Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಪ್ಪಳ: ಕೊಪ್ಪಳ ಜಿಲ್ಲಾ ನಾಗರೀಕರ ಸಾಂಸ್ಕೃತಿಕ ವೇದಿಕೆ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಪ್ರವಾಸೋದ್ಯಮ ಇಲಾಖೆ ಮತ್ತು ಸಂಘ ಸಂಸ್ಥೆಗಳು ಆಯೋಜಿಸುತ್ತಿರುವ ಕೊಪ್ಪಳ ಜಿಲ್ಲಾ ಉತ್ಸವದ ದಶಮಾನೋತ್ಸವದಲ್ಲಿ ಉಡುಪಿಯ ಸಮಾಜ ಸೇವಕ ಉಡುಪಿ ವಿಶ್ವನಾಥ ಪೈ, ಹಿರಿಯ ಕವಿಗಳಾದ ಅಂಶುಮಾಲಿ, ಡಾ.ವಸಂತ ಕುಮಾರ್, ಶೇಖರ ಅಜೆಕಾರು ಸಹಿತ ಹನ್ನೆರಡು ಮಂದಿಗೆ ದಶಮಾನೋತ್ಸವ ಮತ್ತು ಡಾ. ಸಿದ್ದಯ್ಯ ಪುರಾಣಿಕ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ. ಜಿಲ್ಲೆಗಳ ನಡುವೆ ಸೌಹಾರ್ದ ಬೆಳಸಲು ದಶಮಾನೋತ್ಸವಕ್ಕೆ ಕರಾವಳಿಯ ಉಡುಪಿ, ದ.ಕ, ಕಾಸರಗೋಡು ಮತ್ತು ಮುಂಬಯಿಯ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ದಶಮಾನೋತ್ಸವ ಗೌರವ: ವಿಶ್ವನಾಥ ಶೆಣೈ ಸಮಾಜ ಸೇವಕರು-ಉಡುಪಿ, ವಿ.ಕೆ.ಸುವರ್ಣ -ರಂಗ ಕಲಾವಿದರು ಮುಂಬಯಿ, ಶೇಖರ ಅಜೆಕಾರು, ಪತ್ರಕರ್ತರು-ಉಡುಪಿ, ಚಿತ್ತೂರು ಪ್ರಭಾಕರ ಆಚಾರ್ಯ- ಅಧ್ಯಕ್ಷರು ಕಾರ್ಯ ನಿರತ ಪತ್ರಕರ್ತರ ಸಂಘ ಬ್ರಹ್ಮಾವರ, ಎಸ್.ಆರ್. ಬಂಡಿಮಾರ್- ಸಂಪಾದಕರು-ಟೈಮ್ಸ್ ಆಫ್ ಕುಡ್ಲ ತುಳುವಾರ ಪತ್ರಿಕೆ, ವಸಂತಕುಮಾರ್ ಬೆಳ್ತಂಗಡಿ- ವ್ಯವಸ್ಥಾಪಕ ಸಂಪಾದಕರು ಜನಬಿಂಬ ವಾರಪತ್ರಿಕೆ…

Read More

ಪ್ಲಾಸ್ಟಿಕ್ ಟ್ಯಾಂಕ್ ತಯಾರಿಕೆಯಲ್ಲಿ ‘ಹೊಸ ಕ್ರಾಂತಿ’ ಕೈಗಾರಿಕೋದ್ಯಮದಲ್ಲಿ ಒಂದಲ್ಲ ಒಂದು ಹೊಸ ಸಂಶೋಧನೆ ಮಾಡಿ ಗ್ರಾಹಕರಿಗೆ ಅನುಕೂಲ ಹೆಚ್ಚಿಸುತ್ತಿರುವ ಕರಾವಳಿಯ ಹೆಸರಾಂತ ಕೈಗಾರಿಕ ಘಟಕ ಕೋಟೇಶ್ವರದ ರಾಜಾರಾಮ್ ಪಾಲಿಮರ್ಸ್ ಭಾರತದಲ್ಲೇ ಪ್ರಪ್ರಥಮ ಬಾರಿಗೆ ಬಹು ಉಪಯೋಗಿ ಸನ್‌ರೈಸ್ ಐಕಾನ್ ತೆರೆದ ಟ್ಯಾಂಕ್‌ನ್ನು ಸಂಶೋಧಿಸಿ ಯಶಸ್ವಿಯಾಗಿ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇಷ್ಟರವರೆಗೆ ನಮಗೆ ಗೊತ್ತಿರುವುದು ನೀರು ತುಂಬಿಸುವ ಟ್ಯಾಂಕುಗಳು ಮಾತ್ರ. 2007ರಲ್ಲಿ ಸ್ಥಾಪಿಸಿದ ಕೋಟೇಶ್ವರದ ರಾಜಾರಾಮ್ ಪಾಲಿಮರ್ಸ್ ಪ್ಲಾಸ್ಟಿಕ್ ವಾಟರ್ ಟ್ಯಾಂಕ್ ಕೈಗಾರಿಕ ಘಟಕವು ಪ್ಲಾಸ್ಟಿಕ್ ಟ್ಯಾಂಕ್ ಉತ್ಪಾದನಾ ಘಟಕಗಳಲ್ಲೇ ಬಹಳಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಕೇವಲ ನೀರು ಸಂಗ್ರಹಿಸಿಡುವ ಟ್ಯಾಂಕ್‌ಗಳನ್ನು ಬಹು ಉಪಯೋಗಿ ಟ್ಯಾಂಕ್‌ಗಳನ್ನಾಗಿ ಹೇಗೆ ನಿರ್ಮಿಸುವುದು? ಟ್ಯಾಂಕ್‌ಗಳ ಸಂಗ್ರಹಣೆಗೆ ಸ್ಥಳ ಅಭಾವ ಹಾಗೂ ಸಾಗಾಟದ ಖರ್ಚುಗಳ ಹೆಚ್ಚಳ ಗ್ರಾಹಕರಿಗೆ ಹೊರೆಯಾಗದಂತೆ ನಿಭಾಯಿಸುವುದು ಹೇಗೆ? ಟ್ಯಾಂಕ್‌ಗಳನ್ನು ಒಂದರ ಒಳಗೆ ಒಂದನ್ನು ಇಡುವಂತೆ ರಚಿಸಲು ಸಾಧ್ಯವಿಲ್ಲವೇ? ಇದರ ವಿನ್ಯಾಸದ ಬಗೆ ಹೇಗೆ ? ದೊಡ್ಡ ಅಗಲ ಬಾಯಿಯಿರುವ ಮುಚ್ಚುಳ ಮಾಡಿದರೆ ಎಲ್ಲಾ ವಿಧದ ವಸ್ತುಗಳನ್ನು, ಆಹಾರ ಸಾಮಾಗ್ರಿಗಳನ್ನು…

Read More

ಬಸ್ ರೂಟ್ ಸರಿಮಾಡಿ. ಸಿಆರ್‌ಝಡ್ ಸಮಸ್ಯೆ ಬಗೆಹರಿಸಿ. ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತಾಪಂ ಸಭೆಯಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿದ್ದರೂ, ಉತ್ತರಿಸಬೇಕಾದ ಅಧಿಕಾರಿಗಳು ಮಾತ್ರ ಸತತವಾಗಿ ಗೈರು ಹಾಜರಾಗಿ ಬೇಜವಾಬ್ದಾರಿ ತೋರುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಉತ್ತರಿಸಲಾಗದವರು ಜನಸಾಮಾನ್ಯರಿಗೆ ಉತ್ತರಿಸುವರೇ? ಸಭೆಗೆ ಗೈರಾಗುವ ಅಧಿಕಾರಿಗಳು ಹಿಂಬಡ್ತಿ ಪಡೆದು ಸುಮ್ಮನೆ ಕೂರಲಿ ಅಥವಾ ಅಂತಹ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳವ ಕೆಲಸವಾಗಲಿ. ಇದು ಬುಧವಾರ ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ಗೈರಾಗುತ್ತಿರುವ ವಿರುದ್ದ ಸದಸ್ಯರು ತಮ್ಮ ಆಕ್ರೋಶ ಹೊರಗೆಡವಿದ ಪರಿ ಸಾಮಾನ್ಯ ಸಭೆಯಲ್ಲಿ ಪ್ರಮುಖ ಸಮಸ್ಯೆಗಳಿಗೆ ಉತ್ತರಿಸಬೇಕಾಗಿದ್ದ ನಾಲ್ಕು ಇಲಾಖಾ ಅಧಿಕಾರಿಗಳು ಗೈರು ಹಾಜರಾಗಿ ಕರ್ತವ್ಯಲೋಪವೆಸಗುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾಪಂ ಸದಸ್ಯರಾದ ವಾಸುದೇವ ಪೈ, ಪುಪ್ಪರಾಜ್ ಶೆಟ್ಟಿ, ಜ್ಯೋತಿ ಪುತ್ರನ್ ಉಮೇಶ್ ಶೆಟ್ಟಿ ಕಲ್ಗದ್ದೆ ಹಾಗೂ ಸುರೇಂದ್ರ ಖಾರ್ವಿ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿರುವ ತಾಪಂ ಕಾರ್ಯನಿರ್ವಹಣಾಧಿಕಾರಿ, ಗೈರಾಗುವ ಅಧಿಕಾರಿಗಳ ಶಿಸ್ತುಕ್ರಮ ಜರುಗಿಸುವಂತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದೇಶ ವಿರೋಧಿ ಘೋಷಣೆ ಕೂಗಿದವರ ವಿರುದ್ಧ ನಡೆಸುತ್ತಿರುವ ಪ್ರತಿಭಟನೆ ಒಂದು ಪಕ್ಷಕ್ಕೆ ಸಂಬಂಧಸಿದಲ್ಲ. ಇದು ದೇಶವಾಸಿಗಳಿಗೆ ಸಂಬಂಧಿಸಿದ್ದು. ದೇಶ ಪ್ರೇಮಿಗಳು ದೇಶದ ಹಾಗೂ ಸೈನಿಕ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ಪ್ರತಿಭಟನೆ ನಡೆಸಬೇಕು. ದೇಶದ ಭದ್ರತೆ ಸಾರ್ವಭೌಮತೆ ಹಾಗೂ ಸೈನಿಕರ ಮನೋಸ್ಥೈಯ ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಪ್ರತಿಭಟನೆಗೆ ಮುಂದಾಗಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಹಿನ್ನೆಲೆಯಲ್ಲಿ ದೇಶದ ವಿರುದ್ಧ ಕೂಗವವರಿಗೆ ಕ್ಷಮೆಯಿಲ್ಲ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸುಪ್ರಸಾದ್ ಶೆಟ್ಟಿ ಹೇಳಿದರು. ಕುಂದಾಪುರ ಕ್ಷೇತ್ರ ಬಿಜೆಪಿ ಆಶ್ರಯದಲ್ಲಿ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಂದಾಪುರ ತಾಪಂ ಎದುರು ಬುಧವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಕಾಡೂರು ಸುರೇಶ್ ಶೆಟ್ಟಿ ಮಾತನಾಡಿ, ಬಲಾತ್ಕಾರದ ಮಂತಾಂತರ ಅಪಾದನೆಗೆ ಒಳಗಾಗಿ, ದೇಶ ವಿರೋಧಿ ಕೆಲಸ ವಾಡುತ್ತಾ ಬಂದಿರುವ ಅಮ್ನೇಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಗೆ ನಿಷೇಧ ಹೇರಬೇಕು. ಅಭಿವ್ಯಕ್ತಿ ಸ್ವಾತಂತ್ರ್ಯ ಹಿನ್ನೆಲೆಯಲ್ಲಿ ಸೈನಿಕ ಹಾಗೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶ ಮತ್ತು ದೇಶ ಕಾಯುತ್ತಿರುವ ಸೈನಿಕರ ವಿರೋಧಿ ಘೋಷಣೆ ಕೂಗಿದವರನ್ನು ಬಿಟ್ಟು ಎಬಿವಿಪಿ ಕಾರ್ಯಕರ್ತರನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರ ದೇಶದ್ರೋಹಿಗಳನ್ನು ಬೆಂಬಲಿಸುತ್ತಿರುವುದು ಭಾರತೀಯರಾದ ನಮ್ಮ ದೌರ್ಭಾಗ್ಯ ಎಂದು ಬಿಜೆಪಿ ಬೈಂದೂರು ಕ್ಷೇತ್ರ ಸಮಿತಿ ಕೋಶಾಧ್ಯಕ್ಷ ಬಿ.ಎಸ್. ಸುರೇಶ್ ಶೆಟ್ಟಿ ಸರಕಾರದ ವಿರುದ್ದ ಹರಿಹಾಯ್ದರು. ಬುಧವಾರ ಬೈಂದೂರಿನಲ್ಲಿ ಕ್ಷೇತ್ರ ಬಿಜೆಪಿ ಮತ್ತು ಕ್ಷೇತ್ರ ಯುವಮೋರ್ಚಾ ಬೆಂಗಳೂರಿನ ಅಮ್ನೆಸ್ಟಿ ಇಂಟರ್‌ನ್ಯಾಶನಲ್ ಸಂಸ್ಥೆ ವಿರುದ್ದ ಕ್ರಮಕ್ಕೆ ಆಗ್ರಹಿಸಿ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ಮೂರು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಈವರೆಗೆ ಹಗರಣಗಳಲ್ಲಿಯೇ ಮುಳುಗಿದ್ದು, ನ್ಯಾಯ ಕೇಳಲು ಬಂದ ದೇಶಭಕ್ತರ ಮೇಲೆ ಪೋಲಿಸರಿಂದ ಲಾಠಿಚಾರ್ಜ್ ಮೂಲಕ ದೌರ್ಜನ್ಯ ನಡೆಸುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ತಕ್ಷಣ ತಪ್ಪಿತಸ್ಥ ಸಂಸ್ಥೆಯ ವಿರುದ್ದ ಕ್ರಮಕೈಗೊಳ್ಳುವ ತನಕ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಎಚ್ಚರಿಸಿದರು. ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಬಿ. ಎಂ. ಸುಕುಮಾರ್ ಶೆಟ್ಟಿ, ಕ್ಷೇತ್ರ ಬಿಜೆಪಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಬೇಳೂರು ಮೊಗೆಬೆಟ್ಟು ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯ ವರದಿಗೆಂದು ತೆರಳಿದ್ದ ಪತ್ರಕರ್ತರ ಮೇಲೆ ಕಲ್ಲುಕೋರೆಯ ಮಾಲಕರು ಹಲ್ಲೆ ನಡೆಸಿ, ಕ್ಯಾಮರಾ, ಮೊಬೈಲ್‌ಗಳನ್ನು ಪುಡಿಗೈದ ಘಟನೆ ಬುಧವಾರ ನಡೆದಿದೆ. ಘಟನೆಯ ವಿವರ: ಕಳೆದ ಕೆಲವು ವರ್ಷಗಳಿಂದ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರೆನ್ನಲಾದ ಬೇಳೂರು ಸಮೀಪದ ಮೊಗೆಬೆಟ್ಟು ಎಂಬಲ್ಲಿನ ಕಲ್ಲುಕೋರೆ ಬಗ್ಗೆ ವರದಿ ಮಾಡಲು ಸ್ವಂದನ ವಾಹಿನಿಯ ಪ್ರತಿನಿಧಿ ರಾಜೇಶ್ ಕುಂದಾಪುರ ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ವರದಿಗಾರ ಗಣೇಶ್ ಸೈಬರ್‌ಕಟ್ಟೆ ತೆರಳಿದ್ದಾಗ ಕಲ್ಲುಕೋರೆಯ ಮಾಲಿಕರು, ಸ್ಥಳಿಯ ಕೆಲವರೊಂದಿಗೆ ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ರಾಜೇಶ್ ಬಳಿಯಿದ್ದ ಕ್ಯಾಮರಾ, ಮೊಬೈಲ್‌ಗಳನ್ನು ಕಸಿದುಕೊಂಡು ಪುಡಿಗೈದಿರುವುದಲ್ಲದೇ, ಸಿಮ್ ತೆಗೆದಿರಿಸಿಕೊಂಡಿದ್ದಲ್ಲದೇ ಜೀವಬೆದರಿಕೆ ಹಾಕಿದ್ದರೆನ್ನಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ರತ್ನಾಕರ ಶೆಟ್ಟಿ, ಸುಧಾಕರ ಶೆಟ್ಟಿ ಹಾಗೂ ಮಧುಕರ ಶೆಟ್ಟಿ ಎಂಬುವವರ ವಿರುದ್ಧ ಹಲ್ಲೆ, ಸ್ವತ್ತು ನಾಶ ಹಾಗೂ ಕರ್ತವ್ಯಕ್ಕೆ ಅಡ್ಡಿಯ ದೂರು ದಾಖಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಬ್ರಹ್ಮಾವರ ವಲಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಮೇರಿಕದ ನ್ಯೂಜೆರ್ಸಿಯ ಅಟ್ಲಾಂಟಿಕ್ ನಗರದಲ್ಲಿ ಸೆಪ್ಟೆಂಬರ್ 2ರಿಂದ 4ರ ವರೆಗೆ ನಡೆಯುವ 9ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದ ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಹಿಸಲು ಬ್ಯಾರಿ ಸಾಹಿತ್ಯ ಅಕಾಡೆಮಿಯ ೨೦೧೫ನೇ ಸಾಲಿನ ಡಾ| ವಹಾಬ್ ದೊಡ್ಮನೆ ಪ್ರಶಸ್ತಿ ಪುರಸ್ಕೃತ ಬರಹಗಾರ ಮತ್ತು ಕಲಾವಿದ ಯಾಕೂಬ್ ಖಾದರ್ ಗುಲ್ವಾಡಿ ವಿಶೇಷ ಆಮಂತ್ರಿತರಾಗಿದ್ದಾರೆ. ಬಹುಮುಖ ಪ್ರತಿಭೆ ಯಾಕೂಬ್ ಖಾದರ್ ಗುಲ್ವಾಡಿ ದೇಶದ ವಿವಿದೆಡೆ ಅಲ್ಲದೇ ವಿದೇಶಗಳಾದ ಅಮೇರಿಕ, ಕೆನಡಾ, ಸಿಂಗಾಪುರ, ದುಬೈ, ಓಮನ್, ಶ್ರೀಲಂಕಾ ಮಾಲ್ಡೀವ್ಸ್, ಕತಾರ್, ಕೀನ್ಯಾ, ತಾನ್ಜೇನಿಯಾ, ಮಲೇಶಿಯಾ, ಥೈಲಾಂಡ್, ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ನಡೆದ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದಲ್ಲದೇ ಪ್ರವಾಸಕಥನಗಳನ್ನು ಪ್ರಕಟಿಸಿದ್ದಾರೆ. ಯುವ ಬರಹಗಾರರಾಗಿ, ಚಲನಚಿತ್ರಗಳಿಗೆ ಕಲಾ ನಿರ್ದೇಶಕನಾಗಿ, ವಸ್ತ್ರವಿನ್ಯಾಸಕಾರರಾಗಿ ಕೆಲಸ ಮಾಡಿದ್ದಲ್ಲದೇ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಗುಲ್ವಾಡಿ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರಧಾನ ನಿರ್ದೇಶಕರಾಗಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನಿಕಟಪೂರ್ವ ಸದಸ್ಯನಾಗಿ, ಕರ್ನಾಟಕ ಚಲನಚಿತ್ರ ಆಯ್ಕೆ ಸಮಿತಿಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ ನವದೆಹಲಿ ಸಂಯೋಜಿಸಲ್ಪಟ್ಟ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಕುಂದಾಪುರ ತಾಲೂಕು ಸಮಿತಿ ನೇತೃತ್ವದಲ್ಲಿ ಕಾವ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಡ್ಲೂರು ಹಳ್ನಾಡು ಗ್ರಾಮಗಳ ಮನೆ ನಿವೇಶನ ರಹಿತರಿಂದ – ನಿವೇಶನ ಹಕ್ಕು ಪತ್ರಕ್ಕಾಗಿ ಒತ್ತಾಯಿಸಿ ಕಾವ್ರಾಡಿ-ಕಂಡ್ಲೂರು ಗ್ರಾಮ ಪಂಚಾಯತ್ ಕಛೇರಿ ಎದುರು ಪ್ರತಿಭಟನಾ ಮುಷ್ಕರ ಹೋರಾಟ ಜರಗಿತು. ಸಿಐಟಿಯು ತಾಲೂಕು ಅಧ್ಯಕ್ಷ ಹೆಚ್. ನರಸಿಂಹ ನಿವೇಶನ ರಹಿತರ ಪ್ರತಿಭಟನಾಕಾರರನ್ನು ಉದ್ದೇಶಿಸಿ, ಮಾತನಡುತ್ತಾ ಕಳೆದ ಮೂರು ವರ್ಷಗಳಿಂದ – ಮನೆ ನಿವೇಶನ ರಹಿತರು ಭೂಮಿ ಹಕ್ಕು ಪತ್ರಕ್ಕಾಗಿ ವಿವಿಧ ಹಂತದ ಹೋರಾಟ ಚಳವಳಿಯನ್ನು ನಿರಂತರವಾಗಿ ಮಾಡುತ್ತಿದ್ದರೂ ಸರಕಾರ ನಿವೇಶನ ಸ್ಥಳ ಹಕ್ಕು ಪತ್ರ ವಿತರಣೆ ಮಾಡದಿರುವುದನ್ನು ತೀವ್ರವಾಗಿ ಖಂಡಿಸಿದರು. ಈ ಹಿನ್ನಲೆಯಲ್ಲಿ ಸೆಪ್ಟಂಬರ್ ೨೮ ರಂದು ಜರಗುವ ಕುಂದಾಪುರ ತಾಲೂಕು ಕಛೇರಿ ಮುತ್ತಿಗೆ ಹೋರಾಟವನ್ನು ಎಲ್ಲಾ ನಿವೇಶನ ರಹಿತ ಅರ್ಜಿದಾರರು ಬೆಂಬಲಿಸಬೇಕು ಎಂದು ಕರೆಕೊಟ್ಟರು. ಕೃಷಿ ಕೂಲಿಕಾರರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯ ಮಹಾಸತಿ ಪ್ರಾಥಮಿಕ ಮೀನುಗಾರರ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಸ್ಥಳಾಂತರಿತ ಕಛೇರಿಯನ್ನು ಸೋಮವಾರ ಸಂಘದ ಅಧ್ಯಕ್ಷೆ ಶಾರದಾ ಎಸ್. ಖಾರ್ವಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಗಂಗೊಳ್ಳಿಯ ಮುಖ್ಯರಸ್ತೆಯಲ್ಲಿರುವ ಗೌರಿ ಕಾಂಪ್ಲೆಕ್ಸ್‌ನ ನೆಲ ಅಂತಸ್ತಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಘದ ಮುಖ್ಯ ಕಛೇರಿಯನ್ನು ಸಹಕಾರಿಯ ಸದಸ್ಯರ ಮತ್ತು ಜನರ ಅನುಕೂಲಕ್ಕಾಗಿ ವಿಸ್ತಾರವಾದ ಪ್ರಥಮ ಮಹಡಿಯಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿದೆ ಎಂದು ಹೇಳಿದರು. ಪುರೋಹಿತರಾದ ಜಿ.ಅನಂತಕೃಷ್ಣ ಭಟ್ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಸಂಘದ ಉಪಾಧ್ಯಕ್ಷೆ ಮಾಲತಿ ಜಿ.