ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಉಡುಪಿ ಜಿಲ್ಲಾ ಮಟ್ಟದ ಪರಿಸರ ಮಿತ್ರ ಹಸಿರು ಶಾಲೆ ಪ್ರಶಸ್ತಿ ಎರಡನೇ ಬಾರಿಗೆ ಪಡೆದುಕೊಂಡಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾಡಳಿತ ಜಿಲ್ಲಾ ಕಾನೂನು ಸೇವೆಗಳ ಪ್ರಾದಿಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಜ್ಯ ವಿಜ್ಞಾನ ಪರಿಷತು ಉಡುಪಿ ಸಹಯೋಗದಲ್ಲಿ ಮಣಿಪಾಲ ರಜತಾದ್ರಿ ಜಿಲ್ಲಾದಿಕಾರಿ ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಪಂಚಾಯತ್ ಅದ್ಯಕ್ಷ ದಿನಕರ ಬಾಬು ಪ್ರಶಸ್ತಿ ಪ್ರಧಾನ ಮಾಡಿದರು. ಶಾಲಾ ಮುಖ್ಯ ಶಿಕ್ಷಕ ಸದಾನಂದ ನಾಯಕ, ಸಹಶಿಕ್ಷಕ ಪ್ರಭಾಕರ ಶೆಟ್ಟಿ , ಚಂದ್ರಶೇಖರ ಶೆಟ್ಟಿ ಹಾಗೂ ವಿದ್ಯಾರ್ಥಿ ವೃಂದದೊಂದಿಗೆ ಪ್ರಶಸ್ತಿ ಸ್ವೀಕರಿಸಿದರು .ಹಿರಿಯ ಸಿವಿಲ್ ನ್ಯಾಯಧೀಶರಾದ ಲತಾ, ಅಪರ ಜಿಲ್ಲಾದಿಕಾರಿ ಅನುರಾದ , ಹಿರಿಯ ಪರಿಸರ ಅಧಿಕಾರಿ ರಾಜಶೇಖರ ಪುರಾಣಿಕ , ಡಿ.ಡಿ.ಪಿ.ಐ. ದಿವಕರ ಶೆಟ್ಟಿ ಉಪಸ್ತಿತರಿದ್ದರು.
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮಕ್ಕಳ ದೈಹಿಕ ದೃಢತೆಯಲ್ಲಿ ಪೌಷ್ಠಿಕ ಆಹಾರ ಪ್ರಮುಖ ಪಾತ್ರವಹಿಸುತ್ತದೆ. ಆಧುನಿಕತೆಯ ಭರಾಟೆಯಲ್ಲಿ ನಾವು ಉಪಯೋಗಿಸುವ ಸಿದ್ಧ ಪಾನೀಯಗಳು ಹಾಗೂ ಆಹಾರ ಪದಾರ್ಥಗಳು ಮಕ್ಕಳ ಬೆಳವಣಿಗೆಗೆ ಮಾರಕ. ಹಾಗೆಯೇ ಎಳೆ ವಯಸ್ಸಿನ ಕಲಿಕೆಯಲ್ಲಿ ಮೊಂಟೆಸ್ಸೋರಿ ಶಿಕ್ಷಣವು ಹೆಚ್ಚು ಪರಿಣಾಮಕಾರಿಯಾಗಿದ್ದು, ಆರು ವರ್ಷ ತುಂಬಿದ ಮಗುವನ್ನು ಮಾತ್ರ ೧ನೇ ತರಗತಿಗೆ ದಾಖಲಿಸುವುದು ವೈಜ್ಞಾನಿಕವಾಗಿಯೂ ಸೂಕ್ತ ಎಂದು ಖ್ಯಾತ ಮಕ್ಕಳ ತಜ್ಞ ಡಾ. ಬಿ ರಾಜೇಂದ್ರ ಶೆಟ್ಟಿ ನುಡಿದರು. ಅವರು ಮಾತಾ ಮೊಂಟೆಸ್ಸೋರಿಯ 