ಕುಂದಾಪುರ: ಕರ್ನಾಟಕ ವಿದ್ಯಾರ್ಥಿ ಪರಿಷತ್ ಪದಗ್ರಹಣ, ಜಿಲ್ಲಾಧ್ಯಕ್ಷರಾಗಿ ಮನೋಜ್ ಶೆಟ್ಟಿ

Click Here

Call us

Call us

Call us

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕರ್ನಾಟಕ ವಿದ್ಯಾರ್ಥಿ ಪರಿಷತ್ ಕುಂದಾಪುರ ವಲಯ ಮಟ್ಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹೋಟೆಲ್ ಹರಿಪ್ರಸಾದ್ ನಲ್ಲಿ ನಡೆಯಿತು.

Call us

Click Here

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವರಾದ ಮಾನ್ಯ ಶ್ರೀ. ಕೆ. ಜಯಪ್ರಕಾಶ ಹೆಗ್ಡೆಯವರು ನಾಯಕತ್ವ ಸಂಘಟನಾತ್ಮಕ ಗುಣಗಳನ್ನು ಬೆಳೆಸಿಕೊಂಡು ಉಜ್ವಲ ಭವಿಷ್ಯತ್ತನ್ನು ವಿದ್ಯಾರ್ಥಿಗಳು ರೂಪಿಸಿಕೊಳ್ಳಿ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಿತು. ಕರ್ನಾಟಕ ವಿದ್ಯಾರ್ಥಿ ಪರಿಷತ್‌ನ ಜಿಲ್ಲಾಧ್ಯಕ್ಷರಾಗಿ ಬಾರ್ಕೂರು ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿ ಮನೋಜ್ ಶೆಟ್ಟಿ ಆಯ್ಕೆಗೊಂಡರೇ, ಪ್ರಧಾನ ಕಾರ್ಯದರ್ಶಿಯಾಗಿ ಕೋಟ ಪಡುಕೆರೆ ಕಾಲೇಜಿನ ವಿದ್ಯಾರ್ಥಿ ವಿಶ್ವನಾಥ್ ಆಯ್ಕೆಗೊಂಡರು.

ಮುಖ್ಯ ಅಥಿತಿಗಳಾಗಿ ಜನಪರ ಪ್ರಗತಿಪರ ಕುಂದಾಪುರ ಸಂಚಾಲಕರಾದ ಮಾಣಿಗೋಪಾಲ್ ಭಾಗವಹಿಸಿದ್ದರು. ಕೆ.ವಿ.ಪಿ.ಯ ಉಡುಪಿ ಜಿಲ್ಲಾ ಸಂಚಾಲಕರಾದ ಪ್ರಥ್ವಿರಾಜ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕುಂದಾಪುರ ವಲಯ ಸಂಚಾಲಕ ಗಿರೀಶ್ ಜಿ. ಕೆ. ಸ್ವಾಗತಿಸಿದರು.

Leave a Reply