Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಂಗಾರಕಟ್ಟೆಯ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರು ಕೋಟ ಎಸೈ ಕಬ್ಬಳರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಬೇಸತ್ತು ರಾಜಿನಾಮೆ ನೀಡಿ ಹೊರನಡೆದಿದ್ದ ಕಬ್ಬಳರಾಜ್ ಅವರ ಮನವೊಲಿಸಲಾಗಿದೆ ಎನ್ನಲಾಗಿದ್ದು ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಸ್ಪಿ ತರಾಟೆಗೆ ತೆಗೆದುಕೊಂಡಿದ್ದರಿಂದ ರಾಜಿನಾಮೆ ಪತ್ರ ಬರೆದಿಟ್ಟು ತೆರಳಿದ್ದ ಎಸೈ ಕಬ್ಬಾಳರಾಜ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದಲ್ಲದೇ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಸಂಜೆಯ ಬಳಿಕ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರ ಸಂಪರ್ಕ ಸಾಧಿಸಿ ಮಾತುಕತೆ ನಡೆಸಿದ್ದಲ್ಲದೇ, ಕಬ್ಬಳರಾಜ್ ಅವರ ಮನವೊಲಿಸಲು ಯಶಸ್ವಿಯಾಗಿದ್ದಾರೆ. ಹಾಗಾಗಿ ಒಂದೆರಡು ದಿನದಲ್ಲಿ ಕಬ್ಬಾಳರಾಜ್ ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ ಎಸೈ ರಾಜಿನಾಮೆ ಕೋಟ ಪರಿಸದರದಲ್ಲಿ ಸಂಚಲನ ಮೂಡಿಸಿದ್ದಲ್ಲದೇ ನಾಗರಿಕರು ರಾಜಿನಾಮೆ ಅಂಗಿಕರಿಸದಂತೆ ಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದರು. ಕೋಟ ಬಂದ್ ಮಾತುಗಳೂ ಕೇಳಿಬಂದಿದ್ದವು. ಇದೀಗ ಎಸೈ ಮರಳಲಿರುವ ಮಾಹಿತಿ ದೊರೆತ ಹಿನ್ನೆಲೆಯನ್ನು…

Read More

ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ನೂತನ ಸಂರ್ಕೀಣ, ಸಭಾಂಗಣ, ಗ್ರಂಥಾಲಯ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಕ್ಷಣದಿಂದ ವಿಚಾರ ಶ್ರೀಮಂತಿಕೆಯ ದಾರಿಯತ್ತ ತೆರಳಲು ಸಾಧ್ಯವಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿರುವ ಈ ವಿದ್ಯಾ ಸಂಸ್ಥೆಯ ಸಾಧನೆ ಸ್ತುತ್ಯಾರ್ಹ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮುದಾಯ ಕೇಂದ್ರಿತ ಶಿಕ್ಷಣ ನೀಡುವುದರ ಮೂಲಕ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಕೆ. ಬೈರಪ್ಪ ಹೇಳಿದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ, ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸೌಕೂರು ಶೇರ್ವೆಗಾರ ಮನೆ ವಿಶಾಲಾಕ್ಷಿ ಬಿ. ಹೆಗ್ಡೆ ನೂತನ ಸಂಕೀರ್ಣ, ನೂತನ ಸಭಾಂಗಣ, ನೂತನ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತರಬೇತುಗೊಳಿಸುವ ಮೂಲಕ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದರು. ಕಾಲೇಜು ಆಡಳಿತ ಮಂಡಳಿಯ ಸದಸ್ಯೆ ವಿನತಾ ಪಿ. ರೈ ನೂತನ ಗಣಕ-ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪನ್ಯಾಸಕ, ಕುಂದಗನ್ನಡದ ಮೇರು ಪ್ರತಿಭೆ, ಸುಲಲಿತ ಮಾತುಗಾರ ತೆಕ್ಕಟ್ಟೆ ಸುರೇಂದ್ರ ಶೆಟ್ಟಿ (52) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿಯನ್ನು ಅಗಲಿದ್ದಾರೆ. ತೆಕ್ಕಟ್ಟೆ ಪಟೇಲರ ಮನೆಯವರಾದ ಸುರೇಂದ್ರ ಶೆಟ್ಟಿ, ಬಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿದ್ದರು. ಕೆಲ ದಿನಗಳ ಹಿಂದೆ ಕಾಣಿಸಿಕೊಂಡ ಇಲಿಜ್ವರದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಕ್ರೀಯಾಶೀಲ ವ್ಯಕ್ತಿತ್ವದ, ಚುರುಕಿನ ಮಾತುಗಾರ ಸುರೇಂದ್ರ ಶೆಟ್ಟಿ ಅವರು ಕುಂದಾಪ್ರ ಕನ್ನಡದ ಬಗೆಗೆ ಸಾಕಷ್ಟು ಅಧ್ಯಯನ ನಡೆಸಿದ್ದರು. ಮಾನಿನಿ ರಂಗಸ್ಥಳ, ಗಣಪದನ ಪದ ಕೃತಿಗಳು, ನಾಟಕ ಹಾಗೂ ಕವನ ಸಂಕಲನಗಳನ್ನು ಹೊರತಂದಿದ್ದ ಅವರು, ಪಿಎಚ್‌ಡಿ ಅಧ್ಯಯನದಲ್ಲಿ ತೊಡಗಿದ್ದರು. ಗಮಕಿಯಾಗಿ, ಉತ್ತಮ ವಾಗ್ಮಿಯಾಗಿ, ಕಲೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪ್ರ ಕನ್ನಡದ ಬಗೆಗೆ ವಿಶೇಷ ಒಲವು ಹೊಂದಿದ್ದ ಸುರೇಂದ್ರ ಶೆಟ್ಟರು ಬದುಕಿನುದ್ದಕ್ಕೂ ಕುಂದಗನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಕುರಿತಾಗಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಕ್ರೀಡೆಗಳಲ್ಲಿನ ಭಾಗವಹಿಸುವಿಕೆ ಪಠ್ಯ ಕಲಿಯುವಿಕೆಯ ಮೇಲೆ ಪರಿಣಾಮ ಬೀರುತ್ತದೆ ಎನ್ನುವುದು ತಪ್ಪು ತಿಳುವಳಿಕೆ. ಬದಲಾಗಿ ಕ್ರೀಡೆ ಎನ್ನುವುದು ನಮ್ಮ ಜ್ಞಾನ ಮತ್ತು ಕಲಿಯುವಿಕೆಯ ಪ್ರಮಾಣವನ್ನು