ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ಕುಂದಾಪುರ ಚಕ್ರವರ್ತಿ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಡಿ.24ರಿಂದ ನಾಲ್ಕು ದಿನಗಳ ಕಾಲ ಜರುಗಿದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ನ್ಯಾಶ್ ಬೆಂಗಳೂರು ತಂಡ ಚಕ್ರವರ್ತಿ ಟ್ರೋಫಿಯನ್ನು ಮುಡಿಗೇರಿಸಿಕೊಂಡರೇ. ಬಿಬಿಸಿ ಅಗ್ರಾಹರ ರನ್ನರ್ ಆಗಿ ಮೂಡಿಬಂದಿತು. ದೇಶದ ಮೂಲೆ ಮೂಲೆಯಿಂದ ಆಗಮಿಸಿದ್ದ 43 ತಂಡಗಳು ಚಕ್ರವರ್ತಿ ಟ್ರೋಫಿಗಾಗಿ ವೀರಾವೇಶದ ಸೆಣಸಾಟವನ್ನು ತೋರಿದ್ದು 4 ದಿನಗಳ ಕಾಲ ಕ್ರಿಕೆಟ್ ಪ್ರಿಯರಿಗೆ ರಸದೌತಣ ಸಿಕ್ಕಿತ್ತು. ಪಂದ್ಯಕೂಟದ ಆರಂಭಿಕ ಹಂತದಿಂದಲೂ ಉತ್ತಮ ಪ್ರದರ್ಶನ ನೀಡಿದ ನ್ಯಾಶ್ ಬೆಂಗಳೂರು ತಂಡ ವಿಜಯ ದಾಖಲಿಸುವಲ್ಲಿ ಯಶಸ್ಸನ್ನು ಕಂಡಿತು. ಸೆಮಿ ಫೈನಲ್ನ್ನು ಪ್ರವೇಶಿಸಿದ ನ್ಯಾಶ್ ಬೆಂಗಳೂರು ತಂಡ ಎ. ಕೆ. ಸ್ಪೋರ್ಟ್ಸ್ ಉಡುಪಿ ತಂಡವನ್ನು 27 ರನ್ನಗಳ ಅಂತರದಲ್ಲಿ ಮತ್ತು ಬಿಬಿಸಿ ಅಗ್ರಹಾರ ತಂಡ ಗ್ರೀನ್ ಕ್ರಿಕೆಟರ್ಸ್ ಸಾಗರ ತಂಡವನ್ನು 23ರನ್ಗಳ ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶಿಸಿದ್ದವು. ನ್ಯಾಶ್ ಬೆಂಗಳೂರು ಮತ್ತು ಬಿಬಿಸಿ ಅಗ್ರಹಾರ ತಂಡಗಳು ಬಲಿಷ್ಠ ತಂಡಗಳಾಗಿ ಹೊರ ಹೊಮ್ಮಿ…
Author: ನ್ಯೂಸ್ ಬ್ಯೂರೋ
