ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜೆಸಿಐ ಪುತ್ತೂರು ಆತಿಥೇಯದಲ್ಲಿ ಜರುಗಿದ ರಜತವಿಕಾಸ ಅಭಿವೃದ್ಧಿ ಮತ್ತು ಬೆಳವಣಿಗೆ ವ್ಯವಹಾರ ಸಮ್ಮೇಳನದಲ್ಲಿ ಉದ್ಯಮ, ಸಮಾಜಸೇವಾ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಜೆಸಿ ಹುಸೇನ್ ಹೈಕಾಡಿ ಅವರಿಗೆ ಸಾಧನಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ವ್ಯವಹಾರ ವಿಭಾಗದ ನಿರ್ದೇಶಕ ಸಚಿನ್, ವಲಯಾಧ್ಯಕ್ಷ ಸಂದೀಪ್ಕುಮಾರ್, ಪೂರ್ವವಲಯಾಧ್ಯಕ್ಷ ಸಂಪತ್ ಸುವರ್ಣ, ಉಪಾಧ್ಯಕ್ಷ ನಿತಿನ್, ಕೃಷ್ಣಮೋಹನ್, ಚಂದ್ರಶೇಖರ್ ನಾಯರ್, ಕುಂದಾಪುರ ಸಿಟಿ ಜೆಸಿ ಅಧ್ಯಕ್ಷ ಮಂಜುನಾಥ ಕಾಮತ್, ಪೂರ್ವಾಧ್ಯಕ್ಷ ರಾಘವೇಂದ್ರ ನಾವಡ, ನಾಗೇಂದ್ರ ಪೈ, ಕಾರ್ಯದರ್ಶಿ ಗೌತಮ್ ನಾವಡ, ಸದಸ್ಯ ಶ್ರೀಕಾಂತ್ ಕೆ.ಎನ್ ಮೊದಲಾದವರು ಉಪಸ್ಥಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ವರದಿ. ಕುಂದಾಪುರ: ಕಳೆದ ಕೆಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು ಹುಡುಗಿಯ ಮನೆಯವರು ಹಾಗೂ ಮಾಜಿ ಪ್ರಿಯಕರನ ವಿರೋಧದ ನಡುವೆಯೇ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದು, ತಮಗೆ ರಕ್ಷಣೆ ನೀಡುವಂತೆ ಕೋರಿ ಕುಂದಾಪುರ ಠಾಣೆಗೆ ತೆರಳಿದ್ದ ಜೋಡಿಗಳಿಗೆ ಕುಟುಂಬದೊಂದಿಗೆ ರಾಜಿ ಸಂಧಾನ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಿದ ಘಟನೆ ಕುಂದಾಪುರ ಠಾಣೆಯಲ್ಲಿ ನಡೆದಿದೆ. ಕುಂದಾಪುರ ಮೂಡ್ಲಕಟ್ಟೆ ನಿವಾಸಿ, ಲಾರಿ ಚಾಲಕ ಪ್ರಶಾಂತ್ (25) ಹಾಗೂ ಕಾವ್ರಾಡಿಯ ಬಿಬಿಎಂ ಪದವೀಧರೆ ದಿವ್ಯಾಶಾಂತಿ (22) ಪರಸ್ಪರ ಪ್ರೀತಿಸುತ್ತಿದ್ದರು. ಒಂದೇ ಜಾತಿಯವರಾದರೂ ಪ್ರೀತಿಸಿ ಮದುವೆಯಾಗುವ ವಿಷಯ ತಿಳಿದಾಗ ಹುಡುಗಿಯ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಕೆಲವು ದಿನಗಳ ವರೆಗೆ ಕಾದು ಮನೆಯವರು ಒಪ್ಪದಿದ್ದಾಗ ಅ.14ರಂದು ಶಂಕರನಾರಾಯಣದ ದೇವಾಲಯಕ್ಕೆ ತೆರಳಿ ವಿವಾಹವಾಗಿದ್ದರು. ಹುಡುಗಿ ಮನೆಯವರ ವಿರೋಧ ಇದ್ದುದರಿಂದ ಪ್ರೇಮಗಳು ತಮಗೆ ರಕ್ಷಣೆ ನೀಡುವಂತೆ ಅಲ್ಲಿಂದ ಸೀದಾ ಕುಂದಾಪುರ ಪೊಲೀಸ್ ಠಾಣೆಗೆ ತೆರಳಿದ್ದರು. ಠಾಣಾಧಿಕಾರಿ ನಾಸಿರ್ ಹುಸೇನ್ ಎರಡೂ ಕುಟುಂಬದವರನ್ನು ಕರೆಯಿಸಿ ಅವರ ಮನವೊಲಿಸಿದ್ದು, ಪ್ರೇಮಿಗಳನ್ನು ಮನೆಗೆ ಕಳುಹಿಸಿದ್ದಾರೆ. ಈ…
ವೈ ಎಸ್. ಹರಗಿ ಅವರಿಗೆ ಡಾ. ಹೆಚ್. ಶಾಂತಾರಾಮ್ ಪ್ರಶಸ್ತಿ ಪ್ರದಾನ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ನಮ್ಮದಲ್ಲದ ಲೋಕವನ್ನು ನಮ್ಮದಾಗುವಂತೆ ಕಟ್ಟಿಕೊಡುವ ಸಾಮರ್ಥ್ಯ ಕಥೆ, ಕವನ ಮತ್ತು ಕಾದಂಬರಿಗಳಲ್ಲಿ ಅಡಗಿದೆ. ಸಾಹಿತ್ಯವನ್ನು ಸಂಗಾತಿಯನ್ನಾಗಿ ಮಾಡಿಕೊಂಡವರಿಗೆ ಅದರೊಳಗಿನ ಅಂತಃಶಕ್ತಿ ಅರಿವಾಗುತ್ತದೆ ಎಂದು ವಿಮರ್ಶಕ ಡಾ. ಹೆಚ್. ಎಸ್. ರಾಘವೇಂದ್ರ ರಾವ್ ಅವರು ಅಭಿಪ್ರಾಯಪಟ್ಟರು. ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಡಾ. ಹೆಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಒಬ್ಬ ಒಳ್ಳೆಯ ಸಾಹಿತ್ಯ ಒದುಗನಿಗೆ ಪ್ರಪಂಚದ ತನ್ನದಲ್ಲದ ಜೀವನದ ಸಂವೇದನೆ ಮತ್ತು ಸಂಘರ್ಷಗಳನ್ನು ಏಕಕಾಲದಲ್ಲಿ ಮನಸಿಗೆ ನಾಟುವಂತೆ ಅದನ್ನು ಅನಿಭವಿಸುವಂತೆ ಮಾಡುವುದು ಕಾದಂಬರಿಗಳು. ಅವು ಸೃಷ್ಠಿಸುವ ಪಾತ್ರಗಳು ಹೇಗೆ ಇರಲಿ ಅವು ನಮ್ಮದಾಗುತ್ತಾ ನಮ್ಮನ್ನು ನಾವು ಅರ್ಥೈಸಿಕೊಳ್ಳಲು ನಮ್ಮೊಳಗಿನ ಮನಸನ್ನು ತೆರೆದಿಡುತ್ತಾ ಹೋಗುತ್ತದೆ. ಕಾದಂಬರಿಗಳಿಗೆ ಪಾತ್ರವನ್ನು ಕಟ್ಟಿಕೊಡುವ ಶಕ್ತಿ ಇದೆ. ಕೆಲವೊಮ್ಮೆ ವಾಸ್ತವವನ್ನು ಹೇಳಲು ಅವಾಸ್ತವಿಕತೆಯನ್ನು ಬಳಸುತ್ತವೆ ಎಂದು ಹೇಳಿದರು. ಡಾ.ಹೆಚ್.ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ‘ಉರಿವ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಪ್ಪುಂದದ ತಾರಾಪತಿಯಿಂದ ಬೈಂದೂರು ಮದ್ದೋಡಿ ಕಡೆಗೆ ಅಕ್ರಮವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಟಾಟಾ ಏಸ್ ವಾಹನವನ್ನು ಅಡ್ಡಗಟ್ಟಿ ಅದರಲ್ಲಿದ್ದ ಮೂರು ದನಗಳನ್ನು ಬೈಂದೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಾಹನದಲ್ಲಿದ್ದ ಮೂವರ ಪೈಕಿ ಇಬ್ಬರು ಪರಾರಿಯಾಗಿದ್ದು, ಓರ್ವನನ್ನು ಬಂಧಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದು, ಪರವಾನಿಗೆಯಿಲ್ಲದೇ ಅಕ್ರಮವಾಗಿ ದನಗಳನ್ನು ಸಾಗಿಸುತ್ತಿದ್ದರೆನ್ನಲಾಗಿದೆ. ಸಾಗಾಟಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪ್ರ ಡಾಟ್ ಕಾಂ ವರದಿ. ಗಂಗೊಳ್ಳಿ: ಯಾವುದೇ ದಾನಕ್ಕಿಂದ ಅನ್ನದಾನ ಅತ್ಯಂತ ಪುಣ್ಯದ ಕೆಲಸ. ಹೀಗಾಗಿ ಅನೇಕ ದೇವಾಲಯಗಳಲ್ಲಿ ಹಾಗೂ ಶುಭ ಕಾರ್ಯಗಳಲ್ಲಿ ಅನ್ನದಾಸೋಹಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಆದರೆ ಶಿಕ್ಷಣಕ್ಕೆ ಹೆಚ್ಚಿನ ಹೆಸರುವಾಸಿಯಾಗಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಸದ್ದಿಲ್ಲದೆ ಪ್ರತಿನಿತ್ಯ ನೂರಾರು ಶಾಲಾ ವಿದ್ಯಾರ್ಥಿಗಳಿಗೆ ಅನ್ನದಾಸೋಹ ಕಾರ್ಯಕ್ರಮ ನಡೆಯುತ್ತಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಕಳೆದ ಏಳು ದಶಕಗಳಿಂದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ಉತ್ತಮ ಶಿಕ್ಷಣ ನೀಡುತ್ತಾ ಬಂದಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆಯು ರಾಜ್ಯದಲ್ಲೇ ಉತ್ತಮ ಹೆಸರು ಪಡೆದುಕೊಂಡು ಸಹಸ್ರಾರು ವಿದ್ಯಾರ್ಥಿಗಳ ಜನಮಾನಸದಲ್ಲಿ ಅಚ್ಚಳಿದೆ ಉಳಿದಿದೆ. ಪ್ರತಿನಿತ್ಯ ಸುಮಾರು ೩ ರಿಂದ ೧೦ ಕಿ.ಮೀ. ದೂರದಿಂದ ಬರುತ್ತಿರುವ ಸಹಸ್ರಾರು ಮಂದಿ ಗ್ರಾಮೀಣ ಪ್ರದೇಶದ ಮಕ್ಕಳು ಈ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾರ್ಜನೆಯಲ್ಲಿ ತೊಡಗಿಕೊಂಡಿದ್ದಾರೆ. ಈ ವಿದ್ಯಾಸಂಸ್ಥೆಗೆ ಬರುವ ವಿದ್ಯಾರ್ಥಿಗಳು ಮಧ್ಯಾಹ್ನ ಹಸಿದ ಹೊಟ್ಟೆಯಲ್ಲಿ ಕುಳಿತುಕೊಳ್ಳಬಾರದು ಮತ್ತು ಹೊರಗಿನ ಆಹಾರವನ್ನು ಸೇವಿಸಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದೆಂಬ ಉದ್ದೇಶದಿಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮುಂಬೈನಲ್ಲಿ ನಡೆದ ರಾಷ್ಟ್ರಮಟ್ಟದ ಜೆರಾಯಿ ಸ್ಟ್ರಾಂಗ್ ಮ್ಯಾನ್ ಚಾಂಪಿಯನ್ ಶಿಪ್ನಲ್ಲಿ ಕುಂದಾಪುರ ತಾಲೂಕಿನ ಬಾಳಿಕೆರೆಯ ದೇಹದಾರ್ಢ್ಯ ಪಟು ವಿಶ್ವನಾಥ ಗಾಣಿಗ ಪ್ರಥಮ ಸ್ಥಾನ ಗಳಿಸಿದ್ದಾರೆ. ರಾಜ್ಯ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದ ವೆಯ್ಟ್ ಲಿಫ್ಟಿಂಗ್ನಲ್ಲಿ ಸ್ಫರ್ಧಿಸಿ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಇವರು ಬಾಳಿಕೆರೆಯ ಭಾಸ್ಕರ ಗಾಣಿಗ ಮತ್ತು ಶ್ರೀಮತಿ ಪದ್ಮಾವತಿ ಗಾಣಿಗ ಅವರ ಪುತ್ರನಾಗಿದ್ದಾರೆ. ► ಕುಂದಾಪುರದ ಉದಯೋನ್ಮುಖ ಕ್ರೀಡಾಪಟು ವಿಶ್ವನಾಥ ಗಾಣಿಗ – http://kundapraa.com/?p=2249
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಾಶೀ ಮಠದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಪ್ರಥಮ ಪುಣ್ಯತಿಥಿ ಆರಾಧನಾ ಮಹೋತ್ಸವ ಹಾಗೂ ವೃಂದಾವನದಲ್ಲಿ ಮುಖ್ಯ ಪ್ರಾಣ ದೇವರ ಪ್ರತಿಷ್ಟಾ ಕಾರ್ಯಕ್ರಮ ಹರಿದ್ವಾರದ ವ್ಯಾಸ ಆಶ್ರಮದಲ್ಲಿ 30 ಡಿಸೆಂಬರ್ 