Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ರೋಟರ‍್ಯಾಕ್ಟ್ ಕ್ಲಬ್ ಕುಂದಾಪುರದ ಮಾಜಿ ಅಧ್ಯಕ್ಷ ರಾಘವೇಂದ್ರ ಕೆ.ಸಿ. ಅವರು ನೂತನ ರೋಟರಿ ಜಿಲ್ಲೆ ೩೧೮೨ ಇದರ ವಲಯ ರೋಟರ‍್ಯಾಕ್ಟ್ ಪ್ರತಿನಿಧಿಯಾಗಿ ಆಯ್ಕೆಗೊಂಡಿದ್ದಾರೆ. ಇತ್ತಿಚಿಗೆ ಕಾರ್ಕಳದಲ್ಲಿ ನಡೆದ ರೋಟರ‍್ಯಾಕ್ಟ್ ಜಿಲ್ಲಾ ಅಧಿವೇಶನದಲ್ಲಿ ಅವರು ಅಧಿಕಾರ ಸ್ವೀಕರಿಸಿದರು. ನೂತನ ರೋಟರ‍್ಯಾಕ್ಟ್ ಪ್ರತಿನಿಧಿಯಾಗಿ ಆಯ್ಕೆಗೊಂಡ ರಾಘವೇಂದ್ರ ಕೆ.ಸಿ ಅವರನ್ನು ಕುಂದಾಪುರ ರೋಟರ‍್ಯಾಕ್ಟ್ ಕ್ಲಬ್‌ನ ಸದಸ್ಯರು ಅಭಿನಂದಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬರೆಯುವ ಪ್ರತಿಭೆ ಎಲ್ಲರಲ್ಲೂ ಇರುವುದಿಲ್ಲ. ಅದರಲ್ಲೂ ಸರಾಗವಾಗಿ ಓದಿಸಿಕೊಂಡು ಹೋಗುವ ಬರವಣಿಗೆ ಕೆಲವರಿಗೆ ಮಾತ್ರ ಸಿದ್ಧಿಸಿರುತ್ತದೆ. ಆದರೆ ಒಳ್ಳೆಯ ಪುಸ್ತಕ ಓದುವ ಹವ್ಯಾಸ ಯಾರು ಬೇಕಾದರೂ ರೂಢಿಸಿಕೊಳ್ಳಬಹುದು ಎಂದು ಭಂಡಾರ್‌ಕಾರ‍್ಸ್ ಕಾಲೇಜಿನ ಇಂಗ್ಲೀಷ್ ಪ್ರಾಧ್ಯಾಪಕ ಡಾ. ಹಯವದನ ಮೂಡುಸಗ್ರಿ ಹೇಳಿದರು. ಜನಪ್ರತಿನಿಧಿ ವಾರ ಪತ್ರಿಕೆ ಆಶ್ರಯದಲ್ಲಿ ನಡೆದ ಲೇಖಕಿ ಡಾ. ಪಾರ್ವತಿ ಜಿ. ಐತಾಳ್ ಬರೆದ ಲೇಖನಗಳ ಸಂಕಲನ ‘ಸಮಕ್ಷಮ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ, ಗಂಗಾಧರ ಐತಾಳ್, ಪ್ರವೀಣ ವಿ.ಜಿ. ಉಪಸ್ಥಿತರಿದ್ದರು. ವರದರಾಜ್ ಸ್ವಾಗತಿಸಿ, ನಾಗರಾಜ್ ವಂಡ್ಸೆ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಹಟ್ಟಿಯ೦ಗಡಿ, ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ, ಎಫ಼್. ಎಸ್. ಎಲ್ ಇ೦ಡಿಯಾ ವತಿಯಿ೦ದ ಸ್ಪೇನ್ ದೇಶದ ವಿದ್ಯಾರ್ಥಿಗಳಿಗೆ ‘ಸ೦ಸ್ಕೃತಿ ವಿನಿಮಯ’ ಎ೦ಬ ಭಾರತೀಯ ಶಿಕ್ಷಣ, ಸ೦ಸ್ಕೃತಿ, ಆಚಾರ-ವಿಚಾರಗಳ ಪರಿಚಯಾತ್ಮಕ ಕಾರ್ಯಾಗಾರವನ್ನು ಐದು ದಿನಗಳ ಕಾಲ ಹಮ್ಮಿಕೊಳ್ಳಲಾಯಿತು. ಭಾರತೀಯ ಸ೦ಪ್ರದಾಯದ೦ತೆ ಪೂರ್ಣಕು೦ಭ ಸ್ವಾಗತದೊ೦ದಿಗೆ, ತಿಲಕವಿಟ್ಟು, ಆರತಿ ಬೆಳಗಿ ಸ್ಪೇನ್ ದೇಶದ ಹದಿನೈದು ವಿದ್ಯಾರ್ಥಿಗಳ ತ೦ಡ ಬರಮಾಡಿಕೊಳ್ಳಲಾಯಿತು. ಮೊದಲ ದಿನವೇ ಭಾರತೀಯ ವಿಶಿಷ್ಠ ಕಲಾ ಪ್ರಕಾರಗಳಾದ ಕೀರ್ತನೆಗಳು, ಭಜನೆಗಳು, ಯಕ್ಷಗಾನ, ಭರತನಾಟ್ಯ, ಕಥಕ್, ಹಾಗೂ ಜಾನಪದ ಹಾಡುಗಳನ್ನು ಪರಿಚಯಿಸಲಾಯಿತು. ದಕ್ಷಿಣ ಭಾರತದ ಶೈಲಿಯ ಊಟ, ಉಪಹಾರ ನೀಡಿ ಸತ್ಕರಿಸಲಾಯಿತು. ವಿವಿಧ ಬಗೆಯ ಭಾರತದ ಗ್ರಾಮೀಣ ಆಟಗಳು ಹಾಗೂ ಪ್ರಕೃತಿ ವೈವಿಧ್ಯತೆಗಳನ್ನು ಅವರಿಗೆ ತಿಳಿಸಿಕೊಡಲಾಯಿತು.  ಸ್ಪೇನ್ ವಿದ್ಯಾರ್ಥಿಗಳೂ ಕೂಡ ಆ ದೇಶದ ಸ೦ಸ್ಕೃತಿ, ಭಾಷೆ, ಸಾ೦ಪ್ರದಾಯಿಕ ಆಟಗಳು, ಹಾಗೂ ಪರಿಸರ ಸ್ವಚ್ಛತೆಯ ಬಗ್ಗೆ ತಿಳಿಸಿಕೊಟ್ಟರು. ನಾಲ್ಕನೆಯ ದಿನ ನಡೆದ ಪರಿಸರ ಜಾಗೃತಿ ಜಾಥವ೦ತೂ ಎರಡೂ ದೇಶದ ವಿದ್ಯಾರ್ಥಿಗಳಿಗೆ ವಿಭಿನ್ನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರೋಟರ‍್ಯಾಕ್ಟ್ ಕ್ಲಬ್ ಕೋಟೇಶ್ವರ ಇದರ 2016:17ನೇ ಸಾಲಿನ ಅಧ್ಯಕ್ಷರಾಗಿ ಅರುಣ್ ದೇವಾಡಿಗ ವಕ್ವಾಡಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ- ಸುಬ್ರಹ್ಮಣ್ಯ ಮೊಗವೀರ ಆಯ್ಕೆಯಾಗಿದ್ದು, ಸಂಸ್ಥೆಯ ಸಭಾಪತಿ ಸುಧೀರ್ ಕೆ. ಶೆಟ್ಟಿ ನೂಜಿ, ನಿಕಟಪೂರ್ವ ಅಧಕ್ಷ ರಾಘವೇಂದ್ರ ಎಸ್. ಬೀಜಾಡಿ ಕಾರ್ಯ ನಿರ್ವಹಿಸುತ್ತಾರೆ. ಉಪಾಧ್ಯಕ್ಷ: ರವಿ ಕಟ್ಕೆರೆ, ಕೋಶಾಧಿಕಾರಿ: ಪ್ರದೀಪ ದೇವಾಡಿಗ, ಜತೆ ಕಾರ್ಯದರ್ಶಿ: ಶಿವಾನಂದ.