ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಇದರ 2016-17ನೇ ಸಾಲಿನ ಅಧ್ಯಕ್ಷರಾಗಿ ಉದಯ ಕುಮಾರ್ ಶೆಟ್ಟಿ ಆಯ್ಕೆಯಾಗಿದ್ದಾರೆ. ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವಂಡ್ಸೆ ಗ್ರಾಮ ಪಂಚಾಯತ್‌ಗೆ ೩ ಅವಧಿಯಿಂದ ಆಯ್ಕೆಯಾಗುತ್ತ ಬಂದ ಇವರು ಧಾರ್ಮಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದಾರೆ. ರೋಟರಿ ಕ್ಲಬ್ ಕುಂದಾಪುರ ಇದರ ಕಾರ್ಯದರ್ಶಿಯಾಗಿ ಸಾಲಗದ್ದೆ ಶಶಿಧರ್ ಶೆಟ್ಟಿ, ಉಪಾಧ್ಯಕ್ಷರಾಗಿ ನಿವೃತ್ತ ಕ್ಷೇತ್ರ ಶಿಕ್ಷಣಾದಿಕಾರಿ ಗೋಪಾಲ ಶೆಟ್ಟಿ, ಭಾಷಾ ಸಾಹೇಬ್, ಕೋಶಾಧಿಕಾರಿಯಾಗಿ ಪ್ರದೀಪ್ ವಾಜ್, ಜೊತೆ ಕಾರ್ಯದರ್ಶಿಯಾಗಿ ಮನೋಜ್ ನಾಯರ್, ರಾಜೀವ್ ಶೆಟ್ಟಿ ಆಯ್ಕೆಯಾಗಿದ್ದಾರೆ.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬೈಂದೂರು ವ್ಯಾಪ್ತಿಯ ಹಲವೆಡೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯನ್ನು ಗುತ್ತಿಗೆ ಪಡೆದ ಸಂಸ್ಥೆಯ ಬೇಜವಾಬ್ದಾರಿಯಿಂದಾಗಿ ಕೃಷಿ ಭೂಮಿಗಳಿಗೆ ಜೇಡಿ ಮಣ್ಣು ತುಂಬಿಕೊಂಡಿದ್ದು, ಕೃಷಿ ಕಾರ್ಯವನ್ನು ಮಾಡಲಾಗದ ಸ್ಥಿತಿ ತಲೆದೂರಿದೆ. ಈ ಸಮಸ್ಯೆಯನ್ನು ಶೀಘ್ರ ಪರಿಹರಿಸಿ ಕೃಷಿಕರಿಗೆ ನ್ಯಾಯ ಒದಗಿಸಲಾಗುವುದು. ಕೃಷಿಕರಿಗಾದ ನಷ್ಟವನ್ನು ಭರಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಬೈಂದೂರು ಕ್ಷೇತ್ರದ ಶಾಸಕ ಕೆ. ಗೋಪಾಲ ಪೂಜಾರಿ ಹೇಳಿದರು. [quote font_size=”16″ bgcolor=”#ffffff” arrow=”yes” align=”right”]ಬೈಂದೂರು ಭಾಗದಲ್ಲಿ ರಸ್ತೆ ಕಾಮಗಾರಿ ನಡೆಸುವ ಐಆರ್‌ಬಿ ಕಂಪೆನಿಯ ಅವೈಜ್ಞಾನಿಕ ಕಾಮಗಾರಿಯಿಂದಾಗಿ ಅವಾಂತರಗಳು ಸೃಷ್ಠಿಯಾಗಿದೆ. ಮೂರು ಕಡೆಗಳಲ್ಲಿ ನೀರು ಹೋಗುವ ತೋಡುಗಳನ್ನು ಮುಚ್ಚಿ ಒಂದೇ ಬದಿಯಲ್ಲಿ ಹರಿಯುವಂತೆ ಮಾಡಿದ್ದರಿಂದ ಕೃತಕ ನೆರೆ ಸೃಷ್ಟಿಯಾಗಿದ್ದಲ್ಲದೇ, ಒತ್ತಿನಣೆಯ ಜೇಡಿಮಣ್ಣು