ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಜೇಸಿ ಸಂಘಟನೆ ಎಂಬುವುದು ಒಂದು ಅಂತರಾಪ್ಷ್ರೀಯ ಸಂಸ್ಥೆಯಾಗಿದ್ದು ಅದರ ಕಾರ್ಯ ಕ್ಷೇತ್ರವನ್ನು ಗ್ರಾಮೀಣ ಭಾಗಗಳಲ್ಲಿ ವಿಸ್ತರಿಸಿಕೊಂಡು ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಕೋಟ ಪಂಚವರ್ಣ ಯುವಕ ಮಂಡಲದ ಗೌರವಾಧ್ಯಕ್ಷ ಕೆ.ವೆಂಕಟೇಶ್ ಪ್ರಭು ಹೇಳಿದ್ದಾರೆ. ಮಣೂರು ಪಡುಕರೆ ಸಯುಂಕ್ತ ಪ್ರೌಢಶಾಲೆಯ ಸಭಾಂಗಣದಲ್ಲಿ ಮಂಗಳವಾರ ಜೇಸಿಐ ಸಾಸ್ತಾನ ವೈಬ್ರೆಂಟ್ ವತಿಯಿಂದ ಒಂದು ವಾರಗಳ ಕಾಲ ನಡೆಯುವ ಜೇಸಿ ಸಪ್ತಾಹ ಸಂಚಲನ 2016ಇದರ ಬನ್ನಿ ಬದಲಾಗೋಣ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನೂರಾರು ಸಂಘ ಸಂಸ್ಥೆಗಳಿರಬಹುದು ಆದರೆ ಅದರದ್ದೆ ಆದ ಕಾರ್ಯ ಚಟುವಟಿಕೆಗೆ ಸ್ಥಳಗಳ ವ್ಯಾಪ್ತಿ ಇರುತ್ತದೆ ಆದರೆ ಜೇಸಿ ಸಾಸ್ತಾನ ಫಟಕ ತನ್ನ ಕಾರ್ಯಕ್ಷೇತ್ರವನ್ನು ಇತರ ಕಡೆಗಳಿಗೂ ವಿಸ್ತರಿಸಿ ಕೊಂಡಿದೆ ಇದು ಶ್ಲಾಘನಾರ್ಹ ಎಂದರು. ಜೇಸಿಐ ಸಾಸ್ತಾನ ವೈಬ್ರೆಂಟ್‌ನ ಅಧ್ಯಕ್ಷ ಉದಯ ಕೋಟ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಣೂರು ಪ್ರೌಡ ಶಾಲಾ ಶಿಕ್ಷಕ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮ್ಮಿಲನದ ಕಾರ್ಯಕ್ರಮದಲ್ಲಿ ಕುಂದಾಪುರ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಬನ್ನಾಡಿ ಸೋಮನಾಥ ಹೆಗ್ಡೆಯವರನ್ನು ಅಭಿನಂದಿಸಲಾಯಿತು. ಗಂಗೊಳ್ಳಿ ಮುಖ್ಯ ರಸ್ತೆಯ ವಿಜಯ ವಿಠಲ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಧಾರವಾಡದ ಕಲಘಟಗಿ ಸಮಾಜ ಪರಿವರ್ತನಾ ಸಮುದಾಯದ ಅಧ್ಯಕ್ಷ, ಖ್ಯಾತ ಭ್ರಷ್ಟಚಾರ ವಿರೋಧಿ ಹೋರಾಟಗಾರರಾದ ಶ್ರೀ ಎಸ್.ಆರ್.ಹಿರೇಮಠ್‌ರವರು ಅವರನ್ನು ಅಭಿನಂದಿಸಿದರು. ಅಭಿನಂದನೆಯನ್ನು ಸ್ವೀಕರಿಸಿ ಮಾತಾನಾಡಿದ ಬನ್ನಾಡಿ ಸೋಮನಾಥ ಹೆಗ್ಡೆಯವರು ಅಭಿನಂದಿಸಲು ಕಾರಣರಾದ ಗಂಗೊಳ್ಳಿ ಸಮುದಾಯ ಹಿತರಕ್ಷಣಾ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಎಲ್ಲಾ ಸದಸ್ಯರಿಗೆ ಹಾಗೂ ಅಭಿನಂದಿಸಿದ ಎಸ್.