ಕೆ, ಜತೆ ಕೋಶಾಧಿಕಾರಿ: ಯೋಗೀಶ್ ಎಸ್.ಕುಂದರ್, ದಂಡಪಾಣಿ: ರಾಮಚಂದ್ರ ಆಚಾರ್ಯ, ಬುಲೆಟಿನ್ ಎಡಿಟರ್: ಗಿರೀಶ್ ವಿ. ಆಚಾರ್ಯ. ಸಂಘ ಸೇವೆ: ಕೆ. ಗಣೇಶ ಮಂಜ, ವೃತ್ತಿ ಸೇವೆ: ಪ್ರಶಾಂತ್ ಆಚಾರ್ಯ, ಸಮುದಾಯ ಸೇವೆ: ಎಸ್. ಶ್ರೇಯಸ್, ಅಂತರ್‌ರಾಷ್ಟ್ರೀಯ ಸೇವೆ: ಸಂದೀಪ ಶ್ರೀಯಾನ್. ಸಾಂಸ್ಕೃತಿಕ ಕಾರ್ಯದರ್ಶಿ: ಶಿವಾನಂದ ದೊಡ್ಡೋಣಿ, ಶಾಶಾಂಕ ಮಂಜ, ಮನೋಜ್ ಭಾಗವತ. ಕ್ರೀಡಾ ಕಾರ್ಯದರ್ಶಿ: ರಾಜೇಶ್ ಪೈ, ಪ್ರಸಾದ ಆಚಾರ್ಯ, ಎಚ್.ಎನ್. ಧನುಷ್‌ಕುಮಾರ್. ಸಲಹಾ ಸಮತಿ ಸದಸ್ಯರು: ಗಜೇಂದ್ರ ಬೀಜಾಡಿ, ಪವನ, ರಾಘವೇಂದ್ರ ಅಮೀನ್, ಸಂತೋಷ್ ಬಳ್ಕೂರ್, ಶಿವಪ್ರಸಾದ ಆಚಾರ್ಯ, ಯೋಗೀಶ್.ಬಿ, ರಾಧಕೃಷ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಂಡಾರ್ಕಾರ್ಸ್ ಕಾಲೇಜು ಯುತ್ ರೆಡ್ ಕ್ರಾಸ್ ಘಟಕ ಕಾರ್ಯಚಟುವಟಿಕೆ ಕಾಲೇಜಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ಜರುಗಿತು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕ್ ಘಟಕ ಸಭಾಪತಿ ಜಯಕರ ಶೆಟ್ಟಿ ಉದ್ಘಾಟಿಸಿದರು, ಭಂಡಾರ್ಕಾರ್ಸ್ ಕಾಲೇಜ್ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಚಿನ್ಮಯಿ ಆಸ್ಪತ್ರೆ ನಿರ್ದೇಶಕ ಡಾ.ಉಮೇಶ್ ಪುತ್ರನ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕುಂದಾಪುರ ತಾಲೂಕಾ ಘಟಕ ಕಾರ್ಯದರ್ಶಿ ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಭಂಡಾರ್ಕಾರ್ಸ್ ಕಾಲೇಜ್ ಯುತ್ ರೆಡ್ ಕ್ರಾಸ್ ಘಟಕ ಕಾರ್ಯಾಕ್ರಮಾಧಿಕಾರಿ ಪ್ರೊ. ಸತ್ಯನಾರಾಯಣ ಮತ್ತು ವಿದ್ಯಾರಾಣಿ ಉಪಸ್ಥಿತರಿದ್ದರು.

Read More

ಜಿ. ಸುರೇಶ್ ಪೇತ್ರಿ | ಕುಂದಾಪ್ರ ಡಾಟ್ ಕಾಂ ಲೇಖನ. ಬಡಗು ತಿಟ್ಟಿನ ಒಂದು ಪ್ರಭೇದವಾದ ನಡುತಿಟ್ಟಿನ ಪ್ರಾತಿನಿಧಿಕ ಪುರುಷ ವೇಷಧಾರಿಯಾಗಿ, ನಡುತಿಟ್ಟಿನ ಸಮರ್ಥ ಸೊಬಗನ್ನು ಸಮರ್ಪಕವಾಗಿ ಮೈಗೂಡಿಸಿಕೊಂಡ ಕೆಲವೇ ಕೆಲವು ಯಕ್ಷಗಾನ ಕಲಾವಿದರಲ್ಲಿ ಕೋಟ ಸುರೇಶ ಬಂಗೇರ ಓರ್ವರು. ಕುಂದಾಪುರದಿಂದ ಬ್ರಹ್ಮಾವರದ ಪರಿಸರದಲ್ಲಿ ಕಾಣಸಿಗುವ ಬಡಗುತಿಟ್ಟಿನ ಒಂದು ಭಾಗವಾದ ನಡುತಿಟ್ಟು ಅಥವಾ ಮದ್ಯಮ ನಡುತಿಟ್ಟಿನ ಶ್ರೇಷ್ಠ ಕಲಾವಿದ ಎನಿಸಿಕೊಂಡವರು ಸುರೇಶ ಬಂಗೇರ ಅವರು ಕೋಟದ ಮಣೂರು-ಪಡುಕೆರೆಯವರು. ತನ್ನ ಹೆಜ್ಜೆಗಾರಿಕೆ, ಮಾತುಗಾರಿಕೆಯ, ಅಭಿನಯದ ಮೂಲಕ ಪರಿಪೂರ್ಣ ಪಾರಂಪರಿಕ ವೇಷಧಾರಿಯಾಗಿ ಗುರುತಿಸಿಕೊಂಡು ಕೋಟ ಸುರೇಶ್ ಎಂದೇ ಪ್ರಸಿದ್ಧಿ ಪಡೆದವರು. ಕುಂದಾಪ್ರ ಡಾಟ್ ಕಾಂ. ಬೇಡು ಮರಕಾಲ ಹಾಗೂ ಅಕ್ಕಮ್ಮ ಮರಕಾಲರ ಮಗನಾಗಿ 1965 ರಲ್ಲಿ ಜನಿಸಿದ ಸುರೇಶ ಅವರು ನಾಲ್ಕನೇ ತರಗತಿ ವರೆಗೆ ವಿದ್ಯಾಭ್ಯಾಸವನ್ನು ಮುಗಿಸಿ ತನ್ನ ಹದಿಮೂರನೇ ವಯಸ್ಸಿನಲ್ಲಿ ಮಂದರ್ತಿ ಮೇಳದಲ್ಲಿ ಕಾಲಿಗೆ ಗಜ್ಜೆ ಕಟ್ಟಿದರು. ಮೊಳಹಳ್ಳಿ ಹೆರಿಯ ನಾಯ್ಕರ ಶಿಷ್ಯ ವೃತ್ತಿ ಪಡೆದ ಕೋಟ ಸುರೇಶ ಅವರು ಸೌಕೂರು ಮೇಳದಲ್ಲಿ ನಿರಂತರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಒಂದು ತಿಂಗಳ ಕಾಲ ಹಮ್ಮಿಕೊಂಡ ‘ಆಪರೇಷನ್ ಸುರಕ್ಷಾ’ ಅಭಿಯಾನದ ಹಿನ್ನೆಲೆಯಲ್ಲಿ ಕುಂದಾಪುರ ಪೊಲೀಸರು ಬಸ್ಸು ಹಾಗೂ ಇನ್ನಿತರ ಘನ ವಾಹನಗಳಿಗೆ ಅಳವಡಿಸಲಾಗಿದ್ದ ಕರ್ಕಶ ಹಾರ್ನ್ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಕುಂದಾಪುರದ ಶಾಸ್ತ್ರೀವೃತ್ತ, ಸಂಗಮ್, ಮುಳ್ಳಿಕಟ್ಟೆ ಮುಂತಾದೆಡೆ ಕಾರ್ಯಾರಣೆ ನಡೆಸಿದ್ದಾರೆ. ಕುಂದಾಪುರ ಠಾಣಾಧಿಕಾರಿ ನಾಸೀರ್ ಹುಸೇನ್ ಸಂಚಾರಿ ಠಾಣಾಧಿಕಾರಿ ಜಯ ಮತ್ತು ದೇವೇಂದ್ರ, ಮುಳ್ಳಿಕಟ್ಟೆಯಲ್ಲಿ ಗಂಗೊಳ್ಳಿ ಠಾಣಾಧಿಕಾರಿ ಸುಬ್ಬಣ್ಣ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಹಾರನ್ ತೆರವುಗೊಳಿಸಿದ್ದಾರೆ. ಕರ್ಕಶ ಶಬ್ದದ ಹಾರ್ನ್‌ಗಳಿಂದ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಇತರೆ ವಾಹನ ಚಾಲಕರು ವಿಚಲಿತರಾಗಿ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚು ಎಂಬುದನ್ನು ಅರಿತ ಪೊಲೀಸರು ಬೆಳಿಗ್ಗೆ 7 ಗಂಟೆಯಿಂದ 10 ಗಂಟೆಯ ತನಕ ವ್ಯಾಕ್ಯೂಮ್ ಹಾರ್ನ್ ತೆರವುಗೊಳಿಸಿದ್ದು ಕುಂದಾಪುರದಲ್ಲಿ ಮೊದಲ ದಿನವೇ 75ಕ್ಕೂ ಹೆಚ್ಚು ವಾಹನಗಳನ್ನು ತಪಾಸಣೆ ಮಾಡಿ 40 ವಾಹನಗಳಿಗೆ ರೂ.100ರಂತೆ ದಂಡ ವಿಧಿಸಲಾಗಿದೆ.

Read More

ಸಾಸ್ತಾನ ಮಿತ್ರರು ಹಾಗೂ ಯಕ್ಷೇಶ್ವರಿ ಬಳಗದ ಅಭಿಯಾನಕ್ಕೆ ಗಣ್ಯರ ಸಾಥ್ ಸೆಲ್ಫಿ ನೆಪದಲ್ಲಿ ಹುಟ್ಟಿಸಿದ ಹಸಿರು ಪ್ರೀತಿ! ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಕುಂದಾಪುರ: ಒಂದೆಡೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಭೂಮಿಯ ತಾಪಮಾನ. ಅದಕ್ಕೆ ಪೂರಕವೋ ಎಂಬಂತೆ ಉಲ್ಭಣಿಸುತ್ತಿರುವ ಮಾಲಿನ್ಯದ ವಾತಾವರಣ. ಈ ಮಧ್ಯೆ ಕ್ಷೀಣಿಸುತ್ತಿರುವ ವೃಕ್ಷ ಸಂಕುಲ. ಪರಿಸ್ಥಿತಿ ಹೀಗೆ ಮುಂದುವರಿದರೇ ಆಪತ್ತು ಖಂಡಿತ ಎಂಬುದನ್ನು ಅರಿತು ಹತ್ತಾರು ಸಂಘ ಸಂಸ್ಥೆಗಳು ಗೀಡ ನೆಡುವ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. [quote font_size=”16″ bgcolor=”#ffffff” bcolor=”#59d600″ arrow=”yes” align=”right”]ನೀವೂ ಗೀಡ ನೆಡಿ. ಸೆಲ್ಫಿ ಕಳಿಸಿ ಕೊನೆಯ ದಿನಾಂಕ ಜುಲೈ 31 ವಾಟ್ಸ್‌ಪ್ -8197407570 email sasthana576226@gmail.com[/quote] ಆದರೆ ಸಾಸ್ತಾನ ಮಿತ್ರರು ಹಾಗೂ ಯಕ್ಷೇಶ್ವರಿ ಬಳಗದ ಮುಂದಾಳತ್ವದಲ್ಲಿ ವೃಕ್ಷ ಸಂಕುಲದ ವೃದ್ಧಿಗೆ ಹಮ್ಮಿಕೊಂಡ ಯೋಜನೆ ಮಾತ್ರ ಸ್ವಲ್ಪ ಭಿನ್ನವಾದದ್ದು. ಆಧುನಿಕ ಜಮಾನದಲ್ಲಿ ಹೆಚ್ಚಿರುವ ಸೆಲ್ಫಿ ಟ್ರೆಂಡ್‌ಗೆ ತಕ್ಕಂತೆ ಗೀಡಗಳನ್ನು ನೆಟ್ಟು ಅದರೊಂದಿಗೆ ಒಂದು ಸೆಲ್ಫಿ ತೆಗೆದು ಕಳುಹಿಸಿ ಎಂದು ಸಂಘಟಕರು ಸಾಮಾಜಿಕ ತಾಣಗಳ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರ್ಕಾರದ ನೂರು ಸೇವೆ ಒಂದೇ ಸೂರಿನಡಿ ಎನ್ನುವ ಯೋಜನೆ ಬಾಪೂಜಿ ಸೇವಾ ಕೇಂದ್ರವನ್ನು ಕರ್ಕುಂಜೆ ಗ್ರಾಮ ಪಂಚಾಯತ್‌ನಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿದಾಸ್ ಮತ್ತು ತಾಲೂಕು ಪಂಚಾಯತ್ ಸದಸ್ಯ ಸತೀಶ್ ಪೂಜಾರಿ ಫಲಾನುಭವಿಗಳಿಗೆ ಆರ್‌ಟಿಸಿ ನೀಡುವೂದರ ಮೂಲಕ ಚಾಲನೆ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಖಾರಿ ರಿಯಾಜ್ ಅಹಮದ್, ಪಂಚಾಯತ್ ಸದಸ್ಯರುಗಳು, ಮತ್ತು ಸಿಬ್ಬಂದಿವರ್ಗ ಹಾಗೂ ಫಲಾನುಭವಿ ಗ್ರಾಮಸ್ಥರು ಉಪಸ್ಥಿತರಿದ್ಧರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕು ಕಾನೂನು ಸೇವಾ ಸಮಿತಿ ಕುಂದಾಪುರ, ವಕೀಲರ ಸಂಘ(ರಿ.), ಕುಂದಾಪುರ ಅಭಿಯೋಗ ಇಲಾಖೆ ಮತ್ತು ಅರಣ್ಯ ಇಲಾಖೆ ಕುಂದಾಪುರ ಮತ್ತು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯುಕ್ತ ಆಶ್ರಯದಲ್ಲಿ ವನಮಹೋತ್ಸವದ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಕಾಲೇಜಿನ ಆವರಣದಲ್ಲಿ ಜರುಗಿತು. ಕುಂದಾಪುರ ಪ್ರಧಾನ ಸಿವಿಲ್ ನ್ಯಾಯಾಧೀಶೆ ಮತ್ತು ತಾ. ಕಾ. ಸೇ. ಸಮಿತಿ ಕಾರ್ಯದರ್ಶಿ ಪ್ರೀತ್ ಜೆ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರವೀಶ್ಚಂದ್ರ ಶೆಟ್ಟಿ, ಸಹಾಯಕ ಸರಕಾರಿ ಅಭಿಯೋಜಕಿ ಸುಮಂಗಲಾ ನಾಯ್ಕ್, ವಲಯ ಅರಣ್ಯಾಧಿಕಾರಿಗಳು ಶರತ್‌ಕುಮಾರ್ ಶೆಟ್ಟಿ, ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ರಕ್ಷಿತ್ ರಾವ್ ಗುಜ್ಜಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Read More