ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರ 154ನೇ ಜನ್ಮದಿನಾಚರಣೆ ಅಂಗವಾಗಿ ಬೈಂದೂರಿನಲ್ಲಿ ಜ.28ರಂದು ನಡೆಯಲಿರುವ ’ವಿವೇಕ ಪರ್ವ’ ಬೃಹತ್ ಸಾರ್ವಜನಿಕ ಸಮಾರಂಭದ ಕರಪತ್ರ, ವಿವೇಕ್ ಬ್ಯಾಂಡ್ ಹಾಗೂ ಭಿತ್ತಿ ಪತ್ರವನ್ನು ನಾಗೂರು ಸಂದೀಪನ್ ಆಂಗ್ಲ ಮಾದ್ಯಮ ಶಾಲೆಯ ರಂಗಮಂದಿರದಲ್ಲಿ ಬಿಡುಗಡೆಗೊಳಿಸಲಾಯಿತು. ಸಂದೀಪನ್ ಶಾಲೆಯ ಅಧ್ಯಕ್ಷರಾದ ಪ್ರಕಾಶ್ ರಾವ್ ಬಿಡುಗಡೆಗೊಳಿಸಿದರು. ಸಮರ್ಥ ಭಾರತ ಬೈಂದೂರು ವಿಭಾಗದ ಗೌರವಾದ್ಯಕ್ಷ ವಿಶ್ವೇಶ್ವರ ಅಡಿಗ, ಕಾರ್ಯಾದ್ಯಕ್ಷ ಜಯಾನಂದ್ ಹೋಬಳಿದಾರ್, ಪ್ರಧಾನ ಕಾರ್ಯದರ್ಶಿ ಪ್ರಸನ್ನ ಕುಮಾರ್, ಸಂಚಾಲಕ ಶ್ರೀಧರ ಬಿಜೂರು, ಸಹ ಸಂಚಾಲಕ ಭೀಮೇಶ್, ಖಜಾಂಚಿ ಬಾಲಕೃಷ್ಣ ಬೈಂದೂರು, ಉದ್ಯಮಿಗಳಾದ ಗೋಪಾಲಕೃಷ್ಣ, ಪ್ರಕಾಶ್ ಭಟ್, ಗಿರೀಶ್ ಬೈಂದೂರು, ಲಿಂಗಯ್ಯ, ಶಿಕ್ಷಕರಾದ ಎ. ವೆಂಕಟೇಶ್, ರಾಜೇಶ್, ಗಣಪತಿ ಹೋಬಳಿದಾರ್, ಮಹೇಶ್ ಮಂಜೇಶ್ವರ, ಅನಿಲ್ ಕುಮಾರ್ ಟಿ. ಎನ್. ಸುರೇಶ್ ಮಲ್ಲಯ್ಯ ಮೊದಲಾದವರು ಜೊತೆಗಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸ್ವಾಮಿ ವಿವೇಕಾನಂದರ ಜನ್ಮದಿನದ ನೆನಪಿಗಾಗಿ ಬೈಂದೂರಿನಲ್ಲಿ ಜ.28ರಂದು ಹಮ್ಮಿಕೊಳ್ಳಲಾಗಿರುವ ’ವಿವೇಕ ಪರ್ವ’ ದೇಶಭಕ್ತ ಹೃದಯಗಳ ಅಪೂರ್ವ ಸಂಗಮ ಕಾರ್ಯಕ್ರಮಕ್ಕೆ ಪೂರ್ವಭಾವಿಯಾಗಿ ವಿವೇಕ್ ಬ್ಯಾಂಡ್ನ ನೂತನ ಟೀ ಶರ್ಟ್ಗಳನ್ನು ಬೈಂದೂರಿನ ಸಮರ್ಥ ಭಾರತ ಕಾರ್ಯಾಲಯದಲ್ಲಿ ಬಿಡುಗಡೆಗೊಳಿಸಲಾಯಿತು. ಸಮರ್ಥ ಭಾರತ ಬೈಂದೂರು ವಿಭಾಗದ ಕಾರ್ಯಾಧ್ಯಕ್ಷ ಜಯಾನಂದ್ ಹೋಬಳಿದಾರ್ ಹಾಗೂ ಸಹಸಂಚಾಲಕ ಭಿಮೇಶ್ ಕುಮಾರ್ ’ಬಿ ಗುಡ್ ಡೂ ಗುಡ್’ ಸಂದೇಶ ಹೊತ್ತ ಟೀಶರ್ಟ್ ಬಿಡುಗಡೆಗೊಳಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ಕಾರ್ಮಿಕ ವೇದಿಕೆ ರಿ. ಉಡುಪಿ ಹಾಗೂ ಶ್ರೀ ಮಹಾಗಣಪತಿ ಫ್ರೆಂಡ್ಸ್ ಹೊಲಾರ್, ಗೋಳಿಹೊಳೆ ಇವರ ಸಂಯುಕ್ತಾಶ್ರಯದಲ್ಲಿ ಎಂಡೋಸಲ್ಫಾನ್ ಮತ್ತು ಪೋಲಿಯೊ ಪೀಡಿತ ಮಕ್ಕಳ ಸಹಾಯಾರ್ಥವಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪ್ರೋ ಕಬಡ್ಡಿ ಪಂದ್ಯಾಟ ’ಎಂ.