Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ನಾಲ್ಕು ಗೋಡೆಗಳ ಮಧ್ಯ ಕುಳಿತು ಓದುವ ವಿಶ್ವವಿದ್ಯಾಲಯವನ್ನು ಬಿಟ್ಟು ಇಡೀ ವಿಶ್ವವನ್ನೆ ವಿಶ್ವವಿದ್ಯಾಲಯವನ್ನಾಗಿಕೊಂಡು ನೋಡಿ, ಕೇಳಿ, ಅನುಭವಿಸಿ ಕಲಿತವರು ಕಾರಂತರು. ಅವರ ಪ್ರತಿಯೊಂದು ಕೃತಿಯಲ್ಲೂ ಕೂಡ ಸೃಜನ ಶೀಲತೆಯನ್ನು ನಾವು ಕಾಣಬಹುದು, ಆದರೆ ಇಂದು ಮಕ್ಕಳಲ್ಲಿ ಸೃಜನೆ ಶೀಲತೆಗೆ ಪ್ರೋತ್ಸಾಹಿಸುವ ಕೆಲಸಗಳು ಆಗುತ್ತಿಲ್ಲ. ಬರೀ ಕಟ್, ಕಾಪಿ, ಪೇಸ್ಟ್ ಸಂಸ್ಕೃತಿಯಿಂದಾಗಿ ಸೃಜನಶೀಲತೆ ಮರೆಯಾಗುತ್ತಿದೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು. ಅವರು ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು, ಕೋಟತಟ್ಟು ಗ್ರಾಮ ಪಂಚಾಯಿತಿ ಕೋಟ, ಡಾ.ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ ಇವರ ಸಹಭಾಗಿತ್ವದಲ್ಲಿ ಆಯೋಜಿಸಲಾದ ಡಾ.ಶಿವರಾಮ ಕಾರಂತರ ವಿಷಯಾಧಾರಿತ ರಾಜ್ಯಮಟ್ಟದ ಸಿಮೆಂಟ್ ಶಿಲ್ಪಕಲಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಡಾ.ಶಿವರಾಮ ಕಾರಂತರ ಫೈಬರ್ ಪ್ರತಿಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. ನಮ್ಮ ರಾಜ್ಯದಲ್ಲಿ ಜ್ಞಾನ ಪೀಠ ಪ್ರಶಸ್ತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತಿಷ್ಠಿತ ಜೇಸಿಐ ಕುಂದಾಪುರದ 43ನೇ ಅಧ್ಯಕ್ಷರಾಗಿ ಅಕ್ಷತಾ ಗಿರೀಶ್ ಆಯ್ಕೆಯಾಗಿದ್ದಾರೆ. ಜೇಸಿಐ ಕುಂದಾಪುರದ ಜೇಸಿರೆಟ್ ವಿಭಾಗದ ಅಧ್ಯಕ್ಷೆಯಾಗಿ ಜೇಸಿಯ ವಿವಿಧ ಪದಾಧಿಕಾರಿಯಾಗಿ ಅನುಪಮ ಸೇವೆ ಸಲ್ಲಿಸಿದ ಇವರು ಪತ್ರಕರ್ತೆಯಾಗಿ, ಟಿ.ವಿ. ನಿರೂಪಕರಾಗಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಘಟಿಸಿದ ಮತ್ತು ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರೀಯವಾಗಿ ದುಡಿದ ಅನುಭವ ಹೊಂದಿದ್ದಾರೆ. ಇತ್ತೀಚೆಗೆ ಜೇಸಿಐ ಕುಂದಾಪುರಕ್ಕೆ ವಲಯಾಧ್ಯಕ್ಷರ ಭೇಟಿ ಸಂದರ್ಭ ಹೋಟೆಲ್ ಶೆರೋನ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮುಂದಿನ ಸಾಲಿನ ಅಧ್ಯಕ್ಷರನ್ನಾಗಿ ಅಕ್ಷತಾ ಗಿರೀಶ್ ಅವರನ್ನು ಘೋಷಿಸಲಾಯಿತು. ಜೇಸಿಐ ಕುಂದಾಪುರದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮಹಿಳೆಯೊರ್ವರು ಅಧ್ಯಕ್ಷರಾಗುತ್ತಿದ್ದು, ಈ ಹೆಗ್ಗಳಿಕೆ ಅಕ್ಷತಾ ಗಿರೀಶ್ ಅವರ ಪಾಲಾಗಿದೆ. ಕಾರ್ಯದರ್ಶಿಯಾಗಿ ರಾಘು ವಿಠಲವಾಡಿ, ಉಪಾಧ್ಯಕ್ಷರಾಗಿ ಲಕ್ಷ್ಮೀ ಡಿ.ಕೆ ಪ್ರಭಾಕರ, ನರೇಶ್ ಕೋಟೇಶ್ವರ, ಪ್ರವೀಣ್ ಆಯ್ಕೆಯಾದರು. ಈ ಸಂದರ್ಭದಲ್ಲಿ ಜೇಸಿ ವಲಯಾಧ್ಯಕ್ಷರಾದ ಸಂದೀಪ್, ಜೇಸಿಐ ಕುಂದಾಪುರ ಅಧ್ಯಕ್ಷ ವಿಷ್ಣು ಕೆ.ಬಿ, ಪೂರ್ವಾಧ್ಯಕ್ಷರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಮಾಜಿಕ ನ್ಯಾಯ ಜನರಿಗೆ ನೀಡಿ ಊರಿನ ಶಾಂತಿ ಕಾಪಾಡುತ್ತಿದ್ದ ಸಬ್ಲಾಡಿ ಶೀನಪ್ಪ ಶೆಟ್ಟಿಯವರು ರಾಜಕಾರಣಿಗಳಿಗೆ ಮಾದರಿಯಾಗಿದ್ದವರು. ಅವರು ನೀಡುತ್ತಿದ್ದ ನ್ಯಾಯತೀರ್ಮಾನ ತೀರ್ಪುಗಳು, ಅಲ್ಲಿ ಅವರ ದೂರದೃಷ್ಟಿತ್ವವನ್ನು ಇವತ್ತು ಕೂಡಾ ಜನ ನೆನಪಿಸಿಕೊಳ್ಳುತ್ತಾರೆಂದರೆ ಅವರು ಎಷ್ಟೆಂದು ಜನಪ್ರಿಯರಾಗಿದ್ದರು ಎನ್ನುವುದನ್ನು ಊಹಿಸಬಹುದು. ಅವರ ಹೆಸರಿನಲ್ಲಿ ಟ್ರಸ್ಟ್ ಆರಂಭಿಸಿ, ಸಮಾಜಕ್ಕೆ ಸೇವೆ ಮುಂದುವರಿಸುತ್ತಿರುವುದು ಶ್ಲಾಘನಾರ್ಹವಾದುದು ಎಂದು ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷರು, ರಾಜ್ಯ ಪ್ರಶಸ್ತಿ ಪುರಸ್ಕೃತ ಶಾಂತಾರಾಮ ಶೆಟ್ಟಿ ಬಾರ್ಕೂರು ಹೇಳಿದರು. ಕುಂದಾಪುರದ ಬಂಟರ ಯಾನೆ ನಾಡವರ ಸಂಕೀರ್ಣದ ಮಿನಿಹಾಲ್‌ನಲ್ಲಿ ಸಬ್ಲಾಡಿ ಕೆ.ಶೀನಪ್ಪ ಶೆಟ್ಟಿ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ನಡೆದ ವಿದ್ಯಾರ್ಥಿವೇತನ, ಆರೋಗ್ಯ ಸಹಾಯಧನ, ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ, ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಥಮ ದರ್ಜೆ ಕಾಲೇಜು ಮಣೂರು-ಕೋಟ ಇಲ್ಲಿನ ಪ್ರಾಂಶುಪಾಲರಾದ ಡಾ|ರಾಜೇಂದ್ರ ನಾಯ್ಕ್ ಉಪನ್ಯಾಸ ನೀಡಿ, ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ವಿದ್ಯಾರ್ಜನೆ ಸಹಕಾರ ಮತ್ತು ಸ್ಪೂರ್ತಿಯಾಗಬೇಕು. ಶಿಕ್ಷಣದಲ್ಲಿ ಸಾಧನೆ ಮಾಡಲು ಪೂರಕವಾಗುತ್ತದೆ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಗುರುವಾರ ಸಂಘದ ಅಧ್ಯಕ್ಷರಾದ ಟಿ. ನಾರಾಯಣ ಹೆಗ್ಡೆಯವರ ಅಧ್ಯಕ್ಷತೆಯಲ್ಲಿ ಸಂಘದ ಪ್ರಧಾನ ಕಛೇರಿ ಯಡ್ತರೆಯಲ್ಲಿ ಜರುಗಿತು. ಸಂಘವು ೨೦೧೫-೧೬ನೇ ಸಾಲಿನಲ್ಲಿ ರೂ. ೩೬೬.