ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಜಡ್ಕಲ್ ಗ್ರಾಮದ ಮೆಕ್ಕೆ ನಿವಾಸಿ ಭಾಸ್ಕರ ಪೂಜಾರಿ (38) ಎಂಬುವವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಭಾಸ್ಕರ್ ಪೂಜಾರಿ ಮದುವೆಯಾಗಿ ಹನ್ನೆರಡು ವರ್ಷವಾಗಿದ್ದು ಇಬ್ಬರು ಮಕ್ಕಳಿದ್ದರು. ಕಳೆದ ಐದಾರು ವರ್ಷಗಳಿಂದ ದಂಪತಿಗಳು ಬೇರೆಯಾಗಿ ವಾಸಿಸುತ್ತಿದ್ದರು. ತನ್ನ ಸಾವಿಗೆ ತಾನೇ ಕಾರಣ ಎಂದು ಮೃತ ಭಾಸ್ಕರ್ ಪೂಜಾರಿ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದರೂ, ಕೌಟುಂಬಿಕ ಸ್ಥಿತಿಯ ಬಗ್ಗೆಗಿದ್ದ ಅಸಮಧಾನವೇ ಸಾವಿಗೆ ದವಡೆ ತಂದು ನಿಲ್ಲಿಸಿತ್ತು ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ. ಬರೆಯಲು ಬಾರದ ವ್ಯಕ್ತಿ ಡೆತ್‌ನೋಟ್ ಬರೆದಿಡಲು ಹೇಗೆ ಸಾಧ್ಯ. ಇದೊಂದು ಕೊಲೆಯೇ ಆಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿದೆ. ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಕೆ ಕೈಗೆತ್ತಿಕೊಂಡಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮಾಜಿಕ ಜಾಲತಾಣ ಫೇಸ್ಬುಕ್‌ನಲ್ಲಿ ಭಾರತದ ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಕುರಿತಾಗಿ ಅವಹೇಳಕಾರಿಯಾಗಿ ಸ್ಟೇಟಸ್ ಬರೆದುಕೊಂಡಿದ್ದ ಈರ್ವರು ಯುವಕರ ವಿರುದ್ದ ಕುಂದಾಪುರ, ಗಂಗೊಳ್ಳಿ, ಶಂಕರನಾರಾಯಣ ಸೇರಿದಂತೆ ಇತರೆ ಠಾಣೆಗಳಲ್ಲಿ ದೂರು ನೀಡಿದ್ದಾರೆ. ರಂಜಿತ್ ರಂಜು ಶೆಟ್ಟಿ ಹಾಗೂ ವಿಕ್ರಮ್ ಎಂ. ಕುಂದಾಪುರ ಎಂಬ ಯುವಕರು ಫೇಸ್ಬುಕ್‌ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಬಗ್ಗೆ ಅವಹೇಳನಕಾರಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ದಲಿತ ಸಂಘಟನೆಯ ಪ್ರಮುಖರು ಠಾಣೆಯಲ್ಲಿ ದೂರು ನೀಡಿದ್ದು ಆಪಾದಿತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಸಹಾಯಕರ ಹಾಗೂ ಅಶಕ್ತರ ನೆರವಿಗಾಗಿ ಬಡಗಿನ ಸುಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ಮಳೆಗಾಲದ ಕೊನೆಯ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮದ ಸಮಾರಂಭ ತ್ರಾಸಿ ಆಣ್ಣಪ್ಪಯ್ಯ ಸಭಾಭವನದಲ್ಲಿ ಜರಗಿತು. ಬಿಜೆಪಿ ಮುಖಂಡ ಸುಕುಮಾರ್ ಶೆಟ್ಟಿ ಅಧ್ಯಕ್ಚತೆ ವಹಿಸಿ ಮಾತನಾಡಿ ಅಸಹಾಯಕರ ಹಾಗೂ ಅಶಕ್ತರ ನೆರವಾಗುವ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತ್ರಾಸಿ ರವಿಶೆಟ್ಟಿಗಾರ್ ಬಳಗದವರ ಸಮಾಜ ಸೇವೆಯನ್ನು ಅಭಿನಂದಿಸಿದರು. ತಾ.ಪಂ. ಸದಸ್ಯ ರಾಜು ದೇವಾಡಿಗ ಮಾತನಾಡಿ ತಮ್ಮ ತಮ್ಮ ಪ್ರದೇಶಗಳಲ್ಲಿ ಸಕ್ರಿಯಾರಾಗಿರುವ ಸಂಘಟನೆಗಳಿಂದ ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿಂದ ಬಡ ಜನರಿಗೆ ನೆರವಾಗುವ ಮೂಲಕ ದೇಶದ ಪ್ರಗತಿಗೆ ಕಾರಣೀಭೂತರಾಗುತ್ತಿದ್ದಾರೆ ಎಂದು ಸಂಘದ ಕಾರ‍್ಯವನ್ನು ಶ್ಲಾಘಿಸಿದರು. ಈ ಸಂದರ್ಭದಲ್ಲಿ ಹೇರೂರು ಯಕ್ಷಗಾನ ಮೇಳದ ಭಾಗವತ ಗಾನಕೋಗಿಲೆ ಎಂದು ಪ್ರಸಿದ್ಧಿ ಪಡೆದಿರುವ ರಾಘವೇಂದ್ರ ಆಚಾರ್ಯ ಅವರನ್ನು ಗೌರವಿಸಿ ಸಮ್ಮಾನಿಸಲಾಯಿತು. ತ್ರಾಸಿ ಗ್ರಾಮ ಪಂ. ಸದಸ್ಯ ಸುಧಾಕರ ಆಚಾರ್ಯ, ಹೊಸಾಡು ಗ್ರಾಮ ಪಂ.ಅಧ್ಯಕ್ಷ ಚಂದ್ರ ಪೂಜಾರಿ, ನಾರಾಯಣ ಕೆ., ರವಿಶೆಟ್ಟಿಗಾರ್, ಕೇಶವ ಶೆಟ್ಟಿಗಾರ್ ಉಪಸ್ಥಿತರಿದ್ದರು.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುರುಕ್ಷೇತ್ರವೆಂದರೆ ನಮ್ಮ ಮನಸ್ಸಿನಲ್ಲಿ ಅಂತರಂಗದಲ್ಲಿಯೇ ನಡೆಯುವ ಧರ್ಮ ಮತ್ತು ಅಧರ್ಮಗಳ ನಡುವಿನ ತಾಕಲಾಟ, ಗೊಂದಲ. ಎಲ್ಲಾ ಧರ್ಮಗಳಿಗಿಂತಲೂ ಮಿಗಿಲಾದದ್ದು ಮಾನವ ಧರ್ಮ. ಎಲ್ಲಾ ಮತಗಳ ಸಾರವೂ ಅದೇ ಆಗಿದೆ ಎಂದು ಖ್ಯಾತ ಚಿಂತಕ ಡಾ. ರಾಜಾರಾಮ್ ಹೇಳಿದರು. ಇಲ್ಲಿನ ಸತ್ಯ ಸಾಯಿ ಸೇವಾ ಟ್ರಸ್ಟ್ ಮತ್ತು ಶ್ರೀಮದ್ ಭಗವದ್ಗೀತಾ ಜಯಂತಿ ಆಚರಣಾ ಸಮಿತಿ, ಬೈಂದೂರು ಇವರ ಜಂಟಿ ಆಶ್ರಯದಲ್ಲಿ ನಡೆದ ಭಗವದ್ಗೀತಾ ಅಭಿಯಾನ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡುತ್ತಾ ಮಾತನಾಡಿದರು. ಮನುಷ್ಯನ ಪ್ರವೃತ್ತಿಗಳಾದ ಕಾಮ, ಕ್ರೋಧ, ಮದ, ಮತ್ಸರ, ಮೋಹ ಇವುಗಳು ಹುಟ್ಟುವಾಗಲೇ ಬಂದಿರುತ್ತದೆ. ಇದನ್ನು ಸಾತ್ವಿಕ ರಾಜಸ, ತಾಮಸ ಎಂದು ಮೂರು ವಿಭಾಗಗಳನ್ನಾಗಿ ಮಾಡಲಾಗಿದೆ. ರಾಜಸ- ಮನುಷ್ಯರು, ತಾಮಸ-ರಾಕ್ಷಸರು, ಸಾತ್ವಿಕ-ದೇವತೆಗಳೆಂದು ಕಲ್ಪಿಸಿಕೊಂಡು ತಮಸ್ಸಿನಿಂದ ರಜಸ್ಸಿಗೂ, ರಜಸ್ಸಿನಿಂದ ಸಾತ್ವಿಕತೆಗೂ ಪ್ರಯತ್ನ ಪೂರ್ವಕ ಸಾಗುವ ಅಭ್ಯಾಸ ಮಾಡಿಕೊಂಡರೆ ಸಾತ್ವಿಕತೆ ನಿಜವಾದ ಧರ್ಮ ಸಂಪತ್ತಾಗಿ ಲೋಕವನ್ನು ಸಲಹುತ್ತದೆ ಎಂದರು. ಶ್ರೀಮದ್‌ಭಗವದ್ಗೀತಾ ಜಯಂತಿ ಆಚರಣಾ ಸಮಿತಿ ಅಧ್ಯಕ್ಷ ಬಿ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವತಿಯಿಂದ ಬಸ್ರೂರು ಸರಕಾರಿ ಪ್ರೌಢಶಾಲೆಗೆ ದಾನಿಗಳ ಸಹಕಾರದೊಂದಿಗೆ ಇ-ಲರ್ನಿಂಗ್ ಕಿಟ್‌ನ್ನು ಕೊಡುಗೆಯಾಗಿ ನೀಡಲಾಯಿತು. ರೋಟರಿ ಲಿಟ್ರಸಿ ಮೆಷಿನ್ ಯೋಜನೆಯಡಿ ಇ-ಲರ್ನಿಂಗ್ ಕಿಟ್‌ನ್ನು ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಅವರು ಬಸ್ರೂರು ಸರಕಾರಿ ಪ್ರೌಢಶಾಲೆಯ ಮುಖ್ಯೋಪಧ್ಯಾಯಿನಿ ಜ್ಯೋತಿ ಬಿ ಅವರಿಗೆ ಹಸ್ತಾಂತರಿಸಿದರು. ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ಸದಸ್ಯರಾದ ಸೀತಾರಾಮ, ಸಿ.ಹೆಚ್. ಗಣೇಶ, ಅರುಣಚಂದ್ರ ಕೊತ್ವಾಲ್, ಸದಾನಂದ ಉಡುಪ, ಶಾಲಾ ಶಿಕ್ಷಕರಾದ ಅರ್ಪಣಾ ಬಾ, ಪಿಯುಸ್ ಡಿ’ಸೋಜಾ, ಬೀರಣ್ಣ ಗಾಂವ್‌ಕರ್, ಸುರೇಶ್ ಭಟ್, ಶೇಖರ ಪೂಜಾರಿ, ಪ್ರಕಾಶ್, ಜಯಲಕ್ಷ್ಮೀ ನಾಯಕ್, ಸವಿತಾ ಕೆ, ಕುಸುಮಾ, ಪುಷ್ಪ ಮಡಿವಾಳ ಇನ್ನಿತರರು ಉಪಸ್ಥಿತರಿದ್ದರು. ಶಿಕ್ಷಕ ಪ್ರಶಾಂತ ವಂದಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಬೈಂದೂರು ಇದರ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ಬ್ಯಾಂಕಿಂಗ್ ಕ್ಷೇತ್ರದ ಹೊಸ ಆವಿಷ್ಕಾರ ಬಗ್ಗೆ ತರಬೇತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಯಿತು. ಮಾಂಟೆಕ್ಶರ್ ಮತ್ತು ಉದ್ಮಾ ಟೆಕ್ನಾಲಜೀಸ್ ಇದರ ಐಟಿ ವಿಭಾಗದ ಮುಖ್ಯಸ್ಥರಾದ ಶಿವ ಪ್ರಸಾದ ಕೆ. ತರಬೇತಿ ನೀಡಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಡಾ.ಉಮೇಶ್ ಮಯ್ಯ ಕಾರ್ಯಕ್ರಮ ಸಂಘಟಿಸಿದರು.
ಶ್ರೇಯಾಂಕ ಎಸ್ ರಾನಡೆ. | ಕುಂದಾಪ್ರ ಡಾಟ್ ಕಾಂ ಲೇಖನ. ಎಲ್ಲಾ ರಾಜಕೀಯ ಪಂಡಿತರ ಲೆಕ್ಕಾಚಾರವನ್ನು ತಲೆಕೆಳಗೆ ಮಾಡುವ ಮೂಲಕ, ಸ್ಥಾಪಿತ ರಾಜಕೀಯ ಶಕ್ತಿಗಳನ್ನು ಬೀಳಿಸಿದ ಡೊನಾಲ್ಡ್ ಟ್ರಂಪ್ ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಮೋದಿಯವರನ್ನು ಟ್ರಂಪ್ ರೀತಿಯ ವ್ಯಕ್ತಿತ್ವದವರೆಂದೋ, ಟ್ರಂಪ್ ಮೋದಿಯವರಷ್ಟೇ ಉತ್ತಮರೆಂದೋ ಹೇಳುವ ಪ್ರಯತ್ನವಲ್ಲ. ಆದರೆ ಭಾರತದ ಅನುಕೂಲಕ್ಕೆ ತಕ್ಕಂತಹ ಸೂಕ್ತ ಸಮಯ, ವಾತಾವರಣ “ನ ಭೂತೋ ಭವಿಷ್ಯತಿಃ” ಎಂಬಂತೆ ಅಮೆರಿಕದಲ್ಲಿ ನಿರ್ಮಾಣಗೊಂಡಿದೆ. 21ನೇ ಶತಮಾನ ಭಾರತ ಹಾಗೂ ಉಪಖಂಡದ್ದಾಗಲು ಭಾರತ ಈ ಸಮಯವನ್ನು ಸರಿಯಾಗಿ ಸದುಪಯೋಗಪಡಿಸಿಕೊಳ್ಳಬೇಕು. ಭಾರತ ಹಾಗೂ ಅಮೆರಿಕಾದ ಸಮಾನ ಆಸಕ್ತಿಗಳನ್ನು ದ್ವಿಪಕ್ಷೀಯ ಬಾಂಧವ್ಯದ ಮತ್ತೊಂದು ದಿಕ್ಕಿಗೆ ಕೊಂಡೊಯ್ಯಬೇಕು. ಜನರ ಮಾನಸಿಕತೆಯನ್ನು ಬದಲಾಯಿಸಲು ಹೊರಟಿದ್ದ ಅಸತ್ಯ, ದೋಷಪೂರ್ಣ ಸಮೀಕ್ಷೆಗಳನ್ನು ಅಮೆರಿಕ ನಿರಾಕರಿಸಿದೆ. ಕಡೆಯ ಕೆಲವು ಘಂಟೆಗಳ ವರೆಗೂ ಹಿಲರಿ ಕ್ಲಿಂಟನ್ 90% ಗೆಲ್ಲುವ ಅಭ್ಯರ್ಥಿ ಎಂದು ಸಾರಸಗಟಾಗಿ ಟ್ರಂಪ್ ಕಾರ್ಡ್‍ನ ಮುಂದೆ ಜೀವಂತವಿರುವ ಅತೀ ಜನಪ್ರಿಯ ಅಧ್ಯಕ್ಷ ಬಿಲ್ ಕ್ಲಿಂಟನ್ ಕಸರತ್ತು, ಒಬಾಮಾ ಆಡಳಿತದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ರೋಟರಿ ಕ್ಲಬ್‌ನ ಆಶ್ರಯದಲ್ಲಿ ನಡೆದ 2016-17ರ ರೋಟರಿ ವಲಯ 1ರ ಸಾಂಸ್ಕೃತಿಕ ಸ್ಪರ್ಧೆ ಹಿಗ್ಗಿನ ಬುಗ್ಗೆ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್ ವಿವಿಧ ವಿಭಾಗಗಳಲ್ಲಿ 5 ಪ್ರಥಮ, 5 ದ್ವಿತೀಯ, 2 ತೃತೀಯ ಒಟ್ಟು 12 ಪ್ರಶಸ್ತಿಗಳನ್ನು ಪಡೆದು ಅಗ್ರಮಾನ್ಯ ಸ್ಥಾನದೊಂದಿಗೆ ಚಾಂಪಿಯನ್‌ಶಿಪ್‌ನ್ನು ತನ್ನದಾಗಿಸಿಕೊಂಡಿದೆ. ವೈಯಕ್ತಿಕ ಗೀತೆ, ಯುಗಳ ಗೀತೆ, ಸಮೂಹ ನೃತ್ಯ, ಚಿತ್ರಕಲೆ, ರಂಗೋಲಿ ಸ್ಪರ್ಧೆಯಲ್ಲಿ ಪ್ರಥಮ, ಭಾವಗೀತೆ, ಸಮೂಹ ಗಾನ, ವೈಯಕ್ತಿಕ ನೃತ್ಯ, ಪ್ರಹಸನ, ಫ್ಯಾಶನ್ ಶೋಗಳಲ್ಲಿ ದ್ವಿತೀಯ, ಚಿತ್ರಕಲೆಯಲ್ಲಿ ಎರಡು ತೃತೀಯ ಸ್ಥಾನವನ್ನು ಬಾಚಿಕೊಂಡು ರೋಟರಿ ಸನ್‌ರೈಸ್ ಇತಿಹಾಸದಲ್ಲಿ ಪ್ರಥಮ ಬಾರಿಗೆ ವಲಯ ಸಾಂಸ್ಕೃತಿಕ ಸ್ಫರ್ಧೆಯಲ್ಲಿ ಚಾಂಪಿಯನ್ ಪಟ್ಟ ಗಳಿಸಿ ವಲಯದಲ್ಲಿ ತನ್ನ ಹಿರಿಮೆಯನ್ನು ಸ್ಥಾಪಿಸಿದೆ. ರೋಟರಿ ಸನ್‌ರೈಸ್ ಅಧ್ಯಕ್ಷರಾದ ಕೆ. ನರಸಿಂಹ ಹೊಳ್ಳ ಪ್ರಶಸ್ತಿ ಸ್ವೀಕರಿಸಿ ಕ್ಲಬ್‌ನ ಸದಸ್ಯರ ಅವಿರತ ಪರಿಶ್ರಮಕ್ಕೆ ಕೃತಜ್ಞತೆ ಸಲ್ಲಿಸಿದರು. ಹಿಗ್ಗಿನ ಬುಗ್ಗೆ ಸಮಾರೋಪ ಸಮಾರಂಭದಲ್ಲಿ ಉಡುಪಿ ಜಿಲ್ಲಾ ಪಂಚಾಯತ್‌ನ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಎಲ್ಲಾ ಪ್ರದೇಶಗಳು ಅಭಿವೃದ್ಧಿ ಹೊಂದುತ್ತಿದ್ದರೂ ಗಂಗೊಳ್ಳಿ ಮಾತ್ರ ಅಭಿವೃದ್ಧಿಯಲ್ಲಿ ಹಿನ್ನಡೆ ಕಾಣುತ್ತಿದೆ. ಗಂಗೊಳ್ಳಿ ಅಭಿವೃದ್ಧಿ ದೃಷ್ಟಿಯಿಂದ ಎಲ್ಲರಲ್ಲೂ ಒಗ್ಗಟ್ಟು ಮುಖ್ಯವಾಗಿದೆ. ಗಂಗೊಳ್ಳಿಯಲ್ಲಿ ಕಳೆದ ಎರಡು ವರ್ಷಗಳಿಂದ ಬಡರೋಗಿಗಳಿಗೆ ಸೇವೆ ನೀಡುತ್ತಿರುವ ಸೋಷಿಯಲ್ ಸ್ಟೋರ್ಟ್ಸ್ ಚಾರಿಟೇಬಲ್ ಸಂಸ್ಥೆಯ ಅಂಬುಲೆನ್ಸ್ ಸೇವೆಯು ಗ್ರಾಮದ ಜನರಿಗೆ ಇನ್ನಷ್ಟು ವ್ಯವಸ್ಥಿತವಾಗಿ ಕ್ಲಪ್ತ ಸಮಯಕ್ಕೆ ದೊರೆಯುವಂತಾಗಬೇಕು ಎಂದು ಗೋವಾದ ಉದ್ಯಮಿ ಮೌಲಾನಾ ಇಬ್ರಾಹಿಂ ಗಂಗೊಳ್ಳಿ ಹೇಳಿದರು. ಅವರು ಗಂಗೊಳ್ಳಿಯ ಶ್ರೀ ರಾಮ ಮಂದಿರದ ಬಳಿ ಗಂಗೊಳ್ಳಿಯ ಸೋಷಿಯಲ್ ಸ್ಟೋರ್ಟ್ಸ್ ಚಾರಿಟೇಬಲ್ ಸಂಸ್ಥೆಯ ಪ್ರಾಯೋಜಿತ ಸೂಪರ್ ಸ್ಟಾರ್ ಕ್ರಿಕೆಟರ‍್ಸ್ ಇವರ ೨೪x೭ ಅಂಬುಲೆನ್ಸ್‌ನ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಮೌಲಾನಾ ವಹಾಬ್ ಸಾಹೇಬ್ ಆಶೀರ್ವನ ನೀಡಿದರು. ನಿವೃತ್ತ ಮುಖ್ಯೋಪಾಧ್ಯಾಯ ಶಬ್ಬೀರ್ ಸಾಹೇಬ್, ಮೌಲಾನಾ ಅಬ್ಬು ಸಾಹೇಬ್, ಮೌಲಾನಾ ಮಹಮ್ಮದ್ ಗೌಸ್ ಹಾಗೂ ಸೂಪರ್ ಸ್ಟಾರ್ ಕ್ರಿಕೆಟರ‍್ಸ್ ಸಂಸ್ಥೆಯ ಸದಸ್ಯರು ಸೂಪರ್ ಸ್ಟಾರ್ ಕ್ರಿಕೆಟರ‍್ಸ್ ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಂದಿನ ವ್ಯಾವಹಾರಿಕಾ ಜಗತ್ತಿನಲ್ಲಿ ಸೇವಾ ಮನೋಭಾವ ಕ್ಷೀಣಿಸುತ್ತಿದೆ. ಸಮಾಜ ಸೇವೆ ಕುರಿತು ವಿಶಾಲ ಮನೋಭಾವನೆ ಇಟ್ಟುಕೊಂಡು ಸಾಮಾಜಿಕ, ಶೈಕ್ಷಣಿಕ ಅರಿವು ರೂಢಿಸಿಕೊಂಡು ಮುನ್ನಡೆದಾಗ ಅಂತಹ ಸೇವೆ ಸಾರ್ಥಕ ಎನ್ನಿಸಿಕೊಳ್ಳುತ್ತದೆ ಎಂದು ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಹೇಳಿದರು. ಬಿಜೂರು ವಜ್ರದುಂಬಿ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ಸಭಾಭವನದಲ್ಲಿ ದ್ವೀತಿಯ ಬಾರಿಗೆ ಕೆ.ಎಂ.ಸಿ. ಮಣಿಪಾಲ ಚರ್ಮ ರೋಗ ತಜ್ಞರಿಂದ ನಡೆದ ಉಚಿತ ಚರ್ಮರೋಗ ಚಿಕಿತ್ಸಾ ಶಿಬಿರ ಹಾಗೂ ಹೆಗ್ಡೆ ಆಂಡ್ ಹೆಗ್ಡೆ ಕಂಪೆನಿಯವರು ಕೊಡಮಾಡಿದ ಉಚಿತ ಔಷಧ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವೈದ್ಯ ವೃತ್ತಿಯಲ್ಲಿ ಸಮಾಜ ಸೇವೆ ಕುರಿತು ಸೇವಾ ಮನೋಭಾವನೆ ಇಟ್ಟುಕೊಂಡು ಸೇವೆಗೈಯುವವರೇ ಯಶಸ್ವಿ ವೈದ್ಯರೇನಿಸಿಕೊಳ್ಳುತ್ತಾರೆ, ತಮ್ಮ ತಮ್ಮ ಬದುಕನ್ನು ರೂಪಿಕೊಳ್ಳಲು ಮಾತ್ರ ಹವಣಿಸುತ್ತಿರುವ ಈ ದಿನಗಳಲ್ಲಿ ಗ್ರಾಮೀಣ ಭಾಗದವರಿಗೆ ತಜ್ಞ ವೈದ್ಯರಿಂದ ಆರೋಗ್ಯ ಸೇವೆಯನ್ನು ಒದಗಿಸುವ ಮೂಲಕ ಬಡ ವರ್ಗದ ಜನ ಸಾಮಾನ್ಯರಿಗೆ ಆರೋಗ್ಯ…