ಮಕ್ಕಳ ಮೇಲೆ ಹೇರಿಕೆ ಬೇಡ. ಕಲೆಯ ಆಸ್ವಾದನೆಯ ಮೂಲಕ ಮಾನವರಾಗೋಣ: ಜಯಂತ ಕಾಯ್ಕಿಣಿ ಮರಗಳು ನನ್ನ ಮಕ್ಕಳು, ದೇಶದ ಜನರೇ ನನ್ನ ಬಂಧುಗಳು: ಸಾಲು ಮರದ ತಿಮ್ಮಕ್ಕ ಕುಂದಾಪ್ರ ಡಾಟ್ ಕಾಂ ವರದಿ. ಸುಂದರ ಸಂಜೆಯನ್ನು ಮತ್ತಷ್ಟು ರಂಗಾಗಿಸುವ ಸಮಾರಂಭ ನಾಗೂರಿನ ಕುಸುಮಾ ಗ್ರೂಪ್ ಆವರಣದಲ್ಲಿ ಅದ್ದೂರಿಯಾಗಿ ನಡೆಯಿತು. ಕಲೆ, ಸಾಹಿತ್ಯ, ಸಂಗೀತ ಪ್ರೀಯರಿಗಾಗಿ ಒಂದಿಷ್ಟು ಹೊತ್ತು ಬೇರೆಯದೇ ಲೋಕಕ್ಕೆ ಕೊಂಡೊಯ್ಯುವ, ಸಂಗೀತ್ಯಾಸಕ್ತ ಮಕ್ಕಳಿಗೊಂದು ವೇದಿಕೆ ಒದಗಿಸುವ, ಸಮಾಜಕ್ಕಾಗಿ ಬದುಕಿದ ಹಿರಿಯ ಜೀವವನ್ನು ಗುರುತಿಸಿ ಗೌರವಿಸುವ ಒಂದು ವಿನೂತನ ಪ್ರಯತ್ನಕ್ಕೆ ’ಕುಸುಮಾಂಜಲಿ 2015’ ಸಾಕ್ಷಿಯಾಯಿತು. ನಾಗೂರಿನ ಕುಸುಮ ಫೌಂಡೇಶನ್ ಆಶ್ರಯದಲ್ಲಿ ಆಯೋಜಿಸಲಾಗಿದ್ದ ’ಕುಸುಮಾಂಜಲಿ 2015’ರಲ್ಲಿ ಸಾವಿರ ಸಂಖೆಯಲ್ಲಿ ನೆರೆದಿದ್ದ ಜನಸಮೂಹ ಕಾರ್ಯಕ್ರಮದೊಂದಿಗೆ ಇಲಿನ ಅಚ್ಚುಕಟ್ಟಾದ ವ್ಯವಸ್ಥೆಯನ್ನು ಮನತುಂಬಿ ಶ್ಲಾಘಿಸಿದರು. ಹೋಮ್ ಎಕ್ಸ್ಪೋದಲ್ಲಿ ಮೂರು ಕಂಪೆನಿಗಳ ಉತ್ಪನ್ನಗಳ ಪ್ರದರ್ಶನ, ಪುಡ್ಕೋಟ್ ನಲ್ಲಿನ ವಿವಿಧ ಬಗೆಯ ಖಾದ್ಯಗಳು, ಲಕ್ಕಿ ಕೂಪನ್ ವ್ಯವಸ್ಥೆ, ಸ್ವಚ್ಚತೆ ಸುರಕ್ಷತೆಗೆಗಾಗಿ ಕೈಗೊಂಡ ಕ್ರಮಗಳು ಎಲ್ಲವೂ ಇಲ್ಲಿ ಅಚ್ಚುಕಟ್ಟು. ಕಾರ್ಯಕ್ರಮದಲ್ಲಿ ಕುಸುಮಾಶ್ರೀ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಕ್ರಿಕೆಟ್ ಪಂದ್ಯಾಟದ ಕೊನೆಯ ದಿನ ಪಂಟ್ಯಾಟ ವೀಕ್ಷಿಸಲು ಕನ್ನಡ ಚಿತ್ರರಂಗದ ಚಿರಪರಿಚಿತ ನಟ ವಿಜಯ ರಾಘವೇಂದ್ರ ಹಾಗೂ ಹಾಸ್ಯನಟ ಸಾಧುಕೋಕಿಲ ಆಗಮಿಸಿ ಕ್ರಿಕೆಟ್ ರಂಗು ಹೆಚ್ಚಿಸಿದರು. ನೆಚ್ಚಿನ ನಟರ ಆಗಮನವಾಗುತ್ತಿದ್ದಂತೆ ಮೈದಾನದಲ್ಲಿದ್ದ ನೂರಾರು ಪ್ರೇಕ್ಷಕರು ಚಪ್ಪಾಳೆ, ಶಿಳ್ಳೆ ಹೊಡೆಯುವ ಮೂಲಕ ನಟರನ್ನು ಸ್ವಾಗತಿಸಿದರೇ, ಚಕ್ರವರ್ತಿ ಕ್ರಿಕೆಟ್ ತಂಡದ ಸದಸ್ಯರು ವೇದಿಕೆಗೆ ಬರಮಾಡಿಕೊಂಡರು. ಕುಂದಾಪುರದ ಉದ್ಯಮಿ ವಿ. ಕೆ. ಮೋಹನ್ ಅವರೊಂದಿಗೆ ಆಗಮಿಸಿದ್ದ ನಟರು ಅತಿಥಿಗಳ ಗ್ಯಾಲರಿಯಲ್ಲಿ ಕುಳಿತು ಕೆಲಕಾಲ ಕ್ರಿಕೆಟ್ ವೀಕ್ಷಿಸಿ ಬಳಿಕ ತೆರಳಿದರು. ನೂರಾರು ಅಭಿಮಾನಿಗಳು ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬೀಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. (ಕುಂದಾಪ್ರ ಡಾಟ್ ಕಾಂ) ಪಂದ್ಯಾಟ ಆರಂಭದ ದಿನ ನಟ ರಕ್ಷಿತ್ ಶೆಟ್ಟಿ ಆಗಮಿಸಿದ್ದರು. ಒಟ್ಟಿನಲ್ಲಿ ಕ್ರಿಕೆಟ್ ಪಂದ್ಯಾಟದಲ್ಲಿ ಕುಂದಾಪುರದಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ಸ್ಟಾರ್ ಆಕರ್ಷಣೆಯೂ ಆದಂತಾಗಿದೆ. ಸಾವಿರಾರು ಪ್ರೇಕ್ಷಕರು ದಿನವೂ ಪಂದ್ಯಾಟ ವೀಕ್ಷಣೆಗೆ ಆಗಮಿಸಿ ಅಪರೂಪದ ಪಂದ್ಯಾಟವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಕುಂದಾಪುರ: ವಸಂತ ಕಾಲ ಸಮೀಪಿಸುತ್ತಿದ್ದಂತೆಯೇ ಮರಗಿಡಗಳ ಹಳೆ ಎಲೆಗಳು ಉದುರಿ ಹೊಸ ಚಿಗುರೊಡೆದು ಫಲಪುಷ್ಟ ಬೆಳೆಯುವ ಸಮಯದಲ್ಲಿ ಗಿಡವೊಂದರಿಂದ ಉದುರಿದ ಹೂವುಗಳ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಜಾನುವಾರು. ಹೂವಿನ ಹಾಸಿಗೆಯಲ್ಲಿ ನಿದ್ರಿಸಿದಂತೆ ಕಂಡು ಬರುವ ಈ ಸುಂದರ ದೃಶ್ಯವನ್ನು ಗಂಗೊಳ್ಳಿಯ ವೆಲ್ಕಮ್ ಸ್ಟುಡಿಯೋ ಮಾಲೀಕ ಗಣೇಶ ಪಿ. ಸೆರೆ ಹಿಡಿದಿದ್ದಾರೆ.
