Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಂಗೊಳ್ಳಿ ಬಂದರು ಪ್ರದೇಶದ ಅಳಿವೆಯ ಇಕ್ಕಡೆಗಳಲ್ಲಿ ರೂ ೧.೩೯ ಕೋಟಿ ವೆಚ್ಚದಲ್ಲಿ ನಿರ‍್ಮಾಣವಾಗಲಿರುವ ಕೇಂದ್ರ ಪುರಸ್ಕೃತ ತಡಗೋಡೆ ನಿರ‍್ಮಾಣ ಕಾಮಗಾರಿಗೆ ಮೀನುಗಾರಿಕಾ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಗುದ್ದಲಿ ಪೂಜೆ ನೆರವೇರಿಸಿದರು. ಆ ಬಳಿಕ ಮಾತನಾಡಿದ ಅವರು ಈ ಯೋಜನೆಯನ್ನು ಕೇಂದ್ರದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಆಸ್ಕರ್ ಫೆರ್ನಾಂಡೀಸ್ ಮತ್ತು ೫೦:೫೦ಕ್ಕೆ ಶಾಸಕ ಕೆ. ಗೋಪಾಲ ಪೂಜಾರಿ ಅವರ ಪ್ರಯತ್ನದ ಫಲವಾಗಿ ಮಂಜೂರಾಗಿತ್ತು. ಇದರ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ೭೫:೨೫ರ ಅನುಪಾತದಲ್ಲಿ ಭರಿಸುತ್ತವೆ. ಆದರೆ ಪ್ರಸಕ್ತ ಕೇಂದ್ರ ಸರಕಾರವು ಈ ಅನುಪಾತವನ್ನು ೫೦:೫೦ಕ್ಕೆ ನಿಗದಿಗೊಳಿಸಿದೆ. ಅಷ್ಟು ಪ್ರಮಾಣದ ಮೊತ್ತವನ್ನು ರಾಜ್ಯ ಸರಕಾರಗಳು ಭರಿಸುವ ಶಕ್ತಿ ಹೊಂದದಿರುವುದರಿಂದ ಮುಂದಿನ ದಿನಗಳಲ್ಲಿ ಯಾವುದೇ ಮೀನುಗಾರಿಕಾ ಬಂದರು ಕಾಮಗಾರಿಗಳು ನಡೆಯಲಾರವು. ಈ ವಿಚಾರವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ರಾಧಾ ಮೋಹನ್ ಸಿಂಗ್ ಅವರ ಗಮನಕ್ಕೆ ತಂದಿದ್ದೇನೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೆಮ್ಮಾಡಿಯ ರಾ.ಹೆ ೬೬ರಲ್ಲಿ ಎರಡು ಲಾರಿಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕರು ಸೇರಿದಂತೆ ಒಟ್ಟು ಐವರು ಗಾಯಗೊಂಡ ಘಟನೆ ವರದಿಯಾಗಿದೆ. ಹೆಮ್ಮಾಡಿಯ ಡೈರಿ ಸರ್ಕ್‌ಲ್ ಬಳಿ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ತೆರಳುತ್ತಿದ್ದ ಲಾರಿಗೆ ಅಭಿಮುಖವಾಗಿ ಬಂದ ಲಾರಿ ಮುಖಾಮುಖಿ ಢಿಕ್ಕಿ ಹೊಡಿದಿತ್ತು. ಢಿಕ್ಕಿಯ ರಭಸಕ್ಕೆ ಒಂದು ಲಾರಿ ಮುಗುಚಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಡ್ರೈವರ್, ಕ್ಲಿನರ್ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಕೆಲ ಹೊತ್ತು ಹೆದ್ದಾರಿ ಜಾಮ್ ಆಗಿದ್ದರಿಂದ ಸಂಚಾರ ವ್ಯತ್ಯಯ ಆಯಿತು. ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

ಸುನಿಲ್ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಹೊಸವರ್ಷವನ್ನು ಆಚರಿಸಲು ಮೋಚು ಮಸ್ತಿಗಾಗಿ ಜನರು ಐಶಾರಾಮಿ ತಾಣಗಳನ್ನು ಅರಸಿ ಹೋರಟರೆ, ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಎಚ್. ಆಂಜನೇಯ ಈ ಭಾರಿ ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಲ್ತೋಡು ಗ್ರಾಪಂನ ಕೊರಗರ ಮನೆಯನ್ನು ಅರಸಿ ಬರಲಿದ್ದು, ಡಿ.೩೧ರಂದು ವಾಸ್ತವ್ಯ ಹೂಡಿ ಕೊರಗ ಸಮುದಾಯದ ಸಮಸ್ಯೆಗಳಿಗೆ ಕಿವಿಯಾಗುವ ಮೂಲಕ ಹೊಸವರ್ಷ ಆಚರಿಸಲಿದ್ದಾರೆ. ಕರ್ನಾಟಕದ ಸರಕಾರದ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಪ್ರತಿವರ್ಷಾಂತ್ಯದಲ್ಲಿ ನಿರ್ಗತಿಕರು, ಮೂಲಸೌಕರ್ಯ ವಂಚಿತರ ಮನೆಯಲ್ಲಿ ವಾಸ್ತವ್ಯ ಹೂಡಿ ಆ ಭಾಗದ ಜನರ ಸಮಸ್ಯೆಯನ್ನು ಅರಿಯಲು ಯತ್ನಿಸಿ ಸಮಸ್ಯೆಗೆ ಪರಿಹಾರೋಪಾಯವನ್ನು ಕಂಡುಕೊಂಡು ಸೂಕ್ತ ಕ್ರಮಕೈಗೊಳ್ಳುವ ಪರಿಪಾಠವನ್ನು ಸಚಿವ ಎಚ್. ಆಂಜನೇಯ ಅವರು ಈ ಭಾರಿಯೂ ಮುಂದುವರಿಸಿದ್ದಾರೆ. ಅದರಂತೆ ಸಚಿವರು ಈ ಭಾರಿ ಕಾಲ್ತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂರೂರು ಕೊರಗರ ಹಾಡಿಯನ್ನು ಆಯ್ದುಕೊಂಡು ವಾಸ್ತವ್ಯ ಹೂಡಲಿದ್ದಾರೆ. ಮೂರುರು ಕೊರಗರ ಹಾಡಿ: ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ ಹೆಮ್ಮಾಡಿ ಘಟಕ, ಶ್ರೀ ವಿನಾಯಕ ಯುವಕ ಸಂಘ ನೆಂಪು ಹಾಗೂ ವಂಡ್ಸೆ ಗ್ರಾಮಸ್ಥರ ಸಹಯೋಗದಲ್ಲಿ ಡಿ.೪ರಂದು ವಂಡ್ಸೆ ಹಿಂದೂ ರುದ್ರಭೂಮಿ ’ಮುಕ್ತಿಧಾಮ’ದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ರುದ್ರಭೂಮಿಯ ಪರಿಸರದಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡಲಾಯಿತು. ಮೊಗವೀರ ಯುವ ಸಂಘಟನೆ ಉಡುಪಿ ಜಿಲ್ಲೆ ಅಧ್ಯಕ್ಷ ಗಣೇಶ ಕಾಂಚನ್, ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ವಾಸು ಜಿ.ನಾಯ್ಕ್ ವಂಡ್ಸೆ, ಶ್ರೀ ವಿನಾಯಕ ಯುವಕ ಸಂಘ ನೆಂಪು ಇದರ ಅಧ್ಯಕ್ಷರಾದ ಸಂತೋಷ ಮಂಗಲ್ಸನಕಟ್ಟೆ, ಮೊಗವೀರ ಯುವ ಸಂಘಟನೆ ಜಿಲ್ಲಾ ಕೋಶಾಧಿಕಾರಿ ಸುರೇಶ ವಿಠಲವಾಡಿ, ಉಪಾಧ್ಯಕ್ಷರಾದ ರಾಜು ಶ್ರೀಯಾನ್, ಗ್ರಾ.ಪಂ.ಸದಸ್ಯ ಉದಯ ಕೆ.ನಾಯ್ಕ್, ಮೊಗವೀರ ಯುವ ಸಂಘಟನೆಯ ಮಾಜಿ ಅಧ್ಯಕ್ಷರಾದ ಮಂಜುನಾಥ ಆರ್.ಆರಾಟೆ, ರಾಘವೇಂದ್ರ ನೆಂಪು, ನಿಯೋಜಿತ ಅಧ್ಯಕ್ಷರಾದ ಮಂಜುನಾಥ ಚಂದನ್ ನೆಂಪು, ಶ್ರೀ ವಿನಾಯಕ ಯುವಕ ಮಂಡಲದ ಕಾರ್ಯದರ್ಶಿ ಮಂಜುನಾಥ ಆಚಾರ್ಯ ಕುಂಟರ್ನೆಲು, ಗೌರವಧ್ಯಕ್ಷರಾದ ಸುಕುಮಾರ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದಲ್ಲಿನ ಬಿಜೆಪಿ ಸದಸ್ಯರ ನಡುವೆ ಯಾವುದೆ ಭಿನ್ನಮತ ಇಲ್ಲ, ನಾವೆಲ್ಲ ಒಟ್ಟಿಗೆ ಇದ್ದೇವೆ. ಕುಂದಾಪುರದ ಪಕ್ಷೇತರ ಶಾಸಕರು ಈಚೆಗೆ ಬೆಂಗಳೂರಿನಲ್ಲಿ ನಡೆದ ಹಿಂದುಳಿದ ವರ್ಗದ ಸಮಾವೇಶಕ್ಕೆ ಪ್ರೇಕ್ಷಕರಾಗಿ ಬಂದಿದ್ದರು. ಬಿಜೆಪಿ ಪಕ್ಷದ ಕಾರ್ಯಕ್ರಮವನ್ನು ಮೆಚ್ಚಿ ಯಾರೇ ಬಂದರೂ ಅವರನ್ನು ಸ್ವಾಗತಿಸುತ್ತೇವೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಕೋಟೇಶ್ವರದ ಕಾರ್ಯಕ್ರಮ ಒಂದರಲ್ಲಿ ಪಾಲ್ಗೊಳ್ಳಲು ಆಗಮಿಸಿದ ವೇಳೆ ಅವರು ಕುಂದಾಪುರ ಬಿಜೆಪಿಗೆ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಸೇರ್ಪಡೆಗೊಳ್ಳುತ್ತಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು ರಾಷ್ಟ್ರೀಯ ಪಕ್ಷವಾದ ಬಿಜೆಪಿಗೆ ಇಂತಹವರು ಬರಬಾರದು ಎಂದು ಆಕ್ಷೇಪ ಮಾಡಲು ಯಾರಿಗೂ ಅಧಿಕಾರ ಇಲ್ಲ. ಮಂದಿನ ದಿನದಲ್ಲಿ ಜಯಪ್ರಕಾಶ ಹೆಗ್ಡೆ ಬಿಜೆಪಿಗೆ ಬರುತ್ತೇನೆ ಎಂದರೂ, ಅವರನ್ನು ಸೇರಿಸಿಕೊಳ್ಳಬಹುದಾ ಎನ್ನುವ ಯೋಚನೆಯಲ್ಲಿ ನಾವಿದ್ದೇವೆ. ಯಾರೋ ಒಬ್ಬರೋ, ಇಬ್ಬರೋ, ಆಕ್ಷೇಪ ಮಾಡಿದ್ದರೆ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡುತ್ತೇವೆ ಎಂದವರು ಸ್ವಷ್ಟಪಡಿಸಿದರು. ತನ್ನನ್ನು ಸೇರಿ ಮುಂಬರುವ ಚುನಾವಣೆಗೆ ಗೆಲ್ಲುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜನರ ಹಿತಕ್ಕಾಗಿ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಅದರ ಪ್ರಯೊಜನ ಜನರಿಗೆ ತಲುಪುವ ಹಾಗೆ ಮಾಡುವುದಲ್ಲದೆ ಅದರಿಂದ ಜನರಿಗೆ ಆ ಕಾರ್ಯಕ್ರಮ ದ ಮೂಲ ಉದ್ದೇಶವನ್ನು ತಿಳಿಸಿ ಜನರಿರನ್ನು ತೊಡಗಿಸಿಕೊಳ್ಳುವಂತೆ ಲಯನ್ಸ್ ಸಂಸ್ಥೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಲಯನ್ಸ್ ಕ್ಲಬ್ ವಲಯಾದ್ಯಕ್ಷ್ರ ಕಿರಣ್ ಕುಂದಾಪುರ ಹೇಳಿದರು. ಅವರು ನಾಗೂರು ಆಕಾಶ ಸಭಾಭವನದಲ್ಲಿ ಜರುಗಿದ ಲಯನ್ಸ್ ಕ್ಲಬ್ ಮತ್ತು ಲಯನೆಸ್ ಕ್ಲಬ್ ಬೈಂದೂರು ಉಪ್ಪುಂದಕ್ಕೆ ವಲಯ ಕ್ಲಬ್‌ಗಳ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಲಯನ್ಸ್ ಅಧ್ಯಕ್ಷ ಡಾ|ವೆಂಕಟೇಶ್ ಉಪ್ಪುಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅತಿಥಿ ಯಾಗಿ ಆಗಮಿಸಿದ ಲಯನ್ಸ್ ಜಿಲ್ಲಾ ಸಂಪರ್ಕಾಧಿಕಾರಿ ಲಯನ್ ಏನ್. ಎಮ್. ಹೆಗq, ಲಯನೆಸ್ ಅದ್ಯಕ್ಷೆ ಮಮತಾ ಎಮ್ ರಾವ್, ವಿವಿದ ಲಯನ್ಸ್ ಕ್ಲಬ್ ಅದ್ಯಕ್ಷರು, ಬೈಂದೂರು ಉಪ್ಪುಂದ ಲಯನ್ಸ್ ಕ್ಲಬ್‌ನ ಪೂರ್ವಾದ್ಯಕ್ಷ ಜಿ ಗೊಕುಲ್ ಶೆಟ್ಟಿ, ಖಜಾಂಜಿ ವಿಕ್ರಮ್ ಶೆಟ್ಟಿ, ಲಯನೆಸ್ ಕಾರ್ಯ ದರ್ಶಿ ಶಿಲ್ಪಾ ಶೆಟ್ಟಿ ಹಾಗು ಮತ್ತಿತರರು ಹಾಜರಿದ್ದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ , ತಾಲೂಕು ಮತ್ತು ಹೋಬಳಿ ಘಟಕಗಳ ಆಶ್ರಯದಲ್ಲಿ ನಾಡ ಗ್ರಾಮದ ಕುರುವಿನ ಕೆ. ಅಚ್ಯುತ ಹೆಬ್ಬಾರ್ ಅವರ ಮನೆಯ ಚಾವಡಿಯಲ್ಲಿ ಭಾನುವಾರ ’ಹಿರಿಯರೆಡೆಗೆ ಸಾಹಿತ್ಯದ ನಡಿಗೆ’ ಕಾರ್ಯಕ್ರಮ ನಡೆಯಿತು. ಹಿರಿಯ ಸಂಗೀತ ವಾದನ ಪರಿಣತರಾಗಿರುವ ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಕಾರ್ಯಕ್ರಮದ ಔಚಿತ್ಯದ ಬಗ್ಗೆ ಮಾತನಾಡಿದ ತಾಲೂಕು ಘಟಕದ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ಭಟ್ ಸಾಹಿತ್ಯ ಮತ್ತು ಬದುಕು ಪ್ರತ್ಯೇಕಿಸಲಾಗದ್ದು. ಬದುಕಿನ ವಿವಿಧ ರಂಗಗಳ್ಲಿ ದುಡಿದವರನ್ನು ಗೌರವಿಸುವ ಮೂಲಕ ಅವರ ಸಾಧನೆಗೂ ಸಾಹಿತ್ಯಕ್ಕೂ ಇರುವ ಸಂಬಂಧವನ್ನು ಪ್ರಚುರಪಡಿಸಿದಂತಾಗುತ್ತದೆ. ಸಾಹಿತ್ಯದಿಂದ ದೂರ ಉಳಿದವರನ್ನು ಅದರೊಂದಿಗೆ ಬೆಸೆಯಲು ಸಾಧ್ಯವಾಗುತ್ತದೆ ಎಂದರು. ಇದು