ಖಾರ್ವಿ, ನಿರ್ದೇಶಕಿಯರಾದ ನೀಲಾವತಿ ಎಸ್.ಖಾರ್ವಿ, ಪಾರ್ವತಿ ಬಿ.ಖಾರ್ವಿ, ಶಾರದಾ ಆರ್.ಹೆಗ್ಡೆ, ದೀಪಾ ಎಸ್.ಖಾರ್ವಿ, ಶೈಲಾ ಎಂ.ಖಾರ್ವಿ, ರೇಖಾ ಜಿ.ಖಾರ್ವಿ, ಮತ್ಸ್ಯೋದ್ಯಮಿ ಶಿವಪ್ಪ ಖಾರ್ವಿ, ಸುರೇಂದ್ರ ಡಿ.ಖಾರ್ವಿ, ಕೃಷ್ಣ ಕೋಟಾನ್, ಸಹಕಾರಿಯ ಸಿಬ್ಬಂದಿಗಳು, ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ಸಹಕಾರಿಯ ಕಾರ್ಯದರ್ಶಿ ಗಣಪತಿ ಖಾರ್ವಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಕಾಲೇಜಿಗೆ ಭೇಟಿ ನೀಡಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀ ಬಿ. ಎಸ್. ಯಡಿಯೂರಪ್ಪ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಶೈಕ್ಷಣಿಕ ಬೆಳವಣಿಗೆಯನ್ನು ಶ್ಲಾಘಿಸಿದರು. ಕಾಲೇಜಿನ ಆವರಣದಲ್ಲಿ ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಬೋಧಕ-ಬೋಧಕೇತರ ವರ್ಗದವರ ಜೊತೆ ಸಂವಾದ ನಡೆಸಿದರು. ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳು ಈ ಎಜ್ಯುಕೇಶನ್ ಸೊಸೈಟಿಯಲ್ಲಿ ಪ್ರತೀ ವರ್ಷ ಅಧ್ಯಯನ ಮಾಡುತ್ತಿರುವುದು ಉಲ್ಲೇಖನೀಯ. ಗ್ರಾಮೀಣ ಪ್ರದೇಶದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹೆಚ್ಚು ಮನ್ನಣೆ ನೀಡುತ್ತಿರುವುದು ಹಾಗೂ ಮಹಿಳೆಯರಿಗೆ ಹೆಚ್ಚು ಪ್ರಾತಿನಿಧ್ಯ ನೀಡುತ್ತಿರುವುದು ಮೆಚ್ಚತಕ್ಕ ಸಂಗತಿ. ಈ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಪ್ರಜ್ಞಾವಂತ ಪ್ರಜೆಗಳಾಗಲಿ ಎಂದು ಶುಭ ಹಾರೈಸಿದರು. ಮಟ್ಟಾರ್ ರತ್ನಾಕರ ಹೆಗ್ಡೆ, ಉದಯ ಕುಮಾರ್ ಶೆಟ್ಟಿ, ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷರಾದ ಬಿ. ಎಮ್. ಸುಕುಮಾರ ಶೆಟ್ಟಿ, ಸದಾನಂದ ಶೇರೆಗಾರ್ ಬೈಂದೂರು ಮತ್ತು ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಬೋಧಕ-ಬೋಧಕೇತರ ವರ್ಗದವರು ಉಪಸ್ಥಿತರಿದ್ದರು. ಕಾಲೇಜಿನ ವಾಣಿಜ್ಯ ಉಪನ್ಯಾಸಕಿ…

Read More