ಗಂಗೊಳ್ಳಿ: ಶಾಲೆಗಳಲ್ಲಿ ಸಾಹಿತ್ಯಗಳಿಗೆ ಸಂಬಂಧಪಟ್ಟ ಶಿಕ್ಷಣ ಹಾಗೂ ಸಾಹಿತ್ಯದ ಬಗ್ಗೆ ಅಭಿರುಚಿಯನ್ನು ಬೆಳೆಸುವ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕು. ಸಾಹಿತ್ಯಗಳು ಜೀವನವನ್ನು ಸಜ್ಜುಗೊಳಿಸುತ್ತದೆ. ಶಾಲೆಗಳಲ್ಲಿ ಪಠ್ಯ ಪುಸ್ತಕಗಳಿಗೆ ಸೀಮಿತವಾಗಿ ಶಿಕ್ಷಣವನ್ನು ನೀಡಲಾಗುತ್ತಿದ್ದು, ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿಲ್ಲ ಎಂದು ಕುಂದಾಪುರದ ಪ್ರಸಿದ್ಧ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಹೇಳಿದರು. ಅವರು ಗಂಗೊಳ್ಳಿಯ ಸ.ವಿ.ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿ ಜರಗಿದ ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ನ ೪೦ನೇ ವಾರ್ಷಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತಿಯೊಂದು ಕ್ರೀಡೆಗಳಲ್ಲಿ ಒಂದು ಸಂದೇಶವಿದೆ. ಕ್ರೀಡೆಗಳನ್ನು ಪ್ರೋತ್ಸಾಹಿಸುವ, ಗ್ರಾಮೀಣ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಕೆಲಸ ಸಂಘ ಸಂಸ್ಥೆಗಳಿಂದ ಆಗಬೇಕು. ಶೈಕ್ಷಣಿಕವಾಗಿ ಸಾಮಾಜಿಕವಾಗಿ ಅನೇಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿರುವ ಗಂಗೊಳ್ಳಿಯ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ನ ಕಾರ್ಯ ಶ್ಲಾಘನೀಯ ಮತ್ತು ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲರ್ಸ್ ಕನ್ನಡವಾಹಿನಿಯ ಕಿರುತೆರೆ ನಟಿ ನೀತಾ ಅಶೋಕ್ ಶುಭ ಹಾರೈಸಿದರು. ಇದೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿಧಾನಪರಿಷತ್ ನ ಸ್ಥಳಿಯಾಡಳಿತ ಪ್ರತಿನಿಧಿಗಳಿಗಾಗಿ ನಡೆದ ಚುನಾವಣೆಯು ಕುಂದಾಪುರ ತಾಲೂಕಿನಲ್ಲಿ ಶಾಂತಿಯುತವಾಗಿ ನಡೆದಿದ್ದು, 97 ಪ್ರತಿಶತ ಮತದಾನವಾದ ಬಗ್ಗೆ ಮಾಹಿತಿ ಲಭ್ಯವಾಗಿದೆ. ತಾಲೂಕಿನಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆ ಸದಸ್ಯರು ಇಬ್ಬರು ವಿಧಾನಸಭಾ ಸದಸ್ಯರು ಹಾಗೂ ಒಬ್ಬರು ವಿಧಾನ ಪರಿಷತ್ ಸದಸ್ಯರು ಸೇರಿದಂತೆ ಒಟ್ಟು 1019ಮತಗಳಿದ್ದು ಆ ಪೈಕಿ ಒಟ್ಟು 67 ಮತಗಟ್ಟೆಯಗಳಲ್ಲಿ ಶೇ. 99.71ರಷ್ಟು ಮತದಾನ ನಡೆದಿದೆ. ಬೆಳಿಗ್ಗೆ ಎಂಟು ಗಂಟೆಗೆ ಆರಂಭಗೊಂಡ ಮತದಾನ ಪ್ರಕ್ರಿಯೆ ಹತ್ತು ಗಂಟೆಯ ವೇಳೆಗೆ ಬಿರುಸುಗೊಂಡು ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ಬಹುಪಾಲು ಮುಗಿದಿತ್ತು. ಎಲ್ಲಿಯೂ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. (ಕುಂದಾಪ್ರ ಡಾಟ್ ಕಾಂ) ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ವಿಧಾನ ಪರಿಷತ್ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಕುಂದಾಪುರ ತಾಲೂಕು ಪಂಚಾಯಿತಿ ಮತಘಟ್ಟೆಯಲ್ಲಿ ತಮ್ಮ ಅಭ್ಯರ್ಥಿಗಳಿಗೆ ಮತ ಹಾಕಿದರೇ, ಬಿಜೆಪಿ…
[quote font_size=”16″ bgcolor=”#ffffff” arrow=”yes” align=”right”]ಕಾಂಗ್ರೆಸ್ ಅಭ್ಯರ್ಥಿಗೆ ಮತದಾರರ ಬೆಂಬಲ: ಪ್ರತಾಪಚಂದ್ರ ಶೆಟ್ಟಿ ಅವರ ಕುರಿತು ಕಾಂಗ್ರೆಸ್ ಬೆಂಬಲಿತ ಮತದಾರರಿಂದ ಪೂರಕವಾದ ಅಭಿಪ್ರಾಯ ಮೂಡಿಬರುತ್ತಿದೆ. ಪರಿಷತ್ ಚುನಾವಣೆಯಲ್ಲಿ ಅವರು ಗೆದ್ದೇ ಗೆಲ್ಲುತ್ತಾರೆಂಬ ವಿಶ್ವಾಸವಿದೆ. ನಮ್ಮ ಮತದಾರರಿಗೆ ಚುನಾವಣೆಯನ್ನು ಮತಹಾಕಲು ಕುರಿತಂತೆ ತರಬೇತಿ ನೀಡಲಾಗಿದೆ – ಆಸ್ಕರ್ ಫೆರ್ನಾಂಡಿಸ್, ರಾಜ್ಯಸಭಾ ಸಂಸದರು.[/quote] ಬೈಂದೂರು: ಕಾಂಗ್ರೆಸ್ ಪಕ್ಷ ನಾಯಕರು ಮತ್ತು ಕಾರ್ಯಕರ್ತರು ವಿಧಾನ ಪರಿಷತ್ ಚುನಾವಣೆಯನ್ನು ಗಭೀರವಾಗಿ ಪರಿಗಣಿಸಿ ಪೂರ್ವ ಸಿದ್ಧತೆ ಮಾಡಿಕೊಂಡಿದ್ದಾರೆ. ನಮ್ಮ ಅಭ್ಯರ್ಥಿ ಪ್ರತಾಪಚಂದ್ರ ಶೆಟ್ಟಿ ಪ್ರಚಂಡ ಗೆಲುವು ಸಾಧಿಸುವ ವಿಶ್ವಾಸವಿದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. ಅವರು ಬೈಂದೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಚುನಾವಣೆ ಹೇಗಾದರು ಮಾಡಿ ಗೆಲ್ಲಬೇಕು ಎನ್ನುವ ಕಾರಣಕ್ಕೆ ಬಂಡಾಯ ಅಭ್ಯರ್ಥಿಗಳು ಸುಳ್ಳು ಪ್ರಚಾರ ಮಾಡಿ ಮತದಾರರನ್ನು ತಮ್ಮತ್ತ ಸೆಳೆಯುವ ಕಾರ್ಯ ನಡೆಸುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಒಬ್ಬ ಪರಿಷತ್ ಸದಸ್ಯನಿಂದ ಗ್ರಾಮ ಪಂಚಾಯತ್ ಮಸೂದೆಗಳಿಗೆ ತಿದ್ದುಪಡಿ…
