ಹೆಮ್ಮಾಡಿ: ಲಾರಿಗಳ ಮುಖಾಮುಖಿ ಢಿಕ್ಕಿ. ಐವರಿಗೆ ಗಾಯ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಹೆಮ್ಮಾಡಿಯ ರಾ.ಹೆ ೬೬ರಲ್ಲಿ ಎರಡು ಲಾರಿಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕರು ಸೇರಿದಂತೆ ಒಟ್ಟು ಐವರು ಗಾಯಗೊಂಡ ಘಟನೆ ವರದಿಯಾಗಿದೆ.

Call us

Click Here

ಹೆಮ್ಮಾಡಿಯ ಡೈರಿ ಸರ್ಕ್‌ಲ್ ಬಳಿ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ತೆರಳುತ್ತಿದ್ದ ಲಾರಿಗೆ ಅಭಿಮುಖವಾಗಿ ಬಂದ ಲಾರಿ ಮುಖಾಮುಖಿ ಢಿಕ್ಕಿ ಹೊಡಿದಿತ್ತು. ಢಿಕ್ಕಿಯ ರಭಸಕ್ಕೆ ಒಂದು ಲಾರಿ ಮುಗುಚಿ ಬಿದ್ದಿದ್ದು ಸಂಪೂರ್ಣ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಡ್ರೈವರ್, ಕ್ಲಿನರ್ ಸೇರಿದಂತೆ ಐವರು ಗಾಯಗೊಂಡಿದ್ದಾರೆ. ಕೆಲ ಹೊತ್ತು ಹೆದ್ದಾರಿ ಜಾಮ್ ಆಗಿದ್ದರಿಂದ ಸಂಚಾರ ವ್ಯತ್ಯಯ ಆಯಿತು. ಸಂಚಾರಿ ಪೊಲೀಸರು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply