ನಾವೇ ಅಭಿವೃದ್ಧಿಯ ರುವಾರಿಗಳಾಗೋಣ: ಧ್ವಜಾರೋಹಣ ನೆರವೇರಿಸಿ ಎಸಿ ಅಶ್ವಥಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ/ ಬೈಂದೂರು: ನಾಗರಿಕ ಸಮಾಜ ಎಲ್ಲದಕ್ಕೂ ಸರಕಾರವನ್ನು ಅವಲಂಭಿಸದೇ ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿ ಸೇವಾ ಮನೋಭಾವದಿಂದ ತೊಡಗಿಸಿಕೊಂಡಾಗ ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಾಧ್ಯವಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಅಶ್ವಥಿ ಎಸ್. ಹೇಳಿದರು. ಕುಂದಾಪುರ ತಾಲೂಕು ಆಡಳಿತ, ಕುಂದಾಪುರ ಪುರಸಭೆ ಹಾಗೂ ರಾಷ್ಟ್ರೀಯು ಹಬ್ಬಗಳ ದಿನಾಚರಣೆ ಸಮಿತಿ ಆಶ್ರಯದಲ್ಲಿ ಸೋಮವಾರ ಕುಂದಾಪುರ ಗಾಂಧಿ ಮೈದಾನದಲ್ಲಿ ನಡೆದ 70ನೇ ಸ್ವತಂತ್ರ್ಯೋತ್ಸವ ದ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು. ನೆಲ, ಜಲ ಭಾಷೆ ಭಾವನಾತ್ಮಕ ಬೆಸುಗೆಯಿಂದ ಮೂಲಭೂತ ಸೌಕರ್ಯ, ಕೃಷಿ, ವಿಜ್ಞಾನ, ತಂತ್ರಜ್ಞಾನ ಮುಂತಾದ ಕ್ಷೇತ್ರದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಸಾಧಿಸಿದ್ದು ವಿಶ್ವವೇ ಭಾರತದತ್ತ ಮುಖಮಾಡಿದೆ ಎಂದರು. ಕರ್ನಾಟಕ ರಾಜ್ಯ ಸರಕಾರ ಕೂಡಾ ರಾಜ್ಯದ ಜನರ ಕಲ್ಯಾಣಕ್ಕಾಗಿ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಮನಸ್ವಿನಿ, ಮೈತ್ರಿ, ಸಕಾಲ ಮುಂತಾದ ಹಲವು ಕಲ್ಯಾಣ ಯೋಜನೆ ನೀಡಿದೆ. ಗ್ರಾಮಮಟ್ಟದಲ್ಲಿ ಬಾಪೂಜೆ ಕೇಂದ್ರದ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯಲ್ಲಿ ಮಂಗಳವಾರ ಮೀನುಗಾರರು ಸಾಮೂಹಿಕವಾಗಿ ಸಮುದ್ರಪೂಜೆ ನೆರವೇರಿಸಿ ಸಮೃದ್ಧ ಮತ್ಸ್ಯಸಂಪತ್ತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಗಂಗೊಳ್ಳಿಯ ಬಂದರಿನ ಅಳಿವೆ ಪ್ರದೇಶದಲ್ಲಿ ಗಂಗೊಳ್ಳಿಯ ಆಳ ಸಮುದ್ರ ಮೀನುಗಾರರ ಯೂನಿಯನ್, ಪರ್ಸಿನ್ ಬೋಟ್ ಯೂನಿಯನ್ ಹಾಗೂ ಟ್ರಾಲ್ ಬೋಟ್ ಯೂನಿಯನ್ ಆಶ್ರಯದಲ್ಲಿ ವೇದಮೂರ್ತಿ ಜಿ.ವಿಠಲದಾಸ ಭಟ್ ಮತ್ತು ವೇದಮೂರ್ತಿ ಜಿ.ಅನಂತಕೃಷ್ಣ ಭಟ್ ಪೌರೋಹಿತ್ಯದಲ್ಲಿ ಆಳ ಸಮುದ್ರ ಮೀನುಗಾರರ ಯೂನಿಯನ್ನ ಸೌಪರ್ಣಿಕ ಬಸವ ಖಾರ್ವಿ, ಪರ್ಸಿನ್ ಬೋಟ್ ಯೂನಿಯನ್ನ ಪ್ರಭಾಕರ ಖಾರ್ವಿ ಮತ್ತು ಟ್ರಾಲ್ ಬೋಟ್ ಯೂನಿಯನ್ನ ಬಿ.ಎಂ.ಗಣೇಶ ನೇತೃತ್ವದಲ್ಲಿ ಸಮಸ್ತ ಮೀನುಗಾರರು ಸಮುದ್ರಪೂಜೆ ನಡೆಸಿ, ಸಮುದ್ರರಾಜನಿಗೆ ಬಾಗಿನ ಅರ್ಪಿಸಿ ಗಂಗೊಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವ ಎಲ್ಲಾ ಮೀನುಗಾರರ ಕುಟುಂಬಗಳು ಸುಖ ಶಾಂತಿ ನೆಮ್ಮದಿಯಿಂದ ಜೀವನ ನಡೆಸುವಂತಾಗಲಿ ಮತ್ತು ಈ ಮೀನುಗಾರಿಕಾ ಋತುವಿನಲ್ಲಿ ಸಮೃದ್ಧ ಮತ್ಸ್ಯ ಸಂಪತ್ತನ್ನು ಶ್ರೀದೇವರು ಕರುಣಿಸಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ಗಂಗೊಳ್ಳಿ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷ ರಮೇಶ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಪ್ರತಿವರ್ಷ ಸ್ವಾತಂತ್ರ್ಯೋತ್ಸವ ಹತ್ತಿರ ಬರುತ್ತಿದ್ದಂತೆ ಬಾವುಟಗಳ ಮಾರಾಟ ಆರಂಭಗೊಳ್ಳುತ್ತವೆ. ಶಾಲಾ ಕಾಲೇಜು, ಕಛೇರಿ, ವಾಹನ, ಮಕ್ಕಳು ಹೀಗೆ ಎಲ್ಲರಿಗಾಗಿಯೂ ವಿವಿಧ ಗಾತ್ರದ ಬಾವುಟಗಳಂತೂ ಬೇಕೆಬೇಕು. ಕುಂದಾಪುರದ ಹಳೆ ಬಸ್ಸ್ಟ್ಯಾಂಡಿನ ಬಳಿ ಹಳೆದ ಹದಿನೈದು ವರ್ಷಗಳಿಂದ ಅದೇ ಹಳೆಯ ಕಟ್ಟದ ಮುಂಭಾಗದಲ್ಲಿ ತಾತ್ಕಾಲಿಕವಾಗಿ ಕಾಣಸಿಗುವ ಅಬ್ದುಲ್ರ ಅಂಗಡಿಯಲ್ಲಿನ ತ್ರಿವರ್ಣ ಧ್ವಜಗಳಿಗಂತೂ ಕುಂದಾಪುರದಲ್ಲಿ ಭಾರಿ ಬೇಡಿಕೆ. 10ರೂಪಾಯಿಂದ ಆರಂಭಗೊಂಡು 500 ರೂಪಾಯಿ ವರೆಗಿನ ವಿವಿಧ ಗಾತ್ರದ ತ್ರಿವರ್ಣ ಧ್ವಜಗಳು ಈ ಮಾರ್ಗದಲ್ಲಿ ಸಾಗುವವನ್ನು ಒಂದು ಕ್ಷಣ ಆಕರ್ಷಿಸುತ್ತವೆ. ಪ್ರತಿವರ್ಷವೂ ಇಲ್ಲಿಯೇ ಸುಮಾರು ೬,೦೦೦ ಬಾವುಟಗಳು ಮಾರಾಟವಾಗುತ್ತಿವೆ. ಕಳೆದ ಹದಿನೈದು ವರ್ಷಗಳಿಂದಲೂ ನಡೆದು ಬಂದಿರುವ ಈ ಬಾವುಟದ ಮಾರಾಟ ಕೇವಲ ಲಾಭಕ್ಕಷ್ಟೇ ಅಲ್ಲ. ಅದೊಂದು ಹವ್ಯಾಸವಾಗಿದೆ ಎನ್ನುತ್ತಾರೆ ವ್ಯಾಪಾರಿ ಅಬ್ದುಲ್. ಕುಂದಾಪ್ರ ಡಾಟ್ ಕಾಂ ವರದಿ ಒಂದು ಕಾಲದಲ್ಲಿ ಬಾವುಟಗಳಿಗೆ ದುಪ್ಪಟ್ಟು ಹಣ ನೀಡಬೇಕಿದ್ದುದನ್ನು ಕಂಡ ಅಬ್ದುಲ್ ಅವರೇ ಸ್ವತಃ ಕಡಿಮೆ ಬೆಲೆಗೆ ಬಾವುಟ ಮಾರಲು ಮುಂದಾದರು. 300-400 ಬಾವುಟಗಳಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆಸಿಐ ಪುತ್ತೂರು ಆತಿಥೇಯದಲ್ಲಿ ಜರುಗಿದ ರಜತವಿಕಾಸ ಅಭಿವೃದ್ಧಿ ಮತ್ತು ಬೆಳವಣಿಗೆಯ ವ್ಯಾವಹಾರಿಕ ಸಮ್ಮೇಳನದಲ್ಲಿ ಪತ್ರಕರ್ತ ಹಾಗೂ ಸಂಘಟಕ ಅರುಣಕುಮಾರ್ ಶಿರೂರು ಅವರಿಗೆ ಸಾಧನಶ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ವ್ಯವಹಾರ ವಿಭಾಗದ ನಿರ್ದೇಶಕ ಸಚಿನ್, ವಲಯಾಧ್ಯಕ್ಷ ಸಂದೀಪ್ಕುಮಾರ್, ಪೂರ್ವವಲಯಾಧ್ಯಕ್ಷ ಸಂಪತ್ ಸುವರ್ಣ, ಉಪಾಧ್ಯಕ್ಷ ನಿತಿನ್, ಕೃಷ್ಣಮೋಹನ್, ಚಂದ್ರಶೇಖರ್ ನಾಯರ್, ಶಿರೂರು ಜೆಸಿಐ ಸ್ಥಾಪಕಾಧ್ಯಕ್ಷ ಮೋಹನ್ ರೇವಣ್ಕರ್, ಅಧ್ಯಕ್ಷ ಹರೀಶ್ ಶೇಟ್, ಕಾರ್ಯದರ್ಶಿ ನಾಗೇಶ್ ಕೆ., ಪ್ರಸಾದ್ ಪ್ರಭು ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆಸಿಐ ಪುತ್ತೂರು ಆತಿಥೇಯದಲ್ಲಿ ಜರುಗಿದ ರಜತವಿಕಾಸ ಅಭಿವೃದ್ಧಿ ಮತ್ತು ಬೆಳವಣಿಗೆ ವ್ಯವಹಾರ ಸಮ್ಮೇಳನದಲ್ಲಿ ಉದ್ಯಮ, ಸಮಾಜಸೇವಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಜೆಸಿ ಹುಸೇನ್ ಹೈಕಾಡಿ ಅವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ವ್ಯವಹಾರ ವಿಭಾಗದ ನಿರ್ದೇಶಕ ಸಚಿನ್, ವಲಯಾಧ್ಯಕ್ಷ ಸಂದೀಪ್ಕುಮಾರ್, ಪೂರ್ವವಲಯಾಧ್ಯಕ್ಷ ಸಂಪತ್ ಸುವರ್ಣ, ಉಪಾಧ್ಯಕ್ಷ ನಿತಿನ್, ಕೃಷ್ಣಮೋಹನ್, ಚಂದ್ರಶೇಖರ್ ನಾಯರ್, ಕುಂದಾಪುರ ಸಿಟಿ ಜೆಸಿ ಅಧ್ಯಕ್ಷ ಮಂಜುನಾಥ ಕಾಮತ್, ಪೂರ್ವಾಧ್ಯಕ್ಷ ರಾಘವೇಂದ್ರ ನಾವಡ, ನಾಗೇಂದ್ರ ಪೈ, ಕಾರ್ಯದರ್ಶಿ ಗೌತಮ್ ನಾವಡ, ಸದಸ್ಯ ಶ್ರೀಕಾಂತ್ ಕೆ.ಎನ್ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕಳೆದ ಕೆಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಹುಡುಗಿಯ ಮನೆಯವರು ಹಾಗೂ ಮಾಜಿ ಪ್ರಿಯಕರನ ವಿರೋಧದ ನಡುವೆಯೇ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದು, ತಮಗೆ ರಕ್ಷಣೆ ನೀಡುವಂತೆ ಕೋರಿ ಕುಂದಾಪುರ ಠಾಣೆಗೆ ತೆರಳಿದ್ದ ಜೋಡಿಗಳಿಗೆ ಕುಟುಂಬದೊಂದಿಗೆ ರಾಜಿ ಸಂಧಾನ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಿದ ಘಟನೆ ಕುಂದಾಪುರ ಠಾಣೆಯಲ್ಲಿ ನಡೆದಿದೆ. ಕುಂದಾಪುರ ಮೂಡ್ಲಕಟ್ಟೆ ನಿವಾಸಿ, ಲಾರಿ ಚಾಲಕ ಪ್ರಶಾಂತ್ (25) ಹಾಗೂ ಕಾವ್ರಾಡಿಯ ಬಿಬಿಎಂ ಪದವೀಧರೆ ದಿವ್ಯಾಶಾಂತಿ (22) ಪರಸ್ಪರ ಪ್ರೀತಿಸುತ್ತಿದ್ದರು. ಒಂದೇ ಜಾತಿಯವರಾದರೂ ಪ್ರೀತಿಸಿ ಮದುವೆಯಾಗುವ ವಿಷಯ ತಿಳಿದಾಗ ಹುಡುಗಿಯ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಕೆಲವು ದಿನಗಳ ವರೆಗೆ ಕಾದು ಮನೆಯವರು ಒಪ್ಪದಿದ್ದಾಗ ಅ.14ರಂದು ಶಂಕರನಾರಾಯಣದ ದೇವಾಲಯಕ್ಕೆ ತೆರಳಿ ವಿವಾಹವಾಗಿದ್ದರು. ಹುಡುಗಿ ಮನೆಯವರ ವಿರೋಧ ಇದ್ದುದರಿಂದ ಪ್ರೇಮಗಳು ತಮಗೆ ರಕ್ಷಣೆ ನೀಡುವಂತೆ ಅಲ್ಲಿಂದ ಸೀದಾ ಕುಂದಾಪುರ ಪೊಲೀಸ್ ಠಾಣೆಗೆ ತೆರಳಿದ್ದರು. ಠಾಣಾಧಿಕಾರಿ ನಾಸಿರ್ ಹುಸೇನ್ ಎರಡೂ ಕುಟುಂಬದವರನ್ನು ಕರೆಯಿಸಿ ಅವರ ಮನವೊಲಿಸಿದ್ದು, ಪ್ರೇಮಿಗಳನ್ನು ಮನೆಗೆ ಕಳುಹಿಸಿದ್ದಾರೆ. ಈ…
ವೈ ಎಸ್. ಹರಗಿ ಅವರಿಗೆ ಡಾ. ಹೆಚ್. ಶಾಂತಾರಾಮ್ ಪ್ರಶಸ್ತಿ ಪ್ರದಾನ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಮ್ಮದಲ್ಲದ ಲೋಕವನ್ನು ನಮ್ಮದಾಗುವಂತೆ ಕಟ್ಟಿಕೊಡುವ ಸಾಮರ್ಥ್ಯ ಕಥೆ, ಕವನ ಮತ್ತು ಕಾದಂಬರಿಗಳಲ್ಲಿ ಅಡಗಿದೆ. ಸಾಹಿತ್ಯವನ್ನು ಸಂಗಾತಿಯನ್ನಾಗಿ ಮಾಡಿಕೊಂಡವರಿಗೆ ಅದರೊಳಗಿನ ಅಂತಃಶಕ್ತಿ ಅರಿವಾಗುತ್ತದೆ ಎಂದು ವಿಮರ್ಶಕ ಡಾ. ಹೆಚ್. ಎಸ್. ರಾಘವೇಂದ್ರ ರಾವ್ ಅವರು ಅಭಿಪ್ರಾಯಪಟ್ಟರು. ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಒಬ್ಬ ಒಳ್ಳೆಯ ಸಾಹಿತ್ಯ ಒದುಗನಿಗೆ ಪ್ರಪಂಚದ ತನ್ನದಲ್ಲದ ಜೀವನದ ಸಂವೇದನೆ ಮತ್ತು ಸಂಘರ್ಷಗಳನ್ನು ಏಕಕಾಲದಲ್ಲಿ ಮನಸಿಗೆ ನಾಟುವಂತೆ ಅದನ್ನು ಅನಿಭವಿಸುವಂತೆ ಮಾಡುವುದು ಕಾದಂಬರಿಗಳು. ಅವು ಸೃಷ್ಠಿಸುವ ಪಾತ್ರಗಳು ಹೇಗೆ ಇರಲಿ ಅವು ನಮ್ಮದಾಗುತ್ತಾ ನಮ್ಮನ್ನು ನಾವು ಅರ್ಥೈಸಿಕೊಳ್ಳಲು ನಮ್ಮೊಳಗಿನ ಮನಸನ್ನು ತೆರೆದಿಡುತ್ತಾ ಹೋಗುತ್ತದೆ. ಕಾದಂಬರಿಗಳಿಗೆ ಪಾತ್ರವನ್ನು ಕಟ್ಟಿಕೊಡುವ ಶಕ್ತಿ ಇದೆ. ಕೆಲವೊಮ್ಮೆ ವಾಸ್ತವವನ್ನು ಹೇಳಲು ಅವಾಸ್ತವಿಕತೆಯನ್ನು ಬಳಸುತ್ತವೆ ಎಂದು ಹೇಳಿದರು. ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ‘ಉರಿವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದದ ತಾರಾಪತಿಯಿಂದ ಬೈಂದೂರು ಮದ್ದೋಡಿ ಕಡೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಟಾಟಾ ಏಸ್ ವಾಹನವನ್ನು ಅಡ್ಡಗಟ್ಟಿ ಅದರಲ್ಲಿದ್ದ ಮೂರು ದನಗಳನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಹನದಲ್ಲಿದ್ದ ಮೂವರ ಪೈಕಿ ಇಬ್ಬರು ಪರಾರಿಯಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಪರವಾನಿಗೆಯಿಲ್ಲದೇ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದರೆನ್ನಲಾಗಿದೆ. ಸಾಗಾಟಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ವರದಿ. ಗಂಗೊಳ್ಳಿ: ಯಾವುದೇ ದಾನಕ್ಕಿಂದ ಅನ್ನದಾನ ಅತ್ಯಂತ ಪುಣ್ಯದ ಕೆಲಸ. ಹೀಗಾಗಿ ಅನೇಕ ದೇವಾಲಯಗಳಲ್ಲಿ ಹಾಗೂ ಶುಭ ಕಾರ್ಯಗಳಲ್ಲಿ ಅನ್ನದಾಸೋಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ ಶಿಕ್ಷಣಕ್ಕೆ ಹೆಚ್ಚಿನ ಹೆಸರುವಾಸಿಯಾಗಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಸದ್ದಿಲ್ಲದೆ ಪ್ರತಿನಿತ್ಯ ನೂರಾರು ಶಾಲಾ ವಿದ್ಯಾರ್ಥಿಗಳಿಗೆ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಕಳೆದ ಏಳು ದಶಕಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುತ್ತಾ ಬಂದಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಯು ರಾಜ್ಯದಲ್ಲೇ ಉತ್ತಮ ಹೆಸರು ಪಡೆದುಕೊಂಡು ಸಹಸ್ರಾರು ವಿದ್ಯಾರ್ಥಿಗಳ ಜನಮಾನಸದಲ್ಲಿ ಅಚ್ಚಳಿದೆ ಉಳಿದಿದೆ. ಪ್ರತಿನಿತ್ಯ ಸುಮಾರು ೩ ರಿಂದ ೧೦ ಕಿ.ಮೀ. ದೂರದಿಂದ ಬರುತ್ತಿರುವ ಸಹಸ್ರಾರು ಮಂದಿ ಗ್ರಾಮೀಣ ಪ್ರದೇಶದ ಮಕ್ಕಳು ಈ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಜನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ವಿದ್ಯಾಸಂಸ್ಥೆಗೆ ಬರುವ ವಿದ್ಯಾರ್ಥಿಗಳು ಮಧ್ಯಾಹ್ನ ಹಸಿದ ಹೊಟ್ಟೆಯಲ್ಲಿ ಕುಳಿತುಕೊಳ್ಳಬಾರದು ಮತ್ತು ಹೊರಗಿನ ಆಹಾರವನ್ನು ಸೇವಿಸಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದೆಂಬ ಉದ್ದೇಶದಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಂಬೈನಲ್ಲಿ ನಡೆದ ರಾಷ್ಟ್ರಮಟ್ಟದ ಜೆರಾಯಿ ಸ್ಟ್ರಾಂಗ್ ಮ್ಯಾನ್ ಚಾಂಪಿಯನ್ ಶಿಪ್ನಲ್ಲಿ ಕುಂದಾಪುರ ತಾಲೂಕಿನ ಬಾಳಿಕೆರೆಯ ದೇಹದಾರ್ಢ್ಯ ಪಟು ವಿಶ್ವನಾಥ ಗಾಣಿಗ ಪ್ರಥಮ ಸ್ಥಾನ ಗಳಿಸಿದ್ದಾರೆ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವೆಯ್ಟ್ ಲಿಫ್ಟಿಂಗ್ನಲ್ಲಿ ಸ್ಫರ್ಧಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರು ಬಾಳಿಕೆರೆಯ ಭಾಸ್ಕರ ಗಾಣಿಗ ಮತ್ತು ಶ್ರೀಮತಿ ಪದ್ಮಾವತಿ ಗಾಣಿಗ ಅವರ ಪುತ್ರನಾಗಿದ್ದಾರೆ. ► ಕುಂದಾಪುರದ ಉದಯೋನ್ಮುಖ ಕ್ರೀಡಾಪಟು ವಿಶ್ವನಾಥ ಗಾಣಿಗ – http://kundapraa.com/?p=2249
