ಶಾಂಭವಿ ಎಂ. ಜೆ. | ಕುಂದಾಪ್ರ ಡಾಟ್ ಕಾಂ ವರದಿ. ಅತ್ತಿಂದಿತ್ತ ಓಡಾಡುತ್ತಿರುವ ನಾಯಿಗಳನ್ನು ನೋಡಿದರೆ ಎತ್ತಿ ಮುದ್ದಾಡಬೇಕು ಎನ್ನುವ ಆಸೆ. ಆದರೆ ಅದರ ದಷ್ಟಪುಷ್ಟ ದೇಹವನ್ನು ಕಂಡರೆ ಭಯ. ಅದೆನೇ ಆದರೂ ನಾವು ವಾಕ್‌ತ್ರೋ ಮಾಡಲು ರೆಡಿ ಎಂದು ಗಾಂಭೀರ್ಯದಿಂದ ನಿಂತಿದ್ದ ಶ್ವಾನಗಳನ್ನು ಕಂಡು ಮೂಕ ವಿಸ್ಮಿತರಾಗಿದ್ದ ಪ್ರೇಕ್ಷಕರು. ಆಳ್ವಾಸ್ ನುಡಿಸಿರಿಯಲ್ಲಿ ನಡೆದ ಶ್ವಾನಸಿರಿಯಲ್ಲಿ ವಿವಿಧ ಊರಿನಿಂದ ಬಂದಿದ್ದ ವಿವಿಧ ಬೀಗಲ್, ಡ್ಯಾಷ್ ಆಂಡ್ ಡಾಗ್, ಕ್ರೌನ್, ರ್‍ಯಾಟ್ ವಿಲ್ಲರ್, ರ್‍ಯಾಪ್, ಅಸ್ಕಿ ಹೀಗೆ ೧೪ ತಳಿಯ ನಾಯಿಗಳನ್ನು ಸ್ವರ್ಧೆಯಲ್ಲಿದ್ದವು. ಚಿಕ್ಕ ಮುಖದ ಷೂಜ್ಹೊ ನೆರೆದಿದ್ದ ಪ್ರೇಕ್ಷಕರಿಗೆ ಆಕರ್ಷಿತ್ತದೇ, ಕರೆದವರ ಬಳಿ ನಿಧಾನಕ್ಕೆ ಹೆಜ್ಜೆ ಹಾಕುತ್ತಿತ್ತು. ಜರ್ಮನ್ ಶಫರ್ಡ್ ತನ್ನ ರೇಷ್ಮೆಯಂತಹ ಕೂದಲಿನಿಂದ ಗಮನ ಸೆಳೆದರೇ, ಕ್ರೌನ್ ತಳಿಯ ಶ್ವಾನವು ತನ್ನ ತೆಳ್ಳಗಿನ ಮೈಕಟ್ಟು, ಚೂಪಾದ ಬಾಲದಿಂದ ತನ್ನ ಮೈ ಬಳಕಿಸುತ್ತಿತ್ತು. ಚಾಣಕ್ಷತನದಿಂದ ಬೇಟೆಯಾಡುವ ಶ್ವಾನ ಎಂದು ಹೆಸರು ಪಡೆದಿರುವ ಉತ್ತರ ಕರ್ನಾಟಕದ ತಳಿ ತನ್ನ ಚಲ್ಲಾಟದಿಂದ ನೆರೆದಿದ್ದವರಿಗೆ ಮನೊರಂಜನೆ…
Author: ನ್ಯೂಸ್ ಬ್ಯೂರೋ
ಮೂಡುಬಿದರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನದ ವಿಶೇಷಕ್ಕೆ ಇನ್ನೊಂದು ಅಚ್ಚರಿ ಸೇರ್ಪಡೆಯಾಗಿತ್ತು. ಅದು ಕೋತಿರಾಜ್ ಅವರ ಆಗಮನ. ಕೋತಿರಾಜ್ ಎಂದೇ ಪ್ರಖ್ಯಾತರಾದ ಚಿತ್ರದುರ್ಗದ ಜ್ಯೋತಿರಾಜ್ ಆಲಿಯಾಸ್ ಕೋತಿರಾಜ್ ಆಳ್ವಾಸ್ ಆಯುರ್ವೇದ ಕಾಲೇಜಿನ ಮುಗಿಲೆತ್ತರದ ಕಟ್ಟಡವನ್ನು ಏರುತ್ತಾ ಹೋದಾಗ ಸೇರಿದ್ದ ನೂರಾರು ಜನ ಒಮ್ಮೆಗೇ ಚಕಿತಗೊಂಡರು. ಕೋತಿರಾಜ್‌ಗೆ ೨೭ ಮಂದಿ ಶಿಷ್ಯರಿದ್ದಾರಂತೆ. ಅವರಲ್ಲಿ ಹಲವರು ಮಿಲಿಟರಿ ಮತ್ತು ಪೊಲೀಸ್ ಇಲಾಖೆಗೆ ಸೇರಿದ್ದಾರೆ. ಇವರ ಜತೆ ಇನ್ನೂ ಇಬ್ಬರು ಮಕ್ಕಳು ಆಗಮಿಸಿದ್ದಾರೆ. ಅವರಿಬ್ಬರೂ ಕೋತಿರಾಜ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಕೇವಲ ಆಳ್ವಾಸ್‌ನ ಸಂಸ್ಕೃತಿ ಉತ್ಸವವಲ್ಲ. ಇದು ಕರ್ನಾಟಕದ ಸಾಂಸ್ಕೃತಿಕ ಹಬ್ಬ ಎಂದು ಬಣ್ಣಿಸಿದರು ಕೋತಿರಾಜ್.
ರಮ್ಯಾ. ಜಿ | ಕುಂದಾಪ್ರ ಡಾಟ್ ಕಾಂ ವರದಿ ಮೂಡುಬಿದರೆ: ನಶಿಸಿ ಹೊಗುತ್ತಿರುವ ದೇಶೀಯ ತಳಿಯ ಧಾನ್ಯಗಳನ್ನು ಶೇಖರಿಸಿ ಅವುಗಳ ಮಹತ್ವವನ್ನು ಸಾರುವ ಕಾಯಕಕ್ಕೆ ಧಾನ್ಯಸಿರಿ ಸಾಕ್ಷಿಯಾಯಿತು. ದಾವಣಗೆರೆ ಕುಂಬಳೂರಿನ ಶರಣಯ್ಯ ಮುದ್ದಣ್ಣ ಸಾವಯವ ಕೃಷಿಕರ ಬಳಗ ಎಂಬ ಸಂಸ್ಥೆಯು ಅಳಿವಿನಂಚಿನಲ್ಲಿರುವ ಧಾನ್ಯಗಳನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದು, ೪೦೦ಕ್ಕೂ ಅಧಿಕ ಬಗೆಯ ದೇಶಿಯ ತಳಿಗಳನ್ನು ಸಂಗ್ರಹಿಸುತ್ತಿದೆ. ಅವುಗಳನ್ನು ಈ ಭಾರಿ ಧಾನ್ಯಸಿರಿಯಲ್ಲಿ ಪ್ರದರ್ಶಿಸುತ್ತಿದೆ. ೪೦ ಬಗೆಯ ಸಿರಿಧಾನ್ಯದ ತಳಿಗಳು, ೨೦ ಬಗೆಯ ತರಕಾರಿ ಬೀಜಗಳು, ತೋಡಭತ್ತ, ಅವಲಕ್ಕಿ, ಆರಕ, ಸಾಮೆ, ಗಡ್ಡೆ-ಗೆಣಸು, ಬಾಳೆ, ತೆಂಗುಗಳ ೪೦ ತಳಿಗಳಿವೆ. ಕಣ್ಮರೆಗೊಳ್ಳುತ್ತಿರುವ ತಳಿಗಳಾದ ಸಹಸ್ರ ಕದಳಿ ಬಾಳೆ ಹಣ್ಣು, ಸಲರಿ, ನಾಟಿ ಜೋಳ, ಕಪ್ಪು ಅರಶಿನ, ಚಂದ್ರ ಬಾಳೆ, ಕಾಡು ಟೋಮೇಟೊ, ಬೆಣ್ಣೆ ಹಣ್ಣು, ರೆಕ್ಕೆ ಅವರೆ, ನಾಗಲಿಂಗ, ಕೇತಕಿ ಫಲ,ಉಳಿ ಶೀರ ಇತರ ಬಗೆಯ ಧಾನ್ಯಗಳು, ಔಷಧಿಯ ಗಿಡಗಳು ಇಲ್ಲಿವೆ. ಧಾನ್ಯಸಿರಿಯಲ್ಲಿ ಕಲ್ಲಂಗಡಿಯಲ್ಲಿ ರಚಿಸಿದ ಸ್ವಾತಂತ್ರ ಹೋರಾಟಗಾರರ ಕಲಾಕೃತಿಗಳು ಮನಸೆಳೆಯುತ್ತಿದ್ದರೇ, ತರಕಾರಿ ಹಾಗೂ…