ಜಿ. ಟ್ರೋಫಿ -2017’ ಹಾಗೂ ’ಕೊಡಚಾದ್ರಿ ಕಾರ್ಮಿಕರ ಸಂಗಮ’ ಕಾರ್ಯಕ್ರಮ ಜನವರಿ 28ರಂದು ಗೊಳಿಹೊಳೆ ಗ್ರಾಮದ ಹೊಲಾರ್ ಶ್ರೀ ಮಹಾಗಣಪತಿ ಕ್ರೀಡಾಂಗಣದಲ್ಲಿ ಜರುಗಲಿದೆ. ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸ್ಥಳೀಯ ಕ್ರೀಡಾಪಟುಗಳಿಗೆ ಸನ್ಮಾನ, ಕಾರ್ಮಿಕ ನೊಂದಣಿ ಮತ್ತು ಬಡ ರೈತ ಕೂಲಿಕಾರ್ಮಿಕರಿಗೆ ಉಚಿತ ವಿಮಾ ಸೌಲಭ್ಯ, ಮನು ಹಂದಾಡಿ ಮತ್ತು ತಂಡದಿಂದ ಹಾಸ್ಯಸಂಜೆ ಕಾರ್ಯಕ್ರಮಗಳು ಜರುಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ – 8748964418, 9482623111
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಜಯಪುರದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಕುಂದಾಪುರದ ಆರ್.ಎನ್.ಶೆಟ್ಟಿ ಪದವಿ.ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಪ್ರಜ್ಞಾ ಎನ್ ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿರುತ್ತಾಳೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಹಾಕಾಳಿ ಮಹಿಳಾ ಮಂಡಳಿ (ರಿ) ಖಾರ್ವಿಕೇರಿ ಕುಂದಾಪುರ ಇದರ ಆಶ್ರಯದಲ್ಲಿ ಮಹಿಳೆಯರಿಗೆ ಉಚಿತವಾಗಿ ಬ್ಯೂಟಿಶಿಯನ್ ತರಬೇತಿ ಶಿಬಿರವನ್ನು ಶ್ರೀ ಮಹಾಕಾಳಿ ದೇವಸ್ಥಾನ ವಠಾರದಲ್ಲಿ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಮಂಡಳಿಯ ಅಧ್ಯಕ್ಷರಾದ ಕಸ್ತೂರಿ ಡಿ ಪಟೇಲ್ ವಹಿಸಿದ್ದರು. ಸಮಾರಂಭದ ಉದ್ಘಾಟನೆಯನ್ನು ಅಂಬಿಕಾ ಧೀರಜ್ ನೆರವೇರಿಸಿ, ಸೌಂದರ್ಯವು ನಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾದ ಜಯಾನಂದ ಖಾರ್ವಿ, ಕಿಯೋನಿಕ್ಸ್ ಸಂಸ್ಥೆಯ ಧೀರಜ್, ರೋಟರಿ ಕ್ಲಬ್ ಸನ್ರೈಸ್ನ ಮಾಜಿ ಅಧ್ಯಕ್ಷರಾದ ದಿನಕರ ಪಟೇಲ್ ಹಾಗೂ ಬ್ಯೂಟಿಶಿಯನ್ ತರಬೇತುದಾರರಾದ ಶ್ರೀಮತಿ ರತ್ನ ತೇಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಮ ವಿ. ಸ್ವಾಗತಿಸಿದರು. ಶ್ರೀಮತಿ ಗೀತಾ ವಸಂತ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ರೂಪಾ ಎಂ. ಸಹಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ೨೦೧೬-೧೭ನೇ ಶೈಕ್ಷಣಿಕ ಸಾಲಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಹೊಸೂರಿನ ಶ್ರೀ ಮೂಕಾಂಬಿಕಾ ದೇವಳದ ಪ್ರೌಢ ಶಾಲೆಯಲ್ಲಿ ಡಿಸೆಂಬರ್ ೩೦ರಂದು ನಡೆಯಿತು. ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಗಮನ ಕೊಡಬೇಕು. ಇಂತಹ ಎನ್.ಎಸ್.ಎಸ್. ಶಿಬಿರಗಳು ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಬದುಕಿನ ಶಿಕ್ಷಣವನ್ನು ನೀಡುತ್ತದೆ. ಸಮಾಜದ ಕಟ್ಟಕಡೆಯ ಮಗು ಶಿಕ್ಷಣ ಪಡೆದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡುವುದೇ ನಮ್ಮ ಸಂಸ್ಥೆಗಳ ಮುಖ್ಯ ಧ್ಯೇಯ ಎಂದು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಬಿ.ಎಮ್. ಸುಕುಮಾರ ಶೆಟ್ಟಿ ಸಮಾರೋಪ ಭಾಷಣದಲ್ಲಿ ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯ ದೇವಲ್ಕುಂದ ಅಶೋಕ ಶೆಟ್ಟಿ, ಹೊಸೂರು ಶ್ರೀ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಆ ಕಾಲದ ಹಾಡುಗಳ ಖದರೇ ಬೇರೆ. ಈ ಕಾಲದ ಸಂಗೀತ ಮತ್ತೆ ಮತ್ತೆ ಕೇಳಿದರೆ ಬೋರೇ. ಹೀಗೆ ರಾಗ ಎಳೆತ ಕೂರಬೇಡಿ! ಆ ಕಾಲ ಹಾಡುಗಳನ್ನು ಈ ಕಾಲದಲ್ಲಿ ಕೇಳುವ ಅವಕಾಶ ಕುಂದಾಪುರದ ಕಲಾಕ್ಷೇತ್ರ ಮಾಡಿಕೊಟ್ಟಿದೆ. ಕುಂದಾಪುರದ ಬೋರ್ಡ್ ಹೈಸ್ಕೂಲ್ ವಠಾರದಲ್ಲಿ ಜನವರಿ 7ರ ಶನಿವಾರ ಸಿತಾರ್ ವಾದಕ ಅವಿನಾಶ್ ಹೆಬ್ಬಾರ್ ಸವಿನೆನಪಿಗಾಗಿ ಉಸ್ತಾದ್ ಫಯಾಝ್ ಖಾನ್ ಅವರಿಂದ ‘ಭಜನಾ ಸಂಧಾ’ ನಡೆದರೇ, ಜನವರಿ 8ರ ಭಾನುವಾರ ಸಂಜೆ 6ರಿಂದ ‘ಇನಿದನಿ’ ಸುಮಧುರ ಕನ್ನಡ ಹಾಡುಗಳ ಸಂಗೀತ ಸಂಜೆ ನಡೆಯಲಿದೆ. ಇಂದಿಗೂ ಕಾಡುವ ಹಳೆಯ ಹಾಡುಗಳು ಪ್ರಸಿದ್ಧ ಸಂಗೀತಗಾರರ ಕಂಠದಿಂದ ಮೂಡಿಬರಲಿದೆ. ಭಜನಾ ಸಂಧ್ಯಾ ಹಾಗೂ ಇನಿದನಿ ಸಂಗೀತಪ್ರಿಯರನ್ನು ಒಂದಿಷ್ಟು ಹೊತ್ತು ಸಂಗೀತ ಲೋಕದಲ್ಲಿ ತೇಲಿಸಲಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೈಹಿಕ ಮಾನಸಿಕ ತೊಂದರೆಗಳಾದಾಗ ಯಾವಾಗಲೂ ದೇಹದ ಒಳಕ್ಕೆ ರಾಸಾಯನಿಕ ಔಷಧ ಸೇವಿಸುವುದನ್ನು ಕನಿಷ್ಠಗೊಳಿಸಿ ದೇಸೀ ಚಿಕಿತ್ಸೆಗಳಾದ ಯೋಗ, ಪ್ರಾಣಾಯಾಮ, ಅಕ್ಯುಪ್ರೆಶರ್ ಮುದ್ರೆ ವಿಜ್ಞಾನ, ಆಯಸ್ಕಾಂತ, ಆರ್ಯುವೇದ ಚಿಕಿತ್ಸೆಗಳನ್ನು ಬಳಸುವುದರಿಂದ ಬಹಳಷ್ಟು ಗುಣಪಡೆದು ಸರಳ, ಸುಲಭ ಮತ್ತು ಸಹಜತೆಯಿಂದ ಬಾಳಬಹುದು ಎಂದು ಸಾಹಿತಿ ಯು ವರಮಹಾಲಕ್ಷ್ಮೀ ಹೊಳ್ಳ ನುಡಿದರು. ಅವರು ಉಪ್ಪುಂದ ಶಂಕರ ಕಲಾ ಮಂದಿರದ ಸಮೃದ್ಧ ಸಭಾ ಭವನದಲ್ಲಿ ಹೊಳ್ಳರ ದತ್ತಿನಿಧಿ, ಸುವಿಚಾರ ಬಳಗ ಮತ್ತು ಮಹಿಳಾ ವಿವಿದೊದ್ದದೇಶ ಸಹಕಾರ ಸಂಘದ ಜಂಟಿ ಆಶ್ರಯದಲ್ಲಿ ಜನವರಿ ೨ ರಿಂದ ೮ ರ ತನಕ ಆಯೋಜಿಸಿದ ಶಿಬಿರದಲ್ಲಿ ರಾಜಸ್ಥಾನದ ಡಾ ರಾಮ ಮನೋಹರ ಲೋಹಿಯಾ ಆರೋಗ್ಯ ಜೀವನ್ ಸಂಸ್ಕಾರದ, ಡಾ|| ಭೂಪೇಂದ್ರ ಚೌಧರಿ ಮತ್ತು ತಂಡದ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಡಾ ಭೂಪೇಂದ್ರ ಚೌಧರಿಯವರು ಅಂಗೈ, ಅಂಗಾಲು, ಬೆನ್ನುಹುರಿ, ಸೊಂಟ ಮುಂತಾದೆಡೆ ಹರಿಯುವ ನರಮಂಡಲಗಳನ್ನು ಪ್ರಚೋದಿಸಿ ಸಶಕ್ತಗೊಳಿಸುವುದರಿಂದ ಉದ್ಯೋಗ ಮತ್ತು ಆಹಾರ ನಿಮಿತ್ತ ಬರುವ ಹಲವಾರು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಕ್ಷೇಮಾಭಿವೃದ್ಧಿ ನಿಧಿ, ಪದವಿಪೂರ್ವ ಶಿಕ್ಷಣ ಇಲಾಖೆ ಬೆಂಗಳೂರು ಹಾಗೂ ಎಸ್.