ಕೊಚ್ಚಿಕೊಂಡು ಹೋಗಿ ಕೃಷಿ ಗದ್ದೆಗಳಿಗೆ ತುಂಬಿಕೊಂಡಿದೆ. ಅಧಿಕಾರಿಗಳ ಬೇಜವಾಬ್ದಾರಿಯ ಬಗ್ಗೆ ಜಿಲ್ಲಾಡಳಿತ ಗಮನ ಹರಿಸಬೇಕು. ಶಾಸಕರು ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. – ಎಸ್. ರಾಜು ಪೂಜಾರಿ, ಸದಸ್ಯರು ಜಿಲ್ಲಾ ಕೆಡಿಪಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಕ್ಷಗಾನ, ರಂಗಭೂಮಿ ಮುಂತಾದ ಕಲಾ ಪ್ರಕಾರಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಮಾಡಿದರೇ ಮಕ್ಕಳು ದಾರಿ ತಪ್ಪುವ ಪ್ರಮೇಯ ಕಡಿಮೆಯಾಗುವುದಲ್ಲದೇ ಶೈಕ್ಷಣಿಕವಾಗಿಯೂ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದು ಜಿ.ಪಂ ಸದಸ್ಯ ಶಂಕರ ಪೂಜಾರಿ ಹೇಳಿದರು. ಬುಧವಾರ ಸಂಚಲನ ರಿ. ಹೊಸೂರು ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದೊಂದಿಗೆ ಬೈಂದೂರು ಗ್ರಾಪಂ ವ್ಯಾಪ್ತಿಯ ಹೊಸೂರಿನ ಹೊಂಗಿರಣ ರಂಗಮಂದಿರದಲ್ಲಿ ನಾಲ್ಕು ದಿನಗಳ ಕಾನನದೊಳಗೊಂದು ರಂಗಸುಗ್ಗಿ ‘ಶರತ್ ರಂಗ ಸಂಚಲನ-2016’ರ ಕಾರ್ಯಕ್ರಮದಲ್ಲಿ ಸಮಾರೋಪ ನುಡಿಗಳನ್ನಾಡಿದರು. ಗ್ರಾಮೀಣ ಭಾಗದಲ್ಲಿ ಸತತವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ಮನೋರಂಜನೆಯೊಂದಿಗೆ ಸಾಂಸ್ಕೃತಿಕ ಅರಿವು ಮೂಡಿಸುವ ಕಾರ್ಯ ನಿರಂತವಾಗಿ ನಡೆಯುತ್ತಿರುವುದು ಶ್ಲಾಘನೀಯ. ಈ ಕಾರ್ಯಕ್ಕೆ ಜಿ.ಪಂ ನಿಂದ ಅಗತ್ಯ ನೆರವು ನೀಡುವುದಾಗಿ ಅವರು ಭರವಸೆಯಿತ್ತರು. ಸುರಭಿ ರಿ. ಬೈಂದೂರು ವ್ಯವಸ್ಥಾಪಕ ಕೃಷ್ಣಮೂರ್ತಿ ಉಡುಪ, ಮುಲ್ಲಿಬಾರು ಸ.ಹಿ.ಪ್ರಾ ಶಾಲೆ ಪ್ರಭಾರ ಮುಖ್ಯೋಪಧ್ಯಾಯ ಗಿರೀಶ್ ಪಿ. ಮೇಸ್ತ, ಸಹಶಿಕ್ಷಕ ರಾಮನಾಥ ಮೇಸ್ತ, ಜೆಸಿಐ ಶಿರೂರು ಸ್ಥಾಪಕಾಧ್ಯಕ್ಷ ಮೋಹನ ರೇವಣ್ಕರ್, ಯಡ್ತರೆ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಎರಡು ದಿನಗಳ ಮೊಕ್ಕಾಂಗೆ ಗಂಗೊಳ್ಳಿಯ ಪೇಟೆ ಶ್ರೀ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನಕ್ಕೆ ಗುರುವಾರ ರಾತ್ರಿ ಚಿತ್ತೈಸಿದರು. ಭಟ್ಕಳದಿಂದ ಗಂಗೊಳ್ಳಿಗೆ ಆಗಮಿಸಿದ ಶ್ರೀಗಳವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ದೇವಳಕ್ಕೆ ಬರಮಾಡಿಕೊಳ್ಳಲಾಯಿತು. ದೇವಳದ ಮೊಕ್ತೇಸರ ಜಿ.ರಘುವೀರ ನಾಯಕ್, ಅಧ್ಯಕ್ಷ ಡಾ.ಕಾಶೀನಾಥ ಪೈ, ದೇವಳದ ಆಡಳಿತ ಮಂಡಳಿ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಮತ್ತು ಜಿಎಸ್‌ಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಕಿರಿಮಂಜೇಶ್ವರ ಹೊಸಹಕ್ಲು ಭಾಗಕ್ಕೆ ಕಡಲಕೊರೆತ ವೀಕ್ಷಣೆಗಾಗಿ ಸಚಿವರಾದ ಬಳಿಕ ಮೊದಲ ಭಾರಿಗೆ ಆಗಮಿಸಿದ್ದ ಮೀನುಗಾರಿಕಾ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹಾಗೂ ಬೈಂದೂರಿನ ಶಾಸಕ ಕೆ. ಗೋಪಾಲ ಪೂಜಾರಿ ಅವರನ್ನು ಗ್ರಾಮಸ್ಥರ ಪರವಾಗಿ ಹೊಸಹಕ್ಲು ಭಜನಾ ಮಂಡಳಿಯ ಸದಸ್ಯರು ಗೌರವಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ಜಿಪಂ ಸದಸ್ಯೆ ಗೌರಿ ದೇವಾಡಿಗ, ತಾಪಂ ಸದಸ್ಯ ಜಗದೀಶ ದೇವಾಡಿಗ, ಹೊಸಹಕ್ಲು ಭಜನಾ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಕುಂದಾಪ್ರ ಡಾಟ್ ಕಂ ಸುದ್ದಿ. ಬೈಂದೂರು: ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರವೇ ಸೀಮಿತವಾಗಿರದೇ ಮಕ್ಕಳಲ್ಲಿನ ಸೃಜನಾತ್ಮಕ ಕಲೆಗಳನ್ನು ಅರಳಿಸುವ ಕಾರ್ಯ ಮಾಡಬೇಕು. ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಮಕ್ಕಳ ಆಸಕ್ತಿಯ ಕ್ಷೇತ್ರಗಳಗನುಗುಣವಾಗಿ ಪ್ರೋತ್ಸಾಹ ದೊರೆತಾಗಿ ಶಿಕ್ಷಣದೊಂದಿಗೆ ಶೈಕ್ಷಣೇತರ ಕ್ಷೇತ್ರದಲ್ಲಿ ಪರಿಣತಿ ಸಾಧಿಸುತ್ತಾರೆ ಎಂದು ಜಿ.