ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಇಲ್ಲಿನ ತಾಲೂಕು ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಯಶ್ರೀ ಸುಧಾಕರ ಮೊಗವೀರ ಹಾಗೂ ಉಪಾಧ್ಯಕ್ಷರಾಗಿ ಪ್ರವೀಣಕುಮಾರ್ ಶೆಟ್ಟಿ ಕಡ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕುಂದಾಪುರ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಕುಂದಾಪುರದ ಸಹಾಯಕ ಕಮೀಷನರ್ ಚುನಾವಣಾಧಿಕಾರಿಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಪಕ್ಷದ ಸದಸ್ಯ ಮೊಳಹಳ್ಳಿ ತಾಪಂ ಕ್ಷೇತ್ರ ಜಯಶ್ರೀ ಸುಧಾಕರ ಮೊಗವೀರ ಎರಡು ನಾಮಪತ್ರ ಸಲ್ಲಿಸಿದ್ದರೇ, ಉಪಾಧ್ಯಕ್ಷ ಸ್ಥಾನಕ್ಕೆ ನಾಡಾ ತಾಪಂ ಸದಸ್ಯ ಬಿಜೆಪಿಯ ಪ್ರವೀಣ ಕುಮಾರ್ ಕಡ್ಕೆ ಮೂರು ನಾಮಪತ್ರ ಸಲ್ಲಿಸಿದ್ದರು. ಮಧ್ಯಾಹ್ನ ಮೂರು ಗಂಟೆಯ ವರೆಗೆ ಯಾವುದೇ ಆಕ್ಷೇಪ ವ್ಯಕ್ತವಾಗದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆಯಾಗಿರುವ ಬಗ್ಗೆ ಘೋಷಿಸಿದರು. ಕುಂದಾಪುರ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳಿದ್ದು ಅವುಗಳನ್ನು ನಿವಾರಿಸುವ ನಿಟ್ಟಿನಲ್ಲಿ ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಯಶಸ್ಸಿಯಾಗಿ ಅನಿಷ್ಠಾನಗೊಳಿಸುವಲ್ಲಿ ಎಲ್ಲರೂ ಒಗ್ಗಟ್ಟಾಗಿ ದುಡಿಯುವುದಾಗಿ ನೂತರ ಅಧ್ಯಕ್ಷ ಉಪಾಧ್ಯಕ್ಷರು ತಿಳಿಸಿದ್ದಾರೆ. ಕುಂದಾಪ್ರ ಡಾಟ್…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ತ್ರಾಸಿ ಬಳಿ ಬೈಕ್ ಹಾಗೂ ಟ್ಯಾಂಕರ್ ನಡುವೆ ನಡೆದ ಭೀಕರ ಅಫಘಾತದಲ್ಲಿ ತಾಯಿ ಮಗಳು ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ. ಬೈಂದೂರ ಸಮೀಪದ ಮೂಡನಗದ್ದೆ ಸರೋಜಾ ಗಾಣಿಗ (35) ಹಾಗೂ ಆಕೆಯ ಮಗಳು ಮೃತಪಟ್ಟಿದ್ದು, ಮೃತರ ಸಹೋದರ ಬೈಕ್ ಸವಾರ ವಿಶ್ವನಾಥ ಗಾಣಿಗ ಗಂಭೀರ ಗಾಯಗೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ಸುದ್ದಿ. ಘಟನೆಯ ವಿವರ: ವಿಶ್ವನಾಥ ಗಾಣಿಗ ತನ್ನ ಬೈಕಿನಲ್ಲಿ ಸಹೋದರಿ ಸರೋಜಾ ಹಾಗೂ ಆಕೆ ಮಗಳನ್ನು ಕೂರಿಸಿಕೊಂಡು ಕುಂದಾಪುರದ ಆಸ್ಪತ್ರೆಗೆ ತೆರಳುತ್ತಿದ್ದರು. ತ್ರಾಸಿಯ ಅಣ್ಣಪ್ಪಯ್ಯ ಸಭಾ ಭವನದ ಬಳಿ ಪ್ರಯಾಣಿಕರನ್ನು ಹತ್ತಿಸಲು ರಸ್ತೆಯ ಮೇಲೆಯೆ ನಿಂತಿದ್ದ ಬಸ್ಸನ್ನು ಹಿಂದಿಕ್ಕಿ ಮುಂದೆ ಸಾಗಲು ಪ್ರಯತ್ನಿಸುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಬಸ್ಸಿನ ಬಲಭಾಗಕ್ಕೆ ಬೈಕ್ ಢಿಕ್ಕಿ ಹೊಡೆದು ಹಿಂಬದಿ ಕುಳಿತಿದ್ದ ತಾಯಿ ಮಗು ರಸ್ತೆಗೆ ಬಿದ್ದಿದ್ದರು. ಇದೇ ಸಂದರ್ಭದಲ್ಲಿ ಎದುರಿಗೆ ಇದ್ದ ಟ್ಯಾಂಕರ್ ತಾಯಿ ಮಗುವಿನ ಮೇಲೆ ಹರಿದಿದ್ದರಿಂದ ಈರ್ವರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್ ಸವಾರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಇಲ್ಲಿನ ಯುವ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕ್ರತಿಕ ಸಂಸ್ಥೆಯಾದ ಯುಸ್ಕೊರ್ಡ್ ಟ್ರಸ್ಟ್(ರಿ) ಬೈಂದೂರು ಇದರ ಪ್ರಾಯೋಜಕತ್ವದಲ್ಲಿ ಸಾಂಸ್ಕ್ರತಿಕ ಸಂಸ್ಥೆ ಸುರಭಿ(ರಿ) ಬೈಂದೂರು ಸಹಯೋಗದಲ್ಲಿ ರಂಗ ಸುರಭಿ 23ದಿನಗಳ ರಂಗ ತರಬೇತಿ ಶಿಬಿರವನ್ನು ಹಿರಿಯ ರಂಗನಟ ನಿರ್ದೇಶಕ ರವೀಂದ್ರ ಕಿಣಿ ಉಪ್ಪುಂದ ಇವರು ಉದ್ಘಾಟಿಸಿದರು. ಶಿಬಿರದ ಪ್ರಧಾನ ನಿರ್ದೇಶಕರಾದ ರಂಗ ತಜ್ಞ ಡಾ|| ಶ್ರೀಪಾದ ಭಟ್ , ಶ್ರೀ ಗಣೇಶ ಉಡುಪಿ, ಪ್ರಥ್ವಿನ್ ಉಡುಪಿ ಉಪಸ್ಥಿತರಿದ್ದರು. ಸಂಸ್ಥೆಯ ಅಧ್ಯಕ್ಷ ಶಿವರಾಮ ಕೊಠಾರಿ ಸ್ವಾಗತಿಸಿ, ಕಾರ್ಯದರ್ಶಿ ಲಕ್ಷ್ಮಣ ಕೊರಗ ಉಪಸ್ಥಿತರಿದ್ದು, ಸುರಭಿಯ ನಿರ್ದೇಶಕರ ಸುಧಾಕರ. ಪಿ ಬೈಂದೂರು ನಿರೂಪಿಸಿ, ಗಣಪತಿ ಹೋಬಳಿದಾರ್ ವಂದಿಸಿದರು. ಶಿಬಿರದಲ್ಲಿ ಸುಮಾರು 25 ಜನ ಯುವ ಕಲಾವಿದರು ಹಾಗೂ ಕಿರಿಯ ಕಲಾವಿದ ಹಾಗೂ ಕಲಾವಿದೆಯರು ತರಬೇತಿ ಪಡೆಯುತ್ತಿದ್ದಾರೆ.
