ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ: ಸರಕಾರಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಿ ಕನ್ನಡ ಮಾಧ್ಯಮದಲ್ಲಿವೂ ಗುಣಮಟ್ಟದ ಶೈಕ್ಷಣಿಕ ವಾತಾವರಣ ನಿರ್ಮಾಣವಾಗುವಂತಾಗಬೇಕು. ಆ ನೆಲೆಯಲ್ಲಿ ರೊಟರಿ ಕ್ಲಬ್ ಹಾಗೂ ದಾನಿಗಳ ಸಹಕಾರದಿಂದ ಈವರೆಗೆ ಸರಕಾರಿ ಶಾಲೆಗಳಿಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 72 ಇ-ಲರ್ನಿಂಗ್ ಕಿಟ್ ನೀಡಲಾಗಿದ್ದು ಆ ಪೈಕಿ ಕುಂದಾಪುರ ತಾಲೂಕಿನ 33ಶಾಲೆಗಳನ್ನು ಗುರುತಿಸಿ ಕಿಟ್ ವಿತರಿಸಲಾಗಿದೆ ಎಂದು ರೋಟರಿ ಜಿಲ್ಲೆ ೩೧೮೦ ಗವರ್ನರ್ ಡಾ. ಭರತೇಶ್ ಹೇಳಿದರು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶಂಕರನಾರಾಯಣ ಬೈಲೂರಿಗೆ ಇಲ್ಲಿ ರೊಟರಿಕ್ಲಬ್ ಶಂಕರನಾರಾಯಣ ಹಾಗೂ ನಿವೃತ್ತ ಕಾರ್ಪೊರೇಷನ್ ಬ್ಯಾಂಕ್ ಬ್ಯಾನೇಜರ್ ಜಯಕರ ಶೆಟ್ಟಿ ಮೂಡುಬೈಲೂರು ಇವರು ಕೊಡಮಾಡಿದ್ಧ ಇ- ಲರ್ನಿಂಗ್ ಕಿಟ್ ಚಾಲನೆಗೊಳಿಸಿ ಮಾತನಾಡಿದರು. ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷ ಸಂತೋಷ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ಧರು, ಮುಖ್ಯ ಅತಿಥಿಗಳಾಗಿ ರೋಟರಿಯನ್ ಟಿ. ವಿಶ್ವನಾಥ ಮದ್ಯಸ್ಥ, ಜಯಶ್ರೀ ಭರತೇಶ್, ಆನಂದ ಶೆಟ್ಟಿ, ಆನಂದ ಮೊಗವೀರ, ಶಂಕರನಾರಾಯಣ ರೋಟರಿಕ್ಲಬ್‌ನ ಸದಸ್ಯರುಗಳು ಹಾಗೂ ಶಾಲಾ ಎಸ್‌ಡಿಎಮ್‌ಸಿ…
Author: ನ್ಯೂಸ್ ಬ್ಯೂರೋ
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಮೇಲ್‌ಗಂಗೊಳ್ಳಿ ಪೈ ಕುಟುಂಬದವರು ಸುಮಾರು ನಾಲ್ಕು ಶತಮಾನಗಳಿಂದ ಆರಾಧಿಸಿಕೊಂಡು ಬಂದಿರುವ ಮೇಲ್‌ಗಂಗೊಳ್ಳಿ ರಾಮ ಪೈ ಮಠ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ರಜತ ಸಿಂಹಾಸನ ಮತ್ತು ಪ್ರಭಾವಳಿ ಸಮರ್ಪಣೆ ಕಾರ್ಯಕ್ರಮ ಹಾಗೂ ಶ್ರೀ ದೇವರಿಗೆ ಶತಕಲಶಾಭಿಷೇಕ ಸೇವೆಯು ಶ್ರೀ ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ನಡೆಯಿತು. ದೇವಸ್ಥಾನಕ್ಕೆ ಚಿತ್ತೈಸಿದ ಶ್ರೀಗಳವರನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಬಳಿಕ ಶ್ರೀಗಳಿಂದ ಶ್ರೀದೇವರಿಗೆ ಶತಕಲಶಾಭಿಷೇಕ, ಮಂಗಲ ದ್ಯವ್ಯ ನಿರೀಕ್ಷಣೆ, ಶ್ರೀಗಳಿಗೆ ಪಾದ್ಯ ಪೂಜೆ, ಶ್ರೀಗಳಿಂದ ಆಶೀರ್ವಚನ, ಮಹಾಪೂಜೆ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು. ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಅಜಿತ್ ಭಟ್, ವೇದಮೂರ್ತಿ ಜಿ.ಅನಂತಕೃಷ್ಣ ಭಟ್, ವೇದಮೂರ್ತಿ ಜಿ.ವಿಠಲದಾಸ ಭಟ್ ಮೊದಲಾದ ವೈದಿಕರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ವೇದಮೂರ್ತಿ ಜಿ.ನಾರಾಯಣ ವಿಶ್ವನಾಥ ಆಚಾರ್ಯ, ವೇದಮೂರ್ತಿ ಜಿ.ಮೋಹನದಾಸ ಭಟ್, ವೇದಮೂರ್ತಿ ಪವನ್ ಆಚಾರ್ಯ, ವೇದಮೂರ್ತಿ ಶಿವಾನಂದ ಭಟ್, ಮೇಲ್‌ಗಂಗೊಳ್ಳಿ ಪೈ ಕುಟುಂಬದ ಎಂ.ನರಸಿಂಹ ಪೈ,…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಸರಳ, ಸಜ್ಜನಿಕೆ, ವೃತ್ತಿ ನಿಷ್ಠೆಯೊಂದಿಗೆ ಪ್ರಾಮಾಣಿಕ ಬದುಕಿನುದ್ದಕ್ಕೂ ಪ್ರೀತಿಯನ್ನು ಹಂಚಿ ಎಲ್ಲರ ಪ್ರೀತಿಗೆ ಪಾತ್ರರಾಗಿ ಅಪಾರ ಸ್ನೇಹಿತರ ಬಳಗವನ್ನು ಹೊಂದಿದ್ದ ಅವಿನಾಶ್ ಹೆಬ್ಬಾರ್ ಅವರು ಸಿತಾರ್ ವಾದಕನಾಗ ಬೇಕೆಂಬ ಹಂಬಲದಿಂದ ತನ್ನ ೩೦ನೇ ವಯಸ್ಸಿನಲ್ಲಿ ಸಿತಾರ್ ಕಲಿತು ಹತ್ತಾರು ಕಛೇರಿಗಳನ್ನು ನೀಡಿ ಸಂಗೀತ ಕ್ಷೇತ್ರದಲ್ಲಿ ಭರವಸೆಯನ್ನು ಮೂಡಿಸುತ್ತಿರುವ ಕಾಲಘಟ್ಟದಲ್ಲಿ ಅಕಾಲವಾಗಿ ನಮ್ಮನ್ನು ಅಗಲಿ ಮರೆಯಾಗಿರುವುದು ಸಮಾಜಕ್ಕೆ ತುಂಬಲಾರದ ನಷ್ಟ ಎಂದು ಕುಂದಾಪುರ ಕಲಾಕ್ಷೇತ್ರದ ಅಧ್ಯಕ್ಷ ಬಿ. ಕಿಶೋರ್‌ಕುಮಾರ್ ಕುಂದಾಪುರ ಹೇಳಿದರು ಅವರು ರೋಟರಿ ಕ್ಲಬ್ ಕುಂದಾಪುರದ ಆಶ್ರಯದಲ್ಲಿ ರೋಟರಿ ನರ್ಸರಿ ಸ್ಕೂಲ್ ಸಭಾಂಗಣದಲ್ಲಿ ನಡೆದ ರೋಟರಿ ಕ್ಲಬ್ ಕುಂದಾಪುರದ ಮಾಜಿ ಕಾರ್ಯದರ್ಶಿ ಅವಿನಾಶ್ ಹೆಬ್ಬಾರ್ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾಜಿ ರೋಟರಿ ಜಿಲ್ಲಾ ಗವರ್ನರ್ ಎ.ಎಸ್.ಎನ್. ಹೆಬ್ಬಾರ್, ಉದ್ಯಮಿ ಪ್ರಶಾಂತ್ ತೋಳಾರ್, ರೋಟರಿ ಕ್ಲಬ್ ಕುಂದಾಪುರ ಸನ್‌ರೈಸ್‌ನ ನಿಯೋಜಿತ ಅಧ್ಯಕ್ಷ ನರಸಿಂಹ ಹೊಳ್ಳ, ನಿವೃತ್ತ ಶಿಕ್ಷಣಾಧಿಕಾರಿ ಗೋಪಾಲ ಶೆಟ್ಟಿ, ಡಾ.…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತ್ರಾಸಿ ವಲಯದ ಗಂಗೊಳ್ಳಿ ಕಾರ್ಯಕ್ಷೇತ್ರದ ಪ್ರಗತಿಬಂಧು ಸ್ವಸಹಾಯ ಸಂಘಗಳ ಎಂ.ಜಿ.ರೋಡ್ ಮತ್ತು ಬಂದರು ಒಕ್ಕೂಟಗಳ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು. ಪುರೋಹಿತರಾದ ವೇದಮೂರ್ತಿ ಜಿ.