ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಎಜ್ಯುಕೇಶನ್ ಸೊಸೈಟಿ ಪ್ರವರ್ತಿತ(ರಿ.) ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಧ್ವಜಾರೋಹಣವನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಬಿ. ಎಂ. ಸುಕುಮಾರ್ ಶೆಟ್ಟಿ ನೆರವೇರಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ರಾಜೇಶ್ ಶೆಟ್ಟಿ, ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ್ ಟಿ. ಎನ್., ಕಾಲೇಜಿನ ಬೋಧಕ-ಬೋಧಕೇತರರ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕವನ ವಂದಿಸಿದರು, ಪ್ರಗತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Author: ನ್ಯೂಸ್ ಬ್ಯೂರೋ
ದೇಶ ಸೇವೆಗೆ ಸದಾ ಸಿದ್ದರಿರಬೇಕು: ನಿವೃತ್ತ ಯೋಧ ಜಾನ್ಸಿ ಥೋಮಸ್ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ದೇಶಭಕ್ತಿ ಹಾಗೂ ಕಠಿಣ ಪರಿಶ್ರಮದಿಂದ ನಮ್ಮ ಸೈನಿಕರು ಗಡಿ ಕಾಯುತ್ತಿದ್ದಾರೆ. ವಿದ್ಯಾರ್ಥಿಗಳು ಸೈನಿಕರ ತ್ಯಾಗ ಬಲಿದಾನಗಳನ್ನು ಅರಿತು ಸದಾ ದೇಶಸೇವೆಗೆ ಸಿದ್ದರಿರಬೇಕು. ಎಂದು ನಿವೃತ್ತ ಯೋಧ ಜಾನ್ಸಿ ಥೋಮಸ್ ಹೇಳಿದರು. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಬೈಂದೂರು, ರೋಟರಿ ಕ್ಲಬ್ ಬೈಂದೂರು ಹಾಗೂ ಕಸಾಪ ಬೈಂದೂರು ಹೋಬಳಿ ಘಟಕದ ಸಹಯೋಗದಲ್ಲಿ ಮಾದರಿ ಶಾಲೆಯಲ್ಲಿ ಜರುಗಿದ 70ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವೀಂದ್ರ ಶಾನುಭೋಗ್ ಧ್ವಜಾರೋಹಣ ನೆರವೇರಿಸಿದರು. ರೋಟರಿ ಬೈಂದೂರು ಅಧ್ಯಕ್ಷ ಮಂಜುನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜೊತೆ ಕಾರ್ಯದರ್ಶಿ ಯು. ಗೋಪಾಲ ಶೆಟ್ಟಿ, ಸಮೂಹ ಸಂಪನ್ಮೂಲ ವ್ಯಕ್ತಿ ದಿನಕರ ಎಚ್., ರಿಕ್ಷಾ, ಟೆಂಪೋ, ಟ್ಯಾಕ್ಸಿ ಯೂನಿಯನ್ ಅಧ್ಯಕ್ಷ ಮಹಾಬಲ ದೇವಾಡಿಗ, ಇನ್ನರ್ ವೀಲ್ ಬೈಂದೂರು ಅಧ್ಯಕ್ಷೆ ಆಶಾ ಕಿಶೋರ್, ಉಪಸ್ಥಿತರಿದ್ದರು. ರಿಕ್ಷಾ, ಟೆಂಪೋ, ಟ್ಯಾಕ್ಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆರ್ಥಿಕ ಅಭಿವೃದ್ಧಿಯ ಶಕ್ತಿ. ಅಂತರಾಷ್ಟ್ರೀಯ ವ್ಯವಹಾರ ಅಭಿವೃದ್ಧಿಯನ್ನೊಳಗೊಂಡಂತೆ ಅರ್ಥಶಾಸ್ತ್ರದ ಮೂಲ ವಸ್ತುಸ್ಥಿತಿಯನ್ನು ವೈಜ್ಞಾನಿಕ ತಳಹದಿಯೊಂದಿಗೆ ಅಂತರಾಷ್ಟ್ರೀಯ ಮಾರುಕಟ್ಟೆಗೆ ಪರಿಚಯಿಸುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಹಣಕಾಸು ಅಧಿಕಾರಿ, ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು. ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ಸಂಘದ ಆಶ್ರಯದಲ್ಲಿ ನಡೆದ ’ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಯಾಂತ್ರಿಕ ಕೌಶಲ್ಯ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಚೇತನ್ ಶೆಟ್ಟಿ ಕೋವಾಡಿ, ಶ್ರೀ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರು ಮತ್ತು ಸಂಘದ ಸಂಚಾಲಕರಾದ ಸುಧಾಕರ್ ಪಾರಂಪಳ್ಳಿ ಸ್ವಾಗತಿಸಿದರು. ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕರಾದ ಮಹೇಶ್ ಕೊಠಾರಿ ಅತಿಥಿಗಳನ್ನು ಪರಿಚಯಿಸಿದರು, ವಿದ್ಯಾರ್ಥಿನಿ ಕಾವ್ಯಾಶ್ರೀ ಕಾರ್ಯಕ್ರಮ ನಿರೂಪಿಸಿದರು, ಸಂಘದ ಸಹ ಸಂಚಾಲಕಿ ಅವಿತಾ ಕೊರಿಯಾ ವಂದಿಸಿದರು.
ಕುಂದಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜೀವ ವಿಮಾ ನಿಗಮ ಉಡುಪಿ ವಿಭಾಗದ ವತಿಯಿಂದ ಎಂಡಿಆರ್‌ಟಿ ಸಾಧನೆಗೈದ ಕುಂದಾಪುರ ಶಾಖೆಯ ಜೀವವಿಮಾ ಪ್ರತಿನಿಧಿ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಅವರನ್ನು ಮಂಗಳೂರಿನ ದೀಪಾ ಕಂಫರ್ಟ್ ಹೋಟೆಲ್ ಸಭಾಂಗಣದಲ್ಲಿ ನಡೆದ ಎಂಡಿಆರ್‌ಟಿ ಸಾಧಕರ ಸನ್ಮಾನ ಸಮಾರಂಭದಲ್ಲಿ ಉಡುಪಿ ವಿಭಾಗದ ಸೀನಿಯರ್ ಡಿವಿಜನಲ್ ಮೇನೆಜರ್ ವಿ. ವಿಶ್ವೇಶ್ವರ ರಾವ್ ಅವರು ಸನ್ಮಾನಿಸಿದರು. ಕಳೆದ ಮೂರು ವರ್ಷಗಳಿಂದ ಎಂಡಿಆರ್‌ಟಿ ಸದಸ್ಯರಾಗಿರುವ ಇವರು ಭಾರತೀಯ ಜೀವ ವಿಮಾ ನಿಗಮ ಕುಂದಾಪುರ ಶಾಖೆಯ ೫೦ ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ನಿವೃತ್ತ ಜೀವವಿಮಾ ಅಭಿವೃದ್ಧಿ ಅಧಿಕಾರಿ ಕೆ.ಕರುಣಾಕರ ಶೆಟ್ಟಿ ಹಾಗೂ ಶಾಖೆಯ ಮುಖ್ಯ ವ್ಯವಸ್ಥಾಪಕ ಕೆ. ವಿ. ಕುಲಕರ್ಣಿ, ಸಹಾಯಕ ವ್ಯವಸ್ಥಾಪಕ ಗುರುರಾಜ್ ಎಂ.ಎ ಅವರ ಮಾರ್ಗದರ್ಶನದಲ್ಲಿ ಪ್ರಥಮ ಗೆಲಾಕ್ಸಿ ಕ್ಲಬ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದ ಆರಂಭಗೊಂಡಿದ್ದ ಅಖಂಡ ಭಜನಾ ಸಪ್ತಾಹ ಮಹೋತ್ಸವು ಸೋಮವಾರ ದೀಪ ವಿಸರ್ಜನೆಯೊಂದಿಗೆ ಸಮಾಪನಗೊಂಡಿದೆ. ಭಜನಾ ಸಪ್ತಾಹ ಮಹೋತ್ಸವದ ಅಂಗವಾಗಿ ಸಂಜೆ ನಗರ ಭಜನೆ, ರಾತ್ರಿ ಶ್ರೀದೇವರಿಗೆ ವಿಶೇಷ ಪೂಜೆ ಮೊದಲಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ಆಗಸ್ಟ್ 8ರಂದು ಆಗಸ್ಟ್ 14ರವರೆಗೆ ಊರ ಪರ ಊರುಗಳಿಂದ ಆಗಮಿಸಿದ ಸುಮಾರು ೩೦ಕ್ಕೂ ಮಿಕ್ಕಿ ಭಜನಾ ತಂಡಗಳು ಭಜನಾ ಸೇವೆ ನಡೆಸಿಕೊಟ್ಟರು. ಏಳು ದಿನ ಶ್ರೀದೇವರಿಗೆ ವಿವಿಧ ಪೂಜೆ ಪುನಸ್ಕಾರಗಳು ವಿಧಿವಿಧಾನಗಳೊಂದಿಗೆ ಭಕ್ತಿಶ್ರದ್ಧೆಯಿಂದ ವಿಜೃಂಭಣೆಯಿಂದ ನಡೆಯಿತು. ಅಸಂಖ್ಯ ಭಕ್ತರು ಅಖಂಡ ಭಜನಾ ಸಪ್ತಾಹ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀದೇವರ ಪ್ರಸಾದ ಸ್ವೀಕರಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಖ್ಯಾತ ಗೋಡೆ ಸ್ಟುಡಿಯೋ ಮಾಲಕ ದಿನೇಶ್ ಗೋಡೆ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಕಾಪು ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಕಿ ತಗುಲಿ ಸಂಪೂರ್ಣ ಸುಟ್ಟು ಕರಲಾಗಿದ್ದು, ಕಾರು ಚಲಾಯಿಸುತ್ತಿದ್ದ ದಿನೇಶ್ ಅವರ ಅದೃಷ್ಟವಶಾತ್ ಪ್ರಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ವಿವರ ಪೋಟೋಗ್ರಫಿ ಕಾರ್ಯನಿಮಿತ್ತ ಮೂಡುಬಿದಿರೆ ಸಮೀಪದ ಮುಡ್ಕೂರಿಗೆ ತೆರಳಿ ಅಲ್ಲಿಂದ ಕುಂದಾಪುರಕ್ಕೆ ಹಿಂತಿರುಗುತ್ತಿದ್ದ ವೇಳೆ ಕಾಪು ಪ್ಲೈಓವರ್‌ನಲ್ಲಿ ಅವರ ವೆಗನಾರ್ ಕಾರು ಬೆಂಕಿಗಾಹುತಿಯಾಗಿದೆ. ಕಾರು ಇದ್ದಕ್ಕಿಂತ ಜರ್ಕ್ ಹೊಡೆದು ಇಂಜಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿತ್ತು. ಕಾರು ಚಲಾಯಿಸುತ್ತಿದ್ದ ದಿನೇಶ್, ಕೂಡಲೇ ಹೊರಬಂದಿದ್ದು ನೋಡನೋಡುತ್ತಿದ್ದಂತೆಯೇ ಕಾರು ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳ ಬೆಂಕಿ ನಂದಿಸುವ ಹೊತ್ತಿಗೆ ಕಾರು ಸಂಪೂರ್ಣ ಸುಟ್ಟು ಹೋಗಿದ್ದವು. ಕಾಪು ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಪ್ರತಿಷ್ಠಿತ ವಿದ್ಯಾಸಂಸ್ಥೆ ಗುರುಕುಲ ಪಬ್ಲಿಕ್ ಸ್ಕೂಲ್‌ನಲ್ಲಿ ೭೦ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಬಾಂಡ್ಯ ಎಜ್ಯುಕೇಶನ್ ಸಂಸ್ಥೆಯ ಜಂಟಿ ಕಾರ‍್ಯನಿರ್ವಹಕರಾದ ಶ್ರೀ ಸುಭಾಶ್ಚಂದ್ರ ಶೆಟ್ಟಿ ಧ್ವಜಾರೋಹಣ ಮಾಡಿದರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾವಿರಾರು ವೀರರನ್ನು ಸ್ಮರಿಸಿ ಅವರು ಗಳಿಸಿಕೊಟ್ಟ ಸ್ವಾತಂತ್ರ್ಯದ ಸದುಪಯೋಗ ಮಾಡಿಕೊಂಡು ಭಾರತವನ್ನು ಮುನ್ನಡೆಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಧ್ವಜಾರೋಹಣ ಸಂದರ್ಭದಲ್ಲಿ ಬಾಂಡ್ಯ ಎಜ್ಯುಕೇಶನ್ ಸಂಸ್ಥೆಯ ಜಂಟೀ ಕಾರ‍್ಯನಿರ್ವಹಕಿ ಅನುಪಮ ಎಸ್.