Author: ನ್ಯೂಸ್ ಬ್ಯೂರೋ

ಗಂಗೊಳ್ಳಿ: ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಮೈಗೂಡಿಸಿಕೊಂಡು ನಿಯಮಾನುಸಾರ ಜೀವನ ನಡೆಸಿದರೆ ಜೀವನದಲ್ಲಿ ಎಂದೂ ಸೋಲು ಬರುವುದಿಲ್ಲ. ಸ್ಕೌಟ್ ಮತ್ತು ಗೈಡ್ಸ್‌ನಂತಹ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ನಮ್ಮಲ್ಲಿ ಶಿಸ್ತು ಹಾಗೂ ನಾಯಕತ್ವ ಗುಣಗಳು ರೂಪುಗೊಳ್ಳುತ್ತದೆ. ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡು ವಿದ್ಯಾರ್ಥಿ ಜೀವನವನ್ನು ಇನ್ನಷ್ಟು ಉಜ್ವಲಗೊಳಿಸಿಕೊಳ್ಳಬೇಕು ಎಂದು ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಎನ್.ಸದಾಶಿವ ನಾಯಕ್ ಹೇಳಿದರು. ಅವರು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ರೋಟರಿ ಸಭಾಂಗಣದಲ್ಲಿ ಭಾರತ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಕುಂದಾಪುರ ಮತ್ತು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಯ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳ ಕುಂದಾಪುರ ವಲಯ ಮಟ್ಟದ ಪಟಾಲಾಯಂ ನಾಯಕತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು. ಗಂಗೊಳ್ಳಿ ಜಿಎಸ್‌ವಿಎಸ್ ಅಸೋಸಿಯೇಶನ್‌ನ ಅಧ್ಯಕ್ಷ ಡಾ.ಕಾಶೀನಾಥ ಪೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗಂಗೊಳ್ಳಿ ಗ್ರಾಪಂ ಅಧ್ಯಕ್ಷೆ ರೇಷ್ಮಾ ಆರ್.ಖಾರ್ವಿ, ಸ್ಕೌಟ್ ಮತ್ತು ಗೈಡ್ಸ್‌ನ ಕುಂದಾಪುರ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ…

Read More

ಕುಂದಾಪುರ: ಡಿ.ಎನ್‌.ಎ. ರಕ್ತ ಪರೀಕ್ಷೆಯು ಜೀವನಾಂಶ ಪ್ರಕರಣವೊಂದರಲ್ಲಿ ಪುರುಷನಿಗೆ ಪ್ರಯೋಜನಕಾರಿಯಾದ ಪ್ರಕರಣವು ಕುಂದಾಪುರ ನ್ಯಾಯಾಲಯದಲ್ಲಿ ನಡೆದಿದೆ. ಹಳ್ಳಿಹೊಳೆ ಗ್ರಾಮದ ಸುರೇಶ ಅಸಾಹಯಕ ಪರಿಸ್ಥಿತಿಯಲ್ಲಿದ್ದ ತನ್ನ ಮೇಲೆ ಅತ್ಯಾಚಾರಮಾಡಿ ಗರ್ಭಿಣಿಯನ್ನಾಗಿಸಿದ್ದಾನೆಂದು ಯುವತಿಯೋರ್ವಳು ಆರೋಪಿಸಿದ್ದಳು. ಅನಂತರ ಆತನಿಂದ ತಾನು ಗಂಡು ಮಗುವಿಗೆ ಜನ್ಮ ನೀಡಿದ್ದು, ಮಗುವಿನ ಲಾಲನೆ , ಪೋಷಣೆ, ವಿದ್ಯಾಭ್ಯಾಸದ ಬಗ್ಗೆ ಮಾಸಿಕ ಜೀವನಾಂಶ ಅರ್ಜಿಯನ್ನು ದಾಖಲಿಸಿದ್ದಳು. ನ್ಯಾಯಾಲಯಕ್ಕೆ ಹಾಜರಾದ ಸುರೇಶ್‌ ಯುವತಿಯನ್ನು ತಾನು ಅತ್ಯಾಚಾರ ಮಾಡಿಲ್ಲವೆಂದು ಹಾಗೂ ಆಕೆಯ ಮಗುವಿಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿದ್ದನು. ನ್ಯಾಯಾಲಯದ ಆದೇಶದಂತೆ ಸುರೇಶ ಯುವತಿ ಹಾಗೂ ಚಿಕ್ಕ ಮಗುವಿನ ರಕ್ತವನ್ನು ಬಹಿರಂಗ ನ್ಯಾಯಾಲಯದಲ್ಲಿ ಸಂಗ್ರಹಿಸಿ ಡಿ.ಎನ್‌.ಎ. ಪರೀಕ್ಷೆಗೆ ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಅಲ್ಲಿನ ವೈಜ್ಞಾನಿಕ ಅಧಿಕಾರಿ ಅಧಿಕಾರಿ ಎಲ್‌.ಪುರುಷೋತ್ತಮ ಅವರು ವಿವರವಾದ ರಕ್ತ ಪರೀಕ್ಷೆ ಮಾಡಿ ಮಗುವಿನ ತಂದೆ ಸುರೇಶ ಅಲ್ಲವೆಂದು ತಜ್ಞ ವರದಿಯನ್ನು ಕಳುಹಿಸಿದ್ದರು. ಪ್ರತಿಕೂಲ ವರದಿ ಬಂದ ಹಿನ್ನಲೆಯಲ್ಲಿ ಯುವತಿ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದು ನ್ಯಾಯಾಲಯ ಆಕೆ…

