Author: ನ್ಯೂಸ್ ಬ್ಯೂರೋ

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಟಿ.ಟಿ.ರಸ್ತೆ ಶೀ ವಿಘೇಶ್ವರ ಯುವಕ ಸಂಘದ ರಜತ ಸಂಭ್ರಮ ಸಮಾರಂಭ ಕುಂದಾಪುರ ರೋಟರಿ ಲಕ್ಷ್ಮೀನರಸಿಂಹ ಕಲಾಮಂದಿರದಲ್ಲಿ ನಡೆಯಿತು. ಮುಂಬ್ಮಯಿ ಉದ್ಯಮಿ ಸುರೇಶ ಡಿ.ಪಡುಕೋಣೆ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಸಮಾರಂಭದ ಅದ್ಯಕ್ಷತೆಯನ್ನು ಪುರಸಭೆಯ ಅದ್ಯಕ್ಷರಾದ ವಸಂತಿ ಮೋಹನ ಸಾರಂಗ ವಹಿಸಿದ್ದರು. ಮುಖ್ಯತಿಧಿಗಳಾಗಿ ಕಲಾಕ್ಷೇತ್ರ ಕುಂದಾಪುರ ಬಿ. ಕಿಶೋರ ಕುಮಾರ, ಸಹನಾ ಕನ್ವೆನ್ಷನ್ ಸೆಂಟರ್ ಅಂಕದಕಟ್ಟೆಯ ಸುರೇಂದ್ರಶೆಟ್ಟಿ, ಬಿಲಿಂಡರ್ ಚಲನಚಿತ್ರ ತಂಡದ ಓಂಗುರು, ಕುಂದಾಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಕಾಯದರ್ಶಿ ನಾಗರಾಜ ರಾಯಪ್ಪನಮಠ, ಸಂಸ್ಧೆಯ ಗೌರವಾದ್ಯಕ್ಷ ಶಿವಾನಂದ ವೇದಿಕೆಯಲ್ಲಿ ಉಪಸ್ಧಿತರಿದ್ದರು. ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಸಾಹಸಿಗ ಜೋತಿರಾಜ್, ಭಾರತೀಯ ಸೇನೆಯ ರಾಜೇಶ ದಾರಿಮನೆ, ಬಿಲಿಂಡರ್ ಚಿತ್ರ ತಂಡವನ್ನು ಹಾಗೂ ರಾಷ್ಟ್ರ ಮಟ್ಟದ ವಾಲ್ ಕ್ಲೈಮಿಂಗ್ ಸ್ಪರ್ದೆಯ ಚಿನ್ನದ ಪದಕ ವಿಜೇತ ಅರ್ಜುನ ಇವರನ್ನು ಸನ್ಮಾನಿಸಲಾಯಿತು. ಸಂಸ್ಧೆಯ ಅದ್ಯಕ್ಷ ಕೃಷ್ಣ ದೇವಾಡಿಗ ಸ್ವಾಗತಿಸಿದರು. ಮಾಜಿ ಅದ್ಯಕ್ಷ ದಿನೇಶ ದೇವಾಡಿಗ ಸನ್ಮಾನಿತರ ಪರಿಚಯ ಮಾಡಿದರು. ಗುರುರಾಜ ಗಾಣಿಗ ಕಾರ್ಯಕ್ರಮ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಹಿರಿಯ ಅಭಿವೃದ್ಧಿ ಅಧಿಕಾರಿ ಕೆ. ಕರುಣಾಕರ ಶೆಟ್ಟಿಯವರು ನಿವೃತ್ತ ಜೀವನಕ್ಕೆ ಪಾದಾರ್ಪಣೆ ಮಡುತ್ತಿರುವ ಸಂದರ್ಭದಲ್ಲಿ ಬೈಂದೂರಿನ ರೋಟರಿ ಭವನದಲ್ಲಿ ಜೀವವಿಮಾ ಪ್ರತಿನಿಧಿ ಬಳಗದ ವತಿಯಿಂದ ಬೀಳ್ಕೋಡುಗೆ ಸಮಾರಂಭ ನಡೆಯಿತು. ಭಾರತೀಯ ಜೀವವಿಮಾ ನಿಗಮದಲ್ಲಿ ಅಭಿವೃದ್ಧಿ ಅದಿಕಾರಿಯಾಗಿ ಸುಮಾರು 30 ವರ್ಷಗಳ ಕಾಲ ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸಿಕೊಂಡು, ಅವರ ಕಾರ್ಯವೈಖರಿಯನ್ನು ಪ್ರಶಂಸಿಸಿ, ಮುಂದಿನ ನಿವೃತ್ತ ಜೀವನವು ಶುಭದಾಯಕವಾಗಿರಲಿ ಎಂದು ಕೆ. ಕರುಣಾಕರ ಶೆಟ್ಟಿಯವರನ್ನು ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಭಾರತೀಯ ಜೀವವಿಮಾ ನಿಗಮ ಕುಂದಾಪುರ ಶಾಖೆಯ ಹಿರಿಯ ಶಾಖಾಧಿಕಾರಿ ಕೆ.ವಿ. ಕುಲಕರ್ಣಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಂದೂರು ಸಂಪರ್ಕ ಶಾಖೆಯ ಶಾಖಾಧಿಕಾರಿ ಜಿ. ಶಶಿಧರ ಹೆಗ್ಡೆ, ಕುಂದಾಪುರ ಶಾಖೆಯ ಉಪ ಶಾಖಾಧಿಕಾರಿ ಗುರುರಾಜ್ ಉಪಸ್ಥಿತರಿದ್ದರು. ಚಿತ್ತೂರು ಪ್ರಕಾಶ್ಚಂದ್ರ ಶೆಟ್ಟಿ ಸನ್ಮಾನಪತ್ರ ವಾಚಿಸಿದರು. ಬಿ.ಸೋಮಶೇಖರ ಶೆಟ್ಟಿ ಪರಿಚಯಿಸಿದರು. ಅಭಿವೃದ್ಧಿ ಅಧಿಕಾರಿಗಳಾದ ಡಿ.ಸತೀಶ್, ಸೋಮನಾಥನ್, ಸುರೇಶ್ ಪೂಜಾರಿ, ಮಾರ್ಟಿನ್ ಡಯಾಸ್, ಚಿತ್ತೂರು…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಕೇಂದ್ರ ಸರಕಾರಿ ನೌಕರರಿಗೆ ಸಮನಾದ ವೇತನ ಹಾಗೂ ಇನ್ನಿತರ ಭತ್ಯೆಗಳನ್ನು ರಾಜ್ಯ ಸರಕಾರವೂ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ಸರಕಾರಿ ನೌಕರರು ಕಛೇರಿಗೆ ಗೈರು ಹಾಜರಾಗಿ ಮುಷ್ಕರ ನಡೆಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಸದಸ್ಯರು ತಮ್ಮ ಕಛೇರಿಗೆ ಗೌರು ಹಾಜರಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿದರು.