ಎಸ್. ಪದವಿಪೂರ್ವ ಕಾಲೇಜು ವಿಜಯಪುರ ಇವರ ಆಶ್ರಯದಲ್ಲಿ ಜರಗಿದ ರಾಜ್ಯ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಸಾಂಸ್ಕೃತಿಕ ಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಉಡುಪಿಯ ಪೂರ್ಣಪ್ರಜ್ಞಾ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ವೈಷ್ಣವಿ ಗೋಪಾಲ್ ಅವರು ರಾಜ್ಯ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಈಕೆ ಗಂಗೊಳ್ಳಿಯ ಗೋಪಾಲ ಚಂದನ್ ಹಾಗೂ ಡಾ.ವೀಣಾ ಕಾರಂತ ಇವರ ಪುತ್ರಿಯಾಗಿದ್ದಾಳೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆಮ್ಶೆಡ್ಪುರದಲ್ಲಿ ನಡೆದ ಅಂತರಾಷ್ಟ್ರೀಯ ಪವರ್ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತ ತಂಡ ಪ್ರತಿನಿಧಿಸಿದ್ದ ಆನಗಳ್ಳಿ ಜಾಕ್ಸನ್ ಡಿಸೋಜಾಗೆ ಕುಂದಾಪುರದಲ್ಲಿ ಭವ್ಯ ಸ್ವಾಗತ ನೀಡಿ, ಹುಟ್ಟೂರು ಆನಗಳ್ಳಿಯಲ್ಲಿ ಸನ್ಮಾನಿಸಲಾಯಿತು. ಎರಡು ಬೆಳ್ಳಿ, ಒಂದು ಕಂಚಿನ ಪದಕದೊಂದಿಗೆ ದೇಶಕ್ಕೆ ಮತ್ತು ಊರಿಗೆ ಕೀರ್ತಿ ತಂದ ಆನಗಳ್ಳಿ ಜಾಕ್ಸನ್ ಅವರನ್ನು ಬೈಕ್ ರ್ಯಾಲಿ ಮೂಲಕ ಕುಂದಾಪುರ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಸಿ, ಅಭಿನಂದನೆ ಸಲ್ಲಿಸಿದರು. ಆನಗಳ್ಳಿ ಜೋಸೆಫ್ ಮತ್ತು ಕಾರ್ಮಿನ್ ಡಿಸೋಜಾ ಪುತ್ರ ಜಾಕ್ಸನ್ ಡಿಸೋಜಾ ತನ್ನ ಸಾಧನೆಗೆ ಬೆಂಗಾವಲಾಗಿ ನಿಂತ ಸಹೋದರ ಜೊಯ್ಸನ್ ಡಿಸೋಜಾ, ಕುಂದಾಪುರದ ನ್ಯೂ ಹರ್ಕುಲೆಸ್ ಜಿಮ್ ತರಬೇತುದಾರ ಸತೀಶ್ ಖಾರ್ವಿ ಮಾರ್ಗದರ್ಶನದಲ್ಲಿ ದೇಶವೇ ಗುರುತಿಸುವಂಥ ಮಹತ್ವದ ಸಾಧನೆ ಮಾಡಿದ್ದಾರೆ. ಸ್ಥಳೀಯರಾದ ವೇದಮೂರ್ತಿ ಚನ್ನಕೇಶವ ಭಟ್ ಅವರು ಜಾಕ್ಸನ್ ಅವರನ್ನು ಹತ್ತು ಸಾವಿರ ರೂ. ನೀಡಿ ಪ್ರೋತ್ಸಾಹಿಸಿದರು. ಆನಗಳ್ಳಿ ಗ್ರಾಮ ಪಂಚಾಯತ್ ಸದಸ್ಯ ಎಚ್. ಗಂಗಾಧರ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆನಗಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ…