ಹೆಚ್ಚಸಲು ನೆರವಾಗುತ್ತವೆ ಎಂದು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾ ಸಂಸ್ಥೆಗಳ ಕಾರ‍್ಯದರ್ಶಿ ಎನ್ ಸದಾಶಿವ ನಾಯಕ್ ಅಭಿಪ್ರಾಯಪಟ್ಟರು. ಅವರು ಇತ್ತೀಚೆಗೆ ಗ೦ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜುಗಳ ಬಾಲಕ ಬಾಲಕಿಯರ ಟೆನ್ನಿಕಾಯ್ಟ್ ಪ೦ದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಸರಸ್ವತಿ ವಿದ್ಯಾಲಯ ಕಾಲೇಜಿನ ಪ್ರಾ೦ಶುಪಾಲೆ ಕವಿತಾ ಎಮ್ ಸಿ ಅಧ್ಯಕ್ಷತೆ ವಹಿಸಿದ್ದರು.ಬಾರಕೂರು ನ್ಯಾಷನಲ್ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಉಮೇಶ್ ಶೆಟ್ಟಿ ಉಪಸ್ಥಿತರಿದ್ದರು.. ಸರಸ್ವತಿ ವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ನಾಗರಾಜ ಶೆಟ್ಟಿ ಸ್ವಾಗತಿಸಿದರು ಕನ್ನಡ ಉಪನ್ಯಾಸಕ ಸುಜಯೀಂದ್ರ ಹಂದೆ ಕಾರ‍್ಯಕ್ರಮ ನಿರೂಪಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ನಿಷ್ಠಾವಂತ ಅಧಿಕಾರಿ ಎಂದು ಹೆಸರು ಮಾಡಿದ್ದ ಕೋಟ ಠಾಣೆಯ ಎಸೈ ಕಬ್ಬಾಳರಾಜ್ ಹೆಚ್. ಡಿ., ಅವರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಎಸೈ ರಾಜಿನಾಮೆ ನೀಡಿ ತೆರಳಿದ್ದಾರೆ ಎನ್ನಲಾಗಿದೆ. ಐರೋಡಿ ಹಂಗಾರಕಟ್ಟೆಯ ಖಾಸಗಿ ವ್ಯಕ್ತಿಯೋರ್ವರ ಜಾಗದ ವಿಷಯದಲ್ಲಿ ಇದ್ದ ತಕರಾರು ಕೋಟ ಠಾಣೆಯ ಮೆಟ್ಟಿಲೇರಿತ್ತು. ಠಾಣಾಧಿಕಾರಿ ಕಬ್ಬಾಳರಾಜ್ ಪ್ರಕರಣವನ್ನು ಇತ್ಯರ್ಥಗೊಳಿಸಿ ಸುಖಾಂತ್ಯ ಕಾಣಿಸಿದ್ದರಾದರೂ ಅತೃಪ್ತರೊರ್ವರು ತಮಗೆ ಅನ್ಯಾಯವಾಗಿದೆ ಎಂದು ಜಿಲ್ಲಾ ಎಸ್ಪಿ ಕೆ.ಟಿ. ಬಾಲಕೃಷ್ಟ ಅವರಲ್ಲಿ ದೂರಿಕೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ನೇರವಾಗಿ ಕೋಟ ಠಾಣಾಧಿಕಾರಿ ಕಬ್ಬಾಳರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇಂದು ಬೆಳಿಗ್ಗೆ ಎಸ್ಪಿ ಅವರೊಂದಿಗೆ ದೂರವಾಣಿಯ ಮೂಲಕ ಸಂವಾದ ನಡೆಸಿದ್ದ ಕಬ್ಬಾಳರಾಜ್ ಠಾಣೆಯ ಡೈರಿಯಲ್ಲಿ ರಾಜೀನಾಮೆ ವಿಷಯವನ್ನು ಪ್ರಸ್ತಾಪ ಮಾಡಿ ಹೊರಕ್ಕೆ ನಡೆದಿದ್ದಾರೆ ಮೂಲಗಳು ತಿಳಿಸಿವೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಠಾಣೆಯಿಂದ ತೆರಳಿದ ಬಳಿಕ ಕಬ್ಬಾಳರಾಜ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೇಸಿಐ ಕುಂದಾಪುರ ಸಿಟಿಯ ೨೦೧೭ನೇ ಸಾಲಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಶ್ರೀಧರ ಸುವರ್ಣ ಆಯ್ಕೆಯಾಗಿದ್ದಾರೆ. ಜೇಸಿಐ ಕುಂದಾಪುರ ಸಿಟಿಯ ಜ್ಯೂನಿಯರ್ ಜೇಸಿ ಅಧ್ಯಕ್ಷರಾಗಿ, ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರದ ಅಧ್ಯಕ್ಷರಾಗಿ, ಜೇಸಿ, ರೋಟರ‍್ಯಾಕ್ಟ್‌ನ ವಿವಿಧ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ಕಲಾಕ್ಷೇತ್ರ ಕುಂದಾಪುರ, ರೋಟರಿ ಕ್ಲಬ್ ಕುಂದಾಪುರದ ಸದಸ್ಯರಾಗಿದ್ದಾರೆ. ಜೇಸಿಐ ಕುಂದಾಪುರ ಸಿಟಿಯ ಜೇಸಿ ಸಪ್ತಾಹದ ಕೊನೆಯ ದಿನ ನಿಕಟಪೂರ್ವಾಧ್ಯಕ್ಷ ಚಂದ್ರಕಾಂತ್ ಅವರು ಮುಂದಿನ ಸಾಲಿನ ಅಧ್ಯಕ್ಷರಾಗಿ ಶ್ರೀಧರ ಸುವರ್ಣ ಅವಿರೋಧ ಆಯ್ಕೆಯಾಗಿರುವುದನ್ನು ಘೋಷಿಸಿದರು. ಈ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಅಧ್ಯಕ್ಷ ಕುಂಭಾಸಿ ಮಂಜುನಾಥ ಕಾಮತ್, ಜೇಸಿ ವಲಯ ಉಪಾಧ್ಯಕ್ಷ ನಿತಿನ್ ಅವಭೃತ, ಪೂರ್ವಾಧ್ಯಕ್ಷರಾದ ಕೆ. ಕಾರ್ತಿಕೇಯ ಮಧ್ಯಸ್ಥ, ಸಪ್ತಾಹ ಸಭಾಪತಿಗಳಾದ ಹುಸೇನ್ ಹೈಕಾಡಿ, ರಾಘವೇಂದ್ರ ಚರಣ ನಾವಡ, ಪೂರ್ವಾಧ್ಯಕ್ಷರಾದ ನಾಗೇಂದ್ರ ಪೈ, ವೆಂಕಟೇಶ ಪ್ರಭು ಇನ್ನಿತರರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಜಿಲ್ಲಾಧಿಕಾರಿ ನಿರ್ದೇಶನದಂತೆ ರಾಜ್ಯದಲ್ಲಿರುವ ಬುಡಕಟ್ಟು ಜನಾಂಗದವರ ಮೂಲಭೂತ ಸಮಸ್ಯೆ ಹಾಗೂ ಕೇಂದ್ರದ ಅನುದಾನಗಳು ಸಮರ್ಪಕವಾಗಿ ವಿನಿಯೋಗವಾಗುತ್ತಿದೆ ಎನ್ನುವ ಬಗ್ಗೆ ಸ್ವತಃ ಅವರ ಬಳಿಗೆ ಹೋಗಿ ಸಂವಾದ ನಡೆಸುವ ಮೂಲಕ ಕೇಂದ್ರ ಬುಡಕಟ್ಟು ಆಯೋಗ ರಾಜ್ಯಗಳಿಗೆ ವರದಿ ನೀಡಲಿದೆ. ಅಲ್ಲದೆ ಕೊರಗ ಸಮದಾಯದ ಸಮಸ್ಯೆಗಳಿಗೆ ಒಂದು ವಾರದಲ್ಲಿಯೇ ಸ್ಪಂದಿಸಲಿದೆ ಎಂದು ಕೇಂದ್ರ ಸರಕಾರದ ರಾಷ್ಟ್ರೀಯ ಬುಡಕಟ್ಟು ಆಯೋಗದ ಅಧ್ಯಕ್ಷ ಡಾ| ರಾಮೇಶ್ವರ ಓರಾನ್‌ ಭರವಸೆ ನೀಡಿದರು. ಅವರು ತಾಲೂಕಿನ ಕುಂಭಾಶಿ ಅಂಬೇಡ್ಕರ್‌ ಕಾಲನಿಯಲ್ಲಿರುವ ಮಕ್ಕಳ ಮನೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಂವಾದ ನಡೆಸಿದರು. ಇದೇ ಸಂದರ್ಭ ಕುಂದಾಪುರ ಕೊರಗ ಶ್ರೇಯೋಭಿವೃದ್ಧಿ ಸಮಿತಿ ಅಧ್ಯಕ್ಷ ಗಣೇಶ್‌ ವಿ. ಮನವಿ ಸಲ್ಲಿಸಿ ಮಾತನಾಡಿ, ಕೊರಗರ ಹೊಸ ಮನೆಗಳಿಗೆ ನೀಡುತ್ತಿರುವ ರೂ. 