Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಸ್ಥಾನದಲ್ಲಿರುವ ಭಾರತ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ವಿಶ್ವದ ಮುಂಚೂಣಿ ಸ್ಥಾನದಲ್ಲಿದೆ. ಪ್ರಜಾಪ್ರಭುತ್ವದ ಸಫಲತೆಗೆ ದೇಶದ ಜನಸಾಮಾನ್ಯರಲ್ಲಿನ ನಾಯಕತ್ವ ಕಾರಣವಾಗಿದೆ. ವಿದ್ಯಾರ್ಥಿದಿಸೆಯಿಂದಲೇ ನಾಯಕತ್ವ ಗುಣಗಳು ಬೆಳೆಯಬೇಕು. ಅದಕ್ಕೆ ಶಾಲಾ ಸಂಸತ್ತುಗಳು ಪೂರಕವಾಗಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜ ಹೇಳಿದರು. ಅವರು ಕುಂದಾಪುರದ ಸೆಂಟ್ ಮೇರಿಸ್ ವಿದ್ಯಾ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸರಕಾರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯ, ಸಂವಿಧಾನದ ರಕ್ಷಣೆ ಪ್ರತಿಯೋಬ್ಬರ ಆದ್ಯ ಕರ್ತವ್ಯವಾಗಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ, ಶಾಸಕಾಂಗ ವ್ಯವಸ್ಥೆಯ ಅರಿವನ್ನು ವಿದ್ಯಾರ್ಥಿಗಳು ಹೊಂದಬೇಕು. ಒಂದು ಮತವೂ ಕೂಡಾ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮುಖ್ಯ ಹಾಗೂ ನಿರ್ಣಯಕವಾಗಿರುತ್ತದೆ ಎಂದರು. ವಿದ್ಯಾರ್ಥಿಗಳಲ್ಲಿ ಛಲ ಇರಬೇಕು. ನಿರ್ದಿಷ್ಟ ಗುರಿ ಹೊಂದಬೇಕು, ಗುರಿಗಾಗಿ ತುಡಿಯುವ ಮನಸ್ಸು ಇರಬೇಕು. ನಾಯಕತ್ವ ಗುಣವನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು. ಸತ್ಪ್ರಜೆಗಳಾಗಿ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಬೇಕು ಎಂದು ಹೇಳಿದರು. ಸಂಚಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂಘಟನೆಯಿಂದ ಮಹಿಳೆಯರು ಸಬಲರಾಗುವುದು ಸಾಧ್ಯ. ಹಾಗೆ ಸಬಲರಾದರೆ ಮಾತ್ರ ಸಮುದಾಯದ ಪ್ರಧಾನ ವಾಹಿನಿಗೆ ಬರಬಹುದು. ಸಂಘಟನೆಯಲ್ಲಿ ಒಗ್ಗಟ್ಟು ಸಾಧಿಸುವುದು ಅದರ ಅಸ್ತಿತ್ವಕ್ಕೆ ತೀರ ಅಗತ್ಯ ಎನ್ನುವುದನ್ನು ಮಹಿಳೆಯರು ಸದಾ ನೆನಪಿಟ್ಟುಕೊಳ್ಳಬೇಕು ಎಂದು ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಐ. ವಸಂತಕುಮಾರಿ ಹೇಳಿದರು. ಮರವಂತೆಯಲ್ಲಿ ಈಚೆಗೆ ಅಸ್ತಿತ್ವಕ್ಕೆ ಬಂದ ಸ್ನೇಹಾ ಮಹಿಳಾ ಮಂಡಲವನ್ನು ರವಿವಾರ ಸಾಧನಾ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಉದ್ಘಾಟಿಸಿದ ಬಳಿಕ ಮಾತನಾಡಿದರು. ಮಹಿಳಾ ಸಂಘಟನೆ ಸಮಾಜಕ್ಕೆ ಕೊಡುಗೆ ನೀಡುವುದು ಸಾಧ್ಯ ಎನ್ನುವುದನ್ನು ಮಹಿಳಾ ಮಂಡಲ ತೋರಿಸಿಕೊಡಬೇಕು. ಪರಿಸರದ ಸ್ವಚ್ಛತೆ ಅದರ ಆದ್ಯತೆಯ ವಿಷಯವಾಗಬೇಕು ಎಂದು ಅವರು ನುಡಿದರು. ಮಂಡಲದ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಪ್ರೌಢಶಾಲಾ ಅಧ್ಯಾಪಕಿ ಡಾ. ಯಶೋಧಾ ಕರನಿಂಗ ಹಿಂದೆ ಮೇಲಿನ ಸ್ತರದಲ್ಲಿದ್ದ ಕೆಲವೇ ಮಹಿಳೆಯರ ಸಾಧನೆಯನ್ನು ಉಲ್ಲೇಖಿಸಿ ಸಮಾಜದಲ್ಲಿ ಸ್ತ್ರೀಯರಿಗೆ ಮಹತ್ವದ ಸ್ಥಾನವಿತ್ತು ಎನ್ನಲಾಗುತ್ತಿದೆ. ಆದರೆ ಎಲ್ಲ ಕಾಲದಲ್ಲೂ ಮಹಿಳೆಯರ ಸ್ಥಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕೋಟ ಪೊಲೀಸರು ನಡೆಸಿದ ಕಾರ್ಯಾಚರಣೆಯ ವೇಳೆ ಬಹುಕಾಲದಿಂದ ಉಡುಪಿ ಜಿಲ್ಲೆಯ ಹಲವಾರು ಜಾಗಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಓರ್ವನನ್ನು ಸುಮಾರು 1 ಕೆಜಿ 700 ಗ್ರಾಂ ಗಾಂಜಾ ಸಹಿತ ಬಂಧಿಸಿದ್ದಾರೆ. ಕೋಟ ಮೂರು ಕೈ ಬಳಿಯ ಮಾರಿಗುಡಿ ದೇವಸ್ಥಾನದ ಬಳಿ ಆರೋಪಿಯನ್ನು ಮಾಲು ಸಹಿತ ಅಪರಾಧಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಗುಲ್ಬರ್ಗಾ ಮೂಲದ ಭೀಮಶಂಕರ್ (50) ಎಂಬಾತನೇ ಗಾಂಜಾ ಸರಬರಾಜು ಮಾಡುತ್ತಿದ್ದ ಸಮಯದಲ್ಲಿ ಸಿಕ್ಕಿಬಿದ್ದಾತ. ಸುಮಾರು 2 ವರ್ಷಗಳಿಂದ ಕೋಟದ ಪಡುಕರೆ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈತ ಕುಂದಾಪುರ, ಕೋಟೇಶ್ವರ, ಮಣಿಪಾಲ ಮೊದಲಾದ ಕಡೆ ಗಾಂಜಾ ಸರಬರಾಜು ಮಾಡುತ್ತಿದ್ದ. ಗಾಂಜಾ ಸರಬರಾಜು ವಿಚಾರದಲ್ಲಿ ಬಹುಕಾಲದಿಂದ ಬೆನ್ನು ಹತ್ತಿದ್ದ ಕೋಟ ಉಪ ನಿರೀಕ್ಷಕ ಕಬ್ಬಾಳ್‌ರಾಜ್ ಎಚ್.ಡಿ. ಅವರು ಸೋಮವಾರದಂದು ತಮ್ಮ ಸಿಬ್ಬಂದಿಗಳೊಂದಿಗೆ ಮಾಹಿತಿ ಹಿಡಿದು ತೆರಳುತ್ತಿದ್ದಾಗ, ಸಾಲಿಗ್ರಾಮದಿಂದ ಬಸ್‌ನಿಂದ ಇಳಿದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನುಮಾನಸ್ಪದವಾಗಿ ಕೈಯಲ್ಲಿ ಚೀಲ ಹಿಡಿದು ನಡೆದು ಸಾಗುತ್ತಿದ್ದ ಭೀಮ…

Read More

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಸಾಧಿಸುವ ಛಲ, ಪೂರಕ ಧೈರ್ಯ, ಜೊತೆಯಲ್ಲಿ ಆತ್ಮವಿಶ್ವಾಸ ಇದ್ದರೆ ಅಸಾಧ್ಯವೆಂಬುವುದನ್ನು ಸಾಧಿಸಬಹುದು ಎನ್ನುವುದಕ್ಕೆ ಆರ್ಡಿಯ ಹರ್ಷಾದ್ ರಾವ್ ಅವರೇ ಜ್ವಲಂತ ಸಾಕ್ಷಿ. ಇವರು ಮಾಡಿರುವುದು ಅಂತಿಂಥ ಸಾಧನೆಯಲ್ಲ ವಿಶ್ವದ ಅತೀ ಎತ್ತರದ 8,848 ಮೀ. ಎತ್ತರದ ಮೌಂಟ್ ಎವರೆಸ್ಟ್ ಶಿಖರದ ತುತ್ತ ತುದಿ ಏರಿದ್ದು. ಮೂಲತಃ ಕುಂದಾಪುರ ತಾಲೂಕಿನ ಆರ್ಡಿಯ ಕೆರ್ಜಾಡಿಯ ಯುವಕ ಹುಬ್ಬೆರಿಸುವ ಮೇರು ಸಾಧನೆ ಮಾಡಿದ್ದಾರೆ. ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಯಾದ ಕಮಲಾಕ್ಷ ಮಹಾಲಿಂಗ ರಾವ್ ಮತ್ತು ಹೇಮಾಲತಾ ದಂಪತಿಗಳ ಪುತ್ರ ಹರ್ಷದ್ ಕಮಲಾಕ್ಷ ರಾವ್ ಈ ಸಾಧನೆ ಮಾಡಿರುವ ಅಪ್ರತಿಮ ಸಾಧಕ. ಪುಣೆಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಹರ್ಷದ್ ಮೇ.21ರಂದು ಎವರೆಸ್ಟ್ ತುತ್ತ ತುದಿ ತಲುಪಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಈ ಸಾಧನೆ ಮಾಡಲು ಅವರು ೮ ತಿಂಗಳುಗಳ ಕಾಲ ತಯಾರಿ ನಡೆಸಿದ್ದಾರೆ. ಸುಮಾರು ೨೮ಲಕ್ಷಕ್ಕೂ ಹೆಚ್ಚು ಹಣ ವಿನಿಯೋಗಿಸಿದ್ದಾರೆ. ಮಾ.29ರಂದು ಪರ್ವತಾರೋಹಣಕ್ಕೆ ಮುಂದಾದ ಅವರು ಕೊನೆಗೂ ಛಲದಿಂದ ಕುಂದಾಪುರದ ಯುವಕ ಎವರೆಸ್ಟ್ ಶಿಖರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯ ಪೇಟೆ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮೊಕ್ಕಾಂನಲ್ಲಿರುವ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಶನಿವಾರ ದೇವಸ್ಥಾನದ ಶ್ರೀ ಮುಖ್ಯಪ್ರಾಣ ದೇವರಿಗೆ ೧೦೮ ಪವಮಾನ ಕಲಶಾಭಿಷೇಕ, ಬಳಿಕ ದೇವಸ್ಥಾನದಲ್ಲಿ ನಡೆದ ಲಘು ವಿಷ್ಣುಹವನದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುರ್ಣಾಹುತಿ ನೆರವೇರಿಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಮೋಹನದಾಸ ಭಟ್, ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ, ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ, ದೇವಳದ ಮೊಕ್ತೇಸರ ಜಿ.ರಘುವೀರ ನಾಯಕ್, ಅಧ್ಯಕ್ಷ ಡಾ.ಕಾಶೀನಾಥ ಪೈ, ದೇವಳದ ಆಡಳಿತ ಮಂಡಳಿ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಮತ್ತು ಜಿಎಸ್‌ಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾನವೀಯತೆಗೆ ಒತ್ತುಕೊಟ್ಟು ಮನುಕುಲದ ಕಲ್ಯಾಣಕ್ಕಾಗಿ ದುಡಿಯುತ್ತಿರುವ ರೋಟರಿ ಕ್ಲಬ್ ಜಗತ್ತಿನಾದ್ಯಂತ ನೀಡುತ್ತಿರುವ ಸೇವೆ ಅನನ್ಯವಾದುದು. ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸಿ ಅವಶ್ಯಕತೆಯಿರುವ ಸೇವೆಯನ್ನು ಗುರುತಿಸಿ ಅದನ್ನು ಯಶಸ್ವಿಯಾಗಿ ಕಾರ್ಯರೂಪಕ್ಕಿಳಿಸಿದೆ. ವಿಶ್ವದಾದ್ಯಂತ ನಡೆಸಿದ ಪಲ್ಸ್ ಪೋಲಿಯೋ ಆಂದೋಲನದಿಂದಾಗಿ ಇಂದು ಜಗತ್ತು ಪೋಲಿಯೋ ಮುಕ್ತವಾಗಿದೆ. ಇಂತಹ ಸಮಾಜಮುಖಿ ಕಾರ್ಯಕ್ರಮಗಳಿಂದ ರೋಟರಿ ಜನಸ್ನೇಹಿಯಾಗಿದೆ ಎಂದು ಮಾಜಿ ರೋಟರಿ ಜಿಲ್ಲಾ ಗವರ್ನರ್ ಡಾ. ದೇವದಾಸ ರೈ ಹೇಳಿದರು. ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ಕೋಟೇಶ್ವರದ ಸಹನಾ ಕನ್‌ವೆನ್ಶನ್ ಸೆಂಟರ್‌ನಲ್ಲಿ ನಡೆದ ಪದಪ್ರದಾನ ಸಮಾರಂಭದಲ್ಲಿ ನೂತನ ಅಧ್ಯಕ್ಷ, ಕಾರ್ಯದರ್ಶಿಗಳಿಗೆ ಪದಪ್ರದಾನ ನೆರವೇರಿಸಿ ಮಾತನಾಡಿದರು. ರೋಟರಿಯು ಯುವಜನರಿಗಾಗಿ ರೋಟರ‍್ಯಾಕ್ಟ್, ಶಾಲಾ ಮಕ್ಕಳಿಗೆ ಇಂಟರ‍್ಯಾಕ್ಟ್‌ನಂತಹ ಸಹ ಸಂಸ್ಥೆಗಳನ್ನು ಆರಂಭಿಸಿ ನಾಯಕತ್ವ, ಸೇವಾಗುಣಗಳನ್ನು ಪ್ರೇರೆಪಿಸುವ ಕಾರ್ಯದಲ್ಲಿ ತೊಡಗಿದೆ. ಪಲ್ಸ್ ಪೋಲಿಯೋದ ಯಶಸ್ಸಿನ ಬಳಿಕ ಜಗತ್ತಿನಾದ್ಯಂದ ಸಾಕ್ಷರತೆಗೆ ಆಧ್ಯತೆ ನೀಡಿದೆ. ತನ್ಮೂಲಕ ಸೇವೆಗೆ ನೂತನ ಭಾಷ್ಯ ಬರೆದು ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ವಿಶ್ವದಾದ್ಯಂತ ಅಗ್ರಸ್ಥಾನವನ್ನು ಹೊಂದಿದೆ ಎಂದರು. ರೋಟರಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕರ್ನಾಟಕ ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘ ಉಪ್ಪುಂದ ಇದರ ವಾರ್ಷಿಕ ಮಹಾಸಭೆಯು ಖಂಬದಕೋಣೆ ನಿರ್ಮಾಣ ಹಂತದಲ್ಲಿರುವ ಸಂಸ್ಥೆಯ ಸಭಾಭವನದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ನವೀನ್‌ಚಂದ್ರ ಉಪ್ಪುಂದ ಅಧ್ಯಕ್ಷತೆವಹಿಸಿದ್ದರು. ಇತ್ತೀಚಿಗೆ ನಿಧನರಾದ ಸಮುದಾಯದ ಹಿರಿಯ ಹಾಗೂ ಗೌರವಾನ್ವಿತರಾದ ಟಿ.ಕೆ. ಖಾರ್ವಿಯವರಿಗೆ ಸಭೆಯಲ್ಲಿ ನುಡಿನಮನ ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮುದಾಯದ ಸಾಧಕರಿಗೆ, ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ೨೦೧೫-೧೬ರ ಸಾಲಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯ ಪಿ. ರಾಮದಾಸ್ ಖಾರ್ವಿ ಗತವರ್ಷದ ನಿರ್ಣಯ ಮಂಡಿಸಿದರು. ಕೋಶಾಧಿಕಾರಿ ಮರವಂತೆ ಶಂಕರ ಖಾರ್ವಿ ವರದಿ ವಾಚಿಸಿದರು. ಸಂಘದ ಕಾರ್ಯದರ್ಶಿ ಎ. ಆನಂದ ಖಾರ್ವಿ ಆಯ-ವ್ಯಯವನ್ನು ಮಂಡಿಸಿ ಅನುಮೋದನೆ ಪಡೆದರು. ಪ್ರಸನ್ನ ಕುಮಾರ್ ಸನ್ಮನಿತರ ಪಟ್ಟಿಯನ್ನು ವಾಚಿಸಿದರು. ಉಪಾಧ್ಯಕ್ಷ ಕೊಡೇರಿ ಕೇಶವ ಖಾರ್ವಿ, ಜೊತೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿದ್ಯಾರ್ಥಿಜೀವನದಲ್ಲಿ ದೊರೆತ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡು ವಿದ್ಯಾರ್ಥಿ ಸಂಸತ್ತಿನಲ್ಲಿ ತೊಡಗಿಸಿಕೊಂಡರೆ, ಭವಿಷ್ಯದಲ್ಲಿಯೂ ಉತ್ತಮ ನಾಯಕರಾಗಲು ಸಾಧ್ಯವಿದೆ ಎಂದು ರಂಗತಜ್ಞ ಡಾ ಶ್ರೀಪಾದ ಭಟ್ ಶಿರಸಿ ಹೇಳಿದರು. ರತ್ತುಬಾಯಿ ಜನತಾ ಪ್ರೌಢಶಾಲೆಯಲ್ಲಿ ಇತ್ತಿಚಿಗೆ ಜರುಗಿದ ಕಾರ್ಯಕ್ರಮದಲ್ಲಿ ಶಾಲಾ ಸಂಸತ್ತು ಹಾಗೂ ರಂಗಸ್ಪರ್ಶ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮುಖ್ಯ ಅತಿಥಿ ಯುಸ್ಕೋರ್ಡ್ ಟ್ರಸ್ಟ್‌ನ ಅಧ್ಯಕ್ಷ ಸುಧಾಕರ ಪಿ. ಉಪಸ್ಥಿತರಿದ್ದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ಹಾಗೂ ವಿದ್ಯಾರ್ಥಿ ಸಂಸತ್ತಿನ ರಾಷ್ಟ್ರಪತಿ ಜಿ. ಎಸ್. ಭಟ್‌ರವರು ಪ್ರಮಾಣ ವಚನ ಭೋದಿಸಿ ಉತ್ತಮಕಾರ್ಯ ನಿರ್ವಹಿಸುವಂತೆ ಮಾರ್ಗದರ್ಶನ ನೀಡಿದರು. ಶಿಕ್ಷಕರಾದ ಪ್ರಕಾಶ್ ಎಮ್. ಸ್ವಾಗತಿಸಿ, ಮಂಜು. ಕೆ ಅವರು ಪ್ರಸ್ತಾವನೆಗೈದರು. ಚಂದ್ರ ದೇವಾಡಿಗ ಧನ್ಯವಾದಗೈದರು ಶಾಲಾ ಸಂಸತ್ತಿನ ಮಾರ್ಗದರ್ಶಕ ಶಿಕ್ಷಕ ಆನಂದ ಮದ್ದೋಡಿ ನಿರೂಪಿಸಿದರು. ಬಳಿಕ ರಂಗತಜ್ಞ ಡಾ. ಶ್ರೀಪಾದ ಭಟ್ ಶಿರಸಿ ಇವರು ಶಾಲಾ ವಿದ್ಯಾರ್ಥಿಗಳಿಗೆ ರಂಗಸ್ವರ್ಶ ತರಬೇತಿಯನ್ನು ನಡೆಸಿಕೊಟ್ಟರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪಕ್ಷದ ತತ್ವ ಸಿದ್ದಾಂತಗಳ ಆಧಾರದಲ್ಲಿ ಕೆಲಸ ಮಾಡುವ ಸಾಮಾನ್ಯ ಕಾರ್ಯಕರ್ತನನ್ನೂ ಅಸಮಾನ್ಯನಾಗಿ ಬೆಳೆಯಲು ಬಿಜೆಪಿ ಪಕ್ಷ ಅತ್ಯುತ್ತಮ ತಳಹದಿ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿದ್ದ ನರೇಂದ್ರ ಮೋದಿ ದೇಶದ ಪ್ರಧಾನ ಮಂತ್ರಿ ಹುದ್ದೆಗೇರಿದ್ದು ಇದಕ್ಕೊಂದು ಸ್ಪಷ್ಟ ನಿದರ್ಶನ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು. ಕುಂದಾಪುರ ಬಿಜೆಪಿ ಕಚೇರಿಯಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಭಾರತ ಮಾತೆಗೆ ಪುಪ್ಪಾರ್ಪಣೆ ಮಾಡಿ ಉದ್ಘಾಟಿಸಿ ಮಾತನಾಡಿದ ಅವರು ಅನೇಕ ಹಿರಿಯ ನಾಯಕರ ಶ್ರಮದಿಂದ ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ. ಅದನ್ನು ಸಮರ್ಥವಾಗಿ ಮುನ್ನೆಡೆಸುವ ಜವಾಬ್ದಾರಿ ನೂತನ ಪದಾಧಿಕಾರಿಗಳ ಹೆಗಲ ಮೇಲಿದೆ. ಒಳಿತು ಕೆಡುಕುಗಳನ್ನು ಆಂತರಿಕವಾಗಿಯೇ ಚರ್ಚಿಸಿ, ಪಕ್ಷದ ತಳಹದಿಯನ್ನು ಗಟ್ಟಿಗೊಳಿಸಿಕೊಳ್ಳುವ ಜವಾಬ್ದಾರಿ ಪ್ರತಿ ಕಾರ್ಯಕರ್ತನ ಮೇಲೂ ಇದೆ. ಉಡುಪಿ ಜಿಲ್ಲೆ ಬಿಜೆಪಿ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಪದಗ್ರಹಣ ನೆರೆವೇರಿಸಿದರು. ನಿರ್ಗಮಿತ ಅಧ್ಯಕ್ಷ ರಾಜೇಶ್ ಕಾವೇರಿ ಅವರು ನೂತನ ಅಧ್ಯಕ್ಷ ಕಾಡೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಗರದ ಮಧ್ಯಭಾಗದಲ್ಲಿರುವ ಬೋರ್ಡ್ ಹೈಸ್ಕೂಲ್ ಮೈದಾನವನ್ನು ಪ್ರಾರ್ಥನಾ ಕೇಂದ್ರವಾಗಿ ಪರಿವರ್ತಿಸುತ್ತಿರುವುದಲ್ಲದೇ ಮುಸ್ಲಿಂ ಸಮುದಾಯದ ಖಾಸಗಿ ಸೊತ್ತನ್ನಾಗಿ ಮಾಡಿಕೊಳ್ಳುವ ಹುನ್ನಾರ ನಡೆಯುತ್ತಿದ್ದು ಇದನ್ನು ಬಜರಂಗದಳ ಕುಂದಾಪುರ ಘಟಕ ಖಂಡಿಸುತ್ತದೆ ಎಂದು ಬಜರಂಗದಳ ಜಿಲ್ಲಾ ಸಹಸಂಚಾಲಕ ಗಿರೀಶ್ ಕುಂದಾಪುರ ಹೇಳಿದರು. ಕುಂದಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿರುವ ಟಿಪ್ಪು ಸ್ಮಾರಕವಿದ್ದು, ಇಲ್ಲಿ ಮುಸ್ಲಿಂ ಭಾಂದವರು ವರ್ಷಕ್ಕೆ ಎರಡು ಬಾರಿ ಸಾಮೂಹಿಕ ಪ್ರಾರ್ಥನೆ ನಡೆಸುತ್ತಾರೆ. ಹೀಗೆಯೇ ಯಾಥಾಸ್ಥಿತಿ ಮುಂದುವರಿಸಲು ನಮ್ಮ ಅಭ್ಯಂತರವಿಲ್ಲ. ಆದರೆ ಸರಕಾರಿ ಶಾಲೆಯ ಜಾಗವನ್ನು ಪ್ರಾರ್ಥನೆ ನಡೆಸುವ ಉದ್ದೇಶಕ್ಕಾಗಿ ಖಾಸಗಿ ಸೊತ್ತನ್ನಾಗಿಸಿಕೊಳ್ಳುವ ಕಾರ್ಯಕ್ಕೆ ಮುಂದಾದರೇ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳೇ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದವರು ಎಚ್ಚರಿಸಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಆರ್‌ಟಿಸಿ ತಿದ್ದುವ ಪ್ರಯತ್ನ: ಸಾರ್ವಜನಿಕ ಅಹವಾಲು ಸ್ವೀಕರಿಸಲು ಕುಂದಾಪುರಕ್ಕೆ ಬಂದಿದ್ದ ಸಚಿವ ಪ್ರಮೋದ್ ಮಧ್ವರಾಜ್ ಬಳಿ ಕೆಲ ಮುಸ್ಲಿಂ ಮುಖಂಡರು ಜಾಗ ಬಿಟ್ಟುಕೊಡುವಂತೆ ಮನವಿ ಮಾಡಿದ್ದಾರೆ. ಮೂಲ ಅಡಂಗಲ್ ದಾಖಲೆಯಲ್ಲಿ ಶಾಲಾ…

Read More