Read More

ಕುಂದಾಪುರ: ರಾಜ್ಯ ಸರಕಾರದ ಹಿಂದೂ ವಿರೋಧಿ ನೀತಿ ಹಾಗೂ ಮಡಿಕೇರಿಲ್ಲಿ ನಡೆದ ಗಲಭೆ ಪ್ರಕರಣವನ್ನು ನ್ಯಾಯಾಂಗ ತನಿಕೆಗೆ ಒಪ್ಪಿಸಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಇಂದು ಕುಂದಾಪುರದ ಶಾಸ್ತ್ರೀ ವೃತ್ತದ ಬಳಿ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು. ಪ್ರತಿಭಟನಾಕಾರನ್ನುದ್ದೇಶಿಸಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಜನಪರ ಕಾರ್ಯಗಳನ್ನು ಮಾಡಿ ಜನರ ವಿಶ್ವಾಸ ಗಳಿಸಬೇಕಾಗಿದ್ದ ಸರಕಾರ ಜನವಿರೋಧಿ ನಿಲುವನ್ನು ತಾಳುತ್ತಿರುವುದು ದುರದೃಷ್ಟಕರ. ಇತ್ತಿಚಿಗೆ ರಾಜ್ಯದಲ್ಲಿ ನಡೆದ ಸಾವು-ನೋವುಗಳನ್ನು ಗಮನಿಸಿದರೇ ಸರಕಾರ ಬೇಜವಾಬ್ದಾರಿ ನಡುವಳಿಕೆಯ ದರ್ಶನವಾಗುತ್ತದೆ. ಇದಕ್ಕಿಂತ ದುರಂತ ಇನ್ನೊಂದಿಲ್ಲ. ಬಿಜೆಪಿಯ ಸರಕಾರವಿರುವಾಗ ಯಾವುದೇ ಕೋಮು ಸಂಘರ್ಷಗಳಿಗೆ ಅವಕಾಶ ನೀಡದೇ ಜನರು ಅನ್ಯೂನ್ಯತೆಯಿಂದ ಬದುಕುವಂತೆ ಮಾಡಿತ್ತು, ಸಮಾಜದ ಎಲ್ಲಾ ಧರ್ಮದ ಜನರೂ ಒಂದೇ ಎಂಬ ಭಾವನೆಯಿಂದ ಆಡಳಿತ ನಡೆಸಿತ್ತು. ಸಿದ್ದರಾಮಯ್ಯನವರ ಸರಕಾರ ಜಾತಿ, ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆದು ಆಳಿ ಸಮಾಜದ ಸಂಘರ್ಷಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದರು. ಇತ್ತಿಚಿನ ಘಟನೆಗಳನ್ನು ಅವಲೋಕಿಸಿದಾಗ ರಾಜ್ಯ ಸರಕಾರ ಯಾವುದೋ ಅಜೆಂಡಾಕ್ಕೆ ತಲೆಭಾಗಿ ರಾಜ್ಯದಲ್ಲಿ ಶಾಂತಿ…

Read More

ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಚಾತುರ್ಮಾಸದಲ್ಲಿ ಕಾಶೀ ಮಠದ ಕಿರಿಯ ಯತಿಗಳಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಸುರೇಶ ಗೋವಿಂದ್ರಾಯ ಕಾಮತರ “ಶ್ರೀ ಗೋವಿಂದ ಗೋರಕ್ಷಾ ಗೋಕುಲ ಧಾಮ”ಕ್ಕೆ ಭೇಟಿ ನೀಡಿ ಗೋಪೂಜೆಯನ್ನು ಸಲ್ಲಿಸಿದರು

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಖ್ಯಾತ ಚಿತ್ರ ನಿರ್ದೇಶಕ, ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಇಂದು ಹೊಸನಗರ ತಾಲೂಕು ನಿಟ್ಟೂರು ಬಳಿಯ ಬಾಮೆ ಎಂಬಲ್ಲಿ ಶೂಟಿಂಗ್ ನಡೆಸುತ್ತಿದ್ದ ವೇಳೆ ಹೆಜ್ಜೆನು ಕಚ್ಚಿದ ಪರಿಣಾಮ ಕುಂದಾಪುರದ ಖಾಸಗಿ ಅಸ್ಪತ್ರೆಗೆ ದಾಖಲಾಗಿದ್ದಾರೆ. ಘಟನೆಯ ವಿವರ: ನಾಗತಿಹಳ್ಳಿ ಚಂದ್ರಶೇಕರ್ ನಿರ್ದೇಶನದ ಇಷ್ಟಕಾಮ್ಯ ಎಂಬ ಕನ್ನಡ ಚಿತ್ರದ ಶೂಟಿಂಗ್ ಗಾಗಿ 60ಜನರ ಚಿತ್ರತಂಡ ಇಂದು ಕೊಲ್ಲೂರು ಸಮೀಪದ ನಿಟ್ಟೂರಿಗೆ ಬಂದಿಳಿದಿತ್ತು. ಬಾಮೆ ತೂಗು ಸೇತುವೆ ಸಮೀಪ ಶೂಟಿಂಗ್ ನಡೆಸುವುದು ನಿಗದಿಯಾಗಿತ್ತು. ಬೆಳಿಗ್ಗೆ 10:30ರ ಹೊತ್ತಿಗೆ ಕ್ಯಾಮರಾ ಪೊಜಿಷನ್ ನೋಡಲು ಸ್ವಲ್ಪ ಮುಂದೆ ತೆರಳಿದ ನಾಗತಿಹಳ್ಳಿಗೆ ಒಮ್ಮೇಲೆ ಎಲ್ಲಿಂದಲೋ ಬಂದ ಜೇನು ದಾಳಿ ಇಟ್ಟಿದೆ. ಕೂಡಲೇ ಚಿತ್ರತಂಡದ ಇತರರಿಗೆ ತಿಳಿಸಿದ ನಾಗತಿಹಳ್ಳಿ ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಆದರೆ ಅಷ್ಟರೊಳಗೆ ಜೇನು ಇತರರಿಗೂ ದಾಳಿ ಮಾಡಲು ಶುರುವಿಟ್ಟುಕೊಂಡಿತ್ತು. ನಾಗತಿಹಳ್ಳಿಯವರನ್ನು ರಕ್ಷಿಸಲು ಬಂದ ನಾಲ್ಕೈದು ಮಂದಿಗೂ ಜೇನು ದಾಳಿ ಮಾಡಿದೆ. ನಾಗತಿಹಳ್ಳಿ ಹಾಗೂ ಕೃಷ್ಣ ಎಂಬುವವರಿಗೆ ಕಣ್ಣು ಹಾಗೂ ತಲೆಯ…

