ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕೆನರಾ ಬ್ಯಾಂಕಿನ ಎರಡನೇ ಶಾಖೆಯಾಗಿರುವ ಗಂಗೊಳ್ಳಿ ಶಾಖೆಯಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದ್ದು, ಇತರ ಬ್ಯಾಂಕುಗಳಿಗೆ ಹೋಲಿಸಿದರೆ ಗಂಗೊಳ್ಳಿ ಶಾಖೆಯು ಅತಿ ಹೆಚ್ಚು ವ್ಯವಹಾರ ನಡೆಸುತ್ತಿರುವುದು ಶ್ಲಾಘನೀಯ. ಗ್ರಾಮೀಣ ಪ್ರದೇಶದಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೇವೆ ನೀಡುವ ಮೂಲಕ ಕೆನರಾ ಬ್ಯಾಂಕ್ ಜನಮಾನಸದಲ್ಲಿ ಉಳಿದುಕೊಳ್ಳಲು ಸಹಾಯಕವಾಗಿದೆ. ಬ್ಯಾಂಕಿನ ಸಂಸ್ಥಾಪಕ ಅಮ್ಮೆಂಬಳ ಸುಬ್ಬರಾವ್ ಪೈ ಅವರ ಕನಸನ್ನು ನನಸು ಮಾಡುತ್ತಿರುವ ಕೆನರಾ ಬ್ಯಾಂಕ್ ದೇಶದ ಅಗ್ರಮಾನ್ಯ ಬ್ಯಾಂಕುಗಳಲ್ಲಿ ಒಂದಾಗಿದೆ ಎಂದು ಪತ್ರಕರ್ತ ಬಿ.ರಾಘವೇಂದ್ರ ಪೈ ಹೇಳಿದರು. ಅವರು ಕೆನರಾ ಬ್ಯಾಂಕಿನ ಗಂಗೊಳ್ಳಿ ಶಾಖೆಯಲ್ಲಿ ಆಯೋಜಿಸಲಾಗಿದ್ದ ಸಂಸ್ಥಾಪಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಟ್ಟಡ ಮಾಲೀಕ ಎಂ.ಜಿ.ಅಜಿತ್ ನಾಯಕ್, ಟಿ.ಗಂಗಾಧರ ಶೆಣೈ ಹಾಗೂ ವಿಜಯ ಖಾರ್ವಿ ಡಾ.ಅಮ್ಮೆಂಬಳ ಸುಬ್ಬರಾವ್ ಪೈ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಶುಭ ಹಾರೈಸಿದರು. ಬ್ಯಾಂಕಿನ ಹಿರಿಯ ಅಧಿಕಾರಿ ಅಶೋಕ್ ಜಿ.ವಿ., ನಿರ್ಮಲ್ ಕುಮಾರ್, ಇಂದಿರಾ ಭಟ್, ಜಿ.ಗಂಗಾಧರ ಪೈ. ರಾಜೇಂದ್ರ ಹಾಗೂ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಇಂದು ಕೃಷಿವಿಜ್ಞಾನ ರೈತರಿಗಾಗಿ ಕೆಲಸಮಾಡುತ್ತಿದೆಯೋ, ಆಹಾರ ಉತ್ಪಾದನೆಯ ಬಗೆಗೆ ಕೆಲಮಾಡುತ್ತಿದೆಯೋ ಅಥವಾ ಬಹುರಾಷ್ಟ್ರೀಯ ಕಂಪೆನಿಗಳ ಹಿತಾಸಕ್ತಿ ಕಾಯುತ್ತಿದೆಯೋ ಎಂಬ ಸಂಶಯ ಕಾಡುತ್ತಿದೆ. ಸಮೃದ್ಧವಾಗಿ ಮರಗಳನ್ನು ಬೆಳೆಸುವುದು, ದನಗಳನ್ನು ಸಾಕಿ ಕೃಷಿ ಕಾರ್ಯದಲ್ಲಿ ತೊಡಗಿಕೊಳ್ಳುವುದರಿಂದ ರೈತರು ನೆಮ್ಮದಿಯಿಂದ ಬದುಕಬಹುದು ಎಂದು ನಾಡೋಜ ಎಲ್. ವರ್ತೂರು ನಾರಾಯಣ ರೆಡ್ಡಿ ಹೇಳಿದರು. ಆಳ್ವಾಸ್ ನುಡಿಸಿರಿಯ ರತ್ನಾಕರವರ್ಣಿ ವೇದಿಕೆಯಲ್ಲಿ ಮೂರನೇ ದಿನದ ವಿಚಾರಗೋಷ್ಠಿಯಲ್ಲಿ ‘ಕೃಷಿ – ನಾಳೆಗಳ ನಿರ್ಮಾಣ’ದ ಕುರಿತು ಮಾತನಾಡಿದರು. ಹಸಿರು ಕ್ರಾಂತಿಯ ನೆಪದಲ್ಲಿ ವಿಶ್ವದ ಅನೇಕ ದೇಶಗಳಲ್ಲಿ ಮೂರು ಬಗೆಯ ಬೆಳೆಗಳನ್ನು ಸಾರ್ವತ್ರಿಕವಾಗಿ ಬೆಳೆಯಲಾಯಿತು. ಭಾತದಲ್ಲಿ ಭತ್ತ, ಗೋಧಿಯನ್ನು ಆಹಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಆದರೆ ಮುಸುಕಿನ ಜೋಳವನ್ನು ಕೋಳಿಗಳ ಆಹಾರವಾಗಿಯೇ ಉಳಿದಿದೆ. ಆಹಾರದ ಸಮಸ್ಯ ನೀಗಿಸಲು ಈ ಬೆಳೆಯನ್ನು ದೇಶದಲ್ಲಿ ಬೆಳೆಯುವ ಅವಶ್ಯಕತೆ ಇತ್ತೇ ಎಂದವರು ಪ್ರಶ್ನಿಸಿದರು. ಸಮಾಜಸೇವೆ ಮಾಡಬೇಕಿದ್ದರೇ ಸಮಾಜಸೇವಕನೆಂಬ ಹಣೆಪಟ್ಟಿ ಕಟ್ಟುಕೊಂಡು ತಿರುಗಾಡುವ ಬದಲಿಗೆ ಒಂದು ಮರ ನೆಡಿ. ಅದು ಪರಿಸರಕ್ಕೆ ಕೊಡವ ಆಮ್ಲಜನಕದಿಂದ ನೂರಾರು ಮಂದಿ…
ತಂತ್ರಜ್ಞಾನ ಕ್ಷೇತ್ರದಲ್ಲಿ ಸದಾ ಹೊಸ ಬೆಳವಣಿಗೆಗಳು ಆಗುತ್ತಿರುತ್ತವೆ. ಅವುಗಳೆಲ್ಲದರ ಅನುಕೂಲತೆಗಳು ಹೆಚ್ಚುಹೆಚ್ಚು ಜನರನ್ನು ತಲುಪಬೇಕಾದರೆ ಅದು ಅವರ ಭಾಷೆಯಲ್ಲೇ ಲಭ್ಯವಿರಬೇಕು. ತಂತ್ರಜ್ಞಾನದ ಸಹವಾಸ ನಮಗೇಕೆ ಎಂದು ಕುಳಿತವರು ಕೂಡ ಅದು ತಮ್ಮ ಭಾಷೆಯಲ್ಲೇ ಲಭ್ಯವಾದಾಗ ಅತ್ತ ಒಮ್ಮೆಯಾದರೂ ನೋಡುವುದು ಖಂಡಿತ. ಈಗ ನಮ್ಮ ಮನೆಗಳಲ್ಲೇ ನೋಡಿ, ಟೆಕ್ನಾಲಜಿಯೆಲ್ಲ ನಮಗೆ ಅರ್ಥವಾಗದ್ದು ಎಂದು ಕೆಲ ವರ್ಷಗಳ ಹಿಂದಷ್ಟೇ ಹೇಳುತ್ತಿದ್ದ ಅದೆಷ್ಟು ಜನ ಹಿರಿಯರು ಇದೀಗ ಫೇಸ್ಬುಕ್ – ವಾಟ್ಸ್ಆಪ್ಗಳಲ್ಲಿ ಸಕ್ರಿಯರಾಗಿಲ್ಲ? “ಹಾರುವ ಹಕ್ಕಿಗೆ ಬೀಸುವ ಗಾಳಿಗೆ ಸೀಮೆಯ ಹಂಗಿಲ್ಲ, ಮನುಜ ಮನುಜನ ನಡುವಲಿ ಮಾತ್ರ ಗಡಿಗಳಿಗೆಣೆಯಿಲ್ಲ” – ಇದು ಆ ಗೀತೆಯ ಮೊದಲ ಕೆಲ ಸಾಲುಗಳ ಭಾವಾರ್ಥ. ನಿಜ, ಬಹುತೇಕ ಸರಹದ್ದುಗಳೆಲ್ಲ ಮನುಷ್ಯರದೇ ಸೃಷ್ಟಿ. ರಾಷ್ಟ್ರಗಳ, ರಾಜ್ಯಗಳ, ಭಾಷೆಗಳ, ಧರ್ಮಗಳ ಹೆಸರಿನಲ್ಲಿ ಅದೆಷ್ಟೋ ಸರಹದ್ದುಗಳನ್ನು ನಮ್ಮ ಸುತ್ತಲೂ ನಾವೇ ನಿರ್ಮಿಸಿಕೊಂಡುಬಿಟ್ಟಿದ್ದೇವೆ. ಇಂತಹ ಸರಹದ್ದುಗಳ ಕಾಟ ಯಾವ ಕ್ಷೇತ್ರವನ್ನೂ ಬಿಟ್ಟಿಲ್ಲ. ಇವುಗಳ ಕೈವಾಡ ತಂತ್ರಜ್ಞಾನ ಕ್ಷೇತ್ರದಲ್ಲೂ ಇದೆ. ತಂತ್ರಜ್ಞಾನದ ಭಾಷೆ, ತಂತ್ರಜ್ಞಾನ ಕುರಿತ ಅರಿವು,…
ಕುಂದಾಪ್ರ ಡಾಟ್ ಕಾಂ ವರದಿ. ಒಂದು ಭಾಷೆಯನ್ನು ಉಳಿಸುವ, ಕಟ್ಟುವ, ಬಳಕೆಗೆ ಅನುಕೂಲವಾಗುವಂತೆ ಮಾಡುವ ಕಾರ್ಯ ವಿಶ್ವದೆಲ್ಲಡೆಯೂ ನಡೆಯುತ್ತಲೇ ಇರುತ್ತದೆ. ಅದರೊಂದಿಗೆ ವಿಶ್ವವ್ಯಾಪಿಯಾದ ಭಾಷೆಯೆದುರು ತನ್ನ ಅಸ್ಮಿತೆಯನ್ನು ಕಳೆದುಕೊಳ್ಳುವ ಪ್ರಾದೇಶಿಕ ಭಾಷೆಗಳನ್ನು ವಿಶ್ವಭಾಷೆಗೆ ಸರಿಸಾಟಿಯಾಗಿ ನಿಲ್ಲಿಸಬೇಕೆಂಬ ಪ್ರಯತ್ನಗಳೂ ಸದಾ ಒಂದಿಲ್ರ್ಲೆಂದು ರೂಪದಲ್ಲಿ ಚಾಲ್ತಿಯಲ್ಲಿರುತ್ತದೆ ಇಂತಹ ಭಾಷೆಯನ್ನು ಜೀವಂತವಾಗಿರಿಸಿ ಆಯಾ ಭಾಷೆಗಳಲ್ಲಿಯೇ ಲೇಖನಗಳನ್ನು ಪ್ರಕಟಿಸಿ ಜ್ಞಾನವನ್ನು ಹಂಚಿಕೊಳ್ಳುವ ಕಾರ್ಯಕ್ಕೆ ಆಧುನಿಕ ಯುಗದಲ್ಲಿ ತಾಂತ್ರಿಕ ನೆಲೆಗಟ್ಟನ್ನು ಒದಗಿಸಿ ಪೋಷಿಸುತ್ತಿರುವುದು ಲಾಭರಹಿತ ಸ್ವಂತಂತ್ರ ವಿಶ್ವಕೋಶ ವಿಕಿಪೀಡಿಯ. ವಿಕಿಪೀಡಿಯಾದಲ್ಲಿ ಕರಾವಳಿ ಕರ್ನಾಟಕದ ಭಾಷೆಗಳು ಕನ್ನಡವೂ ಸೇರಿದಂತೆ ಜಗತ್ತಿನ ೨೯೪ ಭಾಷೆಗಳಲ್ಲಿ ಲಭ್ಯವಿರುವ ‘ವಿಕಿಪಿಡಿಯಾ ವಿಶ್ವಕೋಶ’ ಕರ್ನಾಟಕ ಕರಾವಳಿಯ ಭಾಷೆಗಳನ್ನು ಅಂತರ್ಜಾಕ್ಕೆ ಸೇರಿಸುವ ಕಾರ್ಯದಲ್ಲಿಯೂ ನಿರತವಾಗಿದೆ. ಕರಾವಳಿ ಭಾಷೆಗ ವಿಕಿಮೀಡಿಯನ್ನರ ಮುತುವರ್ಜಿಯಿಂದಾಗಿ ಕರ್ನಾಟಕ ಕರಾವಳಿಯ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಬಳಕೆಯಲ್ಲಿರುವ ಪ್ರಮುಖ ಭಾಷೆಗಳಾದ ಕನ್ನಡ, ತುಳು, ಕೊಂಕಣಿಯನ್ನೂ ವಿಕೀಕರಣಗೊಳಿಸುವ ಪ್ರಯತ್ನ ಆಸಕ್ತರ ಬಳಗದಿಂದ ಸದ್ದಿಲ್ಲದೇ ಸಾಗಿದೆ. ಇದೇ ಉದ್ದೇಶದಿಂದ ಹುಟ್ಟಿಕೊಂಡ ಕರಾವಳಿ ವಿಕಿಮೀಡಿಯನ್ನರುಗಳ ಸಂಘವು ಕರಾವಳಿಯ ಪ್ರಮುಖ…
ಶಾಂಭವಿ ಎಂ. ಜೆ. | ಕುಂದಾಪ್ರ ಡಾಟ್ ಕಾಂ ವರದಿ ಮೂಡುಬಿದಿರೆ: ರಾಜ್ಯದ ವಿವಿಧೆಡೆಗಳಿಂದ ನಾಡಿನ ನುಡಿ ಸಂಸ್ಸೃತಿಯ ರಾಷ್ಟ್ರೀಯ ಸಮ್ಮೇಳನವನ್ನು ಸವಿಯಲು ಬರುವವರಿಗಾಗಿ ಬಗೆ ಬಗೆಯ ಉಪಹಾರ, ಭೋಜನ ಸವಿಯುವ ಅವಕಾಶ. ಸಾವಿರಾರು ಜನರಿಗೆ ಎಲ್ಲಿಯೂ ಲೋಪವಾಗದಂತೆ ಸಮಯಕ್ಕೆ ಸರಿಯಾಗಿ ತಯಾರಾಗುವ ಅಡುಗೆ, ಅಚ್ಚುಕಟ್ಟಾಗಿ ಬಡಿಸುವ ತಂಡ. ಜನಸಾಮಾನ್ಯರಿಂದ ಹಿಡಿದು ಅತಿಥಿ ಗಣ್ಯರ ತನಕವೂ ಒಂದೇ ಬಗೆಯ ಊಟ ಉಪಹಾರ. ಇದು ನುಡಿಸಿರಿಯ ವಿಶೇಷತೆ. ಕಲೆ, ಸಾಹಿತ್ಯ ಸಾಂಸ್ಕೃತಿಕ ಉತ್ಸವವು ಕಣ್ಮನಗಳಿಗೆ ಮುದನೀಡಿದರೇ, ನುಡಿಸಿರಿಯ ಸವಿ ಭೋಜನ ಹೊಟ್ಟೆಯ ಹಸಿವನ್ನು ತಣಿಸುತ್ತೆ. ೧೮೦ ಮಂದಿಯನ್ನೊಳಗೊಂಡ ತಂಡ ಒಂದೇ ಕಡೆ ಅಡುಗೆಯ ತಯಾರಿಸಿದ್ದು, ಬೆಳೆಗ್ಗೆ ಮೂರು ಬಗೆಯ ತಿಂಡಿ ಮತ್ತು ಟಿ-ಕಾಫಿ, ಮಧ್ಯಾಹ್ನ ಮತ್ತು ರಾತ್ರಿ ವೇಳೆ ಪಲ್ಯ, ಸಾರು, ತೊವೆ, ಗಸಿ, ಸಾಂಬಾರುಗಳನ್ನು ನಾಲ್ಕು ದಿನವೂ ನೀಡಲಾಗುತ್ತದೆ. ನುಡಿಸಿರಿಯಲ್ಲಿ ಇಡ್ಲಿ ಸಾಂಬಾರು ಶಿರಾ, ಉಪ್ಪಿಟ್ಟು, ಅವಲಕ್ಕಿ, ಚಹಾ, ಕಾಫಿ, ಟೊಮೆಟೊಬಾತ್, ಜೈನ್‌ಕೇಕ್, ಶಾವಿಗೆಬಾತ್, ಅವಲಕ್ಕಿ ತಿಂಡಿಗಳ ಪಟ್ಟಿಯಲ್ಲಿದ್ದು ದಿನದ ಬೆಳಿಗ್ಗೆ…
ಮೂಡುಬಿದಿರೆ: ರಾಜ್ಯ ಮಟ್ಟದ ಮುಕ್ತ ಪುರುಷರ ಹಾಗೂ ಮಹಿಳೆಯರ ಕುಸ್ತಿಪಂದ್ಯಾಟವು ಕು.ಶಿ. ಹರಿದಾಸ ಭಟ್ಟ ವೇದಿಕೆಯಲ್ಲಿ ಅತ್ಯಂತ ನಡೆಯಿತು. ಈ ಕುಸ್ತಿ ಪಂದ್ಯಾಟದಲ್ಲಿ ರಾಷ್ಟ್ರೀಯ ಮಟ್ಟಗಳಲ್ಲಿ ಭಾಗವಹಿಸಿದ ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಿ ಪ್ರಶಸ್ತಿಗಾಗಿ ಜಿದ್ದಾ ಜಿದ್ದಿನ ಹೋರಾಟ ನಡೆಸಿದರು. ನುಡಿಸಿರಿ ಇತಿಹಾಸದಲ್ಲಿಯೆ ಪ್ರಥಮ ಬಾರಿಗೆ ಏರ್ಪಡಿಸಿದ ಕುಸ್ತಿ ಪಂದ್ಯಾಟ ಮುಖ್ಯ ಆಕರ್ಷಣೆಯಾಗಿತ್ತು. ಕ್ರೀಡಾ ಪ್ರೇಮಿಗಳು ತುದಿಗಾಲಿನಲ್ಲಿ ನಿಲ್ಲುವಂತಹ ರೋಚಕ ಕ್ಷಣಗಳು ಕಂಡು ಬಂದವು. ಅನುಭವಿ ಕ್ರೀಡಾಪಟುಗಳು ತಮ್ಮ ಚಾಣಾಕ್ಷತನ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಣಬಹುದಾದಂತಹ ರೋಚಕ ಕ್ಷಣಗಳಿಗೆ ಹರಿದಾಸ ಭಟ್ಟವೇದಿಕೆ ಸಾಕ್ಷಿಯಾಯಿತು. ವಿದ್ಯಾರ್ಥಿಗಳು, ಹಿರಿಯರು, ಹಾಗೂ ಮಹಿಳೆಯರು ಹೆಚ್ಚು ಸಂಖ್ಯೆಯಲ್ಲಿ ಆಗಮಿಸಿ ಕುಸ್ತಿ ಸಿರಿಯ ವೈಭವನ್ನು ಸವಿದರು. ಬಾಲಕಿಯರ ಕಲಾತ್ಮಕ ಶೈಲಿಯ ಪ್ರದರ್ಶನ ವೀಕ್ಷಕರ ಹೃದಯ ಬಡಿತವನ್ನು ಹೆಚ್ಚಿಸಿತು. ಕುಸ್ತಿ ಸಿರಿಯಲ್ಲಿ ಅತ್ಯಂತ ಪ್ರಮುಖವಾದ ಪ್ರಶಸ್ತಿಗಳಾದ ಆಳ್ವಾಸ್ ನುಡಿಸಿರಿ ಕೇಸರಿ ೨೦೧೬, ಪುರುಷರ ವಿಭಾಗದಲ್ಲಿ ಆಳ್ವಾಸ್ ನುಡಿಸಿರಿ ಕುಮಾರ ೨೦೧೬, ಮಹಿಳೆಯರ ವಿಭಾಗದಲ್ಲಿ ಆಳ್ವಾಸ್ ನುಡಿಸಿರಿ…
