ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜಿನ ಹಳೆವಿದ್ಯಾರ್ಥಿ ಸಂಘದ ವಾರ್ಷಿಕ ಮಹಾಸಭೆ ಕಾಲೇಜಿನ ಎ.ವಿ. ಹಾಲ್‌ನಲ್ಲಿ ನಡೆಯಿತು. ಮಹಾಸಭೆಯಲ್ಲಿ ಸಂಘದ ಕಾರ್ಯದರ್ಶಿ ರಂಜಿತ್ ಕುಮಾರ್ ಶೆಟ್ಟಿ ವಕ್ವಾಡಿ ವರದಿ ವಾಚಿಸಿದರು. ಕೋಶಾಧಿಕಾರಿ ಕೆ. ಶಾಂತರಾಮ್ ಆಯ ವ್ಯಯ ಮಂಡಿಸಿದರು. ಅಧ್ಯಕ್ಷ ಕೆ. ಕಾರ್ತಿಕೇಯ ಮಧ್ಯಸ್ಥ ಎರಡು ವರ್ಷಗಳ ಕಾಲ ಹಳೆ ವಿದ್ಯಾರ್ಥಿ ಸಂಘವನ್ನು ಉತ್ತಮವಾಗಿ ಮುನ್ನಡೆಸಲು ಸಹಕರಿಸಿದ ಸದಸ್ಯರಿಗೆ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು ಇದೇ ಸಂದರ್ಭದಲ್ಲಿ ಮುಂದಿನ ಎರಡು ವರ್ಷ ಅವಧಿಗೆ ನೂತನ ಅಧ್ಯಕ್ಷ ಮತ್ತು ಕಾರ್ಯದರ್ಶಿಗಳ ಆಯ್ಕೆ ಪ್ರಕ್ರಿಯೆಗೆ ಚುನಾವಣಾಧಿಕಾರಿಯಾಗಿ ಹಿರಿಯ ಸದಸ್ಯ ಕೃಷ್ಣಾನಂದ ಚಾತ್ರ ಅವರನ್ನು ನೇಮಿಸಿದ್ದು, ಅಧ್ಯಕ್ಷ ಮತ್ತು ಕಾರ್ಯದರ್ಶಿಯನ್ನು ಮುಂದಿನ ಎರಡು ವರ್ಷಗಳ ಅವಧಿಗೆ ಪುನರಾಯ್ಕೆ ಮಾಡುವ ಕುರಿತು ಸಭೆ ನಿರ್ಧರಿಸಿತು. ಸಂಘದ ಪೂರ್ವಾಧ್ಯಕ್ಷ ರಾಜೀವ ಕೋಟ್ಯಾನ್ ಅವರು ಕೆ. ಕಾರ್ತಿಕೇಯ ಮಧ್ಯಸ್ಥರನ್ನು ಅಧ್ಯಕ್ಷ ಹಾಗೂ ರಂಜಿತ್ ಕುಮಾರ್ ಶೆಟ್ಟಿಯವರನ್ನು ಕಾರ್ಯದರ್ಶಿಯಾಗಿ ಸೂಚಿಸಿದರು. ಸಂಘದ ಉಪಾಧ್ಯಕ್ಷ ಸಂದೀಪ ಪೂಜಾರಿ ಅನುಮೋದಿಸಿದರು. ಮುಂಬರುವ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘವು ಅಭಿವೃದ್ಧಿ ಪಥದಲ್ಲಿ ಮುನ್ನೆಡೆಯುತ್ತಿದ್ದು, ಶೀಘ್ರದಲ್ಲಿ ಕುಂದಾಪುರದಲ್ಲಿ ಕೇಂದ್ರ ಕಛೇರಿಯನ್ನು ತೆರೆಯಲಿದ್ದು, ನಾವುಂದ ಹಾಗೂ ಬೈಂದೂರಿನಲ್ಲಿ ಶಾಖಾ ಕಛೇರಿಗಳಾಗಿ ಕಾರ್ಯನಿರ್ವಹಿಸಲಿವೆ. ಸಂಘದ ಅಧೀನದಲ್ಲಿ ಸ್ವಸಹಾಯ ಗುಂಪುಗಳ ರಚನೆ ಮಾಡಿ ಪ್ರಧಾನ ಕಛೇರಿ ಸ್ಥಳಾಂತರದಂದು ಉದ್ಘಾಟಿಸಲಾಗುವುದು. ಸದಸ್ಯರು ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಸ್ವಸಹಾಯ ಗುಂಪುಗಳ ರಚನೆ ಮಾಡುವುದರ ಮೂಲಕ ಸ್ವಾವಲಂಬನೆಗೆ ಒತ್ತು ನೀಡಬೇಕಾಗಿದೆ ಎಂದು ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ನಿ., ನಾವುಂದ ಇದರ ಅಧ್ಯಕ್ಷರಾದ ರಮೇಶ ಗಾಣಿಗ ಕೊಲ್ಲೂರು ಹೇಳಿದರು. ನಾವುಂದದ ಮಹಾಗಣಪತಿ ಮಾಂಗಲ್ಯ ಮಂಟಪದಲ್ಲಿ ನಡೆದ ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘ ೯ನೇ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಘವು ವರದಿ ವರ್ಷದಲ್ಲಿ ೩೬೩೩ ಸದಸ್ಯರನ್ನು ಹೊಂದಿ, ಒಟ್ಟು ರೂ. ೪೯,೫೦,೮೮೦ ಪಾಲುಹಣವನ್ನು ಹೊಂದಿದೆ.ವಿವಿಧ ಠೇವಣಿಗಳಿಂದ ಒಟ್ಟು ರೂ.೪,೭೭,೨೮,೪೨೦.೩೦ ಠೇವಣಾತಿ ಹೊಂದಿದ್ದು, ಹಿಂದಿನ ಸಾಲಿಗೆ ಹೋಲಿಸಿದರೆ ಠೇವಣಿ ಸಂಗ್ರಹಣೆಯಲ್ಲಿ ರೂ.೧,೧೯,೨೯,೭೧೨ರಷ್ಟು ಜಾಸ್ತಿಯಾಗಿದ್ದು, ಶೇ.೩೩.೩೨ರಷ್ಟು ವೃದ್ದಿಯಾಗಿದೆ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೋಟ: ಇಂದು ನಮ್ಮ ದೇಶದಲ್ಲಿ ಪರಿಸರದಲ್ಲಿರುವ ಕಸ ಕಲ್ಮಶಗಳನ್ನು ಸ್ವಚ್ಛಗೊಳಿಸುವ ಯೋಜನೆ ಜಾರಿಯಲ್ಲಿದೆ. ಹಾಗೆಯೇ ಇಂದು ನಮ್ಮ ಮನ ಮನಸ್ಸಿನಲ್ಲಿರುವ ಅಶುದ್ಧವನ್ನು ಹೋಗಲಾಡಿಸುವುದು ಅಗತ್ಯವಾಗಿದೆ. ಸಾಹಿತ್ಯ ಎಂದರೆ ಒಂದು ಅಕ್ಷರ, ಒಂದು ಪದ, ಒಂದು ವಾಕ್ಯ ಗುಚ್ಛ, ಒಂದು ಪುಸ್ತಕವಲ್ಲ, ಸಾಹಿತ್ಯ ಎಂದರೆ ಅದು ಒಂದು ಶಕ್ತಿ. ಸಾಹಿತ್ಯದ ಮಾಧ್ಯಮವಾದ ಒಂದು ಪುಸ್ತಕದಿಂದ ಒಂದು ಉತ್ತಮ ಮಾನವನ ನಿರ್ಮಾಣ ಸಾಧ್ಯವಿದೆ ಎಂದು ಮೈಸೂರು ಜಯಜಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿನಿ ಕುಮಾರಿ ತೃಪ್ತಿ ಕೆ.ಆರ್. ಹೇಳಿದರು. ಅವರು ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಮಹಾತ್ಮ ಗಾಂಧಿ ಸಭಾಭವನದಲ್ಲಿ ಉಡುಪಿ ಕಾಸರಗೋಡು ಜಿಲ್ಲೆ ಸಹಿತ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ (ರಿ.) ಮಂಗಳೂರು ಸಹಯೋಗದೊಂದಿಗೆ ಕೋಟ ವಿವೇಕ ವಿದ್ಯಾ ಸಂಸ್ಥೆಗಳು, ಡಾ.ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆ(ರಿ.) ಸಾಲಿಗ್ರಾಮ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ೨೩ನೇ ವರ್ಷದ ಮಕ್ಕಳ ಸಾಹಿತ್ಯಿಕ, ಸಾಂಸ್ಕೃತಿಕ ಸಮ್ಮೇಳನ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರತಿಯೊಂದು ಮಗು ಹುಟ್ಟಿನಿಂದಲೇ ಮಾನವ ಹಕ್ಕುಗಳನ್ನು ಪಡೆದಿರುತ್ತದೆ. ಮಾನವ ಹಕ್ಕುಗಳಿಗೆ ಯಾವುದೇ ಜಾತಿ, ಧರ್ಮ, ಲಿಂಗ, ಮತ ಬೇಧಯಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಈ ಹಕ್ಕು ಅನ್ವಯಿಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಮಾನವ ಹಕ್ಕುಗಳ ಕುರಿತು ಯೋಚಿಸಬೇಕಾದದ್ದು ಇಂದಿನ ತುರ್ತು ಎಂದು ಕಾಳಾವಾರ ವರದರಾಜ ಎಮ್. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೋಟೆಶ್ವರದ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ನಿತ್ಯಾನಂದ ಎನ್. ಹೇಳಿದರು. ಅವರು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಮಾನವ ಹಕ್ಕುಗಳ ಘಟಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಸಂಘದ ಸಂಯೋಜಕಿ ಶ್ರೀಮತಿ ಅನಿತಾ ಅಲೈಸ್ ಡಿ’ಸೋಜಾ ಸ್ವಾಗತಿಸಿದರು. ಗಣಕಯಂತ್ರ ವಿಭಾಗದ ಉಪನ್ಯಾಸಕಿ ಕು. ವಿಜಯಲಕ್ಷ್ಮೀ ವಂದಿಸಿದರು. ವಿದ್ಯಾರ್ಥಿ ಪ್ರತಿನಿಧಿ ಪ್ರಿಯಾ ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ದೀಪಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರ್ನಾಟಕದಲ್ಲಿ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಮಹಿಳಾ ಹಿತಾಸಕ್ತಿ ಯೋಜನೆಗಳು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನೆನೆಗುದಿಗೆ ಸರಿದಿದ್ದು, ಅದನ್ನು ಮತ್ತೆ ಚಾಲನೆಗೆ ತರಲು ಬಿಜೆಪಿ ಸರಕಾರ ಬಿಜೆಪಿ ಸರಕಾರದಿಂದ ಮಾತ್ರ ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಹಿಳೆಯರು ರಾಜಕೀಯದಲ್ಲಿ ಕ್ರಿಯಾಶೀಲತೆಯಿಂದ ಕೆಲಸ ಮಾಡುವ ಜವಾಬ್ದಾರಿ ಇದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಕುಂದಾಪುರ ಕ್ಷೇತ್ರ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳ ಪದಗ್ರಹಣವನ್ನು ಕುಂದಾಪುರ ಬಿಜೆಪಿ ಕಚೇರಿಯಲ್ಲಿ ನೆರವೇರಿಸಿ ಮಾತನಾಡಿ, ಬಿಜೆಪಿ ಸರಕಾರ ರಾಜ್ಯದಲ್ಲಿ ಸ್ತ್ರೀ ಬಲವರ್ಧನೆಗಾಗಿ ಭಾಗ್ಯಲಕ್ಷ್ಮೀ ಸಂಧ್ಯಾ ಸುರಕ್ಷಾ ಮುಂತಾದ ಯೋಜನೆಗಳನ್ನು ಜಾರಿಗೆ ತಂದಿದ್ದು, ಕಾಂಗ್ರೆಸ್ ಸರಕಾರ ಯೋಜನೆ ಅರ್ಧಕ್ಕೆ ನಿಲ್ಲಿಸಿದೆ. ಯೋಜನೆಗಳ ಪುನರಾರಂಭಿಸಲು ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಬೇಕು ಎಂದರು. ಕೋಟೇಶ್ವರ ಗ್ರಾಪಂ ಅಧ್ಯಕ್ಷೆ ಜಾನಕಿ ಬಿಲ್ಲವ ಬಿಜೆಪಿ ಕುಂದಾಪುರ ಕ್ಷೇತ್ರದ ಮಹಿಳಾ ಮೋರ್ಚಾದ ಅಧ್ಯಕ್ಷರಾಗಿ ನಾಮನಿರ್ದೇಶನಗೊಂಡಿದ್ದು, ಸಂಸದೆ ಶೋಭಾ ಕರಂದ್ಲಾಜೆ ಪದಗ್ರಹಣ ನೆರೆವೇರಿಸಿದರು. ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನಯನಾ…
ಶ್ರೇಯಾಂಕ್ ಎಸ್. ರಾನಡೆ | ಕುಂದಾಪ್ರ ಡಾಟ್ ಕಾಂ ಲೇಖನ ನಿಮಗೆ ಮಂಗಳೂರು ನರಕವಾದರೆ ನೀವು ಇಸ್ಲಾಮಾಬಾದ್‍ನಲ್ಲಿಯೇ ಸುಖವಾಗಿರಿ. ಪಾಕಿಸ್ತಾನಕ್ಕೆ ”ಅದೃಷ್ಟದ ನಕ್ಷತ್ರ”ವಾದರೆ ಸಂತೋಷ. ಆದರೆ ಭಾರತದ ಪಾಲಿಗೆ ದುರಾದೃಷ್ಟವಾಗದಿರಿ. ಎರಡು ದೇಶಗಳ ನಡುವೆ ಸರಕಾರಗಳ ಮಟ್ಟದಲ್ಲಿ ನೇರವಾದ ಮಾತುಕತೆ, ವ್ಯವಹಾರ ಫಲಿಸದೇ ಇದ್ದಾಗ ಎರಡೂ ದೇಶಗಳ ಸರಕಾರೇತರ ವ್ಯಕ್ತಿಗಳು, ಸಂಘ ಸಂಸ್ಥೆಗಳು ಪರಸ್ಪರರ ನಡುವಿನ ಸಂಬಂಧವನ್ನು ಉತ್ತಮಗೊಳಿಸಿ, ಆ ಮೂಲಕ ದೇಶದೊಳಗೆ ಗುಣಾತ್ಮಕ ವಾತಾವರಣವನ್ನು ನಿರ್ಮಿಸಿ ಕುಸಿದ ಮಾತುಕತೆ-ಸಂಬಂಧವನ್ನು ಪುನಚ್ಛೇತನಗೊಳಿಸಲು ಸರಕಾರಗಳ ಮೇಲೆ ಒತ್ತಡ ಹೇರುವ ಮಾರ್ಗವೇ ಟ್ರಾಕ್ 2, ಟ್ರಾಕ್ 3 ರಾಜತಾಂತ್ರಿಕತೆ. ಎರಡು ದೇಶಗಳ ಪ್ರಜೆಗಳ ನಡುವಿನ, ಸರ್ಕಾರೇತರ ಗುಂಪುಗಳು ಸಮಾನ ಸಂಗತಿಗಳ ಕುರಿತು ಪರಸ್ಪರ ಸಂಬಂಧವನ್ನು ಉತ್ತಮಗೊಳಿಸಲು ನಡೆಸುವ ಇಂತಹ ಮಾರ್ಗಗಳು ಒತ್ತಡ ತಂತ್ರವಾಗಿ, ಕೆಲವೊಮ್ಮೆ ಸ್ವಹಿತಕ್ಕಾಗಿ ಬಳಕೆಯಾಗುವ ಅಪಾಯವಿದೆಯಾದರೂ ಇಂತಹ ಸಂಪರ್ಕ ಮಾರ್ಗಗಳು ದೇಶ,ದೇಶಗಳ ನಡುವಿನ ಬಾಂಧವ್ಯ ವೃದ್ಧಿಸುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಯಾರೂ ಕೇಳದಿದ್ದರೂ ಸ್ವಯಂಘೋಷಿತವಾಗಿ ಎಡಬಿಡಂಗಿತನ ಪ್ರದರ್ಶಿಸುವುದು ಶುದ್ಧ ಅಧಿಕಪ್ರಸಂಗಿತನ. ಇಂತಹ ಪೆದ್ದು…
ಕುಂದಾಪ್ರ ಡಾಟ್ ಕಾಂ ಸುದ್ದಿ. ಬೈಂದೂರು: ತಮ್ಮ ಕುಟುಂಬಕ್ಕಿಂತ ಸಮಾಜದ ಹಿತವನ್ನೇ ಅನುಗಾಲವೂ ಬಯಸಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ ಜಿಲ್ಲೆಯ ಜನತೆಯ ಆಗು-ಹೋಗುಗಳಿಗೆ ಸ್ಪಂದಿಸುತ್ತಾ ಅವರಿಗೆ ಸರಿಯಾದ ರೀತಿ ಮಾರ್ಗದರ್ಶನ ನೀಡುತ್ತಾ ಕೇವಲ ಅಲ್ಪಕಾಲ ಬಾಳಿದ ಸಂಜೀವರಾಯರು ಒರ್ವ ವ್ಯಕ್ತಿಯಾಗಿರದೇ ತಮ್ಮ ವ್ಯಕ್ತಿತ್ವದ ಮೂಲಕ ಒಂದು ಅದ್ಭುತ ಶಕ್ತಿಯಾಗಿದ್ದರು ಎಂದು ಮಾಜಿ ಶಾಸಕ ಕೆ. ಅಪ್ಪಣ್ಣ ಹೆಗ್ಡೆ ಹೇಳಿದರು. ಖಂಬದಕೋಣೆ ಅಭಿವೃದ್ಧಿ ಹರಿಕಾರ ಆರ್.ಕೆ.ಸಂಜೀವ ರಾವ್ ಅವರ 100ನೇ ಜನ್ಮದಿನ ಪ್ರಯುಕ್ತ ಜನ್ಮಶತಾಬ್ದಿ ಆಚರಣಾ ಸಮಿತಿ, ಗ್ರಾಪಂ ಖಂಬದಕೋಣೆ, ಸಂಜೀವ ರಾವ್ ಸ್ಮಾರಕ ದತ್ತಿನಿಧಿ, ಸಹಿಪ್ರಾ ಶಾಲೆ ಖಂಬದಕೋಣೆ ಇವರ ಜಂಟಿ ಆಶ್ರಯದಲ್ಲಿ ಆರ್‌ಕೆಎಸ್ ಜನ್ಮಶತಾಬ್ದಿಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ರಾಯರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು. ಈ ಭಾಗದ ಕೃಷಿ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಮುಂಚೂಣಿಯಾಗಿ ನಿಂತು ಅಭಿವೃದ್ಧಿಗೊಳಿಸಿದವರು. ರಾಜಕಿಯೇತರವಾಗಿ ಜನಸೇವೆಗೆ ಇತರರನ್ನು ಉತ್ತೇಜಿಸುತ್ತದ್ದ ಆರ್‌ಕೆಎಸ್, ಗ್ರಾಪಂ ಅಧ್ಯಕ್ಷ ತಾಪಂ ಸದಸ್ಯರಾಗಿಯೂ ಜನ ಗುರುತಿಸುವಂತಹ ಉತ್ತಮ ಕೆಲಸ ಮಾಡಿದವರು ಎಂದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಪ್ರಜಾಪ್ರಭುತ್ವ ಬೇರೆ ಚರ್ಚೆಯಲ್ಲಿದ್ದು, ಆಶಯಗಳ ಪರಿವರ್ತನೆ ಆಗಬೇಕಿದೆ. ಮರಕ್ಕೆ ಬೇರು ಹೇಗೆ ಮುಖ್ಯವೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರೇ ಪ್ರಜಾಪ್ರಭುತ್ವದ ಬೇರುಗಳು ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಬಣ್ಣಿಸಿದ್ದಾರೆ. ಕಲಾ ಕ್ಷೇತ್ರ ಕುಂದಾಪುರ ಆಶ್ರಯದಲ್ಲಿ ಕುಂದಾಪುರ ಪದವಿಪೂರ್ವ ಕಾಲೇಜಿನ ಶ್ರೀ ಲಕ್ಷ್ಮೀನರಸಿಂಹ ಕಲಾ ಮಂದಿರದಲ್ಲಿ ನಡೆದ ವಿಚಾರ ಸಂಕಿರಣ, ಸಂವಾದ ಹಾಗೂ ಚರ್ಚಾಗೋಷ್ಠಿ ಉದ್ಘಾಟಿಸಿ ಮಾತನಾಡಿ ಶಾಸಕಾಂಗ ಸಭೆಯಲ್ಲಿ ಎಲ್ಲಾ ವಿಷಯಗಳ ಮೇಲೆ ಚರ್ಚೆ ನಡೆದು, ಚಿಂಥನ, ಮಂಥನ ಮೂಲಕ ಮರ್ಧಿಸಿದಾಗ ಮಾತ್ರ ಒಳ್ಳೆಯ ವಿಷಯ ಹೊರ ಬರಲು ಸಾಧ್ಯ ಎಂದು ಹೇಳಿದರು. ಮಾಜಿ ವಿಧಾನ ಪರಿಷತ್ ಸಭಾಪತಿ ಸುದರ್ಶನ್ ಪ್ರಜಾಪ್ರಭುತ್ವದಲ್ಲಿ ಆಡಳಿತ ಪಕ್ಷ ವಿಷಯವಾಗಿ ಮಾತನಾಡಿ ಕರಾವಳಿ ಜನ ಎಲ್ಲರಿಗೂ ಸ್ಪೂರ್ತಿಯಾಗಿದ್ದು, ಬ್ಯಾಂಕಿಂಗ್ ಕ್ಷೇತ್ರ ಮೂಲಕ ಗಮನ ಸೆಳೆದಿದೆ. ಸಾಹಿತ್ಯ, ಧಾರ್ಮಿಕ ಹಾಗೂ ಯಕ್ಷಗಾನ ಮೂಲಕ ಎಲ್ಲಾ ವಿಭಾಗದಲ್ಲಿ ಗಮನ ಸೆಳೆದು ಸಾಕಷ್ಟು ಬೆಳೆಯಲು ಅಕಾಶವಿದ್ದರೂ, ಕೋಮು ಸಂಘರ್ಷ, ಭಿನ್ನಾಭಿಪ್ರಾಯ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಯುನೈಟೆಡ್ ಕಿಂಗ್‌ಡಂನ ಭಾರತೀಯ ದೂತಾವಾಸವು ಲಂಡನ್‌ನ ವಿಶಾಲ ಜಿಮ್‌ಖಾನಾ ಬಯಲಿನಲ್ಲಿ ಆಯೋಜಿಸಿದ್ದ ಭಾರತದ 70ನೆಯ ಸ್ವಾತಂತ್ರ್ಯೋತ್ಸವದಲ್ಲಿ ಕುಂದಾಪುರದ ಇಬ್ಬರು ಅನಿವಾಸಿ ಕನ್ನಡಿಗರು ಪ್ರದರ್ಶಿಸಿದ ಯಕ್ಷಗಾನದ ತುಣುಕು ನೆರೆದಿದ್ದ 10 ಸಾವಿರ ಭಾರತೀಯರ ಮೆಚ್ಚುಗೆ ಗಳಿಸಿತು. ಅವರಿಗೆ ನೀಡಲಾಗಿದ್ದ ಹದಿನೈದು ನಿಮಿಷಗಳ ಅವಕಾಶದಲ್ಲಿ ಕಂಸವಧೆಯ ನೃತ್ಯ ರೂಪಕವನ್ನು ಅವರು ಪ್ರಸ್ತುತಪಡಿಸಿದ್ದರು. ಇದರಲ್ಲಿ ಯು.ಕೆಯ ಡಂಕ್ಯಾಸ್ಟರ್‌ನಲ್ಲಿ ವೈದ್ಯ ವೃತ್ತಿ ನಡೆಸುತ್ತಿರುವ ಕುಂದಾಪುರದ ಡಾ. ಗುರುಪ್ರಸಾದ ಪಟ್ವಾಲ್ ಕಂಸನ ಪಾತ್ರ ನಿರ್ವಹಿಸಿದರೆ, ಬ್ರಿಸ್ಟಲ್‌ನ ಏರ್‌ಬಸ್ ವಿಮಾನ ಕಂಪನಿಯಲ್ಲಿ ಏರೋಸ್ಪೇಸ್ ಇಂಜಿನಿಯರ್ ಆಗಿ ದುಡಿಯುತ್ತಿರುವ ಯೋಗೀಂದ್ರ ಮರವಂತೆ ಕೃಷ್ಣನ ಪಾತ್ರ ಮಾಡಿದ್ದರು. ಎರಡೂ ಪಾತ್ರಗಳ ಪ್ರಸಾಧನದ ವರ್ಣವಿನ್ಯಾಸ, ಲಯಬದ್ಧ ನೃತ್ಯ, ಸನ್ನಿವೇಶವನ್ನು ಬಿಂಬಿಸುವಂತಿದ್ದ ಭಾವಾಭಿನಯ ವಿವಿಧೆಡೆಯ ಭಾರತೀಯ ಮೂಲದ ಪ್ರೇಕ್ಷಕರನ್ನು ಮುದಗೊಳಿಸಿದುವು. ಪ್ರದರ್ಶನ ಮುಗಿಯುತ್ತಿದ್ದಂತೆ ಉಭಯ ಹವ್ಯಾಸಿ ಕಲಾವಿದರು ಪ್ರೇಕ್ಷರ ಮತ್ತು ಮಾಧ್ಯಮದ ಆಕರ್ಷಣೆಯ ಕೇಂದ್ರವಾದರು. ಹಲವರು ಅವರ ಜತೆ ನಿಂತು ಸೆಲ್ಫೀ ತೆಗೆದುಕೊಂಡರೆ, ಮಾಧ್ಯಮದವರು ಅವರನ್ನು ಸಂದರ್ಶಿಸಿದರು. ಕ್ರಮವಾಗಿ ಕೋಟದ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾರತಕ್ಕೆ ಅವಿಚ್ಛಿನ್ನವಾದ ಸಾಂಸ್ಕೃತಿಕ ಪರಂಪರೆಯಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಜೀವನ ಶೈಲಿ, ಕೊಳ್ಳುಬಾಕ ಸಂಸ್ಕೃತಿ, ಕೈಗಾರೀಕರಣ, ಪರಿಸರ ಮಾಲಿನ್ಯಕ್ಕೆ ಮುಖ್ಯ ಕಾರಣವಾಗುತ್ತಿದೆ ಎಂದು ಕುಂದಾಪುರ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಹೇಳಿದರು. ಇದೇ ಸಂದರ್ಭದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆ, ತ್ಯಾಜ್ಯ ನಿರ್ವಹಣೆ, ಸ್ವಚ್ಛ ಭಾರತ ಯೋಜನೆ, ಪೌರ ಕಾರ್ಮಿಕರ ಸಮಸ್ಯೆ ಮತ್ತು ಸವಾಲುಗಳು, ದೃಶ್ಯ ಮಾಲಿನ್ಯ ಈ ವಿಷಯದ ಕುರಿತು ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದರು. ತ್ಯಾಜ್ಯ ವಿಲೇವಾರಿ ಮಾಡಲು ನಾಗರಿಕರ ಸಹಕಾರ ಅನಿವಾರ್ಯ ಮತ್ತು ಸ್ವಚ್ಛ ಕುಂದಾಪುರಕ್ಕೆ ಯುವ ಜನತೆಯ ಪಾತ್ರ ಬಹುಮುಖ್ಯ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಎನವೈರ‍್ನಮೆಂಟ್ ಎಂಜಿನಿಯರ್ ಮದನ್ ನಾಯ್ಡು, ಪ್ರಭಾರ ಪ್ರಾಂಶುಪಾಲ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು. ಎನ್.ಎಸ್.ಎಸ್. ಯೋಜನಾಧಿಕಾ ರಕ್ಷಿತ್ ರಾವ್ ಗುಜ್ಜಾಡಿ ಸ್ವಾಗತಿಸಿದರು, ಸಹ ಯೋಜನಾಧಿಕಾರಿ ಕು. ಪ್ರೀತಿ ಹೆಗ್ಡೆ ವಂದಿಸಿದರು. ವಿದ್ಯಾರ್ಥಿನಿ ಪುಷ್ಪಲತಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ…
