Author: ನ್ಯೂಸ್ ಬ್ಯೂರೋ

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಪ್ರಾಯೋಜಕತ್ವದಲ್ಲಿ ಮಹಮ್ಮದ್ ಇಕ್ಬಾಲ್ ವಂಡ್ಸೆ ಇವರು ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿಗೆ ಕೊಡುಗೆಯಾಗಿ ನೀಡಿದ ಇ-ಲರ್ನಿಂಗ್  ಕಿಟ್ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಕಾರ್ಯಕ್ರಮವನ್ನು ರೋಟರಿ 3180 ಇದರ ರೋಟರಿ ಜಿಲ್ಲಾ ಗವರ್ನರ್ ಭರತೇಶ್ ಅಧಿರಾಜ್ ಉದ್ಘಾಟಿಸಿದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಸತೀಶ್ ಎನ್. ಶೇರೆಗಾರ್, ಜೋನಲ್ ಲೆಫ್ಟಿನೆಂಟ್ ಕೊಡ್ಲಾಡಿ  ಸುಭಾಶ್ಚಂದ್ರ ಶೆಟ್ಟಿ, ರೋಟರಿ ಜಿಲ್ಲಾ ಪ್ರಥಮ ಮಹಿಳೆ ಜಯಶ್ರೀ ಭರತೇಶ್ ಅಧಿರಾಜ್, ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಸಂತೋಷ ಕೋಣಿ, ಗ್ರಾಮ ಪಂಚಾಯತ್ ಅಧ್ಯಕ್ಷ  ಉದಯಕುಮಾರ್ ಶೆಟ್ಟಿ, ಶಾಲೆಯ ಶತಮಾನೋತ್ಸವ ಸಮಿತಿ ಅಧ್ಯಕ್ಷ ಕರುಣಾಕರ ಶೆಟ್ಟಿ ಹರ್ಜಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಚಂದ್ರ ರಾಯಪ್ಪನಡಿ, ಮಾರಣಕಟ್ಟೆ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅನುವಂಸಿಕ  ಮೊಕ್ತೇಸರ ಸೀತಾರಾಮ ಶೆಟ್ಟಿ, ಗ್ರಾ.ಪಂ.ಸದಸ್ಯರಾದ ಉದಯ ಕೆ.ನಾಯ್ಕ, ಸಿಂಗಾರಿ ಪೂಜಾರಿ, ಶಾಲೆಯ ಮುಖ್ಯೋಪಾಧ್ಯಾಯಿನಿ ಮೋಹಿನಿ ಬಾ, ದಾನಿ ರಫೀಕ್ ಸಾಹೇಬ್ ವಂಡ್ಸೆ ಉಪಸ್ಥಿತರಿದ್ದರು. ಶಾಲೆಯ ದೈಹಿಕ…