ಆರ್. ಹಿರೇಮಠ್‌ರವರಿಗೂ ಕೃತಜ್ಞತೆಗಳನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು ಇದರ ಅಧ್ಯಕ್ಷರಾದ ಯಶ್‌ಪಾಲ್ ಎ ಸುವರ್ಣ ಹಾಗೂ ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾ ಇದರ ಅಧ್ಯಕ್ಷರಾದ ಕೆ.ಬಿ.ಖಾರ್ವಿ ಮತ್ತು ಉಪ್ಪುಂದ ಮೀನುಗಾರ ಮುಖಂಡರಾದ, ಎಸ್.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿಂದಿನ ವರ್ಷಗಳಲ್ಲಿ ಆದಾಯ ಕರ ಕಾಯಿದೆಯನ್ವಯ ತಮ್ಮ ಸಂಪೂರ್ಣ ಆದಾಯ ಘೋಷಿಸದವರು ಈಗ ಸ್ವಯಂಪ್ರೇರಣೆಯಿಂದ ಅದನ್ನು ಇಲಾಖೆಯ ಗಮನಕ್ಕೆ ತರಲು ಕೇಂದ್ರ ಸರಕಾರ ’ಆದಾಯ ಘೋಷಣೆ ಯೋಜನೆ’ಯ ಮೂಲಕ ಅವಕಾಶ ಕಲ್ಪಿಸಿದೆ. ಈ ಅವಕಾಶ ಸಪ್ಟಂಬರ್ ೩೦ಕ್ಕೆ ಅಂತ್ಯವಾಗುವುದರಿಂದ ಅಂತಹ ನಾಗರಿಕರು ತಕ್ಷಣ ಇದನ್ನು ಬಳಸಿಕೊಳ್ಳಬೇಕು ಎಂದು ಉಡುಪಿ ವಲಯ ಹೆಚ್ಚುವರಿ ಆದಾಯ ತೆರಿಗೆ ಆಯುಕ್ತ ಸಿದ್ದಪ್ಪಾಜಿ ಆರ್. ಎನ್. ಹೇಳಿದರು. ಬೈಂದೂರು ರೋಟರಿ ಕ್ಲಬ್, ಆದಾಯ ತೆರಿಗೆ ಇಲಾಖೆ ಹಾಗೂ ಬೈಂದೂರಿನ ಲೆಕ್ಕ ಪರಿಶೋಧಕರು ಮತ್ತು ತೆರಿಗೆ ಸಲಹೆಗಾರರು ಸಂಯುಕ್ತವಾಗಿ ರೋಟರಿ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ’ಆದಾಯ ಘೋಷಣೆ ಯೋಜನೆ, ೨೦೧೬’ ಕುರಿತು ಮಾಹಿತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ, ಅದರ ಕುರಿತು ಮಾಹಿತಿ ನೀಡಿದರು. ನಾಗರಿಕರು ನಡೆಸುವ ಆದಾಯ ತೆರಿಗೆ ಪಾವತಿಗೆ ಒಳಪಡುವ ಎಲ್ಲ ವ್ಯವಹಾರಗಳ ಮಾಹಿತಿ ಈಗ ಇಲಾಖೆಯ ಗಮನಕ್ಕೆ ಬರುತ್ತದೆ. ಅವುಗಳಲ್ಲಿ ಆದಾಯ ಘೋಷಣೆ ಮಾಡದಿರುವ ಮತ್ತು ಕರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾವೇರಿ ನದಿ ನೀರು ಹಂಚಿಕೆಯ ಸಂಬಂಧ ತಮಿಳುನಾಡಿನಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಕುಂದಾಪುರದಿಂದ ದಕ್ಷಿಣ ಭಾರತದ ಪ್ರವಾಕ್ಕೆಂದು ೧೨ ಮಂದಿ ತೆರಳಿದ್ದ ಟೆಂಪೋ ಟ್ರಾವೆಲ್ಲರ್‌ನ್ನು ತಮಿಳುನಾಡಿನ ರಾಮೇಶ್ವರಂನಲ್ಲಿ ದುಷ್ಕರ್ಮಿಗಳು ಜಖಂಗೊಳಿಸಿದ್ದರಿಂದ ಅತಂತ್ರರಾಗಿದ್ದ ಕುಂದಾಪುರದ ಪ್ರವಾಸಿಗರು ತಮಿಳುನಾಡಿನ ಪೊಲೀಸರ ನೆರವಿನೊಂದಿಗೆ ಸುರಕ್ಷಿತವಾಗಿ ರೈಲಿನಲ್ಲಿ ಉಡುಪಿಗೆ ಬಂದಿಳಿದಿದ್ದಾರೆ. ವಾಹನದ ತೆರಳಿದ್ದ ಮಂಜುನಾಥ ಕುಲಾಲರ ತಂದೆ ಶೀನ ಕುಲಾಲ್, ತಾಯಿ ಗಿರಿಜಮ್ಮ, ಅಮಾಸೆಬೈಲಿನ ವಿಠ್ಠಲ ಶೆಟ್ಟಿ ಹಾಗೂ ಅವರ ಪತ್ನಿ ಮಗಳು, ಗಂಗೊಳ್ಳಿಯ ಕಾಮತ್ ಕುಟುಂಬದ ಮೂವರು ಸದಸ್ಯರು ಸೇರಿದಂತೆ ಇತರರು ತಮಿಳುನಾಡಿನಿಂದ ಸುರಕ್ಷಿತವಾಗಿ ಉಡುಪಿಗೆ ಹಿಂತಿರುಗಿದ್ದು ಅಲ್ಲಿಂದ ಕುಂದಾಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ತಮಿಳುನಾಡಿನ ರಾಮೇಶ್ವರಂನಲ್ಲಿ ಲಾಡ್ಜ್ ಸಮೀಪ ನಿಲ್ಲಿಸಲಾಗಿದ್ದ ವಾಹನದ ಗಾಜು ಪುಡಿಗೈದಿರುವುದಲ್ಲದೇ ವಾಹನ ಚಾಲಕ ಮಂಜುನಾಥ ಕುಲಾಲ್ ಎಂಬುವವರಿಗೆ ತಮಿಳುನಾಡಿನ ನಾಮ್ ತಮಿಳಾರ್ ಇಯಕ್ಕಂ ಎಂಬ ಸಂಘಟನೆಯ ಕಾರ್ಯಕರ್ತರು ಹಿಗ್ಗಾಮುಗ್ಗಾ ತಳಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಉಳಿದವರು ಗಲಭೆಯ ಸಂದರ್ಭ ತಮಿಳುನಾಡಿನ…
ಕುಂದಾಪ್ರ ಡಾಟ್ ಕಾಂ ವರದಿ. ನಿಸರ್ಗದತ್ತ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುವ ಬೈಂದೂರು ವಿವಿಧ ಸ್ತರಗಳಲ್ಲಿ ಅಭಿವೃದ್ಧಿಯ ಪಥದತ್ತ ಸಾಗುತ್ತಿದೆ. ಗ್ರಾಮೀಣ ಪ್ರದೇಶಗಳನ್ನು ಒಳಗೊಂಡ ಈ ಪುಟ್ಟ ನಗರ, ಮೂಲಭೂತ ಸೌಕರ್ಯಗಳನ್ನು ಒಂದೊಂದಾಗಿ ಒಳಗೊಳ್ಳುತ್ತಲೇ ತಾಲೂಕು ಕೇಂದ್ರದ ಕನಸಿಗೆ ಪುಷ್ಠಿ ನೀಡುತ್ತಿದೆ. ಜನರ ಜೀವನ ಮಟ್ಟಕ್ಕೆ ಸುಧಾರಿಸುತ್ತಿದ್ದಂತೆ ನಗರ ಪ್ರದೇಶದಲ್ಲಿ ದೊರೆಯಬಹುದಾದ ಸೇವೆಗಳನ್ನು ಗ್ರಾಮೀಣ ಭಾಗದಲ್ಲಿಯೂ ವಿಸ್ತರಿಸಿಕೊಳ್ಳುತ್ತಾ ಸುಂದರ ಬದುಕನ್ನು ಮತ್ತಷ್ಟು ಸರಳಗೊಳಿಸುತ್ತಿವೆ. ಶ್ರೀ ಮೂಕಾಂಬಿಕಾ ಡೆವಲಪರ್ಸ್ ಬೈಂದೂರು ಮತ್ತು ಮೆ. ವೃಂದಾ ಮಾರ್ಕೆಂಟಿಂಗ್ ಎಂಟರ್‌ಪ್ರೈಸಸ್ ಅವರಿಂದ ಬೈಂದೂರಿನ ಕೇಂದ್ರಭಾಗದಲ್ಲಿ ನೂತನವಾಗಿ ವಿಶಾಲವಾದ ಸಿಟಿ ಪಾಯಿಂಟ್ ಎದ್ದು ನಿಲ್ಲುವುದರ ಜೊತೆಯಲ್ಲಿಯೇ ವಿಶೇಷ ಪರಿಕಲ್ಪನೆಯೊಂದಿಗೆ ಆರಂಭಿಸಿರುವ ‘ನಮ್ಮ ಬಜಾರ್’ ಎಂಬ ಅತ್ಯಾಧುನಿಕ ಹವಾನಿಯಂತ್ರಿತ ಹೈಪರ್ ಮಾರ್ಕೆಟ್ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಶಾಪಿಂಗ್ ಮಾಡಲು ನಗರ ಪ್ರದೇಶಗಳಿಗೆ ತೆರಳಬೇಕೆಂಬ ಕೊರಗು ದೂರವಾಗಿ ಬೈಂದೂರಿನ ಒಂದೇ ಸೂರಿನಲ್ಲಿಯೇ ಸಾವಿರಾರು ಉತ್ಪನ್ನಗಳು ಗ್ರಾಹಕರಿಗೆ ದೊರೆಯಲಿದೆ. ಕುಂದಾಪ್ರ ಡಾಟ್ ಕಾಂ. ವಿಡಿಯೋ ನೋಡಿ – https://youtu.be/p7OMPEripLM ತಾಲೂಕಿನಲ್ಲಿಯೇ ಮೊದಲು: ದೊಡ್ಡ ದೊಡ್ಡ ನಗರಗಳಲ್ಲಷ್ಟೇ ಕಾಣಬಹುದಾದ…
ಕುಂದಾಪ್ರ ಡಾಟ್ ಕಾಂ ಸುದ್ದಿ ಅಮಾಸೆಬೈಲು: ಅಮಾಸೆಬೈಲು ಗ್ರಾ.ಪಂ. ವ್ಯಾಪ್ತಿಯ ರಟ್ಟಾಡಿಯ ವಾಹನ ಚಾಲಕ ಮಂಜುನಾಥ ಕುಲಾಲ ಅವರಿಗೆ ತಮಿಳುನಾಡಿನ ರಾಮೇಶ್ವರದಲ್ಲಿ ನಡೆದ ಹಲ್ಲೆಯನ್ನು ಖಂಡಿಸಿ ಮಂಜುನಾಥ ಕುಲಾಲ್ ಅವರ ಹುಟ್ಟೂರು ಅಮಾಸೆಬೈಲಿನಲ್ಲಿ ಪ್ರತಿಭಟನೆ ನಡೆಯಿತು. ತಮಿಳುನಾಡಿನಲ್ಲಿರುವ ಇಲ್ಲಿಂದ ಹೋದ ಜನರು ದೈಹಿಕ, ಮಾನಸಿಕವಾಗಿ ನೊಂದಿದ್ದಾರೆ. ತಮಿಳುನಾಡಿನ ಪೊಲೀಸರ ವಶದಲ್ಲಿರುವ ನಮ್ಮವರಿಗೆ ಸೂಕ್ತ ರಕ್ಷಣೆ ಬೇಕಾಗಿದೆ. ಜಖಂಗೊಂಡ ವಾಹನಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರಲ್ಲದೇ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಧಿಕ್ಕಾರ ಕೂಗಿದರು. ಘಟನೆ ನಡೆದು ಕೆಲವು ಸಮಯ ಕಳೆದರೂ ರಾಜ್ಯ ಸರಕಾರವು ಸೂಕ್ತವಾಗಿ ಸ್ಪಧಿಂದಿಸುತ್ತಿಲ್ಲ, ಸರಕಾರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಮಿಳುನಾಡಿನಲ್ಲಿ ಹಲ್ಲೆಗೊಳಗಾದ ಮಂಜುನಾಥ ಕುಲಾಲ ಅವರ ಸಹೋದರ ದಿನೇಶ ಕುಲಾಲ, ಅಮಾಸೆಬೈಲು ಸಿ.