Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಡಿವೈಎಸ್ಪಿ ಎಂ.ಕೆ. ಗಣಪತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ಕಿರುಕುಳ ನೀಡಿದರೆನ್ನಲಾದ ಸಚಿವರು ಹಾಗೂ ಪೊಲೀಸ್ ಅಧಿಕಾರಿಗಳು ರಾಜಿನಾಮೆ ನೀಡಬೇಕೆಂದು ಆಗ್ರಹಿಸಿ ಕುಂದಾಪುರದ ಎಬಿವಿಪಿ ನೇತೃತ್ವದಲ್ಲಿ ಡಾ. ಬಿ.ಬಿ. ಹೆಗ್ಡೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯದ ಸಚಿವ ಕೆ.ಜೆ. ಜಾರ್ಜ್ ಹಾಗೂ ಪೊಲೀಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ನಿರಂತರ ಕಿರುಕುಳ ನೀಡಿರುವ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದ ದಕ್ಷ ಡಿವೈಎಸ್ಪಿ ಗಣಪತಿ ಆತ್ಮಹತ್ಯೆಗೆ ಶರಣಾಗಿದ್ದರು. ಸಾವಿಗೂ ಮುನ್ನ ತನ್ನ ಸಾವಿಗೆ ಕಾರಣವಾದವರ ಹೆಸರನ್ನು ನೇರವಾಗಿಯೇ ಪ್ರಸ್ತಾಪಿಸಿದ್ದರೂ ಸರಕಾರ ಇಲ್ಲಸಲ್ಲದ ಕಾರಣವನ್ನು ನೀಡಿ ಪ್ರಕರಣದ ಹಾದಿ ತಪ್ಪಿಸುತ್ತಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು. ಕೇಸು ದಾಖಲಿಸಿ: ಸಮಾಜದಲ್ಲಿ ಎಲ್ಲರಿಗೂ ಒಂದೇ ತರಹದ ನ್ಯಾಯವಿದ್ದು, ಮೃತರ ಪತ್ನಿ ಹಾಗೂ ಪುತ್ರ ನೀಡಿರುವ ಕೇಸನ್ನು ದಾಖಲಿಸಿ ವಿಚಾರಣೆಗೊಳಪಡಿಸಬೇಕು ಅಲ್ಲದೇ ಪ್ರಕರಣವನ್ನು ಸಿಬಿಐ ಗೆ ಒಪ್ಪಿಸಬೇಕು ಎಂದು ಎಬಿಪಿವಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಾನವ ಜನ್ಮದಲ್ಲಿ ಶರೀರಕ್ಕೆ ಬಹಳ ಮಹತ್ವವಿದೆ. ಶರೀರ ಆರೋಗ್ಯವಾಗಿ, ಸದೃಡವಾಗಿದ್ದರೆ ಉತ್ಸಾಹದಿಂದ ಸರ್ವ ಕೆಲಸ ಸಾಂಗವಾಗಿ ನಡೆದು ಉನ್ನತಿ ಪಡೆಯಲು ಸಾಧ್ಯ. ಗೌಡ ಸಾರಸ್ವತ ಸಮಾಜ ಭಾಂದವರು ಹಲವು ಕಾರಣದಿಂದ ಗೋವಾದಿಂದ ದಕ್ಷಿಣಾಭಿಮುಖವಾಗಿ ಬಂದು ನೆಲೆಸಿ ವ್ಯಾಪಾರ ವಹಿವಾಟಿನ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಮೃದ್ದಿ ಹೊಂದಿದ್ದೇವೆ. ಇಲ್ಲಿನ ಜನ,ಸಮಾಜದಿಂದ ಕೇವಲ ಪಡೆದರಷ್ಟೇ ಸಾಲದು ಸೇವಾ ರೂಪದಲ್ಲಿ ಒಳಿತು ಮಾಡುವ ದಿಶೆಯಲ್ಲಿ ಮುಂದಿನ ಜನಾಂಗದವರಿಗೂ ಶಾಶ್ವತವಾಗಿ ಸೇವೆ ನೀಡುವ ಕಾರ್ಯ ನಡೆಯಬೇಕು. ದೇವಳದಲ್ಲಿ ವೇದಾಂಗ,ಧರ್ಮ ಪರಿಪಾಲನೆಯ ಜೊತೆಯಲ್ಲಿ ಸಮಾಜ ಮುಖಿ ಕಾರ್ಯಗಳೂ ನಡೆಯಬೇಕು. ಈ ವೈದ್ಯಾಶಾಲಾ ಕೇಂದ್ರದಿಂದ ಸಮಾಜದ ಎಲ್ಲಾ ವರ್ಗದ ಜನರಿಗೆ ಸೇವೆ ಸಲ್ಲಬೇಕು ಎಂದು ಕಾಶೀ ಮಠಾಧೀಶ ಶ್ರೀಮದ್ ಸಮ್ಯಮೀಂದ್ರ ತೀರ್ಥ ಸ್ವಾಮೀಜಿಯವರು ಕೋಟೇಶ್ವರ ಶ್ರೀ ರಾಮ ಸೇವಾ ಸಂಘದ ಸುವರ್ಣ ಮಹೋತ್ಸವ ಸೌಧದ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲಾ, ಶ್ರೀ ಭುವನೇಂದ್ರ ಪಂಚಕರ್ಮ ಸೆಂಟರ್‌ನ ಪ್ರಥಮ ಅಂತಸ್ತಿನ ಉಧ್ಘಾಟನೆಯನ್ನು ಅಮೃತ ಹಸ್ತಗಳಿಂದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ಉಪ ವಿಭಾಗದ ನೂತನ ಡಿವೈಎಸ್‌ಪಿ ಆಗಿ ಪ್ರವೀಣ ಎಚ್. ನಾಯಕ್ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದರು. ಕುಂದಾಪುರದಲ್ಲಿ ಡಿವೈಎಸ್‌ಪಿಯಾಗಿ ಸೇವೆ ಸಲ್ಲಿಸಿ ಶಿವಮೊಗ್ಗಕ್ಕೆ ವರ್ಗಾವಣೆಗೊಂಡಿರುವ ಮಂಜುನಾಥ ಶೆಟ್ಟಿ ಅಧಿಕಾರ ಹಸ್ತಾಂತರಿಸಿ ಶುಭಕೋರಿದರು. ನೂತನ ಡಿವೈಎಸ್‌ಪಿ ಯಾಗಿ ಅಧಿಕಾರ ಸ್ವೀಕರಿಸಿರುವ ಪ್ರವೀಣ್ ಎಚ್ ನಾಯಕ್ ಅವರ ಮೂಲತಃ ಕೊಪ್ಪದವರಾಗಿದ್ದು ಬಿಕಾಂ, ಎಲ್.ಎಲ್,ಬಿ, ಎಂಎ ಪದವಿಧರರು. ಕೋಲಾರ ಜಿಲ್ಲೆಯ ಮುಳಬಾಗಿಲುವಿನಲ್ಲಿ ಎಸ್.ಐ ಆಗಿ ವೃತ್ತಿ ಜೀವನ ಆರಂಭಿಸಿ, ಬೆಂಗಳೂರು ಜಿಲ್ಲೆಯ ರಾಮನಗರ, ಮಂಗಳೂರು ಟೌನ್, ಮಂಗಳೂರು ಸಂಚಾರ ಪೊಲೀಸ್ ಠಾಣೆ, ಬಜ್ಪೆ, ಪಣಂಬೂರು, ಸುಳ್ಯ, ಉಡುಪಿ ಟೌನ್, ಉಡುಪಿ ವೃತ್ತ, ಕಾಪು, ಮಣಿಪಾಲಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂಟೆಲಿಜೆನ್ಸ್, ಸ್ಪೇಷಲ್ ಬ್ರಾಂಚ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಶಾಂತಿ ಸುವ್ಯವಸ್ಥೆಗೆ ಪ್ರಥಮ ಆದ್ಯತೆ ನೀಡುವುದಲ್ಲದೇ ಕಳ್ಳತನ, ಅಪರಾಧ ಕೃತ್ಯಗಳನ್ನು ತಡೆಯುವುಲ್ಲಿ ಶೃದ್ದಾಪೂರ್ವಕ ಕರ್ತವ್ಯ ನಿರ್ವಹಿಸುತ್ತೇನೆ ಎಂದಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಈ ಸಂದರ್ಭದಲ್ಲಿ ಬೈಂದೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಸಾಹಿತ್ಯ, ಸಾಮಾಜಿಕ, ಧಾರ್ಮಿಕ ಮುಂತಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮದೇ ಆದ ಛಾಪು ಮೂಡಿಸಿರುವ ಉಪ್ಪುಂದ ಚಂದ್ರಶೇಖರ ಹೊಳ್ಳರ ಕುರಿತಾಗಿ ‘ಉಪ್ಪುಂದದ ಹೊಳಪು’ ಅಭಿನಂದನಾ ಗ್ರಂಥ ಬಿಡುಗಡೆಗೊಂಡ ಸುಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅವರ ಅನುಪಮ ಸೇವೆಯನ್ನು ಸ್ಮರಿಸಿ ಕುಂದಾಪುರ ರೋಟರಿ ಕ್ಲಬ್ ವತಿಯಿಂದ ಹೊಳ್ಳರ ಸ್ವಗೃಹ ‘ಬೆಳ್ಳಿರಥ’ದಲ್ಲಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಕುಂದಾಪುರ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ, ನಿಟಕಪೂರ್ವಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು, ಕಾರ್ಯದರ್ಶಿ ಸಾಲ್ಗದ್ದೆ ಶಶಿಧರ ಶೆಟ್ಟಿ, ನಿಕಟಪೂರ್ವ ಕಾರ್ಯದರ್ಶಿ ಸಂತೋಷ ಕೋಣಿ, ಸಾರ್ಜಂಟ್ ಅಟ್ ಆರ್ಮ್ ಸಂತೋಷ ಕುಮಾರ್ ಶೆಟ್ಟಿ ನೂಜಾಡಿ ಹಾಗೂ ಕುಂದಾಪ್ರ ಡಾಟ್ ಕಾಂ ಸಂಪಾಕದ ಸುನಿಲ್ ಹೆಚ್. ಜಿ. ಬೈಂದೂರು ಉಪಸ್ಥಿತರಿದ್ದರು.

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ಯಕ್ಷಗಾನದಲ್ಲಿ ಕರಾವಳಿಯ ಸೊಗಡು ಅಡಗಿದೆ. ನಮ್ಮ ಸಂಸ್ಕೃತಿಯ ಬೇರುಗಳು ಗಟ್ಟಿಯಾಗಿ ಉಳಿಯಬೇಕಿದ್ದರೇ, ಇಂತಹ ಕಲೆಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಎಂದು ಜಿ.ಪಂ ಸದಸ್ಯ ಕೆ. ಬಾಬು ಶೆಟ್ಟಿ ಹೇಳಿದರು. ಇಲ್ಲಿನ ರೋಟರಿ ಭವನದಲ್ಲಿ ಇತ್ತಿಚಿಗೆ ಯಸ್ಕೋರ್ಡ್ ಟ್ರಸ್ಟ್ ರಿ. ಬೈಂದೂರು ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ನೆರವಿನೊಂದಿಗೆ ಜರುಗಿದ ನಾಲ್ಕು ದಿನಗಳ ಜನ-ಸಂಸ್ಕೃತಿ ಸಂಭ್ರಮ ೨೦೧೬ರ ವರ್ಣಚಿತ್ರವೈಭವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಕಳೆದ ಒಂದೂವರೆ ದಶಕಗಳಿಂದ ವಿವಿಧ ಬಗೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬೈಂದೂರು ಭಾಗದಲ್ಲಿ ಒಂದು ಕಲಾ ಪ್ರೇಕ್ಷಕರನ್ನು ಹುಟ್ಟುಹಾಕಿರುವ ಯುಸ್ಕೊರ್ಡ್ ಟ್ರಸ್ಟ್ ಕಾರ್ಯ ಶ್ಲಾಘನೀಯವಾಗಿದ್ದು, ಸರಕಾರದ ಮಟ್ಟದಲ್ಲಿ ಅಗತ್ಯ ನೆರವು ಒದಗಿಸಿ ಪ್ರೋತ್ಸಾಹಿಸಲಾಗುವುದು ಎಂದು ಭರವಸೆಯಿತ್ತರು. ಯಡ್ತರೆ ಗ್ರಾ.ಪಂ ಅಧ್ಯಕ್ಷ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಶಾಖಾಧಿಕಾರಿ ಶ್ರೀಧರ ಭಟ್ ಉಪಸ್ಥಿತರಿದ್ದರು. ಯಡ್ಕೋರ್ಡ್ ಟ್ರಸ್ಟ್ ರಿ. ಕಾರ್ಯದರ್ಶಿ ಕೃಷ್ಣಮೂರ್ತಿ ಉಡುಪ ಸ್ವಾಗತಿಸಿದರು. ಅಧ್ಯಕ್ಷ ಸುಧಾಕರ ಪಿ.