2 ಲಕ್ಷವನ್ನು ರೂ. 4 ಲಕ್ಷಕ್ಕೆ ಏರಿಸಬೇಕು ಹಾಗೂ ಆರೋಗ್ಯ ಶಿಕ್ಷಣ ಮತ್ತು ಸ್ವಉದ್ಯೋಗಗಳಿಗೆ ಕಳೆದ ಎರಡು ವರ್ಷಗಳಿಂದ ಕೇಂದ್ರ ಅನುದಾನ ಬಾರದಿರುವ ಹಿನ್ನೆಲೆಯಲ್ಲಿ ಪರಿಶಿಷ್ಟ ವರ್ಗದವರಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮರವಂತೆ ಬಳಿ ನಿಯಂತ್ರಣ ಚಾಲಕನ ತಪ್ಪಿದ ಸರಕಾರಿ ಬಸ್ಸೊಂದು ಚತುಷ್ಪಥ ಕಾಮಗಾರಿಗಾಗಿ ಹೊಸದಾಗಿ ನಿರ್ಮಾಣವಾಗುತ್ತಿರುವ ಸೇತುವೆಗೆ ಢಿಕ್ಕಿಯಾದ ಪರಿಣಾಮ ಓರ್ವ ಗಂಭೀರವಾಗಿ ಗಾಯಗೊಂಡು ಚಾಲಕರಿಬ್ಬರುಸಹಿತ ಎಂಟು ಮಂದಿ ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ ಸಂಭವಿಸಿದೆ. ಗಂಭೀರ ಗಾಯಗೊಂಡವರನ್ನು ಬಸ್ಸಿನ ಪ್ರಯಾಣಿಕ ಗದಗ ಜಿಲ್ಲೆಯ ಕಳಸ ಎಂಬಲ್ಲಿಯ ನಿವಾಸಿ ವೀರೇಶ್‌(28) ಎಂದು ಗುರುತಿಸಲಾಗಿದ್ದು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ ಚಾಲಕ ಹಾಗೂ ಕಂಡಕ್ಟರ್‌ ಗದಗ ಜಿಲ್ಲೆಯ ಕೋಟಂಗುಚ್ಚಿ ನಿವಾಸಿ ಜೀವನ್‌ ಸಾಬ್‌(41), ಮತ್ತೋರ್ವ ಚಾಲಕ ಬಾದಾಮಿ ಮೂಲದ ಈಶ್ವರ(38), ಪ್ರಯಾಣಿಕರಾದ ಶಿರಹಟ್ಟಿ ತಾಲೂಕಿನ ಮೊಗೇರಿಹೊನೆ ನಿವಾಸಿ ಬಸವರಾಜ್‌(24), ಎಲ್ಲಪ್ಪ ಶಿರಹಟ್ಟಿ (30), ಗದಗ ಜಿಲ್ಲೆಯ ಯಲ್ಲಪ್ಪ (66) , ಗದಗ ಜಿಲ್ಲೆಯ ಮಹಾದೇವಪ್ಪ ಹಳಗೇರಿ (26), ಹಾವೇರಿ ಜಿಲ್ಲೆಯ ರಾಜಪ್ಪ ಬಾಬಣ್ಣ (23), ಧಾರವಾಡದ ಬಸಪ್ಪ ರಾಮಣ್ಣ (53)ಗಾಯಾಳುಗಳು. ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗದಗದಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ಸನ್ನು ಬೈಂದೂರು ತನಕ ಚಾಲಕ ಈಶ್ವರ್‌…

Read More

