Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ತೆಕ್ಕಟ್ಟೆ ಬಾರಾಳಿಬೆಟ್ಟು ನಿವಾಸಿ ಮಂಜುನಾಥ ಪೂಜಾರಿ ಮತ್ತು ಪ್ರತಿಮಾ ದಂಪತಿಗಳ ಪುತ್ರ ನಿಶ್ಚಿತ್ (೨ವರ್ಷ) ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ವೈದ್ಯಕೀಯ ವೆಚ್ಚಕ್ಕೆ ಸುಮಾರು ೮ ಲಕ್ಷಕ್ಕೂ ಮಿಕ್ಕಿ ಹಣದ ಅಗತ್ಯವಿದ್ದು ಬಡ ಕುಟುಂಬ ಅಸಹಾಯಕ ಸ್ಥಿತಿಯಲ್ಲಿರುವ ಪತ್ರಿಕಾ ವರದಿಯನ್ನು ಗಮನಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ವತಿಯಿಂದ ರೂ.೧೦,೦೦೦ ವೈದ್ಯಕೀಯ ನೆರವು ನೀಡಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ ಮತ್ತು ರಘುರಾಮ ಶೆಟ್ಟಿಯವರು ಬಸ್ರೂರುವಿನಲ್ಲಿರುವ ಮಗುವಿನ ಮನೆಗೆ ತೆರಳಿ ವೈದ್ಯಕೀಯ ನೆರವಿನ ಚೆಕ್ ಮಗುವಿನ ತಾಯಿ ಪ್ರತಿಮಾ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಕಾರಿ ಪದವಿ ಪೂರ್ವ ಕಾಲೇಜು, ಬಿದ್ಕಲ್‌ಕಟ್ಟೆ, ಇಲ್ಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಭಗತ್‌ಸಿಂಗ್ ರೋವರ್ ಘಟಕವು ಇತ್ತೀಚೆಗೆ ಕ್ವಿಟ್ ಇಂಡಿಯಾ ಡೇ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮವನ್ನು ಕಾಲೇಜಿನ ಸುತ್ತಮುತ್ತಲಿನ ಪ್ರಯಾಣಿಕರ ತಂಗುದಾಣಗಳಲ್ಲಿ ನಡೆಸಿತು. ಬಿದ್ಕಲ್‌ಕಟ್ಟೆ ಮುಖ್ಯ ಪೇಟೆಯ ಬಸ್ ತಂಗುದಾಣ, ಕಾಲೇಜಿನ ಮುಂಭಾಗದಲ್ಲಿರುವ ಬಸ್ ತಂಗುದಾಣ, ಹಾಗೂ ಗುಡ್ಡೆ ಅಂಗಡಿಯಲ್ಲಿನ ಬಸ್ ತಂಗುದಾಣಗಳನ್ನು ಭಗತ್‌ಸಿಂಗ್ ರೋವರ್ ಸದಸ್ಯರು ಸ್ವಚ್ಛತಾ ಕಾರ್ಯ ನೆರವೇರಿಸಿದರು. ಪ್ರಾಂಶುಪಾಲರಾದ ರಾಮ ಹೆಚ್.ನಾಯಕ್ ರೋವರ್‌ಗಳನ್ನು ಅಭಿನಂದಿಸಿದರು. ರೋವರ್ ಸ್ಕೌಟ್ ಲೀಡರ್ ಮತ್ತು ಉಪನ್ಯಾಸಕ ರವಿಚಂದ್ರ ಮಾರ್ಗದರ್ಶನ ಮಾಡಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ದೇವಸ್ಥಾನಗಳಲ್ಲಿ ನಿತ್ಯ ನಿರಂತರಾಗಿ ದೇವರ ಪೂಜೆ, ಉಪಾಸನೆಗಳು ನಡೆದುಕೊಂಡು ಬಂದರೆ ದೇವಸ್ಥಾನದಲ್ಲಿ ದೇವರ ಸಾನಿಧ್ಯ ವೃದ್ಧಿಯಾಗುತ್ತದೆ. ದೇವಳಕ್ಕೆ ಆಗಮಿಸುವ ಭಕ್ತರ ಸಕಲ ಇಷ್ಟಾರ್ಥಗಳು ಈಡೇರಿ ದೇವಸ್ಥಾನ ಅಭಿವೃದ್ಧಿಯಾಗುತ್ತದೆ. ಪ್ರತಿಯೊಂದ ಮನೆಗಳಲ್ಲಿ ದೇವರ ಭಜನೆ, ನಾಮಸ್ಮರಣೆ ಮೊದಲಾದ ಧಾರ್ಮಿಕ ಚಟುವಟಿಕೆಗಳು ನಡೆದಾಗ ಜನರಲ್ಲಿ ಧಾರ್ಮಿಕತೆ ಬೆಳೆಯುತ್ತದೆ ಎಂದು ಅಕ್ಕಲಕೋಟ ಸ್ವಾಮಿ ಸಮರ್ಥ ಆಶ್ರಮದ ಮ.