…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಜನಸಂಖ್ಯೆಯಲ್ಲಿ ವಿಶ್ವದ ಎರಡನೇ ಸ್ಥಾನದಲ್ಲಿರುವ ಭಾರತ ದೇಶ ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲಕ ವಿಶ್ವದ ಮುಂಚೂಣಿ ಸ್ಥಾನದಲ್ಲಿದೆ. ಪ್ರಜಾಪ್ರಭುತ್ವದ ಸಫಲತೆಗೆ ದೇಶದ ಜನಸಾಮಾನ್ಯರಲ್ಲಿನ ನಾಯಕತ್ವ ಕಾರಣವಾಗಿದೆ. ವಿದ್ಯಾರ್ಥಿದಿಸೆಯಿಂದಲೇ ನಾಯಕತ್ವ ಗುಣಗಳು ಬೆಳೆಯಬೇಕು. ಅದಕ್ಕೆ ಶಾಲಾ ಸಂಸತ್ತುಗಳು ಪೂರಕವಾಗಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿ’ಸೋಜ ಹೇಳಿದರು. ಅವರು ಕುಂದಾಪುರದ ಸೆಂಟ್ ಮೇರಿಸ್ ವಿದ್ಯಾ ಸಂಸ್ಥೆಯ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸರಕಾರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯ, ಸಂವಿಧಾನದ ರಕ್ಷಣೆ ಪ್ರತಿಯೋಬ್ಬರ ಆದ್ಯ ಕರ್ತವ್ಯವಾಗಿರುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ, ಶಾಸಕಾಂಗ ವ್ಯವಸ್ಥೆಯ ಅರಿವನ್ನು ವಿದ್ಯಾರ್ಥಿಗಳು ಹೊಂದಬೇಕು. ಒಂದು ಮತವೂ ಕೂಡಾ ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಮುಖ್ಯ ಹಾಗೂ ನಿರ್ಣಯಕವಾಗಿರುತ್ತದೆ ಎಂದರು. ವಿದ್ಯಾರ್ಥಿಗಳಲ್ಲಿ ಛಲ ಇರಬೇಕು. ನಿರ್ದಿಷ್ಟ ಗುರಿ ಹೊಂದಬೇಕು, ಗುರಿಗಾಗಿ ತುಡಿಯುವ ಮನಸ್ಸು ಇರಬೇಕು. ನಾಯಕತ್ವ ಗುಣವನ್ನು ಬಾಲ್ಯದಿಂದಲೇ ಬೆಳೆಸಿಕೊಳ್ಳಬೇಕು. ಸತ್ಪ್ರಜೆಗಳಾಗಿ ದೇಶಕ್ಕೆ ಅಮೂಲ್ಯ ಕೊಡುಗೆ ನೀಡಬೇಕು ಎಂದು ಹೇಳಿದರು. ಸಂಚಾರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸಂಘಟನೆಯಿಂದ ಮಹಿಳೆಯರು ಸಬಲರಾಗುವುದು ಸಾಧ್ಯ. ಹಾಗೆ ಸಬಲರಾದರೆ ಮಾತ್ರ ಸಮುದಾಯದ ಪ್ರಧಾನ ವಾಹಿನಿಗೆ ಬರಬಹುದು. ಸಂಘಟನೆಯಲ್ಲಿ ಒಗ್ಗಟ್ಟು ಸಾಧಿಸುವುದು ಅದರ ಅಸ್ತಿತ್ವಕ್ಕೆ ತೀರ ಅಗತ್ಯ ಎನ್ನುವುದನ್ನು ಮಹಿಳೆಯರು ಸದಾ ನೆನಪಿಟ್ಟುಕೊಳ್ಳಬೇಕು ಎಂದು ನಿವೃತ್ತ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಐ. ವಸಂತಕುಮಾರಿ ಹೇಳಿದರು. ಮರವಂತೆಯಲ್ಲಿ ಈಚೆಗೆ ಅಸ್ತಿತ್ವಕ್ಕೆ ಬಂದ ಸ್ನೇಹಾ ಮಹಿಳಾ ಮಂಡಲವನ್ನು ರವಿವಾರ ಸಾಧನಾ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಉದ್ಘಾಟಿಸಿದ ಬಳಿಕ ಮಾತನಾಡಿದರು. ಮಹಿಳಾ ಸಂಘಟನೆ ಸಮಾಜಕ್ಕೆ ಕೊಡುಗೆ ನೀಡುವುದು ಸಾಧ್ಯ ಎನ್ನುವುದನ್ನು ಮಹಿಳಾ ಮಂಡಲ ತೋರಿಸಿಕೊಡಬೇಕು. ಪರಿಸರದ ಸ್ವಚ್ಛತೆ ಅದರ ಆದ್ಯತೆಯ ವಿಷಯವಾಗಬೇಕು ಎಂದು ಅವರು ನುಡಿದರು. ಮಂಡಲದ ಅಧ್ಯಕ್ಷೆ ಅನಿತಾ ಆರ್. ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದ ಪ್ರೌಢಶಾಲಾ ಅಧ್ಯಾಪಕಿ ಡಾ. ಯಶೋಧಾ ಕರನಿಂಗ ಹಿಂದೆ ಮೇಲಿನ ಸ್ತರದಲ್ಲಿದ್ದ ಕೆಲವೇ ಮಹಿಳೆಯರ ಸಾಧನೆಯನ್ನು ಉಲ್ಲೇಖಿಸಿ ಸಮಾಜದಲ್ಲಿ ಸ್ತ್ರೀಯರಿಗೆ ಮಹತ್ವದ ಸ್ಥಾನವಿತ್ತು ಎನ್ನಲಾಗುತ್ತಿದೆ. ಆದರೆ ಎಲ್ಲ ಕಾಲದಲ್ಲೂ ಮಹಿಳೆಯರ ಸ್ಥಿತಿ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಕೋಟ ಪೊಲೀಸರು ನಡೆಸಿದ ಕಾರ್ಯಾಚರಣೆಯ ವೇಳೆ ಬಹುಕಾಲದಿಂದ ಉಡುಪಿ ಜಿಲ್ಲೆಯ ಹಲವಾರು ಜಾಗಗಳಿಗೆ ಗಾಂಜಾ ಸರಬರಾಜು ಮಾಡುತ್ತಿದ್ದ ಓರ್ವನನ್ನು ಸುಮಾರು 1 ಕೆಜಿ 700 ಗ್ರಾಂ ಗಾಂಜಾ ಸಹಿತ ಬಂಧಿಸಿದ್ದಾರೆ. ಕೋಟ ಮೂರು ಕೈ ಬಳಿಯ ಮಾರಿಗುಡಿ ದೇವಸ್ಥಾನದ ಬಳಿ ಆರೋಪಿಯನ್ನು ಮಾಲು ಸಹಿತ ಅಪರಾಧಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಗುಲ್ಬರ್ಗಾ ಮೂಲದ ಭೀಮಶಂಕರ್ (50) ಎಂಬಾತನೇ ಗಾಂಜಾ ಸರಬರಾಜು ಮಾಡುತ್ತಿದ್ದ ಸಮಯದಲ್ಲಿ ಸಿಕ್ಕಿಬಿದ್ದಾತ. ಸುಮಾರು 2 ವರ್ಷಗಳಿಂದ ಕೋಟದ ಪಡುಕರೆ ಪರಿಸರದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಈತ ಕುಂದಾಪುರ, ಕೋಟೇಶ್ವರ, ಮಣಿಪಾಲ ಮೊದಲಾದ ಕಡೆ ಗಾಂಜಾ ಸರಬರಾಜು ಮಾಡುತ್ತಿದ್ದ. ಗಾಂಜಾ ಸರಬರಾಜು ವಿಚಾರದಲ್ಲಿ ಬಹುಕಾಲದಿಂದ ಬೆನ್ನು ಹತ್ತಿದ್ದ ಕೋಟ ಉಪ ನಿರೀಕ್ಷಕ ಕಬ್ಬಾಳ್‌ರಾಜ್ ಎಚ್.ಡಿ. ಅವರು ಸೋಮವಾರದಂದು ತಮ್ಮ ಸಿಬ್ಬಂದಿಗಳೊಂದಿಗೆ ಮಾಹಿತಿ ಹಿಡಿದು ತೆರಳುತ್ತಿದ್ದಾಗ, ಸಾಲಿಗ್ರಾಮದಿಂದ ಬಸ್‌ನಿಂದ ಇಳಿದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಅನುಮಾನಸ್ಪದವಾಗಿ ಕೈಯಲ್ಲಿ ಚೀಲ ಹಿಡಿದು ನಡೆದು ಸಾಗುತ್ತಿದ್ದ ಭೀಮ…

Read More