Read More

ಕುಂದಾಪುರ: ವಿವಾಹ ವಾರ್ಷಿಕೋತ್ಸವವನ್ನು ಸಂಭ್ರಮದಿಂದ ಆಚರಿಸುವುದು, ಮಡದಿಗೆ ವಿಶೇಷವಾದ ಉಡುಗೊರೆ ನೀಡುವುದು ಇವೆಲ್ಲಾ ಸಾಮಾನ್ಯವಾಗಿ ನಡೆದೇ ನಡೆಯುತ್ತೆ. ಆದರೆ ಇಲ್ಲೊಬ್ಬ ಪತ್ರಿಕಾ ವಿತರಕರು ತಮ್ಮ 25ನೇ ವಿವಾಹ ವಾರ್ಷಿಕೋತ್ಸವದ ಸವಿ ನೆನಪಿಗಾಗಿ ಸಾರ್ವಜನಿಕರಿಗೆ ಉಚಿತ ಪತ್ರಿಕೆ ನೀಡಿ ಓದುವ ಹವ್ಯಾಸ ಬೆಳೆಸಲು ಮುಂದಾದದ್ದು ಮಾತ್ರ ವಿಶೇಷ ಸ್ಪಲ್ಪ ವಿಶೇಷ ಅಂದೆನಿಸುತ್ತೆ. [quote font_size=”16″ bgcolor=”#ffffff” bcolor=”#dd890b” arrow=”yes” align=”right”]* ಆಧುನಿಕ ಯುಗದಲ್ಲಿ ಪತ್ರಿಕೆ ಓದುಗರ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಉಚಿತ ಪತ್ರಿಕೆ ಓದಲು ಅವಕಾಶ ಮಾಡಿಕೊಟ್ಟಿರುವುದು ಓದುವ ಹವ್ಯಾಸವನ್ನು ಉತ್ತೇಜಿಸಿದಂತಾಗುತ್ತದೆ. ಮಿನಿವಿಧಾನಸೌಧಕ್ಕೆ ಬೇರೆ ಕೆಲಸ ನಿಮಿತ್ತ ಬರುವ ಸಾರ್ವಜನಿಕರು, ಕೆಲಸ ಆಗುವ ತನಕ ಸಮ್ಮನೆ ಸಮಯ ಹಾಳು ಮಾಡುವುದಕ್ಕಿಂತ ಪತ್ರಿಕೆಗಳನ್ನ ಓದುವ ಮೂಲಕ ಪ್ರಪಂಚದ ವಿದ್ಯಮಾನ ತಿಳಿಯಲು ಸಹಕಾರಿಗುತ್ತದೆ. ಗ್ರಾಹಕರಿಗೆ ಉಚಿತ ಪತ್ರಿಕೆ ಒದಗಿಸುತ್ತಿರುವ ಶಂಕರಾಚಾರ‍್ಯ ಪ್ರಯತ್ನ ಶ್ಲಾಘನೀಯ. ಅಶ್ವಥಿ ಎಸ್., ಎಸಿ ಕುಂದಾಪುರ.[/quote] ಹೌದು. ಕುಂದಾಪುರದ ಪತ್ರಿಕಾ ವಿತರಕ ಶಂಕರಾಚಾರ‍್ಯ ಅವರು ತಮ್ಮ 25ನೇ ವಿವಾಹ ವಾರ್ಷಿಕೋತ್ಸವದ…

Read More

ಕುಂದಾಪುರ: ಕಳೆದ ಸಾಲಿನಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕ್ ಪಂಚಾಯಿತಿ ಚುವಾಣೆಯಲ್ಲಿ ಸ್ಪರ್ಧಿಸಿ ಚುನಾವಣೆ ಖರ್ಚುವೆಚ್ಚದ ಲೆಕ್ಕ ನೀಡದ ಮೂವರನ್ನು ರಾಜ್ಯ ಚುನಾವಣೆ ಆಯೋಗ ಆರು ವರ್ಷ ಚುನಾವಣೆಗೆ ಸ್ಪರ್ಧಿಸದಂತೆ ಅನರ್ಹಗೊಳಿಸಿ ಆದೇಶ ಹೊರಡಿಸಿದೆ. ಕಳೆದ ಜಿಪಂ ಚುನಾವಣೆಯಲ್ಲಿ ಸ್ಪರ್ಧಿಸಿದ ಅಭ್ಯರ್ಥಿ ಬೆಳಂಜೆ ಗ್ರಾಮ ನಿವಾಸಿ ಶಿವಾನಂದ ಶೆಟ್ಟಿ, ಕುಂದಾಪುರ ತಾಲೂಕ್ ಪಂಚಾಯಿತಿ ೦೮ ಕಾಲ್ತೋಡು ತಾಪಂ. ಸ್ಥಾನಕ್ಕೆ ಸ್ಪರ್ಧಿಸಿದ ಅಭ್ಯರ್ಥಿ ಮೈನ್ಮಕ್ಕಿ ಕಾಲ್ತೋಡು ಗ್ರಾಮ ನಿವಾಸಿ ಅಂಬಿಕಾ ನಾಯಕ್ ಮತ್ತು ಬೆಳ್ವೆ ತಾಲೂಕ್ ಪಂಚಾಯಿತಿ ಚುನಾವಣೆ ಕ್ಷೇತ್ರದಿಂದ ಸ್ಪರ್ಧಿಸಿದ ಯಳತೂರು ಗುಡ್ಡಿಮನೆ ಅರಣು ಹೆಗ್ಗೆ ಅನರ್ಹಗೊಂಡಿದ್ದಾರೆ ಎಂದು ಕುಂದಾಪುರ ತಹಸೀಲ್ದಾರ್ ಗಾಯತ್ರಿ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಕುಂದಾಪುರ: ಸಂತ್ ಪಿಯುಸ್ ದೇವಾಲಯ ಪಿಯುಸ್ ನಗರ್ ಇದರ ತೆರಾಲಿ ಹಬ್ಬ ಹಾಗೂ ಭಾರತಿಯ ಕೆಥೋಲಿಕ ಯುವ ಸಂಚಾಲನ ಪಿಯುಸ್ ನಗರ ಇದರ 46ನೇ ವಾರ್ಷಿಕೋತ್ಸವ ಸಮಾರಂಭ ಪಿಯುಸ್ ನಗರ ಇಗರ್ಜಿ ವಠಾರದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಪಿಯುಸ್ ನಗರ ಇಗರ್ಜಿಯ ಧರ್ಮ ಗುರುಗಳಾದ ಜೋನ್ ಆಲ್ಪ್ರೆಡ್ ಒರ್ಬೊಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ವಲಯದ ವಿಗಾರ್‌ವಾರ್ ಅನಿಲ್ ಡಿಸೋಜ,ಸಾಸ್ತಾನ ಇಗರ್ಜಿಯ ಧರ್ಮಗುರುಗಳಾದ ಜೋನ್ ವಾಲ್ಟರ್ ಮೆಂಡೊನ್ಸಾ,ತಾಲೂಕು ಪಂಚಾಯತ್ ಸದಸ್ಸರಾದ ಮಂಜು ಬಿಲ್ಲವ, ಬಿಲಾಲ್ ಜುಮ್ಮಾ ಮಸ್ಜಿದ್ ಎಮ್.ಕೋಡಿ ಇದರ ಅಧ್ಯಕ್ಷರಾದ ಮಹಮದ್ ಅಲಿ ಸಾಹೇಬ್ ,ಸೆಂಟ್ ಆನ್ಸ್ ಕಾನ್ವೆಂಟ್ ಇದರ ಸುಫಿರಿಯರ್ ಸಿಸ್ಟರ್ ಲೋರೆನ್ಸಾ ,ಹಂಗಳೂರು ಗ್ರಾಮ ಪಂಚಾಯತ್ ಉಪಾಧ್ಯಾಕ್ಷರಾದ ಸ್ಟಿವನ್ ಡಿ’ಕೋಸ್ತಾ,ಪಾಲನಾ ಮಂಡಳಿ ಉಪಾಧ್ಯಾಕ್ಷರಾದ ವಿಲ್ಪ್ರೆಡ್ ಡಿ’ಸೋಜಾ ,ಪಾಲನಾ ಮಂಡಳಿ ಕಾರ್ಯದರ್ಶಿ ಲೀನಾ ತಾವ್ರೊ ಸಂಸ್ಧೆಯ ಸಲಹೆಗಾರರಾದ ಜೇಮ್ಸ್ ಡಿ’ಮೆಲ್ಲೊ ವೇದಿಕೆಯಲ್ಲಿ ಉಪಸ್ದಿತರಿದ್ದರು . ಇದೇ ಸಂದರ್ಭದಲ್ಲಿ ಸಮಾಜಸೇವಕ ಮಂಗಳೂರು ಫಾದರ್ ಮುಲ್ಲರ‍್ಸ್ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಡೇವಿಡ್.ವಿ…

