Author: ನ್ಯೂಸ್ ಬ್ಯೂರೋ

ಒಂದು ವರ್ಷದ ಬಳಿಕ ಕೋಡಿ ಪಂಚಾಯಿತ್ ಅಧ್ಯಕ್ಷರ ಆಯ್ಕೆ ಕುಂದಾಪ್ರ ಡಾಟ್ ಕಾಂ ವರದಿ. ಕೋಟ: ಎಲ್ಲೆಡೆ ಗ್ರಾಮ ಪಂಚಾಯತ್ ಚುನಾವಣೆಯ ಬಳಿಕ, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದು ವರ್ಷ ಕಳೆದರೂ ಸ್ಥಾನ ಒಂದು ವರ್ಷ ಒಂದು ತಿಂಗಳಿನಿಂದ ಖಾಲಿ ಉಳಿದಿದ್ದ ಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಮಂಗಳವಾರದಂದು ಮತದಾನ ನಡೆದಿದೆ. ಮೀಸಲಾತಿಯ ಗೊಂದಲ ಇದ್ದ ಉಡುಪಿ ತಾಲೂಕಿನ ಕೋಡಿ ಗ್ರಾಪಂನಲ್ಲಿ ಕೊನೆಗೂ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ರಂಜನಿ(21) ಆಯ್ಕೆಯಾಗಿದ್ದು, ಜಿಲ್ಲೆಯ ಅತ್ಯಂತ ಕಿರಿಯ ಅಧ್ಯಕ್ಷೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಕೋಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಪಂಗಡದವರು ಇಲ್ಲದಿದ್ದರು ಚುನಾವಣಾ ಆಯೋಗದ ಎಡವಟ್ಟು ನಿರ್ಧಾರದಿಂದ ಕೆಲವೊಂದು ವಾರ್ಡ್‌ಗಳಿಗೆ ಪರಿಶಿಷ್ಟ ಪಂಗಡ ಮಿಸಲಾತಿ ಬಂದಿತ್ತು. ಈ ಬಗ್ಗೆ ಮರು ಪರಿಶೀಲನೆ ನಡೆದ ಬಳಿಕ ಪರಿಶಿಷ್ಟ ಪಂಗಡದವರ ಬದಲಿಗೆ ಪರಿಶಿಷ್ಟ ಜಾತಿಗೆ ಮಿಸಲಾತಿ ಬದಲಾಯಿಸಲಾಗಿತ್ತು. ಆದರೆ ಚುನಾವಣೆ ನಡೆದ ಬಳಿಕ ಮತ್ತೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಪಂಗಡ ಮಿಸಲಾತಿ ಬಂದ ಹಿನ್ನಲೆಯಲ್ಲಿ,…

Read More

ಕುಂದಾಪ್ರ ಡಾಟ್ ಕಾಂ ಬ್ರಹ್ಮಾವರ: ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಜುಲೈ ೨೪ರ ಆದಿತ್ಯವಾರ ಬ್ರಹ್ಮಾವರ ಬಸ್ ನಿಲ್ದಾಣ ಸಮೀಪದಲ್ಲಿರುವ ಬಂಟರ ಭವನದಲ್ಲಿ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ ಭಾಗವಹಿಸಲಿದ್ದು, ರಾಜ್ಯದ ಹೆಸರಾಂತ ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಭಾನುವಾರ ಬೆಳಿಗ್ಗೆ ಸಮಾರಂಭ ಆರಂಭಗೊಳ್ಳಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಬ್ರಹ್ಮಾವರ ವಲಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ವಹಿಸಲಿದ್ದಾರೆ. ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಡಾ.ಮೋಹನ್ ಆಳ್ವಾ ಕಾರ್ಯಕಮವನ್ನು ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ವಡ್ಡರ್ಸೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಿದ್ದಾರೆ. ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ.ಕುಂದರ್, ಬೆಳಗಾವಿಯ ಉದ್ಯಮಿ ರತ್ನಾಕರ ಶೆಟ್ಟಿ ಯರಗಟ್ಟಿ, ಮುಂಬೈನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರ ಸಹಯೋಗದಲ್ಲಿ ಕೋಣಿಯ ಕೆ ಜಿ ಜಗನ್ನಾಥರಾವ್ ಸರ್ಕಾರಿ ಪ್ರೌಢಶಾಲೆ ಇಲ್ಲಿನ ಇಕೋ ಕ್ಲಬ್‌ನ ಜೊತೆಗೂಡಿ ಈ ಭೂಮಿ ನಮ್ಮದು ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುಂದಾಪುರ ಸಮುದಾಯ ಸಾಂಸ್ಕೃತಿಕ ಸಂಘಟನೆಯ ಅಧ್ಯಕ್ಷ ಉದಯ ಗಾಂವಕಾರ ಪ್ರಾಸ್ತಾವಿಕವಾಗಿ ಮಾತನಾಡಿ ಈ ಭೂಮಿಯಲ್ಲಿ ನಮ್ಮಿಂದಾಗಿ ಅಳಿದುಹೋದ ಜೀವಸಂಕುಲಗಳನ್ನು ಉದಾಹರಿಸುತ್ತಾ ಉಳಿದಿರುವ ವೈವಿಧ್ಯಮಯ ಜೀವಸಂಕುಲಗಳ ಹಕ್ಕುಗಳ ರಕ್ಷಣೆ, ಪೋಷಣೆ ಇಂದಿನ ಅಗತ್ಯ ಹಾಗೂ ಅದೇ ನಮ್ಮ ಆದ್ಯ ಕರ್ತವ್ಯವಾಗಬೇಕು ಎಂದರು. ಕರಾವಿಪ ಅಧ್ಯಕ್ಷ ಯು ಆರ್ ಮಧ್ಯಸ್ಥರು ವಿದ್ಯಾರ್ಥಿಗಳಿಗೆ ಅವರ ಕರ್ತವ್ಯಗಳನ್ನು ಸರಳವಾಗಿ ವಿವರಿಸಿದರು. ಶುದ್ಧ ನೀರಿನ ಕುರಿತಾದ ಕ್ರಿ.ಶ.೨೦೭೦ರಲ್ಲಿ ಬರೆದ ಒಂದು ಪತ್ರ ಪ್ರಸ್ತುತಪಡಿಸಲಾಯಿತು. ನಂತರ ವಿದ್ಯಾರ್ಥಿಗಳಿಗೆ ಪರಿಸರ ಕಾಳಜಿಯ ರಸಪ್ರಶ್ನೆ ಕಾರ್ಯಕ್ರಮ ನಡೆಸಿ ಪುಸ್ತಕ ರೂಪದಲ್ಲಿ ಬಹುಮಾನ ನೀಡಲಾಯಿತು. ಶಾಲೆಯ ಇಕೋ ಕ್ಲಬ್‌ನ ಸದಸ್ಯರಿಗೆ ಬಟ್ಟೆಯ ಚೀಲಗಳನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಮಾತೃಭಾಷೆಯು ಹೃದಯದ ಭಾಷೆ. ನಿರಂತರವಾಗಿ ಬಳಸುವುದರಿಂದ ಭಾಷೆ ಉಳಿಯಬಲ್ಲುದು. ನಾಡು-ನುಡಿ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಒಲವು ಮತ್ತು ಅಭಿಮಾನವನ್ನು ಹೆಚ್ಚಿಸುವ ಕಾರ್ಯ ಇಂದಿನ ಅಗತ್ಯವಾಗಿದೆ ಎಂದು ಉಡುಪಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಪ್ರೊ. ಸಿ. ಉಪೇಂದ್ರ ಸೋಮಯಾಜಿ ಅವರು ಹೇಳಿದರು. ವಂಡ್ಸೆ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ಮಧ್ಯಾಹ್ನ ಜರಗಿದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನೂತನ ವಂಡ್ಸೆ ಹೋಬಳಿ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಶಿಕ್ಷಣ, ಸಾಹಿತ್ಯದಿಂದ ಮಾನವೀಯ ಮನಸ್ಸುಗಳು ಹೆಚ್ಚಬೇಕು. ಅಂತರಂಗದ ಪ್ರೇರಣೆಯಿಂದ ಪ್ರತಿಭೆ ಹೊರಬರುತ್ತದೆ. ಪ್ರತಿಭೆಯನ್ನು ಉತ್ತೇಜಿಸಲು ಓದು, ಉಪನ್ಯಾಸ, ಸಾಹಿತ್ಯ ಮತ್ತು ಕಲಾ ಚಟುವಟಿಕೆಗಳ ನೆರವು ಪಡೆಯಬೇಕು. ಅಂದಿನ ಜಾನಪದ ಇಂದಿಗೂ ತನ್ನದೇ ಆದ ಸತ್ವಯುತವಾದ ಸಂತೋಷವನ್ನು ಕೊಡುವಂತೆ ಯಾಂತ್ರಿಕತೆಯನ್ನು ಬಿಟ್ಟು ಪ್ರಕೃತಿದತ್ತ ಪ್ರೀತಿಯನ್ನು ಪಡೆಯಲು ಸಾಹಿತ್ಯ, ಸಂಸ್ಕ್ರತಿಯನ್ನು ಆಶ್ರಯಿಸಬೇಕು ಎಂದರು. ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ನೂತನ ಹೋಬಳಿ ಘಟಕದ ಪದಾಧಿಕಾರಿಗಳಿಗೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅದು ಅಮೇರಿಕಾ ಅಟ್ಲಾಂಟಾದ ಕೊಂಕಣಿ ಸಮ್ಮೇಳನದ ಪ್ರಧಾನ ಸಭಾಂಗಣ. ಅಂದಿನ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ ವೇದಿಕೆಗೆ ಬಂದ ಜಾದೂಗಾರ ಮೂವರು ಗಣ್ಯರನ್ನು ವೇದಿಕೆಗೆ ಬರಮಾಡಿಕೊಂಡ. ಬಂದವರ ಕೈಯಲ್ಲಿ ಕೇಸರಿ ಬಿಳಿ ಹಾಗೂ ಹಸಿರು ಬಣ್ಣದ ಕರವಸ್ತ್ರವನ್ನು ಬೇರೆ ಬೇರೆಯಾಗಿ ನೀಡಿದ. ಶಕ್ತಿ ಭಕ್ತಿ ಯುಕ್ತಿಯನ್ನು ಬಿಂಬಿಸುವ ಆ ಕರವಸ್ತ್ರಗಳ ಬಗ್ಗೆ ವಿಶ್ಲೇಷಿಸಿದ. ಬಂದವರು ಅದನ್ನು ಪರಿಶೀಲಿಸಿದ ನಂತರ ಗಟ್ಟಿಯಾಗಿ ಎರಡೂ ಕೈಯಲ್ಲಿ ಅವೆಲ್ಲವನ್ನೂ ಮುಷ್ಠಿ ಹಿಡಿಯುವಂತೆ ಸೂಚಿಸಿದ. ಹ್ಹಾಗೆ ಬಿಗಿಯಾಗಿ ಹಿಡಿದ ಬಿಡಿ ಬಿಡಿ ಕರವಸ್ತ್ರಗಳು ನೋಡುನೋಡುತ್ತಿದ್ದಂತೆ ಇಡಿಯಾಗಿ ಭಾರತದ ರಾಷ್ಟ್ರ ದ್ವಜವಾಗಿ ಆ ಮೂವರ ಕೈಯಲ್ಲಿ ಅರಳಿಕೊಂಡಿತ್ತು. ಹೀಗೆ ದೂರದ ಅಮೇರಿಕಾದಲ್ಲಿ ತನ್ನ ಜಾದೂವಿನ ಮೂಲಕ ತ್ರೀವರ್ಣ ಧ್ವಜ ಅರಳಿಸಿದ ಜಾದೂಗಾರ ಉಪ್ಪುಂದದ ಓಂಗಣೇಶ್. ಮೂರು ದಿನದ ಸಮ್ಮೇಳನಕ್ಕೆ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದ ಅವರು ತಮ್ಮ ಜಾದೂವನ್ನು ಉದ್ಘಾಟಿಸುತ್ತಾ ಕೊಂಕಣಿ ಭಾಷೆ ಭಾರತದ ಸಂಪತ್ತು. ಜಗತ್ತಿನ ಯಾವ ಭಾಗದಲ್ಲೇ ಇರಲಿ ಕೊಂಕಣಿ ಸ್ಮರಿಸುವುದೆಂದರೆ ಭಾರತವನ್ನು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ದುಬೈ ಕುಂದಾಪುರ ದೇವಾಡಿಗ ಮಿತ್ರ ಕದಂ ಸಂಘ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವುದರೊಂದಿಗೆ ಸಂಕಷ್ಟದಲ್ಲಿರುವವರಿಗೆ ನೆರವಿನ ಹಸ್ತ ಚಾಚುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ವಿಶೇಷ ಪಾತ್ರ ವಹಿಸುತ್ತಿದೆ ಎಂದು ಅಖಿಲ ಭಾರತ ತುಳು ಒಕ್ಕೂಟ ಅಧ್ಯಕ್ಷ ಯು.ಧರ್ಮಪಾಲ ದೇವಾಡಿಗ ಹೇಳಿದರು. ತ್ರಾಸಿ ಅಣ್ಣಪ್ಪಯ್ಯ ಸಭಾಭವನದಲ್ಲಿ ಇತ್ತೀಚೆಗೆ ಕುಂದಾಪುರ ದೇವಾಡಿಗ ಮಿತ್ರ ಕದಂ ವಿದ್ಯಾರ್ಥಿವೇತನ ಸಮಾರಂಭ ಉದ್ಘಾಟಿಸಿ ಮಾತನಾಡಿಸಿದರು. ದೇವಾಡಿಗ ವೆಲ್ ಫೇರ್ ಅಸೋಸಿಯೇಶನ್ ಮುಂಬೈ ಗೌರವ ಅಧ್ಯಕ್ಷ ಸುರೇಶ ಡಿ. ಪಡುಕೋಣೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ದಿನೇಶ ದೇವಾಡಿಗ ನಾಗೂರು ವಿದ್ಯಾರ್ಥಿ ವೇತನ ವಿತರಿಸಿದ್ದರು. ಮುಂಬೈ ದೇವಾಡಿಗರ ಸಂಘ ನಿಕಟ ಪೂರ್ವ ಅಧ್ಯಕ್ಷ ಎಚ್. ಮೋಹನದಾಸ, ಕರ್ನಾಟಕ ರಾಜ್ಯ ಅರಣ್ಯ ಇಲಾಖಾ ನೌಕರರ ಮಹಾಮಂಡಲದ ಅಧ್ಯಕ್ಷ ರಘುರಾಮ ದೇವಾಡಿಗ, ಮುಂಬೈ ಉದ್ಯಮಿ ನಾಗರಾಜ ಪಡುಕೋಣೆ, ಬಾರ್ಕುರು ಏಕನಾಥೇಶ್ವರಿ ದೇವಸ್ಥಾನದ ಅಧ್ಯಕ್ಷ ಅಣ್ಣಯ್ಯ ಸೇರಿಗಾರ, ಕಾರ್ಯದರ್ಶಿ ನರಸಿಂಹ ದೇವಾಡಿಗ, ಕೋಶಾಧಿಕಾರಿ ಜನಾರ್ಧನ ದೇವಾಡಿಗ, ಧರ್ಮದರ್ಶಿ ಜನಾರ್ಧನ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಇವತ್ತಿನ ರಾಜಕಾರಣ ವ್ಯವಸ್ಥೆ ಮೂಲಬೇರು ಶಿಕ್ಷಣ ಸಂಸ್ಥೆಗಳಲ್ಲಿನ ವಿಧ್ಯಾರ್ಥಿ ಸಂಘಗಳು, ಇಂದಿನ ಪ್ರತಿಯೊಬ್ಬರಾಜಕೀಯ ನಾಯಕರ ಯಶಸ್ಸಿನ ಹಿಂದೆ ವಿಧ್ಯಾರ್ಥಿ ಸಂಘಗಳ ಕೊಡುಗೆ ಅಪಾರ ಎಂದು ಕುಂದಾಪುರ ಪುರಸs ಉಪಾಧ್ಯಕ್ಷ ರಾಜೇಶ್ ಕಾವೇರಿ ಹೇಳಿದರು. ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜು (ಬೋರ್ಡ್ ಹೈಸ್ಕೂಲ್) ರೋಟರಿ ಲಕ್ಷ್ಮೀವೆಂಕಟರಮಣ ಕಲಾಮಂದಿದಲ್ಲಿ ನಡೆದ ವಿವಿಧ ವಿದ್ಯಾರ್ಥಿ ಸಂಘನೆ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿ ಸಂಘ, ಗ್ರಾಹಕ ಸಂಘ, ಕ್ರಷಿ ಸಂಘ, ಇಕೋ ಕ್ಲಬ್, ಆಪ್ತ ಸಮಾಲೋಚನೆ, ಮುಂತಾದ ಸಂಘಗಳ ಕಾರ್ಯ ಚೆಟುವಟಿಕೆ ಕ್ರಮವಾಗಿ ಶಿಕ್ಷಕರಾದ ಪ್ರದೀಪ್ ಶೆಟ್ಟಿ, ಯಶ್‌ವಂತ ಹುಲಸ್ವಾರ್, ಶ್ಯಾಮ ಶ್ಯಾನುಬಾಗ್, ಗಾಯಿತ್ರಿ ಅಡಿಗ, ನಾಗರತ್ನ ಪರಿಚಯಿಸಿದರು. ಉಪನಿರ್ದೇಶಕರ ಕಚೇರಿ ಸಮಾಜ ವಿಷಯ ಪರಿವೀಕ್ಷಣಾಧಿಕಾರಿ ವೆಂಕಟೇಶ್ ನಾಯಕ್, ಉಪಪ್ರಾಂಶುಪಾಲ ಅರುಣ್‌ಕುಮಾರ ಶೆಟ್ಟಿ ವಿದ್ಯಾಥಿ ಸಂಸತ್‌ರ ನಾಯಕ ಸುಬ್ರಮಣ್ಯ ಮತ್ತು ವಿದ್ಯಾರ್ಥಿ ಪ್ರತಿನಿಧಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು ಅಧ್ಯಾಪಕರಾದ ಪ್ರದೀಪ ಶೆಟ್ಟಿ ಸ್ವಾಗತಿಸಿದರು. ವಿದ್ಯಾರ್ಥಿ ಮನೋಜ್ ನಿರ್ವಹಿಸಿದರು. ಶಿಕ್ಷಕ ಮಾಧವ ಅಡಿಗ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಡಿ ಬ್ಯಾರಿಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್‌ನಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಯತ ಹಾಜಿ ಮಾಸ್ಟರ್ ಮೆಹಮೂದ್‌ರವರ ಅಧ್ಯಕ್ಷತೆಯಲ್ಲಿ, ಮುಖ್ಯ ಅಥಿತಿಯಾಗಿ ಆಗಮಿಸಿದ ಕ್ಷೇತ್ರ ಸಂಪನ್ಮೂಲ ವ್ಯಕ್ತಿಯಾದ ಶ್ರೀಯತ ಉದಯ ಗಾಂವಕರ್‌ರವರು ಇಕೋ ಕ್ಲಬ್ ಉದ್ಘಾಟಿಸಿ ಪರಿಸರ ಸಂರಕ್ಷಣೆಯಲ್ಲಿ ಇಕೋ ಕ್ಷಬ್‌ನ ಪಾತ್ರ ಕುರಿತು ವಿದ್ಯಾರ್ಥಿಗಳಿಗೆ ಸಂದೇಶ ನೀಡಿದರು. ಶಾಲೆಯ ಮುಖ್ಯೋಪಾದ್ಯಾಯಿನಿ ಶ್ರೀಮತಿ ರೇಷ್ಮ ಡಿ ಸೋಜಾ, ಇಕೋ ಕ್ಲಬ್‌ನ ಅಧ್ಯಕ್ಷೆ ವಿದ್ಯಾರ್ಥಿನಿ ಮುಫಿದಾ ಉಪಸ್ಥಿತರಿದ್ದರು. ಕುಮಾರಿ ರಕ್ಷಿತಾ ಸ್ವಾಗತಿಸಿ, ಕುಮಾರಿ ರಿಧಾ ವಂದಿಸಿದರು. ಕುಮಾರಿ ರಿಕಿತಾ ಕಾರ್ಯಕ್ರಮ ನಿರ್ವಹಿಸಿದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಸಾಮಾಜಿಕ ಕೆಲಸಗಳಲ್ಲಿ ಗುರಿ, ಪ್ರಾಮಾಣಿಕತೆ ಹಾಗೂ ಪಾರದರ್ಶಕತೆ ಅತಿ ಮುಖ್ಯ. ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿರುವ ರೋಟರಿ ಸಂಸ್ಥೆಯು ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದ್ದು, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಕೊಡುಗೆಳನ್ನು ನೀಡುತ್ತಿದೆ. ಇಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಜವಾಬ್ದಾರಿ ಹೆಚ್ಚಾಗಿದ್ದು, ಸಂಸ್ಥೆಯ ಪ್ರತಿಯೊಬ್ಬರು ತಾವು ಇಡುವ ಪ್ರತಿಯೊಂದು ಹೆಜ್ಜೆಗಳನ್ನು ಎಚ್ಚರಿಕೆಯಿಂದ ಇಡಬೇಕು ಎಂದು ನಟ, ಜಾದೂಗಾರ ಓಂಗಣೇಶ ಉಪ್ಪುಂದ ಹೇಳಿದರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಗುಜ್ಜಾಡಿ ಗೋಪಾಲ ನಾಯಕ್ ರೋಟರಿ ಒಳಾಂಗಣ ಕ್ರೀಡಾಂಗಣದಲ್ಲಿ ಜರಗಿದ ಗಂಗೊಳ್ಳಿ ರೋಟರಿ ಕ್ಲಬ್‌ನ 2016-17ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಗಂಗೊಳ್ಳಿ ರೋಟರಿ ಕ್ಲಬ್‌ನ ನೂತನ ಅಧ್ಯಕ್ಷ ಎಂ.ಜಿ.ರಾಘವೇಂದ್ರ ಭಂಡಾರ್‌ಕಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ರೋಟರಿ ಜಿಲ್ಲೆ ೩೧೮೨ರ ವಲಯ ೧ರ ಸಹಾಯಕ ಗವರ್ನರ್ ಮಧುಕರ ಹೆಗ್ಡೆ ಅವರು ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಶುಭ ಹಾರೈಸಿದರು. ವಲಯ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಹಿಂದು ಜಾಗರಣ ವೇದಿಕೆ ಕೋಟೇಶ್ವರ ವಲಯದ ಪುನರಾರಂಭದ ಬೈಠಕ್ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಜರುಗಿತು. ಕೋಟೇಶ್ವರ ವಲಯದ ಸಂಚಾಲಕರಾಗಿ ಆದರ್ಶ ಅರಸರಬೆಟ್ಟು, ವಲಯ ಸಹ ಸಂಚಾಲಕರಾಗಿ ಉಮೇಶ್ ಕಳ್ಳಿಗುಡ್ಡೆ, ಸಂತೋಷ್ ಅರಾಲ್‌ಗುಡ್ಡೆ, ನಾಗೇಶ್ ಮಾರ್ಕೋಡು ಆಯ್ಕೆಯಾದರು. ಕಾರ್ಯದರ್ಶಿ- ಶ್ರೀನಿವಾಸ ಆಚಾರ್ಯ, ನಿಧಿಪ್ರಮುಖ- ವಿನೇಶ್ ಮಾರ್ಕೋಡು ಆಯ್ಕೆಯಾಗಿದ್ದು, ಹಿಂಜಾವೇ ಉಡುಪಿ ಜಿಲ್ಲಾ ಸಂಚಾಲಕ ಅರವಿಂದ ಕೋಟೇಶ್ವರ ಜವಬ್ದಾರಿ ಘೋಷಣೆ ಮಾಡಿದರು. ಉಡುಪಿ ಜಿಲ್ಲಾ ನಿಧಿಪ್ರಮುಖ್ ಅಶೋಕ ಕಾಗೇರಿ ಉಪಸ್ಥಿತರಿದ್ದರು.

Read More