Author: ನ್ಯೂಸ್ ಬ್ಯೂರೋ

ಪರಿಸ್ಥಿತಿ ನಿಯಂತ್ರಣಕ್ಕೆ ಲಘು ಲಾಠಿ ಪ್ರಹಾರ. ಸ್ಥಳಕ್ಕೆ ಎಸ್ಪಿ ಅಣ್ಣಾಮಲೈ ಭೇಟಿ ಕುಂದಾಪ್ರ ಡಾಟ್ ಕಾಂ ವರದಿ ಬೈಂದೂರು: ಉಪ್ಪುಂದ ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಭಟ್ಕಳದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಸರಕಾರಿ ಬಸ್ಸು ಹಾಗೂ ಹುಬ್ಬಳ್ಳಿ ಮುಂಬೈನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸುಗಳ ನಡುವಿನ ಅಫಘಾತದಲ್ಲಿ ಸರಕಾರಿ ಬಸ್ಸಿನಲ್ಲಿದ್ದ ವಿದ್ಯಾರ್ಥಿಯೋರ್ವ ಗಂಭೀರವಾಗಿ ಗಾಯಗೊಂಡು ದಾರುಣವಾಗಿ ಮೃತಪಟ್ಟ ಘಟನೆಗೆ ನಡೆಯುತ್ತಿದ್ದಂತೆ ಆಕ್ರೋಶಗೊಂಡ ವಿದ್ಯಾರ್ಥಿಗಳು ಹೆದ್ದಾರಿ ಮಧ್ಯೆಯೇ ನಿಂತು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಗೆಡವಿದ ಘಟನೆ ನಡೆದಿದೆ. ಸತತ ಎರಡು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆ ನಡೆಸಿದ ವಿದ್ಯಾರ್ಥಿಗಳು ಬಸ್ ಡ್ರೈವರ್‌ಗಳನ್ನು ಬಂಧಿಸಬೇಕು, ಮೃತರ ಹುಡುಗನ ಕುಟುಂಬಕ್ಕೆ ನ್ಯಾಯ ಒದಗಿಸಬೇಕು, ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಹೆಚ್ವುವರಿ ಸರಕಾರಿ ಬಸ್ಸುಗಳನ್ನು ಓಡಿಸಬೇಕು ಎಂದು ರಸ್ತೆಯಲ್ಲಿಯೇ ಕುಳಿತು ಆಗ್ರಹಿಸಿದರು. ಸರಕಾರಿ ಬಸ್ಸುಗಳಲ್ಲಿ ವಿದ್ಯಾರ್ಥಿಗಳ ಬಗ್ಗೆ ಬೇಜವಾಬ್ದಾರಿ ತೋರುತ್ತಿರುವುದಲ್ಲದೇ ಇತರೆ ಪ್ರಯಾಣಿಕರು ಹತ್ತಿದ ಮೇಲೆ ಬಸ್ ಹತ್ತಿಸಿಕೊಳ್ಳಲಾಗುತ್ತಿದೆ. ನೂರಾರು ವಿದ್ಯಾರ್ಥಿಗಳ ಈ ಭಾಗದಿಂದ ಕಾಲೇಜಿಗೆ ತೆರಳುತ್ತಿದ್ದರೂ ಸಮಯಕ್ಕೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಭಟ್ಕಳದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಸರಕಾರಿ ಬಸ್ಸು ಹಾಗೂ ಹುಬ್ಬಳ್ಳಿ ಮುಂಬೈನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ಸುಗಳ ನಡುವಿನ ಅಫಘಾತದಲ್ಲಿ ಸರಕಾರಿ ಬಸ್ಸಿನಲ್ಲಿದ್ದ ವಿದ್ಯಾರ್ಥಿಯೋಬ್ಬ ಗಂಭೀರವಾಗಿ ಗಾಯಗೊಂಡು ದಾರುಣವಾಗಿ ಮೃತಪಟ್ಟ ಘಟನೆ ಉಪ್ಪುಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ವರದಿಯಾಗಿದೆ. ಕುಂದಾಪುರ ಬಿ.ಬಿ. ಹೆಗ್ಡೆ ಕಾಲೇಜಿನ ತೃತೀಯ ಬಿಕಾಂ ವಿದ್ಯಾರ್ಥಿ ರಾಘವೇಂದ್ರ ಶೆಟ್ಟಿ (20) ಮೃತ ದುರ್ದೈವಿ. ಘಟನೆಯ ವಿವರ: ಭಟ್ಕಳದಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಉಪ್ಪುಂದದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದೆ ಬರುತ್ತಿದ್ದ ವೇಳೆ, ಉಪ್ಪಂದ ಹೋಟೆಲೊಂದರ ಎದುರು ನಿಲ್ಲಿಸಿದ್ದ ವಿಆರ್‌ಎಲ್ ಸಂಸ್ಥೆಯ ವಿಜಯಾನಂದ ಖಾಸಗಿ ವೋಲ್ಪೋ ಬಸ್ಸು ಕುಂದಾಪುರ ಕಡೆಗೆ ಸಾಗಲು ಒಮ್ಮೆಲೇ ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸಿದ್ದರ ಪರಿಣಾಮ ಹಿಂಬದಿಯ ಬಾಗಿಲು ಹಾಗೂ ಬಾಗಿಲಿನ ಮೆಟ್ಟಿನಿಂದ ಮೇಲೆ ಹತ್ತುತ್ತಿದ್ದ ವಿದ್ಯಾರ್ಥಿಗೆ ಖಾಸಗಿ ಬಸ್ಸಿನ ಮುಂಭಾಗ ಬಡಿದಿತ್ತು. ಅಫಘಾತದ ತೀವ್ರತೆಗೆ ವಿದ್ಯಾರ್ಥಿ ಕೆಳಗೆ ಬಿದ್ದು ತಲೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಆತನನ್ನು ಕುಂದಾಪುರದ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗಮಧ್ಯೆಯೇ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಾವು ದಿನನಿತ್ಯ ಸೇವಿಸುವ ಆಹಾರ ಕಲಬೆರಕೆಯಿಂದ ಕೂಡಿದೆ. ಹಣ್ಣು-ತರಕಾರಿಗಳಿಗೆ ರಾಸಾಯನಿಕಗಳ ಸಿಂಪಡಿಸಲಾಗುತ್ತಿದೆ. ಇವೇ ಮುಂತಾದ ಕಾರಣದಿಂದಾಗಿ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು ಇವುಗಳ ಬಗೆಗೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ನಿವೃತ್ತ ಶಿಕ್ಷಕಿ ಸುಧಾಮೂರ್ತಿ ಹೇಳಿದರು. ಕುಸುಮ ಫೌಂಡೇಶನ್ ದತ್ತು ಸ್ವೀಕರಿಸಿರುವ ನಾಗೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಉತ್ತಮ ಗುಣಮಟ್ಟದ ಆಹಾರವನ್ನು ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಿದೆ ಎಂದ ಅವರು ಮಕ್ಕಳಿಗೆ ವನಮಹೋತ್ಸವದ ಪ್ರಾಮುಖ್ಯತೆ ಹಾಗೂ ಪರಿಸರ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಕುಸುಮ ಫೌಂಡೇಶನ್‌ನ ಮ್ಯಾನೇಜಿಂಗ್ ಟ್ರಸ್ಟಿ ನಳಿನ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳಿಗೆ ಗಿಡಗಳನ್ನು ವಿತರಿಸಲಾಯಿತು. ಶಾಲೆಯ ಅಧ್ಯಾಪಕ ವೃಂದ, ಎಸ್‌ಡಿಎಮ್‌ಸಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ಕುಸುಮ ಫೌಂಡೆಶನ್‌ನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಗುರುರಾಜ್ ಸ್ವಾಗತಿಸಿ, ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿರುವ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅಂಕಪಟ್ಟಿಯಲ್ಲಿನ ಗೊಂದಲ ಹಾಗೂ ತಪ್ಪು ಫಲಿತಾಂಶದಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ವಿಶ್ವವಿದ್ಯಾನಿಲಯ ಈ ಕೂಡಲೇ ಸಮಸ್ಯೆಗೆ ಸ್ಪಂದಿಸಬೇಕೆಂದು ಇಲ್ಲಿನ ಭಂಡಾರ್ಕಾರ್ಸ ಕಾಲೇಜಿನ ವಿದ್ಯಾರ್ಥಿಗಳು ಆಗ್ರಹಿಸಿದರು. ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ತಮ್ಮ ಅಳಲು ತೋಡಿಕೊಂಡ ವಿದ್ಯಾರ್ಥಿಗಳು, ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕೆಲವು ಕಾಲೇಜುಗಳ ವಿದ್ಯಾರ್ಥಿಗಳ ಒಂದನೇ, ಮೂರನೇ ಸೆಮಿಸ್ಟರ್‌ನ ಫಲಿತಾಂಶ ನೀಡದೇ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ವಿ.ವಿ ಆಟವನ್ನಾಡುತ್ತಿದೆ. ಈವರೆಗೂ ಎಪ್ರಿಲ್ 2016 ಎರಡನೇ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆ ಮುಗಿದು 2016 ರ ಒಂದು, ಮೂರು ಮತ್ತು ಐದನೇ ಸೆಮಿಸ್ಟರ್ ಆರಂಭವಾಗಿದೆ. ಆದರೆ ಈವರೆಗೂ ೨೦೧೫ರ ನವೆಂಬರ್ ಡಿಸೆಂಬರ್‌ನ ಮೂರನೇ ಮತ್ತುಐದನೇ ಸೆಮಿಸ್ಟರ್ ನಲ್ಲಿಓದುತ್ತಿರುವ ವಿದ್ಯಾರ್ಥಿಗಳ ಸರಿಯಾದ ಮತ್ತು ಸೂಕ್ತ ರೀತಿಯ ಫಲಿತಾಂಶ ವಿದ್ಯಾರ್ಥಿಗಳ ಕೈಗೆ ಬಂದಿಲ್ಲ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಆಟವಾಡುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯದ ನಿಲುವಿಗೆ ಏನನ್ನು ಹೇಳಬೇಕು ಎಂಬುದೇ ತಿಳಿಯದಾಗಿದೆ ಎಂದು ತಮ್ಮ ಅಳಲು ತೋಡಿಕೊಂಡರು.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಕಿನ್ನರ ಪ್ರಕಾಶನ ಮಣಿಪಾಲ ಹಾಗೂ ಕೊಂಕಣಿ ಸಂಸಾರ ಪ್ರತಿಷ್ಠಾನದ ವತಿಯಿಂದ ಚಿಕ್ಕಮಂಗಳೂರು ಜಿಲ್ಲೆಗೆ ವರ್ಗಾವಣೆಗೊಂಡ ಜಿಲ್ಲೆಯ ಎಸ್ಪಿ ಕೆ. ಅಣ್ಣಾಮಲೈ ಅವರನ್ನು ಬನ್ನಂಜೆಯ ಎಸ್ಪಿ ಕಛೇರಿಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಉಡುಪಿಗೆ ಎಸ್ಪಿ ಕಛೇರಿಗೆ ಆಗಮಿಸಿದ್ದ ಪಶ್ಚಿಮ ವಲಯ ನೂತನ ಐಜಿ ಅರುಣ್ ಚಕ್ರವರ್ತಿ ಅವರನ್ನು ಉಡುಪಿಯ ನಾಗರೀಕರು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಮಣಿಪಾಲ ಪ್ರಸನ್ನ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಹರಿಪ್ರಸಾದ್ ರೈ ಬೆಳ್ಳಿಪಾಡಿ, ಸಮಾಜ ಸೇವಕ ಉಡುಪಿ ವಿಶ್ವನಾಥ ಶೆಣೈ, ಲೇಖಕಿ ಶಾರದಾ ಭಟ್, ಹಿರಿಯ ಪತ್ರಕರ್ತ ಶೇಖರ ಅಜೆಕಾರು, ಕಿನ್ನರ ಪ್ರಕಾಶನದ ಅಧ್ಯಕ್ಷ ಡಾ. ನಾಗೇಶ್ ಕುಮಾರ್ ಜಿ. ರಾವ್, ವಿಜಯ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಶ್ರೀ ರಾಮಕ್ಷತ್ರಿಯ ಮಾತೃಮಂಡಳಿಯ 2016-17ನೇ ಸಾಲಿನ ನೂತನ ಅಧ್ಯಕ್ಷೆಯಾಗಿ ಆಶಾ ಜಗದೀಶ್ ಪಟವಾಲ್ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವನಜಾ ರಾಮ. ಎಚ್, ಗಂಗಾ ಕೆ. ಜಿ. ಶಂಕರ್, ಸುಂದರಿ ಗಣಪತಿ. ಕಾರ್ಯದರ್ಶಿಯಾಗಿ ವನಜಾ ಭಾಸ್ಕರ್ ಜೊತೆ ಕಾರ್ಯದರ್ಶಿಯಾಗಿ ರೇವತಿ, ಆಶಾ ಕಿಶೋರ್, ಆಶಾ ದಿನೇಶ್, ವಸಂತಿ ವಾಸುದೇವ್, ಕೋಶಾಧಿಕಾರಿಯಾಗಿ ಗಾಯತ್ರಿ ರಾಮ, ಪೂರ್ಣಿಮಾ ರವಿರಾಜ್, ಲೆಕ್ಕ ಪರಿಶೋಧಕರಾಗಿ ಲಲಿತಾ ಕೆಶವ ನಾಯ್ಕ್ ಆಯ್ಕೆಯಾಗಿದ್ದಾರೆ.

