Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಶುಭದಾ ಆಂಗ್ಲ ಮಾಧ್ಯಮ ಶಾಲೆ ಕಿರಿಮಂಜೇಶ್ವರದಲ್ಲಿ ’ಶಿಕ್ಷಕರು ಮತ್ತು ರಕ್ಷಕರ ನಡುವಿನ ಭಾಂದವ್ಯ ಹೆಚ್ಚಿಸುವ ಉದ್ದೇಶದಿಂದ ಇತ್ತೀಚಿಗೆ ’ಶಿಕ್ಷಕ- ರಕ್ಷಕ’ ಸಭೆಯನ್ನು ಕರೆಯಲಾಯಿತು. ಪೋಷಕರು ಶಾಲೆಗೆ ಭೇಟಿ ನೀಡಿ ತಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಯ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಶಾಲಾ ಸಂಸ್ಥಾಪಕರಾದ ಡಾ. ಎನ್. ಕೆ. ಬಿಲ್ಲವ, ಆಡಳಿತ ಮಂಡಳಿಯ ಬಿ.ಎ.ರಝಾಕ್ ಮತ್ತು ಶಾಲಾ ಮುಖ್ಯೋಪಾಧ್ಯಾಯರಾದ ಪ್ರವೀಣ್ ಕುಮಾರ್ ಕೆ.ಪಿ. ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹಿಂದಿನ ಸಾಮಾನ್ಯ ಸಭೆಯನ್ನು ರದ್ದು ಮಾಡಲಾಗಿತ್ತೇ? ವಿಶೇಷ ಸಾಮಾನ್ಯ ಕರೆಯುವ ಬಗ್ಗೆ ಪತ್ರ ಬರೆದಿದ್ದರೂ ಸ್ಪಂದಿಸಿಲ್ಲ ಏಕೆ? ಹೀಗೆ ವಿರೋಧ ಪಕ್ಷದ ಪ್ರಶ್ನೆಯಿಂದ ಆರಂಭಗೊಂಡ ಗದ್ದಲ ಸಭೆಯ ಅರ್ಧ ಅವಧಿಯನ್ನು ನುಂಗಿಹಾಕಿತ್ತು. ಕೆಲವು ಸದಸ್ಯರು ತಮ್ಮ ಘನತೆಯನ್ನೂ ಮರೆತು ತೀರಾ ವೈಯಕ್ತಿಕವಾಗಿ ನಿಂದಿಸಿಕೊಳ್ಳುವ ಪ್ರಸಂಗವೂ ನಡೆದು ಅಭಿವೃದ್ಧಿಯ ಚರ್ಚೆಯ ಹೊರತಾಗಿ ವೈಯಕ್ತಿಕ ಸಮರ ಏರ್ಪಟ್ಟಿತ್ತು. ಇದು ಕುಂದಾಪುರ ಪುರಸಭೆ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಪ್ರಮುಖ ಚಿತ್ರಣ. ಹಿಂದಿನ ಸಭೆ ನಂತರ ವಿಶೇಷ ಸಭೆ ಕರೆಯುವಂತೆ ಪತ್ರಕೊಟ್ಟಿದ್ದರೂ ಅದಕ್ಕೆ ಉತ್ತರ ನೀಡಿಲ್ಲ. ವಿರೋಧ ಪಕ್ಷದ ಮಾತಿಗೆ ಕಿಮ್ಮತ್ತಿಲ್ಲವಾ. ನಮ್ಮ ಪ್ರಶ್ನೆಗೆ ಉತ್ತರ ಬೇಕು ಎಂದು ಚಂದ್ರಶೇಖರ ಖಾರ್ವಿ, ಶ್ರೀಧರ ಶೇರಿಗಾರ್ ರವಿಕಲಾ ಗಣೇಶ್ ಶೇರಿಗಾರ್, ಪ್ರಭಾಕರ ಕೋಡಿ ಒತ್ತಾಯಿಸಿದರು. ಮೂರು ದಿನದೊಳಗೆ ಸದಸ್ಯರ ಪ್ರಶ್ನೆಗ ಉತ್ತರ ಕೊಡುತ್ತೇನೆ ಎಂದು ಅಧ್ಯಕ್ಷರು ಭರವಸೆ ನೀಡಿದರಾದರೂ ಈಗಲೇ ಹಿಂಬರಹ ನೀಡಬೇಕೆಂದು ಪಟ್ಟು ಹಿಡಿದರು. ಫೆರ್ರಿ ವಾರ್ಡ್…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನವೀಕೃತ ಶ್ರೀ ವ್ಯಾಸರಾಜ ಮಠಕ್ಕೆ ವಿಧಾನ ಪರಿಷತ್ ಮಾಜಿ ಸಭಾಪತಿ ಆರ್.ವಿ ಸುದರ್ಶನ್ ಮತ್ತು ಕಾರ್ಕಳ ಶಾಸಕ ಸುನೀಲ್ ಕುಮಾರ್ ಬೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಪ್ರಧಾನ ಕಾರ್ಯದರ್ಶಿ ಶಿವನಾಂದ ಗಾಣಿಗ ಗಂಗೊಳ್ಳಿ, ಕೋಶಧಿಕಾರಿ ಶಂಕರನಾರಾಯಣ ಗಾಣಿಗ ಬೀಜಾಡಿ, ಸಮಾಜದ ಮುಖಂಡರಾದ ಕೊಗ್ಗ ಮಾಸ್ಟರ್, ಸುಬ್ರಮಣ್ಯ ಗಾಣಿಗ, ನಾರಾಯಣ ಗಾಣಿಗ, ಪ್ರಭಾಕರ್ ಬಿ ಕುಂಭಾಸಿ, ಬಸ್ರೂರು ಗ್ರಾಮ ಪಂಚಾಯತ್ ಸದಸ್ಯ ನಾಗರಾಜ ಗಾಣಿಗ, ಕೋಟೇಶ್ವರ ಗಾಣಿಗ ಯುವ ಸಂಘಟನೆ ಅಧ್ಯಕ್ಷ ಬಿ.ಜಿ.ನಾಗರಾಜ ಗಾಣಿಗ, ಬಸ್ರೂರು ಗಾಣಿಗ ಯುವ ಸಂಘಟನೆ ಅಧ್ಯಕ್ಷ ರಾಘವೇಂದ್ರ ಗಾಣಿಗ, ರಾಜೇಶ್ ಬಸ್ರೂರು ಮೊದಲಾದವರೂ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮಾಸಿಕ ಸಭೆಯು ಅಕ್ಷರಶಃ ಹಾದಿ ರಂಪವಾಗಿ ಮಾರ್ಪಟ್ಟಿತ್ತು. ಹಿಂದಿನಿಂದಲೂ ವೈಯಕ್ತಿಕವಾದ ವಿಚಾರಗಳ ಚರ್ಚೆಗಳಿಗೆ ಸಾಕ್ಷಿಯಾಗುತ್ತಿದ್ದ ಮಾಸಿಕ ಸಭೆಯಲ್ಲಿ, ಮಂಗಳವಾರದಂದು ಸದಸ್ಯರು ತಮ್ಮ ಎಲ್ಲೆ ಮೀರಿ ವರ್ತಿಸಿದ್ದರು. ಸಾರ್ವಜನಿಕರ ಸಮಸ್ಯೆಗಳಿಗೆ ಧ್ವನಿಯಾಗಬೇಕಿದ್ದ ಸಭೆಯಲ್ಲಿ ಮಾಜಿ ಉಪಾಧ್ಯಕ್ಷೆ ನೀಡಿದ ಮಹಿಳಾ ದೌರ್ಜನ್ಯದ ದೂರಿನ ವಿಚಾರ ಪ್ರಸ್ತಾಪವಾಗಿ ಸಾಮಾನ್ಯ ಸಬೇ ರಣರಂಗವಾಯಿತು. ಹಿರಿಯ ಸದಸ್ಯರು ಸಭೆಯನ್ನು ಶಾಂತಗೊಳಿಸುವ ಪ್ರಯತ್ನ ಮಾಡಿದರೂ, ವೈಯಕ್ತಿಕ ಕೆಸರೆರಚಾಟದಲ್ಲಿಯೇ ಸಭೆ ಮುಂದುವರಿತು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯವರನ್ನು ಮೂಖ ಪ್ರೇಕ್ಷಕರನ್ನಾಗಿಸಿತು. ಮಧ್ಯಾಹ್ನ ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಸುಮತಿ ನಾಯಿರಿ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಸಭೆಯ ಪ್ರಾರಂಭದಲ್ಲಿ ಪಟ್ಟಣ ಪಂಚಾಯಿತಿಯಲ್ಲಿ ಹೊಂಡ, ಕೆಸರು ತುಂಬಿರುವ ರಸ್ತೆಗಳಿಗೆ ಸಭೆಯ ಗಮನಕ್ಕೆ ತರದೆ, ಸದಸ್ಯರ ಗಮನಕ್ಕೂ ತರದೆ ಮಣ್ಣು ತುಂಬಿಸುವ ಕಾಮಗಾರಿ ನಡೆಸಿ ಘಟನೋತ್ತರ ಮಂಜೂರಾತಿ ಪಡೆಯುವ ವಿಚಾರ ಪ್ರಸ್ತಾಪವಾಯಿತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹಿರಿಯ ಸದಸ್ಯ ಶ್ರೀನಿವಾಸ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಂದಿನ ವಿದ್ಯಾರ್ಥಿಗಳಲ್ಲಿ ಹಾಸ್ಯ ಪ್ರಜ್ಞೆ ಮಾಯವಾಗುತ್ತಿದೆ. ದುಗುಡ ಹೆಚ್ಚುತ್ತಿದೆ. ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ವೃಧ್ಧಿಯಾಗಲು, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವ ಅಗತ್ಯವಿದೆ. ವಿದ್ಯಾರ್ಥಿಗಳು ಒಳ್ಳೆಯ ಹವ್ಯಾಸಗಳನ್ನು ವೃಧ್ಧಿಸಿಕೊಂಡು, ಸದಭಿರುಚಿಗಳನ್ನು ಬೆಳೆಸಿಕೊಂಡು ಮುಂದುವರಿದಲ್ಲಿ ಆರೋಗ್ಯಕರ ಸಮಾಜ ನಿರ್ಮಾಣವಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ, ಹುರಿದುಂಬಿಸುವ ಮಹತ್ತರ ಜವಾಬ್ದಾರಿ ಶಿಕ್ಷಕ ವರ್ಗದ ಮೇಲಿದೆ ಎಂದು ನಿವೃತ್ತ ಪ್ರಾಚಾರ್ಯರೂ, ಬರಹಗಾರ ಡಾ. ಜಯಪ್ರಕಾಶ್ ಮಾವಿನಕುಳಿಯವರು ನುಡಿದರು. ಕುಂದಾಪುರದ ಆರ್ ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆದ, ಆರ್ ಎನ್ ಶೆಟ್ಟಿ ಪದವಿಪೂರ್ವ ಕಾಲೇಜಿನ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಬಿ ಎಂ ಸುಕುಮಾರ ಶೆಟ್ಟಿ ಮಾತನಾಡಿ ನಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಉತ್ತೇಜನ ನೀಡಲಾಗುತ್ತಿದೆ. ಆಧುನಿಕ ಕಾಲದ ಎಲ್ಲಾ ಸ್ಪರ್ಧೆ , ಪೈಪೋಟಿಗಳಿಗೆ ಸಿಧ್ಧರಾಗುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು. ಕುಂದಾಪುರ ಎಜುಕೇಶನ್ ಸೊಸೈಟಿಯ ಉಪಾಧ್ಯಕ್ಷರಾದ ಪ್ರೊ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ಸಂಘದಿಂದ ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನದಲ್ಲಿ ವಿಶೇಷ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಸಿ.ಎ ಶ್ರೀ ವಿಶ್ವಾಸ್ ಪ್ರಭು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎನ್.ಪಿ.ನಾರಾಯಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ.ಜಿ.ಎಸ್.ಹೆಗಡೆ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ವ್ಯವಹಾರ ಅಧ್ಯಯನ ವಿಭಾಗದ ಮುಖ್ಯಸ್ಥರಾದ ಅರ್ಚನಾ ಅರವಿಂದ, ವಾಣಿಜ್ಯ ಮತ್ತು ವ್ಯವಹಾರ ಅಧ್ಯಯನ ಸಂಘದ ಸಂಯೋಜಕಿಯರಾದ ಓಂಶ್ರೀ ಮತ್ತು ಭವ್ಯಾ ಯು.ಪಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಅಶ್ಲಿನ್ ಕಾರ್ಯಕ್ರಮ ನಿರ್ವಹಿಸಿದರು.