Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯ ಮನೆ, ಅಂಗಡಿ, ಹೊಟೇಲ್ ಇತ್ಯಾದಿಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದ ಸಮಸ್ಯೆಗೆ ಜಿಲ್ಲಾಡಳಿತ ಪರಿಹಾರ ಕಂಡು ಕೊಂಡಿದ್ದು, ಗಂಗೊಳ್ಳಿ ಗ್ರಾಮದಲ್ಲಿ ತ್ಯಾಜ್ಯ ನಿರ್ಮೂಲನೆ ಮಾಡಲು ಜನರ ಸಹಕಾರ ಅತ್ಯಗತ್ಯವಾಗಿದೆ. ಜಿಲ್ಲಾಡಳಿತ ಸ್ವಸಹಾಯ ಸಂಘಗಳ ಸಹಕಾರದೊಂದಿಗೆ ಮನೆ ಮನೆಯಿಂದ ಕಸ ಸಂಗ್ರಹಿಸುವ ಯೋಜನೆ ಹಾಕಿಕೊಂಡಿದ್ದು, ಇದಕ್ಕೆ ಪೂರ್ವಭಾವಿಯಾಗಿ ಗ್ರಾಮದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯಗಳ ಮತ್ತು ಅದರ ನಿರ್ವಹಣೆ ಬಗ್ಗೆ ಸಮೀಕ್ಷೆ ನಡೆಸಲು ಉದ್ದೇಶಿಸಿದೆ ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಿ.ಮಾಧವ ಹೇಳಿದರು. ಅವರು ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಬಗ್ಗೆ ಮಾಹಿತಿ ಸಂಗ್ರಹ ಸಮೀಕ್ಷೆ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಬಗ್ಗೆ ಮಾಹಿತಿ ಸಂಗ್ರಹ ಸಂಬಂಧ ಸ್ವಸಹಾಯ ಸಂಘಗಳ ಸ್ವಯಂಸೇವಕರು ಮನೆ ಮನೆಗೆ ಬಂದಾಗ ಸರಿಯಾದ ಮಾಹಿನಿ ನೀಡಿ ಸಹಕರಿಸಬೇಕು. ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಸಂಗ್ರಹಿಸಲು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕಶ್ವಿ ಚೆಸ ಸ್ಕೂಲ್‌ನ ಮೊದಲ ವಾರ್ಷಿಕೋತ್ಸವ ಹಾಗೂ ಅಂತರಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆ ಆರ್. ಎನ್ ಶೆಟ್ಟಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ್ದ ಅರ್ಜುನ ಪ್ರಶಸ್ತಿ ವಿಜೇತ ಪ್ರವೀಣ್ ತಿಪ್ಸೆ ಚೆಸ್‌ನ ಬಗ್ಗೆ ಮಾಹಿತಿ ನೀಡಿ ಹುಮಾನವನ್ನು ವಿತರಿಸಿದರು ಪ್ರೆಸಿಡೆಂಟ್ ಗ್ರೂಫ್‌ನ ಇಸ್ಮಾಯಿಲ್ ಸಾಹೇಬ್, ಬಸ್ರೂರು ಶಾರದಾ ಆಂಗ್ಲ ಮಾಧ್ಯಮ ಸ್ಕೂಲ್‌ನ ಸಂಚಾಲಕರು ಅರುಣ್ ಕುಮಾರ್ ಶೆಟ್ಟಿ, ಗುರುಕುಲ ಪಬ್ಲಿಕ್ ಸ್ಕೂಲ್ ವಕ್ವಾಡಿಯ ಸಂಚಾಲಕರು ಅನುಪಮ ಶೆಟ್ಟಿ, ಬಸ್ರೂರು ಶಾರಾದಾ ಕಾಲೇಜಿನ ಮಾಜಿ ಪ್ರಾಂಶುಪಾಲರು ಚಂದ್ರಪ್ರಭಾ ಹೆಗ್ಡೆ , ಸುಬ್ರಮಣ್ಯ ಶೆಟ್ಟಿಗಾರ್ ಕೋಟೇಶ್ವರ ಕುಂದಾಪುರ ಆರಕ್ಷಕ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ನಾಸಿರ್ ಹುಸೇನ್, ಡೇರಿಕ್ ಚೆಸ್ ಸೂಕ್ಕಲ್‌ನ ಡೇರಿಕ್ ಫಿಂಟೋ, ಪ್ರಸನ್ನ ರಾವ್ ಅಂತರಾಷ್ಟ್ರೀಯ ಚೆಸ್ ಆಟಗಾರ್ತಿ ಆಂಡ್ರಿಯಾ ಡಿಸೋಜಾ ಕಶ್ವಿ ಚೆಸ್ ತರಬೇತುದಾರ ಗುರುರಾಜ್ ಶೆಟ್ಟಿ. ಕಶ್ವಿ ಸ್ಕೂಲ್ ಚೆಸ್‌ನ ವ್ಯವಸ್ಥಾಪಕರು ನರೇಶ್ ಬಿ. ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು. ಈ ಪಂದ್ಯಾಟ ಕೂಟದಲ್ಲಿ ೩೩೧ ಸ್ಪರ್ಧಾಳುಗಳು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಘನತೆಯ ಬದುಕಿಗೆ ಎಲ್ಲಾ ಅಂಗವಿಕಲರಿಗೂ ಶಿಕ್ಷಣ, ಉದ್ಯೋಗ, ಸಿಗಬೇಕು. ಖಾಸಗಿ ಸಂಸ್ಥೆಗಳಲ್ಲೂ ಅಂಗವಿಕಲರಿಗೆ ಶೇಕಡಾ ೫% ಮೀಸಲಾತಿ ನೀಡಬೇಕು. ಅಂಗವಿಕಲರ ಪಾಲಕರ ದೊಂದೆಕುಲ ನಮ್ಮಲ್ಲದೆ ಒಗ್ಗಟ್ಟಿನ ಬಲ ಅಥವಾ ನಮ್ಮಲ್ಲಿರಲಿ ಒಗ್ಗಟ್ಟಿನ ಬಲ, ಸರಕಾರ ಎಲ್ಲಾ ಅಂಗವಿಕಲರಿಗೂ ಉಚಿತ ಮನೆ, ನಿವೇಶನ ಹಾಗೂ ವಿಶೇಷ ಶೌಚಾಲಯ ನೀಡಲಿ, ಅಂಗವಿಕಲರು ಸಮಾಜದ ಅವಿಭಾಜ್ಯ ಅಂಗ, ಬದುಕಲು ಬಿಡಿ. ಅಂಗವಿಕಲರ ಯೋಜನೆಗಳು ಸಮರ್ಪಕವಾಗಿ ಜ್ಯಾರಿಯಾಗಲಿ, ಇದು ಬಿಕ್ಷೆಯಲ್ಲ ಅದು ನಮ್ಮ ಹಕ್ಕು ಎಂದು ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ರಾಜ್ಯ ಅಧ್ಯಕ್ಷ ಜಿ.ಎನ್. ನಾಗರಾಜ ಹೇಳಿದರು. ಅಂಗವಿಕಲರ ಹಕ್ಕುಗಳ ರಾಷ್ಟ್ರೀಯ ವೇದಿಕೆ ನವದೆಹಲಿಗೆ ಸಂಯೋಜಿಸಲ್ಪಟ್ಟ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮ್ಮೇಳನವು ಕುಂದಾಪುರ ಕಾರ್ಮಿಕ ಭವನದಲ್ಲಿ ಜರಗಿದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಳೆದ ವರ್ಷದಿಂದ ಇಲ್ಲಿಯವರೆಗೆ ರಾಜ್ಯ-ಕೇಂದ್ರ ಸರಕಾರಗಳು ಅಂಗವಿಕಲರಿಗಾಗಿ ಯಾವುದೇ ಯೋಜನೆಗಳನ್ನು ರೂಪಿಸದೇ ಇದ್ದುದರಿಂದಾಗಿ ರಾಜ್ಯದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜು, ಪದವಿಪೂರ್ವ ಕಾಲೇಜು, ಉಡುಪಿಯ ಅಂಬಲಪಾಡಿಯ ಶ್ರೀ ಜನಾರ್ದನ ಮಹಾಕಾಳೀ ದೇವಸ್ಥಾನ ಹಾಗೂ ಕುಂದಾಪುರದ ಶ್ರೀ ಕುಂದೇಶ್ವರ ದೇವಸ್ಥಾನಗಳ ಸಹಯೀಗದಲ್ಲಿ ಒಂದು ದಿನದ ಜೀವನ ಮೌಲ್ಯ – ನೈತಿಕ ಶಿಕ್ಷಣ ಶಿಬಿರ” ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಂಬೈ ವಿಶ್ವವಿದ್ಯಾನಿಲಯದ ಡಾ. ತಾಳ್ತಜೆ ವಸಂತಕುಮಾರ್ ಅವರು ಭಾರತೀಯ ಧರ್ಮಗಳು ಮತ್ತು ಜೀವನಮೌಲ್ಯ ಎಂಬ ವಿಷಯದ ಕುರಿತು ಮಾತನಾಡಿ, ಇಂತಹ ಶಿಬಿರಗಳ ಅವಶ್ಯಕತೆ ಪ್ರಸ್ತುತದ ವಿದ್ಯಾಮಾನದಲ್ಲಿ ಹೆಚ್ಚಿದೆ. ನಮ್ಮನ್ನು