ಶೆಟ್ಟಿ, ಶಾಲೆಯ ಪ್ರಾಂಶುಪಾಲ ಸಾಯಿಜು ನಾಯರ್, ಗುರುಕುಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಚೆನ್ನಬಸಪ್ಪ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಧ್ವಜರೋಹಣ ಕಾರ‍್ಯಕ್ರಮದ ನಂತರ ಗುರುಕುಲ ಶಾಲೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ, ಕರಾಟೆ ಪ್ರದರ್ಶನ ಹಾಗೂ ಸ್ಕೇಟಿಂಗ್ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ವಿದ್ಯಾರ್ಥಿಗಳ ನಾಲ್ಕು ಪಂಗಡಗಳಲ್ಲಿ ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಹಾಡುಗಳ ಸ್ಪರ್ಧೆಯನ್ನು ಮಾಡಿ ವಿಜೇತ ತಂಡಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇಂಗ್ಲೀಷ್ ಅಧ್ಯಾಪಕ ರಾಮಚಂದ್ರ ಹೆಬ್ಬಾರ್ ರವರು ಕಾರ‍್ಯಕ್ರಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭೦ನೇ ಸ್ವಾತಂತ್ರೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯ ಶೈಕ್ಷಣಿಕ ಸಲಹಾಗಾರರಾದ ಎಚ್. ಎನ್. ಐತಾಳ್ ಧ್ವಜಾರೋಹಣ ಮಾಡಿದರು. ಮುಖ್ಯೋಪಾಧ್ಯಾಯರಾದ ಪ್ರವೀಣ ಕುಮಾರ್, ಕೆ. ಪಿ. ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲೆಯ ಸಂಸ್ಥಾಪಕಡಾ. ಎನ್. ಕೆ. ಬಿಲ್ಲವ, ಕಾರ್ಯದರ್ಶಿ ಬಿ. ಎ. ರಝಾಕ್ ಮತ್ತು ಸಹಶಿಕ್ಷಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲೆಯ ಶಿಕ್ಷಕರಾದ ಶಂಶುದ್ದೀನ್‌ರವರು ತಮ್ಮ ಪರಿಣಾಮಕಾರಿ ಭಾಷಣದಿಂದ ಮಕ್ಕಳ ಮನಸ್ಸನ್ನು ಗೆದ್ದರು. ವಿವಿಧ ರೀತಿಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ವಿದ್ಯಾರ್ಥಿಗಳಾದ ಕು. ಅಖಿಲಾ ಹೆಬ್ಬಾರ್ ನಿರೂಪಣಿಯನ್ನು, ಕು. ಸಿಂಚನ ಜಿ ನಾಯ್ಕ್ ಸ್ವಾಗತವನ್ನು, ಕು. ಕವನ ವಂದನೆಯನ್ನು ಮಾಡಿದರು. ಕೊನೆಯಲ್ಲಿ ಸಿಹಿಯನ್ನು ವಿತರಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಪೂರ್ಣವಿರಾಮ ಹಾಕಲಾಯಿತು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಮೂಡುಬಿದಿರೆ, ಆ.15: ವೈವಿಧ್ಯಮಯ ಹೂಗಳಿಂದ ಅಲಂಕೃತಗೊಂಡ ವಿಶಾಲ ಬಯಲು ರಂಗಮಂದಿರ. ಆ ವಿಶಾಲ ಆವರಣದಲ್ಲಿ ನೆರೆದ ಸುಮಾರು 24,000 ವಿದ್ಯಾರ್ಥಿಗಳು. ಎಲ್ಲರ ಕೈಯಲ್ಲೂ ಮಿಂಚುತ್ತಿದ್ದ ತ್ರಿವರ್ಣ ಧ್ವಜಗಳು. ಸಾವಿರ ಕಂಠಗಳಿಂದ ಹೊರಹೊಮ್ಮುತ್ತಿದ್ದ ದೇಶಭಕ್ತಿಯ ಗೀತೆ. ಈ ಸಂಭ್ರಮವನ್ನು ಕಣ್ತುಂಬಿಸಿಕೊಳ್ಳುತ್ತಿದ್ದ ಸಾವಿರಾರು ಸಾರ್ವಜನಿಕರು….. ಇದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ವೈಭವದ ನೋಟ. ಪುತ್ತಿಗೆಯ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮಂಟಪದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಅತ್ಯಂತ ವಿಶಿಷ್ಟವಾಗಿ ನಡೆದ ಆಚರಣೆಗೆ 35,000 ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಕ್ಷಿಯಾದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಗಳೂರಿನ ಧರ್ಮಾಧ್ಯಕ್ಷ ಅಲೋಶಿಯಸ್ ಪೌಲ್ ಡಿ’ ಸೋಜ ಧ್ವಜಾರೋಹಣವನ್ನು ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ ಸಂದೇಶ ನೀಡಿದ ಅವರು, ಯುವಶಕ್ತಿಯನ್ನು ಕಟ್ಟಿ ಬೆಳೆಸುವುದೆಂದರೆ ಅದು ದೇಶವನ್ನು ಕಟ್ಟಿದಂತೆ. ಅಗಾಧವಾದ ಶಕ್ತಿಯನ್ನು ಹೊಂದಿರುವ ಬೃಹತ್ ಯುವಸಮುದಾಯ ಇಲ್ಲಿದೆ. ವಿದ್ಯಾರ್ಥಿಗಳು ಮನಸ್ಸು ಮಾಡಿದರೆ ಅಮೋಘವಾದುದನ್ನು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಆಟೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಬಿಟ್ಟುಹೋಗಿದ್ದ ವ್ಯಾನಿಟಿ ಬ್ಯಾಗ್ ಸಹಿತ ಹಣ ಹಾಗೂ ಬಂಗಾರ ಹಿಂದಿರಿಗಿಸುವ ಮೂಲಕ ಕುಂದಾಪುರದ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ. ಕುಂದಾಪುರ ಖಾರ್ವಿಕೇರಿ ನಿವಾಸಿ ಆಟೋರಿಕ್ಷಾ ಚಾಲಕ ವಿಘ್ನೇಶ್ ನಾಯ್ಕ್ ಆಟೋದಲ್ಲಿ ದೊರೆತ ವಸ್ತುಗಳನ್ನು ಮರಳಿಸಿದ ಚಾಲಕ. ಶನಿವಾರ ಬಸ್ರೂರು ನಿವಾಸಿ ಆಸ್ಮಾ ತನ್ನ ಗಂಡ ಮಕ್ಕಳೊಂದಿಗೆ, ವಿಘ್ನೇಶ್ ಖಾರ್ವಿ ಅವರ ಆಟೋದಲ್ಲಿ ತೆರಳಿದ್ದಾಗ ತನ್ನ ವೆನಿಟ್ ಬ್ಯಾಗ್ ಅಲ್ಲಿಯೇ ಬಿಟ್ಟು ಇಳಿದಿದ್ದರು. ಬ್ಯಾಗ್‌ನಲ್ಲಿ ೫.೬ ಪವನ್ ಚಿನ್ನದ ತಾಳಿ, ಮೊಬೈಲ್ ಹಾಗೂ ಸಾವಿರ ರೂ ನಗದಿತ್ತು. ಭಾನುವಾರ ಕುಂದಾಪುರ ಠಾಣೆಗೆ ದೂರು ನೀಡಲು ಬಂದ ಆಸ್ಮಾಗೆ ಅಚ್ಚರಿ ಕಾದಿತ್ತು. ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೈನ್ ಅವರಿಗೆ ವಿಘ್ನೇಶ್ ನಾಯ್ಕ್ ಆಟೋದಲ್ಲಿ ಬಿಟ್ಟುಹೋದ ವಸ್ತುಗಳ ಬಗ್ಗೆ ಮಾಹಿತಿ ನೀಡಿದ್ದು, ಹಿಂದಿರುಗಿಸಲು ಸಹಾಯ ಕೇಳಿದ್ದ. ಆಸ್ಮ ಠಾಣೆಗೆ ಬಂದಿದ್ದರಿಂದ ವಿಘ್ನೇಶ್ ಅವರನ್ನು ಠಾಣೆಗೆ ಕರೆಯಿಸಿ, ಕಳೆದುಕೊಂಡ ವಸ್ತು ಮರಳಿಸಲಾಗಿದೆ./ಕುಂದಾಪ್ರ ಡಾಟ್ ಕಾಂ ಸುದ್ದಿ./