Read More

ಬೈಂದೂರು: ಶಿರೂರು ಅಸೋಶಿಯೇಶನ್ ಇವರ ಸಹಭಾಗಿತ್ವದಲ್ಲಿ ಮಂಗಳೂರು ಅತ್ತಾವರದ ಕೆಎಂಸಿ ಆಸ್ಪತ್ರೆ ವೈದ್ಯಕೀಯ ತಂಡದವರಿಂದ ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜು ವಠಾರದಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಯಿತು. ಕೆ.ಎಂ.ಸಿ.ಯ ಕಾರ್ಯನಿರ್ವಾಹಣಾ ಅಧಿಕಾರಿ ಹರ್ಬರ್ಟ ಮೆರಿಯೋ ಪಿರಿಯರ್ ರೋಗಿಗಳ ಹೆಸರು ನೊಂದಣಿ ಮಾಡುವುದರ ಮೂಲಕ ಶಿಬಿರ ಉದ್ಘಾಟಿಸಿದರು. ಶಿಬಿರದಲ್ಲಿ ಕಿವಿ, ಮೂಗು, ಗಂಟಲು, ಕಣ್ಣಿನ ತಪಾಸಣೆ, ಮಕ್ಕಳ ವಿಭಾಗ, ಎಲುಬು, ಸ್ತ್ರೀರೋಗ ಹಾಗೂ ದ್ವನಿ, ಶ್ರವಣ ವಿಭಾಗಗಳಲ್ಲಿ ತಜ್ಞ ವೈದ್ಯರಿಂದ ತಪಾಸಣೆ ನಡೆಸಲಾಯಿತು. ಸಾಮಾನ್ಯ ರೋಗ ತಪಾಸಣಾ ವಿಭಾಗ ಸೇರಿ ಒಟ್ಟಿಗೆ ೫೬೮ ರೋಗಿಗಳನ್ನು ಪರೀಕ್ಷಿಸಿ ಸೂಕ್ತ ಸಲಹೆ ನೀಡಲಾಯಿತು. ಅಗತ್ಯವಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಹಸಿರು ಕಾರ್ಡ ನೀಡಲಾಯಿತು. ಶಿರೂರು ಅಸೋಸಿಯೇಶನ್ ಸದಸ್ಯ ಸೈಯ್ಯದ್ ಮಹ್ಮದ್ ಷಾ ಶಿರೂರು ಗ್ರಾಪಂ ಅಧ್ಯಕ್ಷೆ ದಿಲ್‌ಶಾದ್ ಬೇಗಂ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಿರೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ, ಉಪಪ್ರಾಂಶುಪಾಲ, ಸಿಬ್ಬಂದಿವರ್ಗ ಹಾಗೂ ಸ್ವಯಂಸೇವಕರಾಗಿ ಕರ್ತವ್ಯ ನಿರ್ವಹಿಸಿದ ವಿಧ್ಯಾರ್ಥಿಗಳ ಸಹಕಾರವನ್ನು ಶ್ಲಾಘಿಸಲಾಯಿತು. ಶಿರೂರು…