ನಾವು ಅರ್ಥೈಸಿಕೊಳ್ಳುವುದು ಮತ್ತು ತೂಗಿಸಿಕೊಳ್ಳುವುದನ್ನು ಕಲಿತಾಗ ಶಿಬಿರದ ಆಶಯ ಸಾರ್ಥಕವಾಗುವುದು. ನಮ್ಮನ್ನು ಅರಿಯುವುದನ್ನೇ ಭಾರತೀಯ ಸಂಸ್ಕೃತಿ ಸಾರವಾಗಿದೆ. ವೈವಿಧ್ಯಮಯ ನೆಲ, ಸಾರವನ್ನು ಹೊಂದಿರುವಂತಹ ಈ ನಮ್ಮ ಭರತಖಂಡ ವೈಶಿಷ್ಟ್ಯಗಳ ಹೂರಣಗಳಿಂದ ಸಮ್ಮಿಳಿತವಾಗಿದೆ. ಅನೇಕ ಸಂಪ್ರದಾಯ, ಮನೋಭೂಮಿಕೆ, ಆರಾಧನೆ ಮತ್ತು ಆಚಾರಗಳಿಂದಲೇ ಇಲ್ಲಿ ಸಾಂಸ್ಕೃತಿಕ ಐಕ್ಯತೆ ಎನ್ನುವುದು ಹುಟ್ಟಿದೆ ಎಂದು ಅಭಿಪ್ರಾಯಪಟ್ಟರು. ಹಾಲು ಸಕ್ಕರೆ ಬೆರೆಸಿ ತಯಾರಿಸಿದ ಪಾಕಕ್ಕೆ ಭಾರತೀಯ…

Read More

ಕುಂದಾಪ್ರಡಾಟ್ ಕಾಂ ಸುದ್ದಿ. ಬೈಂದೂರು: ಮರವಂತೆ ಬಡಾಕೆರೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯು ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ಬುಧವಾರ ನಡೆಯಿತು. ಸಂಘದ ಅಧ್ಯಕ್ಷ ಎಸ್. ರಾಜು ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಸಂಘವು ಕಳೆದ ಆರ್ಥಿಕ ವರ್ಷದಲ್ಲಿ ಠೇವಣಿ ಸಂಗ್ರಹ, ಸಾಲ ನೀಡಿಕೆ, ವಸೂಲಿ ಸೇರಿದಂತೆ ಎಲ್ಲ ವಿಭಾಗಗಳಲ್ಲಿ ಗಣನೀಯ ಪ್ರಗತಿ ಸಾಧಿಸಿದೆ. ಸಂಸ್ಥೆ ವರ್ಷದ ಅಂತ್ಯಕ್ಕೆ ಹೊಂದಿರುವ ಠೇವಣಿಯ ಮೊತ್ತರೂ. ೨೭.೦೨ ಕೋಟಿಯಾಗಿದ್ದು ಪ್ರಸಕ್ತ ವರ್ಷ ಅದನ್ನು ಏರಿಸುವ ಗುರಿ ಹೊಂದಲಾಗಿದೆ. ರೂ ೩೩ ಕೋಟಿ ಸಾಲ ವಿತರಿಸಿ, ರೂ ೩೨ ಕೋಟಿ ವಸೂಲಾತಿ ಮಾಡಲಾಗಿದೆ. ಸಂಘ ರೂ ೧ ಕೋಟಿ ೪ ಸಾವಿರದಷ್ಟು ಲಾಭ ಗಳಿಸಿದೆ.ಸದಸ್ಯರ ಬೇಡಿಕೆಯಂತೆ ಶೇ.೧೩ ಡಿವಿಡೆಂಡ್ ನೀಡಲಾಗುವುದು ಎಂದು ಅವರು ಹೇಳಿದರು. ಸಂಘವು ಗ್ರಾಹಕರಿಗೆ ಹೆಚ್ಚಿನ ಸೇವೆ ಒದಗಿಸುವ ದೃಷ್ಠಿಯಿಂದ ಬಡಾಕೆರೆಯಲ್ಲಿ ಪ್ರತ್ಯೇಕ ಶಾಖೆ ತೆರೆಯುವ ಯೋಜನೆ ಹೊಂದಿದೆ. ಕೃಷಿಕರಿಗೆ ಬೀಜದ ಭತ್ತ ಹಾಗೂ ಸಾವಯವ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಸಾರ್ವಜನಿಕ ಶಿಕ್ಷಣ ಇಲಾಖೆ ಕಿರಿಮಂಜೇಶ್ವರ ಶುಭದಾ ಆಂಗ್ಲ ಮಾಧ್ಯಮ ಶಾಲೆಯ ಸಹಯೋಗದೊಂದಿಗೆ ಕಿರಿಮಂಜೇಶ್ವರದಲ್ಲಿ ಆಯೋಜಿಸಲಾಗಿದ್ದ ಬೈಂದೂರು ವಲಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಕೊಲ್ಲೂರು ಶ್ರೀ ಮೂಕಾಂಬಿಕ ದೇವಳದ ಪ್ರೌಢಶಾಲೆ ಬಾಲಕಿಯರ ಕಬಡ್ಡಿ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ವಿಜೇತ ವಿದ್ಯಾರ್ಥಿಗಳೊಂದಿಗೆ ದೈಹಿಕ ಶಿಕ್ಷಣ ಶಿಕ್ಷಕರಾದ ಸಚಿನ್ ಕುಮಾರ್ ಶೆಟ್ಟಿ, ಸಹ ಶಿಕ್ಷಕಿ ಅಭಿನೇತ್ರಿ ಶೆಟ್ಟಿ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಪ್ರಕಾಶ್ ಪುಜಾರಿ ಮತ್ತು ಹಳೆ ವಿದ್ಯಾರ್ಥಿ ಪ್ರದೀಪ್ ಭಟ್ ಪ್ರಶಸ್ತಿ ಸ್ವೀಕರಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಇಲ್ಲಿನ ಯಡ್ತರೆ ಗ್ರಾಪಂ ವ್ಯಾಪ್ತಿಯ ಮುಲ್ಲಿಬಾರು (ಹೊಸೂರು) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಕೆ.ಎಸ್. ಮ್ಯಾಥ್ಯೂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಮಾಸ್ತಯ್ಯ ಪೂಜಾರಿ ಹೊಸೂರು, ಉಪಾಧ್ಯಕ್ಷರಾಗಿ ದುರ್ಗಯ್ಯ ಪೂಜಾರಿ ಕಿಸ್ಮತಿ, ಕಾರ್ಯದರ್ಶಿಯಾಗಿ ತಿಮ್ಮ ಮರಾಠಿ ಹೊಸೂರು, ಜೊತೆ ಕಾರ್ಯದರ್ಶಿಯಾಗಿ ಮಹಾದೇವ ಮರಾಠಿ, ಸುಜೇಶ್, ನಾಗಪ್ಪ ಮರಾಠಿ ಹೊಸೂರು, ಸಂಘಟನಾ ಕಾರ್ಯದರ್ಶಿಯಾಗಿ ದೇವಾನಂದ ಹೊಸೂರು, ಗಣೇಶ್ ಆಚಾರಿ ತೂದಳ್ಳಿ ಹಾಗೂ ಖಜಾಂಚಿಯಾಗಿ ಮಹೇಶ್ ಭಂಡಾರಿ ತೂದಳ್ಳಿ ಆಯ್ಕೆಯಾಗಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಪ್ಪುಂದ: ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಕರಾಟೆ ಪಂದ್ಯಾಟದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಪಾಲ್ಗೊಂಡ ಉಪ್ಪುಂದ ವಿಶ್ವನಾಥ ದೇವಾಡಿಗ ಕಂಚಿನ ಪದಕ ಪಡೆದು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ. ಕರಾಟೆಯನ್ನು ಜೀವನದ ಹವ್ಯಾಸವಾಗಿಟ್ಟುಕೊಂಡು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಇವರು ಉಪ್ಪುಂದ ದೊಡ್ಡಹಾಡಿಮನೆ ಅಣ್ಣಪ್ಪ ದೇವಾಡಿಗ ಮತ್ತು ಕಾವೇರಿ ದೇವಾಡಿಗರ ಪುತ್ರ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಯಾವುದೇ ಫಲಾಪೇಕ್ಷೆ ಮತ್ತು ಪ್ರಚಾರವಿಲ್ಲದೆ ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದ್ದು, ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಇನ್ನುಳಿದ ಸಾಧಕರಿಗೆ ಇದರಿಂದ ಪ್ರೋತ್ಸಾಹ ದೊರೆಯಲಿದೆ. ಸಮಾಜದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಸಾಧಕರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಮಾಡುತ್ತಿದೆ ಎಂದು ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ಮಾಜಿ ಕಾರ್ಯದರ್ಶಿ ಕೆ.