ಹುಬ್ಬಳ್ಳಿಯಲ್ಲಿ ಬಸ್ ಬೆಂಕಿ ಅವಘಡ. ಕುಂದಾಪುರ ಮೂಲದ ವ್ಯಕ್ತಿ ಸಜೀವ ದಹನ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಖಾಸಗಿ ಬಸ್ ಬೆಂಕಿ ಅವಘಡದಲ್ಲಿ ಸಜೀವದಹನಗೊಂಡು ಮೃತರಾದ ಮೂವರ ಪೈಕಿ ಓರ್ವರನ್ನು ಕುಂದಾಪುರ ತಾಲೂಕಿನ ಮೇರ್ಡಿ ಸುರೇಶ್ ಹೆಗ್ಡೆ (47) ಎಂದು ಗುರುತಿಸಲಾಗಿದೆ.

Call us

Click Here

ಹುಬ್ಬಳ್ಳಿಯ ಮೆಡಿಶೇರ್ ಸರ್ಜಿಕಲ್ ಕಂಪೆನಿಯ ಸೇಲ್ಸ್ ಮ್ಯಾನೇಜರ್ ಆಗಿದ್ದ ಕಾರ್ಯನಿರ್ವಹಿಸುತ್ತಿದ್ದ ಅವರು ಖಾಸಗಿ ಕಾರ್ಯನಿಮಿತ್ತ ಬೆಂಗಳೂರಿಗೆ ತೆರಳಿ ಹಿಂತಿರುಗುವ ವೇಳೆ ಈ ಅವಘಡ ಸಂಭವಿಸಿದೆ. ಮೃತರು ಮಡದಿ ಕೃಷ್ಣವೇಣಿ ಎಸ್. ಹೆಗ್ಡೆ, ಓರ್ವ ಪುತ್ರ, ಸಹೋದರ ಉಡುಪಿ ಜಿಲ್ಲಾ ಬಿಜೆಪಿ ಕೈಗಾರಿಕಾ ಮೋರ್ಚಾದ ಜಿಲ್ಲಾಧ್ಯಕ್ಷ ಮೇರ್ಡಿ ಸತೀಶ್ ಹೆಗ್ಡೆ ಸೇರಿದಂತೆ ಮೂವರು ಸಹೋದರರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

ಹುಬ್ಬಳ್ಳಿಗೆ ಬರುತ್ತಿದ್ದ ಖಾಸಗಿ ಬಸ್ಸು ಹುಬ್ಬಳ್ಳಿಗೆ ಸಮೀಪ ಇರುವಾಗಲೇ ಬೆಳ್ಳಿಗೆ 5 ಗಂಟೆಯ ಸುಮಾರಿಗೆ ಬೆಂಕಿಗಾಹುತಿಯಾಗಿ ಮೂವರು ಸಜೀವ ದಹನಗೊಂಡಿದ್ದರೇ, ಎಂಟು ಮಂದಿ ಗಂಭೀರ ಗಾಯಗೊಂಡಿದ್ದರು/ಕುಂದಾಪ್ರ ಡಾಟ್ ಕಾಂ ಸುದ್ದಿ/

Leave a Reply