೦೬ ಕೋಟಿಗೂ ಮೀರಿ ವ್ಯವಹಾರ ಮಾಡಿ ರೂ. ೯೦.೪೧ ಲಕ್ಷ ಲಾಭ ಗಳಿಸಿದ್ದು, ತನ್ನ ಲಾಭಾಂಶದಲ್ಲಿ ತನ್ನ ಸದಸ್ಯರಿಗೆ ಶೇಕಡಾ ೧೬ ಡಿವಿಡೆಂಡ್ ಘೋಷಿಸಿದೆ. ಸಂಘವು ವರದಿ ಸಾಲಿನಲ್ಲಿ ೪೧.೨೬ ಕೋಟಿ ರೂ. ಠೇವಣಿ ಹೊಂದಿದ್ದು, ೩೦.೨೨ ಕೋಟಿ ರೂ. ಹೊರಬಾಕಿ ಸಾಲ ಇರುತ್ತದೆ. ರೂ.೫೨.೩೧ ಕೋಟಿ ದುಡಿಯುವ ಬಂಡವಾಳ ಹೊಂದಿದ್ದು, ಅಡಿಟ್ ವರ್ಗೀಕರಣದಲ್ಲಿ ಎ ತರಗತಿ ಹೊಂದಿರುತ್ತದೆ. ಸಂಘದ ವ್ಯಾಪ್ತಿಗೆ ಬರುವ ಫ್ರೌಢಶಾಲಾ ವಿಭಾಗದ ೨೦೧೫-೧೬ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ೧೦ನೇ ತರಗತಿಯಲ್ಲಿ ಶಾಲೆಗೆ ಅತೀ ಹೆಚ್ಚು ಅಂಕ ಗಳಿಸಿದ ೨೨ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ಪ್ರೋತ್ಸಾಹಧನ ಹಾಗೂ ಅಭಿನಂದನಾ ಪತ್ರವನ್ನು ನೀಡಲಾಯಿತು. ಸಭೆಯಲ್ಲಿ ಸಂಘದ ನಿರ್ದೇಶಕರಾದ ಎನ್.ನಾಗರಾಜ ಶೆಟ್ಟಿ,…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕಾರಂತರು ನಡೆದಾಡಿದ ಮಣ್ಣು ನಾವೇಲ್ಲ ಶೀರೊಧಾರೆ ಮಾಡಿಕೊಳ್ಳುವಷ್ಟು ಪವಿತ್ರವಾದದು. ಅಂತಹ ಕಾರಂತರಿಗಾಗಿ ಕೋಟತಟ್ಟು ಗ್ರಾಮ ಪಂಚಾಯಿತಿಯು ದೇಶದಲ್ಲಿ ಯಾವೋಬ್ಬ ಕವಿಗೂ ಸಿಗದ ಗೌರವವನ್ನು ಥೀಂ ಪಾರ್ಕ ರಚಿಸುವ ಮೂಲಕ ನೀಡಿ ಗೌರವಿಸಿದ್ದಿರಿ. ಇವೆಲ್ಲದರ ಹಿಂದಿನ ಶಕ್ತಿ ಕಾರಂತರ ಶಿಷ್ಯೋತ್ತಮ ಕೋಟ ಶ್ರೀನಿವಾಸ ಪೂಜಾರಿಯವರ ಶ್ರಮವನ್ನು ಬಣ್ಣಿಸಲು ಅಸಾಧ್ಯವಾದದು, ಶಿಷ್ಯನೋರ್ವ ಗುರುವಿಗೆ ನೀಡುವ ಅತ್ಯದ್ಬುತ ಕಾಣಿಕೆಯನ್ನು ನೀಡಿದ್ದಾರೆ ಎಂದು ಸಾಹಿತಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಎ.ಎಸ್.ಎನ್.ಹೆಬ್ಬಾರ್ ಹೇಳಿದರು. ಅವರು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನಲ್ಲಿ ಕೋಟತಟ್ಟು ಗ್ರಾಮ ಪಂಚಾಯಿತಿ, ಡಾ.ಶಿವರಾಮ ಕಾರಂತ ಪ್ರತಿಷ್ಠಾನ(ರಿ.) ಕೋಟ, ಡಾ.ಶಿವರಾಮ ಕಾರಂತ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಲಾದ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಪಂಚಾಯತ್‌ರಾಜ್ ಮತ್ತು ಸ್ಥಳೀಯಾಡಳಿತ ಪ್ರತಿನಿಧಿಗಳ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಸ್ಪರ್ಧೆ ಹೊಳಪು 2016 ಇದರ ಪ್ರಯುಕ್ತ ನಿರ್ಮಿಸಲಾದ ಸ್ವಾಗತ ಗೋಪುರ, ಕಾರಂತ ಮಹಾದ್ವಾರವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ…

Read More

ಕುಂದಾಪ್ರ ಡಾಟ್ ಕಾಂ ವರದಿ ಗಂಗೊಳ್ಳಿ : ಬೆಳೆಯುತ್ತಿರುವ ಪಟ್ಟಣ ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಇರುವ ಏಕೈಕ ಅಂಚೆ ಕಛೇರಿಯು ಸಮಸ್ಯೆಗಳ ಆಗರವಾಗಿದ್ದು, ಇಲಾಖೆಯ ಅಸಮರ್ಪಕ ಸೇವೆಯಿಂದ ಜನರು ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಗಂಗೊಳ್ಳಿಯು ಸುಮಾರು ಒಂದು ಸಾವಿರ ಎಕ್ರೆ ವಿಸ್ತೀರ್ಣದ ಮೀನುಗಾರಿಕಾ ಬಂದರು ಪ್ರದೇಶವಾಗಿದ್ದು, ಸುಮಾರು 25 ಸಾವಿರಕ್ಕೂ ಮಿಕ್ಕಿ ಜನರು ವಾಸಿಸುತ್ತಿದ್ದಾರೆ. ಎರಡು ರಾಷ್ಟ್ರೀಕೃತ ಬ್ಯಾಂಕುಗಳು ಸೇರಿದಂತೆ ಸುಮಾರು 10ಕ್ಕೂ ಮಿಕ್ಕಿ ಸಹಕಾರಿ, ಸೌಹಾರ್ದ ಸಂಘಗಳು ಕಾರ್ಯನಿರ್ವಹಿಸುತ್ತಿದೆ ಅಲ್ಲದೆ ಸುಮಾರು 10ಕ್ಕೂ ಮಿಕ್ಕಿ ಶಾಲಾ ಕಾಲೇಜುಗಳು ಗಂಗೊಳ್ಳಿಯಲ್ಲಿ ಮಕ್ಕಳ ವಿದ್ಯಾರ್ಜನೆಯಲ್ಲಿ ತೊಡಗಿಕೊಂಡಿದೆ. ಮೀನುಗಾರಿಕಾ ಚಟುವಟಿಕೆಗಳಿಂದ ಸದಾ ಬ್ಯೂಸಿಯಾಗಿರುವ ಗಂಗೊಳ್ಳಿ ಗ್ರಾಮದ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಚೆ ಕಛೇರಿಯು ಗ್ರಾಹರಿಗೆ ಉತ್ತಮ ಸೇವೆ ನೀಡುವಲ್ಲಿ ವಿಫಲವಾಗಿದೆ. ಈ ಹಿಂದೆ ಗಂಗೊಳ್ಳಿಯಲ್ಲಿ ಎರಡು ಅಂಚೆ ಕಛೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಭಾರ ಕಡಿಮೆಯಾದ ಹಿನ್ನಲೆಯಲ್ಲಿ ಬಂದರು ಅಂಚೆ ಕಛೇರಿಯನ್ನು ಮುಚ್ಚಲಾಗಿತ್ತು. ಬಳಿಕ ಗಂಗೊಳ್ಳಿಯ ಮಧ್ಯಭಾಗದಲ್ಲಿ ಬಾಡಿಗೆ ಕಟ್ಟಡದಲ್ಲಿ ಗಂಗೊಳ್ಳಿ ಅಂಚೆ ಕಛೇರಿಯು ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಓರ್ವ ಅಂಚೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಕಾರ್ಕಳದ ಭುವನೇಂದ್ರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಬಾಲಕಿಯರ ತಂಡ.ಮನಿಷಾ ಪೂಜಾರಿ,ರಕ್ಷಿತಾ ಕೊತ್ವಾಲ್, ಪ್ರತಿಭಾ ದೇವಾಡಿಗ,ಸಹನಾ ಮೇಸ್ತ, ಸ್ನೇಹಾ ಮತ್ತು ಸುಪ್ರೀತಾ ಜಿ ತಾವು ಗಳಿಸಿದ ಟ್ರೋಫಿಯೊಂದಿಗೆ.ಕಾಲೇಜಿನ ಪ್ರಾಂಶುಪಾಲೆ ಕವಿತಾ ಎಮ್ ಸಿ, ದೈಹಿಕ ಶಿಕ್ಷಕ ನಾಗರಾಜ ಶೆಟ್ಟಿ ಮತ್ತು ತಂಡ ನಿರ್ವಾಹಕಿ ಯಮುನಾ ಅವರು ಚಿತ್ರದಲ್ಲಿದ್ದಾರೆ. ಚಿತ್ರ