7ನೇ ವಾರ್ಷಿಕೋತ್ಸವದ ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿ ಪೋಷಕರನ್ನು ಉದ್ದೇಶಿಸಿ ಮಾತನಾಡಿದರು. ಕೋಣಿ ಗ್ರಾಮದ ಪಂಚಾಯತ್ನ ಅಧ್ಯಕ್ಷ ಸಂಜೀವ ಮೋಗವೀರ ಮಾತನಾಡುತ್ತಾ ಕಳೆದೇಳು ವರ್ಷಗಳಿಂದ ಈ ಸಂಸ್ಥೆ ಸುಂದರ ಪರಿಸರದೊಂದಿಗೆ ಶೈಕ್ಷಣಿಕ ಪರಿಕರಗಳೊಂದಿಗೆ ಶಿಕ್ಷಣ ನೀಡುತ್ತಾ ಕುಂದಾಪುರ ತಾಲೂಕಿನ ವಿವಿಧ ಕಡೆಗಳಿಂದಲೂ ಪುಟಾಣಿಗಳನ್ನು ಆಕರ್ಷಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ ಎಂದರು. ಪಂಚಾಯತ್ನ ಮಾಜಿ ಸದಸ್ಯ ಕೃಷ್ಣ ಪೂಜಾರಿ ಕಾರ್ಯಕ್ರಮಕ್ಕೆ ಶುಭಕೋರಿದರು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್ಚ್ಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕುಂದಾಪುರ ಶಾಖೆ ಆಶ್ರಯದಲ್ಲಿ ಕೋಟೇಶ್ವರ ಸಹನಾ ಕನ್ವೆಂಷನ್ ಸಮುಖ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಸಾಮರಸ್ಯ ಮತ್ತು ರಾಷ್ಟ್ರೀಯತೆ ವಿಚಾರ ಸಂಕಿರಣ ಬೆಂಗಳೂರು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ರಾಜ್ಯ ಸಂಘಟನಾ ಕಾರ್ಯದರ್ಶಿ ಸ್ವಾಮಿ ಮರುಳಾಪುರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಹೊಸ ದೃಷ್ಟಿಕೋನದಲ್ಲಿ ಅಸ್ಪೃಶ್ಯತೆ ನಿವಾರಣೆ, ಜಾತೀಯತೆ ಹಾಗೂ ಮೇಲ್ವರ್ಗ ಕೆಳವರ್ಗ ಎಂಬ ತಾರತಮ್ಯ ಹೋಗಲಾಡಿಸುವ ದೊಡ್ಡ ಜವಾಬ್ದಾರಿ ಯುವಕರ ಹೆಗಲ ಮೇಲಿದೆ. ಸಮಾನತೆಯಿಂದ ದೇಶ ಹಾಗೂ ಸಮಾಜ ಕಟ್ಟುವ ಕೆಲಸ ಆಗಬೇಕು ಎಂದು ಹೇಳಿದರು. ಭಾರತ ಯುದ್ದದಿಂದ ದೇಶಕಟ್ಟಿದ್ದಲ್ಲ ಎಂದ ಅವರು, ಜ್ಞಾನದಿಂದ ದೇಶಕಟ್ಟಿದ್ದು, ಜ್ಞಾನದ ಮೂಲಕ ವಿಶ್ವಮಾನ್ಯವಾಗಿದೆ. ಯುವಕರು ಮತ್ತು ವಿದ್ಯಾರ್ಥಿಗಳು ಸಮಾಜದ ಆಸ್ತಿಯಾಗಬೇಕು. ಅಂಬೇಡ್ಕರ್ ತತ್ವ ಸಿದ್ಧಾಂತದ ಮೂಲಕ ಅಸಮಾನತೆಯ ಕೊಂಡಿ ಕಳಚಿ ಹೊಸ ದಿಕ್ಕುದಿಶೆಯತ್ತ ದೇಶ ಕೊಂಡೊಯ್ಯ ಬೇಕು ಎಂದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಕೆರಾಡಿ ವರಸಿದ್ಧ ವಿನಾಯಕ ಪದವಿಪೂರ್ವ ಕಾಲೇಜ್…
ಕುಂದಾಪ್ರ ಡಾಟ್ ಕಾಂ ಸುದ್ದಿ ಕೋಟೇಶ್ವರ: ಬೀಜಾಡಿ ಗ್ರಾ.ಪಂ.ನ ವಿಶೇಷ ಗ್ರಾಮಸಭೆ ದೊಡ್ಡೋಣಿಯ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆಯಿತು. ಪಿಎಲ್ ಹಾಗೂ ಎಪಿಎಲ್ ಕಾರ್ಡುಗಳ ಅರ್ಜಿ ಸ್ವೀಕರಿಸಲಾಗಿದ್ದು ಈ ವರೆಗೆ ಸರ್ವೆ ನಡೆದಿಲ್ಲ ಎಂಬ ಬಗ್ಗೆ ಗ್ರಾ.ಪಂ. ಸದಸ್ಯ ರವೀಂದ್ರ ದೊಡ್ಮನೆ ಅವರು ಸಭೆಯ ಗಮನ ಸೆಳೆದಾಗ ನೂತನ ಪಿಡಿಒ ಅವರು ಆ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬೀಜಾಡಿ ನಿವಾಸಿ ಚಂದ್ರ ಹಾಗೂ ಶ್ರೀನಿಧಿ ಭಟ್ ಅವರು ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿ ಅವರನ್ನು ತರಾಟೆಗೆ ತೆಗೆದುಕೊಂಡು ಮಿತ್ರಸಂಗಮ ಸಂಘಟನೆ ಹಾಗೂ ಬೀಜಾಡಿ ಮೂಡು ಶಾಲೆಯ ಮುಖ್ಯ ಶಿಕ್ಷಕ ಪದ್ಮನಾಭ ಅಡಿಗ ಅವರ ನಡುವಿನ ದೂರಿನ ವಿಚಾರದ ಬಗ್ಗೆ ಕ್ರಮ ಕೈಗೊಳ್ಳದಿರುವುದರ ಬಗ್ಗೆ ಗಮನ ಸೆಳೆದಾಗ ನಡೆದ ಘಟನೆಯಲ್ಲಿನ ಪರ ವಿರೋಧ ಅಭಿಪ್ರಾಯವನ್ನು ಬದಿಗಿರಿಸಿ ಸೌಹಾರ್ದಯುತವಾಗಿ ಬಗೆಹರಿಸುವುದು ಸೂಕ್ತವೆಂದು ಸೀತಾರಾಮ ಶೆಟ್ಟಿ ಅವರು ಅಭಿಪ್ರಾಯಪಟ್ಟರು. ಈ ವಿಚಾರದ ಬಗ್ಗೆ ಅಶೋಕ ಪೂಜಾರಿ ಮಾತನಾಡಿ ಕಳೆದ 3…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಗಂಗೊಳ್ಳಿಯಿಂದ ಮೀನುಗಾರಿಕೆಗಾಗಿ ತೆರಳಿದ್ದ ಜಲದುರ್ಗಾ ಬೋಟ್ನ ಬಲೆಗೆ ಸುಮಾರು 170 ಕೆ.ಜಿ. ತೂಕದ ಮುರು ಮೀನು ಬಿದ್ದಿದೆ. ಸ್ಥಳೀಯವಾಗಿ ಗೊಬ್ಬರ ಮೀನು ಎಂದೂ ಕರೆಯಲಾಗುತ್ತದೆ. ಭಟ್ಕಳದ ಮಾರಾಟಗಾರರು ಇದನ್ನು ಖರೀದಿಸಿದ್ದು, ಕೆ.ಜಿ.ಗೆ 330 ರೂ.ನಂತೆ ಮಾರಾಟವಾಗಿದೆ ಎಂದು ತಿಳಿದುಬಂದಿದೆ. ಸಣ್ಣ ಗಾತ್ರದ ಮುರು ಮೀನು ಸಾಮಾನ್ಯವಾಗಿದ್ದು, ಇಷ್ಟು ದೊಡ್ಡ ಗಾತ್ರದ್ದು ಅಪರೂಪ ಎಂದು ಮೀನುಗಾರರು ತಿಳಿಸಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು, ಮಾ.20: ದಕ್ಷಿಣ ಭಾರತದ ಪ್ರಸಿದ್ದ ತೀರ್ಥಕ್ಷೇತ್ರಗಳಲ್ಲೊಂದಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ವಾರ್ಷಿಕ ಮನ್ಮಹಾರಥೋತ್ಸವ ಸೋಮವಾರ ಸಡಗರ ಸಂಭ್ರಮದಿಂದ ಜರುಗಿತು. ಕ್ಷೇತ್ರದ ಅಧಿದೇವತೆಯಾದ ಶ್ರೀ ಮೂಕಾಂಬಿಕೆಯ ವಾರ್ಷಿಕ ಜಾತ್ರಾ ಮಹೋತ್ಸವಕ್ಕೆ ಮಾ.13ರಂದು ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಗಿತ್ತು. ರಥೋತ್ಸವದ ಪ್ರಯುಕ್ತ ಊರಿನ ಅಂಗಡಿ ಮುಂಗಟ್ಟು, ಮನೆ, ಬೀದಿಗಳನ್ನು ವಿಶೇಷವಾದ ವಿದ್ಯುದ್ದೀಪಗಳಿಂದ ಅಲಂಕರಿಸಿದ್ದರು. ಕುಂದಾಪ್ರ ಡಾಟ್ ಕಾಂ ಸುದ್ದಿ. ಮಾ.20ರ ಬೆಳಿಗ್ಗೆ ದೇವಳದ ತಂತ್ರಿಗಳು ನೇತೃತ್ವದಲ್ಲಿ ಮುಹೂರ್ತ ಮಂಗಳಾರತಿ, ಪಂಚಾಮೃತ ಅಭಿಷೇಕ, ಕ್ಷಿಪ್ರಬಲಿ, ವಿಶೇಷ ಭೂತ ಬಲಿ, ರಥಾರೋಹಣ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನ ನಡೆಯಿತು. ಮಧ್ಯಾಹ್ನ ದೇವಳದ ಭೋಜನಾಲದಲ್ಲಿ ವಿವಿಧ ಭಾಗಗಳಿಂದ ಕ್ಷೇತ್ರಕ್ಕೆ ಆಗಮಿಸಿದ ಸಹಸ್ರಾರು ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ದೇವರಿಗೆ ಹರಕೆ ರೂಪದಲ್ಲಿ ಬಂದ ಸೀರೆಗಳನ್ನು ಮಹಿಳೆಯರು ಏಲಂನಲ್ಲಿ ಭಾಗವಹಿಸಿ ಪ್ರಸಾದ ರೂಪದಲ್ಲಿ ಖರೀದಿಸಿದರು. ಸಂಜೆ ನಡೆದ ರಥೋತ್ಸವದಲ್ಲಿ ಸಾವಿರಾರು ಭಕ್ತರು ರಥ ಎಳೆದು ಸಂಭ್ರಮಿಸಿದರು. ವಳದ ಕಾರ್ಯನಿರ್ವಹಣಾಕಾರಿ ಯೋಗೀಶ್ವರ ಅವರ ಸಲಹೆಯಂತೆ, ಸಹಾಯಕ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೇಂದ್ರ ಸರಕಾರ ಕೈಗೊಂಡ ಆರ್ಥಿಕ ಸುಧಾರಣೆಯ ಮುಂದಿನ ಭಾಗವಾಗಿ ಬ್ಯಾಂಕ್ ಹಾಗೂ ಇತರ ಹಣಕಾಸು ಕ್ಷೇತ್ರದಲ್ಲಿ ನಗದು ರಹಿತವಾದ ವ್ಯವಹಾರಗಳನ್ನು ದೈನಿಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಉಡುಪಿ ಜಿಲ್ಲಾ ಅಗ್ರಿಣಿ ಬ್ಯಾಂಕಿನ ಮುಖ್ಯಪ್ರಬಂಧಕ ಫ್ರಾನ್ಸಿಸ್ ಬೋರ್ಗೆ ಹೇಳಿದರು. ಗೋಳಿಹೊಳೆ ಗ್ರಾಮ ಪಂಚಾಯತ್, ಸ್ಥಳೀಯ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್, ನಬಾರ್ಡ್ ಮತ್ತು ಜ್ಞಾನಜ್ಯೋತಿ ಆರ್ಥಿಕ ಸಲಹಾ ಕೇಂದ್ರ ಕುಂದಾಪುರ ಇವರ ಜಂಟಿ ಆಶ್ರಯದಲ್ಲಿ, ನಗದು ರಹಿತ ವ್ಯವಹಾರದ ಕುರಿತಾಗಿ ನಡೆದ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕ ಎಸ್. ಜಿ. ಗಚ್ಚಿನ ಮಠ್ ಇವರು ಬ್ಯಾಂಕಿನ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಪ್ರಧಾನಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆಯ ಫಲಾನುಭವಿಗಳಿಗೆ ತಲಾ ರೂ. ೨ ಲಕ್ಷದ ಪರಿಹಾರ ಧನ ವಿತರಿಸಿದರು. ಶರತ್ ಕುಮಾರ್ ಮತ್ತು ಜಿ. ಜಿ. ಹೆಗ್ಡೆ ನಗದು ರಹಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕೊಲ್ಲೂರು: ಸಮೀಪ ಹರವರಿಯಲ್ಲಿ ವಿಜಯನಗರ ಕಾಲದ ಕನ್ನಡ ಶಾಸನ ಪತ್ತೆಯಾಗಿದ್ದು, ಶಾಸನ ಆರಂಭಿಕ ಬರಹ ಸಂಪೂರ್ಣವಾಗಿ ಅಳಿಸಿ ಹೋಗಿದೆ. ಶಾಸನದ ಕೆಳಗಿನ ೧೨ ಸಾಲುಗಳು ಮಾತ್ರ ಸ್ಪಷ್ಟವಾಗಿದ್ದು, ಶಾಸನ ಬರಹದ ಪ್ರಕಾರ ಹರವರಿಯ ಭೂಮಿ ಶ್ರೀ ತಿಂಮಂಣ ಗುರುರಾಯರಿಗೆ ಆಯುಷ್ಯ ಆರೋಗ್ಯ ಅಭಿವೃದ್ಧಿಯಾಗಲೆಂದು ದೇವರಾಯಪುರದ ಮಹಾಜನಂಗಳಿಗೆ ನೀರನೆರೆದು ದಾನವಾಗಿ ನೀಡಲಾಯಿತೆಂದು ಹೇಳಲಾಗಿದೆ. ಪುರಾತತ್ವ ವಿದ್ವಾಂಸ ಪ್ರೊ.