ಶೃದ್ಧಾ ಸಾಧನೆಗೈದ ವಿದ್ಯಾರ್ಥಿಗಳ ಹೆಸರನ್ನು ವಾಚಿಸಿದರು. ವಿದ್ಯಾರ್ಥಿ ಪ್ರಥ್ವಿ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಲೆಗಳು ಬದುಕಿಗೆ ದಾರಿತೋರಿಸುವ ಜತೆಗೆ ಭಾವನಾತ್ಮಕ ಜೀವನದ ಮೌಲ್ಯಗಳು ಬೆಳೆಯಲು ಸಹಕಾರಿಸುತ್ತದೆ. ಆಧುನಿಕ ಯುಗದಲ್ಲಿ ಬೇರೆ ಬೇರೆ ಮಾಧ್ಯಮಗಳ ಮೂಲಕ ಯುವಜನತೆ ದಾರಿ ತಪ್ಪುವ ಅವಕಾಶಗಳೇ ವಿಸ್ತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕವಾದ ಚೌಕಟ್ಟು ಒಂದು ಉತ್ತಮ ವ್ಯಕ್ತಿತ್ವ ರೂಪುಗಳ್ಳುವಂತೆ ಮಾಡುತ್ತವೆ ಎಂದು ನಿವೃತ್ತ ಅಧ್ಯಾಪಕ ಹಾಗೂ ಆಕಾಶವಾಣಿ ಕಲಾವಿದ ಹ್ಯಾರಾಡಿ ಚಂದ್ರಶೇಖರ ಕೆದ್ಲಾಯ ಹೇಳಿದರು. ಇಲ್ಲಿನ ಶ್ರೀ ಮೂಕಾಂಬಿಕಾ ಸಭಾಭವನದಲ್ಲಿ ಬುಧವಾರ ನಡೆದ ಶ್ರೀ ಮೂಕಾಂಬಿಕಾ ದೇವಳದ ಪದವಿ ಪೂರ್ವ ಕಾಲೇಜಿನ ೨೦೧೬-೧೭ನೇ ಶೈಕ್ಷಣಿಕ ಸಾಲಿನ ಎನ್‌ಎಸ್‌ಎಸ್, ಯಕ್ಷಗಾನ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಕಲೆಗಳಲ್ಲಿ ಅದರದ್ದೇ ಆದ ಒಂದೊಂದು ಸಂದೇಶ ಅಡಗಿದೆ. ಇವುಗಳು ನೆಲೆ ಕಂಡುಕೊಳ್ಳಬೇಕಾದರೇ ಅವುಗಳ ಬಗೆಗಿನ ಅರಿವು ಅಗತ್ಯ. ನಮ್ಮ ಆಸಕ್ತಿಗಳೇ ಇದರ ಸಿರಿವಂತಿಗೆಗೆ ಸಹಕಾರಿಯಾಗುತ್ತದೆ. ಬಾಲ್ಯದಲ್ಲಿಯೇ ಇದರಲ್ಲಿ ಅಭಿರುಚಿ ಬೆಳೆಸಿಕೊಂಡಾಗ ನಮ್ಮಲ್ಲಿನ ಆಸಕ್ತಿ ಹೆಚ್ಚಾಗಿ ಪರಸ್ಪರ ಸಹಕಾರದಿಂದ ನಮ್ಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಪರಸ್ಪರ ಪ್ರೀತಿ, ವಿಶ್ವಾಸದಿಂದ ಬಾಳಿದಾಗ ಮಾತ್ರ ಸಂಪತ್ತು, ಯಶಸ್ಸು ಸಿಗುತ್ತದೆ. ಈ ನೆಲೆಯಲ್ಲಿ ಕ್ಲಬ್ಬಿನ ಎಲ್ಲಾ ಸಹೋದರಿಯರು ಊರಿಗೆ ಹಾಗೂ ಸಮಾಜಕ್ಕೆ ಮಾದರಿಯಾಗುವಂತಹ ಕೆಲಸಗಳನ್ನು ಮಾಡುವಂತಾದಾಗ ಮಾತ್ರ ಕತ್ತಲೆಯ ಒಳಗಿರುವ ಜ್ಞಾನ, ಭರವಸೆಗಳೆಂಬ ಬೆಳಕಿನ ಬೀಜದಂತೆ ಭವಿಷ್ಯದ ಬಾಳು ಬೆಳಗುತ್ತದೆ ಎಂದು ಇನ್ನರ ವೀಲ್ ಜಿಲ್ಲಾ 3182ರ ಡಿಸ್ಟ್ರಿಕ್ಟ್ ಚೇರ್‌ಮನ್ ಚಿತ್ರಾ ರಾವ್ ಹೇಳಿದರು. ಬೈಂದೂರು ಇನ್ನರ್ ವೀಲ್ ಕ್ಲಬ್ ಘಟಕಕ್ಕೆ ಅಧಿಕೃತ ಭೇಟಿನೀಡಿ ಸಂಜೆ ರೋಟರಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಮಹಿಳೆಯರ ರಕ್ಷಣೆಯ ಬಗ್ಗೆ ಅಲ್ಲಲ್ಲಿ ಜಾಗೃತಿ ಸಮಾವೇಶ, ಕಷ್ಟದಲ್ಲಿರುವವರಿಗೆ, ನೊಂದವರಿಗೆ ತಕ್ಷಣ ಸ್ಪಂದಿಸುವ ಹಾಗೂ ಮಕ್ಕಳಿಗೆ ಪ್ರಕೃತಿ ರಕ್ಷಣೆ, ನೀರಿನ ಮಿತ ಬಳಕೆ ಮತ್ತು ಆರೋಗ್ಯದ ಬಗ್ಗೆ ಮಾರ್ಗದರ್ಶನ ನೀಡುವ ಶೈಕ್ಷಣಿಕ ಕಾರ್ಯಕ್ರಮ ನಡೆಸುವ ಮೂಲಕ ಮಾನವೀಯತೆಯ ಸೇವೆ ನಿಮ್ಮಿಂದಾಗಲಿ ಎಂದರು. ಇನ್ನರ‍್ವೀಲ್ ಕ್ಲಬ್ ಅಧ್ಯಕ್ಷೆ ಆಶಾ ಕಿಶೋರ್ ಅಧ್ಯಕ್ಷತೆವಹಿಸಿ ಸ್ವಾಗತಿಸಿದರು. ಈ ಸಂದರ್ಭ ಉಪ್ಪಂದ ಜಿಎಸ್‌ಬಿ ಸಮಾಜದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಹಿಸ್ ಗ್ರೇಸ್ ಮಾಂಟೆಸ್ಸರಿ ಹೌಸ್ ಆಫ್ ಚಿಲ್ಡ್ರನ್ ಕೋಡಿಯಲ್ಲಿ ಮರಿಯಾ ಮಾಂಟೆಸ್ಸರಿ ಯವರ ಜನ್ಮದಿನವನ್ನು ಆಚರಣೆ ಮಾಡಲಾಯಿತು. ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಹಾಜಿ ಮಾಸ್ಟರ್ ಮೆಹಮೂದ್ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿದ್ದರು. ಬ್ಯಾರೀಸ್ ಸೀಸೈಡ್ ಪಬ್ಲಕ್ ಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ರೇಷ್ಮಾ ಡಿ’ಸೋಜರವರು ಉಪಸ್ಥಿತರಿದ್ದರು. ಮಾಂಟೆಸ್ಸರಿ ಶಿಕ್ಷಕಿ ಜೆನಿಫರ್ ಲೂಯಿಸ್ ಮರಿಯಾ ಮಾಂಟೆಸ್ಸರಿ ಯವರ ಕಿರು ಪರಿಚಯವನ್ನು ನೀಡಿದರು. ಮಾಂಟೆಸ್ಸರಿ ವಿದ್ಯಾರ್ಥಿಗಳಾದ ಮೊಹಮ್ಮದ್ ರಿಹಾನ್ ಮತ್ತು ಫಾತಿಮಾ ಸುಹಾನಾ ಸ್ವಾಗತಿಸಿದರು. ವಿದ್ಯಾರ್ಥಿನಿ ರಾಫಿದಾ ವಂದಿಸಿದರು. ಮಾಂಟೆಸ್ಸರಿ ಶಿಕ್ಷಕಿ ಗಾಯಿತ್ರಿ ಕಾರ್ಯಕ್ರಮವನ್ನು ನಿರ್ವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಟೆಂಪೋ, ರಿಕ್ಷಾ, ಟ್ಯಾಕ್ಸಿ ಮಾಲಕರ ಮತ್ತು ಚಾಲಕರ ವಿವಿಧೋದ್ದೇಶ ಸಹಕಾರ ಸಂಘ ನಿ. ಬೈಂದೂರು ಇದರ ಮುಂದಿನ ಐದು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ವಿಶ್ವನಾಥ ಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ವೆಂಕಟೇಶ ಪೂಜಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ನಿರ್ದೇಶಕರುಗಳಾಗಿ ಮಹಾಬಲ ದೇವಾಡಿಗ, ಮುಡೂರ ಪೂಜಾರಿ ಯಡ್ತರೆ, ಪ್ರವೀಣ ಕುಮಾರ್, ಮುಡೂರ ಪೂಜಾರಿ ನೀರ‍್ಗದ್ದೆ, ಮಧುಕರ ಶೇಟ್, ಸಂದೀಪ್, ಟಿ. ವಿಜಯ, ಮಲ್ಲಿಕಾ ಎ. ಪೂಜಾರಿ ಹಾಗೂ ಗಂಗಾದೇವಿ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More