ಬರೇ ಯಕ್ಷಗಾನವನ್ನು ಮೇಳಗಳ ತಿರುಗಾಟದಲ್ಲಿ ನೋಡುತ್ತಿದ್ದೇವು ಆದರೆ ಅದು ಇಂದು ಯುವ ಯಕ್ಷ ಕುಡಿಗಳಿಂದ ನೋಡುತ್ತಿರುವುದು ಮುಂದಿನ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ. ಯಕ್ಷಗಾನ ಉಳಿಸಿ ಬೇಳೆಸುವಲ್ಲಿ ಯುವಕರ ಪಾತ್ರ ಗಣನೀಯವಾದದ್ದು ಈ ನಿಟ್ಟಿನಲ್ಲಿ ಗುರುಗಳ ಪ್ರೇರಣೆಯೊಂದಿಗೆ ಯಕ್ಷಗಾನದ ಸದಭಿರುಚಿಯನ್ನು ತಮ್ಮ ರಕ್ತದಲ್ಲಿ ಮೈಗೂಡಿಸಿ ಕೊಂಡಿದ್ದು ಪ್ರಶಂಸನೀಯ.ಈ ಕಾರ್ಯ ನಿರಂತರವಾಗಿ ನೆಡೆಯುವಂತಾಗಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪಿ.ಜಿ. ಹಿರಿಯ ಪ್ರಾಥಮಿಕ ಶಾಲೆಯ ಆಡಳಿತಾಧಿಕಾರಿ ನಾಗೇಶ ಮೈಯ, ಹಾಗೂ ಯಕ್ಷಗಾನ ಹಿತ ಚಿಂತಕಾರದ ಗುಂಡ್ಮಿಯ ವೆಂಕಟರಮಣ ನಾವುಡರು ,ಅಧ್ಯಕ್ಷತೆಯನ್ನು ಪಂಚವರ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ : ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಪೊಲೀಸರೊಂದಿಗೆ ಮುಕ್ತವಾಗಿ ಹಂಚಿಕೊಂಡಾಗ ಸಾರ್ವಜನಿಕರು ಹಾಗೂ ಪೊಲೀಸರ ನಡುವಿನ ಸಂಬಂಧವನ್ನು ಉತ್ತಮಗೊಳಿಸಲು ಸಾಧ್ಯವಾಗುತ್ತದೆ. ಪೊಲೀಸ್ ಠಾಣೆಗೆ ಬರಲು ಯಾವುದೇ ಅಂಜಿಕೆ ಪಡದೆ ತಮಗಾಗುತ್ತಿರುವ ಅನ್ಯಾಯವನ್ನು ಸಂಬಂಧಪಟ್ಟ ಠಾಣಾಧಿಕಾರಿಯವರಿಗೆ ಲಿಖಿತವಾಗಿ ನೀಡಬೇಕು. ವಿದ್ಯಾರ್ಥಿಗಳು ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದುಕೊಂಡು, ಪೊಲೀಸ್ ಇಲಾಖೆಯಂದಿಗೆ ಸಹಕರಿಸಿದಾಗ ಸಮಾಜವನ್ನು ಅಪರಾಧಮುಕ್ತ ಸಮಾಜವನ್ನಾಗಿ ಮಾಡಲು ಸಾಧ್ಯವಾಗುತ್ತದೆ ಎಂದು ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುಬ್ಬಣ್ಣ ಹೇಳಿದರು. ಅವರು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಜರಗಿದ ‘ತೆರೆದ ಮನೆ’ ಕಾರ್ಯಕ್ರಮದಲ್ಲಿ ಮರವಂತೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಾತನಾಡಿದರು. ಸಾರ್ವಜನಿಕ ಸ್ಥಳದಲ್ಲಿ ಬೀಡಿ ಸಿಗರೇಟ್ ಸೇವನೆ ಶಿಕ್ಷಾರ್ಹ ಅಪರಾಧ. ಮಟ್ಕಾ, ಜುಗಾರಿ, ಕೋಳಿ ಅಂಕದ ಆಟ, ಬೆಟ್ಟಿಂಗ್ ಮೊದಲಾದವುಗಳು ಕಾನೂನಿನ್ವಯ ಅಪರಾಧ. ಇಂತಹ ಪ್ರಕರಣಗಳು ಅಥವಾ ಯಾವುದೇ ಅಕ್ರಮ ಚಟುವಟಿಕೆ ನಡೆಯುತ್ತಿದ್ದರೆ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಶಾಲೆಗಳಲ್ಲಿ ಅಥವಾ ಸಾರ್ವಜನಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ, ಜೆ.ಸಿ.ಐ ವೈಬ್ರೆಂಟ್ ಸಾಸ್ತಾನ, ಬಿ.ಡಿ.ಶೆಟ್ಟಿ ಕಾಲೇಜು ಮಾಬುಕಳ ಇವರ ಸಂಯುಕ್ತ ಆಶ್ರಯದಲ್ಲಿ ಮಾಬುಕಳ ಬಿ.ಡಿ.ಶೆಟ್ಟಿ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಜರುಗಿತು. ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀ ಶ್ರೀನಿವಾಸ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ, ಯುವ ಜನತೆ ಈ ದೇಶದ ದೊಡ್ಡ ಆಸ್ತಿ. ಪ್ರಜ್ಞಾವಂತ ಯುವ ಸಮೂಹದಿಂದ ದೇಶದ ಅಭಿವೃದ್ಧಿ ಸಾಧ್ಯವಿದೆ. ಯುವಕರು ನಿರಂತರ ಕ್ರಿಯಾಶೀಲರಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷರೆ ವಹಿಸಿ ವಿವೇಕನಾಂದರ ೧೫೪ನೇ ಜನ್ಮ ದಿನವಾದ ಈ ದಿನ ವಿವೇಕನಾಂದರ ಪಂಚ ತತ್ವಗಳಾದ, ಆತ್ಮವಲೋಕನ, ಆತ್ಮಾವಲಂಬನೆ, ಆತ್ಮಸಂಯಮ, ಆತ್ಮಭಿಮಾನ ಮತ್ತು ಆತ್ಮವಿಮರ್ಶೆಗಳ ಮೂಲಕ ವಿದ್ಯಾರ್ಥಿಗಳು ವಿವೇಕಾನಂದರ ತತ್ವ ಆದರ್ಶಗಳನ್ನು ಪಾಲಿಸಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರವೀಶ್ಚಂದ್ರ ಶೆಟ್ಟಿ, ಸಹಾಯಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಹಿಂದಿನ ಕಾಲದಲ್ಲಿ ಮಕ್ಕಳಿಗೆ ಶಿಕ್ಷಣ ಕಲಿಸಿದರೆ ಅವರು ಚಾರಿತ್ರ್ಯ ಹೀನರಾಗುತ್ತಾರೆ ಎಂಬ ಮನಸ್ಥಿತಿ ಇತ್ತು. ಆದರೆ ಇಂದು ಸಮಾಜ ಬದಲಾಗಿದೆ, ಯಾವುದು ಚಾರಿತ್ರ್ಯವನ್ನು ದೊರಕಿಸಿಕೊಡುತ್ತದೆಯೋ ಅದೇ ನಿಜವಾದ ಶಿಕ್ಷಣವಾಗಿದೆ ಎಂದು ಯಳಜಿತ್ ಶ್ರೀ ಸಿದ್ದಿವಿನಾಯಕ ಸಾಂಸ್ಕ್ರತಿಕ ಪ್ರತಿಷ್ಟಾನದ ಸಂಚಾಲಕ ಮಂಗೇಶ್ ಶೆಣೈ ಅಭಿಪ್ರಾಯಪಟ್ಟರು. ಅವರು ಉಪ್ಪುಂದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸ್ವಾಮೀ ವಿವೇಕಾನಂದರ ೧೫೪ ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. ’ಉತ್ತಮನಾಗು-ಉಪಕಾರಿಯಾಗು’ ಇದು ವಿವೇಕಾನಂದರ ಮಾತಾಗಿದೆ. ವಿವೇಕಾನಂದರಿಗೆ ಯುವಕರೆಂದರೆ ಇಷ್ಟವಾಗಿತ್ತು. ಸಮರ್ಥ ಯುವಕರನ್ನು ನೀಡಿದರೆ ಏನನ್ನು ಬೇಕಾದರೂ ಸಾಧಿಸಬಲ್ಲೆ ಎಂದಿದ್ದರು. ಯುವಜನರಲ್ಲಿ ನಿಸ್ವಾರ್ಥತೆ, ಆಧ್ಯಾತ್ಮಿಕತೆ ಬೆಳೆಯಬೇಕು. ದೇಶದ ಬಗ್ಗೆ ಚಿಂತನೆ ಮಾಡುತ್ತಾ, ದೇಶಕ್ಕೆ ಯಾವುದೇ ಆಪತ್ತು ಎದುರಾದಾಗ ದೇಶದ ರಕ್ಷಣೆಗೆ ಎಲ್ಲರೂ ಒಂದಾಗಬೇಕುಂಬ ನೆಲೆಯಲ್ಲಿ ಅವರು ದೇಶದ ಯುವಕರಿಗೆ ಏಳೀ ಎದ್ದೇಳಿ, ಗುರಿ ಮುಟ್ಟುವತನಕ ನಿಲ್ಲದಿರಿ ಎನ್ನುವ ಸಂದೇಶ ರವಾನಿಸಿದ್ದರು. ಎಲ್ಲರಲ್ಲೂ ದೇಶಾಭಿಮಾನವನ್ನು ತಂದುಕೊಟ್ಟ ಸ್ವಾಮಿ ವಿವೇಕಾನಂದರು ನಿಜವಾಗಿಯೂ ಆಧ್ಯಾತ್ಮಿಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತನ್ನ ಮಗಳ ಮದುವೆ ಮಾಡಿಕೊಡಲು