ಮೂಡುಬಿದಿರೆ: `ಸರಕಾರಿ ಶಾಲೆಯೇ ಇರಲಿ ಅಥವಾ ಖಾಸಗಿ ಶಾಲೆಯೇ ಇರಲಿ ಅವುಗಳ ನಡುವಿನ ಅಸಮಾನತೆಯನ್ನು ಹೋಗಲಾಡಿಸಿ ಏಕರೂಪ ಶಿಕ್ಷಣ ನೀತಿಯನ್ನು ತರಬೇಕಿದೆ. ಈ ಎರಡೂ ವ್ಯವಸ್ಥೆಗಳ ಗೊಂದಲಗಳು ನಿರ್ಮಿಸುವ ಕಂದರಗಳನ್ನು ದಾಟುವುದು ಎಲ್ಲ ವಿದ್ಯಾರ್ಥಿಗಳಿಗೂ ಸಾಧ್ಯವಿಲ್ಲ. ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ನ್ಯಾಯ ಸಿಗಬೇಕೆಂದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಅಗತ್ಯ ಬದಲಾವಣೆಗಳಾಗಬೇಕಿದೆ. ದೇಸೀ ಚಿಂತನೆಗಳಿಗೆ ಒತ್ತು ಕೊಟ್ಟು ಅದನ್ನು ಅನುಷ್ಠಾನಗೋಳಿಸುವ ಗಟ್ಟಿತನ ನಮ್ಮ ನಾಯಕರಿಗೆ ಬೇಕಿದೆ’ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಮೂಡುಬಿದಿರೆಯಲ್ಲಿ ನಡೆಯುತ್ತಿರುವ ಆಳ್ವಾಸ್ ನುಡಿಸಿರಿ-೨೦೧೬ರಲ್ಲಿ ಶಿಕ್ಷಣದ ಕುರಿತು ವಿಶೇಷೋಪನ್ಯಾಸ ನೀಡಿದ ಅವರು ಶಿಕ್ಷಣ ಕ್ಷೇತ್ರದಲ್ಲಾಗುತ್ತಿರುವ ಕೆಲವು ಮಹತ್ವದ ಸಂಗತಿಗಳನ್ನು ವಿಶ್ಲೇಷಿಸಿದರು. ಹೊರರಾಜ್ಯದ ಐಎಎಸ್ ಅಧಿಕಾರಿಗಳ ಜೊತೆಗೆ ಎಸಿ ರೂಮಿನಲ್ಲಿ ಚರ್ಚೆ ಮಾಡಿ ನಮ್ಮ ರಾಜ್ಯದ ಶಿಕ್ಷಣ ನೀತಿಗಳನ್ನು ರೂಪಿಸಲಾಗುತ್ತಿದೆ. ಆದರೆ ಶಿಕ್ಷಣಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಕಾರ್ಯ ಮಾಡಿದ ಅನುಭವಿಗಳ ಜೊತೆಗೆ ಚರ್ಚಿಸಿ ನಮ್ಮ ರಾಜ್ಯಕ್ಕೆ ಬೇಕಾದ ಪ್ರಬಲ ಶಿಕ್ಷಣ ನೀತಿಗಳನ್ನು ರೂಪಿಸುವ…
ಕುಂದಾಪ್ರ ಡಾಟ್ ಕಾಂ ವರದಿ ಮೂಡುಬಿದರೆ: ಬೋಲ್ಟ್‌ನಲ್ಲಿರು ನಟ್ ಸರ್ರನೇ ತಿರುಗಿ ಬೇರಾಗುತ್ತೆ. ಕೈಯಲ್ಲಿರುವ ಕಾರ್ಡ್ ಮಾಯವಾಗುತ್ತೆ. ನಾವು ಅಂದುಕೊಂಡ ಕಾರ್ಡುಗಳೇ ಜಾದೂಗಾರನ ಕೈಯಿಂದ ಹೊರಬರುತ್ತೆ. ಜಾದೂಗಾರನ ವೇಷತೊಟ್ಟು, ಜಾದೂ ದಂಡವನ್ನು ಹಿಡಿದಿರುವ ವ್ಯಕ್ತಿಯೋರ್ವರು ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ಮೂಡುಬಿದಿರೆಯ ಆಳ್ವಾಸ್ ನುಡಿಸಿರಿಯಲ್ಲಿ ಗಮನ ಸೆಳೆಯುತ್ತಿದ್ದರು. ವಿಕ್ರಮ್ ಜಾದೂಗಾರ್. ಮಡಿಕೇರಿಯ ವೃತ್ತಿಪರ ಜಾದೂಗಾರರು. ಮೂವತ್ತು ವರ್ಷಗಳಿಂದ ಜಾದೂಕಲೆಯನ್ನೇ ಕಸುಬಾಗಿಸಿಕೊಂಡಿರುವ ಅವರು ಈವರೆಗೆ ೨,೫೦೦ಕ್ಕೂ ಹೆಚ್ಚು ಜಾದೂ ಪ್ರದರ್ಶನಗಳನ್ನು ನೀಡಿದ್ದಾರೆ. ನುಡಿಸಿರಿಯಲ್ಲಿ ಕ್ಲೋಸಪ್ ಮ್ಯಾಜಿಕ್ ಪ್ರದರ್ಶಸುತ್ತಿರುವ ಅವರು ಪ್ರೇಕ್ಷಕರನ್ನು ಹತ್ತಿರದಲ್ಲಿಯೇ ನಿಲ್ಲಿಸಿಕೊಂಡು ನೆಟ್-ಬೋಲ್ಟ್, ರಿಂಗ್ ರೋ, ಕಾರ್ಡ್ ಟ್ರಿಕ್ಸ್‌ಗಳನ್ನು ಐದು ನಿಮಿಷಗಳ ಕಾಲ ಪ್ರದರ್ಶಿಸುತ್ತಿದ್ದರೇ, ಮಕ್ಕಳು ವಿದ್ಯಾರ್ಥಿಗಳಂತೂ ಗುಂಪು ಗುಂಪಾಗಿ ನಿಂತು ಚಿಕಿತರಾಗಿ ನೋಡುತ್ತಿದ್ದಾರೆ.
ಮೂಡುಬಿದಿರೆ: `ಮಾಧ್ಯಮಗಳು ನಾಳೆಗಳನ್ನು ನಿರ್ಮಾಣ ಮಾಡುತ್ತಿವೆಯಾ ಅಥವಾ ನಿರ್ನಾಮ ಮಾಡುತ್ತಿವೆಯಾ ಎಂಬ ಪ್ರಶ್ನೆ ಇಂದಿನ ಮಾಧ್ಯಮಗಳನ್ನು ನೋಡಿದಾಗ ಉದ್ಭವಿಸುವುದು ಖಂಡಿತ!’ ಹೀಗೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಉದಯವಾಣಿ ಮಾಧ್ಯಮ ಸಮೂಹದ ಮುಖ್ಯಸ್ಥ ರವಿ ಹೆಗಡೆ. ಆಳ್ವಾಸ್ ನುಡಿಸಿರಿಯಲ್ಲಿ ನಡೆದ `ಮಾಧ್ಯಮ-ನಾಳೆಗಳ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. `ಸ್ಪರ್ಧೆ ಇದ್ದಾಗ ಅದರಿಂದ ಹೊರಬರುವ ಫಲಿತಾಂಶ ಯಾವಾಗಲೂ ಗುಣಮಟ್ಟದ್ದಾಗಿರುತ್ತದೆ ಎಂಬುದು ಎಲ್ಲರ ನಂಬಿಕೆ. ದುರದೃಷ್ಟವಶಾತ್ ಮಾಧ್ಯಮಗಳಲ್ಲಿ ಇದಕ್ಕೆ ವ್ಯತಿರಿಕ್ತ ಬದಲಾವಣೆ ಕಂಡು ಬರುತ್ತಿದೆ. ಮಾಧ್ಯಮಗಳಲ್ಲಿ ಪ್ರಬುದ್ಧತೆಯ ಕೊರತೆ ಉಂಟಾಗಿರುವುದರಿಂದ ಈ ನಕಾರಾತ್ಮಕ ಬೆಳವಣಿಗೆ ಉಂಟಾಗುತ್ತಿದೆ’ ಎಂದರು. `ಮಾಧ್ಯಮಗಳು ಯಾವಾಗಲೂ ನಕಾರಾತ್ಮಕ ಸುದ್ದಿಗಳನ್ನು ಕೊಡುತ್ತವೆ ಎಂಬ ಆರೋಪ ಮಾಧ್ಯಮಗಳ ಮೇಲಿದೆ. ಆದರೆ ಇತ್ತೀಚೆಗೆ ನಡೆಸಿದ ಒಂದು ಟಿ.