Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರಎಜ್ಯುಕೇಶನ್ ಸೊಸೈಟಿ ಪ್ರವರ್ತಿತ, ಡಾ. ಬಿ. ಬಿ. ಹೆಗ್ಡೆ ಪ್ರಥಮದರ್ಜೆಕಾಲೇಜಿನ ರಕ್ಷಕ-ಶಿಕ್ಷಕ ಸಂಘಕ್ಕೆ ಪ್ರಸಕ್ತ ಶೈಕ್ಷಣಿಕ ವರ್ಷದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನುಕಾಲೇಜಿನ ಸಭಾಂಗಣದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ದೋಮಚಂದ್ರಶೇಖರ್‌ರವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಗೌರವಾಧ್ಯಕ್ಷರಾಗಿ ಕಾಲೇಜಿನ ಸಂಚಾಲಕರಾದ ಬಿ. ಎಮ್. ಸುಕುಮಾರ ಶೆಟ್ಟಿಯವರು, ಅಧ್ಯಕ್ಷರಾಗಿ ವಿಷ್ಣುಮೂರ್ತಿ ಉಡುಪ ಉಪಾಧ್ಯಕ್ಷರಾಗಿ ಪ್ರೊ. ದೋಮ ಚಂದ್ರಶೇಖರ್, ಕಾರ್ಯದರ್ಶಿಗಳಾಗಿ ಮಮತಾ ಎಸ್. ರಾವ್., ಜೊತೆ ಕಾರ್ಯದರ್ಶಿಗಳಾಗಿ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಸುಧಾಕರ್ ಪಾರಂಪಳ್ಳಿ, ಖಜಾಂಚಿಯಾಗಿ ವಾಣಿಜ್ಯಶಾಸ್ತ್ರ ಉಪನ್ಯಾಸಕಿ ರಕ್ಷಾ ಎಸ್. ಶೆಟ್ಟಿ ಆಯ್ಕೆಯಾದರು. ಪೋಷಕರು, ಬೋಧಕ-ಬೋಧಕೇತರ ವೃಂದದವರು ಉಪಸ್ಥಿತರಿದ್ದರು. ರಕ್ಷಾಎಸ್. ಶೆಟ್ಟಿ ವಂದಿಸಿದರು, ಸುಧಾಕರ್ ಪಾರಂಪಳ್ಳಿಯವರು ಕಾರ್ಯಕ್ರಮ ನಿರೂಪಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಹೆಮ್ಮಾಡಿ ವೃತ್ತದಲ್ಲಿ ಬೈಂದೂರು ಬಿಜೆಪಿ ಯುವಮೋರ್ಚಾ ವತಿಯಿಂದ ಪಂಜಿನ ಮೆರವಣಿಗೆ ನಡೆಯಿತು. ಪಿ.ಎಫ್.ಐ ಹಾಗೂ ಕೆ.ಎಫ್.ಡಿ ಸಂಘಟನೆಯನ್ನು ನಿಷೇಧಿಸಬೇಕು, ಭ್ರ್ರಷ್ಟ ಸಚಿವರನ್ನು ಸಂಪುಟದಿಂದ ಕೈ ಬಿಡಬೇಕು ಎಂದು ಆಗ್ರಹಿಸಿರುವುದಲ್ಲದೇ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಅವರ ವಿರುದ್ಧ ಎ.ಸಿ.ಬಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದನ್ನು ಖಂಡಿಸಿದರು. ಬೈಂದೂರು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಶರತ್ ಕುಮಾರ ಶೆಟ್ಟಿ ಉಪ್ಪುಂದ ಅವರ ನೇತೃತ್ವದಲ್ಲಿ ಪಂಜಿನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಭಾರತೀಯ ಜನತಾ ಪಾರ್ಟಿ ಬೈಂದೂರು ಮಂಡಲದ ಅಧ್ಯಕ್ಷರಾದ ಸದಾನಂದ ಉಪ್ಪಿನಕುದ್ರು, ಕ್ಷೇತ್ರ ಪ್ರಧಾನ ಕಾರ್ಯದರ್ಶಿ ದೀಪಕ್ ಕುಮಾರ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಸುದೇಶ ಕುಮಾರ ಶೆಟ್ಟಿ ಗುಲ್ವಾಡಿ, ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿ ಗಾಣಿಗ ಕೆಂಚನೂರು, ಯುವ ಮೋರ್ಚಾ ಪಧಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೆಂಗಳೂರು: ವಾಟ್ಸ್‌ಪ್ ಗ್ರೂಪ್‌ಗಳ ಮೂಲಕ ಯುವಕರ ಹಾಡು ಹರಟೆ ಮಾತ್ರ ನಡೆಯದೇ ಆಗಾಗ್ಗೆ ಬಡವರ ಕಣ್ಣೀರೊರೆಸುವ ಕೆಲಸಗಳನ್ನು ಮಾಡುತ್ತಲೇ ಬರುತ್ತಿದ್ದಾರೆ. ಇತ್ತಿಚಿಗೆ ನಮ್ಮ ಗೂಡು ವಾಟ್ಸಪ್ ಗ್ರೂಪ್ ಸದಸ್ಯರು ನಮ್ಮ ಪ್ರೀತಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಭಿಕ್ಷುಕರಿಗೆ ಮನೆಯಲ್ಲಿಯೇ ರುಚಿಕರ ಊಟ ತಯಾರಿಸಿ ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ವಿತರಿಸಿದರು. ಕುಂದಾಪುರ ತಾಲೂಕಿನ ವಿವಿಧೆಡೆಯ ಯುವಕರಾದ ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಯುವಕರುಗಳಾದ ರಾಜ್, ಸತೀಶ್, ಚಂದ್ರಶೇಖರ್, ಶ್ರೀನಿವಾಸ್, ಪ್ರತಾಪ್, ಪ್ರವೀಣ್ ಜೆ, ಗೀತಾ, ರಮ್ಯ, ಸುನಿತಾ, ಅನಿತಾ, ಸೀಮಾ ನಮ್ಮ ಪ್ರೀತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭೀಕ್ಷುಕರಿಗೆ ಊಟ ವಿತರಿಸಿ ಮಾದರಿ ಕಾರ್ಯದಲ್ಲಿ ಭಾಗಿಯಾದರು.  

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ : ಇಲ್ಲಿನ ಕಥೊಲಿಕ್ ಸಭಾ ವತಿಯಿಂದ ಮೇರಿ ಮಾತೆ ಸ್ವರ್ಗಾರೋಹಣದ ಹಬ್ಬದಂದು ಕುಂದಾಪುರ ಇಗರ್ಜಿಯ ಸಹಾಯಕ ಧರ್ಮಗುರು ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಮತ್ತು ಧರ್ಮಗುರು ವಂ. ಪ್ರವೀಣ್ ಅಮ್ರತ್ ಮಾರ್ಟಿಸ್ ಪವಿತ್ರ ಬಲಿದಾನ ಅರ್ಪಿಸಿದರು. ಚರ್ಚ್ ಪ್ರಧಾನ ಧರ್ಮಗುರು ವಂ.ಅನಿಲ್ ಡಿಸೋಜಾರ ಅಧ್ಯಕ್ಷತೆ ವಹಿಸಿ, ಸ್ನಾನಕೋತ್ತರ ಪದವಿಗಳಲ್ಲಿ ಸಾಧನೆ ಮಾಡಿದ ಹಾಗೂ ಧರ್ಮಗುರು ಜೆರಾಲ್ಡ್ ಸಂದೀಪ್ ಡಿಮೆಲ್ಲೊ ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಮತ್ತು ಪದವಿಯಲ್ಲಿ ಸಾಧನೆ ಮಾಡಿದವರನ್ನು ಪುರಸ್ಕರಿಸಿದರು. ಕುಂದಾಪುರ ಸಂತ ಮೇರಿಸ್ ಪಿ.