ಕುಂದಾಪುರ: ತಾಲೂಕಿನ ಕೋಮು ಸೂಕ್ಷ್ಮ ಪ್ರದೇಶವಾದ ಕಂಡ್ಲೂರು ಬೂದಿ ಮುಚ್ಚಿದ ಕೆಂಡದಂತಾಗಿದ್ದು, ತೆರೆಮರೆಯಲ್ಲಿ ಕೋಮು ಸಂಘರ್ಷ ಮುಂದುವರಿದಿದೆ. ಪೊಲೀಸರ ಶಾಂತಿ ಸಭೆಯ ಬಳಿಕವೂ ಯಾರೋ ಕಿಡಿಗೇಡಿಗಳು ಶಾರದೋತ್ಸವಕ್ಕಾಗಿ ಹಾಕಿದ್ದ ಹಿಂದೂ ಧರ್ಮದ ಭಗವಧ್ವಜಕ್ಕೆ ಭಾನುವಾರ ತಡರಾತ್ರಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯ ವಿವರ: ಕಂಡ್ಲೂರಿನಲ್ಲಿ ನಡೆಸಲುದ್ದೇಶಿಸಿರುವ 50ನೇ ವರ್ಷದ ಶಾರದೋತ್ಸದ ಪ್ರಯುಕ್ತ ಪೇಟೆಯ ಸುತ್ತಲೂ ಬಂಟಿಗ್ಸ್, ಬ್ಯಾನರ್, ಬಾವುಟಗಳನ್ನು ಹಾಕಲಾಗಿತ್ತು. ಯಾರೋ ಕಿಡಿಗೇಡಿಗಳು ಶಾಂತಿ ಕದಡುವ ಸಲುವಾಗಿ ಭಾನುವಾರ ರಾತ್ರಿ ವೇಳೆಗೆ ಕಂಡ್ಲೂರು ಸೇತುವೆಯ ಸಮೀಪ ರಸ್ತೆಯ ಮೇಲ್ಬಾಗದಲ್ಲಿ ಹಾಕಲಾಗಿದ್ದ ಕೇಸರಿ ಭಗವಧ್ವಜಕ್ಕೆ ಬೆಂಕಿ ಹಚ್ಚಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ) ಕಂಡ್ಲೂರಿನಲ್ಲಿ ವಾರದ ಹಿಂದಷ್ಟೇ ಶಾರದೋತ್ಸವದ ವಿಚಾರವಾಗಿಯೇ ಹಿಂದೂ ಯುವಕರ ಮೇಲೆ ಅನ್ಯಕೋಮಿನ ಹುಡುಗರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ಆ ಪೈಕಿ ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಲಾಗಿತ್ತು. ಕೋಮು ಸೂಕ್ಷ್ಮ ಪ್ರದೇವಾದ್ದರಿಂದ ಜಿಲ್ಲಾ ವರಿಷ್ಠಾಧಿಕಾರಿ ಅಣ್ಣಾಮಲೈ ಘಟನಾ ಸ್ಥಳಕ್ಕೆ ಭೇಟಿ ನೀಡಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಸಿದ್ದರು. ಕುಂದಾಪುರ ಡಿವೈಎಸ್ಪಿ ನೇತೃತ್ವದಲ್ಲಿ…
Author: ನ್ಯೂಸ್ ಬ್ಯೂರೋ
ಕುಂದಾಪುರ: ಪಶ್ಚಿಮ ಘಟ್ಟ ಜೀವ ಸೂಕ್ಷ್ಮ ಪ್ರದೇಶಗಳ ವ್ಯಾಪ್ತಿಗೆ ಸೇರಿಸಲಾಗಿದೆ ಎನ್ನಲಾದ ಪ್ರದೇಶಗಳನ್ನು ಅಧಿಕಾರಿಗಳ ಮಟ್ಟದಲ್ಲಿ ಪ್ರಥಮವಾಗಿ ಗಡಿ ಗುರುತಿಸುವಿಕೆ, ಭೌಗೋಳಿಕ ಸಮೀಕ್ಷೆಯನ್ನು ಮಾಡಬೇಕಾಗಿತ್ತು. ಆ ಕೆಲಸ ಆಗದೇ ಇವತ್ತು ಗೊಂದಲಗಳು ಉಂಟಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಸ್ಪರ ದೋಷರೋಪಣೆಯನ್ನು