ಶಾಂಭವಿ ಎಂ. ಜೆ. | ಕುಂದಾಪ್ರ ಡಾಟ್ ಕಾಂ ವರದಿ. ಅತ್ತಿಂದಿತ್ತ ಓಡಾಡುತ್ತಿರುವ ನಾಯಿಗಳನ್ನು ನೋಡಿದರೆ ಎತ್ತಿ ಮುದ್ದಾಡಬೇಕು ಎನ್ನುವ ಆಸೆ. ಆದರೆ ಅದರ ದಷ್ಟಪುಷ್ಟ ದೇಹವನ್ನು ಕಂಡರೆ ಭಯ. ಅದೆನೇ ಆದರೂ ನಾವು ವಾಕ್‌ತ್ರೋ ಮಾಡಲು ರೆಡಿ ಎಂದು ಗಾಂಭೀರ್ಯದಿಂದ ನಿಂತಿದ್ದ ಶ್ವಾನಗಳನ್ನು ಕಂಡು ಮೂಕ ವಿಸ್ಮಿತರಾಗಿದ್ದ ಪ್ರೇಕ್ಷಕರು. ಆಳ್ವಾಸ್ ನುಡಿಸಿರಿಯಲ್ಲಿ ನಡೆದ ಶ್ವಾನಸಿರಿಯಲ್ಲಿ ವಿವಿಧ ಊರಿನಿಂದ ಬಂದಿದ್ದ ವಿವಿಧ ಬೀಗಲ್, ಡ್ಯಾಷ್ ಆಂಡ್ ಡಾಗ್, ಕ್ರೌನ್, ರ್‍ಯಾಟ್ ವಿಲ್ಲರ್, ರ್‍ಯಾಪ್, ಅಸ್ಕಿ ಹೀಗೆ ೧೪ ತಳಿಯ ನಾಯಿಗಳನ್ನು ಸ್ವರ್ಧೆಯಲ್ಲಿದ್ದವು. ಚಿಕ್ಕ ಮುಖದ ಷೂಜ್ಹೊ ನೆರೆದಿದ್ದ ಪ್ರೇಕ್ಷಕರಿಗೆ ಆಕರ್ಷಿತ್ತದೇ, ಕರೆದವರ ಬಳಿ ನಿಧಾನಕ್ಕೆ ಹೆಜ್ಜೆ ಹಾಕುತ್ತಿತ್ತು. ಜರ್ಮನ್ ಶಫರ್ಡ್ ತನ್ನ ರೇಷ್ಮೆಯಂತಹ ಕೂದಲಿನಿಂದ ಗಮನ ಸೆಳೆದರೇ, ಕ್ರೌನ್ ತಳಿಯ ಶ್ವಾನವು ತನ್ನ ತೆಳ್ಳಗಿನ ಮೈಕಟ್ಟು, ಚೂಪಾದ ಬಾಲದಿಂದ ತನ್ನ ಮೈ ಬಳಕಿಸುತ್ತಿತ್ತು. ಚಾಣಕ್ಷತನದಿಂದ ಬೇಟೆಯಾಡುವ ಶ್ವಾನ ಎಂದು ಹೆಸರು ಪಡೆದಿರುವ ಉತ್ತರ ಕರ್ನಾಟಕದ ತಳಿ ತನ್ನ ಚಲ್ಲಾಟದಿಂದ ನೆರೆದಿದ್ದವರಿಗೆ ಮನೊರಂಜನೆ…
ಮೂಡುಬಿದರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನದ ವಿಶೇಷಕ್ಕೆ ಇನ್ನೊಂದು ಅಚ್ಚರಿ ಸೇರ್ಪಡೆಯಾಗಿತ್ತು. ಅದು ಕೋತಿರಾಜ್ ಅವರ ಆಗಮನ. ಕೋತಿರಾಜ್ ಎಂದೇ ಪ್ರಖ್ಯಾತರಾದ ಚಿತ್ರದುರ್ಗದ ಜ್ಯೋತಿರಾಜ್ ಆಲಿಯಾಸ್ ಕೋತಿರಾಜ್ ಆಳ್ವಾಸ್ ಆಯುರ್ವೇದ ಕಾಲೇಜಿನ ಮುಗಿಲೆತ್ತರದ ಕಟ್ಟಡವನ್ನು ಏರುತ್ತಾ ಹೋದಾಗ ಸೇರಿದ್ದ ನೂರಾರು ಜನ ಒಮ್ಮೆಗೇ ಚಕಿತಗೊಂಡರು. ಕೋತಿರಾಜ್‌ಗೆ ೨೭ ಮಂದಿ ಶಿಷ್ಯರಿದ್ದಾರಂತೆ. ಅವರಲ್ಲಿ ಹಲವರು ಮಿಲಿಟರಿ ಮತ್ತು ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಇವರ ಜತೆ ಇನ್ನೂ ಇಬ್ಬರು ಮಕ್ಕಳು ಆಗಮಿಸಿದ್ದಾರೆ. ಅವರಿಬ್ಬರೂ ಕೋತಿರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಕೇವಲ ಆಳ್ವಾಸ್‌ನ ಸಂಸ್ಕೃತಿ ಉತ್ಸವವಲ್ಲ. ಇದು ಕರ್ನಾಟಕದ ಸಾಂಸ್ಕೃತಿಕ ಹಬ್ಬ ಎಂದು ಬಣ್ಣಿಸಿದರು ಕೋತಿರಾಜ್.
ರಮ್ಯಾ. ಜಿ | ಕುಂದಾಪ್ರ ಡಾಟ್ ಕಾಂ ವರದಿ ಮೂಡುಬಿದರೆ: ನಶಿಸಿ ಹೊಗುತ್ತಿರುವ ದೇಶೀಯ ತಳಿಯ ಧಾನ್ಯಗಳನ್ನು ಶೇಖರಿಸಿ ಅವುಗಳ ಮಹತ್ವವನ್ನು ಸಾರುವ ಕಾಯಕಕ್ಕೆ ಧಾನ್ಯಸಿರಿ ಸಾಕ್ಷಿಯಾಯಿತು. ದಾವಣಗೆರೆ ಕುಂಬಳೂರಿನ ಶರಣಯ್ಯ ಮುದ್ದಣ್ಣ ಸಾವಯವ ಕೃಷಿಕರ ಬಳಗ ಎಂಬ ಸಂಸ್ಥೆಯು ಅಳಿವಿನಂಚಿನಲ್ಲಿರುವ ಧಾನ್ಯಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ೪೦೦ಕ್ಕೂ ಅಧಿಕ ಬಗೆಯ ದೇಶಿಯ ತಳಿಗಳನ್ನು ಸಂಗ್ರಹಿಸುತ್ತಿದೆ. ಅವುಗಳನ್ನು ಈ ಭಾರಿ ಧಾನ್ಯಸಿರಿಯಲ್ಲಿ ಪ್ರದರ್ಶಿಸುತ್ತಿದೆ. ೪೦ ಬಗೆಯ ಸಿರಿಧಾನ್ಯದ ತಳಿಗಳು, ೨೦ ಬಗೆಯ ತರಕಾರಿ ಬೀಜಗಳು, ತೋಡಭತ್ತ, ಅವಲಕ್ಕಿ, ಆರಕ, ಸಾಮೆ, ಗಡ್ಡೆ-ಗೆಣಸು, ಬಾಳೆ, ತೆಂಗುಗಳ ೪೦ ತಳಿಗಳಿವೆ. ಕಣ್ಮರೆಗೊಳ್ಳುತ್ತಿರುವ ತಳಿಗಳಾದ ಸಹಸ್ರ ಕದಳಿ ಬಾಳೆ ಹಣ್ಣು, ಸಲರಿ, ನಾಟಿ ಜೋಳ, ಕಪ್ಪು ಅರಶಿನ, ಚಂದ್ರ ಬಾಳೆ, ಕಾಡು ಟೋಮೇಟೊ, ಬೆಣ್ಣೆ ಹಣ್ಣು, ರೆಕ್ಕೆ ಅವರೆ, ನಾಗಲಿಂಗ, ಕೇತಕಿ ಫಲ,ಉಳಿ ಶೀರ ಇತರ ಬಗೆಯ ಧಾನ್ಯಗಳು, ಔಷಧಿಯ ಗಿಡಗಳು ಇಲ್ಲಿವೆ. ಧಾನ್ಯಸಿರಿಯಲ್ಲಿ ಕಲ್ಲಂಗಡಿಯಲ್ಲಿ ರಚಿಸಿದ ಸ್ವಾತಂತ್ರ ಹೋರಾಟಗಾರರ ಕಲಾಕೃತಿಗಳು ಮನಸೆಳೆಯುತ್ತಿದ್ದರೇ, ತರಕಾರಿ ಹಾಗೂ…
ಮೂಡುಬಿದಿರೆ: `ಸರಕಾರಿ ಶಾಲೆಯೇ ಇರಲಿ ಅಥವಾ ಖಾಸಗಿ ಶಾಲೆಯೇ ಇರಲಿ ಅವುಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸಿ ಏಕರೂಪ ಶಿಕ್ಷಣ ನೀತಿಯನ್ನು ತರಬೇಕಿದೆ. ಈ ಎರಡೂ ವ್ಯವಸ್ಥೆಗಳ ಗೊಂದಲಗಳು ನಿರ್ಮಿಸುವ ಕಂದರಗಳನ್ನು ದಾಟುವುದು ಎಲ್ಲ ವಿದ್ಯಾರ್ಥಿಗಳಿಗೂ ಸಾಧ್ಯವಿಲ್ಲ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳಾಗಬೇಕಿದೆ. ದೇಸೀ ಚಿಂತನೆಗಳಿಗೆ ಒತ್ತು ಕೊಟ್ಟು ಅದನ್ನು ಅನುಷ್ಠಾನಗೋಳಿಸುವ ಗಟ್ಟಿತನ ನಮ್ಮ ನಾಯಕರಿಗೆ ಬೇಕಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ-೨೦೧೬ರಲ್ಲಿ ಶಿಕ್ಷಣದ ಕುರಿತು ವಿಶೇಷೋಪನ್ಯಾಸ ನೀಡಿದ ಅವರು ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಕೆಲವು ಮಹತ್ವದ ಸಂಗತಿಗಳನ್ನು ವಿಶ್ಲೇಷಿಸಿದರು. ಹೊರರಾಜ್ಯದ ಐಎಎಸ್ ಅಧಿಕಾರಿಗಳ ಜೊತೆಗೆ ಎಸಿ ರೂಮಿನಲ್ಲಿ ಚರ್ಚೆ ಮಾಡಿ ನಮ್ಮ ರಾಜ್ಯದ ಶಿಕ್ಷಣ ನೀತಿಗಳನ್ನು ರೂಪಿಸಲಾಗುತ್ತಿದೆ. ಆದರೆ ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯ ಮಾಡಿದ ಅನುಭವಿಗಳ ಜೊತೆಗೆ ಚರ್ಚಿಸಿ ನಮ್ಮ ರಾಜ್ಯಕ್ಕೆ ಬೇಕಾದ ಪ್ರಬಲ ಶಿಕ್ಷಣ ನೀತಿಗಳನ್ನು ರೂಪಿಸುವ…