ರಾಮನಾಥ ನಾಯಕ್ ಹೇಳಿದರು. ಅವರು ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಸಂಜೆ ಜರಗಿದ ಎಲೆಮರೆಯ ಕಾಯಿ ಕಾರ್ಯದಲ್ಲಿ ಮಾತನಾಡಿದರು. ಇದೇ ಸಂದರ್ಭ ಉರಗ ತಜ್ಞ ಗುರುರಾಜ್ ಗಂಗೊಳ್ಳಿ ಅವರನ್ನು ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಜಿ.ವಿಠಲ ಭಾಸ್ಕರ ಶೆಣೈ ಅವರು ಸನ್ಮಾನಿಸಿ ಗೌರವಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಜಿ.ಕೃಷ್ಣಾನಂದ ಮಡಿವಾಳ, ಬಿ.ರಾಘವೇಂದ್ರ ಪೈ ಹಾಗೂ ಕಾರ್ಯದರ್ಶಿ ಗಣೇಶ ಕಿಣಿ ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ವಿದ್ಯಾರ್ಥಿಗಳು ನಿರಂತರವಾಗಿ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಉತ್ತಮ ಆರೋಗ್ಯ, ಮನಸ್ಸು, ಶಾಲಾ ವಾತಾವರಣ ಮತ್ತು ಕಲಿಕಾ ಸನ್ನಿವೇಶಗಳು ಪ್ರಧಾನಕಾರಕಗಳಾಗಿವೆ.ಅದರಲ್ಲಿಯೂ, ವಿದ್ಯಾರ್ಥಿಗಳು ವಿವಿಧ ಆಧುನಿಕ ಸೌಲಭ್ಯಗಳ ಪರಿಣಾಮವಾಗಿ ಕಲಿಕೆಯಲ್ಲಿ ಆಸಕ್ತಿಯನ್ನು ಕಳೆದುಕೊಳ್ಳುತ್ತಿರುವುದು ಶಿಕ್ಷಣ ಸಂಸ್ಥೆಗಳಿಗೆ ಮತ್ತು ಪಾಲಕರಿಗೆ ಪ್ರಮುಖ ಸಮಸ್ಯೆಯಾಗಿದೆ. ಮುಖ್ಯವಾಗಿ ,೬ ರಿಂದ ೧೦ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಎದ್ದು ಕಾಣುವ ದೈಹಿಕ, ಮಾನಸಿಕ, ಬೌದ್ಧಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಮತ್ತು ಅವುಗಳ ಸಮಸ್ಯೆಗಳ ಬಗ್ಗೆ ಸ್ವತ: ವಿದ್ಯಾರ್ಥಿಗಳಿಗೆ, ಪಾಲಕರಿಗೆ ಹಾಗೂ ಶಿಕ್ಷಕರುಗಳಿಗೆ ಅರಿವು ಇರುವುದು ಅನಿವಾರ್ಯವಾಗಿದೆ. ಇವೆಲ್ಲಾ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಷ್ಠಿತ ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿಯು ೬ನೇ ತರಗತಿಯಿಂದ ೧೦ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ತಾರುಣ್ಯವಸ್ಥೆಯ ಮಹತ್ವ ಮತ್ತು ಸಮಸ್ಯೆಗಳ ಬಗ್ಗೆ ಸಂವಹನ ರೂಪದ ಕಾರ್ಯಗಾರ ಜರುಗಿತು. ಈ ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಖ್ಯಾತ ಆಯುರ್ವೇದ ವೈದ್ಯೆ ಡಾ. ಅಪೇಕ್ಷಾ ರಾವ್ ರವರು ವಿದ್ಯಾರ್ಥಿಗಳಿಗೆ ಕ್ರೀಯಾತ್ಮಕ ಮತ್ತು ಧನಾತ್ಮಕ ಸಲಹೆಗಳನ್ನು ನೀಡಿದರಲ್ಲದೇ,…

Read More