ನಿ.ಪ್ರ. ಚೆನ್ನಬಸವ ಸ್ವಾಮೀಜಿ ಹೇಳಿದರು. ಅವರು ಶ್ರೀಮದ್ ವೀರಶೈವ ಶಿವಯೋಗ ಮಂದಿರ ಸಂಸ್ಥೆ ಹಾಗೂ ವೀರಶೈವ ಮಹಾಸಭೆ ಸಂಸ್ಥಾಪಕ ಶ್ರೀ.ಮೆ. ಪ್ರ.ಹಾನಗಲ್ಲ ಕುಮಾರ ಮಹಾಸ್ವಾಮಿಗಳವರ ೧೫೦ನೇ ಜನ್ಮ ಮಹೋತ್ಸವದ ನಿಮಿತ್ತ ಗುಜ್ಜಾಡಿ ನಾಯಕವಾಡಿಯ ಶ್ರೀ ಸಂಗಮೇಶ್ವರ ದೇವಸ್ಥಾನದಲ್ಲಿ ಜರಗಿದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಸಮಾಜದಲ್ಲಿ ಹಿಂದುಗಳಿದ ಪಂಗಡಗಳು ಸಮಾಜದ ಮುಖ್ಯವಾಹಿನಿಗೆ ಬರುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕು. ಗೋವುಗಳನ್ನು ರಕ್ಷಣೆ ಮಾಡುವ ಮತ್ತು ಗೋಹತ್ಯೆಯನ್ನು ತಡೆಯುವಲ್ಲಿ ಸಮಾಜದ ಪ್ರತಿಯೊಬ್ಬರು ಕಾರ್ಯತತ್ಪರರಾಗಬೇಕು. ಜೀವನದಲ್ಲಿ ಧಾರ್ಮಿಕ ಮನೋಭಾವ ಬೆಳೆಸಿಕೊಂಡು ಗುರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಾಲ್ತೋಡು ಗ್ರಾಮಸ್ಥರ ಹಲವು ವರ್ಷದ ವಾರದ ಸಂತೆಯ ಕನಸು ಇಂದು ನನಸಾಗಿದೆ. ಇದಕ್ಕೆ ಸ್ಥಳೀಯ ಗ್ರಾಪಂ ಕೂಡಾ ಕೈಜೋಡಿಸಿದ್ದು, ಸುಸಜ್ಜಿತ ಮಾರುಕಟ್ಟೆ ನಿರ್ಮಿಸಿಕೊಟ್ಟಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯುವಂತಾಗ ಮಾತ್ರ ನಿರ್ಮಾಣದ ಸಾರ್ಥಕತೆ ಕಾಣಲು ಸಾಧ್ಯವಾಗುತ್ತದೆ ಎಂದು ತಾಲೂಕು ಪಂಚಾಯತ್ ಸದಸ್ಯ ಹೆಚ್. ವಿಜಯ್ ಶೆಟ್ಟಿ ಹೇಳಿದರು. ಕಾಲ್ತೋಡು ಗ್ರಾಮ ಪಂಚಾಯತ್ ವತಿಯಿಂದ ನಿರ್ಮಾಗೊಂಡ ನೂತನ ಮಾರುಕಟ್ಟೆ ಸಂಕೀರ್ಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ಯುವಜನತೆ ಸಮಾಜದ ಹಾಗೂ ಊರಿನ ಅಭಿವೃದ್ಧಿಯ ಪರ ದಿಕ್ಕು ಬದಲಾಯಿಸುವ ಉದ್ದೇಶದಿಂದ ಹಾಗೂ ಪರಿಸರದಲ್ಲಿರುವವರಿಗೆ ವಾರಕ್ಕೊಮ್ಮೆ ಅಗತ್ಯವಸ್ತುಗಳು ಒಂದೇ ಕಡೆಯಲ್ಲಿ ಲಭ್ಯವಾಗಬೇಕೆಂಬ ನೆಲೆಯಲ್ಲಿ ಗ್ರಾಪಂ ವಾರದ ಸಂತೆ ಪ್ರಾರಂಭಿಸಿದೆ. ಇದು ಈ ಭಾಗದ ಜನತೆಗೆ ನೀಡಿದ ಕೊಡುಗೆಯಾಗಿದೆ ಎಂದ ಅವರು ವಾರದ (ಪ್ರತೀ ಗುರುವಾರ) ಸಂತೆಗೆ ಬರುವ ವ್ಯಾಪಾರಸ್ಥರಿಗೆ ಒಂದು ವರ್ಷದ ತನಕ ಪಂಚಾಯತ್ ಯಾವುದೇ ರೀತಿಯ ತೆರಿಗೆ, ಸುಂಕವನ್ನು ವಿಧಿಸುವುದಿಲ್ಲ. ಇದನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ ಎಂದು ಘೋಷಿಸಿದರು. ಆದರೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ವತಿಯಿಂದ ತ್ರಾಸಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಕೊಂಕಣಿ ಖಾರ್ವಿ ಸಭಾ ಭವನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ೧೦ ಲಕ್ಷ ರೂ.ಗಳ ಚೆಕ್‌ನ್ನು ಹಸ್ತಾಂತರಿಸಲಾಯಿತು. ಶುಕ್ರವಾರ ತ್ರಾಸಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸುಮಾರು ೮ ಕೋಟಿ ರೂ. ವೆಚ್ಚದ ಕೊಂಕಣಿ ಖಾರ್ವಿ ಸಭಾ ಭವನವನ್ನು ವೀಕ್ಷಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಪ್ರಾದೇಶಿಕ ಕಛೇರಿಯ ನಿರ್ದೇಶಕ ಮಹಾವೀರ ಆಜ್ರಿ ಅವರು ಬಳಿಕ ನಡೆದ ಸರಳ ಸಮಾರಂಭದಲ್ಲಿ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ಅಧ್ಯಕ್ಷ ಕೆ.ಬಿ.ಖಾರ್ವಿ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ೧೦ ಲಕ್ಷ ರೂ.ಗಳ ಚೆಕ್‌ನ್ನು ಹಸ್ತಾಂತರಿಸಿದರು. ಇದೇ ಸಂದರ್ಭ ನಿರ್ದೇಶಕ ಮಹಾವೀರ ಆಜ್ರಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ., ಯೋಜನೆಯ ಬೈಂದೂರು ತಾಲೂಕು ಯೋಜನಾಧಿಕಾರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಂಸ್ಕೃತಿಕ ಅಭಿರುಚಿ, ಅಭಿಮಾನ ಹಾಗೂ ಹಿರಿಯರ ಸನ್ನಡತೆಯ ಸಹಕಾರದಿಂದ ಸತತ ನಾಲ್ಕು ವರ್ಷಗಳಿಂದ ನಾಗೂರು ಕಲಾಪ್ರಿಯ ಬಳಗ ಪರಿಸರದ ಕಲಾಸಕ್ತರ ಮನಮುಟ್ಟುವಲ್ಲಿ ಯಶಸ್ಸು ಕಂಡಿರುವುದು ಕಲಾಕೃಷಿಯ ಸಾರ್ಥಕತೆಯನ್ನು ಬಿಂಬಿಸುತ್ತದೆ ಎಂದು ಕಿರಿಮಂಜೇಶ್ವರ-ನಾಗೂರು ಅಗಸ್ತೇಶ್ವರ ಆಟೋರಿಕ್ಷಾ, ಟ್ಯಾಕ್ಷಿ ಚಾಲಕ, ಮಾಲಕ ಸಂಘದ ಅಧ್ಯಕ್ಷ ಪ್ರವೀಣ್ಚಂದ್ರ ಶೆಟ್ಟಿ ಹೇಳಿದರು. ನಾಗೂರು ಒಡೆಯರಮಠ ಶ್ರೀಕೃಷ್ಣಲಲಿತ ಕಲಾಮಂದಿರದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಂಗಳವಾರ ಸಂಜೆ ನಡೆದ ಬಡಗುತಿಟ್ಟಿನ ಸಾಂಪ್ರದಾಯಿಕಾ ಯಕ್ಷಗಾನ ’ಯಕ್ಷಾಮೃತ-೪’ರ ಸಮಾರಂಭದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಹಾಗೂ ಯಕ್ಷಗುರು ಗಣೇಶ ಹೆಬ್ಬಾರ್ ಇವರನ್ನು ಸನ್ಮಾನಿಸಿ ಮಾತನಾಡಿದರು. ಸ್ವಾತಂತ್ರ್ಯ ಬಂದು ೭೦ ವರ್ಷಗಳು ಕಳೆದರೂ ನಾವೆಲ್ಲರೂ ನೆಮ್ಮದಿಯ ಜೀವನ ಕಳೆದುಕೊಳ್ಳುತ್ತಿದ್ದೇವೆ. ಕಲಾಪೋಷಕರು ಹಾಗೂ ಪ್ರೇಕ್ಷಕರು ಕಲೆ ಮತ್ತು ಕಲಾವಿದರ ಹಿಂದಿರುವ ದೊಡ್ಡಶಕ್ತಿಯಾಗಿದ್ದು, ಆ ನಿಟ್ಟಿನಲ್ಲಿ ಕರಾವಳಿ ಭಾಗದ ಸಾಂಸ್ಕೃತಿಕ ನಗರಿ ಎಂದು ಹೆಸರುಗಳಿಸಿದ ಕಿರಿಮಂಜೇಶ್ವರ-ನಾಗೂರು ಪ್ರದೇಶದ ಜನತೆಗೆ ಕಲಾಪ್ರಿಯ ಬಳಗವು ಪ್ರತೀವರ್ಷ ತನ್ನ ವಿಭಿನ್ನ ಶೈಲಿಯ ಕಾರ್ಯಕ್ರಮಗಳಿಂದ ಮನರಂಜನೆ ವಾತಾವರಣವನ್ನು ನಿರ್ಮಾಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಜಡ್ಕಲ್: ಗ್ರಾಪಂ ವ್ಯಾಪ್ತಿಯ ಸೆಳ್ಕೋಡು ಸಹಿಪ್ರಾ ಶಾಲೆಯಲ್ಲಿ ಭಾನುವಾರ ಹಳೆವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ಸುವರ್ಣ ಸಂಭ್ರಮದ ಲಾಂಛನ ಬಿಡುಗಡೆ ಸಮಾರಂಭ ನಡೆಯಿತು. ಶಾಸಕ ಕೆ. ಗೋಪಾಲ ಪೂಜಾರಿ ಹಳೆವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿದರು. ಶಾಲೆಯ ಹಳೆವಿದ್ಯಾರ್ಥಿ ಉದ್ಯಮಿ ಸದಾಶಿವ ನಾಯ್ಕ್ ಲಾಂಛನ ಬಿಡುಗಡೆಗೊಳಿಸಿದರು. ಈ ಸಂದರ್ಭ ಕೊಲ್ಲೂರು ಶ್ರೀ ಮೂಕಾಂಬಿಕಾ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ಸಂಘದ ವತಿಯಿಂದ ಶಾಲೆಗೆ ಕಂಪ್ಯೂಟರ್ ನೀಡಿದರು. ಎಸ್‌ಡಿಎಂಸಿ ಅಧ್ಯಕ್ಷ ಮಹಾಬಲ ಪೂಜಾರಿ ಅಧ್ಯಕ್ಷತೆವಹಿಸಿದ್ದರು. ಮಂಗಳೂರು ಎಕ್ಷಿಸ್ ಬ್ಯಾಂಕಿನ ಸಹಾಯಕ ಪ್ರಬಂಧಕ ಲಿಜೋ ಮ್ಯಾಥ್ಯೂ, ಸುವರ್ಣ ವಿದ್ಯಾನಿಧಿ ಅಧ್ಯಕ್ಷ ಸುರೇಂದ್ರ ನಾಯ್ಕ್ ನೇತ್ರಾಡಿ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರ ನಾಯ್ಕ್, ಉಪಾಧ್ಯಕ್ಷ ರಘುರಾಮ ಪೂಜಾರಿ, ಬಿಆರ್‌ಪಿ ನಾಗರಾಜ ಪುತ್ರನ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಭಾಸ್ಕರ್ ನಾಯ್ಕ್ ಸ್ವಾಗತಿಸಿ ಪ್ರಾಸ್ತಾವಿಸಿದರು. ಮೇರಿ ಜೋಸೆಫ್ ವಂದಿಸಿದರು. ಸತೀಶ್ ದೇವಾಡಿಗ ನಿರೂಪಿಸಿದರು. ಶಿಕ್ಷಕಿಯರಾದ ಶೈಲಜಾ, ಸುನಿತಾ, ಜಾನಕಿ ಸಹಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಬೈಂದೂರಿನ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ವಿದ್ವಾನ್ ಗಣಪತಿ ಭಟ್ ಯಲ್ಲಾಪುರ ಇವರ ಗಾನಕ್ಕೆ ವಿದ್ವಾನ್ ಶ್ರೀಪತಿ ಉಪಾಧ್ಯಾಯ ಕುಂಬಾಶಿಯವರು ಆಖ್ಯಾನ ನೀಡುವುದರ ಮೂಲಕ ಹರಿಭಕ್ತಿಸಾರದ ಶ್ರೀ ನರಸಿಂಹಾವತಾರದ ಮಹಾತ್ಮೆಯನ್ನು ನೂರಾರು ಮಂದಿ ಭಕ್ತರಿಗೆ ಉಣಬಡಿಸಿದರು. ಇವರಿಗೆ ಹಿಮ್ಮೇಳದಲ್ಲಿ ಶ್ರೀ ಮಾಧವ ಆಚಾರ್ಯ ಉಡುಪಿಯವರು ತಬಲಾ ಹಾಗೂ ಶ್ರೀ ವಿನಾಯಕ ಪ್ರಭು ಉಪ್ಪುಂದ ಹಾರ್ಮೋನಿಯಮ್ ನುಡಿಸಿ ಸಹಕರಿಸಿದರು. ಈ ಕಾರ್ಯಕ್ರಮದ ಸಂಪೂರ್ಣ ಪ್ರಾಯೋಜಕರಾದ ಬಿ. ರಾಮಕೃಷ್ಣ ಶೇರೆಗಾರ ಮತ್ತು ಶಾರದಾ ದಂಪತಿಗಳು ರಾಮಕ್ಷತ್ರಿಯ ಸಮಾಜ ಬೈಂದೂರಿನ ಅಧ್ಯಕ್ಷರಾದ ಬಿ. ಗೋಪಾಲ ನಾಯಕರೊಂದಿಗೆ ಕಲಾವಿದರಿಗೆ ಶಾಲು ಹೊದಿಸಿ ಅಭಿನಂದಿಸಿದರು.  ವಿ. ಎಚ್ ನಾಯಕ್ ಸ್ವಾಗತಿಸಿ, ಆನಂದ ಮದ್ದೋಡಿ ಧನ್ಯವಾದಗೈದರು. ಕೇಶವ ನಾಯಕ್ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪ್ಪಿನಕುದ್ರು ಶ್ರೀ ದೇವಣ್ಣ ಪದ್ಮನಾಭ ಕಾಮತ್ ಮೆಮೋರಿಯಲ್ ಯಕ್ಷಗಾನ ಗೊಂಬೆಯಾಟ ಟ್ರಸ್ಟ್ (ರಿ), ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಹಾಗೂ ಶ್ರೀ ಗಣೇಶ ಯಕ್ಷಗಾನ ಗೊಂಬೆಯಾಟ ಮಂಡಳಿಯು ನಾಗರಾಜ್ ಭಟ್, ಮಲ್ಪೆ ಇವರ ಪ್ರಾಯೋಜಕತ್ವದಲ್ಲಿ ಉಪ್ಪಿನಕುದ್ರು ಗೊಂಬೆಯಾಟ ರಂಗದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಗಡಿನಾಡ ತಿರುಗಾಟ ಶಾಲೆಯೆಡೆಗೆ ಗೊಂಬೆ ನಡಿಗೆ ವಿಶಿಷ್ಟ ಪ್ರಯತ್ನಕ್ಕೆ ಮುಂದಾಗಿದೆ. ಗೊಂಬೆಯಾಟ ಟ್ರಸ್ಟ್ ಅಸ್ತಿತ್ವ ಕಂಡು 22 ವರ್ಷಗಳ ಸವಿನೆನಪಲ್ಲಿ ಸೆಪ್ಟೆಂಬರ್ 1ರಿಂದ 15ರವರೆಗೆ ಕುಮಟಾ, ಹೊನ್ನಾವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮಂಗಳೂರು, ಕಾಸರಗೋಡು