ರಾಘವೇಂದ್ರ ನಾರಾಯಣ ಆಚಾರ್ಯ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಅಮರಪ್ರಸಾದ್ ಹೆಗ್ಡೆ, ತ್ರಾಸಿ ವಲಯ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜು ದೇವಾಡಿಗ, ಜಿಪಂ ಸದಸ್ಯೆ ಶೋಭಾ ಜಿ.ಪುತ್ರನ್, ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಪತ್ರಕರ್ತ ಬಿ.ರಾಘವೇಂದ್ರ ಪೈ, ಗಂಗೊಳ್ಳಿ ಹಸಿಮೀನು ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಂಜುನಾಥ ಜಿ.ಟಿ., ಕುಂದಾಪುರ ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟದ ಕಾರ್ಯನಿರ್ವಹಣಾಧಿಕಾರಿ ಈಶ್ವರ ನಾಯ್ಕ್, ಪ್ರಗತಿಬಂಧು ಸ್ವಸಹಾಯ ಸಂಘಗಳ ತ್ರಾಸಿ ವಲಯ ಅಧ್ಯಕ್ಷ ಬಾಬು ಚಂದನ್, ತ್ರಾಸಿ ವಲಯ ಮೇಲ್ವಿಚಾರಕ ಚಂದ್ರ ಮರಾಠೆ, ಎಂಜಿ ರೋಡ್ ಒಕ್ಕೂಟದ ಅಧ್ಯಕ್ಷ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಮೊಗವೀರ ಯುವ ಸಂಘಟನೆ ರಿ., ಉಡುಪಿ ಜಿಲ್ಲೆ, ಹೆಮ್ಮಾಡಿ ಘಟಕ ಮತ್ತು ಸಾರ್ವಜನಿಕ ಸಾಮೂಹಿಕ ಶನೇಶ್ವರ ಯಾಗ ಸಮಿತಿ ವತಿಯಿಂದ ಬಗ್ವಾಡಿ ಶ್ರೀ ಮಹಿಷಾಸುರಮರ್ದಿನಿ ಸನ್ನಿಧಿಯಲ್ಲಿ ಸಾರ್ವಜನಿಕ ಸಾಮೂಹಿಕ ಶನೇಶ್ವರ ಯಾಗ ನಡೆಯಿತು. ಸಾರ್ವಜನಿಕ ಸಾಮೂಹಿಕ ಶನೇಶ್ವರ ಯಾಗದ ಧಾರ್ಮಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಡಾ|ಜಿ.ಶಂಕರ್ ಮಾತನಾಡಿ, ಜನರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವಲ್ಲಿ ಮೊಗವೀರ ಯುವ ಸಂಘಟನೆಯ ಹೆಮ್ಮಾಡಿ ಘಟಕ ಹಾಗೂ ಯಾಗ ಸಮಿತಿಯ ನೇತೃತ್ವದಲ್ಲಿ ನಡೆದ ಸಾಮೂಹಿಕ ಶನೇಶ್ವರ ಯಾಗ ಶ್ಲಾಘನೀಯ ಕಾರ್ಯ ಎಂದು ಅಭಿಪ್ರಾಯ ಪಟ್ಟರು. ಮೊಗವೀರ ಯುವ ಸಂಘಟನೆ ಹೆಮ್ಮಾಡಿ ಘಟಕದ ಅಧ್ಯಕ್ಷ ವಾಸು ಜಿ.ನಾಯ್ಕ್ ವಂಡ್ಸೆ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ, ಮುಂಬಯಿ ಉದ್ಯಮಿ, ಮೊಗವೀರ ಬ್ಯಾಂಕ್‌ನ ನಿರ್ದೇಶಕರಾದ ಗೋಪಾಲ ಎಸ್ ಪುತ್ರನ್, ಮೊಗವೀರ ಯುವ ಸಂಘಟನೆಯ ಜಿಲ್ಲಾ ಅಧ್ಯಕ್ಷ ಗಣೇಶ ಕಾಂಚನ್, ಮೊಗವೀರ…
ಕುಂದಾಪ್ರ ಡಾಟ್ ಕಾಂ ಸುದ್ದಿ ಕುಂದಾಪುರ/ಹುಬ್ಬಳ್ಳಿ: ಹುಬ್ಬಳ್ಳಿಯ ಹೋಟೆಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ತಾಲೂಕಿನ ಬಸ್ರೂರು ಮೂಲದ ವ್ಯಕ್ತಿಯೋರ್ವನಿಗೆ ರಾತ್ರಿ ತನ್ನ ರೂಮಿನಲ್ಲಿ ಮಲಗಿದ್ದಾಗ ಬೆಂಕಿ ತಗುಲಿ ಮೃತಪಟ್ಟ ಘಟನೆ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮೃತರನ್ನು ಬಸ್ರೂರು ಮೂಲದ ರಾಜು ಪೂಜಾರಿ ಎಂದು ಗುರುತಿಸಲಾಗಿದೆ. ಎಂದಿನಂತೆ ಹೋಟೆಲ್ ಕೆಲಸ ಮುಗಿಸಿ ಹುಬ್ಬಳ್ಳಿಯ ವಿದ್ಯಾನಗರದ ತನ್ನ ರೂಮಿಗೆ ತೆರಳಿದ್ದ ರಾಜು ಪೂಜಾರಿ ರಾತ್ರಿ ಮಲಗಿದ್ದಾಗ ಬೆಂಕಿ ತಗುಲಿ ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ. ಆತ ತನ್ನ ರೂಮಿನಲ್ಲಿ ಒಬ್ಬಂಟಿಯಾಗಿದ್ದುದಲ್ಲದೇ, ರಾತ್ರಿ ವೇಳೆ ಘಟನೆ ನಡೆದ ಕಾರಣ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿ ವಿಪರೀತ ಕುಡಿತದ ಚಟ ಹೊಂದಿದ್ದು, ರೂಮಿನಲ್ಲಿ ದೀಪ ಹಚ್ಚಿ ಮಲಗಿದ್ದಾಗ ಇದು ಬೆಂಕಿ ಅವಘಡಕ್ಕೆ ದಾರಿಮಾಡಿಕೊಟ್ಟಿರಬಹುದು ಎಂದು ಶಂಕಿಸಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ ಮೃತದೇಹವನ್ನು ಹುಬ್ಬಳ್ಳಿಯ ಶವಾಗಾರದಲ್ಲಿ ಇರಿಸಲಾಗಿದ್ದು ಮೃತರ ಪರಿಚಿತರು ಕೂಡಲೇ ವಿದ್ಯಾನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ (8197446267) ಕೊರಿಕೊಂಡಿದ್ದಾರೆ.
ಕುಂದಾಪ್ರ ಡಾಟ್ ಕಾಂ ವರದಿ ಕುಂದಾಪುರ: ಜಾಗತೀಕರಣದ ಭರಾಟೆ, ಶಿಕ್ಷಣದ ವ್ಯಾಪಾರೀಕರಣ, ಆಡಂಬರ ಮತ್ತು ಶೋಕಿಗಳ ಅಬ್ಬರದ ನಡುವೆ ನೈಜ ಶಿಕ್ಷಣವೆಂಬುದು ಕಳೆದು ಹೋಗುತ್ತಿರುವ ಸಂದರ್ಭದಲಿಯೂ ಸಾಮಾಜಿಕ ಬದ್ಧತೆಯಿಂದ, ಶಿಕ್ಷಣದ ನೈಜ ಕಳಕಳಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ, ಕುಂದಾಪುರ ಎಜ್ಯುಕೇಶನ್ ಸೊಸೈಟಿಯ ಎಚ್.ಎಮ್.ಎಮ್. ಆಂಗ್ಲ ಮಾಧ್ಯಮ ಶಾಲೆ. ಕಳೆದ ನಲವತ್ತು ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾದಾನ ಮಾಡುತ್ತಿರುವ ಶಾಲೆಯಲ್ಲಿ ಸುಮಾರು 1400 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು ಗುಣಮಟ್ಟದ ಶಿಕ್ಷಣ ಪಡೆಯುತ್ತಿದ್ದಾರೆ. ಎಳೆಯ ಪ್ರಾಯದ ವಿದ್ಯಾರ್ಥಿಗಳ ಭಾವನಾತ್ಮಕ, ಸಾಮಾಜಿಕ ಮತ್ತು ಮನೋವೈಜ್ಞಾನಿಕ ಬೆಳವಣಿಗೆಯನ್ನು ಕೇಂದ್ರವಾಗಿರಿಸಿಕೊಂಡು ಈ ಶಾಲೆ ಕಾಲದಿಂದ ಕಾಲಕ್ಕೆ ನೂತನ ಬೋಧನ ವಿಧಾನಗಳನ್ನು ಅಳವಡಿಸಿಕೊಂಡು ಬರುತ್ತಿದ್ದು ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕಾಗಿ ವಿಶಿಷ್ಟ ಕಳಕಳಿಯಿಂದ ಕಾರ್ಯ ನಿರ್ವಹಿಸುತ್ತಿದೆ. ಮಕ್ಕಳ ಭಾವನಾತ್ಮಕ ಮತ್ತು ಬೌದ್ಧಿಕ ಬೆಳವಣಿಗೆಗೆ ಬೇಕಾಗಿರುವುದು ಶಿಕ್ಷಕರ ಮತ್ತು ಪೋಷಕರ ಉತ್ತಮ ಮಾರ್ಗದರ್ಶನ ಮತ್ತು ಎಣೆಯಿಲ್ಲದ ಪ್ರೀತಿ ಮಾತ್ರವೇ ಎನ್ನುವುದನ್ನು ಅರ್ಥೈಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಶಾಲೆ ಪೋಷಕರಿಗಾಗಿ ವಿಶೇಷ ಕಾರ್ಯಗಾರಗಳನ್ನು ನಡೆಸುತ್ತಿದೆ. ಕೌಶಲ್ಯ ಭರಿತ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಕುಂದಾಪುರ: ಭಾಷೆಯನ್ನು ಬೆಳೆಸುವ ದಿನಗಳ ಬದಲಾಗಿ ಉಳಿಸಿಕೊಳ್ಳುವ ದಿನಗಳು ಬಂದಿವೆ. ಜಾಗತೀಕರಣ, ಉದಾರೀಕರಣದ ಕಾರಣದಿಂದ ಕೊಚ್ಚಿ ಹೋಗುತ್ತಿರುವ ಕನ್ನಡ ಭಾಷೆಯನ್ನು ಮತ್ತಷ್ಟು ಸಮೃದ್ಧಗೊಳಿಸುವ ಅಗತ್ಯತೆ ನಮ್ಮ ಮುಂದಿದೆ. ಕನ್ನಡಕ್ಕೆ ಅನ್ಯಾಯವಾದಾಗ ಪ್ರತಿಭಟಿಸುವ ಕೆಚ್ಚನ್ನು ಬೆಳೆಸಿಕೊಂಡು ಒಗ್ಗಟ್ಟಾಗಿ ಹೋರಾಡುವ ಕೆಲಸವಾಗಬೇಕಿದೆ ಎಂದು ಮನೋರೋಗ ತಜ್ಞ ಡಾ. ಕೆ.ಎಸ್. ಕಾರಂತ್ ಹೇಳಿದರು. ಅವರು ಇಲ್ಲಿನ ಸಾಧನ ಸಂಗಮ ಟ್ರಸ್ಟ್ ಸಭಾಂಗಣದಲ್ಲಿ ನಡೆದ ೧೦೧ನೇ ಸಂಸ್ಥಾಪನಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಾಹಿತ್ಯ ಪರಿಷತ್ತೆಂದರೆ ಸಾಹಿತ್ಯ ಹಾಗೂ ಸಾಹಿತಿಗಳಿಗೆ ಮಾತ್ರ ಸೀಮಿತವಾದುದಲ್ಲ. ಅದು ನಾಡು, ನುಡಿ, ಸಂಸ್ಕೃತಿ, ಸಾಹಿತ್ಯಕ್ಕೆ ಸಂಬಂಧಿಸಿದ್ದು. ಎಲ್ಲರನ್ನೂ ಒಳಗೊಳ್ಳುವ ಪ್ರಾತಿನಿಧಿಕ ಸಂಸ್ಥೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ಬೆಳೆದುಬಂದಿದ್ದು ಅದು ಹೀಗೆಯೇ ಮುಂದುವರಿಯಬೇಕಿದೆ ಎಂದವರು ಹೇಳಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ನುಡಿಗಳನ್ನಾಡಿ ಕನ್ನಡ ಭಾಷಾ ಸಂಪತ್ತು ಹಾಗೂ ಜ್ಞಾನ ಸಂಪತ್ತನ್ನು ಹೆಚ್ಚಿಸಬೇಕು ಎಂಬ ಉದ್ದೇಶದೊಂದಿಗೆ ಹುಟ್ಟಿಕೊಂಡದ್ದು…
ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ. ಕುಂದಾಪುರ: ಫೇಸ್‌ಬುಕ್‌ನಲ್ಲಿ ಪೋಸ್ಟ್ ಲೈಕ್, ಕಾಮೆಂಟ್ ಹಾಕುತ್ತಾ ತಮ್ಮೂರಿನ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದ ಮಂದಿಯೆಲ್ಲ ಒಂದೆಡೆ ಸೇರಿದ್ದರು. ಆನ್‌ಲೈನ್‌ನಲ್ಲೇ ಹರಟುತ್ತಿದ್ದವರು ಮುಖತಃ ಭೇಟಿಯಾಗಿ ಶುಭಾಷಯ ವಿನಿಮಯ ಮಾಡಿಕೊಂಡ್ರು. ಒಂದಿಷ್ಟು ಗಂಭೀರ ಚಿಂತನೆಗಳು ನಡೆದವು. ಕೆಲವು ಅಲ್ಲಿಯೇ ಕಾರ್ಯರೂಪಕ್ಕೂ ಬಂತು. ಹುಟ್ಟೂರಿನ ನೆನಪುಗಳು ಮೆಲಕಾದವು. ಸಾಧಕರಿಗೆ ಅಭಿನಂದನೆಯೂ ನಡೆಯಿತು. ಇದರ ನಡುವೆಯೇ ಒಂದಿಷ್ಟು ನಗು, ಮನೋಲ್ಲಾಸದ ಆಟ, ಹೊಟ್ಟೆಯೊಂದಿಗೆ ಮನವೂ ತುಂಬಿ ಬಂದ ಊಟ! ಅಂದಹಾಗೆ ಈ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದದ್ದು ‘ನಮ್ಮ ಕುಂದಾಪ್ರ’ ಫೇಸ್ಬುಕ್ ಗ್ರೂಪಿನ ಗೆಳೆಯರ ಸಹಮಿಲನ ಕಾರ್ಯಕ್ರಮ. ಕುಂದಾಪುರ ಶರೋನ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ನಮ್ಮ ಕುಂದಾಪ್ರ ಗ್ರೂಪಿನ ಗೆಳೆಯರೆಲ್ಲ ಸೇರಿ ಒಂದಿಷ್ಟು ಹೊತ್ತು ಸಂತಸ ಹಂಚಿಕೊಂಡರು. ಹಿರಿಯ ಸಾಹಿತಿ, ನ್ಯಾಯವಾದಿ ಎ.ಎಸ್.ಎನ್ ಹೆಬ್ಬಾರ್ ಕೇಕ್ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸಾಮಾಜಿಕ ತಾಣಗಳಲ್ಲಿ ಸಕ್ರಿಯವಾಗಿರುವ ಕುಂದಾಪುರಿಗರು ಒಂದೆಡೆ ಸೇರುವ ಅವಕಾಶ ಮಾಡಿಕೊಟ್ಟಿರುವ ಸಹಮಿಲನದ ಆಯೋಜಕರ ಪರಿಶ್ರಮ ಶ್ಲಾಘನೀಯ. ನಮ್ಮ…
ಕುಂದಾಪ್ರ ಡಾಟ್ ಕಾಂ ಸುದ್ದಿ. ಗಂಗೊಳ್ಳಿ : ಗಂಗೊಳ್ಳಿಯಜಿಎಸ್‌ವಿಎಸ್ ಅಸೋಸಿಯೇಶನ್ ಪ್ರಾಯೋಜಿತ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆಗೆ ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.97 ಫಲಿತಾಂಶ ದಾಖಲಿಸಿದೆ. ಪರೀಕ್ಷೆ ಹಾಜರಾದ ಒಟ್ಟು 38 ವಿದ್ಯಾರ್ಥಿಗಳ ಪೈಕಿ 37 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಈ ಪೈಕಿ 14 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 10 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಚೈತ್ರಾ ಶ್ಯಾನುಭಾಗ್ (622), ಪ್ರಕಾಶ ಪೈ (611), ಮಲ್ಲಿಕ್ ನಾಯಕ್ (608), ಶರತ್ (606), ಸುಜನ್ (605), ಸುಪ್ರೀತಾ (604), ಧನುಶ್ರೀ (601). ಪರೀಕ್ಷೆಯಲ್ಲಿ ಅತ್ಯುತ್ತುಮ ಸಾಧನೆಗೈದ ಹಾಗೂ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕರು ಅಭಿನಂದಿಸಿದ್ದಾರೆ.