ಟಿ.ಮುರುಗೇಶಿ ಪತ್ತೆಮಾಡಿದ್ದಾರೆ. ಆಯತಾಕಾರದ ಸುಮಾರು ೧೧೦ ಸೆ.ಮೀ ಉದ್ದದ ಕಲ್ಲು ಚಪ್ಪಡಿ ಮೇಲ್ಭಾಗ ಕುದುರೆ ಲಾಳಾಕೃತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ಮೇಲಿನ ಪಟ್ಟಿಕಯಲ್ಲಿ ಸೂರ್ಯ-ಚಂದ್ರ, ಶಿವಲಿಂಗ, ದೀಪದ ಕಂಭ ಮತ್ತು ರಾಜ ಶಾಸನ ಎಂಬುದರ ಪ್ರತೀಕವಾಗಿ ಚಿತ್ರಿಸಿರುವ ಖಡ್ಗವಿದೆ. ಶಾಸನ ಬರಹದ ಪ್ರಕಾರ ಹರವರಿಯ ಭೂಮಿ ಶ್ರೀ ತಿಂಮಂಣ ಗುರುರಾಯರಿಗೆ ಆಯುಷ್ಯ ಆರೋಗ್ಯ ಅಭಿವೃದ್ಧಿಯಾಗಲೆಂದು ದೇವರಾಯಪುರದ ಮಹಾಜನಂಗಳಿಗೆ ನೀರನೆರೆದು ದಾನವಾಗಿ ನೀಡಲಾಯಿತೆಂದು ಹೇಳಲಾಗಿದೆ. ಈ ದಾನ ಶಾಸನಕ್ಕೆ ಸಾಕ್ಷಿಗಳು ತಿಮ್ಮಂಣಗಳು, ಅವಧಾನಿ ನಾಗಂಣಗಳು ಎಂದು ಹೇಳಲಾಗಿದೆ. ಶಾಸನದ ಮೇಲಿನ ಬರಹ ಪೂರ್ತಿಯಾಗಿ ಅಳಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತ್ರಿಮೂರ್ತಿಗಳಲ್ಲಿ ಪರಶಿವ ಅಪಾರ ಕರುಣಾಮಯಿ. ಭಕ್ತರಿಗಾಗಿ ತಾನು ಎಂತಹ ಕಷ್ಟ ಅನುಭವಿಸಲೂ ಸಿದ್ಧ. ಶಿವನಿಗೆ ಅರ್ಪಿಸಬೇಕಾಗಿರುವುದು ಶುದ್ಧ ಭಕ್ತಿ ಮಾತ್ರ. ಅಭಿಷೇಕ ಪ್ರಿಯನಾದ ಶಿವ ಒಂದು ಬಿಂದಿಗೆ ನೀರು. ಒಂದು ಬಿಲ್ವ ಪತ್ರೆಗೆ ಒಲಿದು ಬಿಡುವ. ರಾವಣನ ಭಕ್ತಿಗೆ ಮೆಚ್ಚಿದ ಆತ ಆತ್ಮಲಿಂಗಗಳನ್ನೇ ನೀಡಿದ. ಅರಿವಿಲ್ಲದೇ ಬಿಲ್ವ ಪತ್ರೆ ಸೇವೆ ನಡೆಸಿದ ಕಣ್ಣಪ್ಪನಿಗೆ ಒಲಿದ, ಸಮುದ್ರ ಮಥನದ ಕಾಲದಲ್ಲಿ ಅಳುಕದೇ ವಿಷ ನುಂಗಿ ಭಕ್ತರನ್ನು ರಕ್ಷಿಸಿದ ಇಂತಹ ಶಿವ ಯೋಗಿ,ತ್ಯಾಗಿ, ಭೋಗಿ ಎಲ್ಲವೂ ಹೌದು. ಶಿವಾಲಯಕ್ಕೆ ಭೇಟಿ ನೀಡಿ ಸದಾಶಿವನ ಧ್ಯಾನಗಳಿಂದ ನಾವು ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ ಎಂದು ಸರಕಾರಿ ಪ್ರೌಡಶಾಲೆ ಮಣುರೂ ಪಡುಕೆರೆಯ ಶ್ರೀಧರ ಶಾಸ್ತ್ರಿ ಗುಂಡ್ಮಿ ಹೇಳಿದರು. ಅವರು ಕೋಟೇಶ್ವರ ಶ್ರೀ ನೀರೇಶ್ವಾಲ್ಯ ಮಹಾಲಿಂಗೇಶ್ವರ ದೇವಸ್ಥಾನದ ೧೭ ನೇ ವರ್ಧಂತ್ಯೋತ್ಸವ ಹಾಗೂ ಬ್ರಹ್ಮ ಕಲಶೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಧಾರ್ಮಿಕ ಪ್ರವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಕೋಟೇಶ್ವರ ಪಟ್ಟಾಭಿ ರಾಮಚಂದ್ರ ದೇವಸ್ಥಾನದ ಆಡಳಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಇವರ ನೇತೃತ್ವದಲ್ಲಿ ಕುಂದಾಪುರ ವ್ಯಾಸರಾಜ ಮಠದಲ್ಲಿ ನವೀಕೃತಗೊಂಡ ಶ್ರೀ ಶ್ರೀ ರಾಮಚಂದ್ರತೀರ್ಥ ಶ್ರೀ ಪಾದಂಗಳರವರ ಮತ್ತು ಶ್ರೀ ಶ್ರೀ ಹಯಗ್ರೀವ ತೀರ್ಥ ಶ್ರೀ ಪಾದಂಗಳರವರ ವೃಂದಾವನಗಳ ಉದ್ಘಾಟನೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಶಾಸ್ತೀ ಪಾರ್ಕ್ನಿಂದ ಮಠದ ತನಕ ಪೂಜ್ಯ ಶ್ರೀ ಶ್ರೀ ಲಕ್ಷ್ಮೀಂದ್ರ ತೀರ್ಥ ಶ್ರೀ ಪಾದಂಗಳರವರನ್ನು ವೈಭವದ ಪುರಮೆರವಣಿಗೆಯಲ್ಲಿ ಪೂರ್ಣ ಕುಂಭ ಸ್ವಾಗತದೊಂದಿಗೆ ಕರೆತರಲಾಯಿತು. ಪುರಮೆರವಣಿಗೆಯಲ್ಲಿ ಕಳಸ ಹಿಡಿದ ಮಹಿಳೆಯರು ಸೇರಿದಂತೆ ಪಂಚವಾದ್ಯಗಳೊಂದಿಗೆ, ಚಂಡೆ, ಕೀಲುಕುದುರೆ, ತಟ್ಟಿರಾಯ, ಸಾವಿರಾರೂ ಭಕ್ತರು ಪುರಮೆರವಣಿಗೆಗೆ ಸಾಕ್ಷಿಯಾದರು. ತಾಲೂಕು ಗಾಣಿಗ ಸೇವಾ ಸಂಘ ಅಧ್ಯಕ್ಷ ಶ್ರೀನಿವಾಸ ಗಾಣಿಗ, ಕಾರ್ಯದರ್ಶಿ ಶಿವಾನಂದ ರಾವ್, ಕೋಶಾಧಿಕಾರಿ ಶಂಕರನಾರಾಯಣ ಗಾಣಿಗ, ಸಮಾಜದ ಹಿರಿಯ ಮುಖಂಡರಾದ ಸುದೀರ್ ಪಂಡಿತ್, ಗೋಪಾಲ ರಾವ್ ಉಡುಪಿ, ದಾನಿಗಳಾದ ಕೆ.ಎಮ್.ಶೇಖರ್ ಮತ್ತು ಕೆ.ಎಮ್.ಲಕ್ಷ್ಮಣ, ಜಿ.ಆರ್. ಚಂದ್ರಯ್ಯ, ಬಿ.ಎಸ್.ಮಂಜುನಾಥ್, ಗೋಪಾಲ ಚೆಲ್ಲಿಮಕ್ಕಿ, ಜಿಲ್ಲಾ ಯುವ ಸಂಘಟನೆ ಅಧ್ಯಕ್ಷ ದಿನೇಶ್ ಗಾಣಿಗ, ಬೆಂಗಳೂರು, ಮುಂಬೈ,…