Read More

ಕುಂದಾಪುರ: ಕರ್ನಾಟಕ ಕಾರ್ಮಿಕರ ವೇದಿಕೆ ನೀಡುವ ರಾಜ್ಯಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ ವಿಜಯವಾಣಿ ಉಡುಪಿ ಜಿಲ್ಲಾ ಹಿರಿಯ ವರದಿಗಾರ ಆರ್.ಶ್ರೀಪತಿ ಹೆಗಡೆ ಹಕ್ಲಾಡಿ ಆಯ್ಕೆ ಆಗಿದ್ದಾರೆ. ನ.29 ರಂದು ಉಡುಪಿ ಎಂಜಿಎಂ ಕಾಲೇಜ್ ಆಟದ ಮೈದಾನದಲ್ಲಿ ದಿನವಿಡೀ ನಡೆಯುವ ರಾಜ್ಯ ಸಮಾವೇಶ ಕಾರ‍್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಕರ್ನಾಟಕ ಕಾರ್ಮಿಕ ವೇದಿಕೆ ಅಧ್ಯಕ್ಷ ಕೆ.ರವಿ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ) ನೇರ, ದಿಟ್ಟ ವರದಿಗಾರಿಕೆಯ ಮೂಲಕ ಪತ್ರಿಕಾರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ಹಿರಿಯ ಪತ್ರಕರ್ತ ಹಕ್ಲಾಡಿಯವರಿಗೆ ಕರ್ನಾಟಕ ರಾಜ್ಯ ಕಲಾವಿದರ ಕಲ್ಯಾಣ ವೇದಿಕೆಯು ಕೊಡಮಾಡುವ ಆರನೇ ವರ್ಷದ `ಕಡಲ ತೀರದ ಭಾರ್ಗವ ಡಾ.ಕೆ.ಶಿವರಾಮ ಕಾರಂತ ಸದ್ಭಾವನಾ ರಾಜ್ಯ ಪ್ರಶಸ್ತಿ’, ಮಾನವ ಹಕ್ಕು ಮಂಡಳಿ- ಬೆಂಗಳೂರು ಸಂಸ್ಥೆಯು ಕೊಡಮಾಡುವ ರಾಜ್ಯ ಮಟ್ಟದ ‘ಟಿಪ್ಪು ಸುಲ್ತಾನ್ ಸದ್ಭಾವನಾ ಪ್ರಶಸ್ತಿ’, ಬಿಜಾಪುರದ ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯು ಕೋಡಮಾಡುವ ‘ಬಸವ ಜ್ಯೋತಿ ರಾಜ್ಯ ಪ್ರಶಸ್ತಿ’ ಸೇರಿದಂತೆ ಹಲವಾರು…

Read More

ಕುಂದಾಪುರ: ಕೋಟೇಶ್ವರ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ನಡೆಯುತ್ತಿರುವ ಮನ್ಮಥ ನಾಮ ಸಂವತ್ಸರದ ಚಾತುರ್ಮಾಸದ ದೀಪಾವಳಿಯ ಸಂಭ್ರಮದಲ್ಲಿ ಕಾಶೀ ಮಠ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸ ರಘುಪತಿಗೆ ಕಾಶೀ ಮಠದ ಕಿರಿಯ ಯತಿಗಳಾದ ಶ್ರೀಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ತೈಲಾಭ್ಯಂಜನ ನಡೆಸಿದರು.

