ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಪ್ರಕೃತಿಯ ಋಣವನ್ನು ತಿರಿಸಲು ಯಾರಿಗೂ ಸಾಧ್ಯವಿಲ್ಲ. ಮಳೆ ಕಡಿಮೆ ಆದರೆ ಕೃಷಿ ಚಟುವಟಿಕೆ ಕುಂಠಿತಗೊಳ್ಳುತ್ತದೆ. ನಾವು ಯಾವುದೇ ವಸ್ತುವನ್ನು ಪ್ರೀತಿಸಿದರೆ ಮಾತ್ರ ಅದರ ಮೇಲೆ ನಮಗೆ ಪ್ರೀತಿ . ಅದಕ್ಕಾಗಿ ಪ್ರತಿಯೊಬ್ಬರೂ ನಮ್ಮ ಪರಿಸರದ ಗಿಡ ಮರಗಳನ್ನು ಪ್ರೀತಿಸಬೇಕು ಎಂದು ಕುಂದಾಪುರ ಸಾಮಾಜಿಕ ವಲಯ ಅರಣ್ಯಾಧಿಕಾರಿ ತುಳಸಿ ಹೇಳಿದರು. ಅವರು ಬಗ್ವಾಡಿಯಲ್ಲಿ ಅರಣ್ಯ ಇಲಾಖೆ, ಶ್ರೀ ಮಹಿಷಮರ್ದಿನಿ ಯುವಕ ಮಂಡಲ ಹಾಗೂ ಹರೆಗೋಡು ಮಹಾವಿಷ್ಣು ಯುವಕ ಮಂಡಲ ಇವರ ಜಂಟಿ ಆಶ್ರಯದಲ್ಲಿ ನಡೆದ ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿದರು. ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಗಾಣಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಚ್ಚು ನಾಯ್ಕ್ ಹಾಗೂ ಕೃಷಿಕ ನಾಗಪ್ಪಯ್ಯ ಭಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನರಸಿಂಹ ಗಾಣಿಗ ಹರೆಗೋಡು, ಶಾಲಾ ಮುಖ್ಯ ಶಿಕ್ಷಕಿ ಶೈಲಜಾ ಹರೆಗೋಡು, ಮಾಹವಿಷ್ಣು ಯುವಕ ಮಂಡಲದ ಅಧ್ಯಕ್ಷ ರವೀಶ ಡಿ.ಎಚ್., ಕೃಷಿಕ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಎಲ್ಲಾ ಕಾಲದಲ್ಲಿ ಎಲ್ಲರೂ ಎಲ್ಲರಿಗೂ ಒಳ್ಳೆಯವರಾಗಲು ಸಾಧ್ಯವಿಲ್ಲ. ಕಳೆದೆರಡು ವರ್ಷ ಹತ್ತು ತಿಂಗಳ ಅಧಿಕಾರಾವಧಿಯಲ್ಲಿ ನೊಂದು ಬಂದವರಿಗೆ, ಅನ್ಯಾಯವಾದವರಿಗೆ ನ್ಯಾಯ ಒದಗಿಸುನ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ ತೃಪ್ತಿಯಿದೆ ಎಂದು ನಿರ್ಗಮಿತ ಬೈಂದೂರು ವೃತ್ತ ನಿರೀಕ್ಷಕ ಸುದರ್ಶನ್ ಮುದ್ರಾಡಿ ಹೇಳಿದರು. ಬೈಂದೂರು ರೋಟರಿ ಸಮುದಾಯ ಭವನದಲ್ಲಿ ನಡೆದ ಅವರ ವಿದಾಯಕೂಟದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಎಷ್ಟೇ ಪ್ರಭಾವಿ ವ್ಯಕ್ತಿಯೂ ಕೂಡಾ ಕಾನೂನಿಗಿಂತ ದೊಡ್ಡವರಲ್ಲ. ಯಾವ ಅಧಿಕಾರಿಯಾಗಿದ್ದರೂ ಸೃಷ್ಠಿಯ ನಿಯಮ ಮೀರಲು ಸಾಧ್ಯವಾಗದು. ಅನುಭವ ಜೀವನದ ಪಾಠ ಕಲಿಸುತ್ತದೆ. ಹಿರಿಯರಿಗೆ, ಮಹಿಳೆಯರಿಗೆ, ಕಾನೂನನ್ನು ಗೌರವಿಸುವುದು ನಮ್ಮ ದೇಶದ ಸಂಸ್ಕೃತಿ. ನಮ್ಮ ಕೆಳಗಿನ ಅಧಿಕಾರಿಗಳನ್ನು ಕೂಡಾ ಕೀಳಾಗಿ ಕಾಣುವುದು ಮೇಲಾಧಿಕಾರಿಗಳ ವ್ಯಕ್ತಿತ್ವಕ್ಕೆ ಶೋಭೆತರದು ಎಂದ ಅವರು ಇಂದಿನ ವ್ಯವಸ್ಥೆಯಲ್ಲಿ ಪೋಲಿಸರು ಜನಸ್ನೇಹಿಯಾಗಿ ಕರ್ತವ್ಯ ಪಾಲಿಸಬೇಕಾಗುತ್ತದೆ. ಸಾಮರಸ್ಯ, ಸೌಹಾರ್ದತೆಯ ಸಮಾಜ ನಿರ್ಮಾಣಕ್ಕೆ ಆರಕ್ಷಕರು ಪ್ರಥಮ ಆದ್ಯತೆ ನೀಡುವುದರ ಮೂಲಕ ಸಾರ್ವಜನಿಕರ ವಿಶ್ವಾಸಗಳಿಸುವಂತಾಗಬೇಕು ಎಂದು ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು. ಬೈಂದೂರು,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ನಿರಂತರ ಹೊಸತನದ ಹುಡುಕಾಟದಲ್ಲಿರುವ ಗೀತಕಾರ, ಶಿಕ್ಷಕ, ಲೇಖಕ ರವೀಂದ್ರ ಪಿ. ಬೈಂದೂರು ರಚನೆಯ ಪರಿಸರ ಕಾಳಜಿಯ ಗೀತೆಗಳ ’ಹಸಿರೇ ಜೀವನ’ ಧ್ವನಿಸುರುಳಿಯನ್ನು ಇತ್ತಿಚಿಗೆ ಮಂಗಳೂರಿನ ಪುರಭವನದಲ್ಲಿ ನಡೆದ ಅರಣ್ಯ ಇಲಾಖೆಯ ಕೋಟಿ ವೃಕ್ಷ ಆಂದೋಲನದಲ್ಲಿ ಅರಣ್ಯ ಸಚಿವ ರಮಾನಾಥ ರೈ ಬಿಡುಗಡೆಗೊಳಿಸಿದರು. ರವಿಂದ್ರರ ಪರಿಸರ ಕಾಳಜಿಯನ್ನು ಪ್ರಶಂಸಿಸಿದ ಸಚಿವರು, ಅರಣ್ಯ ರಕ್ಷಣೆ ಮತ್ತು ಅದರ ಮಹತ್ವವನ್ನು ಗೀತೆಗಳ ರೂಪದಲ್ಲಿ ಸಮಾಜಕ್ಕೆ ತಿಳಿಯಪಡಿಸುವ ಕಾರ್ಯ ಶ್ಲಾಘನೀಯವಾದುದು ಎಂದು ಅವರನ್ನು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಮೇಯರ್ ಹರಿನಾಥ್ ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಮೊದೀನ್ ಬಾವಾ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ವಲಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ ಪಿ. ಮುಂತಾದವರು ಹಾಜರಿದ್ದರು. ಭಕ್ತಿಯಿಂದ ಭಾವದೆಡೆಗೆ, ಭಾವದಿಂದ ಪರಿಸರದೆಡೆಗೆ ಸಾಗುತ್ತಿರುವ ಗೀತಕಾರ ರವೀಂದ್ರ ಪಿ ಅವರು ಈವರೆಗೆ ಸುಮಾರು ಇನ್ನೂರಿಪ್ಪತ್ತು ಗೀತೆಗಳನ್ನು ರಚಿಸಿದ್ದು ಇವುಗಳಲ್ಲಿ ಐವತ್ತರಷ್ಟು ಧ್ವನಿಸುರುಳಿಯಾಗಿದೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಪಾರಂಪಳ್ಳಿ ಪಡುಕರೆ ವಾರ್ಡ್‌ಗೆ ಸಂಬಂಧಿಸಿದ ನಾಯ್ಕನಬೈಲು ಹೊಳೆಯಲ್ಲಿ ತೋಡ್ಕಟ್ಟು ಮತ್ತು ಪಾರಂಪಳ್ಳಿ ಪಡುಕರೆಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಲವು ಹಿಂದೆ ನಿರ್ಮಿಸಲಾಗಿದ್ದ ಮರದ ಕಾಲು ಸಂಕದ ದುರಸ್ಥಿಗೆ ಪಟ್ಟಣ ಪಂಚಾಯಿತಿ ನಿಯೋಜಿಸಿದ ಕೆಲಸಗಾರರು ಆಗಮಿಸಿದ ಸಾರ್ವಜನಿಕರು ಘೇರಾವ್ ಹಾಕಿದ ಘಟನೆ ನಡೆಯಿತು. ಶಾಶ್ವತ ಸೇತುವೆ ಮಂಜೂರಾಗದ ಹೊರತು ಪ್ರಸ್ತುತ ರಸ್ತೆ ದುರಸ್ಥಿ ನಡೆಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದ ಗ್ರಾಮಸ್ಥರು ಪಟ್ಟಣ ಪಂಚಾಯತಿ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಪಟ್ಟು ಹಿಡಿದರು. 1952ರಲ್ಲಿ ಕೋ.ಲ. ಕಾರಂತರಿಂದ ಶಂಕು ಸ್ಥಾಪನೆಗೊಂಡ ಈ ಮರದ ಸೇತುವೆ ಇದುವರೆಗೆ ಅಭಿವೃದ್ಧಿ ಕಾಣದೆ ಹಾಗೇ ಉಳಿದಿದೆ. ಪ್ರತಿ ವರ್ಷ ಮಳೆಗಾಲ ಬಂದಾಗ ಸ್ಥಳೀಯ ಪಟ್ಟಣ ಪಂಚಾಯತಿ ನಿದ್ದೆಯಿಂದ ಎಚ್ಚರವಾಗಿ ದುರಸ್ಥಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ವಿನಿಯೋಗಿಸುತ್ತಿದೆ. ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದರೂ ಕೂಡ ಪಟ್ಟಣ ಪಂಚಾಯಿತಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುವೆಂಪು ಶತಮಾನೋತ್ಸವ ಮಾದರಿ ಶಾಲೆ, ತೆಕ್ಕಟ್ಟೆ. ಇತ್ತೀಚೆಗೆ ಇಲ್ಲಿ ದತ್ತಿನಿಧಿ ಬಡ್ಡಿಯಿಂದ ಎಲ್ಲಾ ಮಕ್ಕಳಿಗೆ ಉಚಿತ ಬರೆವಣಿಗೆ ಪುಸ್ತಕ ಹಾಗೂ ಧಾನಿಗಳ ಸಹಾಯದಿಂದ ಎಲ್ಲಾ ವಿಧ್ಯಾರ್ಥಿಗಳಿಗೆ ಗುರುತು ಪತ್ರವಿರುವ ಕೊರಳಪಟ್ಟಿಯನ್ನು ವಿತರಿಸುವ ಸಮಾರಂಭ ನಡೆಯಿತು. ಮಕ್ಕಳ ಶೈಕ್ಷಣಿಕ ಅವಶ್ಯಕತೆಗಳನ್ನು ಗಮನಿಸಿಕೊಂಡು ಬರವಣಿಗೆ ಪುಸ್ತಕ ವಿತರಿಸುವ ಕಾರ್ಯ ಶ್ಲಾಘನೀಯವಾದುದು. ಈ ಪ್ರದೇಶದ ಸರಕಾರಿ ಶಾಲೆಗಳಲ್ಲಿ ಮೊತ್ತ ಮೊದಲ ಬಾರಿಗೆ ಜೈ ಭಾರತ್ ಸಂಸ್ಥೆಯಿಂದ ಗುರುತುಪತ್ರವಿರುವ ಕೊರಳಪಟ್ಟಿ ನೀಡುತಿರುವುದು ಪ್ರಶಂಸನೀಯಾದುದು. ದತ್ತಿನಿಧಿಗೆ ಸಹಕರಿಸಿದ ದಾನಿಗಳು ಹಾಗೂ ಗುರುತುಪತ್ರಕ್ಕೆ ನೆರವು ನೀಡಿದ ಜೈ ಭಾರತ್ ಸಂಸ್ಥೆಯ ಶ್ಲಾಘನೀಯ ಕಾರ್ಯವನ್ನು ಶಿಕ್ಷಣತಜ್ಞ ಕೆ.ವಿ.ನಾಯಕ್ ಕೊಂಡಾಡಿದರು. ತೆಕ್ಕಟ್ಟೆ ಗ್ರಾಮ ಪಂಚಾಯತಿ ಅಧ್ಯಕ್ಷ ಶೇಖರ್ ಕಾಂಚನ್ ಉಚಿತ ಬರವಣಿಗೆ ಪುಸ್ತಕ ವಿತರಿಸಿ ಮಾತನಾಡಿದರು. ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಲ್ಯಾಡಿ ಶಿವರಾಮ ಶೆಟ್ಟಿರವರು ಗುರುತು ಪತ್ರ ವಿತರಿಸಿ; ಜೈ ಭಾರತ್ ಸಂಸ್ಥೆಯ ಕಾರ್ಯ ಇತರರಿಗೆ ಮಾದರಿ ಎಂದು ಹೇಳಿದರು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೀದರ್ ದೇಶಪಾಂಡೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಉಷಾ ಸಿ ಯತ್ನಳ್ಳಿ ಸದ್ಬಾವನ ವೇದಿಯಲ್ಲಿ ಜರುಗಿದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಕಳೆದ ನಲವತ್ತು ವರ್ಷಗಳಿಂದ ಸಹಕಾರಿ ಕ್ಷೇತ್ರದಲ್ಲಿ ಸೇವೆಸಲ್ಲಿಸುತ್ತಿರುವ ನಾಯ್ಕನಕಟ್ಟೆ ಪುಂಡಲೀಕ ನಾಯಕ್ ಅವರಿಗೆ ’ಸಹಕಾರಿ ರತ್ನ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುಂದಾಪುರ ತಾಲೂಕು ಕೆರ್ಗಾಲಿನವರಾದ ಪುಂಡಲೀಕ ನಾಯಕ್, ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘ ಸೇರಿದಂತೆ ವಿವಿಧ ಸಹಕಾರಿ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಶಾಖಾ ಸಲಹಾಗಾರರಾಗಿದ್ದಾರೆ. ಬೈಂದೂರು ಹಿರಿಯ ನಾಗರೀಕ ವೇದಿಕೆಯ ಸದಸ್ಯರಾಗಿ, ಈ ಭಾಗದ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಆಧ್ಯಾತ್ಮದತ್ತ ಒಲವು ಹೊಂದಿರುವ ಇವರು ಕವನ, ಲೇಖನ, ನಾಟಕ, ಹಾಡುಗಾರಿಕೆ, ಅಂಚೆಚೀಟಿ ಸಂಗ್ರಹ ಮುಂತಾದ ಹವ್ಯಾಸಗಳ ಮೂಲಕ ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
ಕುಂದಾಪ್ರ ಡಾಟ್ ಕಾಂ. ನಾವು ಆಧುನಿಕರಾದಂತೆಯೂ ಜಾತಿ, ಧರ್ಮಗಳ ಕಂದಕದ ನಡುವೆ ಬಾಳುತ್ತಿರುವ ಮನುಷ್ಯ, ಎಲ್ಲರಲ್ಲಿಯೂ ಹರಿಯವುದು ಒಂದೇ ರಕ್ತ ಮತ್ತು ಮಾನವಪ್ರೇಮವೇ ದೊಡ್ಡದೆಂದು ಅರ್ಥಮಾಡಿಕೊಳ್ಳುವುದು ಯಾವಾಗ? ಇಂತಹದ್ದೇ ಒಂದು ಪ್ರಶ್ನೆಯನ್ನಿಟ್ಟುಕೊಂಡು ಕುಂದಾಪುರದ ಯುವ ನಿರ್ದೇಶಕ ನರೇಶ್ ಭಟ್ ಕಿರುಚಿತ್ರವೊಂದನ್ನು ನಿರ್ದೇಶಿಸಿದ್ದಾರೆ. ನೋಡಿ…
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಬಿರುಗಾಳಿಗೆ ಕುಸಿದು ಬಿದ್ದಿದ್ದ ಮನೆಯ ಮತ್ತೆ ಎದ್ದು ನಿಂತಿದೆ. ಮನೆಯಿಲ್ಲದೇ ಮುಂದೇನು ಎಂಬ ಕುಳಿತಿದ್ದ ವೃದ್ಧ ದಂಪತಿಗಳಿಗೆ ಮತ್ತೆ ಆಸರೆ ದೊರೆತಿದೆ. ಎರಡು ತಿಂಗಳೊಳಗೆ ಮತ್ತೆ ಅದೇ ಜಾಗದಲ್ಲಿ ಮನೆ ಕಟ್ಟಿಕೊಟ್ಟು ಇತರರಿಗೂ ಮಾದರಿಯಾಗಿದೆ ಕೋಟೇಶ್ವರ ಗಾಣಿಗ ಯುವ ಸಂಘಟನೆ. ಕಳೆದ ಮೇ ತಿಂಗಳಲ್ಲಿ ಬೀಸಿದ ಬೀರುಗಾಳಿ ಮಳೆ ಅಬ್ಬರಕ್ಕೆ ಗೋಪಾಡಿ ಕಾಂತೇಶ್ವರ ದೇವಸ್ಥಾನದ ಸಮೀಪದ ಆನಂದ ಗಾಣಿಗರ ಮನೆ ಮೇಲ್ಚವಣಿ ಸಂಪೂರ್ಣ ಕುಸಿದು ಹಾನಿಗೀಡಾಗಿತ್ತು. ಘಟನೆಯಲ್ಲಿ ವೃದ್ಧ ಆನಂದ ಗಾಣಿಗ ಗಂಭೀರ ಗಾಯಾಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಮನೆಯನ್ನು ದುರಸ್ತಿಗೊಳಿಸಲಾಗದೇ ವಯೋವೃದ್ಧ ದಂಪತಿಗಳು ಸಂಕಷ್ಟದಲ್ಲಿದ್ದಾಗ, ಕೋಟೇಶ್ವರ ಗಾಣಿಗ ಯುವ ಸಂಘಟನೆ ನೇತೃತ್ವದಲ್ಲಿ ಸುಮಾರು ಅಂದಾಜು 3.50 ಲಕ್ಷ ಅಂದಾಜಿನಲ್ಲಿ ಮನೆ ಬಿದ್ದ ಜಾಗದಲ್ಲೇ ಪುಟ್ಟದಾದ ಸುಂದರ ಮನೆಯನ್ನು ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಮತ್ತು ದಾನಿಗಳ ನೆರವಿನಿಂದ ನಿರ್ಮಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಕುಂದಾಪ್ರ ಡಾಟ್ ಕಾಂ ವರದಿ. ಮನೆ ಹಸ್ತಾಂತರ: ಅದರಂತೆ ನಿಮಾರ್ಣಗೊಂಡ ನೂತನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ಕ್ಷೇತ್ರ ಬಿಜೆಪಿ ಯುವಮೋರ್ಚಾದ ಅಧ್ಯಕ್ಷರನ್ನಾಗಿ ಯುವ ಉದ್ಯಮಿ, ಸಂಘಟಕ ಶರತ ಕುಮಾರ ಶೆಟ್ಟಿ ಉಪ್ಪುಂದ ಅವರನ್ನು ಕ್ಷೇತ್ರ ಬಿಜೆಪಿಯ ಅಧ್ಯಕ್ಷ ಸದಾನಂದ ಸೇರುಗಾರ್ ನೇಮಕ ಮಾಡಿದ್ದಾರೆ. ಶರತ್ ಕುಮಾರ ಶೆಟ್ಟಿ ಅವರು ಜಿಲ್ಲಾ ಬಿಜೆಪಿ ಯುವಮೋರ್ಚಾದ ಕಾರ್ಯದರ್ಶಿಯಾಗಿ, ಬೈಂದೂರು ಕ್ಷೇತ್ರ ಬಿಜೆಪಿ ಯುವಮೋರ್ಚಾದ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ದುಡಿದಿದ್ದಲ್ಲದೇ, ಉಪ್ಪುಂದ ಭಾಗದ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಬೈಂದೂರು ರೋಟರಿ ಕ್ಲಬ್ ಪದಪ್ರದಾನ ಸಮಾರಂಭ ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸೇವಾ ಸಂಸ್ಥೆಗಳ ನಿಸ್ವಾರ್ಥ ಸೇವೆ ತಾಯಿಯ ಪ್ರೀತಿಗಿಂತಲೂ ಮಿಗಿಲಾದ ಸ್ಥಾನವನ್ನು ಹೊಂದಿದೆ. ತಾಯಿಯಾದರೂ ತನ್ನ ಮಗು ಮುಂದೊಂದು ದಿನ ತನ್ನನ್ನು ಚನ್ನಾಗಿ ನೋಡಿಕೊಳ್ಳಲಿ ಎಂಬ ಸ್ವಾರ್ಥ ಹೊಂದಿರುತ್ತಾಳೆ. ಆದರೆ ಸೇವಾ ಸಂಸ್ಥೆಗಳಿಗೆ ಅಂತಹ ಸ್ವಾರ್ಥವಿಲ್ಲ. ಅದರಲ್ಲಿ ತೊಡಗಿಸಿಕೊಳ್ಳುವವರೂ ನಿಸ್ವಾರ್ಥ ಮನೋಭಾವವನ್ನು ಹೊಂದಿ ಮುನ್ನಡೆಯಬೇಕಾದುದು ಅವರ ಜವಾಬ್ದಾರಿ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಹೇಳಿದರು. ಇಲ್ಲಿನ ರೋಟರಿ ಭವನದಲ್ಲಿ ಬೈಂದೂರು ರೋಟರಿ ಕ್ಲಬ್ ಆಶ್ರಯದಲ್ಲಿ ಜರುಗಿದ ನೂತನ ಅಧ್ಯಕ್ಷ, ಕಾರ್ಯದರ್ಶಿಗಳ ಪದಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಮನುಷ್ಯ ವಿದ್ಯಾವಂತನಾದಂತೆ ಜಾತಿಯ ಗಂಡಾತರ ಮಾನವ ಸಂಬಂಧಗಳನ್ನು ದೂರ ಮಾಡುತ್ತಿದೆ, ಮಾನವೀಯತೆ ಮರೆಯಾಗಿದೆ. ಜಾತಿರಹಿತ ಸಮಾಜವನ್ನು ಕಟ್ಟುವುದು ಶಿಕ್ಷಣವಂತರ ಗುರಿಯಾಗಬೇಕು. ಇನ್ನೊಬ್ಬರನ್ನೂ ಪ್ರೀತಿ, ವಾತ್ಸಲ್ಯದಿಂದ ನೋಡುವುದೇ ನಿಜವಾದ ಮಾನವೀಯತೆಯನ್ನು ಬೆಳೆಸಿಕೊಳ್ಳಬೇಕು ಎಂದವರು ಹೇಳಿದರು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷರಾಗಿ ಮಂಜುನಾಥ ಶೆಟ್ಟಿ, ಕಾರ್ಯದರ್ಶಿಯಾಗಿ ಸುಧಾಕರ ಪಿ ಅಧಿಕಾರ ಸ್ವೀಕರಿಸಿದರು. ರೋಟರಿ…
