ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ಗಂಗೊಳ್ಳಿ ಸಮುದ್ರ ತೀರದ ಬಳಿ ಮೀನುಗಾರಿಕೆಗೆ ತೆರಳಿದ್ದ ಪರ್ಸೀನ್ ಬೋಟ್ ಅಲೆಗಳ ಹೊಡೆತದಿಂದಾಗಿ ಬಿರುಕು ಬಿಟ್ಟು, ಮುಳುಗುವ ಪರಿಸ್ಥಿತಿ ನಿರ್ಮಾಣವಾದ ಘಟನೆ ನಡೆದಿದೆ. ಕರಾವಳಿ ಕಾವಲು ಪಡೆ ಮತ್ತು ಮೀನುಗಾರರ ಸಮಯೋಚಿತ ಕಾರ್ಯಾಚರಣೆಯಿಂದ ಬೋಟ್ನಲ್ಲಿದ್ದ 27 ಮಂದಿ ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಗಂಗೊಳ್ಳಿಯಿಂದ ಸುಮಾರು 3 ನಾಟಿಕಲ್ ಮೈಲಿ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಶ್ರೀ ಬಾಲಾಂಜನೇಯ ಬೋಟ್ ಮಧ್ಯಾಹ್ನ 03:30ರ ವೇಳೆಗೆ ಭಾರೀ ಅಲೆಗಳ ಹೊಡೆತದಿಂದ ಬೋಟ್ಗೆ ಬಿರುಕು ಕಾಣಿಸಿಕೊಂಡಿದೆ. ಇದರಿಂದ ಬೋಟ್ಗೆ ನೀರು ನುಗ್ಗಿ ನಿಧಾನವಾಗಿ ಮುಳುಗಲು ಆರಂಭಿಸಿದೆ. ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಕರಾವಳಿ ಕಾವಲು ಪಡೆ ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ಕರಾವಳಿ ಮೀಸಲು ಪಡೆಯ ಇನ್ಸ್ಪೆಕ್ಟರ್ ರಮೇಶ್ ಕೆ. ಅವರ ನೇತೃತ್ವದಲ್ಲಿ ಪಿಎಸೈ ಸುಬ್ರಹ್ಮಣ್ಯ ಹಾಗೂ ಸಿಬ್ಬಂದಿಗಳಾದ ಯುವರಾಜ,ರಾಘವೇಂದ್ರ, ರಮೇಶ, ನಾಗರಾಜ ಖಾರ್ವಿ, ನಾಗೇಶ್ ಖಾರ್ವಿ, ಕಿರಣ್ ಮತ್ತು ಕೆ.ಎನ್.ಡಿ ಸದಸ್ಯರಾದ ಸಂತೋಷ ಖಾರ್ಷಿ ಹಾಗೂ ಸಂದೇಶ್ ಅವರೊಂದಿಗೆ ಮತ್ಸ್ಯಾಮೃತ ಹಾಗೂ ಸುಮುಖ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ.ಭಟ್ಕಳ: ಅರ್ಹ ಬಿಸಿಎ ವಿದ್ಯಾರ್ಥಿಗಳಿಗೆ ಉದ್ಯಮ ಕೇಂದ್ರೀಕೃತ ತಂತ್ರಜ್ಞಾನ ಕಲಿಕಾ ಕಾರ್ಯಕ್ರಮವನ್ನು ಒದಗಿಸುವ ಉದ್ದೇಶದಿಂದ ಫೋರ್ಥ್ಫೋಕಸ್, ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನೊಂದಿಗೆ ಪರಸ್ಪರ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಕಾರ್ಯಕ್ರಮವನ್ನು ಫೋರ್ಥ್ಫೋಕಸ್ ಕಲಿಕಾ ಉಪಕ್ರಮದ ಮೂಲಕ ಜಾರಿಗೆ ತರಲಾಗುತ್ತದೆ. ಫೋರ್ಥ್ಫೋಕಸ್ನ ಸಂಸ್ಥಾಪಕ ಮತ್ತು ನಿರ್ದೇಶಕ ವಿ. ಗೌತಮ್ ನಾವಡ ಹಾಗೂ ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲರಾದ ಶ್ರೀನಾಥ್ ಪೈ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಈ ಸಂದರ್ಭದಲ್ಲಿ ಶ್ರೀ ಗುರು ಸುಧೀಂದ್ರ ಕಾಲೇಜಿನ ಉಪಪ್ರಾಂಶುಪಾಲರಾದ ವಿಖ್ಯಾತ್ ಪ್ರಭು, ಫೋರ್ಥ್ಫೋಕಸ್ನ ಕಾರ್ಯಾಚರಣೆ ವ್ಯವಸ್ಥಾಪಕಿ ಚಂದನಾ ಜಿ.ಎಂ. ಹಾಗೂ ಸಾಮಾಜಿಕ ಮಾಧ್ಯಮ ವ್ಯವಸ್ಥಾಪಕಿ ವಿಜಯಲಕ್ಷ್ಮಿ ಉಪಸ್ಥಿತರಿದ್ದರು. ಈ ಸಹಯೋಗದಡಿ ಕಾಲೇಜು ಅನುಮೋದಿತ ಬಿಸಿಎ ವಿದ್ಯಾರ್ಥಿಗಳಿಗಾಗಿ ಉದ್ಯಮ ಮತ್ತು ಶೈಕ್ಷಣಿಕ ಕ್ಷೇತ್ರಗಳ ನಡುವಿನ ತಾಂತ್ರಿಕ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೆ ತರಲಾಗುತ್ತದೆ. ವಿದ್ಯಾರ್ಥಿಗಳ ಶೈಕ್ಷಣಿಕ ಅಧ್ಯಯನಕ್ಕೆ ಪೂರಕವಾಗಿ ಪ್ರಾಯೋಗಿಕ ತಂತ್ರಜ್ಞಾನ ಕಲಿಕೆ ಹಾಗೂ ಪ್ರಸ್ತುತ ವೃತ್ತಿಪರ ಕಾರ್ಯಪದ್ಧತಿಗಳ ಪರಿಚಯ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ರಕ್ತದಾನ ಶ್ರೇಷ್ಠದಾನ, ಯುವಕರೆಲ್ಲ ಸಂಘಟಿತರಾಗಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವುದು ಸಾಮಾಜಿಕ ಕಳಕಳಿಗೆ ಒಂದು ನಿದರ್ಶನ, ರಕ್ತಕ್ರತಕವಾಗಿ ತಯ್ಯಾರು ಮಾಡುದು ಸಾಧ್ಯವಿಲ್ಲ. ಸ್ವಯಂಪ್ರೇರಿತವಾಗಿ ಒಬ್ಬನಿಗೆ ಮತ್ತೊಬ್ಬನು ದಾನ ಮಾಡುದರಿಂದ ಒಂದು ಜೀವ ಉಳಿಸಬಹುದು ಎಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರಾದ ರಾಜೇಶ್ ಕಾರಂತ್ ಉಪ್ಪಿನಕುದ್ರು ಹೇಳಿದರು. ಅವರು ಪಂಚಾಗಂಗಾ ರೈತರ ಸೇವಾ ಸಹಕಾರಿ ಸಂಘ ನಿ. ಹೆಮ್ಮಾಡಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಲಯನ್ಸ್ ಕ್ಲಬ್ ಕುಂದಾಪುರ ಸಿಟಿ ಸೆಂಟರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ,ಸಿ, ಟ್ರಸ್ಟ್ ರಿ. ಕುಂದಾಪುರ, ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್, ಜೆಸಿಐ ಕುಂದಾಪುರ ಸಿಟಿ, ಶ್ರೀ ಸಾಯಿಸ್ಪಂದನ ಪೌoಡೆಷನ್ ರಿ. ಕುಂದಾಪುರ, ಯುನೈಟೆಡ್ ಫ್ರೆಂಡ್ಸ್ ತಲ್ಲೂರು, ಇವರೆಲ್ಲರ ಸಹಬಾಗಿತ್ವದಲ್ಲಿ, ರಕ್ತನಿಧಿ ವಿಭಾಗ, ಕೆಎಂಸಿ ಮಣಿಪಾಲ ಇವರ ಸಹಕಾರದೊಂದಿಗೆ ತಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸಂತೋಷ್ ಶೆಟ್ಟಿ ಹಕ್ಲಾಡಿ …
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಪ್ರತಿಷ್ಠಿತ ಸೀರೆ ಮಳಿಗೆಯಾದಂತಹ ಪಿಎಸ್ಆರ್ ಸಿಲ್ಕ್ ಸ್ಯಾರಿಸ್ ಅವರ ಪ್ರದರ್ಶನ ಮತ್ತು ಮಾರಾಟ ಇದೇ ಬರುವ ಆಗಸ್ಟ್ 28 ರಿಂದ 30 ರವರೆಗೆ 3 ದಿನಗಳ ಕಾಲ ಕುಂದಾಪುರದ ಶರೋನ್ ಹೋಟೆಲ್ನಲ್ಲಿ ನಡೆಯಲಿದೆ. ಬೆಳಗ್ಗೆ 10 ಗಂಟೆಯಿಂದ ರಾತ್ರಿ 8ರವರೆಗೆ ಈ ಪ್ರದರ್ಶನ ನಡೆಯಲಿದ್ದು ಇಲ್ಲಿ ಕಾಂಚೀಪುರಂ ಸಿಲ್ಕ್ ಸಾರಿ & ಕಾಟನ್ ಸಾರಿ ದೊರೆಯಲಿದೆ. ಸುಮಾರು 300 ರಿಂದ 5000 ರೂಪಾಯಿಯವರೆಗಿನ ಸೀರೆಗಳು ಇಲ್ಲಿ ದೊರೆಯಲ್ಲಿದ್ದು ಈ ಅತ್ಯಾಕರ್ಷಕ ಸೀರೆಗಳಿಗಾಗಿ ಕುಂದಾಪುರದ ಶರೋನ್ ಹೋಟೆಲ್ ಗೆ ಭೇಟಿ ನೀಡಿ ನವ ವಿನ್ಯಾಸದ ಸಾರಿಗಳನ್ನು ಖರೀದಿಸಬಹುದಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕುಂದಗನ್ನಡ ಸಂಘದ ವಿದ್ಯಾರ್ಥಿಗಳು ವಿಸ್ತರಣಾ ಚಟುವಟಿಕೆಯ ಭಾಗವಾಗಿ ಬೈಂದೂರಿನ ಯಡ್ತರೆ ಗ್ರಾಮದಲ್ಲಿ ಕುಂದಗನ್ನಡ ಪ್ರತಿಷ್ಠಾನ ಆಯೋಜಿಸಿದ ‘ಗಮ್ಮತ್’ ಕೆಸರಲ್ಲೊಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕುಂದಗನ್ನಡ ಭತ್ತ ಕುಟ್ಟುವ ಹಾಡು ಮತ್ತು ಗಾದೆಗಳನ್ನು ಹೇಳುವ ಮೂಲಕ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ನಿಕಾಯಕರಾದ ರಕ್ಷಿತ್ ರಾವ್ ಗುಜ್ಜಾಡಿ, ಕುಂದಗನ್ನಡ ಸಂಘದ ಸಂಯೋಜಕರಾದ ರೇಷ್ಮಾ ಶೆಟ್ಟಿ ಮತ್ತು ರಶ್ಮಿತಾ ಶೆಟ್ಟಿ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಇಲ್ಲಿನ ಮೂಡ್ಲಕಟ್ಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (MITK) ಕಾಲೇಜಿನಲ್ಲಿ 2026-2027ನೇ ಸಾಲಿನ ಪ್ರಥಮ ವರ್ಷದ ಬಿ.