ಕರುಣಾಕರ ಬಳ್ಕೂರು | ಕುಂದಾಪ್ರ ಡಾಟ್ ಕಾಂ ಲೇಖನ ಬಣ್ಣ ಹಚ್ಚಿ ರಂಗದಲ್ಲಿ ಕಾಣಿಸಿಕೊಂಡರೆ ಅಜ್ಜಿಯೇ ಬಂದು ಮಾತನಾಡಿದಂತೆ ಭಾಸವಾಗುತ್ತದೆ. ನೆರೆಗೆ ಕಟ್ಟಿದ ಮುಖ, ಕೆಂಪು ಸೀರೆ, ಗೂನು ಬೆನ್ನು, ವಟ ವಟ ಮಾತುಗಳು. ಹೀಗೆ ಇವರೊಬ್ಬರೇ ಆ ಪಾತ್ರಕ್ಕೆ ಜೀವತುಂಬಬಲ್ಲರೆಂದು ಸಲಿಸಾಗಿ ಅನ್ನಿಸುವಷ್ಟು ಪಾತ್ರದೊಂದಿಗೆ ಬೆರೆತು ಕಲೆಯಲ್ಲೊಂದು ಜೀವ ತುಂಬಿ ರಂಗಭೂಮಿ ಹಾಗೂ ಕಿರುತೆರೆಯಲ್ಲಿ ಮಿಂಚುತ್ತಿದ್ದಾರೆ ಗ್ರಾಮೀಣ ಪ್ರದೇಶದ ಅಪ್ಪಟ್ಟ ಯುವ ಪ್ರತಿಭೆ ಸೂರ್ಯ ಎಂ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಅಂಪಾರು ಗ್ರಾಮದ ಮೂಡುಬಗೆ ಸೂರ್ಯ ಅವರ ಹುಟ್ಟೂರು. ತಂದೆ ಶೀನ ಮಡಿವಾಳ ಮತ್ತು ರುದ್ರು ಮಡಿವಾಳ್ತಿ ದಂಪತಿಗಳ ಮೂವರು ಮಕ್ಕಳಲ್ಲಿ ಈತ ಕಿರಿಯವ. ಪ್ರಾಥಮಿಕ ಶಿಕ್ಷಣ ಸಂದರ್ಭದಲ್ಲಿಯೇ ಅಭಿಯನದ ಬಗ್ಗೆ ಆಸಕ್ತಿ ಮೂಡಿಸಿಕೊಂಡವನು. ಬೇಲೂರು ಐತಾಳ್ ಸರ್ ಅವರ ಗುರು ಪ್ರೋತ್ಸಾಹ ಇನ್ನಷ್ಟು ಸಾಧನೆಗೆ ಪ್ರೇರಣೆಯಾಯಿತು. 3 ವರ್ಷಗಳ ಕಾಲ ನೀನಾಸಮ್ ತಿರುಗಾಟ ಮತ್ತು ಜನಮನದಾಟದೊಂದಿಗೆ ತಿರುಗಾಟ ಮಾಡಿದ್ದಾರೆ. ನಾಟಕ ಕ್ಷೇತ್ರದಲ್ಲಿ ಮಿಂಚಲು ಸ್ಪೂರ್ತಿಯ ಸೆಲೆಯಾದವರು ಪ್ಲೋರಿನಾ ನೂರ್ಹಾನ್. ಕುಂದಾಪ್ರ ಡಾಟ್ ಕಾಂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಸರಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ವಿಶ್ವ ಓಝೋನ್ ದಿನವನ್ನು ಆಚರಿಸಿದರು. ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕರಾದ ರವೀಂದ್ರ ಉಪಾಧ್ಯ ಮಾತನಾಡಿ ಭೂ ವಾತಾವರಣದ ಸ್ತರಗೋಳದಲ್ಲಿ ಸಕಲ ಜೀವರಾಶಿಗಳಿಗೂ ಸುರಕ್ಷಾ ಕೊಡೆಯಂತಿರುವ ಓಝೋನ ಪದರದ ಮಹತ್ವವನ್ನು ತಿಳಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳು ಓಝೋನ್ ಪದರ ತೆಳುಗೊಳ್ಳಲು ಕಾರಣವಾದ ಮಾನವ ಚಟುವಟಿಕೆಗಳ ಕುರಿತು ಮತ್ತು ನೇರಳಾತೀತ ಕಿರಣಗಳು ಉಂಟುಮಾಡುವ ಜೈವಿಕ ಅಪಾಯಗಳ ಕುರಿತು ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಎಂದರು. ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸುಬ್ರಹ್ಮಣ್ಯ ಜೋಷಿ ವಹಿಸಿದ್ದರು. ಎನ್ ಎಸ್ ಎಸ್ ಕಾರ್ಯಕ್ರಮಾಧಿಕಾರಿ ಸಂಧ್ಯಾ ನಾಯಕ್ ಸ್ವಾಗತಿಸಿದರು. ವಿದ್ಯಾರ್ಥಿನಿ ರಕ್ಷಿತಾ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ನಾಯಕಿ ನಿಶ್ಮಿತಾ ಕಾರ‍್ಯಕ್ರಮ ನಿರೂಪಿಸಿದರು.

Read More