ಪಂ ಸದಸ್ಯ ಗೌರಿ ದೇವಾಡಿಗ ಹೇಳಿದರು. ಯಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನೆರವಿನೊಂದಿಗೆ ಹೆರಂಜಾಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜರುಗಿದ ಜನ-ಸಂಸ್ಕೃತಿ ಸಂಭ್ರಮ 2016ರ ವರ್ಣಚಿತ್ರವೈಭವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಚಿತ್ರಕಲೆಗೆ ವಿಶೇಷವಾದ ಶಕ್ತಿ ಇದೆ. ಎಂತವರನ್ನೂ ಒಂದು ಕ್ಷಣ ಆಕರ್ಷಿಸುವ ಕಲೆಗಳಲ್ಲಿ ಪರಿಣತಿ ಸಾಧಿಸಲು ಸೂಕ್ತ ಮಾರ್ಗದರ್ಶವೂ ಅಗತ್ಯ. ಮಕ್ಕಳಿಗೆ ಇಂತಹ ಶಿಬಿರಗಳನ್ನು ಆಯೋಜಿಸಿ ತರಬೇತಿ ನೀಡುತ್ತಿರುವುದು ಅವರಲ್ಲಿನ ಸೃಜಶೀಲತೆಗೆ ಪ್ರೋತ್ಸಾಹ ನೀಡಿದಂತಾಗುವುದು ಎಂದು ಹೇಳಿದರು. ಕಂಬದಕೋಣೆ ಗ್ರಾಪಂ ಅಧ್ಯಕ್ಷ ರಾಜೇಶ್ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಹೆರಂಜಾಲು ಮೊರಾರ್ಜಿ ದೇಸಾಯಿ ವಸತಿ ಶಾಲೆಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಾಲೂಕಿನ ಗಂಗೊಳ್ಳಿ, ಮರವಂತೆ ಹಾಗೂ ಕಿರಿಮಂಜೇಶ್ವರದ ಹೊಸಹಕ್ಲು ಸೇರಿದಂತೆ ತೀವ್ರ ಕಡಲ ಕೊರೆತ ಉಂಟಾದ ಪ್ರದೇಶಗಳಿಗೆ ರಾಜ್ಯ ಮೀನುಗಾರಿಕಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಭೇಟಿ ನೀಡಿ ವೀಕ್ಷಿಸಿದರು. ಬಳಿಕ ಮಾತನಾಡಿ ಮಳೆಗಾಲದಲ್ಲಿ ಕಡಲಕೊರೆತದಿಂದ ತೀರ ಪ್ರದೇಶದ ಜನರಿಗುಂಟಾಗುವ ತೊಂದರೆಯ ಬಗ್ಗೆ ಅರಿವಿದ್ದು ಸಮಸ್ಯೆ ಬಗೆಹರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆಯಿತ್ತರು. ಕಳೆದ ನಾಲ್ಕು ದಿನಗಳ ಹಿಂದೆ ಬಿರುಗಾಳಿಯಿಂದಾಗಿ ನೆಲಸಮಗೊಂಡಿದ್ದ ಮನೆಯವರಿಗೆ ಪರಿಹಾರವಾಗಿ 95,000ರೂ. ಚೆಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಜಿಲ್ಲಾ ಕೆಡಿಪಿ ಸದಸ್ಯ ರಾಜು ಪೂಜಾರಿ, ತಾಪಂ ಸದಸ್ಯ ರಾಜು ದೇವಾಡಿಗ, ತಹಶೀಲ್ದಾರ್ ಕಿರಣ ಗೌರಯ್ಯ ಹಾಗೂ ಇತರ ಜನಪ್ರತಿನಿಧಿಗಳು, ಅಧಿಕಾರಿಗಳು ಜೊತೆಗಿದ್ದರು.
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟ: ಇಲ್ಲಿನ ಬಸ್ ನಿಲ್ದಾಣದಲ್ಲಿರುವ ಶ್ರೀ ದುರ್ಗಾ ಜುವೆಲ್ಲರ‍್ಸ್‌ಗೆ ಸಂಜೆ ವೇಳೆ ಗ್ರಾಹಕರ ಸೋಗಿನಲ್ಲಿ ಕಳ್ಳರು ನುಗ್ಗಿ ಮಾಲಕನಿಗೆ ಹಲ್ಲೆ ಮಾಡಿ ಚಿನ್ನ ದರೋಡೆ ಮಾಡಿದ ಘಟನೆಗೆ ಸಂಬಂಧಿಸಿದ ಮತ್ತೋರ್ವ ಆರೋಪಿಯನ್ನು ಕೋಟ ಪೊಲೀಸ್‌ರು ವಶಕ್ಕೆ ಪಡೆದಿದ್ದಾರೆ. ಗೋವಾ ಮೂಲದ ಪ್ರಮಥೇಶ್(21) ಎನ್ನುವವನು ಸದ್ಯ ಕೋಟ ಪೊಲೀಸ್‌ರು ವಶಕ್ಕೆ ಪಡೆದು ಹಿರಿಯಡಕ ಜೈಲಿನಲ್ಲಿ ಹೆಚ್ಚಿನ ತನಿಖೆಗಾಗಿ ಇರಿಸಿದ್ದಾರೆ. ಮೇ 21ರ ಸಂಜೆ ವೇಳೆಗೆ ಗ್ರಾಹಕರ ಸೋಗಿನಲ್ಲಿ ಚಿನ್ನದಂಗಡಿಗೆ ಆಗಮಿಸಿದ ಅಪರಿಚಿತರು, ಚಿನ್ನದ ಆಭರಣಗಳನ್ನು ತೋರಿಸುವಂತೆ ಚಿನ್ನದಂಗಡಿಯ ಮಾಲಕ ರವೀಂದ್ರ ಆಚಾರ‍್ಯ ಅವರಿಗೆ ತಿಳಿಸಿ, ಅವರ ತಲೆಗೆ ಹೊಡೆದು ಕೆಳಗೆ ಬೀಳಿಸಿ, ಒಳಗಿನಿಂದಲೇ ಅಂಗಡಿಯ ಶಟರ್ ಹಾಕಿ ಆಭರಣಗಳನ್ನು ಗಂಟುಕಟ್ಟಿದ್ದರು. ಪಕ್ಕದ ಅಂಗಡಿಯ ಪ್ರಭಾಕರ ಕಾಮತ್ ಅವರು ಅಸಮಯ ಪ್ರಜ್ಞೆ ಮೆರೆದು ಅಂಗಡಿಯ ಶಟರ್ ಎಳೆದಾಗ, ಪರಾರಿಯಾಗಲು ಯತ್ನಿಸುತ್ತಿದ್ದ ಓರ್ವರನ್ನು ಪಕ್ಕದ ಅಂಗಡಿಯ ಎಳೆದಾಡಿ, ದರೋಡೆ ಕೋರರು ಪರಾರಿಯಾಗಲು ಯತ್ನಿಸಿದ್ದ ಬೈಕ್‌ನ್ನು ದೂಡಿ ಹಾಕಿದ್ದರು. ಬೈಕ್ ಬಿಟ್ಟು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಬುದ್ಧವಂತಿಕೆ, ಕಾರ್ಯಚತುರತೆ ಇದ್ದವರಿಗೆ ಸಾಧನೆ ಮಾಡುವುದು ಕಷ್ಟಕರವಾಗದು. ಹಾಗೆಯೇ ತಮ್ಮ ಹಿರಿಯರು ಹಾಕಿಕೊಟ್ಟ ವಿಚಾರಧಾರೆ ಹಾಗೂ ಸ್ವ-ಪ್ರತಿಭೆಯಿಂದ ಸಪ್ತ ಕೊಂಕಣಿ ಸಮುದಾಯದ ಭವ್ಯ ಪರಂಪರೆ ನಡೆದುಬಂದಿದೆ. ಇದನ್ನು ಹೀಗೆಯೆ ಉಳಿಸಿ ಬೆಳೆಸಬೇಕು ಎಂದು ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿ ಹೇಳಿದರು. ನಾಯ್ಕನಕಟ್ಟೆ ಜಿಎಸ್‌ಬಿ ಸಮಾಜದವರು ನೂತನವಾಗಿ ನಿರ್ಮಿಸಿದ ಶ್ರೀ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾ ಮಹೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಸರ್ವಸಿದ್ಧಿಗೆ ಸಾಧನೆಯೇ ಮುಖ್ಯ. ಮನೋಕಲ್ಪತ ವಿಕಲ್ಪಗಳಲ್ಲಿ ಮರೆಯಾಗಿರುವ ಮಾನವನ ನೈಜ ಸ್ವಭಾವ ಅಭಿವ್ಯಕ್ತವಾಗುವಂತೆ ಈ ಶರೀರವನ್ನು ದೇಗುಲವನ್ನಾಗಿ ಮಾಡುವುದೇ ಸಂಸ್ಕಾರ. ನಮ್ಮ ಜೀವನವು ಒಂದು ಯಜ್ಞವಿದ್ದಂತೆ. ಯಜ್ಞ ಮಾಡುವ ಮೊದಲು ಸಲಕರಣೆಗಳನ್ನು ಶುದ್ಧೀಕರಿಸುವಂತೆ ಪ್ರತಿಯೊಬ್ಬರು ತಮ್ಮ ತನು ಮನಗಳನ್ನು ಕೆಲವು ವಿಧಿ ಪೂರ್ವಕ ಕರ್ಮಗಳಿಂದ ಪರಿಶುದ್ಧಗೊಳಿಸಬೇಕು. ಇಂತಹ ಕರ್ಮಗಳಿಗೆ ಅನೇಕ ನಡಾವಳಿಗಳನ್ನು ಋಷಿ ಮುನಿಗಳು, ಯೋಗಿಗಳು ಹಾಕಿಕೊಟ್ಟಿದ್ದಾರೆ ಎಂದರು. ದೇವಳದ ಪುನಃ…
ಪಿಯುಸಿ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಿಗಾಗಿಯೇ ಅಕೌಂಟೆನ್ಸಿ ವಿಷದಲ್ಲಿ ಗುಣಮಟ್ಟದ ತರಬೇತಿಯನ್ನು ನೀಡುತ್ತಿರುವ ಬೈಂದೂರು ಯಡ್ತರೆಯ ಯಸ್ಕೋರ್ಡ್ ಕೋಚಿಂಗ್ ಕ್ಲಾಸಸ್ ಕಳೆದ ಹನ್ನೊಂದು ವರ್ಷಗಳಿಂದ ನೂರಾರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಸದ್ದಿಲ್ಲದೇ ಹೆಸರು ಮಾಡಿದೆ. ಮೊದಲು ಎಸ್.ಎಸ್.ಎಲ್.ಸಿ ಯಿಂದ ಆರಂಭಗೊಂಡು ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಗಣಿತ, ಲೆಕ್ಕಶಾಸ್ತ್ರದ ವಿಷಯಗಳಿಗಾಗಿಯೇ ತಗರತಿಗಳನ್ನು ಆರಂಭಿಸಿದ ಸಂಸ್ಥೆ, ಕ್ಲಿಷ್ಟವೆಂಬ ಗಣಿತ, ಲೆಕ್ಕಶಾಸ್ತ್ರದ ವಿಷಯಗಳನ್ನು ಸುಲಭವಾಗಿ ಅರಹುವ ಮೂಲಕ ನೂರಾರು ವಿದ್ಯಾರ್ಥಿಗಳ ಆಶಾಕಿರಣವಾಗಿ ನಿಂತಿದೆ. ದುಡ್ಡು ಮಾಡುವ ದಂದೆಗಿಳಿದು ಶಿಕ್ಷಣವನ್ನು ವ್ಯಾಪಾರಿಕರಣಗೊಳ್ಳುತ್ತಿರುವ ಇಂದಿನ ದಿನಮಾನಗಳಲ್ಲಿ, ಖಾಸಗಿ ತರಬೇತಿಗಳನ್ನು ನಡೆಸುತ್ತಿರುವುದನ್ನು ಎಲ್ಲಿಯೂ ಪ್ರಚುರ ಪಡಿಸದೇ ಕೇವಲ ತನ್ನ ಹವ್ಯಾಸಕ್ಕಾಗಿ ಎಂ.ಕಾಂ ಪದವೀಧರರಾಗಿರುವ ನಾಗರಾಜ ಪಿ. ಯಡ್ತರೆ ಆರಂಭಿಸಿದ ಈ ಸಂಸ್ಥೆ ಇಂದಿಗೂ ವಿದ್ಯಾರ್ಥಿಗಳ ಬಾಳು ಬೆಳಗಿತ್ತಿದೆ. ಅತಿ ಕಡಿಮೆ ಶುಲ್ಕದಲ್ಲಿ, ನಿಯಮಿತವಾದ ವಿದ್ಯಾರ್ಥಿಗಳಿಗಷ್ಟೇ ತರಗತಿಗಳನ್ನು ನಡೆಸುತ್ತಾ ಬರುತ್ತಿದ್ದಾರೆ. ಎಷ್ಟೋ ಬಾರಿ ಬಡ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶಾತಿ ಶುಲ್ಕವೆಂಬುದು ಶೂನ್ಯವಾದದ್ದು ಇದೆ. ತರಗತಿಯೂ ಅಷ್ಟೇ ಶಿಸ್ತಿನಿಂದ, ವಿದ್ಯಾರ್ಥಿಗಳಿಗೂ ಅರ್ಥವಾಗುವಂತೆ…