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕೋಟ ಪಂಚಾಯಿತಿ ವ್ಯಾಪ್ತಿಯ ಗಿಳಿಯಾರು ಪರಿಸರದಲ್ಲಿರುವ ಹರಿಯುವ ನೀರಿನ ಸೂಲಡ್ಪು ಹೊಳೆಯ ಪಕ್ಕದಲ್ಲಿ ಸುಮಾರು 8 ಎಕರೆ ಹಡಿಲು ಭೂಮಿಯಲ್ಲಿ ಕಳೆದ ಕೆಲವು ದಿನಗಳಿಂದ ವಾಣಿಜ್ಯ ಉದ್ದೇಶಕ್ಕೆ ಮಣ್ಣು ತುಂಬಿಸಿ ಎತ್ತರಿಸುವ ನಡೆಸುತ್ತಿದ್ದು, ಇದರಿಂದ ನೆರೆ ಹಾವಳಿ ಮತ್ತಿತರ ಪ್ರಾಕೃತಿಕ ಸಮಸ್ಯೆಗಳು ಮುಂದೆ ಎದುರಾಗಲಿದೆ ಎಂದು ಗಿಳಿಯಾರಿನ ಸ್ಥಳೀಯರು ಹಡೋಲಿಗೆ ಮಣ್ಣು ತುಂಬಿಸುತ್ತಿದ್ದ ಲಾರಿಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ಕಳೆದ ಎರಡು ವಾರಗಳಿಂದ ಗಿಳಿಯಾರಿನ ಸೂಲಡ್ಪು ಹೊಳೆಯ ಹಡಿಲಿ ಭೂಮಿಯಲ್ಲಿ ನಿರಂತರವಾಗಿ ಮಣ್ಣು ತುಂಬಿಸುವ ಕಾರ‍್ಯ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿ ಕೋಟ ಪಂಚಾಯಿತಿ ಮಾಹಿತಿ ನೀಡಿದ್ದರು. ಆ ಸಂದರ್ಭ ಕೋಟ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಭಾಷ್ ಖಾರ್ವಿ, ಜಿಲ್ಲಾ ಪಂಚಾಯಿತಿ ಸದಸ್ಯ ರಾಘವೇಂದ್ರ ಕಾಂಚನ್ ಅವರು ಸ್ಥಳೀಯರೊಂದಿಗೆ ಆಗಮಿಸಿ ಕಾಮಗಾರಿಯ ಬಗ್ಗೆ ಮಾಹಿತಿ ಕೇಳಿದ್ದರು. ಸ್ಥಳ ಖರೀದಿಸಿ ಮಣ್ಣು ತುಂಬಿಸುತ್ತಿರುವ ಮಾಲಕರು ಹೊಳೆಯ ನೀರು ಹೋಗಲು ಸಮಸ್ಯೆಯಾಗದಂತೆ, ನೆರೆ ಹಾವಳಿಯಾಗದಂತೆ ವ್ಯವಸ್ಥೆ ಕಲ್ಪಿಸಿ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ರೈತರು ಮಳೆ ಬರುವ ಮುಂಚಿತವಾಗಿ ಮಣ್ಣನ್ನು ಸಂಗ್ರಹಿಸಿ ಇಟ್ಟುಕೊಂಡರೆ ಯಂತ್ರ ನಾಟಿ ಮಾಡಲು ಮಾಡಲು ಅನುಕೂಲವಾಗುತ್ತದೆ ಎಂದು ಹೊಸಾಡು ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪೂಜಾರಿ ಹೇಳಿದರು. ಅವರು ಹೊಸಾಡು ದೇವಸ್ಥಾನದ ಆವರಣದಲ್ಲಿ ನಬಾರ್ಡ್ ಬೆಂಗಳೂರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ತೆಂಗು ಬೆಳೆಗಾರರ ಸಂಘ ಇವರ ಆಶ್ರಯದಲ್ಲಿ ನಡೆದ ಯಂತ್ರ ನಾಟಿ ಮಣ್ಣು ಸಂಗ್ರಹ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಈಶ್ವರ ನಾಯ್ಕ್ ಇವರು ರೈತರಿಗೆ ಯಂತ್ರ ನಾಟಿ ಮತ್ತು ಇದರ ಉಪಯೋಗದ ಬಗ್ಗೆ ಮಾಹಿತಿ ನೀಡಿ ಹೆಚ್ಚು ಇಳುವರಿ ಕಡಿಮೆ ಖರ್ಚು ಯಂತ್ರ ನಾಟಿಯಿಂದ ಪ್ರಯೋಜನವಾಗುತ್ತದೆ. ಸ್ಥಳೀಯ ಕೃಷಿಕರಾದ ಕೃಷ್ಣಮೂರ್ತಿ ನಾವಡ, ತೆಂಗು ಬೆಳೆಗಾರರ ಸಂಘದ ನರಸಿಂಹ ಗಾಣಿಗ ಹರೆಗೋಡು ಮೊದಲಾದವರು ಉಪಸ್ಥಿತರಿದ್ದರು. ಸ್ಥಳೀಯ ಕೃಷಿಕ ಗಿರಿಜಾ ದೇವಾಡಿಗ ಸ್ವಾಗತಿಸಿದರು. ರಾಮಚಂದ್ರ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ತಾಲೂಕಿನ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನ ಹಟ್ಟಿಯಂಗಡಿಯ ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯು 2015-16ನೇ ಶೈಕ್ಷಣಿಕ ವರ್ಷದಲ್ಲಿ ನೂರು ಪ್ರತಿಶತ ಫಲಿತಾಂಶವನ್ನು ದಾಖಲಿಸುವ ಮೂಲಕ ಸಂಸ್ಥೆಯ ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದೆ. ಕೇಂದ್ರಿಯ ಪಠ್ಯಕ್ರಮ ಆಧಾರಿತ ಶಿಕ್ಷಣದಲ್ಲಿ ಸತತವಾಗಿ ಹದಿಮೂರನೆಯ ಬಾರಿಗೆ ಶೇ. 100 ಫಲಿತಾಂಶವನ್ನು ದಾಖಲಿಸಿದ ತಾಲ್ಲೂಕಿನ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಐಸಿಎಸಿ ಪಠ್ಯಕ್ರಮದಲ್ಲಿ ಈ ಶೈಕ್ಷಣಿಕ ಸಾಲಿನ ಪರೀಕ್ಷೆಗೆ ಹಾಜರಾದ 62 ವಿದ್ಯಾರ್ಥಿಗಳಲ್ಲಿ , 56 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲೂ, 6 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲೂ ತೇರ್ಗಡೆಯಾಗಿದ್ದಾರೆ. ಕುಮಾರ ಶೋಧನ್ ಟಿ. ಶೆಟ್ಟಿ ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ಬದಲಾಗುತ್ತಿರುವ ಶೈಕ್ಷಣಿಕ ಕಾಲಘಟ್ಟದಲ್ಲಿ ಯಾವುದೇ ರಾಜಿಯಿಲ್ಲದೇ ಮೂಲ ಪರಂಪರೆಯನ್ನು ಉಳಿಸಿಕೊಂಡು ಆಧುನಿಕ ಶಿಕ್ಷಣದಲ್ಲಿ ತನ್ನದೇ ಆದ ಅದ್ವಿತೀಯ ಛಾಪನ್ನು ಮೂಡಿಸಿಕೊಂಡು ಕಳೆದ ಹತ್ತೊಂಬತ್ತು ವರ್ಷಗಳಿಂದ ಕರ್ನಾಟಕ ರಾಜ್ಯದ ಅಗ್ರಪಂಕ್ತಿಯ ವಿದ್ಯಾಲಯವಾಗಿ ಬೆಳೆದು ಬಂದಿದೆ. ರಾಜ್ಯದ ಹಾಗೂ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಕರಾವಳಿ ಜಿಲ್ಲೆಯ ವಾಣಿಜ್ಯ ಬೆಳೆ ಗೇರು ಮರದಲ್ಲಿ ಇಳುವರಿ ಈ ಸಾಲಿನಲ್ಲಿ ಇಳುವರಿ ಕಡಿಮೆಯಾಗಿರುವುದರಿಂದ ಗೇರುತೋಪು ಹೊಂದಿರುವವರಿಗೆ ಭಾರಿ ನಷ್ಟ ಉಂಟಾಗುತ್ತಿದ್ದು, ನೆಡುತೋಪು ಗುತ್ತಿಗೆ ಪಡೆದ ಗುತ್ತಿಗೆದಾರರು ನಿಗಮಕ್ಕೆ ಪಾವತಿಸಿರುವ ಹಣದಲ್ಲಿ ಶೇ.65ರಷ್ಟು ಹಣವನ್ನು ಮರುಪಾವತಿಸುವಂತೆ ಹಾಗೂ ಪಾವತಿಸಲು ಬಾಕಿ ಇರುವವರಿಗೂ ಕೂಡಾ ಶೇ.65ರಷ್ಟು ರಿಯಾಯಿತಿ ಮಾಡುವಂತೆ ಎಸ್. ರಾಜು ಪೂಜಾರಿ ನೇತೃತ್ವದಲ್ಲಿ ನಡುತೋಪು ಗುತ್ತಿಗೆದಾರರ ತಂಡ ಮಂಗಳೂರಿನಲ್ಲಿರುವ ಕರ್ನಾಟಕ ಗೇರು ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕರಿಗೆ ಕುಂದಾಪುರ ವಿಭಾಗೀಯ ವ್ಯವಸ್ಥಾಪಕ ಚಂದ್ರಣ್ಣ ಮೂಲಕ ಮನವಿ ಸಲ್ಲಿಸಿದೆ. ಪ್ರಸಕ್ತ ಸಾಲಿನಲ್ಲಿ ಹಿಂದೆಂದೂ ಕಂಡರಿಯದ ಹವಾಮಾನ ವೈಫಲ್ಯ ಕಂಡುಬಂದಿದ್ದು ಗೇರುಬೀಜ ಉತ್ಪಾದನೆಯಲ್ಲಿ ತೀರಾ ಕುಸಿತ ಕಂಡಿದೆ. ಕಳೆದ ವರ್ಷದ ಇಳುವರಿಗೆ ಹೋಲಿಸಿದರೆ ಈ ವರ್ಷ ಶೇ.19-15ರಷ್ಟು ಆಗಿದೆ. ಬೀಜ ಸಂಗ್ರಹಣೆ ಮಾಡಲು ಸಹ ಖರ್ಚು ಹೆಚ್ಚಾಗಿದ್ದು, ಗುತ್ತಿಗೆ ಪಡೆದವರೆಲ್ಲರಿಗೂ ಅಪಾರ ನಷ್ಟವಾಗಿದೆ. ಗೇರುಬೆಳೆಯಲ್ಲಿ ಶೇ.80-90ರಷ್ಟು ನಷ್ಟ ಉಂಟಾಗಿರುವುದರಿಂದ ಸಾಲ ಮಾಡಿ ಟೆಂಡರ್ ಪಡೆದ ಗುತ್ತಿಗೆದಾರರು ಆತ್ಮಹತ್ಯೆ…
ಕುಂದಾಪ್ರ ಡಾಟ್ ಕಾಂ ವರದಿ | ಸುತ್ತಲೂ ಗಿಡಮರಗಳಿಂದ ಕಂಗೊಳಿಸುವ ಪ್ರಶಾಂತ ಪರಿಸರದ ನಡುವೆ ಪ್ರಾಚೀನ ಮಾದರಿಯ ಶಿಕ್ಷಣ ಪದ್ದತಿಯನ್ನು ನೆನಪಿಸುವ ಸುಂದರ ವಾತಾವರಣ. ಇದರ ನಡುವೆ ಆಧುನಿಕ ಶಿಕ್ಷಣದ ಎಲ್ಲಾ ಆಯಾಮಗಳನ್ನು ಒಳಗೊಂಡು ರಾಷ್ಟ್ರ ಮಟ್ಟದಲ್ಲಿ ಗುರುತಿಸಬಹುದಾದ ಉತ್ಕೃಷ್ಟ ಶೈಕ್ಷಣಿಕ ಸಂಸ್ಥೆಯಾಗಿ ಖ್ಯಾತಿವೆತ್ತಿರುವ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳು. ಕ್ಯಾಂಪಸ್‌ನ ಹೊರನೋಟದಲ್ಲೇ ಒಂದು ಸಾತ್ವಿಕ ಶೈಕ್ಷಣಿಕ ವಾತಾವರಣ ಮನಸ್ಸಿನ ಒಡಮೂಡುತ್ತದೆ. ನೋಟಕ್ಕೆ ನಿಲುಕಿದಂತೆ ಎಲ್ಲವೂ ಅಚ್ಚುಕಟ್ಟಾಗಿ ಅನುಷ್ಠಾನಗೊಂಡಿದೆ. ಕುಂದಾಪುರ ತಾಲೂಕಿನ ವಕ್ವಾಡಿಯಲ್ಲಿರುವ ಪ್ರತಿಷ್ಠಿತ ಗುರುಕುಲ ಪಬ್ಲಿಕ್ ಸ್ಕೂಲ್ ಹಾಗೂ ಗುರುಕುಲ ಪಿಯು ಕಾಲೇಜು ತನ್ನದೇ ಆದ ಹತ್ತಾರು ವೈಶಿಷ್ಟ್ಯತೆಗಳಿಂದ ಇಂದು ಮನೆಮಾತಾಗಿದೆ. ಶಿಕ್ಷಣವೂ ಅರಿವು, ಉದ್ಯೋಗವನ್ನು ನೀಡುವುದರ ಜೊತೆಗೆ ಅದು ಪ್ರತಿ ವಿದ್ಯಾರ್ಥಿಯನ್ನು ಒಬ್ಬ ಸಜ್ಜನ ನಾಗರಿಕನನ್ನಾಗಿಸಬೇಕು ಎಂಬ ಮಾತಿಗೆ ಕಟಿಬದ್ಧರಾಗಿ, ವಿಶ್ವಾಸವೇ ನಮ್ಮ ಯಶಸ್ಸೆಂಬ ಧ್ಯೇಯವಾಕ್ಯದೊಂದಿಗೆ ಬಾಂಡ್ಯ ಎಜುಕೇಶನಲ್ ಟ್ರಸ್ಟ್ ಮೂಲಕ ಆರಂಭಗೊಂಡ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳು ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯೆಯ ಬೆಳಕು ಚಲ್ಲಿ ಆಂತರ್ಯದಲ್ಲಿ…
ಕುಂದಾಪ್ರ ಡಾಟ್ ಕಾಂ ಸುದ್ದಿ ಬೈಂದೂರು: ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಸಬೇಕಾದ ಹೊಣೆ ಮಾತೆಯರಿಗೆ ಸೇರಿದೆ. ಅವರು ಆ ಕೆಲಸಕ್ಕೆ ಮುಂದಾದರೆ ಮಾತ್ರ ದೇಶ ಸುಸಂಸ್ಕೃತ ಪ್ರಜೆಗಳನ್ನು ಹೊಂದಲು ಸಾಧ್ಯ ಎಂದು ಯಳಜಿತ ಸಿದ್ಧಿವಿನಾಯಕ ಸಾಂಸ್ಕೃತಿಕ ಕೇಂದ್ರದ ಸಂಚಾಲಕ ವೈ. ಮಂಗೇಶ ಶೆಣೈ ಹೇಳಿದರು. ಖಂಬದಕೋಣೆ ಮಾಣಿಕ್ಯನಾಗ ಸನ್ನಿಧಿಯ ೧೪ನೆ ವಾರ್ಷಿಕೋತ್ಸವದ ನಿಮಿತ್ತ ನಡೆದ ’ಅರಿಸಿನ ಕುಂಕುಮ’ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಉಪನ್ಯಾಸ ನೀಡಿದರು. ಭಾರತೀಯ ಪರಂಪರೆಯಲ್ಲಿ ಎಲ್ಲ ಮಹಿಳೆಯರಿಗೆ ಎಲ್ಲ ಕಾಲದಲ್ಲಿ ಧಾರ್ಮಿಕ ವಿಧಿಗಳಲ್ಲಿ ಭಾಗವಹಿಸುವ ಅವಕಾಶವಿತ್ತು. ಅದಕ್ಕೆ ಹಲವು ನಿದರ್ಶನಗಳು ದೊರೆಯುತ್ತವೆ. ಆದರೆ ಯಾವುದೋ ಒಂದು ಹಂತದಲ್ಲಿ ನಿರ್ಧಿಷ್ಟ ಸಂದರ್ಭಗಳಲ್ಲಿ ಅವರನ್ನು ದೂರ ಇಡುವ ಪದ್ಧತಿ ಆರಂಭವಾಯಿತು. ಅದಕ್ಕೆ ಅಂತ್ಯ ಕಾಣಿಸಬೇಕಾದ ಕಾಲ ಬಂದಿದೆ ಎಂದು ಅವರು ನುಡಿದರು. ಕುಂದಾಪುರದ ಮೂಕಾಂಬಿಕಾ ಮಹಿಳಾ ಮಂಡಳಿ ಒಕ್ಕೂಟದ ಕಾರ್ಯದರ್ಶಿ ಜಯಂತಿ ಎನ್. ಐತಾಳ್ ಅಧ್ಯಕ್ಷತೆ ವಹಿಸಿದ್ದರು. ಮರವಂತೆ ಸರಕಾರಿ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಐ. ವಸಂತಕುಮಾರಿ, ಕೊಲ್ಲೂರು ಡಾಟ್‌ಕಾಂನ ಸಂಯೋಜಕಿ ಪ್ರಿಯದರ್ಶಿನಿ…
ಕುಂದಾಪುರ ಕೋಣಿಯಲ್ಲಿ ಕರ್ಣಾಟಕ ಬ್ಯಾಂಕಿನ 728ನೇ ಶಾಖೆ ಹಾಗೂ ಎಟಿಎಂ ಉದ್ಘಾಟನೆ ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಬ್ಯಾಂಕುಗಳು ಹಣದ ವಹಿವಾಟು ನಡೆಸಲಷ್ಟೇ ಸೀಮಿತವಾಗರದೇ ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಅಗತ್ಯವಾದ ಸಲಹೆ, ಸಹಕಾರ, ಮಾರ್ಗದರ್ಶವನ್ನು ನೀಡುವ ಸಂಸ್ಥೆಗಳಾಗಿ ರೂಪುಗೊಳ್ಳುತ್ತಿದೆ. ಆರ್ಥಿಕ ಚಟುವಟಿಕೆಯನ್ನು ನಡೆಸುವ ಮೂಲಕ ಸಮಾಜದ ವಿವಿಧ ರಂಗಗಳಲ್ಲಿ ಅಗತ್ಯವಾದ ಸಹಕಾರ ಬ್ಯಾಂಕಿಂಗ್ ಕ್ಷೇತ್ರದಿಂದ ದೊರೆಯುತ್ತಿದೆ ಬಸ್ರೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರಾದ ಬಿ. ಅಪ್ಪಣ್ಣ ಹೆಗ್ಡೆ ಹೇಳಿದರು. ಅವರು ಕುಂದಾಪುರ ತಾಲೂಕಿನ ಕೋಣಿಯಲ್ಲಿ ಕರ್ಣಾಟಕ ಬ್ಯಾಂಕಿನ ವಿತ್ತೀಯ ಶಾಖೆ ಹಾಗೂ ಎಟಿಎಂ ಉದ್ಘಾಟಿಸಿ ಮಾತನಾಡಿದರು. ಬ್ಯಾಂಕುಗಳಿಂದ ಸಾಲ ಪಡೆದ ಉದ್ದೇಶಕ್ಕಾಗಿ ಹಣವನ್ನು ವಿನಿಯೋಗಿಸದಿದರೇ ಅದರ ಮುರುಪಾವತಿಯ ಕಷ್ಟವೆನಿಸುತ್ತದೆ. ಮರುಪಾವತಿ ಮಾಡದಿದರೇ ಬಡ್ಡಿಯ ಮೇಲೆ ಬಡ್ಡಿ ಬೇಳೆಯುತ್ತದೆ. ಅದರ ಬದಲು ಬ್ಯಾಂಕಿನಿಂದ ಸಲಹೆ ಪಡೆದರೇ ಸಾಲ ಮಾಡಿದವನೂ ಹೊರೆಯಾಗದಂತೆ ಮರುಪಾವತಿ ಮಾಡಬಹುದಾಗಿದೆ. ತಂತ್ರಜ್ಞಾನ ಯುಗದಲ್ಲಿ ಹೊಸ ಸವಲತ್ತುಗಳನ್ನು ನೀಡುತ್ತಾ ಗ್ರಾಹಕರಿಗೆ ನೀಡುತ್ತಿರುವ ಬ್ಯಾಂಕುಗಳು ಕಾರ್ಯ ಸ್ವಾಗತಾರ್ಹ ಎಂದ…