ತಾಲೂಕಿನ ಒಟ್ಟು 22 ಶಾಲೆಗಳಲ್ಲಿ ಗೊಂಬೆಯಾಟ ಪ್ರಾತ್ಯಕ್ಷಿಕೆ ನಡೆಯಲಿದೆ. ಕರಾವಳಿ ತೀರದ 350 ವರ್ಷಗಳ 6 ನೇ ತಲಾಂತರದ ವಿಶಿಷ್ಟ, ವಿಶೇಷ ಕಲಾ ಪರಂಪರೆಯ ಉಳಿವಿಗಾಗಿ ಹಗಲಿರುಳೆನ್ನದೆ ಹೋರಾಟ ಮಾಡುತ್ತಾ ಬಂದಿರುವ ಸಂಸ್ಥೆಯು ಉಪ್ಪಿನಕುದ್ರು ಗೊಂಬೆಯಾಟ ಅಕಾಡೆಮಿ ಕಟ್ಟಡದಲ್ಲಿ ಕಳೆದ ೩ ವರ್ಷಗಳಿಂದ ನಿರಂತರ ತಿಂಗಳ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿ ನಡೆಸಿಕೊಂಡು ಬರುತ್ತಿದೆ. ಸರಕಾರದ ಯಾವುದೇ ಧನ ಸಹಾಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯುವಶಕ್ತಿ ಮನಸ್ಸು ಮಾಡಿದರೆ ಸಾಮಾಜಿಕ ವ್ಯವಸ್ಥೆಯಲ್ಲಿ ಧನಾತ್ಮಕ ಬದಲಾವಣೆ ತರಲು ಸಾಧ್ಯವಿದೆ. ಬದುಕಿನಲ್ಲಿ ಏನನ್ನಾದರೂ ಸಾಧಿಸುವ ಛಲ ಯುವಕರಲ್ಲಿದೆ. ಆದರೆ ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ, ನಿರ್ದಿಷ್ಟ ಗುರಿಯಡೆಗೆ ಅವರ ಮನಸ್ಸುನ್ನು ಕೇಂದ್ರೀಕರಿಸುವ ಕೆಲಸ ಮಾತ್ರ ನಿರಂತರವಾಗಿ ನಡೆಯಬೇಕಿದೆ. ಹಾಗಿದ್ದಾಗ ಮಾತ್ರ ಸದೃಢ ದೇಶ ನಿರ್ಮಾಣ ಸಾಧ್ಯವಿದೆ ಎಂದು ಕರ್ನಾಟಕ ಕಾರ್ಮಿಕ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಶೆಟ್ಟಿ ಹೇಳಿದರು. ಅವರು ಬೈಂದೂರು ಎಸ್‌ಆರ್‌ಆರ್ ಕಲಾಮಂದಿರದಲ್ಲಿ ಜರುಗಿದ ನೆಹರು ಯುವ ಕೇಂದ್ರ ಉಡುಪಿ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ ಹಾಗೂ ಕಳವಾಡಿ ಮಾರಿಕಾಂಬ ಯುತ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜರುಗಿದ ಯುವ ಮಂಡಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜಕೀಯದಲ್ಲಿ ಭ್ರಷ್ಟಾಚಾರವಿದೆ ಎಂದು ಯುವಕರು ದೂರವೇ ಉಳಿಯುತ್ತಾರೆ. ಆದರೆ ನಾವೇ ದೂರ ಉಳಿದರೆ ರಾಜಕೀಯವನ್ನು ಸರಿದಾರಿಯಲ್ಲಿ ಕೊಂಡ್ಯೊಯ್ಯವವರ‍್ಯಾರು. ಬದಲಾವಣೆಗೆ ಯುವಕರೇ ಮುನ್ನುಡಿ ಬರೆಯದೇ ಏನು ಸಾಧ್ಯವಿಲ್ಲ. ಚುನಾವಣೆ ಬಂದಾಗ ಹಣದ ಆಮಿಷಕ್ಕೆ ಬಲಿಯಾಗದೆ ಸಮರ್ಥರನ್ನು ಆರಿಸುವ ಬದ್ಧತೆಯನ್ನು ಪ್ರತಿಯೊಬ್ಬರೂ…

Read More