Read More

ದಿಲೀಪ್ ಕುಮಾರ್ ಶೆಟ್ಟಿ | ಕುಂದಾಪ್ರ ಡಾಟ್ ಕಾಂ ಅಂಕಣ ಸೋಮಣ್ಣನ ಮದಿಲ್ ಸಮಾ ಮಾಡಿ ಮದ್ಯಾಹ್ನ ಉಂಡ್ಕಂಡ್ ಬಂದು, ಹೊರ್ಗ್ ಹಡಿಮಂಚದ ಮೇಲೆ ಬಿದ್ಕಂಡನಿಗೆ ಒಳ್ಳೆ ನಿದ್ರಿ. ರಾತ್ರಿಗೆ ಹರಿಪ್ರಸಾದದಲ್ಲಿ reception. ಕೋಳಿ ಮೂಳಿ, ಕುರಿ ಕಾಲ್ ಎಳಿತಿಪ್ಪು ಕನಸು. ಮನಸ್ಸಲ್ಲಿ ಮೂಳಿ ನೆನಪಾದ್ದೆ ತಡ, ನಿದ್ರಿ ಓಡಿ ಹೊಯಿ, ಕಣ್ಣ್ ಬಿಟ್ಟ್ ಕಾಂತಿ. ಗಂಟಿ 4. ಇನ್ನೆಂತ ಮಾಡುದ್, ಒಂದ್ ಒಳ್ಳೆ ಚಾ ಕುಡಿದು, ಡೈರಿಗೆನಾಲ್ಕ್ ಸೊಲ್ಗಿ ಹಾಲ್ ಕೊಟ್ಟಿಕೆ ಬಂದು, ಗುಡ್ಡಿಗೆ ಆಡುಕ್ ಹೊರಟಿ. ಇವತ್ತ್ ಆಡುಕೆ ಯಾರಿಗೂ ಮನಸಿಲ್ಲ. ಮದ್ಯಾನ ಸಮಾ ಹೊಟ್ಟಿ ಬಿರುವಷ್ಟು ತಿಂದ್ಕಂಡ್ ಬಂದಿತ್. ಕಡಿಕೆ ಒಂದು ಒಳ್ಳೆ ನಿದ್ರಿಯೂ ಆಯ್ತು. ಇನ್ನ್ ಎಂತ ಬೇಕು?. ಈಗ ಎಲ್ಲರೂ “receptionಗೆ ಎಷ್ಟೋತಿಗ್ ಹ್ವಾಪ ಮರೆ”, “first ಟ್ರಿಪ್ಅಲ್ಲೇ ಹ್ವಾಪ, ಕಡಿಕೆ ಜಾಗ ಸಿಕ್ಕುದಿಲ್ಲ”. “ಹೌದು ಮರೆ, ಬೇಗ ಹೊಯಿ,first ಪಂಕ್ತಿಗೆ ಕೂಕಂಡ್ ಉಂಡ್ಕಾ ಬಪ್ಪ, ಕಡಿಕ್-ಕಡಿಕೆ ಜನ ಜಾಸ್ತಿ ಆದ್ರೆ, ಹೋಳ್ ಹಾಕುದೆ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಗಂಗೊಳ್ಳಿ: ಗಂಗೊಳ್ಳಿಯ ಆಪ್ತ ಇಷ್ಟ ಮಿತ್ರ ಮಂಡಳಿ ವತಿಯಿಂದ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದ ವ್ಯವಸ್ಥಾಪಕ ಸಮಿತಿ ಸಹಕಾರದೊಂದಿಗೆ ಶ್ರೀ ವೆಂಕಟರಮಣ ದೇವರ ಭಜಕರ ಶ್ರೇಯೋಭಿವೃದ್ಧಿಗಾಗಿ ಗಂಗೊಳ್ಳಿಯ ಮಲ್ಯರಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ನವಗ್ರಹ ವಾಸ್ತು ಪುರಸ್ಪರ ಶ್ರೀ ಮಹಾವಿಷ್ಣು ಯಾಗದ ಮಹಾಪೂರ್ಣಾಹುತಿ ಕಾರ್ಯಕ್ರಮ ಜರಗಿತು. ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಯಜ್ಞದ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನಡೆಯಿತು. ಬಳಿಕ ಶ್ರೀದೇವರಿಗೆ ಮಹಾಪೂಜೆ, ರಾತ್ರಿ ಶ್ರೀದೇವರ ಪಲ್ಲಕಿ ಉತ್ಸವ ಮೊದಲಾದವುಗಳು ವಿಜೃಂಭಣೆಯಿಂದ ಜರಗಿತ. ಶ್ರೀ ಮಹಾವಿಷ್ಣು ಯಾಗದ ಅಂಗವಾಗಿ ಶ್ರೀ ವೆಂಕಟರಮಣ ದೇವರಿಗೆ ಶ್ರೀಗಂಧ ಲೇಪನ ಸೇವೆ ಮಂಗಳವಾರ ಜರಗಿತು. ಆಪ್ತ ಇಷ್ಟ ಮಿತ್ರ ಮಂಡಳಿ ಅಧ್ಯಕ್ಷ ಎಂ.ರಾಮಕೃಷ್ಣ ಪೈ ದಂಪತಿಗಳ ಯಜಮಾನಿಕೆಯಲ್ಲಿ ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ವೇದಮೂರ್ತಿ ಜಿ.ವಸಂತ ಭಟ್, ದೇವಳದ ಪ್ರಧಾನ ಅರ್ಚಕ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸರ್ಕಾರಿ ಶಾಲೆಯಲ್ಲಿ ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡುವ ಅನಿವಾರ್ಯ ಪರಿಸ್ಥಿತಿ ಇಂದು ನಿರ್ಮಾಣವಾಗಿದ್ದು, ಶಾಲೆಯನ್ನು ಉಳಿಸಿಕೊಳ್ಳುವ ಹಾಗೂ ಎಲ್ಲ ವರ್ಗದ ವಿದ್ಯಾರ್ಥಿಗಳಿಗೂ ಖಾಸಗಿ ಶಾಲೆಯಲ್ಲಿರುವಂತೆ ಆಂಗ್ಲ ಭಾಷಾ ಶಿಕ್ಷಣ ನೀಡುವ ಯೋಜನೆಯನ್ನು ಶತಮಾನೋತ್ಸವದ ನೆನಪಿಗಾಗಿ ಆರಂಭಿಸುತ್ತಿದ್ದು, ಉಚಿತವಾಗಿ ಎಲ್.ಕೆಜಿ, ಯುಕೆಜಿ, ೧ನೇ ತರಗತಿಯನ್ನು ಈ ಬಾರಿ ಆರಂಭಿಸಲಾಗುತ್ತಿದೆ ಎಂದು ವಂಡ್ಸೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯಕುಮಾರ್ ಶೆಟ್ಟಿ ಹೇಳಿದರು. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ವಂಡ್ಸೆ ಇಲ್ಲಿ ಪ್ರಸಕ್ತ ಸಾಲಿನಲ್ಲಿ ನೂತನವಾಗಿ ಆರಂಭಿಸಲಾದ ಆಂಗ್ಲಭಾಷಾ ಪೂರ್ವ ಪ್ರಾಥಮಿಕ ವಿಭಾಗ ಹಾಗೂ ೧ನೇ ತರಗತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಆಂಗ್ಲ ಭಾಷೆಯಲ್ಲಿ ಶಿಕ್ಷಣ ನೀಡುವುದು, ಈ ಬಗ್ಗೆ ಟ್ರಸ್ಟ್‌ನ ರಚನೆ, ದಾನಿಗಳ ಸಹಕಾರ, ರೋಟರಿ ಕ್ಲಬ್ ಮೂಲಕ ಪೀಠೋಪಕರಣ, ವಾಹನ ವ್ಯವಸ್ಥೆಯ ಬಗ್ಗೆ ಚಿಂತನೆಗಳು ನಡೆದಿದೆ. ಪೋಷಕರಿಂದ ಉತ್ತಮ ಪ್ರತಿಕ್ರಿಯೆ ಕಂಡು ಬಂದಿದ್ದು, ವ್ಯವಸ್ಥೆಯ ನಿಟ್ಟಿನಲ್ಲಿ ಸೀಮಿತ ಸಂಖ್ಯೆಗೆ ನಿಗದಿಪಡಿಸಲಾಗಿದೆ ಎಂದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ…

Read More

ಅಮಾಸೆಬೈಲಿನಲ್ಲಿ ಬೃಹತ್ ಸೋಲಾರ್ ದೀಪ ಅಳವಡಿಕೆ ಯೋಜನೆಗೆ ಚಾಲನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಅಮಾಸೆಬೈಲು: ಅಮಾಸೆಬೈಲು ಚಾರೀಟೆಬಲ್ ಟ್ರಸ್ಟ್, ಶ್ರೀ ಕ್ಷೇತ್ರ.ಧರ್ಮಸ್ಥಳ ಗಾಮಾಭೀವೃದ್ಧಿ ಯೋಜನೆ, ಕರ್ಣಾಟಕ ಬ್ಯಾಂಕ್, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಅಮಾಸೆಬೈಲು ಅಭಿವೃದ್ಧಿ ಹೊಂದಿದೆ. ಇಲ್ಲಿನ ಮನೆಗಳಿಗೆ ಸೋಲಾರ್ ದೀಪಗಳ ಅಳವಡಿಕೆಯ ಮೂಲಕ ರಾಜ್ಯದಲ್ಲಿ ಪ್ರಪ್ರಥಮ ಸಂಪೂರ್ಣ ಸೋಲಾರ್ ಗ್ರಾಮದ ಹೆಗ್ಗಳಿಕೆಗೆ ಪಾತ್ರವಾಗುತ್ತಿರುವುದು ಪ್ರಶಂಸನೀಯ ಎಂದು ನಿವೃತ್ತ ನ್ಯಾಯಾಧೀಶ ಹಾಗೂ ನಿವೃತ್ತ ಲೋಕಾಯುಕ್ತ ನ್ಯಾ ಸಂತೋಷ ಹೆಗ್ಡೆ ಹೇಳಿದರು. ಅವರು ಅಮಾಸೆಬೈಲು ಪೇಟೆ ವೃತ್ತದಲ್ಲಿ ಮಚ್ಚಟ್ಟು ಕೃಷ್ಣರಾಯ ಕೊಡ್ಗಿ ಸ್ಮರಣಾರ್ಥ ಅಮಾಸೆಬೈಲು ಚಾರೀಟೆಬಲ್ ಟ್ರಸ್ಟ್ ಅಧ್ಯಕ್ಷ ಎ.ಜಿ.ಕೊಡ್ಗಿ ಅವರು ರೂ. ಒಂದು ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಸೋಲಾರ್ ದೀಪವನ್ನು ಬುಧವಾರ ಲೋಕಾರ್ಪಣೆಗೊಳಿಸಿ, ನಂತರ ಸ್ಥಳೀಯ ಪ್ರೌಢ ಶಾಲೆ ಆವರಣದಲ್ಲಿ ಗ್ರಾಮದಲ್ಲಿ ಅನುಷ್ಠಾನಗೊಳ್ಳುತ್ತಿರುವ ವಿವಿಧ ಯೋಜನೆಗಳ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯಾ ನಂತರ ನಮ್ಮ ಹಿಂದಿನವರ ಚಿಂತನೆಗಳನ್ನು ಸಾಕಾಕಾರಗೊಳಿಸುವಲ್ಲಿ ಇಂದಿನ ರಾಜಕಾರಣಿಗಳಲ್ಲಿ ಸಂಪೂರ್ಣ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ಹೊಸ ಬಸ್ಸು ನಿಲ್ದಾಣದಲ್ಲಿ ತಡ ರಾತ್ರಿಯ ವೇಳೆಗೆ ಸುಮಾರು ನಲ್ವತ್ತು ವರ್ಷ ಪ್ರಾಯದ ಗಂಡಸಿನ ಅಪರಿಚಿತ ಶವವೊಂದು ಪತ್ತೆಯಾಗಿದೆ. ಧೋ ಎಂದು ಸುರಿಯುತ್ತರಿದ್ದ ಮಳೆಯ ನಡುವೆ ಹೊಸ ಬಸ್ಸು ನಿಲ್ದಾಣದಲ್ಲಿ ಮರದ ಕೆಳಗೆ ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಳೆ ಸುರಿಯುತಲಿದ್ದರೂ ಆತ ಎದ್ದೇಳದಾಗ ಬಸ್ಸು ನಿಲ್ದಾಣದಲ್ಲಿದ್ದ ತಲ್ಲೂರು ಗ್ರಾ.ಪಂ. ಸದಸ್ಯ ಸುನೀಲ್ ತಲ್ಲೂರು ಹಾಗೂ ಡಾ| ರಾಜ್ ಬಳಗದ ಅಧ್ಯಕ್ಷ ರತ್ನಾಕರ ಪೂಜಾರಿ ಕುಂದಾಪುರ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಅಪರಿಚಿತ ವ್ಯಕ್ತಿಯು ಮದ್ಯಾಹ್ನ ಸುಮಾರಿಗೆ ಹೊಸ ಬಸ್ ನಿಲ್ದಾಣಕ್ಕೆ ಬಂದಿದ್ದು, ನನಗೆ ಹುಷಾರಿಲ್ಲ ಆಸ್ಪತ್ರೆಗೆ ಸೇರಿಸಿ ಎಂದು ಕೆಲವರಲ್ಲಿ ಅಲವತ್ತು ಕೊಂಡಿದ್ದು ಯಾರೋಬ್ಬರೂ ಆಸ್ಪತ್ರೆಗೆ ಸೇರಿಸಿರಲಿಲ್ಲ ಎನ್ನಲಾಗಿದೆ. ಬಳಿಕ ಬಸ್ಸು ನಿಲ್ದಾಣ ಮದ್ಯೆ ಮರದ ತಂಪು ನೆರಳಿನ ಆಶ್ರಯ ಪಡೆದ ಆತ ತಡ ರಾತ್ರಿ ವೇಳೆಗೆ ಸುರಿಯುತ್ತಿದ್ದ ಮಳೆಯಲ್ಲಿ ಗಮನಿಸಿದಾಗ ಶವವಾಗಿ ಹೋಗಿದ್ದಾನೆ. /ಕುಂದಾಪ್ರ ಡಾಟ್ ಕಾಂ ಸುದ್ದಿ/

Read More

ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ತನ್ನ ತೋಟಕ್ಕೆ ಹಸುವೊಂದು ಮೇಯಲು ಬಂತೆಂಬ ಕಾರಣಕ್ಕೆ ಅದನ್ನು ಸಜೀವವಾಗಿ ಹೊಂಡದಲ್ಲಿ ಹೂತು ಕೊಂದುಹಾಕಿದ ಅಮಾನುಷ ಕೃತ್ಯವೊಂದು ತಾಲೂಕಿನ ಹಕ್ಲಾಡಿ ಗ್ರಾಪಂ ವ್ಯಾಪ್ತಿಯ ಕುಂದಬಾರಂದಾಡಿ ಎಂಬಲ್ಲಿ ನಡೆದಿದೆ. ಪ್ರಕರಣದಲ್ಲಿ ಭಾಗಿಯಾದ ಗಂಗಪ್ಪ ಎಂಬುವವನನ್ನು ಬಂಧಿಸಲಾಗಿದ್ದು, ಇತರರು ತಲೆ ಮರೆಸಿಕೊಂಡಿದ್ದಾರೆ. ಕುಂದಾಬಾರಂದಾಡಿಯ ನೆಂಚಾರು ಮನೆ ಲಕ್ಷ್ಮೀ ಪೂಜಾರ್ತಿ ಎಂಬುವವರಿಗೆ ಸೇರಿದ ದನವನ್ನು ಮೇಯಲು ಹೊರಕ್ಕೆ ಬಿಟ್ಟಾಗ ಸಮೀಪದ ಪರಮೇಶ್ವರ ಗಾಣಿಗ ಎಂಬುವವರ ತೋಟಕ್ಕೆ ನುಗ್ಗುತ್ತಿತ್ತು ಎನ್ನಲಾಗಿದೆ. ಆದರೆ ನಿನ್ನೆ ಸಂಜೆ ದನವು ಮನೆಗೆ ಹಿಂತಿರುಗದ್ದನ್ನು ನೋಡಿ ಲಕ್ಷ್ಮೀ ಪೂಜಾರ್ತಿ ಅವರ ತೋಟದಲ್ಲಿಯೇ ಹುಡುಕಾಟ ನಡೆಸಿದ್ದಾರೆ. ಕೊನೆಗೆ ಪರಮೇಶ್ವರ ಅವರ ಜಾಗದಲ್ಲಿದ್ದ ಕೊಟ್ಟಿಗೆ ಸಮೀಪ ಮಣ್ಣು ಮುಚ್ಚಿದ ಹಾಗಿರುವುದನ್ನು ನೋಡಿ, ಗುದ್ದಲಿಯಿಂದ ಅಗೆದಾಗ ಹಸುವಿನ ಮುಖ ಕಂಡುಬಂದಿತ್ತು. ಆಕೆ ಕೂಗಿಕೊಳ್ಳುತ್ತಿದ್ದಂತೆ ಆಸುಪಾಸಿನ ಜನ ಒಟ್ಟುಸೇರಿ ಮಣ್ಣು ತೆಗೆದು ದನವನ್ನು ಮೇಲಕ್ಕೆತ್ತಿದ್ದಾರೆ. ಅಲ್ಲಿಯವರೆಗೂ ಜೀವಂತವಾಗಿದ್ದ ಹಸು, ಸ್ವಲ್ಪ ಹೊತ್ತಿನ ಬಳಿಕ ಅಸುನೀಗಿದೆ. ತೋಟದ ಮಾಲಿಕನ ಈ ಅಮಾನವೀಯ ಕೃತ್ಯದ…

Read More

ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ವಿವೇಕಾನಂದರ ತತ್ವಾದರ್ಶಗಳನ್ನು ಪ್ರಚುರ ಪಡಿಸುವ ಮತ್ತು ಯುವಜನರಲ್ಲಿ ಜಾಗೃತಿ ಮೂಡಿಸಿ ನವ ಚೈತನ್ಯ ತುಂಬುವ ಉದ್ದೇಶದೊಂದಿಗೆ ರಾಜ್ಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿರುವ ಯುವ ಜಾಗೃತಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷರಾಗಿ ಯುವ ಮುಂದಾಳು ಚರಣ್ ಬೈಂದೂರು ಆಯ್ಕೆಗೊಂಡಿದ್ದಾರೆ. ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿರುವ ಚರಣ್ ಅವರು ಬಿಡುವಿನ ವೇಳೆಯಲ್ಲಿ ಬೈಂದೂರು ಭಾಗದ ಸಂಘ ಸಂಸ್ಥೆ, ಸಂಘಟನಾ ಕಾರ್ಯಗಳಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿದ್ದರು. ಯುವ ಜಾಗೃತಾ ವೇದಿಕೆಯ ರಾಜ್ಯಾಧ್ಯಕ್ಷ ಸಂದೀಪ್ ಪಾಟೀಲ್ ಚರಣ್ ಅವರನ್ನು ಆಯ್ಕೆ ಮಾಡಿದ್ದಾರೆ. ಬೈಂದೂರು ಬಿಜೆಪಿ ಕ್ಷೇತ್ರಾಧ್ಯಕ್ಷ ಸುಕುಮಾರ ಶೆಟ್ಟಿ ಚರಣ್ ಬೈಂದೂರು ಅವರನ್ನು ಅಭಿನಂದಿಸಿದ್ದಾರೆ. / ಕುಂದಾಪ್ರ ಡಾಟ್ ಕಾಂ ಸುದ್ದಿ/

Read More