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಂಗಾರಕಟ್ಟೆಯ ಜಾಗದ ವಿಷಯಕ್ಕೆ ಸಂಬಂಧಿಸಿದಂತೆ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರು ಕೋಟ ಎಸೈ ಕಬ್ಬಳರಾಜ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರಿಂದ ಬೇಸತ್ತು ರಾಜಿನಾಮೆ ನೀಡಿ ಹೊರನಡೆದಿದ್ದ ಕಬ್ಬಳರಾಜ್ ಅವರ ಮನವೊಲಿಸಲಾಗಿದೆ ಎನ್ನಲಾಗಿದ್ದು ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಸ್ಪಿ ತರಾಟೆಗೆ ತೆಗೆದುಕೊಂಡಿದ್ದರಿಂದ ರಾಜಿನಾಮೆ ಪತ್ರ ಬರೆದಿಟ್ಟು ತೆರಳಿದ್ದ ಎಸೈ ಕಬ್ಬಾಳರಾಜ್ ಅವರ ಮೊಬೈಲ್ ಸ್ವಿಚ್ ಆಫ್ ಆಗಿದ್ದಲ್ಲದೇ ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಸಂಜೆಯ ಬಳಿಕ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರ ಸಂಪರ್ಕ ಸಾಧಿಸಿ ಮಾತುಕತೆ ನಡೆಸಿದ್ದಲ್ಲದೇ, ಕಬ್ಬಳರಾಜ್ ಅವರ ಮನವೊಲಿಸಲು ಯಶಸ್ವಿಯಾಗಿದ್ದಾರೆ. ಹಾಗಾಗಿ ಒಂದೆರಡು ದಿನದಲ್ಲಿ ಕಬ್ಬಾಳರಾಜ್ ಮತ್ತೆ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ ಎಸೈ ರಾಜಿನಾಮೆ ಕೋಟ ಪರಿಸದರದಲ್ಲಿ ಸಂಚಲನ ಮೂಡಿಸಿದ್ದಲ್ಲದೇ ನಾಗರಿಕರು ರಾಜಿನಾಮೆ ಅಂಗಿಕರಿಸದಂತೆ ಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದರು. ಕೋಟ ಬಂದ್ ಮಾತುಗಳೂ ಕೇಳಿಬಂದಿದ್ದವು. ಇದೀಗ ಎಸೈ ಮರಳಲಿರುವ ಮಾಹಿತಿ ದೊರೆತ ಹಿನ್ನೆಲೆಯನ್ನು…

Read More

ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ನೂತನ ಸಂರ್ಕೀಣ, ಸಭಾಂಗಣ, ಗ್ರಂಥಾಲಯ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶಿಕ್ಷಣದಿಂದ ವಿಚಾರ ಶ್ರೀಮಂತಿಕೆಯ ದಾರಿಯತ್ತ ತೆರಳಲು ಸಾಧ್ಯವಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳೇ ಹೆಚ್ಚಿರುವ ಈ ವಿದ್ಯಾ ಸಂಸ್ಥೆಯ ಸಾಧನೆ ಸ್ತುತ್ಯಾರ್ಹ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಮುದಾಯ ಕೇಂದ್ರಿತ ಶಿಕ್ಷಣ ನೀಡುವುದರ ಮೂಲಕ ಭವ್ಯ ಭಾರತ ನಿರ್ಮಾಣ ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಕೆ. ಬೈರಪ್ಪ ಹೇಳಿದರು. ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ, ಡಾ. ಬಿ.ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಸೌಕೂರು ಶೇರ್ವೆಗಾರ ಮನೆ ವಿಶಾಲಾಕ್ಷಿ ಬಿ. ಹೆಗ್ಡೆ ನೂತನ ಸಂಕೀರ್ಣ, ನೂತನ ಸಭಾಂಗಣ, ನೂತನ ಗ್ರಂಥಾಲಯವನ್ನು ಉದ್ಘಾಟಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಕ್ಷೇತ್ರದಲ್ಲಿ ತರಬೇತುಗೊಳಿಸುವ ಮೂಲಕ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದರು. ಕಾಲೇಜು ಆಡಳಿತ ಮಂಡಳಿಯ ಸದಸ್ಯೆ ವಿನತಾ ಪಿ. ರೈ ನೂತನ ಗಣಕ-ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಉಪನ್ಯಾಸಕ, ಕುಂದಗನ್ನಡದ ಮೇರು ಪ್ರತಿಭೆ, ಸುಲಲಿತ ಮಾತುಗಾರ ತೆಕ್ಕಟ್ಟೆ ಸುರೇಂದ್ರ ಶೆಟ್ಟಿ (52) ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದ್ದಾರೆ. ಮೃತರು ಪತ್ನಿಯನ್ನು ಅಗಲಿದ್ದಾರೆ. ತೆಕ್ಕಟ್ಟೆ ಪಟೇಲರ ಮನೆಯವರಾದ ಸುರೇಂದ್ರ ಶೆಟ್ಟಿ, ಬಹ್ಮಾವರ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿದ್ದರು. ಕೆಲ ದಿನಗಳ ಹಿಂದೆ ಕಾಣಿಸಿಕೊಂಡ ಇಲಿಜ್ವರದಿಂದ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. ಕ್ರೀಯಾಶೀಲ ವ್ಯಕ್ತಿತ್ವದ, ಚುರುಕಿನ ಮಾತುಗಾರ ಸುರೇಂದ್ರ ಶೆಟ್ಟಿ ಅವರು ಕುಂದಾಪ್ರ ಕನ್ನಡದ ಬಗೆಗೆ ಸಾಕಷ್ಟು ಅಧ್ಯಯನ ನಡೆಸಿದ್ದರು. ಮಾನಿನಿ ರಂಗಸ್ಥಳ, ಗಣಪದನ ಪದ ಕೃತಿಗಳು, ನಾಟಕ ಹಾಗೂ ಕವನ ಸಂಕಲನಗಳನ್ನು ಹೊರತಂದಿದ್ದ ಅವರು, ಪಿಎಚ್‌ಡಿ ಅಧ್ಯಯನದಲ್ಲಿ ತೊಡಗಿದ್ದರು. ಗಮಕಿಯಾಗಿ, ಉತ್ತಮ ವಾಗ್ಮಿಯಾಗಿ, ಕಲೆ ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪ್ರ ಕನ್ನಡದ ಬಗೆಗೆ ವಿಶೇಷ ಒಲವು ಹೊಂದಿದ್ದ ಸುರೇಂದ್ರ ಶೆಟ್ಟರು ಬದುಕಿನುದ್ದಕ್ಕೂ ಕುಂದಗನ್ನಡ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಕುರಿತಾಗಿ…

Read More