ನಿರಾಕರಿಸಿದ ತಾಯಿಗೆ ಹಲ್ಲೆ ನಡೆಸಿದ ಘಟನೆ ಕುಂದಾಪುರದ ದತ್ತಾತ್ರೇಯ ಅಪಾರ್ಟ್‌ಮೆಂಟ್‌ನಲ್ಲಿ ವರದಿಯಾಗಿದೆ. ಅಪಾರ್ಟ್‌ಮೆಂಟ್ ನಿವಾಸಿ ನಿತಿನ್ (28) ಹಲ್ಲೆ ನಡೆಸಿದ ಯುವಕ. ಸುಜಾತ ಗಾಣಿಗ (42) ಹಲ್ಲೆಗೆ ಒಳಗಾದ ಮಹಿಳೆ. ಕುಂದಾಪುರದ ಕಾರ್ಯಕ್ರಮವೊಂದಕ್ಕೆ ಮಗಳೊಂದಿಗೆ ತೆರಳಿದ್ದ ಸುಜಾತ, ತಾವು ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಪಾರ್ಟ್‌ಮೆಂಟ್ ಲಿಫ್ಟ್ ಮೂಲಕ ತೆರಳುತ್ತಿದ್ದ ವೇಳೆ ಏಕಾಏಕಿ ತಾಯಿ ಮತ್ತು ಮಗಳ ಹೊರಗೆಳೆದು ಥಳಿಸಿದ ಯುವಕ, ಮಹಿಳೆಗೆ ಹಲ್ಲೆಗೈದು ಆಸಿಡ್ ಹಾಕುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಹಲ್ಲೆ ನಡೆಸಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಮಹಿಳೆಯ ತಲೆ, ಮುಖ, ಹೊಟ್ಟೆಯ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಸುಜಾತಾ ಗಾಣಿಗ ಅವರ ಪತಿ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಆಕೆಯ ಮಗ ಮಣಿಪಾಲದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಮನೆಯಲ್ಲಿ ಸುಜಾತಾ ಗಾಣಿಗ ಹಾಗೂ ಆಕೆಯ ಮಗಳು ಇಬ್ಬರೇ ವಾಸಿಸುತ್ತಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಗ್ರಾಮೀಣ ಪ್ರದೇಶವಾದ ಬೈಂದೂರಿನಲ್ಲಿ ಹವ್ಯಾಸಿ ಕಲಾವಿದರ ಕೂಡುವಿಕೆಯಿಂದ ಆರಂಭಗೊಂಡ ಲಾವಣ್ಯ ಬೈಂದೂರು ಕಲಾ ಸಂಸ್ಥೆಯ 40ನೇ ವರ್ಷದ ಸಂಭ್ರಮದಲ್ಲಿದ್ದು, ಜನವರಿ 27ರಿಂದ ಫೆಬ್ರವರಿ 5ರ ವರೆಗೆ ರಂಗ ಲಾವಣ್ಯ 2017 – ಕಲಾಮಹೋತ್ಸವ ಹತ್ತು ದಿನಗಳ ಕಾರ್ಯಕ್ರಮ ಬೈಂದೂರಿನ ಶಾರದಾ ವೇದಿಕೆಯಲ್ಲಿ ಜರುಗಲಿದೆ. ಬೈಂದೂರಿನ ಲಾವಣ್ಯ ರಂಗಮನೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಲಾವಣ್ಯ ಬೈಂದೂರು ಅಧ್ಯಕ್ಷ ಗಿರೀಶ್ ಬೈಂದೂರು ಮಾಹಿತಿ ನೀಡಿದರು. ಲಾವಣ್ಯ ಸಂಸ್ಥೆಯಲ್ಲಿ ಈವರೆಗೆ 80ಕ್ಕೂ ಅಧಿಕ ನಾಟಕ ರಚನೆಗೊಂಡು 800ಕ್ಕೂ ಅಧಿಕ ಪ್ರದರ್ಶನ ಕಂಡಿದೆ. ಖ್ಯಾತ ರಂಗ ನಿರ್ದೇಶಕರಾದ ಸೀತಾರಾಮ್ ಶೆಟ್ಟಿ ಕೂರಾಡಿ, ಸುರೇಶ್ ಆನಗಳ್ಳಿ, ರಾಜೇಂದ್ರ ಕಾರಂತ ಸೇರಿದಂತೆ ಹಲವು ಖ್ಯಾತನಾಮರಿಂದ ನಾಟಕ ನಿರ್ದೇಶನ, ರಾಜ್ಯ ಮಟ್ಟದ 23 ನಾಟಕ ಸ್ವರ್ಧೆಗಳಲ್ಲಿ ಭಾಗವಹಿಸಿ 125ಕ್ಕೂ ಹೆಚ್ಚು ಬಹುಮಾನ, ಹಲವು ನಾಟಕೋತ್ಸವ, ನಾಟಕ ಸ್ವರ್ಧೆ, ಮಕ್ಕಳ ನಾಟಕ ಪ್ರಸ್ತುತಿ, ರಂಗ ತರಬೇತಿ ಮುಂತಾದವುಗಳೊಂದಿಗೆ ಸಾಮಾಜಿಕ ಕಾರ್ಯದಲ್ಲಿಯೂ ಸಂಸ್ಥೆ ತೊಡಗಿಕೊಂಡಿದ್ದು ಬೈಂದೂರಿನ…

Read More