Read More

ಸಹಕಾರದೊಂದಿಗೆ ಸನ್ಮಾನವನ್ನು ಮಾಡಿ ಬೀಳ್ಕೊಟ್ಟ ಜಾಲಾಡಿ ಯುವಕರು ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಾಲಾಗಿ ನಿಲ್ಲಿಸಲಾಗಿದ್ದ 37 ಟಾಟಾ ಸುಮೋಗಳ ಕೆಳಗೆ 33.64 ಸೆಕೆಂಡ್‌ಗಳಲ್ಲಿ ಲಿಂಬೋ ಸ್ಕೇಟಿಂಗ್ ಮೂಲಕ ಸಾಗಿ ಗಿನ್ನಿಸ್ ದಾಖಲೆ ಬರೆದಿದ್ದ ಬೆಂಗಳೂರಿನ ಒಂದನೇ ತರಗತಿಯ ಪೋರ ಓಂ ಸ್ವರೂಪ್ ಗೌಡ ಅಚಾನಾಕ್ಕಾಗಿ ತಾಲೂಕಿನ ಜಾಲಾಡಿ ಯುವಕರಿಗೆ ಮುಖಾಮುಖಿಗುವ ಪ್ರಸಂಗವೊಂದು ಎದುರಾಗಿತ್ತು. ತೊಂದರೆಯಲ್ಲಿದ್ದ ಆತನ ಕುಟುಂಬಕ್ಕೆ ಸಹಕಾರವಿತ್ತರಲ್ಲದೇ, ಗಿನ್ನಿಸ್ ದಾಖಲೆ ನಿರ್ಮಿಸಿದ್ದ  ಹುಡುಗನ ಸಾಧನೆಯನ್ನು ಮೆಚ್ಚಿ ಸನ್ಮಾನಿಸಿ ಔದಾರ್ಯ ಮೆರೆದಿದ್ದಾರೆ. ಮರ್ಡೇಶ್ವರದಿಂದ ಉಡುಪಿ ಕಡೆಗೆ ಪೋಷಕರೊಂದಿಗೆ ಓಂ ಸ್ವರೂಪ್ ಗೌಡ ತೆರಳುತ್ತಿದ್ದ ಕಾರು ಜಾಲಾಡಿಯ ಬಳಿ ಪಂಕ್ಚರ್ ಆಗಿತ್ತು. ದುರಸ್ತಿಗೊಳಿಸುವ ಪಂಕ್ಚರ್ ಅಂಗಡಿ ಬಾಗಿಲು ಹಾಕಿದ್ದರಿಂದ ಹೆಮ್ಮಾಡಿಯ ಜ್ಯುವೆಲ್ ಪಾರ್ಕಿನಲ್ಲಿ ತಂಗುವಂತೆ ಅಲ್ಲಿಗೆ ಆಗಮಿಸಿದ ಜಾಲಾಡಿಯ ಕೆಲ ಯುವಕರು ಸಲಹೆಯಿತ್ತರಲ್ಲರೇ ಕೊನೆಗೂ ದುರಸ್ತಿಗೊಳಿಸಿಗೊಳಿಸಲು ಸಹಕಾರವಿತ್ತರು. ಈ ಮಧ್ಯೆ ಚೂಟಿಯಾಗಿ ಮಾತನಾಡುತ್ತಿದ್ದ ಹುಡುಗನನ್ನು ಗುರುತಿಸಿದ ಸ್ಥಳೀಯರು ಹತ್ತು ದಿನಗಳ ಹಿಂದಷ್ಟೇ ಗಿನ್ನಿಸ್ ದಾಖಲೆ ಬರೆದಿದ್ದ ಪೋರ ಈತನೇ ಎಂಬುದನ್ನು ಸ್ಪಷ್ಟಪಡಿಸಿಕೊಂಡು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿ ಅವಘಡದಲ್ಲಿ ಸಜೀವದಹನಗೊಂಡು ಮೃತರಾದ ಮೂವರ ಪೈಕಿ ಓರ್ವರನ್ನು ಕುಂದಾಪುರ ತಾಲೂಕಿನ ಮೇರ್ಡಿ ಸುರೇಶ್ ಹೆಗ್ಡೆ (47) ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ಮೆಡಿಶೇರ್ ಸರ್ಜಿಕಲ್ ಕಂಪೆನಿಯ ಸೇಲ್ಸ್ ಮ್ಯಾನೇಜರ್ ಆಗಿದ್ದ ಕಾರ್ಯನಿರ್ವಹಿಸುತ್ತಿದ್ದ ಅವರು ಖಾಸಗಿ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿ ಹಿಂತಿರುಗುವ ವೇಳೆ ಈ ಅವಘಡ ಸಂಭವಿಸಿದೆ. ಮೃತರು ಮಡದಿ ಕೃಷ್ಣವೇಣಿ ಎಸ್. ಹೆಗ್ಡೆ, ಓರ್ವ ಪುತ್ರ, ಸಹೋದರ ಉಡುಪಿ ಜಿಲ್ಲಾ ಬಿಜೆಪಿ ಕೈಗಾರಿಕಾ ಮೋರ್ಚಾದ ಜಿಲ್ಲಾಧ್ಯಕ್ಷ ಮೇರ್ಡಿ ಸತೀಶ್ ಹೆಗ್ಡೆ ಸೇರಿದಂತೆ ಮೂವರು ಸಹೋದರರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಹುಬ್ಬಳ್ಳಿಗೆ ಬರುತ್ತಿದ್ದ ಖಾಸಗಿ ಬಸ್ಸು ಹುಬ್ಬಳ್ಳಿಗೆ ಸಮೀಪ ಇರುವಾಗಲೇ ಬೆಳ್ಳಿಗೆ 5 ಗಂಟೆಯ ಸುಮಾರಿಗೆ ಬೆಂಕಿಗಾಹುತಿಯಾಗಿ ಮೂವರು ಸಜೀವ ದಹನಗೊಂಡಿದ್ದರೇ, ಎಂಟು ಮಂದಿ ಗಂಭೀರ ಗಾಯಗೊಂಡಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಪುರಸಭೆ ಡಾ. ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆ ಗೌಜು ಗದ್ದಲಗಳ ನಡುವೆ ಮೊಟಕುಗೊಂಡಿತು. ಪುರಸಭೆಯ ಎರಡನೇ ಅವಧಿಗೆ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಬುಗಿಲೆದ್ದ ಭಿನ್ನಮತ ಇನ್ನೂ ಶಮನವಾಗದಿರುವುದು ಸಭೆಯ ಗೌಜಿಗೆ ಆಹಾರವಾಗಿದ್ದರೇ, ಸಭೆಯಲ್ಲಿ ಅಧ್ಯಕ್ಷರ ಬದಲು ಉಪಾಧ್ಯಕ್ಷರು ಉತ್ತರಿಸುತ್ತಿರುವುದು ವಿರೋಧ ಪಕ್ಷದ ಸದಸ್ಯರ ಅಸಮಾಧಾನಕ್ಕೆ ಕಾರಣವಾಗತೊಡಗಿದೆ. ಸಭೆಯಲ್ಲಿ ಮಂಡಿಸಲಾದ 17 ಅಜೆಂಡಾಗಳು ಧ್ವನಿಮತದ ಅಂಗೀಕಾರ ಪಡೆದರೇ, ಗಲಾಟೆ ನಿಯಂತ್ರಣಕ್ಕೆ ಬಾರದೇ ಅಧ್ಯಕ್ಷ ಹಾಗೂ ಆಡಳಿತ ಪಕ್ಷದ ಸದಸ್ಯರು ಹೊರನಡೆದ ಪ್ರಸಂಗವೂ ನಡೆಯಿತು. ವಿರೋಧ ಪಕ್ಷದ ಸದಸ್ಯರಾದ ಶ್ರೀಧರ ಶೇರುಗಾರ್, ಪ್ರಭಾಕರ ಕೋಡಿ, ಶಶಿಕಲಾ ಗಣೇಶ್ ಶೇರುಗಾರ್, ಸಂದೀಪ ಕೋಡಿ ಇತರರು ಎಲ್ಲಾ ಪ್ರಶ್ನೆಗಳಿಗೆ ಉಪಾಧ್ಯಕ್ಷರೇ ಉತ್ತರಿಸುತ್ತಿದ್ದಾರೆ. ಅಧ್ಯಕ್ಷರೇಕೆ ಮೌನವಹಿಸುತ್ತಾರೆ. ಅವರಿಗೆ ಮಾತನಾಡಲು ಬರುವುದಿಲ್ಲವೇ? ನಮಗೆ ಅವರೇ ಉತ್ತರಿಸಬೇಕು ಎಂದು ಪಟ್ಟ ಹಿಡಿದರು. ಎಲ್ಲಾ ಪ್ರಶ್ನೆಗಳಿಗೂ ಅಧ್ಯಕ್ಷರೇ ಉತ್ತರಿಸಬೇಕು. ಉಪಾಧ್ಯಕ್ಷರು ಮಾತನಾಡುವಂತಿಲ್ಲ ಎಂಬ ನಿಯಮವಿದೆಯೇ. ನಾನೇನು ಮೂಕಿಯೂ ಅಲ್ಲಾ, ಕಿವುಡಿಯೂ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ವಿದ್ಯಾರ್ಥಿ ಪರಿಷತ್ ಕುಂದಾಪುರ ವಲಯ ಮಟ್ಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹೋಟೆಲ್ ಹರಿಪ್ರಸಾದ್ ನಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ಮಾನ್ಯ ಶ್ರೀ. ಕೆ. ಜಯಪ್ರಕಾಶ ಹೆಗ್ಡೆಯವರು ನಾಯಕತ್ವ ಸಂಘಟನಾತ್ಮಕ ಗುಣಗಳನ್ನು ಬೆಳೆಸಿಕೊಂಡು ಉಜ್ವಲ ಭವಿಷ್ಯತ್ತನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಿತು. ಕರ್ನಾಟಕ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾಧ್ಯಕ್ಷರಾಗಿ ಬಾರ್ಕೂರು ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಮನೋಜ್ ಶೆಟ್ಟಿ ಆಯ್ಕೆಗೊಂಡರೇ, ಪ್ರಧಾನ ಕಾರ್ಯದರ್ಶಿಯಾಗಿ ಕೋಟ ಪಡುಕೆರೆ ಕಾಲೇಜಿನ ವಿದ್ಯಾರ್ಥಿ ವಿಶ್ವನಾಥ್ ಆಯ್ಕೆಗೊಂಡರು. ಮುಖ್ಯ ಅಥಿತಿಗಳಾಗಿ ಜನಪರ ಪ್ರಗತಿಪರ ಕುಂದಾಪುರ ಸಂಚಾಲಕರಾದ ಮಾಣಿಗೋಪಾಲ್ ಭಾಗವಹಿಸಿದ್ದರು. ಕೆ.ವಿ.ಪಿ.ಯ ಉಡುಪಿ ಜಿಲ್ಲಾ ಸಂಚಾಲಕರಾದ ಪ್ರಥ್ವಿರಾಜ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರ ವಲಯ ಸಂಚಾಲಕ ಗಿರೀಶ್ ಜಿ. ಕೆ. ಸ್ವಾಗತಿಸಿದರು.

Read More