ಯು.ಕಾಲೇಜ್ ಧರ್ಮಗುರು ವಂ.ಪ್ರವೀಣ್ ಅಮ್ರತ್ ಮಾರ್ಟಿಸ್, ಕಥೊಲಿಕ್ ಸಭೆಯ ನಿರ್ಗಮನ ಅಧ್ಯಕ್ಷ ವಿಲ್ಸನ್ ಆಲ್ಮೇಡಾ, ಪಾಲನ ಮಂಡಳಿ ಕಾರ್ಯದರ್ಶಿ ಫೆಲ್ಸಿಯಾನ್ ಡಿಸೋಜಾಉಪಸ್ಥಿತರಿದ್ದರು. ಘಟಕದ ನಿಯೋಜಿತ ಅಧ್ಯಕ್ಷೆ ಶೈಲಾ ಆಲ್ಮೇಡಾ ಸ್ವಾಗತಿಸಿದರು. ವಿನಯಾ ಡಿಕೋಸ್ತಾ ನಿರುಪಿಸಿದರು. ಕಾರ್ಯದರ್ಶಿ ಜೂಲಿಯೆಟ್ ಪಾಯ್ಸ್ ವಂದಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಿರಿಮಂಜೇಶ್ವರ ಗ್ರಾಮದ ನಾಗೂರು ಹೆದ್ದಾರಿ ಬದಿಯಿಂದ ನಾಗೂರು- ಕೊಡೇರಿ ರಸ್ತಗೆ ಸ್ಥಳಾಂತರಗೊಂಡು, ಸಾರ್ವಜನಿಕರ ವಿರೋಧದ ಕಾರಣ ತಾತ್ಕಾಲಿಕವಾಗಿ ಮುಚ್ಚಿದ್ದ ಬಾರ್ ಎಂಡ್ ರೆಸ್ಟೊರಂಟ್‌ನ್ನು ಪೊಲೀಸ್ ರಕ್ಷಣೆಯೊಂದಿಗೆ ತೆರೆಯಲಾಯಿತು. ಪ್ರತಿಭಟನೆಗೆ ಮುಂದಾದ ಜನರಿಗೆ ಉತ್ತರಿಸಿದ ಬಾರ್ ಮಾಲೀಕರು ಅಧಿಕಾರಿಗಳು ಒಂದು ದಿನದ ಮಟ್ಟಿಗೆ ಮುಚ್ಚುವಂತೆ ನೀಡಿದ ಮೌಖಿಕ ಆದೇಶವನ್ನು ಪಾಲಿಸಿದ್ದೇವೆ. ಅಬಕಾರಿ ಇಲಾಖೆ ನೀಡಿದ ಅನುಮತಿಯನ್ವಯ ಮತ್ತು ಮುಚ್ಚುವಂತೆ ಯಾವುದೇ ಲಿಖಿತ ಆದೇಶ ಬಾರದಿರುವುದರಿಂದ ಬಾರನ್ನು ತೆರೆಯಲಾಗಿದೆ ಎಂದರು. ಇದರಿಂದ ಆಕ್ರೋಶಿತರಾದ ಜನರು ಶಾಸಕ ಕೆ. ಗೋಪಾಲ ಪೂಜಾರಿ ಅವರ ಮನೆಗೆ ತೆರಳಿ ಬಾರ್‌ಗೆ ಸ್ಥಳೀಯರ ಆಕ್ಷೇಪಣೆ ಇರುವುದರಿಂದ ಅದನ್ನು ತೆರೆಯಲು ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು. ಜಿಲ್ಲಾಧಿಕಾರಿಗಳಿಗೆ ಸ್ಥಳ ಪರಿಶೀಲನೆ ನಡೆಸಿ ಕಾಯಿದೆಯಂತೆ ತೀರ್ಮಾನ ತೆಗೆದುಕೊಳ್ಳಲು ತಿಳಿಸಲಾಗುವುದು ಎಂದು ತಿಳಿಸಿದ ಶಾಸಕರು, ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ನಾಗೂರಿಗೆ ಭೇಟಿ ನೀಡುವರು ಎಂದು ಪ್ರತಿಭಟನಕಾರರ ಮುಖಂಡರು ತಿಳಿಸಿದ್ದಾರೆ.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿಂದೆಲ್ಲಾ ಸಿದ್ದಾಂತವನ್ನಿಟ್ಟುಕೊಂಡು ರಾಜಕಾರಣ ಮಾಡುತ್ತಿದ್ದರು. ದೇಶದ ಉನ್ನತಿಯ ಕೆಲಸ ನಡೆಯುತ್ತಿತ್ತು. ಆದರೆ ಇಂದು ಸ್ವಂತಕ್ಕಾಗಿ ರಾಜಕೀಯ ನಡೆಯುತ್ತಿದೆ. ಪಕ್ಷದ ತತ್ವ ಸಿದ್ಧಾಂತಗಳನ್ನೂ ಮೀರಿ, ಆದರ್ಶವನ್ನು ಮರೆತು ಪಕ್ಷಕ್ಕಿಂತ ಅಭ್ಯರ್ಥಿಗೆ ಪ್ರಾಮುಖ್ಯತೆ ನೀಡುವ ದಿನಗಳು ಬಂದಿವೆ. ಬದಲಾಗುತ್ತಿರುವ ಚುನಾವಣಾ ವ್ಯವಸ್ಥೆಯಲ್ಲಿ ರಾಜಕಾರಣ ಮತ್ತಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಸಾಮಾಜಿಕ ಹೋರಾಟಗಾರ ಎಂ. ಜಿ. ಹೆಗ್ಡೆ ಹೇಳಿದರು. ಅವರು ಕಲಾಕ್ಷೇತ್ರ ಕುಂದಾಪುರದ ಆಶ್ರಯದಲ್ಲಿ ಪದವಿಪೂರ್ವ ಕಾಲೇಜು ರೋಟರಿ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನಡೆದ ರಾಜಕಾರಣ ಮತ್ತು ಪತ್ರಿಕೋದ್ಯಮ ಅಂದು, ಇಂದು ವಿಚಾರ ಸಂಕಿರಣದಲ್ಲಿ ಮಾತನಾಡಿ, ಹಿಂದೆ ರಾಜಕಾರಣಿಗಳಲ್ಲಿ ಮನಸ್ಸು, ಹೃದಯವಿತ್ತು. ಹಾಗಾಗಿಯೇ ರಾಜಕೀಯ ನಾಯಕರ ಭಾಷಣಗಳನ್ನು ಕೇಳಲು ಸ್ವಯಂಪ್ರೇರಿತರಾಗಿ ಜನ ಬರುತ್ತಿದ್ದರು. ಇಂದಿನ ರಾಜಕಾರಣಿಗಳಲ್ಲಿ ನಾಲಿಗೆ ಮಾತ್ರವಿದೆ. ರಾಜಕೀಯ ಭಾಷಣಗಳು ಆರೋಪ ಪತ್ಯಾರೋಪಗಳ ವೇದಿಕೆಯಾಗಿದೆ. ಜನರನ್ನು ಹಣ ನೀಡಿ ಕರೆತರುವ ಸ್ಥಿತಿ ಬಂದೊದಗಿದೆ ಎಂದು ಲೇವಡಿ ಮಾಡಿದರು. ಸ್ವಾತಂತ್ರತ್ಯೋತ್ತರದ ರಾಜಕೀಯ ಪಕ್ಷಗಳು ಹಾಗೂ ಜನ ಪ್ರತಿನಿಧಿಗಳಲ್ಲಿ ಸ್ವತಂತ್ರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಉಡುಪಿ: ಇಂದಿನ ಸರಕಾರ ಹಾಗೂ ಮಾಧ್ಯಮಗಳು ಸ್ವಾತಂತ್ರ್ಯ ಹೋರಾಟದ ನೆನಪುಗಳನ್ನು ಇಂದಿನ ಜನಾಂಗಕ್ಕೆ ತಲುಪಿಸಲು ವಿಫಲವಾಗುತ್ತಿವೆ. ಇನ್ನು ನಾಲ್ಕೈದು ವರ್ಷಗಳಲ್ಲಿ ಹೊಸ ತಲೆಮಾರಿಗೆ ನಮ್ಮ ಸ್ವಾತಂತ್ರ್ಯ ಹೋರಾಟದ ಕಥನಗಳನ್ನು ತಲುಪಿಸಬಲ್ಲವರು ಇಲ್ಲವಾದ ಬಳಿಕ, ಸ್ವಾತಂತ್ರ್ಯ ಹೋರಾಟ ಹಾಗೂ ಹೋರಾಟಗಾರರೊಂದಿಗಿನ ದೇಶದ ಕೊನೆಯ ಕೊಂಡಿಯೂ ಕಳೆದು ಹೋಗಲಿದೆ. ಈಗಾಗಲೇ ದೇಶದ ಸ್ವಾತಂತ್ರ್ಯ ಹೋರಾಟದ ಭವ್ಯ ಇತಿಹಾಸದ ಬಗ್ಗೆ ಯಾವುದೇ ಮಾಹಿತಿಯೇ ಇಲ್ಲದ ಯುವಜನಾಂಗವೊಂದು ನಮ್ಮ ಮುಂದಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಪಾಲಗುಮ್ಮಿ ಸಾಯಿನಾಥ್ ಕಳವಳ ವ್ಯಕ್ತಪಡಿಸಿದರು. ಉಡುಪಿ ಪುರಭವನದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ವತಿಯಿಂದ ತಲ್ಲೂರ್ಸ್ ಇನ್ಫೊವ್ಯಾಲಿಡೇಷನ್ಸ್‌ನ ದಶಮಾನೋತ್ಸವದ ಅಂಗವಾಗಿ ನಡೆದ ತಲ್ಲೂರು