ಇ. ವಿದ್ಯಾರ್ಥಿಗಳ ಇಂಡಕ್ಷನ್ ಕಾರ್ಯಕ್ರಮವು ಕಾಲೇಜಿನ ಸಭಾಂಗಣದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಣಿಪಾಲದ ಕಾರ್ಮಿಕ್ ಡಿಸೈನ್ ಪ್ರೈವೇಟ್ ಲಿಮಿಟೆಡ್ನ (KarMic Design Pvt. Ltd.) ಸಿಇಒ ರತ್ನಾಕರ ಭಟ್ ಅವರು ಭಾಗವಹಿಸಿ ಮಾತನಾಡಿ, “ವಿದ್ಯಾರ್ಥಿ ಜೀವನದಲ್ಲಿ ತಾಂತ್ರಿಕ ಕೌಶಲ್ಯಗಳ ಜೊತೆಗೆ ಸೃಜನಶೀಲತೆ, ನಿರಂತರ ಕಲಿಕೆ ಮತ್ತು ಶಿಸ್ತು ಬಹಳ ಮುಖ್ಯ. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಹೊಸ ತಂತ್ರಜ್ಞಾನಗಳನ್ನು ಮೈಗೂಡಿಸಿಕೊಂಡು ದೇಶದ ಪ್ರಗತಿಗೆ ಕೊಡುಗೆ ನೀಡುವ ಎಂಜಿನಿಯರ್ಗಳಾಗಿ ರೂಪುಗೊಳ್ಳಬೇಕು,” ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗ್ಡೆ ಅವರು ಕಾಲೇಜಿನ ಶೈಕ್ಷಣಿಕ ವಾತಾವರಣ, ಮೂಲಸೌಕರ್ಯಗಳು ಹಾಗೂ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಸಂಸ್ಥೆ ನೀಡುತ್ತಿರುವ ಪ್ರೋತ್ಸಾಹದ ಕುರಿತು ಪ್ರಾಸ್ತಾವಿಕವಾಗಿ ವಿವರಿಸಿದರು. ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಡಾ. ಎಸ್. ಎನ್. ಭಟ್ ಅವರು ಮಾತನಾಡುತ್ತಾ, ಕಾಲೇಜು…
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಹೈದರಾಬಾದ್ ಯಶೋದಾ ಆಸ್ಪತ್ರೆಯ ಖ್ಯಾತ ಹೃದ್ರೋಗ ತಜ್ಞ, ಬೈಂದೂರು ಮೂಲದ ಡಾ. ಉದಯ ಕುಮಾರ್ ಹೊಸಾಡು ಅವರು ಅನಾರೋಗ್ಯದಿಂದ ಬುಧವಾರ ಮುಂಜಾನೆ ನಿಧನರಾಗಿದ್ದಾರೆ. ಅವರು ಸಮರ್ಪಣಾ ಮನೋಭಾವ, ಸಹಾನುಭೂತಿ ಮತ್ತು ಹೃದ್ರೋಗ ಚಿಕಿತ್ಸಾ ಕ್ಷೇತ್ರದಲ್ಲಿನ ಅಮೂಲ್ಯ ಕೊಡುಗೆ ನೀಡಿದ್ದರು. ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯು ಶುಕ್ರವಾರದಂದು ಹೈದರಾಬಾದಿನಲ್ಲಿರುವ ಅವರ ನಿವಾಸದಲ್ಲಿ ನಡೆಯಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ.ಬೈಂದೂರು: ಜೆಸಿಐ ಸಂಸ್ಥೆ ವಲಯ 15ರ ವತಿಯಿಂದ ಸಮಾಜಮುಖಿ ಕಾರ್ಯಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆಗೈದ ಗಣ್ಯರನ್ನು ಗುರುತಿಸಿ ನೀಡಲಾಗುವ ಪ್ರತಿಷ್ಠಿತ ‘ಸಾಧನಾಶ್ರೀʼ ಪ್ರಶಸ್ತಿಗೆ ಜೆಸಿಐ ಶಿರೂರು ಪೂರ್ವಾಧ್ಯಕ್ಷ ಜೆಸಿಐ ಸೆನೆಟರ್ ನಾಗೇಶ್ ಕೆ. ಅವರು ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭವು ಮಡಂತ್ಯಾರಿನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜೆಸಿಐ ವಲಯ 15ರ ಅಧ್ಯಕ್ಷರಾದ ಜೆಎಫ್ಎಸ್ ಸಂತೋಷ್ ಶೆಟ್ಟಿ ಅವರು ಜೆಸಿಐ ಸೆನೆಟರ್ ನಾಗೇಶ್ ಕೆ. ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಜೆಸಿಐ ಸೆನೆಟರ್ ನಾಗೇಶ್ ಕೆ. ಅವರು ಸಾಮಾಜಿಕ ಸೇವೆ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಗಮನಾರ್ಹ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ವಲಯ ಉಪಾಧ್ಯಕ್ಷರಾದ ಜೆಎಫ್ಎಂ ಪ್ರದೀಪ್ ಶೆಟ್ಟಿ, ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾದ ಜೆಸಿ ಸ್ವರಾಜ್ ಶೆಟ್ಟಿ, ವ್ಯವಹಾರ ವಿಭಾಗದ ನಿರ್ದೇಶಕರಾದ ಜೆಸಿ ವಿಕೇಶ್ ಮಾನ್ಯ, ಶಿರೂರು ಜೆಸಿಐ ಅಧ್ಯಕ್ಷರಾದ ಜೆಸಿ ವಿನೋದ್ ಮೇಸ್ತ, ಕಾರ್ಯದರ್ಶಿ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ಶ್ರೀಸಿದ್ದಿ ವಿನಾಯಕ ಚೆಸ್ ಅಕಾಡೆಮಿ ಕುಂದಾಪುರ ಹಾಗೂ ಉಡುಪಿ ಜಿಲ್ಲಾ ಚೆಸ್ ಅಸೋಸಿಯೇಶನ್, ಬಸ್ರೂರು ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಓಪನ್ ರ್ಯಾಪಿಡ್ ಚೆಸ್- 45ನೇ ಸಿದ್ದಿ ವಿನಾಯಕ ಟ್ರೋಫಿ ಪಂದ್ಯಾಟವು ಕುಂದಾಪುರ ನಾರಾಯಣ ಗುರು ಕಲ್ಯಾಣ ಮಂಟಪದಲ್ಲಿ ನಡೆಯಿತು. ಚೆಸ್ ಆಡುವ ಮೂಲಕ ಉದ್ಘಾಟಿಸಿದ ವಕೀಲ ರವಿಕಿರಣ್ ಮುರ್ಡೇಶ್ವರ ಮಾತನಾಡಿ, ಚೆಸ್ ಕೇವಲ ಮಾನಸಿಕ ವಾಗಿ ಮಾತ್ರವಲ್ಲ, ದೈಹಿಕವಾಗಿಯೂ ನಿಮ್ಮನ್ನು ಸದೃಢಗೊಳಿಸುವ ಕ್ರೀಡೆಯಾಗಿದೆ. ಚೆಸ್ ಗ್ರಾಂಡ್ ಮಾಸ್ಟರ್ ವಿಶ್ವನಾಥ್ ಆನಂದ್ ಅವರಂತಹ ಶ್ರೇಷ್ಠ ಕ್ರೀಡಾಪಟುಗಳು ಪಂದ್ಯಾ ಕೂಟಕ್ಕೂ ಮೊದಲು ನಡೆಸುವ ತಯಾರಿ ಎಲ್ಲ ಚದುರಂಗ ಪಟುಗಳಿಗೆ ಮಾದರಿಯಾಗಬೇಕು ಎಂದರು. ಕುಂದಾಪುರ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ ಪೂಜಾರಿ ಬೀಜಾಡಿ ಮಾತನಾಡಿ, ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಬಹಳ ಮುಖ್ಯ ಸೋಲು – ಗೆಲುವು ಮುಖ್ಯವಲ್ಲ. ಕ್ರೀಡಾ ಚಟುವಟಿಕೆಗಳಿಗೆ ನಮ್ಮ ಸಂಘವು ನಿರಂತರ ಪ್ರೋತ್ಸಾಹ ನೀಡುತ್ತದೆ ಎಂದು ಹೇಳಿದರು. ಬಿಲ್ಲವ ಸಂಘದ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಗೋಕರ್ಣ: ಊಟವಿಲ್ಲದೇ ಕೆಲವು ಕಾಲ ಬದುಕಬಹುದು ಆದರೆ ಉಸಿರಾಟವಿಲ್ಲದೇ ಬದುಕಿರಲು ಸಾಧ್ಯವೇ ಇಲ್ಲ. ಯೋಗಿಯ ಸಮಾಧಿಸ್ಥಿತಿಯಲ್ಲಿ ಮಾತ್ರ ಉಸಿರಾಟವಿಲ್ಲದೆಯೂ ಬದುಕಿರಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು. ಅವರು ಗೋಕರ್ಣದ ಅಶೋಕೆಯ ಮೂಲಮಠದ ಪರಿಸರದಲ್ಲಿ ನಡೆಯುತ್ತಿರುವ ‘ಅನ್ನಬ್ರಹ್ಮ ಚಾತುರ್ಮಾಸ್ಯ’ದ ಧರ್ಮಸಭೆಯಲ್ಲಿ ಮಂಗಳವಾರದಂದು ‘ಅನ್ನಂ ಬ್ರಹ್ಮ’ ಮಾಲಿಕೆಯಲ್ಲಿ ಉಸಿರಾಟದ ಸೂಕ್ಷ್ಮಗಳ ಕುರಿತಾಗಿ ಪ್ರವಚನವನ್ನು ಅನುಗ್ರಹಿಸುತ್ತಾ, ಸರಿಯಾದ ಉಸಿರಾಟವು ಮೂಲಾಧಾರ ಚಕ್ರದವರೆಗೆ ಸಂಚರಿಸಬೇಕು. ಉಸಿರಾಡುವಾಗ ಶ್ವಾಸಕೋಶದವರೆಗೆ ಗಾಳಿರೂಪದಲ್ಲಿ ಸಂಚರಿಸಿದರೆ, ಮುಂದೆ ಮೂಲಾಧಾರ ಚಕ್ರದವರೆಗೆ ಶ್ವಾಸವು ಚೈತನ್ಯದ ರೂಪದಲ್ಲಿ ಸಂಚರಿಸುತ್ತದೆ. ಉಸಿರಾಟದ ಗತಿಯು ಹಂಸದಂತೆ ಧಾವಂತ ಇಲ್ಲದೇ ಸರಾಗವಾಗಿ ಆದಾಗ ಸಮಾಧಾನವನ್ನು ಸಾಧಿಸಿಕೊಳ್ಳಲು ಸಾಧ್ಯ. ಸಮಾಧಾನದಿಂದ ಶರೀರ, ಮನಸ್ಸು, ಜೀವನಕ್ಕೆ ಅಪಾರವಾದ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ವಿವರಿಸಿದರು. ಉಸಿರಾಟದ ಮೂಲಕ ಜೀವಿಯು ಗೊತ್ತಿದ್ದೋ ಗೊತ್ತಿಲ್ಲದೆಯೋ ‘ಹಂಸಃ ಹಂಸಃ’ ಎಂಬ ಜಪವನ್ನು ನಿರಂತರವಾಗಿ ಜಪಿಸುತ್ತಲೇ ಇರುತ್ತಾನೆ. ‘ಹಂ’ ಎಂಬುದು ಉಸಿರನ್ನು ಹೊರಬಿಡುವಾಗ ಮತ್ತು ‘ಸಃ’ ಎಂಬುದು…