Read More

ಕುಂದಾಪುರ: ರಬ್ಬರ್‌ಗೆ ಆಮದು ಸುಂಕ ಏರಿಕೆ ಮಾಡಿ ಬೆಂಬಲ ಬೆಳೆ ನಿಗದಿಪಡಿಸುವಂತೆ ಒತ್ತಾಯಿಸಿ ತಾಲೂಕು ರಬ್ಬರ್ ಬೆಳೆಗಾರರ ಸಂಘ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು. ಕೋಟೇಶ್ವರದ ಯುವ ಮೆರಿಡಿಯನ್ ವಠಾರದಲ್ಲಿ ಬಿ ಎಸ್ ವೈ ಅವರನ್ನು ಭೇಟಿ ಮಾಡಿದ ತಾಲೂಕು ರಬ್ಬರ್ ಬೆಳೆಗಾರರ ನಿಯೋಗ ಮನವಿ ಸಲ್ಲಿಸಿತ್ತು. ಈ ಸಂದರ್ಭ ರಬ್ಬರ್ ಬೆಳೆಗಾರರ ಸಂಘದ ಅಧ್ಯಕ್ಷ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ, ಕಳೆದ ೨ ವರ್ಷದ ಹಿಂದಿದ್ದ ಕಿಲೋಗೆ ರೂ.240ರಷ್ಟಿದ್ದ ಧಾರಣೆ ಕುಸಿದಿದ್ದು ರೂ. ೧೦೦ ಕ್ಕಿಂತಲೂ ಕಡಿಮೆ ಆಗಿದೆ. ಇದರಿಂದ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ತಾಲೂಕಿನಲ್ಲಿ 6 ಸಾವಿರ ಬೆಳೆಗಾರರಿದ್ದು ಕಳೆದ 7-8 ವರ್ಷದಿಂದ ರಬ್ಬರ್ ಬೆಳೆ ಧಾರಣೆ ಕುಸಿತದಿಂದಾಗಿ ಬದುಕು ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದಾರೆ. ರಬ್ಬರ್ ಮರಗಳಿಗೆ ರೋಗಭಾದೆ ಒಕ್ಕರಿಸುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ರೈತರು ಪ್ರತಿ ಎಕರೆಗೆ ರೂ 2.50ಲಕ್ಷ ಸಾಲ ಮಾಡಿ ರಬ್ಬರ್ ಬೆಳೆಸಿದ್ದು ಸಾಲ ತೀರಿಸಲಾಗದೆ ಸಂಕಷ್ಟಕ್ಕೆ…

Read More

ಗಂಗೊಳ್ಳಿ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೀನುಗಾರರು ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳ ಬಗ್ಗೆ ನಿಯೋಗದೊಂದಿಗೆ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುವುದಾಗಿ ಬೈಂದೂರು ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದರು. ಅವರು ಇತ್ತೀಚಿಗೆ ಮರವಂತೆಯ ಶ್ರೀ ವರಾಹಸ್ವಾಮಿ ದೇವಸ್ಥಾನದ ವಠಾರದಲ್ಲಿ ಗಂಗೊಳ್ಳಿ ಆಳಸಮುದ್ರ ಮೀನುಗಾರರ ಸಂಘವನ್ನು ಉದ್ಘಾಟಿಸಿ ಮಾತನಾಡಿದರು. ಸಂಘದ ಅಧ್ಯಕ್ಷ ಲೋಕೇಶ ಖಾರ್ವಿ ಗಂಗೊಳ್ಳಿ ಅವರು ಆಳಸಮುದ್ರ ಮೀನುಗಾರರು ಮೀನುಗಾರಿಕೆ ಸಂದರ್ಭ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಸಂಘದ ಉಪಾಧ್ಯಕ್ಷ ದುರ್ಗರಾಜ್ ಪೂಜಾರಿ ಅವರು ಗಂಗೊಳ್ಳಿ ಮೀನುಗಾರಿಕಾ ಬಂದರಿನಲ್ಲಿ ಮೀನುಗಾರರು ಹಾಗೂ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಸೆಳೆದು ಇದನ್ನು ಪರಿಹಸರಿಬೇಕೆಂದು ಒತ್ತಾಯಿಸಿದರು. ಉಪಾಧ್ಯಕ್ಷ ಮಂಜುನಾಥ ವಿಠಲವಾಡಿ, ಮಾಧವ ಖಾರ್ವಿ, ರಾಮ ಶಿರೂರು, ಕೋಶಾಧಿಕಾರಿ ನಾರಾಯಣ ಖಾರ್ವಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮದಾಸ ಖಾರ್ವಿ ಸ್ವಾಗತಿಸಿ ವಂದಿಸಿದರು.