2016 ರಿಂದ 06 ಜನವರಿ 2017ರ ವರೆಗೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ವೆಬ್ಸೈಟ್ http://punyathithi.org ನ್ನು ಕಾಶೀ ಮಠಾದೀಶ ಶ್ರೀ ಶ್ರೀ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ತಮ್ಮ ಅಮೃತ ಹಸ್ತಗಳಿಂದ ಕಾಜ್ಞಂಗಾಡ್ನಲ್ಲಿ ಲೋಕಾರ್ಪಣೆಗೊಳಿಸಿದರು. ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಪೂರ್ಣ ವಿವರ ಈ ವೆಬ್ಸೈಟ್ನಲ್ಲಿ ಲಭ್ಯವಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಅಂಕಗಳ ಜೊತೆಗೆ ಮಾನವೀಯ ಸಂಬಂಧಗಳನ್ನು ಬೆಳೆಸುವುದು ಇಂಟರ್ಯಾಕ್ಟ್ ಕ್ಲಬ್ನ ಉದ್ದೇಶವಾಗಿದೆ ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವ ಗುಣವನ್ನು ಬೆಳಸಿಕೊಂಡು ಸಮಾಜಿಕ ಜವಬ್ದಾರಿಯನ್ನು ನಿರ್ವಹಿಸುವ ಕೌಶಲ್ಯವನ್ನು ವೃದ್ಧಿಸಿಕೊಳ್ಳಿ ಎಂದು ಕುಂದಾಪುರ ರೋಟರಿ ಕ್ಲಬ್ ಅಧ್ಯಕ್ಷರಾದ ಉದಯ ಕುಮಾರ ಶೆಟ್ಟಿ ಹೇಳಿದರು. ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಅಂಗ ಸಂಸ್ಥೆಯಾದ ಇಂಟರ್ಯಾಕ್ಟ್ ಕ್ಲಬ್ನ ನೂನತನ ಪದಾಧಿಕಾರಿಗಳ ಪದಗ್ರಹಣವನ್ನು ಶ್ರೀ ಸಿದ್ಧಿವಿನಾಯಕ ವಸತಿಶಾಲೆ, ಹಟ್ಟಿಯಂಗಡಿಯಲ್ಲಿ ನೆರವೇರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲಾ ಉಪಪ್ರಾಂಶುಪಾಲರಾದ ರಾಮ ದೇವಾಡಿಗ ಅವರು, ಮಕ್ಕಳು ಸಣ್ಣ ವಯಸ್ಸಿನಲ್ಲೇ ಇಂತಹ ಸೇವಾ ಸಂಸ್ಥೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಸ್ನೇಹಪರತೆ, ಆತ್ಮವಿಶ್ವಾಸ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬಹುದು ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಕುಂದಾಪುರದ ರೋಟರಿ ಕ್ಲಬ್ನ ಇಂಟರ್ಯಾಕ್ಟ್ ಕ್ಲಬ್ ಛೇರ್ಮನ್ ರಾಘವೇಂದ್ರ ಚರಣ ನಾವಡ ಮಾಹಿತಿ ನೀಡಿದರು. ಶಾಲೆಯ ಇಂಟರ್ಯಾಕ್ಟ್ ಕ್ಲಬ್ನ ಅಧ್ಯಕ್ಷರಾದ ಗಣಪತಿ ಜಿ ಭಟ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಈ ಸಂದರ್ಭದಲ್ಲಿ ಶೈಕ್ಷಣಿಕ ಸಲಹೆಗಾರರಾದ ಮೃದುಲಾ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಉಡುಪಿ ಜಿಲ್ಲೆಯ 2016-17ನೇ ಸಾಲಿನ ಧ್ವನಿ-ಬೆಳಕು ಸಂಯೋಜಕರ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಜಿಲ್ಲಾಧ್ಯಕ್ಷರಾಗಿ ಎಚ್.