ಆರ್.ಪಿ. ಸಮೀಕ್ಷೆಯ ಪ್ರಕಾರ ಹೀಗೆ ಮಾಧ್ಯಮಗಳ ಮೇಲೆ ಆರೋಪ ಮಾಡಿದ ಜನರೇ ನಕಾರಾತ್ಮಕ ಸುದ್ದಿಗಳನ್ನು ನೋಡುತ್ತಿದ್ದರು ಎಂಬ ಅಂಶ ಗಮನಕ್ಕೆ ಬಂದಿದೆ. ಆದರೆ ಮಾಧ್ಯಮಗಳು ಈ ಬಗೆಯ ಸುದ್ದಿಯನ್ನು ಕೊಡುವುದರಿಂದ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳಾಗಿದ್ದು ಖಂಡಿತ. ಖಾಸಗಿ ವಾಹಿನಿಯೊಂದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನದ ವಿಚಾರಗೋಷ್ಠಿಯಲ್ಲಿ ‘ರಾಜಕಾರಣ’ದ ಬಗ್ಗೆ ವಿಷಯ ಮಂಡಿಸಿದ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಆಳ್ವಾಸ್ ಕಾಲೇಜಿಗೆ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಪ್ರವೇಶ ಹೆಚ್ಚುತ್ತಿರುವ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡದ್ದು ಹೀಗೆ ದಕ್ಷಿಣ ಕನ್ನಡದಲ್ಲಿ ಪ್ರತಿವರ್ಷ ೨೫ ಕನ್ನಡ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿಯೂ ಇದೆ ಸ್ಥಿತಿ ಇದೆ. ಆದರೆ ಮೂಡಬಿದಿರೆಯ ಆಳ್ವಾಸ್ ಕನ್ನಡ ಶಾಲೆಗೆ ಮಾತ್ರ ಪ್ರವೇಶ ಪರೀಕ್ಷೆ ಬರೆಯಲು ೮೦೦೦ದಷ್ಟು ವಿದ್ಯಾರ್ಥಿಗಳು ಬರುತ್ತಿದ್ದಾರೆ. ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರವೇಶ ನೀಡಬೇಕೆಂದರೆ ಡಾ. ಆಳ್ವರು ದಕ್ಷಿಣ ಕನ್ನಡದಲ್ಲಿಯೇ ೨೮ ಶಾಲೆಗಳನ್ನು ತೆರೆಯಬೇಕಾಗುತ್ತದೆ. ಕನ್ನಡ ಮಾಧ್ಯಮದಲ್ಲಿ ಉತ್ಕೃಷ್ಟ ಶಿಕ್ಷಣ ಹೇಗೆ ನೀಡಬೇಕೆಂಬುದಕ್ಕೆ ಡಾ. ಮೋಹನ್ ಆಳ್ವರ ಸಂಸ್ಥೆಯೇ ಮಾದರಿ. ಹೀಗಾಗಿ ಅವರನ್ನು ರಾಜ್ಯದ ಶಿಕ್ಷಣ ಮಂತ್ರಿಯಾಗಿಸುವುದು ಒಳಿತು.