Read More

ಕೊಲ್ಲೂರು: ಯುವಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಉಡುಪಿ ಜಿಲ್ಲಾ ಪಂಚಾಯತ್, ನೆಹರು ಯುವ ಕೇಂದ್ರ ಉಡುಪಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಡುಪಿ, ಪ್ರೇರಣಾ ಯುವ ವೇದಿಕೆ ನೈಕಂಳ್ಳಿ ಚಿತ್ತೂರು ಇವರ ಜಂಟಿ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಯುವ ಸಪ್ತಾಹದ ಅಂಗವಾಗಿ ಗ್ರಾಮೀಣ ಕ್ರೀಡಾ ಕೂಟ ಇತ್ತೀಚಿಗೆ ಚಿತ್ತೂರಿನಲ್ಲಿ ನಡೆಯಿತು. ಚಿತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ ಮಡಿವಾಳ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಪ್ರೇರಣಾ ಯುವ ವೇದಿಕೆಯ ಅಧ್ಯಕ್ಷ ಚಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ಉದಯ ಪಿ.ಪೂಜಾರಿ, ಅರ್ಚಕ ಗಣೇಶ ಉಡುಪ, ಎಸ್‌ಡಿಎಂಸಿ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಅಬ್ದುಲ್ ಸಲಾಂ ಚಿತ್ತೂರು, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ನರಸಿಂಹ ಗಾಣಿಗ ಕಟ್‌ಬೇಲ್ತೂರು, ಮಹಾವಿಷ್ಣು ಯುವಕ ಮಂಡಲದ ಅಧ್ಯಕ್ಷ ರವೀಶ ಡಿ.ಎಂ. ಮೊದಲಾದವರು ಉಪಸ್ಥಿತರಿದ್ದರು. ನಾಗರಾಜ ಶೆಟ್ಟಿ ಸ್ವಾಗತಿಸಿದರು. ಉದಯ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ದಿನೇಶ ಶೆಟ್ಟಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ. ಕುಂದಾಪುರ: ರಾಜ್ಯ ಚುನಾವಣಾ ಆಯೋಗ ಸ್ಥಳೀಯಾಡಳಿತ ಚುನಾವಣೆ ವೇಳಾ ಪಟ್ಟಿ ಪ್ರಕಸಿದ್ದು, ಕುಂದಾಪುರದಲ್ಲಿ ಫೆ.20 ಶನಿವಾರ ಬೆಳಗ್ಗೆ 7 ರಿಂದ ಸಂಜೆ 5ರ ತನಕ ಮತದಾನ ನಡೆಯಲಿದೆ ಎಂದು ಕುಂದಾಪುರ ತಹಸೀಲ್ದಾರ್ ಗಾಯತ್ರಿ ಎನ್.ನಾಯ್ಕ್ ತಿಳಿಸಿದ್ದಾರೆ. ರಜಾದಿನ ಹೊರತುಪಡಿಸಿ ಫೆ.1 ರಿಂದ ಫೆ.8 ವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ನಾಮಪತ್ರ ಸ್ವೀಕರಿಸಲಾಗುತ್ತದೆ. ಫೆ.9 ನಾಮಪತ್ರ್ರ ಪರಿಶೀಲನೆ ಮಾಡಲಾಗುತ್ತದೆ. ಫೆ.11 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ನಾಮ ಪತ್ರ ಹಿಂದಕ್ಕೆ ಪಡೆಯಲು ಅವಕಾಶ ಮಾಡಿಕೊಡಲಾಗಿದೆ. 23 ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ಜಿ.ಪಂ ಚುನಾವಣಾಧಿಕಾರಿ ಕಚೇರಿ ವಿವರ: ಶಿರೂರು, ಬೈಂದೂರು, ಕಂಬದಕೋಣೆ, ತ್ರಾಸಿ, ವಂಡ್ಸೆ, ಕಾವ್ರಾಡಿ, ಕೋಟೇಶ್ವರ, ಬೀಜಾಡಿ, ಸಿದ್ದಾಪುರ ಮತ್ತು ಹಾಲಾಡಿ ಜಿಪಂ ಕ್ಷೇತ್ರಕ್ಕೆ ಸಹಾಯಕ ಆಯುಕ್ತರು ಚುನಾವಣಾಧಿಕಾರಿಯಾಗಿದ್ದು, ಮಿನ ವಿಧಾನ ಸೌಧ ಕಚೇರಿಯಲ್ಲಿ…