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ ಸಾಧಿಸುವ ಛಲ, ಪೂರಕ ಧೈರ್ಯ, ಜೊತೆಯಲ್ಲಿ ಆತ್ಮವಿಶ್ವಾಸ ಇದ್ದರೆ ಅಸಾಧ್ಯವೆಂಬುವುದನ್ನು ಸಾಧಿಸಬಹುದು ಎನ್ನುವುದಕ್ಕೆ ಆರ್ಡಿಯ ಹರ್ಷಾದ್ ರಾವ್ ಅವರೇ ಜ್ವಲಂತ ಸಾಕ್ಷಿ. ಇವರು ಮಾಡಿರುವುದು ಅಂತಿಂಥ ಸಾಧನೆಯಲ್ಲ ವಿಶ್ವದ ಅತೀ ಎತ್ತರದ 8,848 ಮೀ. ಎತ್ತರದ ಮೌಂಟ್ ಎವರೆಸ್ಟ್ ಶಿಖರದ ತುತ್ತ ತುದಿ ಏರಿದ್ದು. ಮೂಲತಃ ಕುಂದಾಪುರ ತಾಲೂಕಿನ ಆರ್ಡಿಯ ಕೆರ್ಜಾಡಿಯ ಯುವಕ ಹುಬ್ಬೆರಿಸುವ ಮೇರು ಸಾಧನೆ ಮಾಡಿದ್ದಾರೆ. ಕೆನರಾ ಬ್ಯಾಂಕ್ ನಿವೃತ್ತ ಅಧಿಕಾರಿಯಾದ ಕಮಲಾಕ್ಷ ಮಹಾಲಿಂಗ ರಾವ್ ಮತ್ತು ಹೇಮಾಲತಾ ದಂಪತಿಗಳ ಪುತ್ರ ಹರ್ಷದ್ ಕಮಲಾಕ್ಷ ರಾವ್ ಈ ಸಾಧನೆ ಮಾಡಿರುವ ಅಪ್ರತಿಮ ಸಾಧಕ. ಪುಣೆಯಲ್ಲಿ ಕಂಪ್ಯೂಟರ್ ಇಂಜಿನಿಯರ್ ಆಗಿರುವ ಹರ್ಷದ್ ಮೇ.21ರಂದು ಎವರೆಸ್ಟ್ ತುತ್ತ ತುದಿ ತಲುಪಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಈ ಸಾಧನೆ ಮಾಡಲು ಅವರು ೮ ತಿಂಗಳುಗಳ ಕಾಲ ತಯಾರಿ ನಡೆಸಿದ್ದಾರೆ. ಸುಮಾರು ೨೮ಲಕ್ಷಕ್ಕೂ ಹೆಚ್ಚು ಹಣ ವಿನಿಯೋಗಿಸಿದ್ದಾರೆ. ಮಾ.29ರಂದು ಪರ್ವತಾರೋಹಣಕ್ಕೆ ಮುಂದಾದ ಅವರು ಕೊನೆಗೂ ಛಲದಿಂದ ಕುಂದಾಪುರದ ಯುವಕ ಎವರೆಸ್ಟ್ ಶಿಖರ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಗಂಗೊಳ್ಳಿಯ ಪೇಟೆ ವಿಠಲ ರಕುಮಾಯಿ ತಥಾ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮೊಕ್ಕಾಂನಲ್ಲಿರುವ ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಶನಿವಾರ ದೇವಸ್ಥಾನದ ಶ್ರೀ ಮುಖ್ಯಪ್ರಾಣ ದೇವರಿಗೆ ೧೦೮ ಪವಮಾನ ಕಲಶಾಭಿಷೇಕ, ಬಳಿಕ ದೇವಸ್ಥಾನದಲ್ಲಿ ನಡೆದ ಲಘು ವಿಷ್ಣುಹವನದ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುರ್ಣಾಹುತಿ ನೆರವೇರಿಸಿದರು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಜಿ.ಮೋಹನದಾಸ ಭಟ್, ವೇದಮೂರ್ತಿ ಜಿ.ರಾಘವೇಂದ್ರ ಆಚಾರ್ಯ, ವೇದಮೂರ್ತಿ ಜಿ.ವೇದವ್ಯಾಸ ಆಚಾರ್ಯ, ದೇವಳದ ಮೊಕ್ತೇಸರ ಜಿ.ರಘುವೀರ ನಾಯಕ್, ಅಧ್ಯಕ್ಷ ಡಾ.ಕಾಶೀನಾಥ ಪೈ, ದೇವಳದ ಆಡಳಿತ ಮಂಡಳಿ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಮತ್ತು ಜಿಎಸ್‌ಬಿ ಸಮಾಜ ಬಾಂಧವರು ಉಪಸ್ಥಿತರಿದ್ದರು.

Read More