ಮೂಡಬಿದಿರೆ: ಆಳ್ವಾಸ್ ನುಡಿಸಿರಿಯ ಎರಡನೇ ದಿನ ನಡೆದ ಶತಮಾನದ ನಮನ ವಿಶೇಶೋಪನ್ಯಾಸದಲ್ಲಿ ಡಾ. ದೇ ಜವರೇಗೌಡರ ಕುರಿತು ಕನ್ನಡ ಪ್ರಾಧ್ಯಪಕ ಹಾಗೂ ಪ್ರಾಚಾರ್‍ಯರಾದ ಡಾ. ಸಿ. ಪಿ ಕೃಷ್ಣ ಕುಮಾರ್ ಮಾತನಾಡಿದರು. ಕನ್ನಡದ ಶತಪುರುಷರೆಂದೇ ಹೆಸರಾಗಿರುವ ಇವರು ಚೆನ್ನರಾಯ ಪಟ್ಟಣದ ಒಂದು ಕುಗ್ರಾಮದವರು. ತಮ್ಮ ವೈಯಕ್ತಿಕ ಜೀವನ ಹೋರಾಟದ ನಡುವೆಯೂ ಕನ್ನಡ ಪರವಾದ ಪ್ರಬಲ ಹೋರಾಟರಾಗಿ ಗುರುತಿಸಿಕೊಂಡವರು. ಉತ್ತಮ ಆಡಳಿತಗಾರ, ಶಿಕ್ಷಣತಜ್ಙ, ಸಾಹಿತಿ ಹಾಗೂ ಕನ್ನಡಪರ ಹೋರಾಟಗಾರ, ಅತ್ಯಂತ ಕ್ರೀಯಾಶೀಲ ವ್ಯಕ್ತಿಯಾಗಿದ್ದ ಜವರೇಗೌಡರು ಕನ್ನಡಕ್ಕೆ ಶ್ರೇಷ್ಠ ಸ್ಥಾನಮಾನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಆಳ್ವಾಸ್ ಪದವಿ ಕಾಲೇಜಿನ ಪದವಿ ವಿಬಾಗದ ಟಿ. ಎನ್. ಎ. ಖಂಡಿಗೆ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡಬಿದಿರೆ: ತಲೆಯಲ್ಲಿ ಮಲಹೊರುವ ಪದ್ಧತಿಯನ್ನು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ನಿಲ್ಲಿಸಿ, ಭೂ ಸುಧಾರಣೆ ಚಳುವಳಿ ಪ್ರಾರಂಭ ಮಾಡಿದ ದೇವರಾಜ ಅರಸರು ಭಾರತದಲ್ಲಿ ಸಾರ್ವಕಾಲಿಕ ಮಾದರಿ ರಾಜಕರಣಿಯಾಗಿ ಮಿಂಚಿದವರು ಎಂದು ಬಿ. ಎಲ್ ಶಂಕರ್ ತಿಳಿಸಿದರು. ಅವರು ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆಯಲ್ಲಿ ಆಳ್ವಾಸ್ ನುಡಿಸಿರಿ-೨೦೧೬ ರ ಎರಡನೇ ದಿನದ ‘ಶತಮಾನದ ನಮನ ಡಿ. ದೇವರಾಜ್ ಅರಸು’ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯದ ಹಳ್ಳಿಗಳಲ್ಲಿ ಯಾರು ಸೋಮಾರಿಗಳಾಗಬಾರದು ಎಂಬ ಸದ್ದೂದೇಶದಿಂದ ನಿರುದ್ಯೋಗಿಗಳಿಗೆಲ್ಲ ಉಪಹಾರ ಗೃಹದಲ್ಲಿ ಕೆಲಸ ಕೊಡಿಸಿ ಮಾನವ ಕಲ್ಯಾಣ ಮಾಡಿದ ಪ್ರಾಮಣಿಕವಾಗಿ ರಾಜಕಾರಣಿ ಎಂದು ತಿಳಿಸಿದರು. ದಲಿತ ಸಾಹಿತ್ಯ ಹಾಗೂ ಹಿಂದುಳಿದ ಸಾಹಿತ್ಯ ಮುಂಚೂಣಿಗೆ ಬರುವಂತೆ ಮಾಡಿದುದರಲ್ಲಿ ದೇವರಾಜ್ ಅರಸರ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು. ಖಾಸಗಿಯಾಗಿ ಬಡ್ಡಿ ವ್ಯವಹಾರ ಮಾಡುವವರಿಗೆ ಕಡಿವಾಣ ಹಾಕುವಂತಹ ಕೆಲಸ ಮಾಡಿದ ದೇವರಾಜ ಅರಸರದ್ದು ಭಾರತದಲ್ಲಿ ಶತಮಾನ ಕಳೆದರು ನೆನಪು ಮಾಡುವಂತಹ ವ್ಯಕ್ತಿತ್ವ ಅವರದ್ದು ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಸಮ್ಮೇಳನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ: ಪ್ರಜಾಪ್ರಭುತ್ವದಲ್ಲಿ ಸಾಮಾನ್ಯನೂ ಕೂಡ ಬಹುಮುಖ್ಯ. ಅವರ ಆಶೋತ್ತರಗಳನ್ನು ಈಡೇರಿಸುವುದು ರಾಜಕಾರಣಿಗಳ ಮುಖ್ಯ ಗುರಿಯಾಗಬೇಕು. ದುರಾದೃಷ್ಟವಶಾತ್ ಇಂದಿನ ರಾಜಕಾರಣಿಗಳಿಗೆ ಜನಪರ ಕಾಳಜಿಗಿಂತ ಸ್ವಹಿತಾಸಕ್ತಿಗಳೇ ಮುಖ್ಯವಾಗುತ್ತಿವೆ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ವಿಷಾದ ವ್ಯಕ್ತಪಡಿಸಿದರು. ಆಳ್ವಾಸ್ ನುಡಿಸಿರಿಯ ಎರಡನೇ ದಿನ `ಧರ್ಮ ಮತ್ತು ರಾಜಕಾರಣ: ನಾಳೆಗಳ ನಿರ್ಮಾಣ’ ವಿಚಾರಗೋಷ್ಠಿಯಲ್ಲಿ ರಾಜಕೀಯ ಕ್ಷೇತ್ರದಲ್ಲಾಗಬೇಕಿರುವ ಬದಲಾವಣೆಗಳ ಬಗ್ಗೆ ಮಾತನಾಡಿದರು. ರಾಜಕೀಯ ಹಾಗೂ ರಾಜಕಾರಣಗಳ ಬಗ್ಗೆ ಜನರ ನಿರೀಕ್ಷೆಗಳು ಬದಲಾಗಬೇಕಿವೆ. ತಾನು ಆಯ್ಕೆ ಮಾಡಿದ ಜನಪ್ರತಿನಿಧಿಯನ್ನು ಪ್ರತಿಯೊಬ್ಬ ಪ್ರಜೆಯೂ ಧೈರ್ಯದಿಂದ ಪ್ರಶ್ನಿಸುವಂತಾಗಬೇಕು. ಅವರ ಯೋಜನೆಗಳು, ಆಶೋತ್ತರಗಳ ಬಗ್ಗೆ ಮುಕ್ತವಾಗಿ ತಿಳಿದುಕೊಳ್ಳುವಂತಾಗಬೇಕು. ಆದರೆ ಇಂದು ಹೆಚ್ಚಿನ ಸಂದರ್ಭಗಳಲ್ಲಿ ತೀರಾ ವೈಯಕ್ತಿಕ ಕುಶಲೋಪರಿಗಳಿಗೆ ರಾಜಕಾರಣಿಗಳ ಹಾಗೂ ಶ್ರೀಸಾಮಾನ್ಯನ ಸಂಬಂಧ ಸೀಮಿತವಾಗುತ್ತಿದೆ. ಕ್ರಾಂತಿಕಾರಿ ಬದಲಾವಣೆಗಳನ್ನು ತರುವ ಒಬ್ಬ ಪ್ರಬಲ ನಾಯಕನ ಅವಶ್ಯಕತೆ ನಮಗಿದೆ. ಇಂದಿನ ರಾಜಕಾರಣ, ಚಳುವಳಿಗಳಿಗೆ ಮುಂದೆ ಯಾರಿದ್ದಾರೆಂಬುದು ಮುಖ್ಯವಾಗುವುದಿಲ್ಲ. ಹಿಂದೆ ಯಾರಿದ್ದಾರೆಂಬುದು ಮಾತ್ರ ಮುಖ್ಯವಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.…
