ಜ.28ಕ್ಕೆ ಹೊಲಾರ್‌ನಲ್ಲಿ ಎಂ.ಜಿ. ಟ್ರೋಫಿ. ಕೊಡಚಾದ್ರಿ ಕಾರ್ಮಿಕರ ಸಂಗಮ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರ್ನಾಟಕ ಕಾರ್ಮಿಕ ವೇದಿಕೆ ರಿ. ಉಡುಪಿ ಹಾಗೂ ಶ್ರೀ ಮಹಾಗಣಪತಿ ಫ್ರೆಂಡ್ಸ್ ಹೊಲಾರ್, ಗೋಳಿಹೊಳೆ ಇವರ ಸಂಯುಕ್ತಾಶ್ರಯದಲ್ಲಿ ಎಂಡೋಸಲ್ಫಾನ್ ಮತ್ತು ಪೋಲಿಯೊ ಪೀಡಿತ ಮಕ್ಕಳ ಸಹಾಯಾರ್ಥವಾಗಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಪ್ರೋ ಕಬಡ್ಡಿ ಪಂದ್ಯಾಟ ’ಎಂ.ಜಿ. ಟ್ರೋಫಿ -2017’ ಹಾಗೂ ’ಕೊಡಚಾದ್ರಿ ಕಾರ್ಮಿಕರ ಸಂಗಮ’ ಕಾರ್ಯಕ್ರಮ ಜನವರಿ 28ರಂದು ಗೊಳಿಹೊಳೆ ಗ್ರಾಮದ ಹೊಲಾರ್ ಶ್ರೀ ಮಹಾಗಣಪತಿ ಕ್ರೀಡಾಂಗಣದಲ್ಲಿ ಜರುಗಲಿದೆ.

Call us

Click Here

ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ಸ್ಥಳೀಯ ಕ್ರೀಡಾಪಟುಗಳಿಗೆ ಸನ್ಮಾನ, ಕಾರ್ಮಿಕ ನೊಂದಣಿ ಮತ್ತು ಬಡ ರೈತ ಕೂಲಿಕಾರ್ಮಿಕರಿಗೆ ಉಚಿತ ವಿಮಾ ಸೌಲಭ್ಯ, ಮನು ಹಂದಾಡಿ ಮತ್ತು ತಂಡದಿಂದ ಹಾಸ್ಯಸಂಜೆ ಕಾರ್ಯಕ್ರಮಗಳು ಜರುಗಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

  • ಹೆಚ್ಚಿನ ಮಾಹಿತಿಗಾಗಿ – 8748964418, 9482623111

Leave a Reply