ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಾಲು ಸಂಗ್ರಹದಲ್ಲಿ ಕುಂದಾಪುರ ತಾಲೂಕು ಎರಡನೇ ಸ್ಥಾನ ಪಡೆದಿದೆ. ಕರಾವಳಿ ಭಾಗದಲ್ಲಿ ಹೈನುಗಾರರ ಸಂಖ್ಯೆ ಅಧಿಕವಾಗಿದ್ದು 4.25 ಲಕ್ಷ ಲೀ. ಹಾಲಿನ ಸಂಗ್ರಹದಲ್ಲಿ ದಾಖಲೆ ಸಾಧಿಸಿದ್ದೇವೆ. ಈ ಭಾಗದ ಹೈನುಗಾರರಿಂದ ಉತ್ತಮ ಸಹಕಾರ ದೊರೆಯುತ್ತಲೇ ಬಂದಿದೆ ಎಂದು ದ.ಕ. ಹಾಲು ಉತ್ಪಾದಕರ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು. ಇಲ್ಲಿನ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದಿಂದ ಕುಂದಾಪುರ ತಾಲೂಕು ಮಟ್ಟದ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರಾಜ್ಯದಲ್ಲಿರುವ ಒಟ್ಟು 14 ಒಕ್ಕೂಟದಲ್ಲಿ ನಮ್ಮ ಒಕ್ಕೂಟದಿಂದ ಹೈನುಗಾರರಿಗೆ ಹೆಚ್ಚಿನ ಡಿವಿಡೆಂಡ್ ನೀಡಲಾಗುತ್ತಿದೆ. ಹಾಲಿನ ಉತ್ಪಾದನೆ ಶೇ.೨೧ ರಷ್ಟು ಹೆಚ್ಚಾಗುತ್ತಿದೆ. ಒಕ್ಕೂಟದಲ್ಲಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು ,ಹಾಲಿನ ಉತ್ಪಾದನೆಯಲ್ಲಿ ಇನ್ನೂ ಹೆಚ್ಚಿನ ಪ್ರಗತಿ ಸಾದಿಸಲಿದ್ದೇವೆ ಎಂದರು. ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ. ಸತ್ಯನಾರಾಯಣ, ಒಕ್ಕೂಟದ ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ನೀರೆ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಮರವಂತೆ: ದಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟಂಟ್ಸ್ ಸಂಸ್ಥೆ ಮೇ ತಿಂಗಳಿನಲ್ಲಿ ನಡೆಸಿದ್ದ ಅಂತಿಮ ಸಿಎ ಪರೀಕ್ಷೆಯಲ್ಲಿ ಮರವಂತೆಯ ಪಟೇಲರ ಮನೆಯ ಶೈಲೇಶ್ ಶ್ರೀಧರ್ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ಬೆಂಗಳೂರಿನ ಎಚ್‌ಸಿಜಿ ಎಂಟರ್‌ಪ್ರೈಸಸ್ ಸಂಸ್ಥೆಯಲ್ಲಿ ತರಬೇತಿ ಪಡೆದಿದ್ದರು. ಶೈಲೇಶ್ ಕೆನರಾ ಬ್ಯಾಂಕ್‌ನ ನಿವೃತ್ತ ಉಪ ಮಹಾಪ್ರಬಂಧಕ ಎಂ. ಶ್ರೀಧರ್ ಮತ್ತು ಬ್ಯಾಂಕ್ ಆಫ್ ಇಂಡಿಯದ ಅಧಿಕಾರಿ ಶ್ರೀಮತಿ ದಂಪತಿಯ ಪುತ್ರ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೇವಲ ಗಿಡಗಳನ್ನು ನೆಡುವುದು ಮಾತ್ರ ಮುಖ್ಯವಲ್ಲ. ನೆಟ್ಟ ಗಿಡಗಳನ್ನು ಫೋಷಿಸಬೇಕಾದುದು ಕೂಡಾ ಮುಖ್ಯ. ಎಲ್ಲಾ ವಿದ್ಯಾರ್ಥಿಗಳು ಒಂದೊಂದು ಗಿಡ ನೆಟ್ಟು, ನಂತರ ಪ್ರತೀ ದಿನವೂ ಅವುಗಳನ್ನು ಪೋಷಿಸಿ ಬೆಳೆಸಿ ಗಿಡಗಳ ಹುಟ್ಟು ಹಬ್ಬಗಳನ್ನ ಆಚರಿಸಿ ಎಂದು ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ, ಕುಂದಾಪುರ ವಕೀಲರ ಸಂಘ (ರಿ), ಅಭಿಯೋಗ ಇಲಾಖೆ, ಅರಣ್ಯ ಇಲಾಖೆ, ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮತ್ತು ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಜರುಗಿದ ವನಮಹೋತ್ಸವ ಸಪ್ತಾಹ ಕಾರ್ಯಕ್ರಮ ಕುಂದಾಪುರದ ಶ್ರೀ ವೆಂಕರಮಣ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಸಪ್ತಾಹದ ಸಮಾರೋಪದಲ್ಲಿ ಅವರು ಮತನಾಡಿದರು. ಸಹಾಯಕ ಸರಕಾರಿ ಅಭಿಯೋಜಕರಾದ ಸಂದೇಶ ಭಂಡಾರಿ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್. ರವೀಶ್ಚಂದ್ರ ಶೆಟ್ಟಿ, ಉಪ ಅರಣ್ಯಾಧಿಕಾರಿಯವರಾದ ದಿಲೀಪ್, ಶ್ರೀ ವೆಂಕಟರಮಣ ಇಂಗ್ಲೀಷ್…
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಉಡುಪಿ ಜಿಲ್ಲೆಯ ಖಡಕ್ ಅಧಿಕಾರಿ ಎಂದೆನಿಸಿಕೊಂಡು ತನ್ನ ಕಾರ್ಯವೈಖರಿಯ ಮೂಲಕ ಸಂಚಲನ ಮೂಡಿಸಿದ್ದ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಚಿಕ್ಕಮಂಗಳೂರು ಜಿಲ್ಲೆಗೆ ವರ್ಗಾವಣೆಗೊಂಡಿದ್ದಾರೆ. ಗದಗದ ಎಸ್ಪಿ ಕೆ.ಟಿ. ಬಾಲಕೃಷ್ಣ ಅವರು ಉಡುಪಿಯ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಎಸ್ಪಿ ಅಣ್ಣಾಮಲೈ ಅವರ ವರ್ಗಾವಣೆಯ ಬಗೆಗಿದ್ದ ಊಹಾಪೋಹಗಳಿಗೆ ಕೊನೆಗೂ ತೆರೆಬಿದ್ದಿದ್ದು ಅಂತಿಮವಾಗಿ ಅವರು ಚಿಕ್ಕಮಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ. ಪೊಲೀಸ್ ಇಲಾಖೆಯನ್ನು ಸಮಾಜಸ್ನೇಹಿಯಾಗಿಸುವಲ್ಲಿ ವಿಶೇಷ ಮುತುವರ್ಜಿ ವಹಿಸಿದ್ದ ಎಸ್ಪಿ ಅಣ್ಣಾಮಲೈ ಅವರು ಸುರಕ್ಷಾ ಮೊಬೈಲ್ ಆಪ್, ಅಪಘಾತ ತಡೆಗೆ ವಿಶೇಷ ಕ್ರಮ, ಸುರಕ್ಷಾ ಅಭಿಯಾನ, ಜನರ ಅಹವಾಲು ಸ್ವೀಕರಿಸಲು ವಿಶೇಷ ಮುತುವರ್ಜಿ ಮುಂತಾದವುಗಳ ಮೂಲಕ ಇಲಾಖೆ ಹಾಗೂ ಜನರೊಂದಿಗೆ ನೇರ ಸಂಪರ್ಕ ಬೆಸೆಯುವಲ್ಲಿ ಶ್ರಮಿಸಿದ್ದರು. ಕುಂದಾಪ್ರ ಡಾಟ್ ಕಾಂ ವರದಿ. ತನ್ನ ಕಾರ್ಯವೈಕರಿಯ ಮೂಲಕ ಉಡುಪಿ ಜಿಲ್ಲೆ ಜನಸಾಮಾನ್ಯರ ಮನಗೆದ್ದಿದ್ದ ಈ ಪೊಲೀಸ್ ಅಧಿಕಾರಿ ಯುವಜನರ ಪಾಲಿನ ಐಕಾನ್ ಎಂದೆನಿಸಿಕೊಂಡಿದ್ದರು. ಕೆಲವು ತಿಂಗಳ ಹಿಂದಷ್ಟೇ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕಾರ್ಕಳ: ಕನ್ನಡ ಸಾಹಿತ್ಯ ಪರಿಷತ್ ಅಜೆಕಾರು ಹೋಬಳಿ ಅಧ್ಯಕ್ಷರಾಗಿ ಪತ್ರಕರ್ತ, ಸಾಹಿತಿ, ಸಂಘಟಕ ಶೇಖರ ಅಜೆಕಾರು ಅವರು ಆಯ್ಕೆಯಾಗಿದ್ದಾರೆ. ಪತ್ರಿಕೋದ್ಯಮ, ಸಾಹಿತ್ಯ ಹಾಗೂ ಸಂಘಟನಾ ಕ್ಷೇತ್ರದಲ್ಲಿ ಅವಿರತವಾಗಿ ತೊಡಗಿಸಿಕೊಂಡು, ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಗುರುತಿಸಿಕೊಂಡ ಅಜೆಕಾರು ಅವರು, ವ್ಯಕ್ತಿಗಳು ಹಾಗೂ ಊರಿನ ಪರಿಚಯ ಸೇರಿದಂತೆ ಸುಮಾರು ಹದಿನೈದಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಕಳೆದ ಇಪ್ಪತ್ತೈದು ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅವರು ಕುಂದಪ್ರಭ ಪತ್ರಿಕೆಯಿಂದ ಆರಂಭಿಸಿ ಕನ್ನಡಮಲ್ಲ, ಜನವಾಹಿನಿ, ಕನ್ನಡಪ್ರಭ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ಸುದ್ದಿ ಸಂಪಾದಕರಾಗಿ, ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಗ್ರಾಮೋತ್ಸವ, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸೇರಿದಂತೆ ವಿಶಿಷ್ಟ ಪರಿಕಲ್ಪನೆಯ ಕಾರ್ಯಕ್ರಮಗಳನ್ನು ಆಯೋಜಿಸಿ ಸಾಹಿತ್ಯ, ಸಂಘಟನಾ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಅಜೆಕಾರು ಹೋಬಳಿ ಕಸಾಪ ಅಧ್ಯಕ್ಷರಾಗಿ ಆಯ್ಕೆಗೊಂಡ ಶೇಖರ ಅಜೆಕಾರು ಅವರಿಗೆ ಕುಂದಾಪ್ರ ಡಾಟ್ ಕಾಂ ಅಭಿನಂದನೆಗಳನ್ನು ಸಲ್ಲಿಸುತ್ತದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರುತ್ತಿದೆ. ಯುವಕರು ನಿರುದ್ಯೋಗಿಗಳಾಗುತ್ತಿದ್ದಾರೆ. ರೈತರ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಸಿಗದೆ ನಷ್ಟ ಅನುಭವಿಸುತ್ತಿರುವುದಲ್ಲದೇ ಜನಸಮಾನ್ಯರು ಕಂಗಾಲಾಗಿದ್ದಾರೆ. ಚುನಾವಣೆಯ ಪೂರ್ವದಲ್ಲಿ ಕೇಂದ್ರ ಸರಕಾರ ನೀಡಿದ ಆಶ್ವಾಸನೆಗಳನ್ನು ಈಡೇರಿಸದೆ ಅನ್ಯಾಯವೆಸಗುತ್ತಿದೆ ಎಂದು ಆರೋಪಿಸಿ ಸಿಪಿಐ(ಎಂ) ಕುಂದಾಪುರ ಹಾಗೂ ಬೈಂದೂರು ವಲಯ ಸಮಿತಿ ನೇತೃತ್ವದಲ್ಲಿ ಇಲ್ಲಿನ ಶಾಸ್ತ್ರೀ ವೃತ್ತದ ಬಳಿ ಪ್ರತಿಭಟನೆ ನಡೆಯಿತು. ಶಾಸ್ತ್ರೀ ವೃತ್ತದಿಂದ ಕುಂದಾಪುರ ಮಿನಿವಿಧಾನಸೌಧದ ವರೆಗೆ ಪ್ರತಿಭಟನೆಯಲ್ಲಿ ಸಾಗಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ತಹಶೀಲ್ದಾರರ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಸಿಪಿಐ(ಎಂ) ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಕೆ. ಶಂಕರ್, ಸಿಪಿಐ(ಎಂ) ಕುಂದಾಪುರ ವಲಯ ಕಾರ್ಯದರ್ಶಿ ಎಚ್. ನರಸಿಂಹ, ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ್, ವೆಂಕಟೇಶ ಕೋಣಿ, ಮಹಾಬಲ ವಡೇರಹೊಬಳಿ, ರಾಜೀವ ಪಡುಕೋಣೆ, ಸುಬ್ರಹ್ಮಣ್ಯ ಆಚಾರ್, ಸಂತೋಷ್ ಹೆಮ್ಮಾಡಿ, ನಾಗರತ್ನ ನಾಡ ಮೊದಲಾದವರು ಭಾಗವಹಿಸಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮರವಂತೆ ಮೀನುಗಾರರ ಸಹಕಾರಿ ಸಂಘದ ಮುಂದಿನ ಅವಧಿಯ ಅಧ್ಯಕ್ಷರಾಗಿ ಪ್ರವೀಣ ಖಾರ್ವಿ ಆಯ್ಕೆಯಾದರು. ರತ್ನಾಕರ ಖಾರ್ವಿ ಉಪಾಧ್ಯಕ್ಷರಾಗಿದ್ದು, ಮಾಧವ ಖಾರ್ವಿ, ನಾಗರಾಜ ಪಟ್ಗಾರ್, ಲೋಕೇಶ ಖಾರ್ವಿ, ನಾಗರಾಜ ಖಾರ್ವಿ, ಜನಾರ್ದನ ಕೆ. ಎಂ, ಸುರೇಶ ಖಾರ್ವಿ, ರಾಜೇಶ್ವರಿ ಖಾರ್ವಿ, ಲೀಲಾವತಿ ಪಿ. ಖಾರ್ವಿ ನಿರ್ದೇಶಕರಾಗಿರುವರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತ್ರಾಸಿ ಮೋವಾಡಿ ಕ್ರಾಸ್ ಬಳಿ ಶಾಲಾ ಮಕ್ಕಳ ಓಮ್ನಿ ಹಾಗೂ ಬಸ್ ನಡುವೆ ನಡೆದ ಭೀಕರ ಅಫಘಾತದಲ್ಲಿ ಮೃತಪಟ್ಟ ಡಾನ್ ಬಾಸ್ಕೊ ಶಾಲೆಯ ಎಂಟು ಮಕ್ಕಳ ಪೈಕಿ ಆರು ಮಕ್ಕಳ ಪೋಷಕರಿಗೆ ಶಿಕ್ಷಕ ಹಾಗೂ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ನಿಧಿಯಿಂದ ಮಂಜೂರಾದ ಪರಿಹಾರದ ಚೆಕ್ ವಿತರಿಸಲಾಯಿತು. ಬೈಂದೂರು ಶಾಸಕ ಗೋಪಾಲ ಪೂಜಾರಿ ಘಟನೆಯ ಬಗೆಗೆ ವಿಷಾದ ವ್ಯಕ್ತಪಡಿಸಿ ಮೃತರಾದ ಮಕ್ಕಳ ಪೈಕಿ ಯುಕೆಜಿಯಲ್ಲಿ ಓದುತ್ತಿದ್ದ ಈರ್ವ ಮಕ್ಕಳ ಪೋಷಕರಿಗೂ ಪರಿಹಾರ ದೊರೆಯುವಂತೆ ಸರಕಾರದ ಗಮನಕ್ಕೆ ತರಲಾಗುವುದು ಎಂದರು. ಈ ಸಂದರ್ಭದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ್, ಬೈಂದೂರು ವಲಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿಶ್ವನಾಥ ಪೂಜಾರಿ, ಕಟ್‌ಬೆಲ್ತೂರು ಗ್ರಾಪಂ ಅಧ್ಯಕ್ಷ ಶರತ್‌ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ನೆರವು ನೀಡುವ ಕೈಗಳು ಹೆಚ್ಚಾಗಲಿ. ನೆರವು ಪಡೆದವರು ಸ್ವಾವಲಂಭಿಗಳಾಗಲಿ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ರಾಮಕ್ಷತ್ರಿಯ ಸಮುದಾಯದ ಏಳಿಗೆಗೋಸ್ಕರ ಸಮಾನ ಮನಸ್ಕರು ಒಟ್ಟಾಗಿ ಸ್ವಾರ್ಥರಹಿತವಾಗಿ ಶ್ರಮಿಸುತ್ತಿದ್ದು, ರಾಮಕ್ಷತ್ರಿಯ ಸಮುದಾಯದವರು ಇದರ ನೆರವು ಪಡೆದುಕೊಳ್ಳುವುದಲ್ಲದೇ ಸ್ವಾವಲಂಭಿಗಳಾಗುವತ್ತ ಆಲೋಚಿಸಬೇಕಾಗಿದೆ ಎಂದು ಮಾಜಿ ಶಾಸಕ, ವಿಶ್ವ ರಾಮಕ್ಷತ್ರಿಯ ಸಂಘದ ಅಧ್ಯಕ್ಷ ಕೆ. ಲಕ್ಷ್ಮೀನಾರಾಯಣ ಹೇಳಿದರು. ಅವರು ಇಲ್ಲಿನ ಶ್ರೀ ಸೀತಾರಾಮಚಂದ್ರ ಕಲ್ಯಾಣ ಮಂಟಪದಲ್ಲಿ ಜರುಗಿದ ಶ್ರೀ ರಾಮ ವಿವಿಧೋದ್ದೇಶ ಟ್ರಸ್ಟ್ ರಿ. ಬೈಂದೂರು ಇದರ ನಾಲ್ಕನೇ ವರ್ಷದ ಟ್ರಸ್ಟ್ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು. ಮುಂಬೈನ ಉದ್ಯಮಿ ಗಣಪತಿ ಬಿ. ಗಂಗೊಳ್ಳಿ ಮಾತನಾಡಿ ರಾಮಕ್ಷತ್ರಿಯ ಸಮುದಾಯದಲ್ಲಿ ನೆರವು ನೀಡಲು ಶಕ್ತರಾಗಿರುವ ನೂರಾರು ಮಂದಿಯಿದ್ದು ಅವರೇ ಸ್ವಪ್ರೇರಣೆಯಿಂದ ಸಮುದಾಯದ ಅಶಕ್ತರಿಗೆ ನೆರವಾಗಲು ಮುಂದೆ ಬರುವ ಔದಾರ್ಯ ತೋರಬೇಕಿದೆ. ಇದು ನಮ್ಮೊಳಗಿನ ಮನೋಶ್ರಿಮಂತಿಕೆನ್ನೂ ಹೆಚ್ಚುತ್ತದೆ ಎಂದರು. ಬೆಂಗಳೂರಿನ ಉದ್ಯಮಿ ಜಿ. ಶಶಿಕಾಂತ ಮಾತನಾಡಿ ಮಾನವ ದುಡಿದು ಗಳಿಸಿದ್ದನ್ನು ಒಳ್ಳೆಯ ಕಾರ್ಯಕ್ಕೆ ವಿನಿಯೋಗಿಸಿದರೇ ದುಡಿಮೆಗೂ ಒಂದು ಅರ್ಥ ಬರುತ್ತದೆ…
ಕುಂದಾಪ್ರ ಡಾಟ್ ಕಾಂ ಸುದ್ದಿ.ಕುಂದಾಪುರ: ತಾಲೂಕಿನ ವಂಡ್ಸೆ ಸಮೀಪದ ಚಕ್ರಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಮೀನುಗಾರನೊಬ್ಬ ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ವರದಿಯಾಗಿದೆ. ತಾಲೂಕಿನ ಕರ್ಕುಂಜೆ ನಿವಾಸಿ ಸಂಜೀವ ಮೊಗವೀರ (53) ಮೃತಪಟ್ಟವರು. ಶನಿವಾರ ಮಧ್ಯಾಹ್ನ ಮೀನುಗಾರಿಕೆಗೆ ಮನೆಯಿಂದ ತೆರಳಿದ್ದರು ಸಂಜೆಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಹುಡುಕಾಟ ನಡೆಸಲಾಗಿತ್ತು. ಹೊಳೆಯಲ್ಲಿ ದೋಣಿ ಸಿಕ್ಕರೂ, ಸಂಜೀವ ಮೊಗವೀರ ಪತ್ತೆಯಾಗಿರಲಿಲ್ಲ. ಭಾನುವಾರ ಸಂಜೆ ಬಗ್ವಾಡಿ ಸೇತುವೆ ಬಳಿ ಸಂಜೀವ ಮೊಗವೀರ ಮೃತ ದೇಹ ಪತ್ತೆಯಾಗಿದೆ.ಮೃತರು ಗೋವಾ ರಾಜ್ಯದಲ್ಲಿ ಮೀನುಗಾರಿಕೆ ವೃತ್ತಿ ಮಾಡಿಕೊಂಡಿದ್ದು, ಬೋಟ್‌ಗೆ ರಜೆ ಇದ್ದ ಕಾರಣ ಊರಿಗೆ ಬಂದು ದೋಣಿ ಖರೀದಿಸಿ ಚಕ್ರಾ ನದಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಮೃತರು ಪತ್ನಿ, ಇಬ್ಬರು ಪುತ್ರಿ ಅಗಲಿದ್ದು, ಮೀನುಗಾರ ಕುಟುಂಬದ ಆಧಾರ ಸ್ಥಂಭ ತಪ್ಪಿದೆ. ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