ಎ. ಬ್ಯಾಂಕಿನ ಅಧ್ಯಕ್ಷ ಆರ್ ನವೀನ್‌ಚಂದ್ರ ಶೆಟ್ಟಿ, ಅಮಾಸೆಬೈಲು, ಗೋಳಿಯಂಗಡಿ, ಸಿದ್ದಾಪುರ, ಹಾಲಾಡಿ, ಬಾಡಿಗೆ ರಿಕ್ಷಾ, ಟ್ಯಾಕ್ಸಿ, ಗೂಡ್ಸ್ ವಾಹನ ಮಾಲಕರು ಪ್ರತಿಭಟನೆ ನಡೆಸಿದ್ದರು. ಘಟನೆಯನ್ನು ಖಂಡಿಸಿ ಪೇಟೆಯಲ್ಲಿ ಜಾಥಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕನ್ನಡ ಮಾಧ್ಯಮ ಶಾಲೆಗಳು ಹಲವಾರು ಸಮಸ್ಯೆ ಸವಾಲುಗಳನ್ನು ಎದುರಿಸುತ್ತಿದ್ದು, ಇಂದಿನ ಆಧುನಿಕ ಜಗತ್ತಿನಲ್ಲಿ ಶಿಕ್ಷಣ ಕ್ಷೇತ್ರ ಧಾವಿಸುತ್ತಿರುವ ವೇಗಕ್ಕೆ ಅನುಗುಣವಾಗಿ ಹಲವು ಮಾರ್ಪಾಡುಗಳ ಅಗತ್ಯವಿದೆ. ಹೀಗಿರುವಾಗ ಹಲವು ಇಲ್ಲಗಳ ನಡುವೆ ಸಾರ್ವಜನಿಕರ ಸಹಕಾರದೊಂದಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು ಪ್ರಯತ್ನಿಸುತ್ತಿರುವ ಶಿಕ್ಷಕರ ಸೇವೆ ಅನನ್ಯವಾದುದು ಎಂದು ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಶಿಧರ ಶೆಟ್ಟಿ ಹೇಳಿದರು. ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ನರ್ಸರಿ ಹಾಲ್‌ನಲ್ಲಿ ನಡೆದ ಶಿಕ್ಷಕರ ದಿನಾಚರಣೆ ಹಾಗೂ ವಿಶ್ವ ಸಾಕ್ಷರತಾ ದಿನಾಚರಣೆ ಅಂಗವಾಗಿ ಸಾಧಕ ಶಿಕ್ಷಕರಿಗೆ ನೇಶನ್ ಬಿಲ್ಡರ್ ಅವಾರ್ಡನ್ನು ಹಸ್ತಾಂತರಿಸಿ ಮಾತನಾಡಿದರು. ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿ ಇಂಜಿನಿಯರ‍್ಸ್ ಸೇತುವೆಗಳನ್ನು ನಿರ್ಮಿಸುತ್ತಾರೆ, ವೈದ್ಯರು ರೋಗಿಯ ಪ್ರಾಣ ಕಾಪಾಡುತ್ತಾರೆ, ಪೋಲಿಸರು ಕಾನೂನು ವ್ಯವಸ್ಥೆಯನ್ನು ರಕ್ಷಿಸುತ್ತಾರೆ ಆದರೆ ಇವರೆಲ್ಲರನ್ನು ರೂಪಿಸುವ ಶಿಕ್ಷಕ ನಿಜವಾದ ರಾಷ್ಟ್ರ ನಿರ್ಮಾತೃರಾಗಿದ್ದಾರೆ ಆದುದರಿಂದ ಅಂತಹ ಸಾಧಕರನ್ನು ಗುರುತಿಸಿ ನೇಶನ್…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿ ಹಾಗೂ ಆಸುಪಾಸಿನ ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ಜನರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ಸಹಕಾರಿಯ ಬೆಳವಣಿಗೆಯ ಜೊತೆಗೆ ಸಹಕಾರಿಯ ಸದಸ್ಯರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡುತ್ತಿದೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಸದಸ್ಯರಿಗೆ ವಿನೂತನ ಸೌಲಭ್ಯ ಯೋಜನೆಗಳನ್ನು ನೀಡುವ ಸಹಕಾರಿಯ ಪ್ರಯತ್ನ ಶ್ಲಾಘನೀಯ ಎಂದು ಗಂಗೊಳ್ಳಿ ಶ್ರೀ ಅಂಬಿಕಾ ದೇವಸ್ಥಾನದ ಅರ್ಚಕ ವೇದಮೂರ್ತಿ ಜಿ.ವಸಂತ ಭಟ್ ಹೇಳಿದರು. ಅವರು ಗಂಗೊಳ್ಳಿಯ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಕಛೇರಿಯಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಸಹಕಾರಿಯ ವಿನೂತನ ‘ಎಸ್.ಎಂ.ಎಸ್. ಬ್ಯಾಂಕಿಂಗ್ ಸೇವೆ’ಗೆ ಚಾಲನೆ ನೀಡಿ ಆಶೀರ್ವಚನ ನೀಡಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಮಾಜಿ ಮಂಡಲ ಪ್ರಧಾನ ಬಿ.ಸದಾನಂದ ಶೆಣೈ ಮಾತನಾಡಿ, ಶತಮಾನದ ಹೊಸ್ತಿಲಲ್ಲಿ ಇರುವ ಸಹಕಾರಿಯು ಸೇವೆಗೆ ಪ್ರಸಿದ್ಧಿಗೊಂಡಿದೆ. ತನ್ನ ಸೇವೆಗಳ ಮೂಲಕ ಜನಮನ ಗೆದ್ದಿರುವ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯು ತನ್ನ ಸದಸ್ಯರಿಗೆ ಇನ್ನಷ್ಟು ಸೌಲಭ್ಯ…
. ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾವೇರಿ ನದಿ ನೀರು ಹಂಚಿಕೆಯ ವಿಷಯ ಸಂಬಂಧ ತಮಿಳುನಾಡಿನಲ್ಲಿ ಕನ್ನಡಿಗರ ವಿರುದ್ಧ ದಾಳಿ ನಡೆದ ದಾಳಿ ಬೆಂಗಳೂರನ್ನು ಹತ್ತಿ ಊರಿಯುವಂತೆ ಮಾಡಿತ್ತು. ಕುಂದಾಪುರ ತಂಡದ ಚಾಲಕ ಮಂಜುನಾಥ ಕುಲಾಲ ಅವರ ಮೇಲೆ ತಮಿಳರು ಅಮಾನವೀಯ ಹಲ್ಲೆ ಮಾಡಿರುವುದನ್ನು ವೀಡಿಯೊ ಚಿತ್ರೀಕರಣ ನಡೆಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟ ಬಳಿಕ ಎಲ್ಲೆಡೆ ಗಲಾಟೆ ಆರಂಭಗೊಂಡಿತು. ನಾಮ್ ತಮಿಳಾರ್ ಇಯಕ್ಕಂ ಎಂಬ ಸಂಘಟನೆಯ ಸದಸ್ಯರು ರಾಮೇಶ್ವರದಲ್ಲಿ ನಿಲ್ಲಿಸಿದ್ದ ಕರ್ನಾಟಕ ನೋಂದಣಿಯ ವಾಹನಗಳಿಗೆ ಮತ್ತು ಅದರಲ್ಲಿದ್ದ ಕನ್ನಡಿಗರಿಗೆ ಮನಸೋ ಇಚ್ಛೆ ದಾಳಿ ನಡೆಸಿದರು. ಅದನ್ನು