ನುಡಿಮಾಲೆ ‘ಕರಾವಳಿ ಕಟ್ಟು’ ದತ್ತಿ ಉಪನ್ಯಾಸ ಮಾಲೆಯಲ್ಲಿ ‘ಡಿಜಿಟಲ್ ಯುಗದಲ್ಲಿ ಗ್ರಾಮೀಣ ಭಾರತ ಕಥನ’ ವಿಷಯದ ಕುರಿತು ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡುತ್ತಾ “ದೇಶದ ಗ್ರಾಮೀಣ ಭಾಗದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರ ನೂರಾರು ಕಥೆಗಳನ್ನು, ಇತಿಹಾಸವನ್ನು ನಾವಿಂದು ಓದುವುದಿಲ್ಲ. ಭಾರತ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ, ಬೈಂದೂರು: ಸಂಘಟನೆಯಿಂದ ಸಂಸ್ಕಾರ ವೃದ್ಧಿಸುತ್ತದೆ. ನಿಸ್ವಾರ್ಥ ಸೇವೆಯಿಂದ ದೇವರು ಹತ್ತಿರನಾಗುತ್ತಾನೆ ಮೊದಲು ನಾವು ಬದಲಾದರೆ ನಮ್ಮ ಮಕ್ಕಳು ಕೂಡಾ ನಮ್ಮನ್ನು ಅನುಸರಿಸುತ್ತಾರೆ. ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವಲ್ಲಿ ನಾವು ಎಡವಿದ್ದೇವೆ. ಎಂದು ಜಿಎಸ್‌ಬಿ ಹಿತರಕ್ಷಣಾ ವೇದಿಕೆ ಸಂಚಾಲಕ ವಿವೇಕಾನಂದ ಶೆಣೈ ಹೇಳಿದರು. ಉಪ್ಪುಂದ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನಡೆದ ಕೊಲ್ಲೂರು ವಲಯ ಜಿಎಸ್‌ಬಿ. ಸೇವಾ ಸಮಿತಿಯ ನಾಲ್ಕನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು. ನಮ್ಮ ಧಾರ್ಮಿಕ ಆಚರಣೆ ಧೃಡವಾಗಿರಬೇಕು. ಮಕ್ಕಳಿಗೆ ದೇವರು, ಧರ್ಮ, ಗುರು-ಹಿರಿಯರ ಬಗ್ಗೆ ಮನವರಿಕೆ ಮಾಡಬೇಕು ಎಂದರು. ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ್ ಮಾತನಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಘಟನೆ ಅತೀ ಮುಖ್ಯವಾಗಿದ್ದು, ನಮ್ಮ ಹಿರಿಯರಿಂದ ಬಳುವಳಿಯಾಗಿ ಬಂದ ಆಚರಣೆ, ಅನುಭವ, ಸಮೂಹ ಜೀವನ ಹಾಗೂ ಸಂಸ್ಕಾರ ನಮ್ಮ ಸಮಾಜದ ಬೆಳವಣಿಗೆಗೆ ಸಹಕಾರಿಯಾಗಿದೆ. ಪ್ರತೀ ಮನೆಗಳಲ್ಲಿಯೂ ಸಂಧ್ಯಾಕಾಲದ ಭಜನೆ ಮಾಡಬೇಕು. ಮಕ್ಕಳಿಗೆ ವ್ಯವಹಾರಿಕಾ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದ ಕುರಿತಾದ ಅರಿವು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿಂದುಳಿದ ವರ್ಗಕ್ಕೆ ಸಾಮಾಜಿಕ ನ್ಯಾಯ ನೀಡಿದ ಧೀಮಂತ ನಾಯಕ ಡಿ. ದೇವರಾಜ ಅರಸು ಅವರ ಆಶಯದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರಕಾರ ನಡೆಯುತ್ತಿದ್ದು, ಹಿಂದುಳಿದ ವರ್ಗಗಳ ಕಲ್ಯಾಣ, ಶೈಕ್ಷಣಿಕ ಪ್ರಗತಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿದೆ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಬಣ್ಣಿಸಿದರು. ಕುಂದಾಪುರ ತಾಲೂಕು ಆಡಳಿತ, ತಾಲೂಕು ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ದಿ.ದೇವರಾಜು ಅರಸು ೧೦೨ನೇ ಜನ್ಮ ದಿನಾಚರಣೆ ಉದ್ಘಾಟಿಸಿ ಮಾತನಾಡುತ್ತಿದ್ದರು. ಅರಸು ದೊಡ್ಡ ಕುಟುಂಬದಲ್ಲಿ ಹುಟ್ಟಿದರೂ ಕೃಷಿಕರಾಗಿ ಭೂಸುಧಾರಣೆ ಮೂಲಕ ಕ್ರಾಂತಿಕಾರಿ ಬದಲವಾಣೆ, ಜತೆ ಹಾವನೂರು ವರದಿ ಜಾರಿಗೆ ತರುವ ಮೂಲಕ ಹಿಂದುಳಿದವರಿಗೆ ಆತ್ಮಸ್ಥೈರ್ಯ ತುಂಬಿ, ಹಲವಾರು ಹಿಂದುಳಿದ ವರ್ಗದ ನಾಯಕರ ಹುಟ್ಟಿಹಾಕಿದರು ಎಂದು ಹೇಳಿದರು. ಮೀಸಲಾತಿಗೆ ಹೆಚ್ಚು ಒತ್ತು ನೀಡಿ, ಕೃಷಿಕರು ಮುಖ್ಯವಾಹಿನಿಗೆ ತರುವಲ್ಲಿ ಅರಸು ಪಾತ್ರ ಮಹತ್ವದ್ದು ಎಂದ ಅವರು ರಾಜ್ಯದಲ್ಲಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ತೆಕ್ಕಟ್ಟೆ ಬಾರಾಳಿಬೆಟ್ಟು ನಿವಾಸಿ ಮಂಜುನಾಥ ಪೂಜಾರಿ ಮತ್ತು ಪ್ರತಿಮಾ ದಂಪತಿಗಳ ಪುತ್ರ ನಿಶ್ಚಿತ್ (೨ವರ್ಷ) ಬ್ಲಡ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ವೈದ್ಯಕೀಯ ವೆಚ್ಚಕ್ಕೆ ಸುಮಾರು ೮ ಲಕ್ಷಕ್ಕೂ ಮಿಕ್ಕಿ ಹಣದ ಅಗತ್ಯವಿದ್ದು ಬಡ ಕುಟುಂಬ ಅಸಹಾಯಕ ಸ್ಥಿತಿಯಲ್ಲಿರುವ ಪತ್ರಿಕಾ ವರದಿಯನ್ನು ಗಮನಿಸಿದ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ|ಎಂ.ಎನ್.ರಾಜೇಂದ್ರ ಕುಮಾರ್ ದ.ಕ ಜಿಲ್ಲಾ ಕೇಂದ್ರ ಬ್ಯಾಂಕಿನ ವತಿಯಿಂದ ರೂ.೧೦,೦೦೦ ವೈದ್ಯಕೀಯ ನೆರವು ನೀಡಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನ ನಿರ್ದೇಶಕರಾದ ರಾಜು ಪೂಜಾರಿ ಮತ್ತು ರಘುರಾಮ ಶೆಟ್ಟಿಯವರು ಬಸ್ರೂರುವಿನಲ್ಲಿರುವ ಮಗುವಿನ ಮನೆಗೆ ತೆರಳಿ ವೈದ್ಯಕೀಯ ನೆರವಿನ ಚೆಕ್ ಮಗುವಿನ ತಾಯಿ ಪ್ರತಿಮಾ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಉಪಸ್ಥಿತರಿದ್ದರು.

Read More