ಉದಯ್ ಆಚಾರ್ ಬೈಂದೂರು ಆಯ್ಕೆಯಾಗಿದ್ದಾರೆ. ಗೌವಾಧ್ಯಕ್ಷರಾಗಿ ಆಂಟೆನಿ ಡೇಸಾ, ನೂತನ ಜಿ ಉಪಾಧ್ಯಕ್ಷರಾಗಿ ಪಿ.ಬಾಲಕೃಷ್ಣ ಪೂಜಾರಿ ಬ್ರಹ್ಮಾವರ, ಪ್ರಧಾನ ಕಾರ್ಯದರ್ಶಿಯಾಗಿ ದಾಮೋದರ್ ಕೆ ಮಣಿಪಾಲ, ಜೊತೆಕಾರ್ಯದರ್ಶಿಯಾಗಿ ಪ್ರಭಾಕರ ನಾಯಕ್ ಕಾರ್ಕಳ, ಕೋಶಾಧಿಕಾರಿಯಾಗಿ ಸಂತೋಷ ಶೆಟ್ಟಿಗಾರ್ ಉಡುಪಿ, ಸಂಘಟನಾ ಕಾರ್ಯದರ್ಶಿಯಾಗಿ ಸರ್ದಾರ ಕುಂದಾಪುರ, ಕ್ರೀಡಾ ಕಾರ್ಯದರ್ಶಿಯಾಗಿ ಪ್ರದೀಪ್ ಕಾರ್ಕಳ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುಧಾಕರ್ ಸುವರ್ಣ ಕಾಪು, ಗೌರವ ಸಲಹೆಗಾರರಾಗಿ ಜಗದೀಶ್ ಬಲ್ಲಾಳ್, ವಿಜಯ್ ಕುಮಾರ್ ಉಡುಪಿ, ಶಿವರಾಜ್ ಕಾಪು, ಗೋವಿಂದ ಗಾಣಿಗ ಬ್ರಹ್ಮಾವರ, ಪಾಂಡುರಂಗ ಜೋಗಿ ಕುಂದಾಪುರ, ಪ್ರಭಾಕರ ಜಿ. ದೇವಾಡಿಗ ಉಪ್ಪುಂದ ಆಯ್ಕೆಗೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕುಂದಾಪುರ ತಾಲೂಕಿನಲ್ಲಿ ಅತೀ ಹೆಚ್ಚು ವ್ಯಾಪ್ತಿ ಪ್ರದೇಶವನ್ನು ಹೊಂದಿದ ಕಾಲ್ತೋಡು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ಹಾಗೂ ಇಲ್ಲಿನ ಗ್ರಾಮಸ್ಥರ ಸಮಸ್ತ ಸಮಸ್ಯೆಗಳ ಪರಿಹಾರಕ್ಕಾಗಿ ನನ್ನ ಅಧಿಕಾರದ ಚೌಕಟ್ಟಿನಲ್ಲಿ ಪ್ರಾಮಾಣಿಕವಾಗಿ ಸ್ಪಂದಿಸುವುದಾಗಿ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ ಭಟ್ನಾಡಿ ಅಣ್ಣಪ್ಪ ಶೆಟ್ಟಿ ಹೇಳಿದರು. ಗ್ರಾಪಂ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ತಮ್ಮ ಕಚೇರಿಯಲ್ಲಿ ಮಾತನಾಡಿದರು. ಗುಡ್ಡಗಾಡು ಪ್ರದೇಶವೇ ಹೆಚ್ಚಾಗಿರುವ ನಮ್ಮ ಗ್ರಾಮದಲ್ಲಿ ಪ್ರಮುಖವಾಗಿ ವಿದ್ಯುತ್ ಸಂಪರ್ಕ, ಕಾಲುಸಂಕಗಳಿಗೆ ಶೀಘ್ರವಾಗಿ ಕಾಯಕಲ್ಪ ನೀಡಬೇಕಾಗಿದೆ. ಅಲ್ಲದೇ ಸಂಪೂರ್ಣ ಹಾಳಾಗಿರುವ ಕೂಡು ರಸ್ತೆ ಮತ್ತು ವಾರ್ಡ್ ರಸ್ತೆಗಳ ದುರಸ್ತಿ ಕಾರ್ಯವನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು. ಸ್ಥಳೀಯ ಶಾಸಕರು, ಜಿಪಂ, ತಾಪಂ ಸದಸ್ಯರು ಇದಕ್ಕಾಗಿ ನೆರವು ನೀಡುವ ಭರವಸೆ ನೀಡಿದ್ದು, ಅವರಲ್ಲರೊಂದಿಗೆ ಸೇರಿ ಅತ್ಯಂತ ಮುತುವರ್ಜಿವಹಿಸಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. ಬೇಸಿಗೆಯಲ್ಲಿ ಗ್ರಾಮದ ಕೆಲವು ವಾಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಅದಕ್ಕೂ ಕೂಡಾ ಪರ್ಯಾಯ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿಗಳಲ್ಲಿ ಗ್ರಾಮದ…