ಮಾಡುವುದನ್ನು ಬಿಟ್ಟು ರೈತರು, ಜನಸಾಮಾನ್ಯರ ಹಿತಾಸಕ್ತಿಯನ್ನು ಎತ್ತಿ ಹಿಡಿಯಬೇಕಾಗಿದೆ. ಜನರಿಗೆ ಮತ್ತೆ ಮತ್ತೆ ಸಮಸ್ಯೆಗಳು ಆಗಬಾರದು ಎಂದು ವಿಧಾನ ಪರಿಷತ್ ಸದಸ್ಯ, ಉಡುಪಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಪ್ರತಾಪಚಂದ್ರ ಶೆಟ್ಟಿ ಹೇಳಿದರು. ವಂಡ್ಸೆ ಗ್ರಾಮ ಪಂಚಾಯತ್ ಆಶ್ರಯದಲ್ಲಿ ಅರಣ್ಯ ಇಲಾಖೆಯ ವಿಶ್ರಾಂತಿದಾಮದಲ್ಲಿ ಪಶ್ಚಿಮ ಘಟ್ಟ ಸೂಕ್ಷ್ಮ ಪ್ರದೇಶದಿಂದ ವಂಡ್ಸೆ ಗ್ರಾಮವನ್ನು ಕೈ ಬಿಡಬೇಕು ಎನ್ನುವ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನಟಲ್ಕರ್ ಮಾತನಾಡಿ, ಈ ಹಿಂದೆ 35ಗ್ರಾಮಗಳು ಉಡುಪಿ ಜಿಲ್ಲೆಯಲ್ಲಿ ವರದಿ ವ್ಯಾಪ್ತಿಗೆ ಬಂದಿತ್ತು. ನಂತರ ಅದು 22ಕ್ಕೆ ಇಳಿದಾಗ ವಂಡ್ಸೆ ಗ್ರಾಮ ವರದಿಯ ವ್ಯಾಪ್ತಿಯಿಂದ ಹೊರಗೂಳಿಯಿತು. ಮತ್ತೆ ಹೇಗೆ ಸೇರ್ಪಡೆಗೊಂಡಿತ್ತು…
ಗ್ರಾಮೀಣ ಭಾರತ ಮತ್ತು ಪತ್ರಿಕೋದ್ಯಮದ ಕುರಿತು ವಿಶೇಷ ಉಪನ್ಯಾಸ ಕುಂದಾಪುರ: ಶೋಷಿತರು ಮತ್ತು ತುಳಿತಕ್ಕೊಳಗಾದವರಿಗೆ ಸಮಾನತೆ ಕಲ್ಪಿಸಿ ಕೊಡುವಲ್ಲಿ ಸಶಕ್ತರಾಗದಿದ್ದಲ್ಲಿ ಪ್ರಜಾಪ್ರಭುತ್ವದ ಆಶಯಕ್ಕೆ ಯಾವ ಬೆಲೆ ಸಿಕ್ಕಿದಂತಾಗುತ್ತದೆ? ಇದನ್ನು ಸರಿಮಾಡುವ ನಿಟ್ಟಿನಲ್ಲಿ ಪತ್ರಿಕೆ ಮಾಧ್ಯಮಗಳು ಶೋಷಿತರ ಪರವಾಗಿ ನಿಂತಿದೆಯೇ ಎಂದು ಖ್ಯಾತ ಪತ್ರಕರ್ತ ಜಾನ್ ಡಿ’ಸೋಜಾ ಪ್ರಶ್ನಿಸಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ನರ್ಸರಿ ಸ್ಕೂಲ್ ಹಾಲ್ನಲ್ಲಿ ಗ್ರಾಮೀಣ ಭಾರತ ಮತ್ತು ಪತ್ರಿಕೋದ್ಯಮದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು. [quote bgcolor=”#ffffff” arrow=”yes” align=”right”] ಅಭಿವೃದ್ಧಿಯ ಕಲ್ಪನೆ ಬದಲಾಗಬೇಕು: ಸಂಕೀರ್ಣ ಹಾಗೂ ಸಂಕುಚಿತವಾಗಿ ಮುನ್ನಡೆಯುತ್ತಿರುವ ದೇಶದಲ್ಲಿ ಸ್ವಾತಂತ್ರ್ಯ ದೊರೆತು 6 ದಶಕಗಳು ಕಳೆದರು ಗ್ರಾಮೀಣ ಭಾಗಗಳು ಸಮಸ್ಯೆಗಳಿಂದ ಮುಕ್ತವಾಗಿಲ್ಲ. ರಾಜಕೀಯ ಇಚ್ಚಾಶಕ್ತಿಯ ಕೊರತೆ, ಜನರಲ್ಲಿನ ಸಾಮಾಜಿಕ ಬದ್ಧತೆಯ ನಿಷ್ಕ್ರೀಯತೆ ಅಭಿವೃದ್ಧಿಯ ಹಿನ್ನಡೆಗೆ ಕಾರಣ. ಅಭಿವೃದ್ಧಿಯೆಂದರೆ ಕೇವಲ ಬಹುಮಹಡಿ ಕಟ್ಟಡ ನಿರ್ಮಾಣ, ಅಂತರ್ಜಾಲ ಅಭಿವೃದ್ಧಿ, ಡಿಜಿಟಲೀಕರಣ ಎಂದು ಮನೆ ಮಾಡಿರುವ ಭ್ರಮೆ ಎಲ್ಲರನ್ನು ಬಿಟ್ಟು ಹೋಗಬೇಕು. ಈ ನಿಟ್ಟಿನಲ್ಲಿ ರಾಷ್ಟ್ರೀಯತೆ, ಸಾಂಸ್ಕೃತಿಕ ಹಾಗೂ ಸಾಮಾಜಿಕ…
ಬೈಂದೂರು: ಕ್ರೀಡೆಯ ಮೂಲಕ ವಿದ್ಯಾರ್ಥಿಗಳು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಕಷ್ಟು ಅವಕಾಶಗಳಿವೆ. ಸಿಕ್ಕ ಅವಕಾಶವನ್ನು ಸದ್ಬಳಕ್ಕೆ ಮಾಡಿಕೊಂಡರೇ ಯಶಸ್ಸು ಸುಲಭವಾಗಿ ದೊರೆಯುತ್ತದೆ. ಕ್ರೀಡೆ ವ್ಯಕ್ತಿತ್ವನ್ನು ರೂಪಿಸುವುದರೊಂದಿಗೆ ಓದಿನಲ್ಲಿಯೂ ಆಸಕ್ತಿ ಮೂಡಿಸುತ್ತದೆಂದು ತಾ.ಪಂ ಸದಸ್ಯ ರಾಜು ಪೂಜಾರಿ ಹೇಳಿದರು ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೈಂದೂರು ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಜರುಗಿದ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಡಶಾಲಾ ಬಾಲಕ ಬಾಲಕಿಯರ ಎರಡು ದಿನಗಳ ಕಬ್ಬಡ್ಡಿ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾಡನಾಡಿದರು. 14 ವಯೋಮಿತಿಯ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಂಗಳೂರು, ದ್ವಿತೀಯ ಸ್ಥಾನವನ್ನು ಮಂಡ್ಯ ಪಡೆದುಕೊಂಡರೇ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಚಿಕ್ಕಮಂಗಳೂರು, ದ್ವಿತೀಯ ಸ್ಥಾನವನ್ನು ಮಂಡ್ಯ ಪಡೆದುಕೊಂಡಿತು. 17 ವಯೋಮಿತಿಯ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಂಗಳೂರು, ದ್ವಿತೀಯ ಸ್ಥಾನವನ್ನು ಚಿಕ್ಕಮಂಗಳೂರು ಪಡೆದುಕೊಂಡರೇ, ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮಂಗಳೂರು, ದ್ವಿತೀಯ ಸ್ಥಾನವನ್ನು ಉಡುಪಿ ಪಡೆದುಕೊಂಡಿತು. (ಕುಂದಾಪ್ರ…
ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಸಾರ್ವಜನಿಕರೇ ಸ್ವ ಇಚ್ಚೆಯಿಂದ ಒತ್ತುವರಿ ಮಾಡಿಕೊಂಡ ಜಾಗವನ್ನು ಬಿಟ್ಟುಕೊಡುತ್ತಿರುವಾಗ, ನಿಯಮಗಳನ್ನು ಗಾಳಿಗೆ ತೂರಿ ಸರಕಾರಿ ಕಛೇರಿಯನ್ನು ಮಾತ್ರ ರಸ್ತೆಯ ಪಕ್ಕದಲ್ಲೇ ಕಟ್ಟುತ್ತಿರುವುದು ಸಮಂಜಸವಾದುದಲ್ಲ ಎಂದು ಕುಂದಾಪುರ ಪುರಸಭಾ ಸದಸ್ಯ ರಾಜೇಶ್ ಕಾವೇರಿ ಹೇಳಿದರು. ಅವರು ಸರಕಾರಿ ಆಸ್ಪತ್ರೆಯ ಎದರು ರಸ್ತೆ ಪಕ್ಕದಲ್ಲಿ ಕಟ್ಟುತ್ತಿರುವ ಗ್ರಾಮ ಲೆಕ್ಕಿಗರ ಕಛೇರಿಯನ್ನು ಕಾನೂನು ಬಾಹಿರ ಹಾಗೂ ಅವೈಜ್ಞಾನಿಕವೆಂದು ಆರೋಪಿಸಿ, ನಿರ್ಮಾಣ ಹಂತದಲ್ಲಿರುವ ಕಛೇರಿಯ ಎದುರು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದರು. ಸಾರ್ವಜನಿಕರ ಎಲ್ಲಾ ಕೆಲಸವು ಒಂದೇ ಸೂರಿನಡಿಯಲ್ಲಿ ಆಗಬೇಕೆಂಬ ಕಾರಣದಿಂದ ಮಿನಿ ವಿಧಾನಸೌಧವನ್ನು ಕಟ್ಟಲಾಗಿದೆ. ಆದರೆ ಕುಂದಾಪುರ ಹೂವಿನ ಮಾರುಕಟ್ಟೆಯ ಬಳಿ ಇರುವ ಗ್ರಾಮಲೆಕ್ಕಿಗರ ಕಛೇರಿ ಮಾತ್ರ ಇದರಿಂದ ಹೊರತಾಗಿರುವುದು ವಿಪರ್ಯಾಸವೇ ಸರಿ. ಬೆಳೆಯುತ್ತಿರುವ ಕುಂದಾಪುರ ನಗರದಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು ಕಛೇರಿಯಿಂದ ಮತ್ತಷ್ಟು ಸಮಸ್ಯೆ ಉದ್ಬವಿಸಬಹುದು. ತಾಲೂಕು ಆಡಳಿತ ಶೀಘ್ರವೇ ವಾಸ್ತವವನ್ನು ಮನಗಂಡು ನಾಗರೀಕರ ಬೇಡಿಕೆಗೆ ಸ್ಪಂದಿಸಬೇಕಿದೆ ಎಂದರು. ರಾಜ್ಯ ಬಿಜೆಪಿ ಮೀನುಗಾರಿಕಾ ಪ್ರಕೋಷ್ಠದ ರಾಜ್ಯ ಸಂಚಾಲಕ ಕಿಶೋರ್ ಕುಮಾರ್…
ಕುಂದಾಪುರ: ಇಂದು ಬೆಳಗ್ಗೆ ಮರವಂತೆಯಲ್ಲಿ ಮೀನುಗಾರಿಕೆಗೆ ಹೊರಟ ಎರಡು ದೋಣಿಗಳಿಗೆ ದೊಡ್ಡ ಗಾತ್ರದ ತೆರೆಗಳು ಅಪ್ಪಳಿಸಿದ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ. ದೋಣಿಗಳು ಗಂಗೆಮನೆ ಪ್ರಭಾಕರ ಖಾರ್ವಿ ಮತ್ತು ಮಂಜುನಾಥ ಖಾರ್ವಿ ಅವರಿಗೆ ಸೇರಿವೆ. ತೆರೆ ಅಪ್ಪಳಿಸಿದಾಗ ಎರಡೂ ದೋಣಿಗಳು ಮಗುಚಿಕೊಂಡುವು. ಪ್ರಭಾಕರ ಖಾರ್ವಿ ಅವರ ’ವಿಶ್ವದೇವತೆ’ ಹೆಸರಿನ ದೋಣಿಯ ಬಲೆ ಎಳೆಯುವ ಯಂತ್ರ, ದೋಣಿಯ ಔಟ್ಬೋರ್ಡ್ ಯಂತ್ರ, ಫಿಶ್ ಫೈಂಡರ್, ವಯರ್ಲೆಸ್ ಹಾಳಾಗಿವೆ. ದೋಣಿಯಲ್ಲಿದ್ದ ಬಲೆ ತೇಲಿಹೋಗಿ ದಡ ಸೇರಿದಾಗ ನಿರಂತರ ಅಪ್ಪಳಿಸಿದ ತೆರೆಗಳಿಂದಾಗಿ ಮರಳಿನಲ್ಲಿ ಹೂತು ಹೋಗಿದೆ. ದೋಣಿಗೂ ಹಾನ ಸಂಭವಿಸಿದೆ. ಮರಳಿನಲ್ಲಿ ಹೂತುಹೋದ ಬಲೆಯನ್ನು ಹಿಟಾಚಿ ಯಂತ್ರ ಬಳಸಿ ಮೇಲೆತ್ತಲಾಯಿತು. ಆದರೆ ಅದರ ಬಹುಭಾಗಕ್ಕೆ ಹಾನಿಯಾಗಿದೆ. ಒಟ್ಟು ನಷ್ಟ ರೂ.10 ಲಕ್ಷ ಎಂದು ಅಂದಾಜಿಸಲಾಗಿದೆ. (ಕುಂದಾಪ್ರ ಡಾಟ್ ಕಾಂ) ಮಂಜುನಾಥ ಖಾರ್ವಿ ಅವರ ವಿಶ್ವೇಶ್ವರಿ ಹೆಸರಿನ ದೋಣಿ ತೆರೆ ಅಪ್ಪಳಿಸಿದಾಗ ದಡದಲ್ಲಿದ್ದ ಕಲ್ಲಿಗೆ ಬಡಿದು ಇಬ್ಭಾಗವಾಗಿದೆ. ಬೋಟ್ ಯಂತ್ರ, ವಯರ್ಲೆಸ್ ಮತ್ತು ಜಿಪಿಎಸ್ ಯಂತ್ರಕ್ಕೆ ಹಾನಿಯುಂಟಾಗಿದೆ.…
ಕುಂದಾಪುರ: ಸ್ನೇಹಿತನ ಮನೆಯಿಂದ ಬೈಕಿನಲ್ಲಿ ವಾಪಾಸಾಗುತ್ತಿದ್ದ ವೇಳೆ ಕಂಡ್ಲೂರು ಜನತಾಕಾಲೋನಿಯ ಬಳಿ ಇಬ್ಬರು ಹಿಂದೂ ಯುವಕರನ್ನು ತಡೆದ ಅನ್ಯಕೋಮಿನ ಗುಂಪೊಂದು ಯುವಕರ ಮೇಲೆ ಮಾರಣಾಂತಿಕ ಹಲ್ಲೆಗೈದು ಪರಾರಿಯಾದ ಘಟನೆ ನಿನ್ನೆ ರಾತ್ರಿ ವೇಳೆ ನಡೆದಿದೆ. ಹಲ್ಲೆಗೊಳಗಾದ ವಿಜಯಕುಮಾರ್(32) ಹಾಗೂ ಮಂಜುನಾಥ (29) ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೂರಿನನ್ವಯ ಶಾಹೀದ್ ಅಲಿ, ಸದಾಕತ್, ನದೀಮ್ ಹಾಗೂ ಸುಭಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆಯ ವಿವರ: ಬಳ್ಕೂರು ನಿವಾಸಿ ವಿಜಯಕುಮಾರ್ ಎಂಬುವವರು ತನ್ನ ಸ್ನೇಹಿತ ಮಂಜುನಾಥನೊಂದಿಗೆ ಕಂಡ್ಲೂರು ಜನತಾಕಾಲೋನಿಯ ಸ್ನೇಹಿತನ ಮನೆಯಲ್ಲಿ ಹೊಸ್ತು ಊಟ ಮಾಡಿಕೊಂಡು ರಾತ್ರಿ 10:30ರ ಸುಮಾರಿಗೆ ಬೈಕಿನಲ್ಲಿ ಹಿಂದಿರುಗುತ್ತಿದ್ದ ವೇಳೆ ಅವರ ಬೈಕನ್ನು ಅಡ್ಡಗಟ್ಟಿದ ಅನ್ಯಕೋಮಿನ ಯುವಕರ ಗುಂಪು ಇಬ್ಬರಿಗೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮನಬಂದಂತೆ ಹಲ್ಲೆ ನಡೆಸಿ, ಕೊಲೆ ಮಾಡುವ ಬೆದರಿಕೆಯೊಡ್ಡಿದ್ದಾರೆ. ಹಲ್ಲೆಗೊಳಗಾದ ವಿಜಯ ಹಾಗೂ ಮಂಜುನಾಥ ಅವರ ಅರಚಾಟ ಹೇಳಿ ಅವರ ಸ್ನೇಹಿತರು ಓಡಿ ಬಂದಾಗ ಆರೋಪಿಗಳು ಅಲ್ಲಿಂದ ಕಾಲ್ಕಿತ್ತಿದ್ದಾರೆ. ತೀವ್ರ ಗಾಯಗೊಂಡಿದ್ದ ಇವರನ್ನು ಕೂಡಲೇ…
ಬೈಂದೂರು: ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನಮಾನವನ್ನು ಉಳಿಸಿಕೊಂಡಿರುವ ಉಡುಪಿ ಜಿಲ್ಲೆ ಕ್ರೀಡಾ ಕ್ಷೇತ್ರಕ್ಕೂ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಳುಗಳನ್ನು ಕೊಟ್ಟ ಹೆಗ್ಗಳಿಕೆ ಹೊಂದಿದೆ ಎಂದು ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ ಹೇಳಿದರು. ಅವರು ಬೈಂದೂರು ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೈಂದೂರು ಶಾಸಕರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ 2 ದಿನಗಳ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ ಬಾಲಕಿಯರ ಕಬ್ಬಡ್ಡಿ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಯಡ್ತರೆ ಗ್ರಾ.ಪಂ. ಅಧ್ಯಕ್ಷ ನಾಗರಾಜ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಗ್ರಾ.ಪಂ ಸದಸ್ಯ ವೆಂಕ್ಟ ಪೂಜಾರಿ, ಬೈಂದೂರು ಮಾದರಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರವೀಂದ್ರ ಶಾನುಭೋಗ್, ಕೊಲ್ಲೂರು ಮೂಕಾಂಬಿಕಾ ದೇವಳದ ಧರ್ಮದರ್ಶಿ ಜಯಾನಂದ ಹೋಬಳಿದಾರ್, ಬೈಂದೂರು ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್, ಉದ್ಯಮಿ ಬಾರ್ಕೂರು ಅಣ್ಣಯ್ಯ ಶೇರುಗಾರ್ ಮೊದಲಾದವರು ವೇದಿಯಲ್ಲಿದ್ದರು. ಕಾರ್ಯಕ್ರಮಕ್ಕೂ ಮೊದಲು ನಡೆದ ಅದ್ದೂರಿ…
ಕುಂದಾಪುರ: ಇಲ್ಲಿನ ಬೀಜಾಡಿ ಸಮೀಪ ಬೈಕ್ ಹಾಗೂ ಮಹೇಂದ್ರ ಜೈಲೋ ವಾಹನದ ನಡುವೆ ನಡೆದ ಅಫಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ. ಗಣಪಯ್ಯ ಗಾಣಿಗ(54) ದುರ್ದೈವಿ ಘಟನೆಯ ವಿವರ: ಗಣಪಯ್ಯ ಗಾಣಿಗ ಕೋಟೇಶ್ವರದಿಂದ ಕುಂಭಾಶಿ ಕಡೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ತನ್ನ ಟಿವಿಎಸ್ ಲೂನಾದಲ್ಲಿ ತೆರಳುತ್ತಿದ್ದ ವೇಳೆ ಹಿಂದಿನಿಂದ ಬಂದ ಮಹೇಂದ್ರ ಝೈಲೋ ವಾಹನ ಬಿಜಾಡಿ ಸಮೀಪ ಢಿಕ್ಕಿ ಹೊಡೆದಿತ್ತು. ಢಿಕ್ಕಿ ಹೊಡೆದ ರಭಸಕ್ಕೆ ಗಣಪಯ್ಯ ಗಾಣಿಗರ ತಲೆಗೆ ಗಂಬೀರ ಗಾಯಗಳಾಗಿದ್ದವು. ಕೂಡಲೇ ಗಾಯಾಳುವನ್ನು ಕುಂದಾಪುರದ ಆಸ್ಪತ್ರೆಗೆ ಸಾಗಿಸಲಾದರೂ ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಮೃತಪಟ್ಟಿದ್ದರು. ಅಲ್ಲಿಂದ ಪರಾರಿಯಾಗಿದ್ದ ಮಹೇಂದ್ರ ಝೈಲೋ ವಾಹನವನ್ನು ಪಡುಬಿದ್ರೆಯ ಸಮೀಪ ಅಡ್ಡಗಟ್ಟಿ ವಾಹನ ಚಾಲಕನನ್ನು ಬಂಧಿಸಿದ್ದಾರೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರ: ಇಲ್ಲಿನ ಇಂಜಿನಿಯರಿಂಗ್ ಕಾಲೇಜೊಂದರ ವಿದ್ಯಾರ್ಥಿಯೋರ್ವ ತನ್ನ ಹಾಸ್ಟೆಲ್ ನಲ್ಲಿ ಇಂದು ಮಧ್ಯಾಹ್ನದ ವೇಳೆಗೆ ನೇಣಿಗೆ ಶರಣಾದ ಘಟನೆ ನಡೆದಿದೆ. ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಶಶಾಂಕ್(19) ಮೃತ ಯುವಕ. ಘಟನೆಯ ವಿವರ: ತುಮಕೂರು ಜಿಲ್ಲೆಯ ತುರುವೆಕೆರೆ ನಿವಾಸಿಯಾದ ಗೋಪಾಲ ಗೌಡ ಎಂಬುವವರ ಮಗನಾದ ಶಶಾಂಕ್ ತುರುವೆಕೆರೆಯಲ್ಲಿ ಮೆಕ್ಯಾನಿಕ್ ವಿಭಾಗದಲ್ಲಿ ಡಿಪ್ಲೊಮಾ ಮುಗಿಸಿ ಈ ವರ್ಷ ಮೂಡ್ಲಕಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ನೇರವಾಗಿ ದ್ವಿತೀಯ ವರ್ಷಕ್ಕೆ ಸೇರ್ಪಡೆಗೊಂಡಿದ್ದರು. ಈಗ ಪರೀಕ್ಷೆಗಳ ನಡೆಯುತ್ತಿದ್ದರಿಂದ ಬೆಳೆಗ್ಗೆಯ ಪರೀಕ್ಷೆಗೆ ಹಾಜರಾಗಿದ್ದ ಶಶಾಂಕ್ ಮಧ್ಯಾಹ್ನದ ಪರೀಕ್ಷೆಗೆ ಹಾಜರಾಗದೇ ತನ್ನ ಹಾಸ್ಟೆಲ್ ಕೊಠಡಿಯಲ್ಲಿಯೇ ಮಧ್ಯಾಹ್ನ 2ಗಂಟೆಯ ತನಕ ಓದುತ್ತಿದ್ದರು ಎನ್ನಲಾಗಿದೆ. ಬಳಿಕ ಕೊಠಡಿಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಈ ಕೃತ್ಯಕ್ಕೆ ಮುಂದಾಗಿದ್ದಾರೆ. ಇಂದು ಮಧ್ಯಾಹ್ನದ 3:30ರ ವೇಳೆಗೆ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. (ಕುಂದಾಪ್ರ ಡಾಟ್ ಕಾಂ) ಆರು ತಿಂಗಳ ಹಿಂದಷ್ಟೇ ತನ್ನ ತಾಯಿ ಮೃತಪಟ್ಟಿದ್ದರಿಂದ ತೀರಾ ನೊಂದುಕೊಂದ್ದ ಶಶಾಂಕ್ ಬರೆದಿಟ್ಟ…