ಬೈಂದೂರು: ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಪ್ರಧಾನ ಕಛೇರಿಗೆ ಉತ್ತರ ಕನ್ನಡ ಜಿಲ್ಲೆಯ(ಶಿರಸಿ) ಸಿದ್ದಾಪುರ ತಾಲೂಕಿನ ವ್ಯಾಪ್ತಿಯ ಎಲ್ಲಾ ವ್ಯವಸಾಯ ಸೇವಾ ಸಹಕಾರಿ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಸಿಬ್ಬಂದಿ ವರ್ಗದವರು ಅಧ್ಯಯನ ಭೇಟಿ ನೀಡಿದರು. ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಇವರು ಸಂಘದ ಕಾರ್ಯಚಟುವಟಿಕೆ, ಅಭಿವೃದ್ಧಿ, ಠೇವಣಿಗಳು, ವ್ಯವಹಾರಿಕ ಸಾಲಗಳು, ವಾಹನ ಸಾಲ, ಬೆಳೆಸಾಲಗಳ, ಅಲ್ಪಾವಧಿ ದೀರ್ಘಾವಧಿ ಸಾಲಗಳ ವಿತರಣೆ ಹಾಗೂ ಮರುಪಾವತಿ ಕ್ರಮ ಮುಂತಾದುವುಗಳ ಬಗ್ಗೆ ವಿವರಿಸಿದರು. ಸಂಘದ ಎಲ್ಲಾ ಸದಸ್ಯರನ್ನು, ಗ್ರಾಹಕರನ್ನು ಗೌರವಿಸಿ, ಅತೀ ಶೀರ್ಘದಲ್ಲೇ ಸೇವೆ ನೀಡುವಲ್ಲಿ ಸೇವಾ ಸಹಕಾರಿ ಸಂಘಗಳು ಮುಂದಾಗಬೇಕು ಆಗ ಮಾತ್ರ ಸಂಘವು ಯಶಸ್ವಿಹೊಂದಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಕೆ. ಮೋಹನ ಪೂಜಾರಿ, ಬಿ.ಎಸ್. ಸುರೇಶ ಶೆಟ್ಟಿ, ಗುರುರಾಜ ಹೆಬ್ಬಾರ್ ಉಪಸ್ಥಿತರಿದ್ದರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸತೀಶ ಪೈ ಸ್ವಾಗತಿಸಿ ಬರಮಾಡಿಕೊಂಡರು. ಸಂಘದ ಪ್ರಧಾನ ವ್ಯವಸ್ಥಾಪಕರಾದ ಕೆ. ಹಾವಳಿ ಬಿಲ್ಲವ…
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ. ರಾಜಕಾರಣದಲ್ಲಿ ಸರಳ, ಸಜ್ಜನಿಕೆಗೆ ಅನ್ವರ್ಥ ಎಂಬಂತೆ ತನ್ನನ್ನು ತೊಡಗಿಕೊಂಡು ಎಲ್ಲರೊಂದಿಗೂ ಬೆರತು ವಿಶ್ವಾಸ ಹಾಗೂ ಘನತೆಯನ್ನು ಉಳಿಸಿಕೊಂಡ ಅಪರೂಪದ ರಾಜಕಾರಣಿ ಕೋಟ ಶ್ರೀನಿವಾಸ ಪೂಜಾರಿ. ಒಬ್ಬ ಸಾಮಾನ್ಯ ಛಾಯಾಗ್ರಾಹಕನಾಗಿದ್ದ ವ್ಯಕ್ತಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಹಾಗೂ ವಿಧಾನ ಪರಿಷತ್ಗೆ ಆಯ್ಕೆಯಾಗಿ, ಮುಜರಾಯಿ ಮಂತ್ರಿಯೂ ಆದ ಪರಿ ಅಚ್ಚರಿ ಮೂಡಿಸುವಂತದ್ದು. ತನ್ನ ಸ್ಪಷ್ಟವಾದ ಮಾತು, ಒಲವು ನಿಲುವುಗಳಿಂದಲೇ ಸಾಧನೆಯ ಉತ್ತುಂಗಕ್ಕೇರಿ, ಬಿಜೆಪಿ ಪಕ್ಷದಲ್ಲಿಯೂ ಪ್ರಭಾವಿ ನಾಯಕನಾಗಿ ಬೆಳೆದರೂ ಜನಸಾಮಾನ್ಯನಿಗೂ ಸುಲಭವಾಗಿ ದೊರಕುವ ಅವರ ಸರಳ ವ್ಯಕ್ತಿತ್ವ ಇಂದಿಗೂ ಬದಲಾಗಿಲ್ಲ. ಮೂರ್ತೆದಾರರ ಹೋರಾಟದಲ್ಲಿ ರಾಜ್ಯದ ಗಮನ ಸೆಳೆದಿದ್ದ ಕೋಟ ಶ್ರೀನಿವಾಸ ಪೂಜಾರಿ, 1993ರಲ್ಲಿ ಗ್ರಾಮ ಪಂಚಾಯತ್ ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದರು. ಗ್ರಾಮದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ತೊಡಗಿಕೊಂಡಿರುವಾಗಲೇ 1996ರಲ್ಲಿ ತಾಲೂಕು ಪಂಚಾಯತ್ ಸದಸ್ಯರಾಗಿ ಆಯ್ಕೆಯಾದರು. ಮುಂದೆ 2006ರಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ಆರಿಸಿ ಬಂದರು. 2008ರಲ್ಲಿ ನಡೆದ ಉಪಚುನಾವಣೆಯಲ್ಲಿ ವಿಧಾನಪರಿಷತ್ಗೆ ಆಯ್ಕೆಯಾದ…
ಸಾಲುಮರದ ತಿಮ್ಮಕ್ಕನಿಗೆ ಕುಸುಮಾಶ್ರೀ ಪ್ರಶಸ್ತಿ. ಗಾಯನ ಸ್ವರ್ಧೆ ವಿಜೇತ ಪ್ರತಿಭೆಗಳಿಗೆ ಗಾನಕುಸುಮ ಪ್ರಶಸ್ತಿ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕಳೆದ ಒಂದೂವರೆ ದಶಕದ ಹಿಂದೆ ಹುಟ್ಟಿಕೊಂಡ ನಾಗೂರಿನ ಕುಸುಮ ಸಮೂಹ ಸಂಸ್ಥೆಗಳು ಇಂದು ಉದ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನ ಪಡೆದಿದೆ. ಉತ್ಕೃಷ್ಟ ಹಾಗೂ ಶಿಸ್ತುಬದ್ಧ ವ್ಯವಹಾರ ಮೌಲ್ಯಗಳನ್ನು ಅಳವಡಿಸಕೊಂಡ ಸಂಸ್ಥೆಯ ಸಾಮಾಜಿಕ ಜವಾಬ್ದಾರಿಯನ್ನೂ ಮರೆಯದೇ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಾ ಬಂದಿದೆ. ಸಂಗೀತಾಸಕ್ತರಿಗಾಗಿ ವಿನೂತನ ಕಾರ್ಯಕ್ರಮ ಆಯೋಜಿಸುವ ಮೂಲಕ ಸಾಂಸ್ಕೃತಿಕ ಕ್ಷೇತ್ರದಲ್ಲೂ ಛಾಪು ಛಾತಿ ಸಂಸ್ಥೆಯದ್ದು. ಪರಿಸರದ ಪ್ರತಿಭೆಗಳಿಗೆ ಧ್ವನಿಯಾಗಬೇಕು ಎಂಬ ಸದುದ್ದೇಶದಿಂದ ಕುಸುಮ ಸಂಸ್ಥೆಯ ಹದಿನೈದನೇ ವರ್ಷದ ಸಂಭ್ರಮದೊಂದಿಗೆ ಆಯೋಜಿದ ‘ಕುಸುಮಾಂಜಲಿ’ ಸಾಂಸ್ಕೃತಿಕ ಪ್ರೀಯರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ಸ್ಫೂರ್ತಿಯೊಂದಿಗೆ ಈ ಭಾರಿ ‘ಕುಸುಮಾಂಜಲಿ – 2015’ ಆಯೋಜಿಸಲಾಗಿದೆ. ಡಿ.26ರ ಸಂಜೆ ನಡೆಯಲಿರುವ ಕಾರ್ಯಕ್ರಮಕ್ಕೊಂದು ಗರಿ ಎಂಬಂತೆ ನಾಡಿನ ಶ್ರೇಷ್ಠ ಸಾಧಕರೊಬ್ಬರಿಗೆ ಕುಸುಮಾಶ್ರೀ ಹಾಗೂ ಪರಿಸರದ ವಿಶೇಷ ಗಾನ ಪ್ರತಿಭೆಗೆ ಗಾನ ಕುಸುಮ ಪ್ರಶಸ್ತಿಯನ್ನು ನೀಡಲಾಗುತ್ತಿದೆ. (ಕುಂದಾಪ್ರ…