Read More

ಗಂಗೊಳ್ಳಿ: ಸಾಹಿತ್ಯ ವೇದಿಕೆ, ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ರಾಜೋತ್ಸವ ಸಂಭ್ರಮದ ಸವಿನುಡಿ ಹಬ್ಬ2015 ಮತ್ತು ಗಂಗೊಳ್ಳಿ ಯು ಶೇಷಗಿರಿ ಶೆಣೈ ಸ್ಮರಣಾರ್ಥ ಕುಂದಪ್ರಭ ಪತ್ರಿಕೆಯ ಸಹಭಾಗಿತ್ವದೊಂದಿಗೆ ಆಯೋಜಿಸಲಾಗಿರುವ ಉಡುಪಿ ಜಿಲ್ಲಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕವಿಗೋಷ್ಠಿ ಮತ್ತು ಕಥಾ ಗೋಷ್ಠಿ ಕಾರ‍್ಯಕ್ರಮವು ನವೆಂಬರ್ 17 ರಂದು ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆ ನಾಲ್ಕು ಗಂಟೆಯ ತನಕ ಕಾಲೇಜಿನ ಆವರಣದಲ್ಲಿ ನಡೆಯಲಿದೆ. ಉತ್ಸವದ ಉದ್ಘಾಟನೆಯನ್ನು ಕನ್ನಡದ ಖ್ಯಾತ ಸಾಹಿತಗಳಾದ ಜಯಂತ ಕಾಯ್ಕಿಣಿ ಅವರು ನೆರವೇರಿಸಲಿದ್ದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅದ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಡಾ.ಕಾಶೀನಾಥ ಪೈ, ಯು.ಎಸ್.ಶೆಣೈ, ಪ್ರಶಾಂತ್ ಕುಂದರ್, ದತ್ತಾನಂದ ಜಿ. ಪ್ರಾಂಶುಪಾಲ ಆರ್ ಎನ್ ರೇವಣ್ ಕರ್ ಮತ್ತು ಎನ್ ಸದಾಶಿವ ನಾಯಕ್ ಉಪಸ್ಥಿತರಿರುವರು. ಆ ಬಳಿಕ ಕವಿಗೋಷ್ಠಿ ಅಧ್ಯಕ್ಷತೆಯನ್ನು ಕೋಟ ವಿವೇಕ ಪದವಿಪೂರ್ವ ಕಾಲೇಜಿನ ಸುವ್ರತಾ ಅಡಿಗ ವಹಿಸಲಿದ್ದಾರೆ. ಕಥಾ ಗೋಷ್ಠಿ ಅಧ್ಯಕ್ಷತೆಯನ್ನು ಕಿದಿಯೂರು ಶ್ಯಾಮಿಲಿ ಪದವಿಪೂರ್ವ ಕಾಲೇಜಿನ…

Read More

ಕುಂದಾಪುರ: ಹಳೆ ವಿದ್ಯಾರ್ಥಿಗಳು ಕಾಲೇಜಿನ ಕಾರ್ಯಚಟುವಟಿಕೆಯಲ್ಲಿ ಸ್ಪಂದಿಸಿದಾಗ ಕಾಲೇಜು ಉತ್ತಮ ಬೆಳವಣಿಗೆಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಭಂಡಾರ್‌ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಿದೆ. ಅವರ ಕಾರ್ಯಚಟುವಟಿಕೆ ಕಾಲೇಜಿನ ಅಭಿವೃದ್ಧಿಗೆ ಪೂರಕವಾಗಿ ನಿರಂತರವಾಗಿರಲಿ ಎಂದು ಉಡುಪಿ ಜಿಲ್ಲೆಯ ಪ.ಪೂ. ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಆರ್.ಬಿ. ನಾಯಕ್ ಹೇಳಿದರು. ಅವರು ಭಂಡಾರ್‌ಕಾರ್ಸ್ ಪಿ.ಯು ಕಾಲೇಜು ಕುಂದಾಪುರ ಮತ್ತು ಭಂಡಾರ್‌ಕಾರ್ಸ್ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ ಪಿ.ಯು ವಿದ್ಯಾರ್ಥಿಗಳಿಗೆ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಭಂಡಾರ್‌ಕಾರ್ಸ್ ಪಿ.ಯು. ಕಾಲೇಜು, ಎಸ್.ಪಿ. ತೋಳಾರ್ ಒಳಾಂಗಣ ಕ್ರೀಡಾಂಗಣದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು. ಹುಡುಗರ ವಿಭಾಗದಲ್ಲಿ ಉಡುಪಿಯ ಎಂ.ಜಿ.ಎಂ. ಪಿಯು. ಕಾಲೇಜು ಪ್ರಥಮ, ಕುಂದಾಪುರದ ಆರ್.ಎನ್.ಶೆಟ್ಟಿ ಪಿ.ಯು. ಕಾಲೇಜು ದ್ವಿತೀಯ, ಕುಂದಾಪುರದ ಭಂಡಾರ್‌ಕಾರ್ಸ್ ಪಿ.ಯು. ಕಾಲೇಜು ತೃತೀಯ, ಕುಂದಾಪುರದ ಎಸ್.ಎಂ.ಎಸ್ ಪಿ.ಯು. ಕಾಲೇಜು ನಾಲ್ಕುನೇ ಬಹುಮಾನವನ್ನು ಪಡೆದುಕೊಂಡರು. ಹುಡುಗಿಯರ…

Read More