ಕನ್ನಡದ ಮನಸ್ಸುಗಳನ್ನು ಒಂದುಗೂಡಿಸುವ ಕೆಲಸ ಎಂದ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕನ್ನಡ ಭಾಷೆಗೆ ಅಳಿವಿಲ್ಲ. ಅದು ಆಂಗ್ಲ ಭಾಷೆಯೂ ಸೇರಿದಂತೆ ಸಂಪರ್ಕಕ್ಕೆ ಬರುವ ಎಲ್ಲ ಭಾಷೆಗಳ ಪದಗಳನ್ನು ತನ್ನೊಳಗೆ ಸೇರಿಸಿಕೊಂಡು ಬೆಳೆಯುತ್ತಿದೆ. ಸಮುದಾಯಕ್ಕೆ ಹಿತವಾಗುವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕೇಂದ್ರ ಸರ್ಕಾರ ೫೦೦ ಮತ್ತು ೧೦೦೦ ಮುಖಬೆಲೆಯ ನೋಟನ್ನು ರದ್ದು ಪಡಿಸಿದ್ದರ ಪರಿಣಾಮ ದೇಶದ ಬಡವರು ಬ್ಯಾಂಕಿನ ಎದುರಿನಲ್ಲಿ ನಿಲ್ಲುವ ಹಾಗೇ ಮಾಡಿದ್ದಾರೆ. ಕಾಳಧನಿಕನನ್ನು ಬಲೆಗೆ ಬೀಳಿಸುವ ನೆಪವೊಡ್ಡಿ ಬಡವರನ್ನು ಸರಕಾರ ಬ್ಯಾಂಕಿಗೆ ಅಲೆದಾಡಿಸುತ್ತಿದೆಯೇ ಹೊರತು ಶ್ರೀಮಂತರಿಗೆ ಏನೂ ತೊಂದರೆಯಾಗಿಲ್ಲ ಎಂದು ಬೈಂದೂರು ಬ್ಲಾಕ್ ಯುತ್ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಹೇಳಿದರು. ಅವರು ಬೈಂದೂರು ಬ್ಲಾಕ್ ಯೂತ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿ ಬಳಿಕ ಮಾತನಾಡಿದರು. ಈ ದೇಶದ ಕೋಟ್ಯಾಂತರ ಜನರು ಬ್ಯಾಂಕ್ ಖಾತೆಯನ್ನು ಹೊಂದಿರದ ಮುಗ್ದ ಜನರು, ಬಡ ಕೂಲಿ ಕಾರ್ಮಿಕರು, ಸಣ್ಣ ವ್ಯಾಪಾರಿಗಳು ವಿಶೇಷವಾಗಿ ಮನೆಯ ಮುಂಜಾಗ್ರತೆಗೆ ಹಣವನ್ನು ತೆಗೆದಿಟ್ಟು ಮಹಿಳೆಯರು ಕಳೆದ ಎರಡು ತಿಂಗಳಿನಿಂದ ಬಹಳ ಕಷ್ಟವನ್ನು ಪಡುತ್ತಿದ್ದಾರೆ. ಇದ್ದರಿಂದ ದೇಶದ ಯಾವುದೇ ಶ್ರೀಮಂತರಿಗೂ ತೊಂದರಿಯಾಗುತ್ತಿಲ್ಲ. ದೇಶದಲ್ಲಿ ೧೦೦ಕ್ಕೂ ಮಿಕ್ಕಿ ಜನರು ಮೃತ ಪಟ್ಟಿದ್ದಾರೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಎಲ್ಲಾ ದೇವಾಲಯಗಳಲ್ಲೂ ಸ್ವಚ್ಛತೆ ಆಂದೋಲನ ಮೂಲಕ ದೇವಸ್ಥಾನ ಪರಿಸರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆ ಸಮಕ್ಷಮದಲ್ಲಿ ಮಣೂರಿನಲ್ಲಿ ನಡೆದ ಅಭಿಯಾನದ ನಂತರ ಕುಂಭಾಶಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಡಾ.ವೀರೇಂದ್ರ ಹೆಗ್ಗಡೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನ ಅರ್ಚಕ ರವಿರಾಜ್ ಉಪಾಧ್ಯಾಯ ಪೂಜೆ ನೆರವೇರಿಸಿ, ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಪ್ರಸಾದ ವಿತರಣೆ ಮಾಡಿದರು. ಗೋಪಾಡಿ ಶ್ರೀ ಚಿಕ್ಕಮ್ಮ ದೇವಸ್ಥಾನ ವಠಾರದಲ್ಲಿ ಸ್ವಚ್ಚತಾ ಅಭಿಯಾನಕ್ಕೆ ಚಾಲನೆ ನೀಡಿ, ದೇವಸ್ಥಾನ ಪರಿಸರ ಸ್ವಚ್ಛವಾಗಿಡುವಂತೆ ಕರೆಕೊಟ್ಟ ಅವರು ಮಡಿ ಮಾಡುವುದರಿಂದ ಶುದ್ಧೀಕರಣ ಆಗೋದಿಲ್ಲ. ದೇಶದಲ್ಲೆಲ್ಲಾ ಸ್ಚಚ್ಛತಾ ಅಂದೋಲನ ನಡೆಯುತ್ತಿದ್ದು, ದೇವಸ್ಥಾನ ಪರಿಸರ ಸ್ವಚ್ಛವಾಗಿಡಬೇಕು. ಮನಸ್ಸು ಪ್ರಕೃತಿ, ಪರಿಸರ ಸ್ವಚ್ಛವಾಗಡುವ ಮೂಲಕ ದೇವಸ್ಥಾನ ಪರಿಸರಗಳ ಸ್ವಚ್ಛತೆಗೆ ಹೊಸ ಅರ್ಥಕೊಡಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಗೋಪಾಡಿ ಗ್ರಾಪಂ ಅಧ್ಯಕ್ಷೆ ಸರಸ್ವತಿ ಜಿ.ಪುತ್ರನ್, ಜಿಪಂ ಸದಸ್ಯೆ ಶ್ರೀಲತಾ ಶೆಟ್ಟಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಈ ದೇಶ, ಸಂಸ್ಕೃತಿ, ಧರ್ಮ ಹಾಗೂ ಸಮಾಜಕ್ಕಾಗಿ ತಮ್ಮ ಜೀವನವನ್ನು ಯಾರು ಮುಡಿಪಾಗಿಸಿಡುತ್ತಾರೋ, ಅವರು ಶ್ರೇಷ್ಠ ಸಾಧಕರಾಗಲು ಸಾಧ್ಯ. ದೇಶದ ಗಡಿ ಕಾಯುವ ಸೈನಿಕರು ದೇಶ ರಕ್ಷಣೆಗಾಗಿ ದಿನದ ೨೪ ಗಂಟೆ ಕರ್ತವ್ಯ ನಿರ್ವಹಿಸುತ್ತಾರೆ, ಅವರು ನಮ್ಮಿಂದ ಅಪೇಕ್ಷಿಸುವುದು ಕೇವಲ ಅಭಿಮಾನ ಮಾತ್ರ, ದೇಶ ರಕ್ಷಣೆಗಾಗಿ ನಿಂತ ಸೈನಿಕರನ್ನು ನಿತ್ಯ ನೆನೆಯುವ ಕೆಲಸವಾಗಬೇಕು ಎಂದು ಮಾನವ ಹಕ್ಕು ಜಾಗೃತಿ ಸಮಿತಿಯ ಅಧ್ಯಕ್ಷ ನವೀನಚಂದ್ರ ಉಪ್ಪುಂದ ಹೇಳಿದರು. ಬಿಜೂರು ಕಂಚಿಕಾನ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆವಿದ್ಯಾರ್ಥಿ ಸಂಘದ ವತಿಯಿಂದ ನಡೆದ ಯೋಧ ಕುಟುಂಬಗಳಿಗೆ ಸನ್ಮಾನ ಹಾಗೂ ಯೋಧರಿಗೆ ನಮನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜಗತ್ತಿನಲ್ಲಿ ರಾಷ್ಟ್ರವನ್ನು ತಾಯಿ ಎಂದು ಪೂಜಿಸುವ ದೇಶ ಎಂದರೆ ಭಾರತವಾಗಿದೆ. ಇಲ್ಲಿ ದೇಶ, ಪ್ರಕೃತಿ, ಗೋವು ಎಲ್ಲರದಲ್ಲೂ ತಾಯಿಯನ್ನು ಕಾಣುವ ಉದಾತ್ತ ಸಂಸ್ಕೃತಿಯಿಂದ ಕೂಡಿದೆ. ಈ ರಾಷ್ಟ್ರ ಉಳಿಯಬೇಕಾದರೇ ಹೋರಾಡುವ ವ್ಯಕ್ತಿ ಅಗತ್ಯವಾಗಿದೆ. ಸೈನಿಕರು ಕ್ಷಣಕ್ಷಣಕ್ಕೂ ಜಾಗೃತರಾಗಿ ದೇಶ…

Read More