Read More

ದಿಲೀಪ್ ಕುಮಾರ್ ಶೆಟ್ಟಿ. ಊರ ಬದಿ ಹಬ್ಬ ಅಂದ್ರೆ ಹಾಂಗೆ, ಗಡ್ಜು-ಗಮ್ಮತ್ತು. ಅಂತೂ ಗೆಂಡದ ಹಬ್ಬ ಗಮ್ಮತಂಗೆ ಪೂರೈಸಿ ಶಾಲಿಗೆ ಹ್ವಾಪು ದಾರೆಗೆ, ಹಬ್ಬದ ರಾತ್ರಿ ಆಟಕ್ಕೆ ಹ್ವಾಪು plan ಮಾಡ್ಕಂತಾ ಶಾಲೀ ತಲುಪ್ತ್. ರಾತ್ರಿಗೆ ಒಂದು ಒಳ್ಳೆ ಆಟ ಕಾಂಬು ಕನಸಿನಗೆ, ಶಾಲಿ ಎಷ್ಟೋತಿಗ್ ಮುಗಿತ್ತ್ ಅಂದೇಳಿ ಕಾಯ್ತಾ ಕೂಕಂತ್. ಇನ್ನೆನ್ last bell ಹೊಡಿತ್, ಚೀಲ ಹಿಡ್ಕಂಡ್ ಓಡುಕ್ ಶುರು ಮಾಡ್ತ್. ಇವತ್ತ್ ಬೇಗ ಗುಡ್ಡೆಗ್ ಆಡ್ಕಂಡ್, ಬೇಗೆ ಮೈಗೆ ನೀರ್ ಹೈಕಂಡ್, ಅಜ್ಜಯ್ಯಂಗೆ ಗೊತ್ತಯ್ದೆ ಅಮ್ಮನ ಹತ್ರ separate ಆಯಿ ದುಡ್ಡ್ ಕೆಂಡ್, ಅಜ್ಜಯ್ಯನ ಹತ್ತಿರ, ಅಮ್ಮನ ಹತ್ರ ದುಡ್ಡ್ ಕೆಂಡದ್ದ್ ಗೊತ್ತಯ್ದೆ ಇದ್ದ ಹಾಂಗೆ ಇನ್ನೊಂದ್ ಸಲ ಕೆಂಡ್, ಹ್ಯಾಂಗಾರೂ ಮಾಡಿ ಒಂದ್ 20 ರೂಪಾಯಿ ಒಟ್ಟ್ ಮಾಡ್ಕಂಡ್ ಗಮ್ಮತ್ ಮಾಡ್ಕ್ ಅಂದೇಳಿ plan ಶುರು ಮಾಡ್ದಿ. ಮನಿಗ್ ಬಂದ್ ಅಮ್ಮನ ಹತ್ರ “ಅಮ್ಮ, ನಾನ್ ಗೆದ್ದಿಗ್ ಬತ್ತಿ, ಕಳೆ ಹುಲ್ಲ್ ಹೊತ್ಕಬತ್ತಿ ಅಕ್ಕಾ??, ನೀನ್…

Read More