ಮಾಬುಕಳ: ರಾಷ್ಟ್ರೀಯ ಯುವ ದಿನಾಚರಣೆ

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ ಕುಂದಾಪುರ, ಅಭಿಯೋಗ ಇಲಾಖೆ ಕುಂದಾಪುರ, ಜೆ.ಸಿ.ಐ ವೈಬ್ರೆಂಟ್ ಸಾಸ್ತಾನ, ಬಿ.ಡಿ.ಶೆಟ್ಟಿ ಕಾಲೇಜು ಮಾಬುಕಳ ಇವರ ಸಂಯುಕ್ತ ಆಶ್ರಯದಲ್ಲಿ ಮಾಬುಕಳ ಬಿ.ಡಿ.ಶೆಟ್ಟಿ ಕಾಲೇಜು ಸಭಾಂಗಣದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಜರುಗಿತು.

Call us

Click Here

ಹಿರಿಯ ಸಿವಿಲ್ ನ್ಯಾಯಾಧೀಶ ಶ್ರೀ ಶ್ರೀನಿವಾಸ್ ಸುವರ್ಣ ಕಾರ್ಯಕ್ರಮ ಉದ್ಘಾಟಿಸಿ, ಯುವ ಜನತೆ ಈ ದೇಶದ ದೊಡ್ಡ ಆಸ್ತಿ. ಪ್ರಜ್ಞಾವಂತ ಯುವ ಸಮೂಹದಿಂದ ದೇಶದ ಅಭಿವೃದ್ಧಿ ಸಾಧ್ಯವಿದೆ. ಯುವಕರು ನಿರಂತರ ಕ್ರಿಯಾಶೀಲರಾಗುವ ಮೂಲಕ ಸಮಾಜಕ್ಕೆ ಮಾದರಿಯಾಗಿರಬೇಕು ಎಂದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷರೆ ವಹಿಸಿ ವಿವೇಕನಾಂದರ ೧೫೪ನೇ ಜನ್ಮ ದಿನವಾದ ಈ ದಿನ ವಿವೇಕನಾಂದರ ಪಂಚ ತತ್ವಗಳಾದ, ಆತ್ಮವಲೋಕನ, ಆತ್ಮಾವಲಂಬನೆ, ಆತ್ಮಸಂಯಮ, ಆತ್ಮಭಿಮಾನ ಮತ್ತು ಆತ್ಮವಿಮರ್ಶೆಗಳ ಮೂಲಕ ವಿದ್ಯಾರ್ಥಿಗಳು ವಿವೇಕಾನಂದರ ತತ್ವ ಆದರ್ಶಗಳನ್ನು ಪಾಲಿಸಬೇಕೆಂದು ವಿದ್ಯಾರ್ಥಿಗಳಿಗೆ ಹೇಳಿದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರವೀಶ್ಚಂದ್ರ ಶೆಟ್ಟಿ, ಸಹಾಯಕ ಅಭಿಯೋಜಕ ಸಂದೇಶ ಭಂಡಾರಿ, ಮಾಬುಕಳ ಬಿ.ಡಿ.ಶೆಟ್ಟಿ ಕಾಲೇಜಿನ ಪ್ರಾಂಶುಪಾಲ ಡಾ|| ಎಚ್.ವಿ.ಸೋಮಯಾಜಿ, ಜೆ.ಸಿ.ಐ ವೈಬ್ರೆಂಟ್ ಸಾಸ್ತಾನದ ಅಧ್ಯಕ್ಷ ದಿನೇಶ ಭಾಂದವ್ಯ, ಚೇತನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಣೇಶ ಜಿ. ಉಪಸ್ಥಿತರಿದ್ದರು.

ಕುಂದಾಪುರದ ನ್ಯಾಯವಾದಿ ಹಾಗೂ ಜೆ.ಸಿ.ಐ ಕಾನೂನು ಸಲಹೆಗಾರರಾದ ಶ್ರೀಧರ ಪಿ.ಎಸ್‌ರವರು ಮೂಲಭೂತ ಹಕ್ಕುಗಳು ಮತ್ತು ಸಮಾನತೆಯ ಹಕ್ಕುಗಳ ಬಗ್ಗೆ ಉಪನ್ಯಾಸ ನೀಡಿದರು. ವಿದ್ಯಾರ್ಥಿನಿ ಸೃಜನಿ ಕಾರ್ಯಕ್ರಮ ನಿರೂಪಿಸಿ, ಅಭಿಜಿತ್ ವಂದಿಸಿದರು.

Leave a Reply