ಸಂಘಟನೆಯವರೇ ವೀಡಿಯೊ ಮಾಡಿ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ವಿಡಿಯೋ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನಲ್ಲಿ ಗಲಭೆಗಳು ಆರಂಭಗೊಂಡಿದ್ದವು. ತಮಿಳುನಾಡಿನ ವಾಹನಗಳಿಗೆ ಬೆಂಕಿ, ಸೊತ್ತು ನಾಶಕ್ಕೆ ಕರ್ನಾಟಕದ ಕೆಲವು ಸಂಘಟನೆಗಳೂ ಮುಂದಾಗಿದ್ದವು. ಕೊನೆಗೆ ಒಬ್ಬ ಯುವಕ ದಾರುಣವಾಗಿ ಗುಂಡೇಟಿಗೆ ಬಲಿಯಾಗಬೇಕಾಯಿತು. ಪರಿಸ್ಥಿತಿ ನಿಯಂತ್ರಿಸಲು ಹಲವಡೆ ಕರ್ಪ್ಯೂ ಜಾರಿಗೊಳಿಸಲಾಗಿದೆ. ಕುಂದಾಪ್ರ ಡಾಟ್ ಕಾಂ. ಕುಂದಾಪುರಿಗರು ಸೇಫ್:…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾವೇರಿ ನದಿ ನೀರು ಹಂಚಿಕೆಯ ವಿಷಯ ಸಂಬಂಧ ತಮಿಳುನಾಡಿನಲ್ಲಿ ಕನ್ನಡಿಗರ ವಿರುದ್ಧ ದಾಳಿ ನಡೆದಿದೆ. ಗಲಭೆಯಲ್ಲಿ ಕುಂದಾಪುರದಿಂದ ದಕ್ಷಿಣ ಭಾರತ ಪ್ರವಾಸಕ್ಕೆಂದು ತೆರಳಿದ್ದ ವಾಹನದ ಗಾಜು ಪುಡಿಗೈದಿರುವುದಲ್ಲದೇ ವಾಹನ ಚಾಲಕ ಮಂಜುನಾಥ ಕುಲಾಲ್ (38) ಎಂಬುವವರಿಗೆ ಹಿಗ್ಗಾಮುಗ್ಗಾ ತಳಿಸಿದ್ದಾರೆ. ಕುಂದಾಪುರ ತಾಲೂಕಿನ ರಟ್ಟಾಡಿಯ ಮಂಜುನಾಥ ಕುಲಾಲ್ ತಮ್ಮ ಟೆಂಪೂ ಟ್ರಾವೆಲರ್‌ನಲ್ಲಿ ಕುಟುಂಬಿಕರು ಹಾಗೂ ಸ್ನೇಹಿತರು ಸೇರು ಒಟ್ಟು ಹನ್ನೆರಡು ಮಂದಿ ದಕ್ಷಿಣ ಭಾರತದ ಪ್ರವಾಸಕ್ಕೆ ತೆರಳಿದ್ದರು. ತಮಿಳುನಾಡಿನಲ್ಲಿ ಕಾವೇರಿ ಗಲಾಟೆ ಹೆಚ್ಚುತ್ತಿದ್ದಂತೆ ರಾಮೇಶ್ವರಂನಲ್ಲಿ ನಾಲ್ಕೈದು ಮಂದಿ ದುಷ್ಕರ್ಮಿಗಳು ನಿಲ್ಲಿಸಿದ್ದ ವಾಹನದ ಮುಂಭಾಗ, ಕಿಟಕಿ ಹಾಗೂ ಹಿಂಬದಿಯ ಗಾಜನ್ನು ಸಂಪೂರ್ಣ ಪುಡಿಗೈದು ಜಖಂಗೊಳಿಸಿದ್ದಾರೆ. ಬಳಿಕ ದೂರದಲ್ಲಿ ನಿಂತಿದ್ದ ಮಂಜುನಾಥ ಕುಲಾಲ್ ಅವರ ಬಳಿ ತೆರಳಿ ’ಕಾವೇರಿ ತಮಿಳುನಾಡಿಗೆ ಸೇರಿದ್ದು’ ಎಂದು ಹೇಳುವಂತೆ ಒತ್ತಾಯಿಸಿ ಹಲ್ಲೆ ನಡೆಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ವಾಹನದಲ್ಲಿದ್ದ ಮಂಜುನಾಥ ಕುಲಾಲರ ತಂದೆ ಶೀನ ಕುಲಾಲ್, ತಾಯಿ ಗಿರಿಜಮ್ಮ, ಅಮಾಸೆಬೈಲಿನ ವಿಠ್ಠಲ ಶೆಟ್ಟಿ…
